Friday, 13th December 2024

ಪಿತ್ರಾರ್ಜಿತ ಆಸ್ತಿ: ವಿವೇಚನೆಯ ನಿರ್ಧಾರ ಅಗತ್ಯ

ಚರ್ಚಾಕೂಟ

ಜಿ.ಎಂ.ಇನಾಂದಾರ್‌

ಈ ಚುನಾವಣೆಯ ಸಂದರ್ಭದಲ್ಲಿ ಎರಡು ಹೇಳಿಕೆಗಳು ತೀವ್ರ ಸದ್ದು ಮಾಡುತ್ತಿವೆ. ಒಂದು ರಾಹುಲ್ ಗಾಂಧಿಯವರ ಹೈದರಾಬಾದ ಭಾಷಣದಲ್ಲಿ ಹೇಳಿದ ದೇಶದ ಜನರ ಸಂಪತ್ತಿನ ಸರ್ವೇ ಹಾಗೂ ಸಂಪತ್ತನ್ನು ಹಂಚುವುದು. ಎರಡನೇ ಹೇಳಿಕೆ ಸ್ಯಾಮ್ ಪಿತ್ರೋಡಾ ಅವರ ಪಿತ್ರಾರ್ಜಿತ ಆಸ್ತಿ ಸಂತಾನಕ್ಕೆ ನೀಡುವಾಗ ೫೫% ನ್ನು ಸರಕಾರಕ್ಕೆ ತೆರಿಗೆ ರೂಪದಲ್ಲಿ ನೀಡಬೇಕು ಎನ್ನುವ ಹೇಳಿಕೆ. ಈ ಎರಡೂ ಹೇಳಿಕೆಗಳ ಸಾಧಕ ಬಾಧಕಗಳನ್ನು ಪರಿಶೀಲಿಸುವಾಗ ಕಾಂಗ್ರೆಸ್ ಸರಕಾರ ಸರ್ವೇ ಹಾಗೂ ಜನಗಣನೆ ಮಾಡುವಾಗ ಮಾಡಿದ ಎಡವಟ್ಟುಗಳ ಬಗೆಗೆ ಗಮನ ಹರಿಸಬೇಕಿದೆ ಸರಕಾರದ ಬೇಜವಾಬ್ದಾರಿ ಸರ್ವೆಯ ಉದ್ದೇಶಗಳು ಸರಿಯಾಗಿಲ್ಲದಿದ್ದರೆ ದೇಶವೇ ಬೆಲೆ ತೆರಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ.

ಈ ನಿಟ್ಟಿನಲ್ಲಿ ಸಂಸತ್ತಿನಲ್ಲಿ ದಿವಂಗತ ಅನಂತಕುಮಾರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ೨೦೧೦ ರ ಸಮಯದಲ್ಲಿ ಸರಕಾರ ಸೆನ್ಸಸ್ ಮಾಡಲು ಉದ್ದೇಶಿಸಿತ್ತು ಅದರ ಜೊತೆಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ಕೂಡಾ ಮಾಡಲು ನಿರ್ಧರಿಸಿತ್ತು. Population register
ನಲ್ಲಿ ವ್ಯಕ್ತಿಯ ಹೇಳಿಕೆಯ ಆಧಾರದ ಮೇಲೆ ನಾಗರಿಕತ್ವ ನಿರ್ಧಾರವಾಗುತ್ತಿತ್ತು. ಇದರ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಅನಂತಕುಮಾರ ಪೌರತ್ವ ಕ್ಕೂ ವಾಸಕ್ಕೂ ಇರುವ ವ್ಯತ್ಯಾಸವನ್ನು ತಿಳಿಸಿ ಪಿ.ಚಿದಂಬರಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಬಲವಾಗಿ ಪ್ರತಿಪಾದಿಸಿದ ಅನಂತಕುಮಾರ್ ಪೌರತ್ವ ಪರಿಶೀಲನೆಗೆ ಒಳಪಟ್ಟ ನಂತರ ನಿರ್ಧರಿತವಾಗು ವಂತಹದ್ದು. ಅದು ಯಾರದೇ ಹೇಳಿಕೆಯನ್ನು ಆಧಾರಿಸಿ ನಿರ್ಧಾರವಾಗುವಂತಹದ್ದಲ್ಲ ಎಂದು ಪ್ರತಿಪಾದಿಸಿದ್ದರು. ಅದೇ ಸಂದರ್ಭದಲ್ಲಿ ಪಿ ಚಿದಂಬರಂ ಅವರು ವಕ್ತವ್ಯವೊಂದನ್ನು ನೀಡಿ, ಭಾರತಕ್ಕೆ ಬಾಂಗ್ಲಾದೇಶದ, ನೇಪಾಳದ, ಹಾಗೂ ಮಾಯನ್ಮಾರ ದೇಶಗಳ ಗಡಿಯಿಂದ್ ನುಸುಳುವಿಕೆಯ ಅಪಾಯವಿದೆ, ಆದರೆ ಪಾಕಿಸ್ತಾನ ಗಡಿಯಿಂದ ನಮಗೆ ತೊಂದರೆಯಿಲ್ಲ ಎನ್ನುವ ಗೊಂದಲದ ಹೇಳಿಕೆ ನೀಡಿದ್ದರು. ಇದನ್ನು ತೀವ್ರವಾಗಿ ಖಂಡಿಸಿದ ಅನಂತಕುಮಾರ ಝುಲಿಕರ ಅಲಿ ಭುಟ್ಟೋ ಅವರ ಪುಸ್ತಕ Myths of Independence ನ್ನು ಉದ್ಧರಿಸಿ ಪಾಕಿಸ್ತಾನಕ್ಕೆ ಕಾಶ್ಮೀರವೊಂದೇ ಸಮಸ್ಯೆಯಲ್ಲ, ಅದಕ್ಕಿಂತ ಮುಖ್ಯವಾಗಿ ಪಾಕಿಸ್ತಾನಕ್ಕೆ ಅಸ್ಸಾಂ ರಾಜ್ಯದ ಹಲವಾರು ಪ್ರದೇಶಗಳ ಮೇಲೆ ಹಕ್ಕಿದೆ ಎಂಬ ಅವರ ವಿಸ್ತರಣಾವಾದಿ ಮನೀಷೆಯನ್ನೂ ಹಾಗೂ ಶೇಖ ಮುಜಿಬುರ್ ರೆಹಮಾನರ East Pakistan and its population and Economics ನಲ್ಲಿ ಬರೆದಂತೆ ಪೂರ್ವ ಪಾಕಿಸ್ತಾನವು ತನ್ನ ಭೌಗೋಳಿಕ ವಿಸ್ತಾರಕ್ಕಾಗಿ ಆಸ್ಸಾಂ ಅನ್ನು ಸೇರಿಸಿಕೊಳ್ಳಬೇಕು.

ಆಸ್ಸಾಂನಲ್ಲಿ ಕಲ್ಲಿದ್ದಲು, ಪೆಟ್ರೋಲಿಯಂ ಹಾಗೂ ಅರಣ್ಯ ಪ್ರದೇಶವಿದ್ದು ಈ ಸಂಪನ್ಮೂಲಗಳು ಪೂರ್ವ ಪಾಕಿಸ್ತಾನ ವನ್ನು ಆರ್ಥಿಕವಾಗಿ ಸದೃಢ ಮಾಡಲು ಅವಶ್ಯವಿದೆ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳು ತಮ್ಮ ರಾಷ್ಟ್ರದ ವಿಸ್ತಾರಕ್ಕಾಗಿ ಅಸ್ಸಾಂನ ಭೂ ಭಾಗವನ್ನು ಕಬಳಿಸುವ ಉದ್ದೇಶ ಹೊಂದಿರುವಾಗ ಯಾವದೇ ಗಡಿ ಭಾಗವನ್ನು ಸುರಕ್ಷಿತ ಎಂದು ಭಾವಿಸುವುದು ಘೋರ ಪ್ರಮಾದವಾಗುತ್ತದೆ ಎಂದು ಚಿದಂಬರ ಅವರಿಗೆ ಪಾರ್ಲಿಮೆಂಟಿ ನಲ್ಲಿ ತಿರುಗೇಟು ನೀಡಿದ್ದರು.

ವಿವಿಧ ದೇಶಗಳ ಗಡಿಯನ್ನು ಅನಧಿಕೃತವಾಗಿ ಪ್ರವೇಶಿಸಿದರೆ ಸಿಗುವ ಶಿಕ್ಷೆಗಳನ್ನು ಪ್ರಸ್ತಾಪಿಸಿ ಭಾರತದ ಗಡಿಯನ್ನು ಪ್ರವೇಶಿಸುವ ಬಾಂಗ್ಲಾದೇಶೀಯರಿಗೆ ಇಲ್ಲಿಯ ರಾಜಕೀಯ ಪಕ್ಷಗಳು ಆಧಾರ, ಚುನಾವಣಾ ಗುರುತಿನ ಚೀಟಿ, ರೇಷನ್ ಕಾರ್ಡ್ ನೀಡುವ ಮೂಲಕ ಅವರನ್ನು ವೋಟ್ ಬ್ಯಾಂಕ್ ಆಗಿ ಪೋಷಿ ಸುವ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿದ್ದರು. ಹಾಗೂ ಒಂದೇ ವರ್ಷದಲ್ಲಿ ಆಸ್ಸಾಂನ ಮತದಾರರ ಸಂಖ್ಯೆ ಶೇ ೧೪% ಏರಿಕೆ ಕಂಡಿದ್ದರ ಬಗ್ಗೆ ಸಂಸತ್ತಿ ನಲ್ಲಿ ಪ್ರಶ್ನಿಸಿದ್ದರು. ಜನಗಣತಿಯು, ಜನಸಂಖ್ಯೆಯ ಜನಾಂಗ ಸ್ಥಿತಿ ಅಧ್ಯಯನವನ್ನು, ನಾಗರಿಕ ನೋಂದಣಿಯು ದೇಶದ ನಾಗರಿಕತ್ವವನ್ನು ಹಾಗೂ ಜನಸಂಖ್ಯಾ ನೋಂದಣಿಯು ದೇಶದಲ್ಲಿ ವಾಸಿಸುವ ಜನರ ಸ್ಥಿತಿಗತಿಯನ್ನು ಸೂಚಿಸುತ್ತವೆ ಎಂದು ಅವುಗಳ ಮಧ್ಯದ ವ್ಯತ್ಯಾಸವನ್ನು ವಿವರಿಸಿದ್ದರು.

ರಾಹುಲ್ ಗಾಂಧಿಯವರ ಸಂಪತ್ತಿನ ಗ್ಕಿಅಹಾಗೂ ಹಂಚಿಕೆಯ ಬಗೆಗಿನ ಬಾಲಿಶ ಹೇಳಿಕೆಯು ಈಗಾಗಲೇ ಪ್ರಯೋಗಕ್ಕೊಳಪಟ್ಟು ವಿಫಲವಾಗಿರುವು ದನ್ನು ನಾವು ಜಿಂಬಾಬ್ವೆ ಹಾಗೂ ವೆನಿಜುವೆಲಾದಲ್ಲಿ ಕಾಣಬಹುದಾಗಿದೆ. ಈ ಎರಡೂ ದೇಶಗಳ ಕರೆನ್ಸಿಗಳು ತಮ್ಮ ಮೌಲ್ಯವನ್ನು ಕಳೆದುಕೊಂಡು ಅತೀ ತೀವ್ರ ಹಣದುಬ್ಬರವನ್ನು ಅನುಭವಿಸುತ್ತಿವೆ. ಕಮ್ಯುನಿಸ್ಟರು ತಮ್ಮ ವಿಫಲ ನೀತಿಗಳನ್ನು ಕಾಂಗ್ರೆಸ್ ಪಕ್ಷದ ಮೂಲಕ ಈಡೇರಿಸಿಕೊಳ್ಳಲು ಹೊರಟಂತೆ ಕಾಣುತ್ತಿದೆ.

ಸಿರಿವಂತಿಕೆಗೆ ಮಿತಿ ಹಾಕುವ ಮೂಲಕ ನೀವು ಬಡವರನ್ನು ಬಡತನದಿಂದ ಮುಕ್ತಗೊಳಿಸುವ ಕಾನೂನು ಮಾಡಲಾರಿರಿ. ಒಬ್ಬ ವ್ಯಕ್ತಿ ಕೆಲಸ ಮಾಡದೇ ಪಡೆಯುತ್ತಿದ್ದರೆ, ಮತ್ತೊಬ್ಬಾತ ಪಡೆಯದೇ ಕೆಲಸ ಮಾಡಲೇ ಬೇಕಾಗುತ್ತದೆ. ಸರಕಾರವು ಕೆಲವೊಬ್ಬರಿಂದ ಮೊದಲು ಪಡೆಯದ ಹೊರತು ಯಾರಿಗೂ ಏನನ್ನೂ ಕೊಡುವುದಿಲ್ಲ. ಅರ್ಧದಷ್ಟು ಜನರ ಯೋಚನೆ ಹೀಗಿರುತ್ತದೆ ‘ತಮಗೇನೂ ಕೆಲಸವಿಲ್ಲ’ ಎಂದು. ಏಕೆಂದರೆ, ಉಳಿದರ್ಧ ಜನರು ತಮ್ಮನ್ನು ನೋಡಿಕೊಳ್ಳುತ್ತಾರೆ ಮತ್ತು, ಇನ್ನರ್ಧ ಜನರು ಯೋಚಿಸುತ್ತಾರೆ ಕೆಲಸ ಮಾಡುವುದು ಸರಿಯಲ್ಲ. ಏಕೆಂದರೆ, ಇತರರು ತಾವು ಮಾಡುವ ಕೆಲಸಗಳಿಗಾಗಿ ಪಡೆಯಬೇಕಿರುವುದನ್ನು ಪಡೆಯುತ್ತಾರೆ. ಆದ್ದರಿಂದ, ಗೆಳೆಯ, ಜನರ ಇಂತಹ ಮನೋಸ್ಥಿತಿಯು ಯಾವುದೇ ರಾಷ್ಟ್ರದ ಅಂತ್ಯವಾಗಿರುತ್ತದೆ.

ಸಂಪತ್ತನ್ನು ಭಾಗಿಸುವ ಮೂಲಕ ನೀವು ಗುಣಿಸಲು ಸಾಧ್ಯವಿಲ್ಲ. -ಅಂಡ್ರಿಯನ್ ರೋಜರ್ಸ್, ೧೯೩೧ ರಾಹುಲ್ ಗಾಂಧಿಯವರ ಹೇಳಿಕೆಯ ಬಗ್ಗೆ ಇದಕ್ಕಿಂತ ಹೆಚ್ಚು ಇಲ್ಲಿ ಹೇಳುವ ಅವಶ್ಯಕತೆಯಿಲ್ಲ. ಇನ್ನು ಸ್ಯಾಮ್ ಪಿತ್ರೋಡಾ ಅವರ Inheritance Tax ಕೂಡಾ ಭಾರತ ದಂತಹ ದೇಶದಲ್ಲಿ ಜಾರಿಗೆ ತರಲಾಗದಂತಹ ಉಪಕ್ರಮ ಎಂದೂ ತೋರುತ್ತದೆ. ಅಮೆರಿಕಾ ದಂತಹ ದೇಶಗಳಲ್ಲಿ ಅವರ ಹಿರಿಯ ನಾಗರಿಕರ ಯೋಗಕ್ಷೇಮವನ್ನು ಸರಕಾರವೇ ನೋಡಿಕೊಳ್ಳುತ್ತದೆ. ಅಲ್ಲಿ ಸಲ್ಲುವುದೆಲ್ಲವೂ ಇಲ್ಲಿ ಸಲ್ಲದು. ನಮ್ಮದೇಶದಲ್ಲಿ ತಂದೆ ತಾಯಿಗಳ ಯೋಗಕ್ಷೇಮವನ್ನು ಮಕ್ಕಳೇ ನೋಡಿಕೊಳ್ಳುತ್ತಿರುವಾಗ Inheritance Tax ನಂತಹ ಉಪಕ್ರಮಗಳು ತುಘಲಕ್ ದರ್ಬಾರನಂತೆ ಕಾಣುತ್ತವೆ. ಕಾಂಗ್ರೆಸ್ ನಾಯಕರು ಬಾಯಿಬಿಟ್ಟ ಮೇಲೆ ಯೋಚನೆ
ಮಾಡುವು ದಕ್ಕಿಂತ ಯೋಚನೆ ಮಾಡಿ ಬಾಯ್ಬಿಡುವುದು ಒಳ್ಳೆಯದು.

(ಲೇಖಕರು, ಅನಂತಕುಮಾರ್ ಪ್ರತಿಷ್ಠಾನದ
ಕಾರ್ಯಕರ್ತರು)