ಅಭಿಮತ
ಗಣೇಶ್ ಭಟ್, ವಾರಣಾಸಿ
ನಾವು ದಿನಪತ್ರಿಕೆಗಳನ್ನು ಓದುವಾಗ ಅಥವಾ ಸುದ್ದಿವಾಹಿನಿಗಳನ್ನು ವೀಕ್ಷಿಸುವಾಗ ನಮ್ಮ ಕಣ್ಣಿಗೆ ಯಾವಾಗಲೂ ನಕಾರಾತ್ಮಕ ವಿಷಯಗಳೇ ರಾಚುತ್ತವೆ. ರಾಜಕೀಯ ಹೊಯ್ದಾಟಗಳು, ಹಿಂಸೆ, ಕೊಲೆ, ಅಪಘಾತ, ವಂಚನೆ, ಭ್ರಷ್ಟಾಚಾರ ಮೊದಲಾದ
ವಿಚಾರಗಳು ಮುಖಪುಟದಲ್ಲಿ ಅಥವಾ ಬ್ರೇಕಿಂಗ್ ನ್ಯೂಸ್ ಗಳಲ್ಲಿ ಪ್ರಾಶಸ್ತ್ಯ ಪಡೆಯು ತ್ತವೆ. ಇಂತಹ ಸುದ್ದಿಗಳನ್ನು ನಮ್ಮ ಮೊದಲು ಎಂಬಂತೆ ಪ್ರಕಟಿಸಲು ಸ್ಪರ್ಧೆ ಬೇರೆ.
ಹಾಗಾದರೆ ದೇಶದಲ್ಲಿ ಯಾವುದೇ ರೀತಿಯ ಸಕಾರಾತ್ಮಕ ಬೆಳವಣಿಗೆಗಳಾಗುತ್ತಿಲ್ಲವೇ? ಆಗುತ್ತಿವೆ. ದೇಶದಲ್ಲಿ ಸಾಕಷ್ಟು ಪ್ರಮಾಣದ ಧನಾತ್ಮಕ ಬದಲಾವಣೆಗಳಾಗುತ್ತಿವೆ. ಆದರೆ ಇಂತಹ ಸುದ್ದಿಗಳು ಓದುಗರಿಗೆ ರೋಚಕತೆಯನ್ನು ಒದಗಿಸುವುದಿಲ್ಲ ಎನ್ನುವ ಭಾವನೆ ಮಾಧ್ಯಮಗಳದ್ದು. ಹೀಗಾಗಿ ದೇಶದ ಗುತ್ತಿರುವ ಉತ್ತಮ ಬದಲಾವಣೆಗಳ ವಿಚಾರವನ್ನು ಪತ್ರಿಕೆಗಳು ಎಲ್ಲಾ ಒಂದು ಮೂಲೆಯಲ್ಲಿ ಪ್ರಕಟಿಸಿ ಕೈತೊಳೆದುಕೊಂಡು ಬಿಡುತ್ತವೆ.
ದೇಶದ ಬಗ್ಗೆ ಹೆಮ್ಮೆ ಪಡಲು ಸಾವಿರಾರು ವಿಚಾರಗಳಿವೆ. ಭಾರತದಗುತ್ತಿರುವ ಡಿಜಿಟಲ್ ಕ್ರಾಂತಿಯ ಬಗ್ಗೆ ಒಂದಿಷ್ಟು ತಿಳಿದು ಕೊಳ್ಳೋಣ. 2012ನೇ ಇಸವಿಯಲ್ಲಿ ನ್ಯಾಷನಲ್ ಪೇಯ್ಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾವು ರೂಪೇ ಕಾರ್ಡ್ ಅನ್ನು ಬಿಡುಗಡೆ ಮಾಡಿತ್ತು. ಆದರೆ ಆ ಸಂದರ್ಭದಗಲೇ ದೇಶಾದ್ಯಂತ ಗ್ರಾಹಕರಲ್ಲಿ ವೀಸಾ ಮತ್ತು ಮಾಸ್ಟರ್ ಕಾರ್ಡ್‌ಗಳಿಂದ ನಡೆಸಲ್ಪ ಡುವ ಡೆಬಿಟ್ ಕಾರ್ಡ್ ಗಳೇ ತುಂಬಿ ಹೋಗಿದ್ದವು.
ಎಲ್ಲಾ ರಾಷ್ಟ್ರೀ ಯ ಹಾಗೂ ಖಾಸಗಿ ಬ್ಯಾಂಕುಗಳು ವೀಸಾ ಮತ್ತು ಮಾಸ್ಟರ್ ಕಾರ್ಡ್‌ಗಳನ್ನು ಆಧರಿಸಿದ ಡೆಬಿಟ್ ಹಾಗೂ ಕ್ರೆಡಿಟ್ ಕಾಡ್ ಗಳನ್ನು ವಿತರಿಸುತ್ತಿದ್ದವು. ಹೀಗಾಗಿ ರೂಪೇ ಕಾರ್ಡ್ ತಲೆ ಎತ್ತಲೇ ಇಲ್ಲ. 2014 ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರವು ದೇಶದ ಪ್ರತೀ ಪ್ರಜೆಯೂ ಬ್ಯಾಂಕ್ ಖಾತೆಯನು ಹೊಂದುವಂತಾಗಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಜನಧನ್ ಯೋಜನೆಯನ್ನು ಜಾರಿ ಮಾಡಿತು.
ಜನಧನ್ ಖಾತೆಯನ್ನು ತೆರೆಯುವ ಗ್ರಾಹಕರಿಗೆ ಸರಕಾರವು ವೀಸಾ ಅಥವಾ ಮಾಸ್ಟರ್‌ಕಾರ್ಡ್‌ಗಳ ಬದಲು ರುಪೇ ಕಾರ್ಡ್ ಅನ್ನೇ ವಿತರಿಸಲು ಸರಕಾರವು ಸೂಚಿಸಿತು. ರಾಷ್ಟ್ರೀಕೃತ ಬ್ಯಾಂಕುಗಳ ಎಲ್ಲಾ ಗ್ರಾಹಕರಿಗೂ ರುಪೇ ಕಾರ್ಡ್ ಅನ್ನೇ ನೀಡಲಾಯಿತು. ಹಳೆಯ ಕಾರ್ಡ್‌ಗಳನ್ನು ನವೀಕರಿಸುವ ಸಂದರ್ಭದಲ್ಲಿಯೂ ರುಪೇ ಕಾರ್ಡ್‌ಗಳನ್ನು ಕೊಡಲಾಯಿತು. ಇದೀಗ ದೇಶದ ೬೦% ಗಿಂತಲೂ ಹೆಚ್ಚಿನ ಬ್ಯಾಂಕ್ ಗ್ರಾಹಕರು ರೂಪೇ ಡೆಬಿಟ್ ಕಾರ್ಡಗಳನ್ನು ಹೊಂದಿದ್ದಾರೆ.
ಈ ನಡುವೆ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ಕಳೆದುಕೊಂಡ ವೀಸಾ ಹಾಗೂ ಮಾಸ್ಟರ್ ಕಾರ್ಡ್ ಸಂಸ್ಥೆಗಳು ಭಾರತದಲ್ಲಿ ಸರಕಾರವು ರುಪೇಗೆ ಮಾತ್ರ ಪ್ರಾಧಾನ್ಯವನ್ನು ಕೊಡುತ್ತಿದೆ ಎಂದು ಅಮೆರಿಕಾ ಸರಕಾರಕ್ಕೆ ದೂರು ಕೊಟ್ಟವು. ಆದರೆ ಭಾರತವು ವೀಸಾ, ಮಾಸ್ಟರ್ ಕಾರ್ಡ್‌ಗಳ ದೂರಿಗೆ ಒಂದಿಷ್ಟೂ ತಲೆಕೆಡಿಸಿಕೊಂಡಿಲ್ಲ. ಇಂದು ದೇಶದಲ್ಲಿ 60 ಲಕ್ಷ ಕಾರ್ಡು ಬಳಕೆದಾರರನ್ನು ಹೊಂದಿರುವ ಕ್ರೆಡ್ ಹೆಸರಿನ ಸಂಸ್ಥೆಯು ತನ್ನ ಮೌಲ್ಯವನ್ನು 5 ಬಿಲಿಯನ್ (5 ಶತಕೋಟಿ) ಡಾಲರ್ ಗಳಿಗೆ ಏರಿಸಿ ಕೊಂಡಿರು ವಾಗ ಕ್ರೆಡ್‌ಗಿಂತ 100 ಪಟ್ಟು ಅಧಿಕ ಗ್ರಾಹಕರನ್ನು ಹೊಂದಿರುವ ರುಪೇ ಕಾರ್ಡ್‌ನ ಮೌಲ್ಯ ಏನಿಲ್ಲವೆಂದರೂ 500 ಬಿಲಿಯನ್ ಡಾಲರ್‌ಗಳನ್ನು ಮೀರುತ್ತದೆ. ಈ ಮೊತ್ತವನ್ನು ಭಾರತೀಯ ರುಪಾಯಿಗಳಿಗೆ ಪರಿವರ್ತಿಸಿದಾಗ ಸುಮಾರು 39 ಲಕ್ಷ ಕೋಟಿ ರುಪಾಯಿಗಳನ್ನು ತಲುಪುತ್ತದೆ.
ಒಂದು ವೇಳೆ ರುಪೇ ಕಾಡ್ ಗಳನ್ನು ಸಾರ್ವತ್ರೀಕರಿಸಿದೆ ಇರುತ್ತಿದ್ದರೆ ಅಮೆರಿಕಾದ ಕಂಪನಿಗಳಾದ ವೀಸಾ ಹಾಗೂ ಮಾಸ್ಟರ್ ಕಾರ್ಡ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಮೌಲ್ಯವನ್ನು ಈ ಮಟ್ಟಕ್ಕೆ ಹಿಗ್ಗಿಸಿಕೊಳ್ಳುತ್ತಿದ್ದವು. ಈ ವರ್ಷ ನಡೆದ ಟಾಟಾ
ಐಪಿಎಲ್‌ನಲ್ಲಿ ರುಪೇ ಕಾರ್ಡ್ ಅಧಿಕೃತ ಪಾಲುದಾರನಾಗಿ ಹೊರ ಹೊಮ್ಮಿದೆ. ವೀಸಾ ಹಾಗೂ ಮಾಸ್ಟರ್ ಕಾರ್ಡ್‌ಗಳು
ವಹಿವಾಟಿನ ಮೊತ್ತದ 0.055% ದಷ್ಟು ಶುಲ್ಕವಾಗಿ ಪಡೆದುಕೊಂಡರೆ ರುಪೇ ಕೇವಲ 0.01% ವನ್ನು ಮಾತ್ರ ಶುಲ್ಕವಾಗಿ ವಿಧಿಸು ತ್ತದೆ.
ಇದೀಗ ರುಪೇ ಕಾರ್ಡ್ ವತಿಯಿಂದ ಕ್ರೆಡಿಟ್ ಕಾರ್ಡುಗಳು ಕೂಡಾ ಲಭ್ಯವಾಗಿವೆ. ರುಪೇ ಗ್ಲೋಬಲ್ ಕಾರ್ಡ್‌ಗೆ ಜಗತ್ತಿನ ಎಲ್ಲ ದೇಶಗಳಲ್ಲಿ ಮಾನ್ಯತೆ ಇದೆ. ಇಂದು ಡಿಜಿಟಲ್ ಮಾಧ್ಯಮದ ಮೂಲಕ ಜಾಗತಿಕವಾಗಿ ಅತೀ ಹೆಚ್ಚು ಮೊತ್ತದ ಹಣ ವರ್ಗಾವಣೆ ಯಾಗುತ್ತಿರುವುದು ಭಾರತದ ಎನ್ನುವುದು ಹೆಗ್ಗಳಿಕೆಯ ವಿಚಾರವಾಗಿದೆ. ಶೀಘ್ರವಾಗಿ ಹಣವನ್ನು ವರ್ಗಾವಣೆ ಮಾಡಲು
ಅನುಕೂಲವಾಗುವಂತಹ ವ್ಯವಸ್ಥೆ ಯುನಿಪೇಡ್ ಪೇಯ್ಮೆಂಟ್ಸ್ ಇಂಟರ್ ಫೇಸ್ ಅನ್ನು 2016 ನೇ ಇಸವಿಯಲ್ಲಿ ನ್ಯಾಷನಲ್ ಪೇಯ್ಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾವು ರೂಪಿಸಿತು.
ಭೀಮಯು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕಣ್ಣಳತೆಯಡಿಲ್ಲಿ ರೂಪುಗೊಂಡಿತು. ದೇಶದ 304 ರಾಷ್ಟ್ರೀಯ ಹಾಗೂ ಖಾಸಗಿ ಬ್ಯಾಂಕ್‌ಗಳು ಯುಪಿಐ ಮೂಲಕ ಹಣ ವಹಿವಾಟುಗಳನ್ನು ಮಾಡುತ್ತಿವೆ. 2021 ರಲ್ಲಿ ಭಾರತದಲ್ಲಿ ಒಂದು ಟ್ರಿಲಿಯನ್ ಡಾಲರ್(ಲಕ್ಷ ಕೋಟಿ ಡಾಲರ್) ಗಿಂತಲೂ ಹೆಚ್ಚು ಮೊತ್ತದ ಹಣವು ಯುಪಿಐ ಮೂಲಕ ವರ್ಗಾವಣೆಗೊಂಡಿದೆ. ಡಿಜಿಟಲ್
ಹಣ ವಹಿವಾಟಿನಲ್ಲಿ ಭಾರತವಿಂದು ಚೀನಾ ಅಮೆರಿಕಗಳಿಂದ ಸಾಕಷ್ಟು ಮುಂದಿದೆ. 2021 ರಲ್ಲಿ ಇಡೀ ಜಗತ್ತಿನಲ್ಲಿ ಒಟ್ಟು 118 ಶತಕೋಟಿ ಡಿಜಿಟಲ್ ವಹಿವಾಟುಗಳು ನಡೆದಿದ್ದರೆ ಭಾರತದಲ್ಲಿ ಇದೇ ಅವಧಿಯಲ್ಲಿ 48 ಶತಕೋಟಿ ಡಿಜಿಟಲ್ ವಹಿವಾಟುಗಳು ನಡೆದಿವೆ.
ಈ ಅವಽಯಲ್ಲಿ ಚೀನಾದಲ್ಲಿ ನಡೆದ ಒಟ್ಟು ಡಿಜಿಟಲ್ ಟ್ರಾನ್ಸಾಕ್ಷನ್‌ಗಳ ಸಂಖ್ಯೆ 18 ಶತಕೋಟಿ ಮಾತ್ರ. ಜಾಗತಿಕ ಡಿಜಿಟಲ್ ವಹಿವಾಟುಗಳಲ್ಲಿ 40% ಡಿಜಿಟಲ್ ವಹಿವಾಟುಗಳು ಭಾರತದ ನಡೆಯುತ್ತಿವೆ! ಭಾರತದಲ್ಲಿ ಹೆಚ್ಚಾಗುತ್ತಿರುವ ಡಿಜಿಟಲ್ ವಹಿವಾ ಟುಗಳು ದೇಶದ ಆರ್ಥಿಕತೆಯು ಮುಖ್ಯವಾಹಿನಿಯೊಳಗೆ ನಡೆಯುತ್ತಿರುವುದನ್ನು ಖಾತ್ರಿಪಡಿಸುತ್ತವೆ. ಜಗತ್ತಿನ ಅತೀ ಎತ್ತರದ ರೈಲ್ವೇ ಸೇತುವೆಯೊಂದು ಭಾರತದಲ್ಲಿ ನಿರ್ಮಾಣಗೊಳ್ಳುತ್ತಿದೆ ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಜಮ್ಮು ಕಾಶ್ಮೀರದ ರಿಯಾಸೀ ಜಿಲ್ಲೆಯೆ ಬಕ್ಕಲ್ ಹಾಗೂ ಕೌರೀಗಳ ನಡುವೆ ಚೆನಾಬ್ ನದಿಯ ಮೇಲೆ 359 ಮೀಟರ್‌ಗಳಷ್ಟು ಎತ್ತರದಲ್ಲಿ ಚೆನಾಬ್ ರೈಲ್ ಬ್ರಿಕ್ಸ್ ನಿರ್ಮಾಣಗೊಳ್ಳುತ್ತಿದ್ದು, ಸೇತುವೆ ನಿರ್ಮಾಣದ 90% ಕೆಲಸಗಳು ಪೂರ್ಣಗೊಂಡಿವೆ.
೩೦೦ ಮೀಟರ್ ಎತ್ತರದ ಪ್ಯಾರಿಸ್‌ನ ಐಫೆಲ್ ಟವರ್‌ಗಿಂತಲೂ 59 ಮೀಟರ್ ಎತ್ತರದಲ್ಲಿ ಈ ಸೇತುವೆಯ ಕೆಲಸಗಳು ಸಾಗುತ್ತಿವೆ. ನದಿಯ ಮೇಲೆ ಕಮಾನಿನಾಕಾರದಲ್ಲಿ ರೂಪುಗೊಂಡಿರುವ ಈ ಸೇತುವೆಯ ಉದ್ದ 1315 ಮೀಟರ್‌ಗಳು. ಈ ಸೇತುವೆಯ
ನಿರ್ಮಾಣದ ಕೆಲಸವು ಆರಂಭಗೊಂಡದ್ದು 2017 ರ ಜುಲೈ ತಿಂಗಳಲ್ಲಿ. ಭಾರತದ ಪ್ರಸಿದ್ಧ ನಿರ್ಮಾಣ ಸಂಸ್ಥೆಯಾದ ಶಪೂರ್ಜಿ ಪಂಜಿ ಗ್ರೂಪ್‌ನ ಅಂಗ ಸಂಸ್ಥೆಯಾದ ಅ- ಇನ್-ಸ್ಟ್ರಕ್ಚರ್ ಈ ಕೆಲಸವನ್ನು ನಿರ್ವಹಿಸುತ್ತಿದೆ.
2021 ರ ಎಪ್ರಿಲ್ ತಿಂಗಳಲ್ಲಿ ಕಮಾನಿನ ಎರಡು ಭಾಗಗಳನ್ನು ಮಧ್ಯದಲ್ಲಿ ಜೋಡಿಸುವ ಅತ್ಯಂತ ಕ್ಲಿಷ್ಟಕರವಾದ ಕೆಲಸವು
ಪೂರ್ಣಗೊಂಡಿದ್ದು, 2022 ರ ಡಿಸೆಂಬರ್ ತಿಂಗಳ ಒಳಗಾಗಿ ಈ ಸೇತುವೆಯ ಕೆಲಸ ಪೂರ್ಣಗೊಂಡು ಅದರ ಮೇಲೆ ರೈಲು ಓಡಾಡಲಿದೆ. 1486 ಕೋಟಿ ರುಪಾಯಿಗಳಷ್ಟು ವೆಚ್ಚದ ಈ ಸೇತುವೆಯು ಕಾಶ್ಮೀರಕ್ಕೆ ದೇಶದ ಇತರ ಭಾಗಗಳೊಂದಿಗಿನ ಪ್ರಮುಖ ಸಂಪರ್ಕಸೇತುವಾಗಲಿದೆ. ಹಿಮಾಚಲ ಪ್ರದೇಶದ ಮನಾಲಿ ಹಾಗೂ ಲೇಹ್ ನಡುವೆ ನಿರ್ಮಾಣಗೊಂಡು 2020 ರಲ್ಲಿ ವಾಹನ ಸಂಚಾರಕ್ಕೆ ತೆರೆದುಕೊಂಡ 9.02 ಕಿಲೋಮೀಟರ್ ಉದ್ದದ ಆಟಲ್ ಸುರಂಗ ಮಾರ್ಗವು ಜಗತ್ತಿನ ಸಮುದ್ರ ಮಟ್ಟದಿಂದ
ಅತೀ ಹೆಚ್ಚು ಎತ್ತರದಲ್ಲಿ(10000 ಫೀಟ್ ಗಿಂತಲೂ ಎತ್ತರದಲ್ಲಿ) ನಿರ್ಮಾಣಗೊಂಡ ಸುರಂಗ ಮಾರ್ಗ ಎಂಬ ಕೀರ್ತಿಗೆ ಭಾಜನ ವಾಗಿದೆ. ಈ ಮೊದಲು ಮನಾಲಿಯಿಂದ ಲೇಹ್‌ಗೆ ಸಾಗುವ ಹೈವೇಯಲ್ಲಿ ಕೇಯ್ಲಾಂಗ್‌ಗೆ ತಲುಪಲು 5 ರಿಂದ 6 ಗಂಟೆ ಗಳನ್ನು ವ್ಯಯಿಸಿ 116 ಕಿಲೋಮೀಟರ್ ಗಳಷ್ಟು ದೂರವನ್ನು ಕ್ರಮಿಸಬೇಕಾಗಿತ್ತು.
ಆಟಲ್ ಟನೆಲ್ ನಿಂದಾಗಿ ಮನಾಲಿ ಹಾಗೂ ಕೆಯ್ಲಾಂಗ್‌ನ ನಡುವಿನ ಅಂತರವೀಗ 37 ಕಿಲೋಮೀಟರ್‌ಗೆ ಇಳಿದಿದೆ ಹಾಗೂ
ಪ್ರಯಾಣದ ಅವಧಿಯೂ 5-6 ಗಂಟೆಯಿಂದ ಒಂದು ಗಂಟೆಗೆ ಇಳಿದಿದೆ. ಇದೀಗ ಲಡಾಕ್‌ನಲ್ಲಿ ಸಮುದ್ರ ಮಟ್ಟಕ್ಕಿಂತ 16,708 ಅಡಿ ಎತ್ತರದಲ್ಲಿ 4.5 ಕಿಲೋಮೀಟರ್ ಉದ್ದದ ಶಿಂಗೋ ಲಾ ಸುರಂಗ ಮಾರ್ಗದ ನಿರ್ಮಾಣ ಕೆಲಸವನ್ನು ಬಾರ್ಡರ ರೋಡ್ಸ್ ಆರ್ಗನೈಸೇಶನ್ (ಬಿಆರ್‌ಒ) ಆರಂಭಿಸಿದ್ದು 2023-24 ರಲ್ಲಿ ಕೆಲಸ ಪೂರ್ಣ ವಾಗಲಿದೆ. ಶಿಂಗೋಲಾ ಟನೆಲ್ ಕೆಲಸವು ಪೂರ್ಣ ಗೊಂಡಾಗ ಜಗತ್ತಿನ ಅತೀ ಎತ್ತರದಲ್ಲಿ ನಿರ್ಮಾಣಗೊಂಡ ಸುರಂಗ ಮಾರ್ಗ ಎಂಬ ದಾಖಲೆಯನ್ನು ಶಿಂಗೋಲಾ ಟನೆಲ್ ತನ್ನ ಹೆಸರಿಗೆ ಬರೆದುಕೊಳ್ಳಲಿದೆ.
ಅಟಲ್ ಸುರಂಗ ಹಾಗೂ ಶಿಂಗೋಲಾ ಸುರಂಗ ಮಾರ್ಗಗಳು ಯಾವುದೇ ಹವಾಮಾನಗಳಲ್ಲೂ ಲೇಹ್ ಲಡಾಕ್‌ಗಳಿಗೆ ದೇಶದ ಇತರ ಭಾಗಗಳೊಂದಿಗೆ ಸಂಪರ್ಕದಿಂದಿರಲು ಸಹಾಯ ಮಾಡಲಿದೆ. ನವೀಕರಿಸಬಹುದಾದ ಮೂಲಗಳಿಂದ ಅತೀ ಹೆಚ್ಚು
ವಿದ್ಯುತ್ ಅನ್ನು ಉತ್ಪಾದಿಸುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಮೂರನೆಯ ಸ್ಥಾನಕ್ಕೆ ಏರಿದೆ ಎಂಬ ವಿಚಾರವು ಬಹಳಷ್ಟು ಭಾರತೀಯರಿಗೆ ತಿಳಿದಿಲ್ಲ. ದೇಶದಲ್ಲಿ ಕಳೆದ 8 ವರ್ಷಗಳಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಯ ಬಹುದೊಡ್ಡ ಕ್ರಾಂತಿಯೇ ನಡೆದಿದೆ. 2014 ರಲ್ಲಿ ಭಾರತದಲ್ಲಿ 2.5 ಗಿಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. 2013 ರಲ್ಲಿ ಅಂದಿನ ಭಾರತ ಸರಕಾರವು 2022 ನೇ ಇಸವಿಯ ಒಳಗೆ 20 ಗಿಗಾವ್ಯಾಟ್ ಸೋಲಾರ್ ವಿದ್ಯುತ್ ಅನ್ನು ಉತ್ಪಾದಿಸುವು ಗುರಿಯನ್ನು ಇಟ್ಟಿ ಕೊಂಡಿತ್ತು.
2014 ರಲ್ಲಿ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಸರಕಾರವು ನವೀಕರಿಸಬಹುದಾದ ಮೂಲಗಳಿಂದ ವಿದ್ಯುತ್ ಉತ್ಪಾದನೆಗೆ ಹೆಚ್ಚು ಪ್ರಾಶಸ್ತ್ಯ ಹಾಗೂ ಉತ್ತೇಜನ ನೀಡಿದುದರ ಪರಿಣಾಮವಾಗಿ 2018 ರ ಭಾರತವು 20 ಗಿಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಯ ಗುರಿಯನ್ನು ತಲುಪಿತು. ಇದೀಗ ಭಾರತದಲ್ಲಿ ಸುಮಾರು 60 ಗಿಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಗೊಳ್ಳುತ್ತಿದೆ.
ಪವನ ಯಂತ್ರಗಳ ಮೂಲಕ 40 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆಗೊಳ್ಳುತ್ತಿದೆ. 46.51 ಗಿಗಾವ್ಯಾಟ್ ಜಲವಿದ್ಯುತ್ ಉತ್ಪಾದನೆ ಗೊಳ್ಳುತ್ತಿದೆ. 2030 ರ ಒಳಗೆ ನವೀಕರಿಸಬಹುದಾದ ಮೂಲಗಳಿಂದ ಭಾರತವು 450 ಗಿಗಾವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸಿಕೊಳ್ಳಲಿದೆ. 500ಕ್ಕೂ ಹೆಚ್ಚಿನ ಸಂಸ್ಥಾನಗಳನ್ನು ದೇಶದ ಒಕ್ಕೂಟದೊಂದಿಗೆ ಸೇರಿಸುವಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಹಾಗೂ ದೇಶದ ಮೊದಲ ಗೃಹ ಮಂತ್ರಿ ಸರ್ದಾರ ವಲ್ಲಭ ಭಾಯ್ ಪಟೇಲ್ ಅವರ ಬೃಹತ್
ಪ್ರತಿಮೆಯಾದ ಸ್ಟ್ಯಾಚ್ಯು ಆಫ್ ಯುನಿಟಿ ಯ ನಿರ್ಮಾಣ ಕಾರ್ಯವನ್ನು ಆರಂಭಿಸಿದಾಗ ಕೆಲವರು ಬಹಳಷ್ಟು ಟೀಕೆಗಳನ್ನು ಮಾಡಿದ್ದರು.
ಇಂದು ಗುಜರಾತ್‌ನ ಕೆವಾಡಿಯಾದಲ್ಲಿ ಎದ್ದು ನಿಂತಿರುವ 182 ಮೀಟರ್ ಎತ್ತರದ ಸ್ಟ್ಯಾಚ್ಯು ಆಫ್ ಯುನಿಟಿಯು ಜಗತ್ತಿನ ಅತೀ ಎತ್ತರದ ಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಾರ್ಷಿಕವಾಗಿ ತಾಜ್ ಮಹಲ್‌ಗೆ ಭೇಟಿ ನೀಡುವ ಪ್ರವಾಸಿಗರಿಗಿಂತಲೂ
ಹೆಚ್ಚು ಸಂಖ್ಯೆಯ ಪ್ರವಾಸಿಗರನ್ನು ಪಟೇಲರ ಮೂರ್ತಿಯು ತನ್ನೆಡೆಗೆ ಆಕರ್ಷಿಸುತ್ತಿದೆ. ಇದೀಗ ದಿನವೊಂದಕ್ಕೆ ಸರಾಸರಿ 12,369 ಪ್ರವಾಸಿಗರು ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಕೆಲವು ವಿಶೇಷ ದಿವಸಗಳಲ್ಲಿ ಭೇಟಿ ನೀಡುವವರ ಸಂಖ್ಯೆ 50 ಸಾವಿರವನ್ನು ದಾಟು ವುದೂ ಇದೆ. ಈ ಯೋಜನೆಯು ಆ ಭಾಗದ 20000 ಜನರಿಗೆ ಪ್ರವಾಸೋದ್ಯಮ ಸಂಬಂಧಿ ನೇರ ಹಾಗೂ ಪರೋಕ್ಷ ಉದ್ಯೋಗ ಗಳನ್ನು ಸೃಷ್ಟಿಸಿದೆ.
ಮೇಲೆ ಹೇಳಲಾಗಿರುವ ವಿಚಾರಗಳು ಭಾರತದಗುತ್ತಿರುವ ಬದಲಾವಣೆಗೆಯನ್ನು ಸೂಚಿಸುವ ಕೆಲವೇ ಕೆಲವು ಉದಾಹರಣೆಗಳು ಮಾತ್ರ. ಭಾರತದಲ್ಲಿ ಇದೇ ರೀತಿಯ ಅಸಂಖ್ಯ ಧನಾತ್ಮಕ ಬೆಳವಣಿಗೆಗಳು ಭಾರತದಗುತ್ತಿದೆ. ಆದರೆ ನಾವು ನಮ್ಮ ಸಂಶಯದ
ಕನ್ನಡಕಗಳನ್ನು ಕಳಚಿ ಹೊಸ ಬದಲಾವಣೆಗಳನ್ನು ಸಕಾರಾತ್ಮಕ ದೃಷ್ಟಿಕೋನದಿಂದ ಗಮನಿಸುವ ಮನಸ್ಥಿತಿಯನ್ನು ಬೆಳೆಸಿ ಕೊಳ್ಳಬೇಕು, ಅಷ್ಟೇ.