ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

'ಆಪರೇಷನ್ ಸಿಂದೂರ್' ಕಾರ್ಯಚರಣೆಯಲ್ಲಿ ಭಾರತೀಯ ಸೇನೆಯ ಐವರು ಯೋಧರು ಹುತಾತ್ಮ

ಕದನ ವಿರಾಮಕ್ಕೆ ಸಂಬಂಧಿಸಿದಂತೆ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 7 ರಿಂದ ಮೇ 10 ರವರೆಗೆ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್‌ ಜತೆಗಿನ ಸಂಘರ್ಷದಲ್ಲಿ ಭಾರತೀಯ ಸೇನೆಯು 5 ಸೈನಿಕರನ್ನು ಕಳೆದುಕೊಂಡಿತು. ಸಶಸ್ತ್ರ ಪಡೆಗಳ ಈ 5 ಸಹೋದ್ಯೋಗಿಗಳಿಗೆ ನಾನು ಗೌರವ ಸಲ್ಲಿಸುತ್ತೇನೆ. ಅವರ ತ್ಯಾಗಗಳನ್ನು ಯಾವಾಗಲೂ ಸ್ಮರಿಸಲಾಗುವುದು ಎಂದರು.

ಪಾಕ್‌ ಜತೆಗಿನ ಸಂಘರ್ಷದಲ್ಲಿ ಭಾರತೀಯ ಸೇನೆಯ ಐವರು ಯೋಧರು ಹುತಾತ್ಮ

Profile Abhilash BC May 11, 2025 11:37 PM

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಪ್ರಾರಂಭಿಸಲಾದ 'ಆಪರೇಷನ್ ಸಿಂದೂರ್'(Operation Sindoor) ನಲ್ಲಿ ಹುತಾತ್ಮರಾದ ಭಾರತೀಯ ಐವರು ಯೋಧರ ತ್ಯಾಗ, ಬಲಿದಾನಗಳನ್ನು ಈ ದೇಶ ಸದಾ ಸ್ಮರಿಸಲಿದೆ ಎಂದು ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕ (ಡಿಜಿಎಂಒ) ಲೆಫ್ಟಿನಂಟ್‌ ಜನರಲ್‌ ರಾಜೀವ್‌ ಘಾಯ್‌(Lieutenant General Rajiv Ghai) ಹೇಳಿದ್ದಾರೆ.

ಕದನ ವಿರಾಮಕ್ಕೆ ಸಂಬಂಧಿಸಿದಂತೆ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 7 ರಿಂದ ಮೇ 10 ರವರೆಗೆ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್‌ ಜತೆಗಿನ ಸಂಘರ್ಷದಲ್ಲಿ ಭಾರತೀಯ ಸೇನೆಯು 5 ಸೈನಿಕರನ್ನು ಕಳೆದುಕೊಂಡಿತು. ಸಶಸ್ತ್ರ ಪಡೆಗಳ ಈ 5 ಸಹೋದ್ಯೋಗಿಗಳಿಗೆ ನಾನು ಗೌರವ ಸಲ್ಲಿಸುತ್ತೇನೆ. ಅವರ ತ್ಯಾಗಗಳನ್ನು ಯಾವಾಗಲೂ ಸ್ಮರಿಸಲಾಗುವುದು ಎಂದರು.

ಪಾಕಿಸ್ತಾನ ಸೇನೆಯ 35–40 ಯೋಧರು ಗಡಿ ನಿಯಂತ್ರಣ ರೇಖೆಯ ಬಳಿ ಹತ್ಯೆಯಾಗಿದ್ದಾರೆ. ಇನ್ನಷ್ಟು ಸಾವು ನೋವಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.

"ನಮ್ಮ ಗುರಿಗಳು ಭಯೋತ್ಪಾದನೆ ಆಧಾರಿತವಾಗಿದ್ದವು. ಆದರೆ ಪಾಕ್‌ ಸೇನೆ ನಮ್ಮ ಮೂಲಸೌಕರ್ಯದ ಮೇಲೆ ವಾಯು ಒಳನುಸುಳುವಿಕೆ ಮತ್ತು ವಾಯು ಕಾರ್ಯಾಚರಣೆಗಳನ್ನು ಪ್ರಾರಂಭಿಸಿದ ಕಾರಣ ಪ್ರತಿ ದಾಳಿ ನಡೆಸಲಾಯಿತು ಇದರಿಂದ ಪಾಕ್‌ ಸೈನಿಕರು ಸಾವನ್ನಪ್ಪಿದರು" ಎಂದು ತಿಳಿಸಿದರು.

ಕಮಾಂಡರ್‌ಗಳಿಗೆ ಸಂಪೂರ್ಣ ಅಧಿಕಾರ

ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿದರೆ ಪ್ರತಿದಾಳಿ ನಡೆಸುವಂತೆ ಭಾರತ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಸೇನಾ ಕಮಾಂಡರ್‌ಗಳಿಗೆ ಸಂಪೂರ್ಣ ಅಧಿಕಾರ ನೀಡಿದ್ದಾರೆ.

ಶನಿವಾರ ಕದನ ವಿರಾಮ ಒಪ್ಪಂದ ಮಾಡಿಕೊಂಡರೂ, ಪಾಕ್‌ ಮತ್ತೆ ಭಾರತದ ಮೇಲೆ ಟ್ರೋನ್‌ ಮತ್ತು ಶೆಲ್‌ ದಾಳಿ ನಡೆಸಿತ್ತು. ಶನಿವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌, ರಾಜಸ್ಥಾನ ಮತ್ತು ಗುಜರಾತ್‌ ಗಡಿಪ್ರದೇಶಗಳಲ್ಲಿ ಡ್ರೋನ್‌ ದಾಳಿಗೆ ಪಾಕ್‌ ಯತ್ನ ನಡೆಸಿದ್ದು, ಭಾರತ ತಕ್ಕ ಪ್ರತ್ಯುತ್ತರ ನೀಡಿತ್ತು. ಇನ್ನೊಮ್ಮೆ ಪಾಕ್‌ ಗಡಿಯಲ್ಲಿ ಇದೇ ರೀತಿ ದಾಳಿ ನಡೆಸಿದರೆ ನಿರ್ದಾಕ್ಷಿಣ್ಯವಾಗಿ ಪ್ರತಿದಾಳಿ ನಡೆಸುವಂತೆ ಸೇನಾ ಕಮಾಂಡರ್‌ಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ.

ಇದನ್ನೂ ಓದಿ Operation Sindoor: ಕಾಶ್ಮೀರದಲ್ಲಿ ಸಿಲುಕಿದ್ದ ಕರ್ನಾಟಕದ 13 ವಿದ್ಯಾರ್ಥಿಗಳನ್ನು ಕರೆತರಲು ಎಚ್‌ಡಿಕೆ ನೆರವು