ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Vishweshwar Bhat Column: ಲಾಭ ಮತ್ತು ಮೌಲ್ಯ

‘ಸಾರಿ, ನಾನು ಈಗಾಗಲೇ ಬೆಂಜ್ ಖರೀದಿಸಿದ್ದೇನೆ.’ ಲೆಕ್ಸಸ್ ಪ್ರತಿನಿಧಿ ಸ್ವಲ್ಪವೂ ಬೇಸರ ವ್ಯಕ್ತ ಪಡಿಸಲಿಲ್ಲ. ‘ಹೌದಾ? ಒಳ್ಳೆಯದೇ ಆಯಿತು. ಬೆಂಜ್ ಕಾರಿನ ಅನುಭವ ಹೇಗಿದೆ?’ ಎಂದು ವಿಚಾರಿಸಿದ. ಅದಕ್ಕೆ ಶ್ರೀಮಂತ ಹೇಳಿದ - ‘ಚೆನ್ನಾಗಿದೆ. ನನಗೆ ಅದೆಂದರೆ ಬಹಳ ಇಷ್ಟ. ಆದರೆ ಯಾಕೋ ಹೆಡ್ ಲೈಟ್ ಸರಿಯಾಗಿ ಕೆಲಸ ಮಾಡುತ್ತಿಲ್ಲ

Vishweshwar Bhat Column: ಲಾಭ ಮತ್ತು ಮೌಲ್ಯ

ಸಂಪಾದಕರ ಸದ್ಯಶೋಧನೆ

ಒಬ್ಬ ಶ್ರೀಮಂತನಿದ್ದ. ಆತನಿಗೆ ಕಾರು ಖರೀದಿಸಬೇಕೆಂದು ಮನಸ್ಸಾಯಿತು. ಬೆಂಜ್ ಕಾರ ನ್ನು ಖರೀದಿಸಬೇಕೋ ಲೆಕ್ಸಸ್ ಕಾರನ್ನು ಖರೀದಿಸಬೇಕೋ ಎಂಬ ತೊಳಲಾಟದಲ್ಲಿ ಆತ ಸಿಲುಕಿದ. ಒಂದೊಂದು ದೃಷ್ಟಿಯಲ್ಲಿ ಎರಡೂ ಕಾರುಗಳು ಇಷ್ಟವಾಗುತ್ತಿದ್ದವು. ಈ ಎರಡೂ ಕಾರು ಕಂಪನಿಗಳ ಮಾರಾಟ ಪ್ರತಿನಿಧಿಗಳಿಗೆ ಫೋನ್ ಮಾಡಿದ. ಅವರಿಬ್ಬರೂ ಬಂದು ತಮ್ಮ ಸಂಸ್ಥೆಯ ಕಾರನ್ನು ಮಾರಾಟ ಪ್ರತಿನಿಧಿಗಳ ಭಾಷೆಯಲ್ಲಿ ಬಣ್ಣಿಸಿದರು. ಯಾವ ಕಾರನ್ನು ಖರೀದಿಸಬೇಕೆಂದು ವಿಚಾರ ಮಾಡಲು ಕೆಲ ಸಮಯ ಬೇಕೆಂದು ಶ್ರೀಮಂತ ಇಬ್ಬರಿಗೂ ಹೇಳಿದ. ಆನಂತರ ಆತ ಬೆಂಜ್ ಕಾರನ್ನು ಖರೀದಿಸಲು ನಿರ್ಧರಿಸಿದ. ಇದಾಗಿ ಕೆಲ ದಿನಗಳ ಬಳಿಕ ಲೆಕ್ಸಸ್ ಕಂಪನಿಯ ಮಾರಾಟ ಪ್ರತಿನಿಧಿ ಫೋನ್ ಮಾಡಿ, ಯಾವ ಕಾರನ್ನು ಖರೀದಿಸಲು ನಿರ್ಧರಿಸಿದ್ದೀರಿ ?’ ಎಂದು ಕೇಳಿದ.

ಅದಕ್ಕೆ ಶ್ರೀಮಂತ ಹೇಳಿದ - ‘ಸಾರಿ, ನಾನು ಈಗಾಗಲೇ ಬೆಂಜ್ ಖರೀದಿಸಿದ್ದೇನೆ.’ ಲೆಕ್ಸಸ್ ಪ್ರತಿನಿಧಿ ಸ್ವಲ್ಪವೂ ಬೇಸರ ವ್ಯಕ್ತಪಡಿಸಲಿಲ್ಲ. ‘ಹೌದಾ? ಒಳ್ಳೆಯದೇ ಆಯಿತು. ಬೆಂಜ್ ಕಾರಿನ ಅನುಭವ ಹೇಗಿದೆ?’ ಎಂದು ವಿಚಾರಿಸಿದ. ಅದಕ್ಕೆ ಶ್ರೀಮಂತ ಹೇಳಿದ - ‘ಚೆನ್ನಾಗಿದೆ. ನನಗೆ ಅದೆಂದರೆ ಬಹಳ ಇಷ್ಟ. ಆದರೆ ಯಾಕೋ ಹೆಡ್ ಲೈಟ್ ಸರಿಯಾಗಿ ಕೆಲಸ ಮಾಡು ತ್ತಿಲ್ಲ.

ಇದನ್ನೂ ಓದಿ: Vishweshwar Bhat Column: ಬೇರೆಯವರ ಜೀವನದಲ್ಲೂ ನೆಲೆಸುವುದು

ಬೆಂಜ್ ಮಾರಾಟ ಪ್ರತಿನಿಧಿ ರಿಪೇರಿ ಮಾಡುತ್ತೇನೆಂದು ಹೇಳಿ ಒಂದು ವಾರವಾಯಿತು. ಇನ್ನೂ ಬಂದಿಲ್ಲ, ಬರಬಹುದೇನೋ?’ ಮರುದಿನ ಶ್ರೀಮಂತನ ಮನೆ ಮುಂದೆ ಲೆಕ್ಸಸ್ ಮಾರಾಟ ಪ್ರತಿನಿಧಿ ಮೆಕ್ಯಾನಿಕ್ ಜತೆ ಬಂದು ನಿಂತಿದ್ದ.

ಶ್ರೀಮಂತನಿಗೆ ಆಶ್ಚರ್ಯ. ಬೆಂಜ್ ಕಾರಿನ ಹೆಡ್‌ಲೈಟ್ ಬಿಚ್ಚಿ ರಿಪೇರಿ ಮಾಡಿದ. ಅದಕ್ಕಾಗಿ ಶ್ರೀಮಂತ ಹಣ ನೀಡಲು ಮುಂದೆ ಬಂದರೂ ಲೆಕ್ಸಸ್ ಮಾರಾಟ ಪ್ರತಿನಿಧಿ ತೆಗೆದುಕೊಳ್ಳ ಲಿಲ್ಲ. ಶ್ರೀಮಂತನಿಗೆ ಹೃದಯ ತುಂಬಿ ಬಂತು. ಲೆಕ್ಸಸ್ ಪ್ರತಿನಿಧಿಗೆ ಕಾರು ಮಾರಾಟವಾಗ ದಿರಬಹುದು. ಆದರೆ ಉತ್ತಮ ಗ್ರಾಹಕನೊಬ್ಬನ ಪ್ರೀತಿ ಮತ್ತು ಹೃದಯ ಗೆದ್ದಿದ್ದ. ಅಷ್ಟಕ್ಕೂ ಲೆಕ್ಸಸ್ ಪ್ರತಿನಿಧಿ ನಿಜಕ್ಕೂ ಗಳಿಸಿದ್ದೇನು? ಲೆಕ್ಸಸ್ ಪ್ರತಿನಿಧಿ ಗುಡ್ ವಿಲ್ ಗಳಿಸಿದ್ದ.

ಗ್ರಾಹಕನ ವಿಶ್ವಾಸ, ನಂಬಿಕೆ ಗಳಿಸಿದ್ದ. ನಾವೆಲ್ಲರೂ ಒಂದಿಂದು ರೀತಿಯಲ್ಲಿ ಗುಡ್ ವಿಲ್ ಪಡೆಯಲು ಹೆಣಗುತ್ತೇವೆ. ವಿಶ್ವಾಸ ಮತ್ತು ನಂಬಿಕೆಗಿಂತ ಮಿಗಿಲಾದುದು ಯಾವುದೂ ಇಲ್ಲ. ಬೆಂಜ್ ಪ್ರತಿನಿಧಿ ಕಾರು ಮಾರಾಟ ಮಾಡಿ ಲಾಭ ಮಾಡಿರಬಹುದು. ಈ ಜಗತ್ತಿನಲ್ಲಿ ಲಾಭವೊಂದೇ ಸರ್ವಸ್ವ ಅಲ್ಲ. ಏಕಾಏಕಿ ಲಾಭ ಮಾಡುವವರು ಅಲ್ಪ ಅವಧಿಗೆ ತೃಪ್ತ ರಾಗುತ್ತಾರೆ. ಗುಡ್ ವಿಲ್ ಗಳಿಸಿಕೊಳ್ಳಲು ಬಯಸುವವರು ದೀರ್ಘಾವಧಿ ಸಂಬಂಧಕ್ಕಾಗಿ ಹಾತೊರೆ ಯುತ್ತಾರೆ. ಇಂಥವರಿಗೆ ಲಾಭವೇ ಮುಖ್ಯ ಅಲ್ಲ. ಜನರು, ಅವರ ಸಂಬಂಧ, ಸಾಮೀಪ್ಯ, ಅವರ ಕಷ್ಟ-ಸುಖ ಮುಖ್ಯವಾಗುತ್ತದೆ. ಜತೆಗೆ ಲಾಭ ಕೂಡ. ಮೊದಲ ಆದ್ಯತೆ ಸಂಬಂಧ ಮತ್ತು ಎರಡನೆಯದು ಲಾಭ. ಮೊದಲ ಆದ್ಯತೆ ಈಡೇರಿಸಿ ಕೊಳ್ಳಲು ಅವರು ಎಷ್ಟು ಖರ್ಚನ್ನಾದರೂ ಮಾಡುತ್ತಾರೆ. ಇವರಿಗೆ ಜನರು ಮುಖ್ಯ.

ಜನ ಸಂಪನ್ಮೂಲ ಮುಖ್ಯ. ಇಂಥ ಜನರನ್ನು ಹೊಂದಿರುವ ಸಂಸ್ಥೆ ಸಮಾಜದಲ್ಲಿ ಒಂದು ಧ್ಯೇಯೋದ್ದೇಶಕ್ಕಾಗಿ ಗುರುತಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ಒಂದು ಪ್ರಬಲ, ಗಟ್ಟಿ ಸಂಸ್ಥೆ ಯಾಗಿ ಬೇರು ಬಿಡುತ್ತದೆ. ನಮಗೆ ಲಾಭ ಎಷ್ಟು ಮುಖ್ಯವೋ, ಮೌಲ್ಯವೂ ಅಷ್ಟೇ ಮುಖ್ಯ.