Monday, 16th September 2024

ಪಂಜಾಬಿನ ರೈತ ಪ್ರತಿಭಟನೆಯನ್ನು ಹೈಜಾಕ್ ಮಾಡಿದ ನಗರ ನಕ್ಸಲರು

ವೀಕೆಂಡ್ ವಿಥ್‌ ಮೋಹನ್‌

ಮೋಹನ್ ವಿಶ್ವ

ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಮೂರು ಮಹತ್ವದ ಕೃಷಿ ಸಂಬಂಧಿತ ಮಸೂದೆಯ ತಿದ್ದುಪಡಿಯನ್ನು ಅನುಮೋದಿಸಿದೆ. ಈ ತಿದ್ದುಪಡಿಗಳು ರೈತರ ಪರವಾಗಿದ್ದರೂ ಸಹ ಹಲವು ರೈತ ಮುಖಂಡರು ಪ್ರತಿಭಟನೆಯ ಮೂಲಕ ರೈತರನ್ನು ಸರಕಾರದ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ.

‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ’ಯ ಕಾಯಿದೆ ರಚನೆಯಾಗಿ ಸುಮಾರು ಐದು ದಶಕ ಕಳೆದರೂ ಸಹ ರೈತನಿಗೆ ತಾನು
ಬೆಳೆದಿರುವ ಬೆಳೆಗಳಿಗೆ ಉತ್ತಮ ಬೆಲೆ ದೊರಕುತ್ತಿಲ್ಲ. ರೈತನು ಬೆಳೆದ ಬೆಳೆಯನ್ನು ಮಾರಲು ಒಂದು ಮಾರುಕಟ್ಟೆಯ ಪ್ರಾಂಗಣ ವನ್ನು ನಿರ್ಮಿಸುವ ಸಲುವಾಗಿ ಈ ಮಾರುಕಟ್ಟೆಗಳನ್ನು ಜಿಲ್ಲೆ ಜಿಲ್ಲೆಗಳಲ್ಲಿ ಸ್ಥಾಪಿಸಲಾಯಿತು.

ರೈತರಿಗಾಗಿ ತೆರೆದ ಮಾರುಕಟ್ಟೆ ಗಳಲ್ಲಿ ರೈತರಿಗಿಂತಲೂ ಅತೀ ಹೆಚ್ಚು ಹಣ ಮಾಡಿದವರು ‘ಮಧ್ಯವರ್ತಿ ಗಳು’, ರೈತನು ತರುವ ಬೆಳೆಯನ್ನು ಮಾರುಕಟ್ಟೆಯಲ್ಲಿ ಹರಾಜು ಹಾಕಿ, ಅವನ ಉತ್ಪನ್ನಗಳು ಅದೆಷ್ಟೇ ಬೆಲೆಗೆ ಮಾರಾಟವಾದರೂ ಮಧ್ಯವರ್ತಿಗಳಿಗೆ ಮಾತ್ರ ‘ಕಮಿಷನ್’ ಹಣ ಸಂದಾಯವಾಗುತಿತ್ತು. ನಾನೇ ಕಂಡಿರುವ ಹಾಗೆ ಕೃಷಿ ಮಾರುಕಟ್ಟೆಯಲ್ಲಿ ‘ಮಧ್ಯವರ್ತಿಗಳು’ ರೈತನು ತಂದಂಥ ಬೆಳೆಯನ್ನು ಹರಾಜಿನಲ್ಲಿ ಕೂಗಿ, ಮಾರಾಟವಾಗದೇ ಇದ್ದಾಗ ಅತಿ ಕಡಿಮೆ ಬೆಲೆಯಲ್ಲಿ ಮಾರಿ ತಮ್ಮ ಕಮಿಷನ್
ಮಾತ್ರ ಭದ್ರ ಮಾಡಿಕೊಳ್ಳುತ್ತಾರೆ.

ರೈತನಿಗೆ ಅದ್ಯಾವ ರೀತಿಯ ಸನ್ನಿವೇಶವನ್ನು ಸೃಷ್ಟಿಸುತ್ತಾರೆಂದರೆ ಕೊನೆಗೆ ಮಧ್ಯವರ್ತಿ ಹೇಳುವ ಬೆಲೆಗೆ ತಾನು ಬೆಳೆದ ಬೆಳೆ ಯನ್ನು ಮಾರಿ ಹಲವು ಬಾರಿ ನಷ್ಟದಿಂದ ರೈತನು ಮನೆಗೆ ಹೋದ ಹಲವು ಉದಾಹರಣೆಗಳಿವೆ. ಹೊಸ ಕಾನೂನಿನಲ್ಲಿ ಹಾಗಿಲ್ಲ ರೈತನಿಗೆ ‘ಕೃಷಿ ಮಾರುಕಟ್ಟೆಯ’ ಹೊರಗೂ ಸಹ ತಾನು ಬೆಳೆದ ಉತ್ಪನ್ನ ಗಳನ್ನು ನೇರವಾಗಿ ಮಾರಬಹುದಾಗಿದೆ.

ತಾನು ಬೆಳೆವ ಬೆಳೆಯ ಬೀಜವನ್ನು ಬಿತ್ತುವ ಮೊದಲೇ ಮುಂಗಡ ಹಣವನ್ನು ನೀಡಿ ಒಂದು ಬೆಲೆಯನ್ನು ನಿಗದಿಪಡಿಸಿ ಖರೀದಿಸ
ಬಹುದಾಗಿದೆ. ಸ್ವಾತಂತ್ರ್ಯ ಬಂದು ಇಷ್ಟುವರ್ಷಗಳು ಕಳೆದರೂ ಸಹ ರೈತನಿಗೆ ತಾನು ಬೆಳೆದ ಬೆಳೆಯನ್ನು ತನಗಿಷ್ಟ ಬಂದವರಿಗೆ ಮಾರುವ ಅಧಿಕಾರವಿಲ್ಲದಿರುವುದು ದೊಡ್ಡ ವಿಪರ್ಯಾಸವೇ ಸರಿ. ಈಗ ಈ ಕಾಯಿದೆಯ ತಿದ್ದುಪಡಿ ಮಾಡುವ ಮೂಲಕ ರೈತನಿಗೆ ನ್ಯಾಯ ಒದಗಿಸುವ ಕೆಲಸವಾಗುತ್ತಿದ್ದರೆ, ಅದನ್ನು ಸಹಿಸದ ದಳಿಗಳು ರೈತರ ತಲೆಯಲ್ಲಿ ‘ಅಂಬಾನಿ’ ‘ಅದಾನಿ’ಎಂಬ ಗುಮ್ಮವನ್ನು ತೋರಿಸಿ ಪ್ರತಿಭಟನೆ ಮಾಡಿಸುತ್ತಿದ್ದಾರೆ.

ಪಂಜಾಬಿನಲ್ಲಿ ಶುರುವಾದಂಥ ಈ ಪ್ರತಿಭಟನೆ ನಿಧಾನವಾಗಿ ದೇಶದೆಡೆ ಹಬ್ಬುತ್ತಿದೆ, ನಿಜವಾದ ರೈತ ಪ್ರತಿಭಟನೆಗೆ ಬರುತ್ತಲೇ ಇಲ್ಲ. ಅವನು ತನ್ನ ಪಾಡಿಗೆ ತನ್ನ ಕೆಲಸವನ್ನು ಮಾಡಿಕೊಂಡಿದ್ದಾನೆ. ಆದರೆ ದಾಳಿ ಪ್ರೇರಿತ ಕೆಲವರು ಮಾತ್ರ ರೈತನ ಹೆಸರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಪಂಜಾಬ, ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚಿನ ದಳಿಗಳಿದ್ದಾರೆ. ಮಹಾರಾಷ್ಟ್ರ ದ ಎನ್‌ಸಿಪಿ ನಾಯಕ ‘ಶರತ್ ಪವಾರ್’ನ ಮಗಳು ನಡೆಸುವ ಕೃಷಿ ಆಧಾರಿತ ಕಂಪನಿಯು ವರ್ಷಕ್ಕೆ ಸುಮಾರು ಹತ್ತು ಸಾವಿರ ಕೋಟಿಯಷ್ಟು ವ್ಯವಹಾರವನ್ನು ನಡೆಸುತ್ತದೆ.

ಪಂಜಾಬಿನ ದಳಿಯೊಬ್ಬ ‘ಭಾರತ ಆಹಾರ ನಿಗಮ’ ಕ್ಕೆ ಪ್ರತಿವರ್ಷ ಬೇಕಿರುವ ಲಕ್ಷ ಲಕ್ಷ ಟನ್ ಗಟ್ಟಲೆ ಆಹಾರ ಪದಾರ್ಥಗಳನ್ನು ಪೂರೈಸುತ್ತಾನೆ, ಈ ನೂತನ ಕಾಯಿದೆಯು ಜಾರಿಗೆ ಬಂದರೆ ಇವರ ವ್ಯಾಪಾರಕ್ಕೆ ದೊಡ್ಡದೊಂದು ಹೊಡೆತ ಬೀಳುವುದು ಖಚಿತ. ಅದಕ್ಕಾಗಿಯೇ ಇವರ ಪೋಷಣೆಯಲ್ಲಿಯೇ ಕೆಲವು ರೈತರನ್ನು ಬಳಸಿಕೊಂಡು ಈ ಪ್ರತಿಭಟನೆ ನಡೆಯುತ್ತಿದೆಯೆಂದು ಹಲವಾರು ಅಭಿಪ್ರಾಯಪಟ್ಟಿದ್ದಾರೆ. ಇವರ ಪೋಷಣೆ ಅದೆಷ್ಟಿದೆಯೆಂದರೆ ದೆಹಲಿಯ ಗಡಿಯಲ್ಲಿರುವ ರೈತರಿಗೆ ಮೃಷ್ಟಾನ್ನ ಭೋಜನವು ಪ್ರತಿನಿತ್ಯ ಬರುತ್ತದೆ. ಚಳಿಯಲ್ಲಿ ಹೊದೆಯಲು ದೊಡ್ಡ ದೊಡ್ಡ ‘ಬೆಡ್ ಶೀಟ್’ಗಳು ಬರುತ್ತವೆ, ಐಷಾರಾಮಿ ಕಾರುಗಳಲ್ಲಿ ರೈತ ನಾಯಕರು ಬರುತ್ತಾರೆ.

ಸುಮ್ಮನೆ ಮನೆಯಲ್ಲಿದ್ದರೂ ಸಿಗದಂಥ ಸೌಲಭ್ಯಗಳು ಇವರಿಗೆ ಪ್ರತಿಭಟನೆಯಲ್ಲಿ ಸಿಗುತ್ತಿವೆ. ಈ ಪ್ರತಿಭಟನೆಯು ತಮ್ಮ ಸ್ವಹಿತಾ ಸಕ್ತಿ ಯನ್ನು ಪೋಷಿಸಿಕೊಳ್ಳಲು ಬಳಸಿಕೊಳ್ಳುತ್ತಿರುವ ಒಂದು ನೆಪವಷ್ಟೆ. ಪಂಜಾಬಿನ ಕೆಲವರು ತಮಗೆ ಪ್ರತ್ಯೇಕ ‘ಖಲಿಸ್ತಾನ’ ರಾಷ್ಟ್ರ ಬೇಕೆಂದು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ, ಈ ಹೋರಾಟಕ್ಕೆ ಇಂದಿನವರೆಗೂ ಒಂದು ಪೈಸೆಯ ಕಿಮ್ಮತ್ತೂ ಸಿಕ್ಕಿರಲಿಲ್ಲ. ಈಗ ರೈತರ ಹೆಸರಿನಲ್ಲಿ ಪ್ರತಿಭಟನೆಯನ್ನು ಮಾಡಿ ತಮ್ಮ ‘ಖಲಿಸ್ತಾನ’ ಹೋರಾಟವನ್ನು ಭದ್ರ ಮಾಡುವ ಹುನ್ನಾರ ದಂತೆ ಕಾಣುತ್ತಿದೆ.

ಭಾರತಕ್ಕೆ ಹೊರಗಿನ ಶತ್ರುಗಳಿಗಿಂತಲೂ ಆಂತರಿಕ ಶತ್ರುಗಳೇ ಹೆಚ್ಚು. ‘ಕಮ್ಯುನಿಷ್ಟರು’ ಕಳೆದ ಒಂದು ಶತಮಾನದಿಂದಲೂ ಭಾರತವನ್ನು ಒಡೆಯುವ ಹುನ್ನಾರವನ್ನು ಮಾಡುತ್ತಲೇ ಬಂದಿದ್ದಾರೆ. ಭಾರತವನ್ನು ಒಡೆಯುವ ಕೊಂಚ ಅವಕಾಶ ಸಿಕ್ಕರೂ ಸರಿ ಅದನ್ನು ಬಳಸಿಕೊಳ್ಳುವ ಜಾಯಮಾನ ಇವರದ್ದು, ಇಲ್ಲಿಯೂ ಅಷ್ಟೇ ಯಾವಾಗ ಪಂಜಾಬಿನಲ್ಲಿ ರೈತರ ಪ್ರತಿಭಟನೆಯ ಮೂಲಕ ‘ಖಲಿಸ್ತಾನ’ದ ಚಳುವಳಿಯನ್ನು ತೀವ್ರಗೊಳಿಸಲು ನಿರ್ಧರಿಸಲಾಯಿತೋ, ಒಳಗಿನ ಹಾಗೂ ಹೊರಗಡೆ ಕುಳಿತು ಭಾರತದ ವಿರುದ್ಧ ಕತ್ತಿ ಮಸೆಯುತ್ತಿದಂಥ ಕಮ್ಯುನಿಷ್ಟರು ಚಿಗುರಿಕೊಂಡರು.

ಲಂಡನ್ನಿನಲ್ಲಿ ಕುಳಿತಿರುವಂಥ ಕೆಲವು ಕಮ್ಯುನಿಸ್ಟ್ ಬುದ್ದಿಜೀವಿಗಳು ಈ ಪ್ರತಿಭಟನೆಯನ್ನು ಮುಂದಿಟ್ಟುಕೊಂಡು ಭಾರತವನ್ನು ಒಡೆಯುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ, ‘ಕೆನಡಾ’ ದೇಶದ ಪ್ರಧಾನಮಂತ್ರಿ ಕೂಡ ಕೈ ಜೋಡಿಸಿದ್ದಾನೆ. ಈತ ಒಬ್ಬ ದೊಡ್ಡ ‘ಕಮ್ಯುನಿಸ್ಟ್’ ಆಲೋಚನೆಯಿರುವ ಪ್ರಧಾನಮಂತ್ರಿ. ಈತನ ಸಂಸತ್ತಿನಲ್ಲಿ ಹಲವು ಜನ ‘ಸಿಖ್ಖ್’ ಸಂಸದರಿದ್ದಾರೆ, ಅವರನ್ನು ಸಂತೃಪ್ತಿಗೊಳಿಸುವ ಸಲುವಾಗಿ ಪಂಜಾಬಿನ ಪ್ರತಿಭಟನಕಾರರ ಪರವಾಗಿ ಮಾತನಾಡಿದ. ಅವರ ಪರವಾಗಿ ಮಾತನಾಡಿದರೆ ಮುಂದಿನ ದಿನಗಳಲ್ಲಿ ಸಂಸತ್ತಿನಲ್ಲಿ ಅವನಿಗೆ ಸಿಖ್ಖ್ ಸಂಸದರ ಬೆಂಬಲ ಹೆಚ್ಚು ಸಿಗುತ್ತದೆಯೆಂಬ ನಂಬಿಕೆ ಇವನಿಗೆ. ಜತೆಗೆ ಪಂಜಾಬನ್ನು ಭಾರತದಿಂದ ಬೇರ್ಪಡಿಸಿದರೆ ದೇಶದೊಳಗೆ ದೊಡ್ಡ ಅಶಾಂತಿಯನ್ನು ಸೃಷ್ಟಿಸಬಹುದೆಂಬ ಹುನ್ನಾರ ಇವನ ದ್ದಾಗಿತ್ತು.

ಇವನ ಈ ಯೋಚನೆಗೆ ಕೈ ಜೋಡಿಸಿದ್ದು ಕೆನಡಾ ದೇಶದಲ್ಲಿರುವ ಭಾರತದ ಕಮ್ಯುನಿಷ್ಟರು. ಇವೆಲ್ಲದರ ಮಧ್ಯೆ ನಮ್ಮ ರೈತರು ಅರ್ಥ ಮಾಡಿಕೊಳ್ಳಬೇಕಿರುವ ಮತ್ತೊಂದು ಮಹತ್ವದ ವಿಚಾರ ವೆಂದರೆ, ಪಂಜಾಬಿನ ರೈತರ ಪರವಾಗಿ ನಿಲ್ಲುವ ಕೆನಡಾ
ಪ್ರಧಾನಮಂತ್ರಿ ತನ್ನ ದೇಶದಲ್ಲಿರುವ ರೈತರು ಬೆಳೆದ ಬೆಳೆಗಳ ಮೇಲೆ ‘ತೆರಿಗೆ’ಯನ್ನು ವಿಧಿಸಿದ್ದಾನೆ. ತನ್ನ ರೈತರ ಮೇಲೆ ತೆರಿಗೆ ವಿಧಿಸುವ ಪ್ರಧಾನಮಂತ್ರಿಯೊಬ್ಬ ಪಂಜಾಬಿನ ರೈತರ ಪರವಾಗಿ ನಿಲ್ಲುತ್ತಾನೆಂದರೆ ಅದೆಷ್ಟು ನಗಬೇಕೋ ಗೊತ್ತಿಲ್ಲ. ಭಾರತದಲ್ಲಿ
ಸ್ವಾತಂತ್ರ್ಯ ಪೂರ್ವದಿಂದಲೂ ರೈತರನ್ನು ಬಳಸಿಕೊಂಡು ರಾಜಕೀಯ ಮಾಡುತ್ತಲೇ ಇದ್ದಾರೆ.

ಬ್ರಿಟಿಷರಿಂದ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಸಹ ರೈತರ ಸಮಸ್ಯೆಗಳು ಪರಿಹಾರವಾಗಿಲ್ಲ. ಇಂದಿಗೂ ಸಹ ರೈತನ ಹೆಸರಿನಲ್ಲಿ ರಾಜಕೀಯ ಮಾಡಿ ವೋಟು ಪಡೆಯುವ ಹುನ್ನಾರ ನಡೆಯುತ್ತಲೇ ಇದೆ. ರೈತರ ಪರವಾಗಿಯೇ ಇರುವ ಪಕ್ಷವೆಂದು ಹೇಳಿಕೊಂಡು ಬಂದಂತಹ ‘ಕಾಂಗ್ರೆಸ್’ ಇಷ್ಟು ದಶಕಗಳ ನಂತರ ರೈತರಿಗಾಗಿ ಮಾಡಿದ್ದರೂ ಏನು? ಮತ್ತದೇ ಸಾಲಮನ್ನವೆಂಬ ಮತಬ್ಯಾಂಕ್ ರಾಜಕೀಯ. ರೈತನು ಬೆಳೆದ ಬೆಳೆಗೆ ನ್ಯಾಯವಾದ ಬೆಳೆಯನ್ನು ನೀಡುವ ಕೆಲಸವನ್ನು ಮಾಡಲೇ ಇಲ್ಲ.

ಈ ನಿಟ್ಟಿನಲ್ಲಿ ಜಾರಿಗೆ ತಂದಂಥ ‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ’ ಕಾಯಿದೆಯಲ್ಲೂ ಸಹ ರೈತನಿಗೆ ಸರಿಯಾದ ಬೆಳೆ ಸಿಗಲಿಲ್ಲ. ರೈತನ ಆತ್ಮಹತ್ಯೆ ಕಡಿಮೆಯಾಗಲಿಲ್ಲ, ರೈತನ ನೀರಿನ ಬರ ನೀಗಲಿಲ್ಲ, ರೈತನ ಮಕ್ಕಳು ವ್ಯವಸಾಯವನ್ನು ಬಿಟ್ಟು ನಗರಗಳಿಗೆ ಬರುವಂತಾಯಿತು. ಈಗ ಪ್ರತಿಭಟನೆಗೆ ಕೈಜೋಡಿಸಿರುವ ಕಾಂಗ್ರೆಸ್ ಈ ಹಿಂದೆ 2013ರಲ್ಲಿ ತಾವು ಅಧಿಕಾರಕ್ಕೆ ಬಂದರೆ ‘ಕೃಷಿ ಉತ್ಪನ್ನ ಮಾರುಕಟ್ಟೆ’ಯನ್ನು ಮುಚ್ಚುವುದಾಗಿ ಹೇಳಿತ್ತು. ‘ಕಪಿಲ್ ಸಿಬಲ’ 2012ರಲ್ಲಿ ಸಂಸತ್ತಿನಲ್ಲಿ ಏರು ಧ್ವನಿಯಲ್ಲಿ ದಳಿಗಳ ವಿರುದ್ಧ ಧ್ವನಿ ಎತ್ತಿದ್ದರು, ರಾಹುಲ್ ಗಾಂಧಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇದೆ ವಿಚಾರವನ್ನು ಹೇಳಿದ್ದರು.

ಇದು ಕಾಂಗ್ರೆಸ್ಸಿನ ‘ದ್ವಂದ್ವ’ನೀತಿಗೆ ಹಿಡಿದ ಕೈಗನ್ನಡಿ. ಅದಕ್ಕೆ ಹೇಳಿದ್ದು ಗಾಳಿ ಬಂದ ಕಡೆಗೆ ತೂರಿಕೊಂಡು ರೈತರನ್ನು ಬಳಸಿ ಕೊಂಡು ರಾಜಕೀಯ ಮಾಡುವ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ಸಿನ ತಂತ್ರಗಾರಿಕೆ ಹೇಗಿರುತ್ತದೆಯೆಂದರೆ ತಾನು ಮಾಡುತ್ತೇನೆಂದು ಹೇಳುತ್ತಿರುತ್ತದೆ, ಆದರೆ ಮಾಡುವುದಿಲ್ಲ. ಮಾಡುತ್ತೇನೆ ಮಾಡುತ್ತೇನೆ ಎಂದು ಹೇಳಿ ಅದರಿಂದ ನಷ್ಟವಾಗುವವರನ್ನು ತನ್ನ ಬಳಿ ಕರೆಸಿಕೊಳ್ಳುತ್ತದೆ. ನಂತರ ಅವರ ಜತೆ ಒಪ್ಪಂದವನ್ನು ಮಾಡಿಕೊಂಡು ಮುಂದೂಡುವುದು. ಈಗ ಅದನ್ನೇ ನರೇಂದ್ರ ಮೋದಿ ಮಾಡಲು ಹೊರಟರೆ ವಿರೋಧಿಸಲು ಹೋಗಿ ಸಿಕ್ಕಿಹಾಕಿಕೊಳ್ಳುವುದು ಅಥವಾ ಜನರ ಮುಂದೆ ಬಂದು ನಾವು ಶುರು ಮಾಡಿದ್ದನ್ನು ಮೋದಿ ಈಗ ಮಾಡಿದ್ದಾರೆಂದು ಹೇಳುವುದು.

ಜಿ.ಎಸ್.ಟಿ ವಿಚಾರದಲ್ಲಿಯೂ ಅಷ್ಟೇ, ತಾನು ಮಾಡುತ್ತೇನೆಂದು ಹೇಳಿಕೆಯನ್ನು ನೀಡಿದಷ್ಟೇ, ಆದರೆ ಮಾಡಲಿಲ್ಲ. ಮೋದಿ ಮಾಡಿದ ಮೇಲೆ ತಾವು ಮಾಡಹೊರಟಿ ದ್ದನ್ನೇ ಮಾಡಿzರೆಂದು ಹೇಳಿತು. ರೈತ ಮಸೂದೆಗಳ ವಿಚಾರದಲ್ಲಿಯೂ ಅಷ್ಟೇ, ತಾವು ಮಾಡಹೊರಟಿದ್ದನ್ನು ಮೋದಿಯು ಮಾಡಿದರೆ ಸುಮ್ಮನೆ ವಿರೋಧಿಸುವುದು. ‘ಪೌರತ್ವ ತಿದ್ದುಪಡಿ ಕಾಯಿದೆ’ಯ ವಿಚಾರದಲ್ಲಿ ಏನೂ ಸಮಸ್ಯೆಯಿಲ್ಲದಿದ್ದರೂ ಸಹ ಮುಸಲ್ಮಾನರನ್ನು ಎತ್ತಿಕಟ್ಟಿ ಅವರ ಬೆಂಬಲಕ್ಕೆ ಕಾಂಗ್ರೆಸ್ ಹಾಗೂ ಕಮ್ಯುನಿಷ್ಟರು ನಿಂತರು.

ದೆಹಲಿಯ ‘ಶಾಹೀನ್ ಬಾಗ್’ನಲ್ಲಿ ಹಲವು ಪ್ರತಿಭಟನಾ ನಿರತರ ಪರವಾಗಿ ನಿಂತು ಸುಳ್ಳು ಸುದ್ದಿ ಹಬ್ಬಿಸಿದ್ದರು. ಅಮೆರಿಕಾ ಅಧ್ಯಕ್ಷ ‘ಡೊನಾಲ್ಡ ಟ್ರಂಪ್’ ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲಿಯೇ ಪ್ರತಿಭಟನೆಯನ್ನು ಮಾಡಿಸಿ ಅಂತಾರಾಷ್ಟ್ರೀಯ ಮಾಧ್ಯಮ ಗಳಲ್ಲಿ ವರದಿಯಾಗುವಂತೆ ನೋಡಿಕೊಂಡರು. ಅದ್ಯಾಕೋ ಅಮೆರಿಕಾ ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಈಗಲೂ ಅಷ್ಟೇ ರೈತ ಮಸೂದೆಯ ವಿಚಾರದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಿ ಅಂತಾರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಪಂಜಾಬಿನ ಪ್ರತಿಭಟನಕಾರರು ಸರಕಾರದ ಮುಂದೆ ಒಂದು ವಿಚಿತ್ರ ಬೇಡಿಕೆಯನ್ನಿಟ್ಟಿದ್ದಾರೆ, ಇದರನ್ವಯ ದೇಶದಾದ್ಯಂತ ರೈತ ನಾಯಕರು, ಬುದ್ದಿಜೀವಿಗಳು , ಕವಿಗಳು, ವಕೀಲರು, ಬರಹಗಾರರು, ಮಾನವ ಹಕ್ಕುಗಳ ಹೋರಾಟಗಾರರ ಮೇಲಿನ ಪ್ರಕರಣ ಗಳನ್ನು ಕೈಬಿಡಬೇಕಂತೆ. ಪ್ರಕರಣ ಗಳನ್ನು ಕೈ ಬಿಡುವುದರ ಜತೆಗೆ ಜೈಲಿನಲ್ಲಿರುವವರನ್ನೂ ಸಹ ಬಿಡುಗಡೆ ಮಾಡಬೇಕಂತೆ.

ರೈತರಿಗೂ ಇವರಿಗೂ ಯಾವ ಸಂಬಂಧ ನೀವೇ ಯೋಚಿಸಿ ನೋಡಿ? ಇವರು ಬಿಡುಗಡೆ ಮಾಡಲು ಬೇಡಿಕೆಯಿಟ್ಟಿರುವವರ ಪಟ್ಟಿಯಲ್ಲಿ ಮೋದಿಯವರ ಹತ್ಯೆಗೆ ಸ್ಕೆಚ್ ಹಾಕಿದ್ದವರು ಇದ್ದಾರೆಂಬುದು ಮತ್ತೊಂದು ಆಶ್ಚರ್ಯಕರವಾದ ಸಂಗತಿ. ನಿಜವಾದ ರೈತರಾಗಿದ್ದರೆ ಈ ರೀತಿಯ ಬೇಡಿಕೆಯನ್ನು ಇಡುತ್ತಲೇ ಇರಲಿಲ್ಲ.

ದೇಶವನ್ನು ಛಿದ್ರ ಛಿದ್ರ ಮಾಡುತ್ತೇನೆಂದು ಹೇಳಿದ್ದ ‘ಉಮರ್ ಖಾಲಿದ್’ನ ಭಿತ್ತಿಪತ್ರವನ್ನು ಹಿಡಿದುಕೊಂಡು ಪ್ರತಿಭಟನೆ ಮಾಡುತ್ತಾರೆ, ಭಾರತದ ಈಶಾನ್ಯ ಭಾಗವನ್ನು ಸೇರಿಸುವ ‘ಚಿಕನ್ ನೆಕ್’ನ್ನು ಕತ್ತರಿಸಬೇಕೆಂದ ‘ಶಾಜಿ ಇಮಾಮ’ನ ಭಿತ್ತಿಪತ್ರವನ್ನು ಹಿಡಿದಿದ್ದಾರೆ, ‘ಖಲೀದ್ ಸೈ-’ನ ಭಿತ್ತಿಚಿತ್ರವನ್ನು ಹಿಡಿದಿದ್ದಾರೆ. ಇವರೆಲ್ಲರೂ ಯಾರು? ರೈತ ನಾಯಕರೇ ಅಥವಾ ಸ್ವಾತಂತ್ರ್ಯ ಹೋರಾಟಗಾರರೇ? ಭಾರತವನ್ನು ತುಂಡು ತುಂಡು ಮಾಡ ಹೊರಟ್ಟಿದ್ದವರ ಭಿತ್ತಿಪತ್ರವನ್ನು ಹಿಡಿದುಕೊಂಡು ಪ್ರತಿಭಟನೆ
ಮಾಡುತ್ತಾರೆಂದರೆ, ಇವರ ಹೋರಾಟವನ್ನು ಮತ್ತೆ ಕಮ್ಯುನಿಷ್ಟರು ‘ಹೈ ಜಾಕ್’ ಮಾಡಿದರೆಂದಾಯಿತಲ್ಲ.

‘ಪೌರತ್ವ ತಿದ್ದುಪಡಿ ಕಾಯಿದೆ’ಯನ್ನು ಬಳಸಿಕೊಂಡು ಮಾಡಿದ್ದೂ ಇದೆ ಕೆಲಸ, ಇವರು  ಹೇಳಿದ ಹಸಿ ಸುಳ್ಳುಗಳನ್ನು ನಂಬಿ ಕೊಂಡು ಬೀದಿಗಿಳಿದ ಮುಸಲ್ಮಾನರ ಒಬ್ಬನ ಪೌರತ್ವವಾದರೂ ರದ್ದಾಯಿತೇ? ಈಗಲೂ ಅಷ್ಟೇ ಇವರ ಸುಳ್ಳುಗಳನ್ನು ನಂಬಿ ಕೊಂಡು ಬೀದಿಗಿಳಿದಿರುವ ರೈತರಿಗೆ ಕೊನೆಗೇನೂ ಸಿಗುವುದಿಲ್ಲ. ಅಮೆರಿಕಾದಲ್ಲಿರುವ ಸಿಖ್ಖ್ ಸಂಘಟನೆಯೊಂದು, ಜೂನ್
ತಿಂಗಳಲ್ಲಿ ಭಾರತ ಹಾಗೂ ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದಂತಹ ಸಂದರ್ಭದಲ್ಲಿ ಚೀನಾ ಅಧ್ಯಕ್ಷನಿಗೆ ಪತ್ರದ ಮೂಲಕ ತಾನು ‘ಚೀನಾ’ದೇಶಕ್ಕೆ ಬೆಂಬಲಿಸುವುದಾಗಿ ಹೇಳುತ್ತದೆ. ಈ ಪತ್ರದಲ್ಲಿ ಪಂಜಾಬಿನ ‘ಖಲಿಸ್ತಾನ’ ಹೋರಾಟಗಾರರು ಬಹಿರಂಗವಾಗಿ ಭಾರತಕ್ಕೆ ಮಾಡಿದ್ದಂಥ ಮೋಸವನ್ನು ಸ್ಪಷ್ಟವಾಗಿ ಗಮನಿಸಬಹುದು.

‘ಸಿಖ್ಖ’ರೆಂದರೆ ಭಾರತೀಯ ಸೇನೆಯಲ್ಲಿ ಒಂದು ದೊಡ್ಡ ಶಕ್ತಿ. ಅವರಿಲ್ಲದ ಸೈನ್ಯವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ, ಅತಿ
ಹೆಚ್ಚಿನ ಸೈನಿಕರನ್ನು ಹೊಂದಿರುವ ಹೆಗ್ಗಳಿಕೆ ಸಿಖ್ಖರಿಗೆ ಸಲ್ಲಬೇಕು. ಇಂತಹ ದೇಶಭಕ್ತರಿರುವ ಸಿಖ್ಖರ ರಾಜ್ಯ ‘ಪಂಜಾಬ’ನಲ್ಲಿನ
ಕೆಲವರು ಖಲೀಸ್ತಾನ್ ಹೋರಾಟಗಾರರು ಹಾಗೂ ಕಮ್ಯುನಿಸ್ಟರ ಜತೆ ಸೇರಿಕೊಂಡು ರೈತರ ಹೆಸರಿನಲ್ಲಿ ಮಾಡುತ್ತಿರುವ ಪ್ರತಿಭಟನೆಯೊಂದು ವಿಪರ್ಯಾಸವೇ ಸೈ.

ಕರ್ನಾಟಕದಲ್ಲಿ ಕಳೆದೆರಡು ದಿನಗಳಿಂದ ‘ಸಾರಿಗೆ ನೌಕರ’ರ ಮುಷ್ಕರಕ್ಕೆ ರೈತ ಮುಖಂಡರು ಸಾಥ್ ನೀಡಿರುವುದನ್ನು ನೋಡು ತ್ತಿದ್ದರೆ, ಸುಮ್ಮನೆ ಬೀದಿಗಿಳಿದು ಪ್ರತಿಭಟನೆ ಮಾಡುವ ಸಲುವಾಗಿ ಮಾಡುತ್ತಿರುವುದಾಗಿ ಕಾಣುತ್ತದೆ. ಸಾರಿಗೆ ನೌಕರರ ಮುಷ್ಕರಕ್ಕೆ ಕೇವಲ ಬೆಂಬಲವನ್ನು ಸೂಚಿಸಿದ್ದರೆ ಸರಿಯಾಗಿರುತ್ತಿತ್ತು, ಆದರೆ ಅವರ ಜತೆಯಲ್ಲಿ ಮುಷ್ಕರದಲ್ಲಿ ಭಾಗಿಯಾಗುವುದಿದೆಯಲ್ಲ ಅಲ್ಲಿ ರಾಜಕೀಯ ದುರುದ್ದೇಶ ಎದ್ದು ಕಾಣುತ್ತದೆ. ಈಗಾಗಲೇ ಕರೋನಾ ಹಾವಳಿಯಿಂದ ಆರ್ಥಿಕತೆ ಪಾತಾಳ ಕಚ್ಚಿದೆ, ಜನರ ಬಳಿ ಹಣವಿಲ್ಲ.

ಇಂತಹ ಸಮಯದಲ್ಲಿ ಈ ರೀತಿಯ ಪ್ರತಿಭಟನೆಯನ್ನು ಮಾಡುವ ಮೂಲಕ ಆರ್ಥಿಕತೆಯನ್ನು ಮತ್ತಷ್ಟು ಹಾಳು ಮಾಡುವು  ದರಲ್ಲಿ ಯಾವ ಅರ್ಥವೂ ಇಲ್ಲ. ಯಾವಾಗ ಜನ ಸಾಮಾನ್ಯರು ಇವರ ಪ್ರತಿಭಟನೆಗೆ ಕೊಂಚವೂ ಕಿಮ್ಮತ್ತು ನೀಡಲಿಲ್ಲವೋ ಆಗಲೇ ಇವರು ತಿಳಿದು ಕೊಳ್ಳಬೇಕಿತ್ತು, ನಿಜವಾಗಿಯೂ ರೈತನಿಗೆ ಅನ್ಯಾಯವಾಗು ವುದಾದರೆ ಜನ ಸಾಮಾನ್ಯರು ಬೆಂಬಲ ನೀಡುತ್ತಿದ್ದರು. ಆದರೆ ಈ ಮಸೂದೆಗಳಿಂದ ರೈತನಿಗೆ ಉಪಯೋಗವಾಗುತ್ತದೆಯೆಂಬ ಅಂಶ ತಿಳಿದ್ದಿದ್ದರಿಂದಲೇ ನಿಜವಾದ ರೈತ ಹಾಗೂ ಜನ ಸಾಮಾನ್ಯ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿಲ್ಲ.

ನರೇಂದ್ರ ಮೋದಿ ಯವರು ಮುಂದೊಂದು ದಿನ ಮಾಲಿನ್ಯವಾದ ಗಾಳಿ ಆರೋಗ್ಯಕ್ಕೆ ಒಳ್ಳೆಯದಲ್ಲವೆಂಬ ಕಾನೂನನ್ನು ತಂದರೆ ಬಹುಷ್ಯ ಅದನ್ನೂ ವಿರೋಽಸುವ ಜನರಿzರೆ. ಇವರ ಪ್ರತಿಭಟನೆಯು ನಿಜವಾಗಿದ್ದರೆ, ಇದರಿಂದ ರೈತನಿಗೆ ಹಾಗೂ ಜನಸಾಮಾನ್ಯ ರಿಗೆ ತೊಂದರೆಯಾಗಿದ್ದರೆ ಇತ್ತೀಚಿಗೆ ನಡೆದ ‘ಬಿಹಾರ’ ಚುನಾವಣೆ ಯಲ್ಲಿ ‘ಬಿಜೆಪಿ’ ಆ ಮಟ್ಟಿನ ಯಶಸ್ಸನ್ನು ಕಾಣುತ್ತಿರಲಿಲ್ಲ,
ಹೈದರಾಬಾದಿನಲ್ಲಿ ಅಷ್ಟೊಂದು ದೊಡ್ಡ ಮಟ್ಟದ ವೋಟ್ ಪಡೆಯುತ್ತಿರಲಿಲ್ಲ.

ಇವೆಲ್ಲವೂ ಕಣ್ಣ ಮುಂದೆ ಇದ್ದರೂ ಸಹ ಇವರಿಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ, ಸ್ವತಃ ಕಾಂಗ್ರೆಸ್ಸಿನ ಕೆಲವು ಹಿರಿಯ ನಾಯಕರು ಇದೆಲ್ಲವನ್ನು ಬಿಟ್ಟು ಬೇರೆ ರೀತಿಯ ತಂತ್ರಗಾರಿಕೆ ಮಾಡಬೇಕೆಂದು ಹೇಳುತ್ತಿದ್ದರೂ ಸಹ ಇವರಿಗೆ ಕೇಳಿಸುತ್ತಿಲ್ಲ. ರೈತ, ದಲಿತ, ಅಲ್ಪಸಂಖ್ಯಾತ ಹಾಗೂ ಮುಸಲ್ಮಾನ್ ಈ ನಾಲ್ಕು ವಿಷಯಗಳನ್ನಿಟ್ಟುಕೊಂಡು ಕಳೆದ ಏಳು ದಶಕಗಳಿಂದ ರಾಜಕೀಯ
ಮಾಡಿಕೊಂಡು ಬಂದಂಥ ಕಮ್ಯೂನಿಸ್ಟ್ ಹಾಗೂ ಕಾಂಗ್ರೆಸ್ ಅವಕಾಶ ಸಿಕ್ಕಾಗಲೆಲ್ಲ ತನ್ನ ವಿರೋಧ ಪಕ್ಷದ ಮೇಲೆ ಇವರನ್ನು
ಬಳಸಿಕೊಳ್ಳುತ್ತದೆ.

ಇವರ ಓಲೈಕೆಯ ಹೆಸರಿನಲ್ಲಿ ರಾಜಕೀಯ ಮಾಡಿದಂಥ ಪಕ್ಷ, ಇಂದಿಗೂ ಇವರ ಉದ್ದಾರದ ಬಗ್ಗೆ ಮಾತನಾಡುತ್ತಿರುವುದು ಸೋಜಿಗದ ವಿಚಾರ. ಕಮ್ಯುನಿಸ್ಟರಿಗಂತೂ ದೇಶಪ್ರೇಮವೇ ಇಲ್ಲ, ಸದಾ ಸತ್ತು ಹೋಗಿರುವ ಕಮ್ಯುನಿಸ್ಟ್ ಸಿದ್ಧಾಂತವನ್ನು ಪ್ರತಿಪಾದಿಸುವ ಮೂಲಕ ದೇಶದೊಳಗಡೆ ಗಲಭೆ ಸೃಷ್ಟಿಸುತ್ತಿರುತ್ತಾರೆ. ತಮಗೆ ಬೇಕಾದಂತಹ ಮಾನವ ಹಕ್ಕುಗಳ ಹೋರಾಟ ಗಾರರು, ಕವಿಗಳು, ವಕೀಲರು, ಮಾಧ್ಯಮದವರು, ವಿಶ್ವವಿದ್ಯಾಲಯಗಳ ದೊಡ್ಡದೊಂದು ಜಾಲವನ್ನೇ ಮಾಡಿಕೊಂಡು
ತಮ್ಮ ತಮ್ಮ ಬೆನ್ನು ಕೆರೆಯುವ ಕೆಲಸ ಮಾಡುತ್ತಿರುತ್ತಾರೆ.

ಅವರ ಒಗ್ಗಟ್ಟು ಎಷ್ಟಿದೆಯೆಂದರೆ ಒಬ್ಬರೊನ್ನೊಬ್ಬರು ಏನು ಮಾಡಿದರೂ ಸಹ ಬಿಟ್ಟುಕೊಡುವುದಿಲ್ಲ. ಇವರ ಬೆಂಬಲಕ್ಕೆ ಹೋರಾಟಗಾರರು, ವಿದ್ಯಾರ್ಥಿಗಳು, ವಕೀಲರು, ಮಾಧ್ಯಮದವರು, ಚಿತ್ರರಂಗದವರು ಸದಾ ಸಿದ್ಧರಾಗಿರುತ್ತಾರೆ. ಒಬ್ಬರ ನಂತರ ಒಬ್ಬರು ಸಾಲಾಗಿ ಬರುತ್ತಿರುತ್ತಾರೆ. ಪಂಜಾಬಿನ ಪ್ರತಿಭಟನೆಯಲ್ಲೂ, ನಿಧಾನವಾಗಿ ಒಬ್ಬೊಬ್ಬರೇ ಬರಲು ಶುರು ಮಾಡಿದ್ದಾರೆ.

‘ದಳಿ’ಗಳ ಪರವಾಗಿ ಶುರುವಾದಂಥ ಈ ಹೋರಾಟದ ಕಿಚ್ಚು ನಿಧಾನವಾಗಿ ಕಮ್ಯುನಿಸ್ಟರ ಹಳೆಯ ಚಾಳಿಯೆಡೆಗೆ ಸಾಗುತ್ತಿದೆ. ರೈತರ ಹೆಸರಿನಲ್ಲಿ  ಪಾಕಿಸ್ತಾನದ ಕೆಲವು ‘ಐ.ಎಸ್.ಐ’ ಏಜೆಂಟರು ಗಳು ಬೀದಿಗಿಳಿದಿರುವ ವರದಿಗಳು ಕೇಳಿಬರುತ್ತಿವೆ. ‘ಪೌರತ್ವ ತಿದ್ದುಪಡಿ ಕಾಯಿದೆ’ಯ ಪ್ರತಿಭಟನೆಯ ಹಾದಿಯಲ್ಲಿ ಈ ಪ್ರತಿಭಟನೆಯೂ ಸಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಅಲ್ಲಿ ಮುಸಲ್ಮಾನರನ್ನು ಬಳಸಿಕೊಂಡರು, ಇಲ್ಲಿ ರೈತರ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ.

ಮುಂದೆ ‘ಏಕರೂಪ ನಾಗರೀಕ ಸಂಹಿತೆ’ಯನ್ನು ಜಾರಿಗೆ ತಂದರೆ ದಲಿತರ ಹೆಸರಿನಲ್ಲಿ ಇದೇ ರೀತಿಯ ಪ್ರತಿಭಟನೆಯು
ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಎಲ್ಲದಕ್ಕೂ ರಾಷ್ಟ್ರ ರಾಜಧಾನಿ ‘ದೆಹಲಿ’ ಸಾಕ್ಷಿಯಾಗುವುದು ಮತ್ತೊಂದು ವಿಶೇಷ. ಬ್ರಿಟಿಷರ ಕಾಲದಿಂದ ಇದ್ದಂತಹ ಹಲವಾರು ಹಳೆಯ ಕಾಯಿದೆಗಳನ್ನು ತಿದ್ದುಪಡಿ ಮಾಡಿ ರೈತ, ದಲಿತ, ಅಲ್ಪ ಸಂಖ್ಯಾತರ ಹೆಸರಿನಲ್ಲಿ ನಡೆಯುತ್ತಿದಂತಹ ರಾಜಕೀಯವನ್ನು ಅಂತ್ಯ ಮಾಡುವ ನಿಟ್ಟಿನಲ್ಲಿ ಮೋದಿಯವರ ಸರಕಾರ ಮುಂದೆ ಹೋಗುತ್ತಿದ್ದರೆ, ಅದರಿಂದ ಆಗುವ ನಷ್ಟವನ್ನು ಭರಿಸಲಾಗದೆ ದೇಶವನ್ನು ಒಡೆಯುವ ನಿಟ್ಟಿನಲ್ಲಿ ಕಮ್ಯುನಿಸ್ಟರು ನಿರತರಾಗಿzರೆ. ‘ಪೌರತ್ವ ತಿದ್ದುಪಡಿ ಕಾಯಿದೆ’ಯ ಪ್ರತಿಭಟನೆ ಯನ್ನು ಹೈಜಾಕ್ ಮಾಡಿದ ಹಾಗೆ ಪಂಜಾಬಿನ ರೈತರ ಪ್ರತಿಭಟನೆಯನ್ನು ನಗರ ನಕ್ಸಲರು ‘ಹೈಜಾಕ್’ ಮಾಡಿಯಾಗಿದೆ.

Leave a Reply

Your email address will not be published. Required fields are marked *