india-pakistan tension: ಬಾರ್ಮರ್‌ನಲ್ಲಿ ಡ್ರೋನ್ ದಾಳಿಗೆ ಯತ್ನ; ಬ್ಲ್ಯಾಕ್ಔಟ್ ಘೋಷಣೆ
ಬಾರ್ಮರ್‌ನಲ್ಲಿ ಡ್ರೋನ್ ಚಟುವಟಿಕೆ ಕಂಡು ಬಂದ ಕಾರಣ ಜಮ್ಮು ಪ್ರದೇಶದ ಉಧಂಪುರ ಮತ್ತು ಸಾಂಬಾ ಜಿಲ್ಲೆಗಳಲ್ಲಿ ಸಂಪೂರ್ಣ ವಿದ್ಯುತ್ ಕಡಿತಗೊಂಡಿದೆ. ಶನಿವಾರ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಜಸ್ಥಾನದ ಜೈಸಲ್ಮೇರ್, ಬಾರ್ಮರ್ ಮತ್ತು ಇತರ ಗಡಿ ಪ್ರದೇಶಗಳಲ್ಲಿ ಭಾರೀ ಭದ್ರತೆ ವಹಿಸಲಾಗಿತ್ತು.


ನವದೆಹಲಿ: ಭಯೋತ್ಪಾದನೆ ವಿಷಯದಲ್ಲಿ ಮೊದಲಿನಿಂದಲೂ ಕಪಟ ನಾಟಕ ಆಡುತ್ತಿದ್ದ ಪಾಕಿಸ್ತಾನ ಶನಿವಾರ ಕದನ ವಿರಾಮ ಘೋಷಣೆಯ ಬಳಿಕವೂ ಭಾರತದ ಮೇಲೆ ದಾಳಿ ನಡೆಸಿ ನರಿ ಬುದ್ಧಿ ತೋರಿಸಿತ್ತು. ಇದೀಗ ಭಾನುವಾರ ಕೂಡ ಕದನ ವಿರಾಮ ಉಲ್ಲಂಘಿಸಿ ರಾಜಸ್ಥಾನದ ಬಾರ್ಮರ್‌ನಲ್ಲಿ(Barmer) ಮತ್ತೆ ಡ್ರೋನ್ ದಾಳಿಗೆ(pak drone attack) ಯತ್ನಿಸಿದ್ದು, ಜಿಲ್ಲಾಡಳಿತ ಸಂಪೂರ್ಣ ವಿದ್ಯುತ್ ಕಡಿತಗೊಳಿಸಲು ಆದೇಶಿಸಿದೆ ಎಂದು ತಿಳಿದುಬಂದಿದೆ. ಬಾರ್ಮರ್ ಜಿಲ್ಲಾಧಿಕಾರಿ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದು, ನಿವಾಸಿಗಳು ಮನೆಯೊಳಗೆ ಇರಲು ಮತ್ತು ವಿದ್ಯುತ್ ಕಡಿತವನ್ನು ಗಮನಿಸಲು ಸೂಚಿಸಲಾಗಿದೆ.
ಬಾರ್ಮರ್‌ನಲ್ಲಿ ಡ್ರೋನ್ ಚಟುವಟಿಕೆ ಕಂಡು ಬಂದ ಕಾರಣ ಜಮ್ಮು ಪ್ರದೇಶದ ಉಧಂಪುರ ಮತ್ತು ಸಾಂಬಾ ಜಿಲ್ಲೆಗಳಲ್ಲಿ ಸಂಪೂರ್ಣ ವಿದ್ಯುತ್ ಕಡಿತಗೊಂಡಿದೆ. ಶನಿವಾರ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಜಸ್ಥಾನದ ಜೈಸಲ್ಮೇರ್, ಬಾರ್ಮರ್ ಮತ್ತು ಇತರ ಗಡಿ ಪ್ರದೇಶಗಳಲ್ಲಿ ಭಾರೀ ಭದ್ರತೆ ವಹಿಸಲಾಗಿತ್ತು.
*INCOMING DRONES ACTIVITY SPOTTED*
— Barmer District Collector & Magistrate (@BarmerDm) May 11, 2025
Pls stay inside your houses and observe blackout.
DM Barmer
ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದದ ಜಾರಿಯಾಗಿದ್ದರೂ ಆಪರೇಷನ್ ಸಿಂದೂರ್ (Operation Sindoor) ಇನ್ನೂ ಮುಗಿದಿಲ್ಲ ಎಂದು ಕೇಂದ್ರ ಸರ್ಕಾರ ಭಾನುವಾರ ಸ್ಪಷ್ಟಪಡಿಸಿದೆ. ಪಾಕಿಸ್ತಾನದ ಯಾವುದೇ ದುಸ್ಸಾಹಸಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸಶಸ್ತ್ರ ಪಡೆಗಳಿಗೆ ನಿರ್ದೇಶನ ನೀಡಿದ್ದಾರೆ. ಉನ್ನತ ಮಟ್ಟದ ಸಭೆ ನಡೆಸಿದ ಮೋದಿ ಸೇನೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ನೀಡಿದ್ದಾರೆ.
"ಆಪರೇಷನ್ ಸಿಂದೂರ್ ಇನ್ನೂ ಪೂರ್ಣಗೊಂಡಿಲ್ಲ. ಗಡಿಯಾಚೆಗಿನ ಭಯೋತ್ಪಾದನೆ ವಿಚಾರದಲ್ಲಿ ಭಾರತ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲʼʼ ಎಂದು ಸ್ಪಷ್ಟಪಡಿಸಲಾಗಿದೆ. ಪಿಟಿಐ ವರದಿಯ ಪ್ರಕಾರ, ಪ್ರಧಾನಿ ಮೋದಿ ಸೇನೆಗೆ ಪಾಕ್‌ನ ಗುಂಡಿನ ದಾಳಿಗೆ ಕ್ಷಿಪಣಿ ಮೂಲಕ ಉತ್ತರಿಸಬೇಕು ಎಂದು ಸೂಚನೆ ನೀಡಿದ್ದಾರೆ.