ಯಶೋ ಬೆಳಗು
yashomathy@gmail.com
ಆದರೆ ಪುಸ್ತಕೋದ್ಯಮ ಎಲ್ಲರ ಪಾಲಿಗೆ ನಿಜಕ್ಕೂ ಲಾಭದಾಯಕವಾಗಿದೆಯೇ? ಎಂದು ನೋಡುವಾಗ, ನಿರಾಸೆಯೇ ಎದುರಾಗುತ್ತದೆ. ಕಾರಣ ಎಲ್ಲ ಲೇಖಕರೂ, ಎಲ್ಲ ಪ್ರಕಾಶಕರೂ, ಎಲ್ಲ ಮುದ್ರಕರೂ ತಾವು ಹಾಕಿದ ಬಂಡವಾಳದ ಮಾತು ಹಾಗಿರಲಿ, ತಮ್ಮ ಪರಿಶ್ರಮದ ಫಲವನ್ನೂ ಕಾಣದೆ ಸೋತು ಸುಣ್ಣವಾಗಿ ಹೋಗಿzರೆ. ಓದುಗರನ್ನು ತಲುಪಲಾಗದೆ ಬಹಳ ದೂರದ ಉಳಿದುಹೋಗಿದ್ದಾರೆ.
ಗಮನಿಸಿ ನೋಡಿ: ಬೆಳಗ್ಗೆ ಏಳೇಳುತ್ತಲೇ ಮನಸು ತನ್ನ ಪಾಡಿಗೆ ತನ್ನದೊಂದು ಮಾತಿನ ವರಾತ ಶುರುವಿಟ್ಟು ಕೊಂಡು ಬಿಟ್ಟಿರುತ್ತದೆ. ಓ ಆಗಲೇ ಆರು ಗಂಟೆಯಾಗಿ ಹೋಯ್ತಾ? ಐದೂವರೆ ಗಂಟೆಗೆ ಇಟ್ಟಿದ್ದ ಅಲಾರ್ಮ್ ಹೊಡೆದದ್ದು ಕೇಳಿಸಲೇ ಇಲ್ಲವಲ್ಲ? ನಿದ್ದೆ ಹತ್ತುವಷ್ಟರ ನಡುರಾತ್ರಿ ಕಳೆದಿತ್ತಲ್ಲ? ಹಾಗಾಗಿ ಬೆಳಗಿನ ಜಾವ ಗಾಢನಿದ್ರೆಯಲ್ಲಿ ಅಲಾರ್ಮ್ ಹೊಡೆದದ್ದು ಕೇಳಿಸಲೇ ಇಲ್ಲ. ಇರಲಿ, ಈಗ ಬೆಳಗಿನ ತಿಂಡಿಗೇನು ಮಾಡೋದು? ಅದಕ್ಕೆ ಮುಂಚೆ ಗೇಟಿಗೆ ನೇತುಹಾಕಿದ್ದ ಬುಟ್ಟಿಗೆ ಹಾಲಿನ ಪ್ಯಾಕೆಟ್ಟು ಬಂದು ಬಿದ್ದಿದೆಯಾ? ಅಂತ ನೋಡಿ ಬರೋಣ. ಅಂದುಕೊಳ್ಳುತ್ತಿದ್ದಂತೆಯೇ ಕಾಲುಗಳು ಅತ್ತ ಹೆಜ್ಜೆ ಹಾಕತೊಡಗುತ್ತವೆ.
ಎಲ್ಲರಿಗೂ ಇನ್ನೂ ನಿದ್ರೆಯ ಮಂಪರು. ಆದರೆ ನಮ್ಮ ಸಿದ್ದು(pet) ಮಾತ್ರ ರಾತ್ರಿಯಿಡೀ ನಿದ್ರೆ ಮಾಡದೆ ಗಸ್ತು ತಿರುಗುತ್ತಿರುತ್ತಾನೆ. ಅವನಲ್ಲಿ ಗೇಟಲ್ಲಿದ್ದಾನೆ ಅಂದ್ರೆ ಅಕ್ಕಪಕ್ಕದವರೂ ಗಂಟೆಗೊಮ್ಮೆ ಎದ್ದು ಕಿಟಕಿ ಇಣುಕುತ್ತಾರೆ. ಕತ್ತಲೆಯಲ್ಲಿ ರಸ್ತೆ ತಪ್ಪಿ ಬಂದವರು, ನೈಟ್ ಶಿಫ್ಟ್ ಮುಗಿಸಿ ಕಾಲೆಳೆಯುತ್ತಾ ಬರುವವರು, ಅಂಥವರ ಸೇವೆಗಾಗಿಯೇ ಸದಾ ನಿರತರಾಗಿರುವ ಪಿಜಾ ಡೆಲಿವರಿ ಬಾಯ್ಗಳು ಗೇಟಿನ ಮುಂದೆ ನಿಂತು ವಿಳಾಸಕ್ಕಾಗಿ ಮಾತು ಹಚ್ಚಿದರೆ ಅವರಿಗಿಂತ ಜೋರಾಗಿ ಅರಚಿ ಗಲಾಟೆ ಮಾಡುತ್ತಿರುತ್ತಾನೆ ನಮ್ಮ ಈಟಜಞZ oಜಿbb. ಯಾಕಿವರೆಲ್ಲ ನಮ್ಮ ಮನೆಯ ಮುಂದೆ ನಿಂತೇ ಮಾತಾಡು ತ್ತಾರೋ? ಸ್ವಲ್ಪ ಮುಂದೆಯಾದರೂ ಹೋಗಬಾರದಾ? ಅಂತ ಮನಸಿನಲ್ಲಿ ಗೊಣಗಿಕೊಳ್ಳುವಷ್ಟರ ಮೊಬೈಲಿನ ವಾಟ್ಸಾಪ್ಪಿಗೆ ಪಕ್ಕದ ಮನೆಯವರ ಮೆಸೇಜು ಬಂದು ಬಿದ್ದಿರುತ್ತದೆ.
ಮೇಡಮ್, ನಿಮ್ಮ ನಾಯಿಯನ್ನು ಸುಮ್ಮನಿರಿಸಿ. ನಮಗೆ ನಿದ್ರೆಯೇ ಬರ್ತಿಲ್ಲ ಅದರ ಬೊಗಳುವಿಕೆಯಿಂದ…. ಅಂತ. Online ನಲ್ಲಿ ಇದ್ರೆ ತಾನೇ ಮೆಸೇಜು? ಅಂತ ಕೂಡಲೇ Of ಮಾಡಿ ಅದಕ್ಕೆ ಬೊಗಳುವ ಫುಲ್ ಸ್ವಾತಂತ್ರ್ಯ ಕೊಟ್ಟು ನಾನು ತಣ್ಣಗೆ ನಿದ್ರೆಗೆ ಜಾರಿರುತ್ತೇನೆ. ಹಾಲಿನ ಪ್ಯಾಕೆಟ್ಟು ತೆಗೆದುಕೊಳ್ಳುವ ಮುನ್ನ ಅವನಿಗೊಂದು ವಾಕಿಂಗು ಮಾಡಿಸಿ, ಹಾಲಿನ ಸಮೇತ ಬಂದು ಬಿದ್ದ ಪತ್ರಿಕೆಯನ್ನು ತೆಗೆದುಕೊಂಡು ಅದರ ಹೆಡ್ಲೈನ್ಗಳ ಮೇಲೆ ಕಣ್ಣಾಡಿ ಸುತ್ತಾ ಒಲೆಯ ಮೇಲೆ ಕುದಿಕುದಿಯುವ ನೀರಿಗೆ ಶುಂಠಿ, ಏಲಕ್ಕಿ, ಲವಂಗದ ಜೊತೆಗೆ ಸಕ್ಕರೆ, ಹಾಲು, ಚಹಾಪುಡಿಯನ್ನು ಬೆರೆಸಿ ಘಮ್ಮೆನ್ನುವ ಚಹಾ ಮಾಡಿಕೊಂಡು ಹೀರುತ್ತಾ, ಮತ್ತೊಂದಷ್ಟು ಪುಟಗಳನ್ನು ತಿರುವಿ ಹಾಕುಷ್ಟರ ಯಾರಿಗೂ ಕಾಯದಂತೆ ತನ್ನ ಪಾಡಿಗೆ ತಾನು ಅರ್ಧಗಂಟೆ ಜಾರಿ ಹೋಗಿರುತ್ತದೆ.
ಏಳೂವರೆಗೆ ಮನೆಬಿಡಬೇಕು. ಇಲ್ಲಿಂದ ಶಾಲೆಗೆ ಹತ್ತು ನಿಮಿಷದ ಹಾದಿ. ಅಷ್ಟರೊಳಗೆ ಡಬ್ಬಿಗೆ ತಿಂಡಿ ರೆಡಿ ಮಾಡಿಡಬೇಕು. ಅಮ್ಮಾ, ನಂಗೆ ಹೆವೀ -ಡ್ ಹಾಕಬೇಡ. ಬೆಳಗ್ಗೆ ಶಾರ್ಟ್ ಬ್ರೇಕಿಗೆ ಒಂದು ನಾಲ್ಕು ಬಿಸ್ಕೆಟ್ಟು, ಚಾಟ್ಸು, ರಾ ವೆಜಿಟೇಬಲ್ಸ ಅಂಡ್ ಲಂಚ್ ಬಾಕ್ಸಿಗೆ ಸಮ್ ಲೈಟ್ ಫುಡ್ ಸಾಕು. ನಿನ್ನ ಪ್ರೀತಿಯೆಲ್ಲ ಮನೆಗೆ ಬಂದ ಮೇಲೆ ತಟ್ಟೆ ತುಂಬ ಬಡಿಸುವಿಯಂತೆ ಅನ್ನುವ ಮಾತು ನೆನಪಾಗಿ ಒಂದೆರಡು ದೋಸೆ ಜೊತೆ ಫ್ರುಟ್ಸ್-ವೆಜಿಟೇಬಲ್ಸ್
ಡಬ್ಬಿಯೊಳಗೆ ಉಸಿರುಹಿಡಿದು ಕೂರುತ್ತವೆ.
ಗಂಟೆ ಏಳಾಗುವಷ್ಟರಲ್ಲಿ ಅಮ್ಮಾ ನನ್ನ ಶೂ ಎಲ್ಲಿ? ಬ್ಯಾಡ್ಜೆಲ್ಲಿ? ರಾತ್ರಿ ಬರೆದಿಟ್ಟಿದ್ದ ಹೋಮ್ ವರ್ಕ್ ಬುಕ್ ಬ್ಯಾಗಲ್ಲಿಟ್ಟಿದ್ದೀಯ ತಾನೆ? ಅಂತ ಕೇಳುತ್ತಾ ಕೆಳಗಿಳಿದು ಬರುವ ಹೊತ್ತಿಗೆ ಅವನಿಗೆ ಬಿಸಿಬಿಸಿ ಬೂ ಕಾಯುತ್ತಿರುತ್ತದೆ. ಒಂದೇ ಗುಟುಕಿಗೆ ಗುಳುಂ ಮಾಡಿ, ದೇವರಿಗೆ ಕೈಮುಗಿದು, ಶಾಲೆಯೆಡೆಗೆ ಓಟ. ಅವನನ್ನು ಶಾಲೆಗೆ ಬಿಟ್ಟುಬಂದು ಒಂದೆರಡು ನಿಮಿಷ ದಣಿವಾರಿಸಿಕೊಂಡು ಮೊಬೈಲ್ ನೆಟ್ವರ್ಕ್ ಆನ್ ಮಾಡಿದರೆ ಶುಭೋದಯದ ಮೆಸೇಜುಗಳಿಗೆ ಪ್ರತಿಕ್ರಿಯಿಸಿ ಒಮ್ಮೆ ಫೇಸ್ಬುಕ್ಕಿನ ಪ್ರತಿಕ್ರಿಯೆಗಳ ಮೇಲೆ ಕಣ್ಣಾಡಿಸುತ್ತೇನೆ. ಏನಾದರೂ ವಿಶೇಷವಿದೆಯಾ? ಅಂತ. ಅದೆಲ್ಲದರ ನಡುವೆಯೇ ಕಣ್ಣಿಗೆ ಬೀಳುವ ಪುಸ್ತಕಗಳನ್ನು ಗಮನಿಸುತ್ತೇನೆ.
ಸಾಕಷ್ಟು ವರ್ಷಗಳಿಂದ ಬ್ಯಾಲೆನ್ಸ್ಡ್ ಆಗಿ ವರ್ಷದಿಂದ ವರ್ಷಕ್ಕೆ ಒಂದೊಂದು ಹೊಸ ಶಾಖೆಗಳನ್ನು ಮೂಡಿಸಿಕೊಳ್ಳುತ್ತ ಓದುಗರ ನಾಡಿಮಿಡಿತ ಅರಿತಿರುವ ಸ್ವಪ್ನ ಬುಕ್ ಹೌಸ್ ಪ್ರಕಟಣೆಗಳು ಹಲವು ಶ್ರೇಷ್ಠ ಬರಹಗಳನ್ನು ಬೆಳಕಿಗೆ ತಂದ ಕೀರ್ತಿಮುಕುಟವನ್ನು ಹೊತ್ತಿದ್ದರೆ, ಬಸವನಗುಡಿಯ ಹಳೇ ಅಡ್ಡಾದಂತಿರುವ ಅಂಕಿತಾ ಕೂಡ ಸಾಕಷ್ಟು ಪುಸ್ತಕಗಳೊಂದಿಗೆ ಅರಳಿ ನಿಂತಿದೆ. ಇತ್ತೀಚೆಗೆ ಹೊಸ ಟ್ರೆಂಡ್ ಸೃಷ್ಟಿಸಿರುವ ವೀರಲೋಕ ಪ್ರಕಾಶನ ಪುಸ್ತಕ ಗಳ ಪ್ರಕಟಣೆಗೊಂದು ಸ್ಟಾರ್ಲುಕ್ ತಂದುಕೊಡಲು ಮಾಡುತ್ತಿರುವ ಪ್ರಯತ್ನದ ಜೊತೆಗೆ ಪ್ರತೀ ಮನೆಗೂ ಕನ್ನಡದ ಪುಸ್ತಕವನ್ನು ತಲುಪಿಸುವ
ಜವಾಬ್ದಾರಿಯನ್ನು ಹೊತ್ತಿರುವುದು ನಿಜಕ್ಕೂ ಶ್ಲಾಘನೀಯ.
ಇನ್ನು ಖಡಕ್ ವ್ಯಾಪಾರಿಯಂತೆ ನನ್ನ ಪುಸ್ತಕವನ್ನು ನೀವು ಜಗತ್ತಿನ ಯಾವುದೇ ದುಕಾನಿನಿಂದ, ಆನ್ ಲೈನ್ ಮೂಲಕ (ನೇರವಾಗಿ ನನ್ನಿಂದಲೂ) ಖರೀದಿಸಿ ಓದಬಹುದು. ಅಕಸ್ಮಾತ್ ನಿಮಗೆ ಪುಸ್ತಕ ಅಷ್ಟೊಂದು ಬೆಲೆ ತೆತ್ತು ಓದಿದ್ದು ಸಾರ್ಥಕವಾಗಿಲ್ಲ ಎನ್ನಿಸಿದರೆ ನೀವು ಆ ಮೊತ್ತವನ್ನು ಮತ್ತದೆ ದುಕಾನಿನಿಂದ ಪಡೆಯುವ ಅಗತ್ಯವಿಲ್ಲ. ನಿಮಗೆ ನಿಮ್ಮ ಹಣ ನಾನು ಮರಳಿಸುತ್ತೇನೆ. ಇದು ನನ್ನ ಅಹಂ ಅಲ್ಲ, ಕನ್ನಡ ಓದುಗರನ್ನು ಇರಿಸಿಕೊಳ್ಳುವ ಮತ್ತು ಆ ಮೂಲಕ ಈಗಲೂ ವರ್ತ್ ಎನ್ನಿಸುವಂತಹ ಪುಸ್ತಕಗಳನ್ನು ಸೃಜಿಸಬಹುದೆನ್ನುವ ನಂಬಿಕೆ ಅಷ್ಟೆ. ಕೊಡಬೇಕೆನ್ನುವ ಬದ್ಧತೆ ಅಷ್ಟೆ.
ಸುಮ್ಮನೆ ರದ್ದಿ ಬರೆದು ಬಿಸಾಕಬಾರದೆನ್ನುವ ಕಾಳಜಿ ಅಷ್ಟೆ…. ಎಂದು ಹೇಳುತ್ತ ಆಕರ್ಷಕ ಮುಖಪುಟದೊಂದಿಗೆ ಅಷ್ಟೇ ಆಕರ್ಷಕ ಟೈಟಲ್ಲನ್ನೂ ನೀಡುವ ಸಂತೋಷ್ ಕುಮಾರ್ ಮೆಹಂದಳೆಯವರು ಎಲ್ಲರಿಗಿಂತ ಭಿನ್ನವಾಗಿ ಕಾಣುತ್ತಾರೆ. ಇದರ ನಡುವೆ ಚಿತ್ರತಾರೆಗಳ ಚಿತ್ರಕಟ್ಟಿಕೊಡುವ ಗಣೇಶ್ ಕಾಸರಗೋಡು ಅವರ ಪುಸ್ತಕಗಳೂ ವರ್ಣರಂಜಿತವಾಗಿರುತ್ತವೆ. ಕೇಳಿದವರು ದಂಗಾಗಿ ಹೋಗುವಂತೆ ಮಲಗಿದಾಗೊಂದು, ಎದ್ದಾಗೊಂದು ಪುಸ್ತಕ ಬರೆದು ಹಾಕುತ್ತಾ ರೇನೋ ಎಂಬಂತೆ, ಜಿದ್ದಿಗೆ ಬಿದ್ದು ಪ್ರಕಟಿಸುವವರಂತೆ ಕಾಣುವ ಜೋಗಿ, ವಿಶ್ವೇಶ್ವರ ಭಟ್ಟರು ಸಾರಸ್ವತ ಲೋಕದ ಸಾರಥಿಗಳಂತೆ ಎಲ್ಲರಿಗಿಂತ ಮುಂಚೂಣಿಯಲ್ಲಿದ್ದಾರೆ.
ಅವರ ಪುಸ್ತಕಗಳು ಎಂಟಿಆರ್ನ ಬಿಸಿಬಿಸಿ ದೋಸೆಗಳಂತೆ ಬಂದ ಕೂಡಲೇ ಖರ್ಚಾಗಿ ಹೋಗಿ ಆರ್ಡರ್ ಕೊಟ್ಟು ಕಾಯುತ್ತಾ ನಿಲ್ಲುವಂತೆ ಮಾಡುತ್ತಿವೆ ಅನ್ನುವುದೂ ಸುಳ್ಳಲ್ಲ. ಅದು ಕನ್ನಡಿಗರು ನಿಜಕ್ಕೂ ಸಂತೋಷ ಪಡುವ ವಿಷಯವೇ. ಆದರೆ ಪುಸ್ತಕೋದ್ಯಮ ಎಲ್ಲರ ಪಾಲಿಗೆ ನಿಜಕ್ಕೂ ಲಾಭದಾಯಕ ವಾಗಿದೆಯೇ? ಎಂದು ನೋಡುವಾಗ, ನಿರಾಸೆಯೇ ಎದುರಾಗುತ್ತದೆ. ಕಾರಣ ಎಲ್ಲ ಲೇಖಕರೂ, ಎಲ್ಲ ಪ್ರಕಾಶಕರೂ, ಎಲ್ಲ ಮುದ್ರಕರೂ ತಾವು ಹಾಕಿದ
ಬಂಡವಾಳದ ಮಾತು ಹಾಗಿರಲಿ, ತಮ್ಮ ಪರಿಶ್ರಮದ ಫಲವನ್ನೂ ಕಾಣದೆ ಸೋತು ಸುಣ್ಣವಾಗಿ ಹೋಗಿದ್ದಾರೆ. ಓದುಗರನ್ನು ತಲುಪಲಾಗದೆ ಬಹಳ ದೂರದ ಉಳಿದುಹೋಗಿದ್ದಾರೆ. ಸಾಲಗಳ ಸುಳಿಗಳಲ್ಲಿ ಸಿಲುಕಿಕೊಂಡಿದ್ದಾರೆ. ಏಳುಕೋಟಿ ಕನ್ನಡಿಗರಿರುವ ಈ ಕನ್ನಡ ನಾಡಿನಲ್ಲಿ ಸಾವಿರ ಪ್ರತಿ ಕೂಡ ಮಾರಾಟವಾಗದೆ ಮುದ್ರಣಗೊಂಡು ಬಂದ ಪುಸ್ತಕಗಳೆಲ್ಲ ಧೂಳಿನ ರಾಶಿ ಹೊದ್ದು ಮಲಗಿಬಿಟ್ಟಿವೆ.
ಹಾಗಾದರೆ ಕನ್ನಡ ನಾಡಿನಲ್ಲಿ ಓದುಗರಿಗೆ ಬರವೇ? ಅನ್ನುವ ಪ್ರಶ್ನೆ ಕಾಡುತ್ತಿರುವಾಗ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷರಾದ ನಿಡಸಾಲೆ ಪುಟ್ಟಸ್ವಾಮಯ್ಯನವರು share ಮಾಡಿದ ಅಡ್ವೈಸರ್ ಎಂಬ ಪತ್ರಿಕಾ ಬರಹವನ್ನು ಅವಲೋಕಿಸಿದಾಗ ಖಂಡಿತ ಇಲ್ಲ ಎಂಬ ಅಂಶ ಸ್ಪಷ್ಟವಾಯಿತು. ಆದರೆ ಪ್ರಕಟಗೊಳ್ಳುತ್ತಿರುವ ಪುಸ್ತಕಗಳ ವಿವರಗಳೆಲ್ಲ ಓದುಗರನ್ನು ತಲುಪುವಲ್ಲಿ ಸೋಲಲು ಇರುವ ಹಲವಾರು ಕಾರಣ ಗಳನ್ನು ಗುರುತಿಸಿ ಅದಕ್ಕೊಂದು ಪರಿಹಾರ ಮಾರ್ಗ ಸೂಚಿಸುವತ್ತ ಗಮನ ಹರಿಸಿದರೆ ಖಂಡಿತ ಪುಸ್ತಕಗಳಿಗೆ ಜೀವ ತುಂಬಿದಂತಾಗುತ್ತದೆ. ಅದರ
ಜೊತೆ ಜೊತೆಗೆ ಓದುಗರು ಹೆಚ್ಚು ಹೆಚ್ಚು ಗ್ರಂಥಾಲಯಗಳ ಸದುಪಯೋಗ ಮಾಡಿಕೊಳ್ಳಬೇಕು.
ಹಾಗೆಯೇ ಗ್ರಂಥಾಲಯಗಳು ಪುಸ್ತಕಗಳಿಗೆ ಸೂಕ್ತ ಬೆಲೆ ಕೊಟ್ಟು ಖರೀದಿಸುವಂತಾಗಬೇಕು. ಅದಕ್ಕೆ ಸರಕಾರದಿಂದ ನಿಯೋಜಿತ ಹಣ ಬಿಡುಗಡೆಯಾಗ ಬೇಕು. ಕನ್ನಡ ಪುಸ್ತಕ ಪ್ರಾಧಿಕಾರದ ಮೂಲಕ ಜಿಲ್ಲೆಗೊಂದು, ತಾಲ್ಲೂಕಿಗೊಂದರಂತೆ ‘ಪುಸ್ತಕ ಮಾರಾಟ ಮಳಿಗೆ’ಗಳನ್ನು ತೆರೆದು ಖಾಸಗಿ ಪ್ರಕಾಶಕ ರಿಂದ ಮಾರಾಟದ ನಂತರ ‘ಪಾವತಿ’ ಆಧಾರದ ಮೇಲೆ ಪುಸ್ತಕಗಳನ್ನು ತರಿಸಿಕೊಂಡು, ಪುಸ್ತಕ ಮಾರಾಟದ ಜಾಲವನ್ನು ಸೃಷ್ಟಿಸಬೇಕು. ಒಂದು ಹೊಸ ಕೃತಿ ಮಾರುಕಟ್ಟೆಗೆ ಬಂದಿದೆ ಎಂದು ಗೊತ್ತು ಮಾಡಲು ಪತ್ರಿಕೆಗಳ ಹಾಗೂ ಇತರ ಮಾಧ್ಯಮಗಳ ಮೂಲಕ ತಿಳಿಯಪಡಿಸಬೇಕು. ಅದರ ಬಗ್ಗೆ ಚರ್ಚೆ ಗಳು, ವಿಮರ್ಶೆಗಳು ಪ್ರಕಟವಾಗಬೇಕು, ತಂತ್ರಜ್ಞಾನವನ್ನು ಹೆಚ್ಚು ಹೆಚ್ಚು ಬಳಸಿಕೊಳ್ಳಬೇಕು.
ಎಲ್ಲಕ್ಕಿಂತ ಮುಖ್ಯವಾಗಿ ಪುಸ್ತಕಗಳು ಜ್ಞಾನಾರ್ಜನೆಗಾಗಿ ಪ್ರಕಟವಾಗುವುದರಿಂದ ಓದುವ ಪುಸ್ತಕದ ಮುದ್ರಣದ ಮೇಲಿರುವ ಜಿಎಸ್ಟಿಯನ್ನು ರದ್ದು ಗೊಳಿಸಬೇಕು. ಮತ್ತು ಆರ್ಥಿಕವಾಗಿ ಸದೃಢರಲ್ಲದ ಲೇಖಕ, ಪ್ರಕಾಶಕರಿಗೆ ಆರ್ಥಿಕ ನೆರವು ನೀಡುವುದು, ಪ್ರೋತ್ಸಾಹ ದಾಯಕ ಪ್ರಶಸ್ತಿಗಳನ್ನು ನೀಡು ವುದು, ಸಾಹಿತ್ಯೋತ್ಸವಗಳನ್ನು ಏರ್ಪಡಿಸುವ ಮೂಲಕ ಪುಸ್ತಕೋದ್ಯಮಕ್ಕೆ ಮತ್ತಷ್ಟು ಬಲ ತುಂಬಬೇಕು….ಅನ್ನುವ ಅಂಶಗಳನ್ನೆ ಓದುವಷ್ಟರೊಳಗೆ ಒಲೆಯ ಮೇಲಿಟ್ಟಿದ್ದ ಕುಕ್ಕರ್ ಸೀಟಿ ಹೊಡೆದು ಎಚ್ಚರಿಸಿತು.
ಉರಿಯುತ್ತಿದ್ದ ಒಲೆಯಾರಿಸಿದ ನಂತರವೂ ಎಷ್ಟೆಲ್ಲ ವಿಷಯಗಳನ್ನು ತನ್ನೊಡಲೊಳಗಿಟ್ಟುಕೊಂಡೂ ಮೌನವಾಗೇ ಉಳಿದುಹೋದ ಪುಸ್ತಕಗಳೇ ಗುಂಗಾಗಿ ಕಾಡಲಾರಂಭಿಸಿತು.