ವಿದೇಶವಾಸಿ
dhyapaa@gmail.com
ಒಂದು ಕಡೆ ದೇಶದಾದ್ಯಂತ ಅಯೋಧ್ಯೆಯ ರಾಮಮಂದಿರದ ಚರ್ಚೆಯಾಗುತ್ತಿದೆ. ಎಲ್ಲ ಪರ-ವಿರೋಧಗಳ ನಡುವೆಯೂ ಜನವರಿ ೨೨ರಂದು ದೇಗುಲದಲ್ಲಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ. ಅದರ ಬಿಸಿ ಆರುವುದಕ್ಕಿಂತ ಮೊದಲು, ಫೆಬ್ರವರಿ ೧೪ನೇ ತಾರೀಖಿನಂದು, ಅಬುಧಾಬಿಯಲ್ಲಿ ನಿರ್ಮಾಣಗೊಂಡ ಬಿಎಪಿಎಸ್ ಸಂಸ್ಥಾ ಹಿಂದೂ ದೇವಸ್ಥಾನವೂ ಉದ್ಘಾಟನೆಗೊಳ್ಳಲಿದೆ. ಅಯೋಧ್ಯೆ ಮುಗಿಯುತ್ತಿದ್ದಂತೆ ಅದರ ಕುರಿತಾಗಿಯೂ ಪರ-ವಿರೋಧ ಚರ್ಚೆ ಆರಂಭವಾದ
ರೂ ಆಶ್ಚರ್ಯವಿಲ್ಲ. ಇವೆರಡರ ನಡುವೆ ಮತ್ತೊಂದು ವಿಷಯ ಸದ್ದು ಮಾಡುತ್ತಿದೆ. ಅದು ರಾಜ್ಯದ ವಿಷಯವೇ ಆದರೂ ಇತ್ತೀಚಿನ ದಿನಗಳಲ್ಲಿ ದೇಶ-ವಿದೇಶ ಗಳಲ್ಲೂ ಸದ್ದು ಮಾಡುತ್ತಿರುವ ಉಡುಪಿಯ ಪರ್ಯಾಯ.
ಅದರಲ್ಲೂ ಈಗಿನ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಲವಾರು ದೇಶಗಳನ್ನು ಸುತ್ತಿ, ಭಕ್ತರನ್ನು ಭೇಟಿಯಾಗಿ, ಪರ್ಯಾಯಕ್ಕೆ ಆಹ್ವಾನ ನೀಡಿದ್ದರಿಂದ ಈ ಬಾರಿಯ ಪರ್ಯಾಯ ವಿದೇಶದಲ್ಲಿ ನೆಲೆಸಿದ ಕೃಷ್ಣಭಕ್ತರಲ್ಲೂ ಸಂಚಲನ ಮೂಡಿಸಿದೆ. ಈಗ ಉಡುಪಿಯಲ್ಲಿ ಪುನಃ ಪರ್ಯಾಯದ ಸಂಭ್ರಮ
ಆರಂಭವಾಗಿದೆ. ಇದು ಪ್ರತಿ ೨ ವರ್ಷಕ್ಕೊಮ್ಮೆ ನಡೆಯುವ ಅಮಿತ ಸಂಭ್ರಮ. ಉಡುಪಿಯಲ್ಲಿ ಎಲ್ಲ ಹಬ್ಬ, ಆಚರಣೆಗಳ ತೂಕ ಒಂದು ಕಡೆಯಾದರೆ, ಪರ್ಯಾಯದ ತೂಕ ಇನ್ನೊಂದು ಕಡೆ. ಉಡುಪಿಯ ಜನರಷ್ಟೇ ಅಲ್ಲ, ಸುತ್ತ- ಮುತ್ತಲಿನ ಊರಿನ ಜನರಿಗೂ ಪರ್ಯಾಯ ಎಂದರೆ, ಜಾತಿ-ಮತಗಳ ಎಲ್ಲೆ ಮೀರಿದ ಅಮಿತ ಸಂಭ್ರಮ.
ಊರು ಶೃಂಗಾರಗೊಳ್ಳುವುದೇನು, ಸಾಂಸ್ಕೃತಿಕ ಆಚರಣೆಗಳೇನು, ಊಟ-ಉಪಚಾರಗಳೇನು, ಅಕ್ಷರಶಃ ಸಡಗರದ ವಾತಾವರಣ. ಪರ್ಯಾಯದ ಸಮಯದಲ್ಲಿ ಜಾತಿ-ಮತ-ಧರ್ಮ ಗಳನ್ನೆಲ್ಲ ಮರೆತು, ಅಕ್ಕಿ, ಬೇಳೆ-ಕಾಳು, ತರಕಾರಿ, ತೆಂಗಿನ ಕಾಯಿ, ಎಣ್ಣೆ, ತುಪ್ಪ ಮೊದಲಾದವುಗಳ ಹೊರೆಕಾಣಿಕೆ ತರುವವರೇನು… ಇದು ನಾನು ಉಡುಪಿಯಲ್ಲಿ ಎರಡು ವರ್ಷ ಮನೆ ಮಾಡಿಕೊಂಡಿದ್ದಾಗ ಕಂಡ ಸತ್ಯ. ಅಬ್ಬಾ, ನನಗಂತೂ ಆ ಹೊರೆಕಾಣಿಕೆಯನ್ನೆಲ್ಲ ಸಂಗ್ರಹಿಸಿ ಇಡುವುದನ್ನು ನೋಡು
ವುದೇ ಒಂದು ಸಂಭ್ರಮವಾಗಿತ್ತು. ಈ ಬಾರಿ ಸುಮಾರು ಮೂವತ್ತಕ್ಕೂ ಹೆಚ್ಚು ಬಟ್ಟೆ, ತೋಟಗಾರಿಕೆ, ಗೋವಿನ ಉತ್ಪನ್ನ, ಕೃಷಿ, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟದ ಮಳಿಗೆಗಳೂ ಇದ್ದು ಸಂಭ್ರಮವನ್ನು ಇಮ್ಮಡಿಗೊಳಿಸಲಿವೆ.
ಕರ್ನಾಟಕ ರಾಜ್ಯದಲ್ಲಿ ಉಡುಪಿಗೆ ಒಂದು ವಿಶೇಷ ಸ್ಥಾನವಿದೆ. ಉಡುಪಿ ಎಂದರೆ ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಉಪಾಹಾರ-
ಭೋಜನ ಸಮ್ಮಿಳಿತವಾಗುವ ಸ್ಥಳ. ಈ ರೀತಿ ಎಷ್ಟು ಕಡೆ ಇದೆಯೋ ಗೊತ್ತಿಲ್ಲ, ಇದ್ದರೂ ನಾನಂತೂ ಕಂಡಿಲ್ಲ, ಕೇಳಿಲ್ಲ. ಒಂದೇ ಊರಿನಲ್ಲಿ, ಒಂದು ಕಿಲೋ ಮೀಟರ್ ಆಸುಪಾಸಿನಲ್ಲಿ ಅಷ್ಟ ಮಠಗಳು, ಭಕ್ತ ಕನಕದಾಸರಿಗೆ ದರ್ಶನ ಕೊಟ್ಟ ಶ್ರೀಕೃಷ್ಣನ ಮಂದಿರವೂ ಸೇರಿದಂತೆ ಅನೇಕ ದೇವಾಲಯಗಳು. ಹಾಗೆಯೇ ಪ್ರತಿನಿತ್ಯ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು.
ವಾಡಿಕೆಯಲ್ಲಿ, ದೇವರ ತಲೆಯ ಮೇಲೆ ಹೂವು ತಪ್ಪಬಹುದು, ಇಂಥದ್ದೊಂದು ತಪ್ಪುವುದಿಲ್ಲ ಎಂಬ ಮಾತಿದೆ. ಅತ್ಯಂತ ಶ್ರದ್ಧೆಯಿಂದ ಮಾಡುವ ಕೆಲಸಕ್ಕೆ
ಉಪಮೆಯಾಗಿ ಬಳಸುವ ಸಾಲು ಅದು. ಉಡುಪಿಯ ರಾಜಾಂಗಣಕ್ಕೆ ಹೋದರೆ ಅದು ನಿಜ ಅನಿಸುತ್ತದೆ. ಪ್ರತಿ ದಿನ ಸಾಯಂಕಾಲ ಕೀರ್ತನೆ, ಯಕ್ಷಗಾನ, ಹರಿಕಥೆ, ಗಾಯನ ಇತ್ಯಾದಿ ಒಂದಲ್ಲ ಒಂದು ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ. ಇದಕ್ಕೆಲ್ಲ ಮೂಲ ಕಾರಣ ಅಷ್ಟ ಮಠಗಳೇ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಇನ್ನು ಉಡುಪಿಯ ಊಟ-ತಿಂಡಿ, ಹೋಟೆಲಿನ ವಿಷಯವನ್ನಂತೂ ಕೇಳುವುದೇ ಬೇಡ. ಅದಕ್ಕೇ ಹೇಳಿದ್ದು ಉಡುಪಿ ಉಳಿದ ಕ್ಷೇತ್ರದಂತಲ್ಲ. ಇಂತಿರುವ ಉಡುಪಿಯಲ್ಲಿ ಜನವರಿ ೧೮ನೆಯ ತಾರೀಖಿನಿಂದ ಪುತ್ತಿಗೆಯ ಚತುರ್ಥ ಪರ್ಯಾಯ ಪರ್ವ ಮಹೋತ್ಸವ ಪ್ರಾರಂಭ. ಅಂದರೆ, ಉಡುಪಿಯ
ಮಂದಿರದಲ್ಲಿ ಮೂರ್ತರೂಪನಾಗಿ ನಿಂತಿರುವ ಲೋಕ ನಾಯಕನಾದ ಶ್ರೀಕೃಷ್ಣನನ್ನು, ಮುಂದಿನ ಎರಡು ವರ್ಷಗಳ ಕಾಲ ಪೂಜಿಸುವ ಕೈಂಕರ್ಯ ಪುತ್ತಿಗೆ ಮಠದ್ದು.
ಪುತ್ತಿಗೆ ಮಠದ ಪೂಜ್ಯ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ೭೦೦ ವರ್ಷಗಳ ಯತಿ ಪರಂಪರೆಯಲ್ಲಿ ಬಂದ ೩೦ನೆಯ ಯತಿಗಳು. ಬಾಲ್ಯದಿಂದಲೇ ಮಹಾನ್ ವ್ಯಕ್ತಿಗಳ, ಅಥವಾ ಯತಿಗಳ ಪ್ರಭಾವಕ್ಕೆ ಒಳಗಾದವರು, ಅವರ ಸನ್ನಿಧಾನದಲ್ಲೇ ಬೆಳೆದವರು, ಅವರ ತೇಜಸ್ಸು, ಓಜಸ್ಸನ್ನು ತಮ್ಮೊಳಗೆ ತುಂಬಿಕೊಂಡವರು. ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರಿಂದ ೧೨ ವರ್ಷಗಳವರೆಗೆ ಆಚಾರ, ವಿಚಾರ, ಅನುಷ್ಠಾನ ಮತ್ತು ವಿಶೇಷವಾದ ಶಾಸದ ಅಧ್ಯಯನ ಇತ್ಯಾದಿಗಳನ್ನು ಕಲಿತವರು. ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಂದ ಸಾಮಾಜಿಕ ಕ್ರಾಂತಿ ಮತ್ತು ಸಮಾಜಮುಖಿ ಚಿಂತನೆಯನ್ನು ಕಲಿತವರು. ಅದಮಾರು ಮಠದ ಶ್ರೀ ವಿಬುಧೇಶತೀರ್ಥರ ಪ್ರಭಾವಕ್ಕೊಳಗಾಗಿ ಅವರಿಂದಲೂ ಪ್ರೇರೇಪಿತರಾದವರು.
೧೨ನೆಯ ವಯಸ್ಸಿನಲ್ಲಿಯೇ ಸನ್ಯಾಸ ಸ್ವೀಕರಿಸಿ, ಸುಮಾರು ೫ ದಶಕಗಳವರೆಗೆ ಭಾರತದಾದ್ಯಂತ ಮಾತ್ರವಲ್ಲದೆ, ವಿದೇಶಗಳನ್ನೂ ಸುತ್ತಿ, ವಿಶ್ವದಾದ್ಯಂತ ಕೃಷ್ಣಭಕ್ತಿ ಯನ್ನು ಉದ್ದೀಪನಗೊಳಿಸುವ ನಿಟ್ಟಿನಲ್ಲಿ ತೊಡಗಿಸಿಕೊಂಡವರು. ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಯತಿಯಷ್ಟೇ ಅಲ್ಲ, ಉತ್ತಮ ಲೇಖಕರೂ ಹೌದು. ಶ್ರೀಗಳು ಧಾರ್ಮಿಕ ಪ್ರಶ್ನೆ ಮಾರ್ಮಿಕ ಉತ್ತರ, ಹನ್ನೆರಡು ಹಬ್ಬಗಳ ಸಂದೇಶ, ಮರ್ಮ ಮೀಮಾಂಸೆ, ಸುಗುಣೇಂದ್ರವಾಣಿ, ಗೀತಾಧ್ಯಾಯ ಭಾವ ಪರಿಚಯ ಇತ್ಯಾದಿ ಸುಮಾರು ೨೦ಕ್ಕೂ ಹೆಚ್ಚು ಕೃತಿಗಳನ್ನು ಸಮಾಜಕ್ಕೆ ನೀಡಿದವರು.
ಶ್ರೀಗಳು ವಿಶ್ವದಾದ್ಯಂತ ಇಂಗ್ಲಿಷ್‌ನಲ್ಲಿ ಭಗವದ್ಗೀತೆಯ ಪ್ರವಚನ ಮಾಡಿದವರು, ಮುಂದೆಯೂ ಮಾಡುವವರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಆಶಯ ಭಾಷಣ ಮಾಡುವುದರಿಂದ ಹಿಡಿದು, ವಿಯೆನ್ನಾ ಜಾಗತಿಕ ಸಮ್ಮೇಳನದಲ್ಲಿ ವಿಶ್ವಶಾಂತಿ ಧರ್ಮ ಸಂಸ್ಥೆಯ ಅಂತಾರಾಷ್ಟ್ರೀಯ ಅಧ್ಯಕ್ಷರಾಗಿಯೂ ಆಯ್ಕೆಯಾದ ಶ್ರೀಪಾದರು ಸದಾ ಸೃಜನಶೀಲರು. ಪರ್ಯಾಯದ ಈ ಸಂದರ್ಭದಲ್ಲಿ ಪುತ್ತಿಗೆ ಶ್ರೀಗಳು ಪಂಚಪ್ರಧಾನ ಯೋಜನೆಗಳನ್ನು ಸಂಕಲ್ಪಿಸಿಕೊಂಡಿದ್ದಾರೆ. ಅದರಲ್ಲಿ
ಎರಡನೆಯದು, ವಿಶ್ವದಾದ್ಯಂತ ನೆಲೆಸಿರುವ ಕೃಷ್ಣಭಕ್ತರಿಂದ ಗೀತಾಮಂದಿರದಲ್ಲಿ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಭಗವದ್ಗೀತಾ ಪಾರಾಯಣ ಪರ್ಯಾಯ. ಕೊನೆಗೆ ಅಂತಾರಾಷ್ಟ್ರೀಯ ಭಗವದ್ಗೀತಾ ಸಮ್ಮೇಳನ ನಡೆಸಿ ಶ್ರೀಮದ್ಭಗವದ್ಗೀತಾ ಮಹಾಯಾಗವನ್ನು ಅರ್ಪಿಸುವುದು.
ಮೂರನೆಯ ಸಂಕಲ್ಪ, ವರ್ಷಕ್ಕೊಮ್ಮೆ ಉಡುಪಿಗೆ ಬಂದು, ಕ್ಷೇತ್ರಾವಾಸ ಮಾಡಲು ಬಯಸುವ ಭಕ್ತರಿಗೆ ಉಳಿಯಲು ಅನುಕೂಲವಾಗುವಂತೆ ಆಧುನಿಕ ಸೌಲಭ್ಯಗಳುಳ್ಳ ಉಡುಪಿ ಕ್ಷೇತ್ರಾವಾಸ ಹೆಸರಿನಲ್ಲಿ ವಸತಿಗೃಹ ನಿರ್ಮಿಸುವುದು. ಹಿಂದೆ ಶ್ರೀ ಮಧ್ವಾಚಾರ್ಯರು ಉತ್ತರ ಪ್ರವೇಶ ದ್ವಾರ ದಿಂದ ಶ್ರೀಕೃಷ್ಣನ ಮೂರ್ತಿಯನ್ನು ಎತ್ತಿಕೊಂಡು ಪ್ರವೇಶಮಾಡಿದ್ದರಂತೆ. ಅದರ ನೆನಪಿಗಾಗಿ, ಮುಖ್ಯರಸ್ತೆಯಲ್ಲಿ ಆಚಾರ್ಯರ ವಿಗ್ರಹವಿರುವ ಶ್ರೀ ಮಧ್ವೇಶ ವೃತ್ತ ಮತ್ತು ಸ್ವಾಗತಂ
ಕೃಷ್ಣ ಎಂಬ ಸ್ವಾಗತ ಗೋಪುರವನ್ನು ನಿರ್ಮಿಸುವುದು ನಾಲ್ಕನೆಯ ಸಂಕಲ್ಪ.
ಶ್ರೀಕೃಷ್ಣನು ಕನಕದಾಸರಿಗೆ ಕಿಂಡಿಯ ಮೂಲಕ ದರುಶನ ನೀಡಿದ ಕಥೆ ಎಲ್ಲರಿಗೂ ಗೊತ್ತಿದ್ದದ್ದೇ. ಅದೇ ಕನಕನ ಕಿಂಡಿಗೆ ಕನಕ ಕವಚ ಸಮರ್ಪಿಸುವುದು, ಜತೆಗೆ
ಬಾಲಕೃಷ್ಣನ ರಥೋತ್ಸವಕ್ಕೆ ರತ್ನಖಚಿತವಾದ ಬಂಗಾರದ ಪಾರ್ಥಸಾರಥಿ ಮತ್ತು ಗೀತಾರಥವನ್ನು ಸಮರ್ಪಿಸುವುದು ಐದನೆಯ ಮತ್ತು ಕೊನೆಯ ಸಂಕಲ್ಪ.
ಅದೆಲ್ಲ ಸರಿ, ಹಾಗಾದರೆ ಮೊದಲನೆಯ ಸಂಕಲ್ಪ ಏನು? ಅದನ್ನೇ ಬಿಟ್ಟೆ ಅಂದುಕೊಳ್ಳಬೇಡಿ. ನಿಜ ಹೇಳಬೇಕೆಂದರೆ, ನನಗೆ ಬಹಳ ಇಷ್ಟವಾದದ್ದು ಮೊದಲನೆಯ ಸಂಕಲ್ಪ; ಕೋಟಿ ಗೀತಾ ಲೇಖನ ಯಜ್ಞ. ಭಗವದ್ಗೀತೆಯ ಪಠಣ, ಮನನ, ಚಿಂತನ ಇವೆಲ್ಲ ಸಹಜ. ಆದರೆ ಭಗವದ್ಗೀತೆಯ ಲೇಖನ? ಊಹೂಂ, ಬಹಳ ಕಡಿಮೆ. ಇಡೀ ಭಗವದ್ಗೀತೆಯ ೧೮ ಅಧ್ಯಾಯದ ೭೦೧ ಶ್ಲೋಕವನ್ನು ಬರೆಯುವುದು ಎಂದರೆ? ಬಹಳ ಜನರಿಗೆ ಬರೆಯುವುದು ಎಂದರೇ ಅಲರ್ಜಿ. ಓದು ಮುಗಿಸಿ ಉದ್ಯೋಗಕ್ಕೆ ಸೇರಿಕೊಂಡ ನಂತರ, ಕೇವಲ ಸಹಿ ಹಾಕಲು ಮಾತ್ರ ಪೆನ್ನು ಹಿಡಿದ ಜನ ನಮ್ಮಲ್ಲಿ ಎಷ್ಟಿಲ್ಲ ಹೇಳಿ? ಅದರಲ್ಲೂ ಇಂದಿನ ಕಂಪ್ಯೂಟರ್ ಯುಗದಲ್ಲಿ, ಬೆರಳ ತುದಿ ಯಲ್ಲಿ ಸಕಲ ಮಾಹಿತಿಯೂ ಲಭ್ಯವಿರುವಾಗ, ಕಂಕಣಬ ದ್ಧರಾಗಿ ಕುಳಿತು ಭಗವದ್ಗೀತೆಯನ್ನು ಬರೆಯಬೇಕೇ? ಅದರ ಬದಲು ಹತ್ತು ಸಾರಿ ಓದಿದರೆ ಆಗುವುದಿಲ್ಲವೇ? ಅಲ್ಲ, ನೂರು ಸಾರಿ ಕೇಳಿದರೆ ಆಗುವುದಿಲ್ಲವೇ? ಇಲ್ಲ ಎನ್ನುವವರು ಯಾರು? ಅದೂ ಆಗುತ್ತದೆ. ಆದರೆ ಈ ಬಾರಿ ಬರೆಯುವುದು ಕೇವಲ ಕಚ್ಚಾಪಟ್ಟಿಯಲ್ಲಿ ಬರೆದುಕೊಂಡ ಚಿತ್ತುಕಾಟಿನ ಬರಹವಾಗುವುದಿಲ್ಲ. ಬದಲಿಗೆ ದೈವದತ್ತ ಸಮಾನವಾದ ಪವಿತ್ರ ಪುಸ್ತಕವಾಗಿ ನಿಮ್ಮ ಮನೆಯ ದೇವರ ಪೀಠದಲ್ಲಿರುತ್ತದೆ.
ಅದು ಹೇಗೆ? ಪುತ್ತಿಗೆ ಮಠ ಅಥವಾ ಗೀತಾಮಂದಿರವನ್ನು ಸಂಪರ್ಕಿಸಿದರೆ, ೨ ಪುಸ್ತಕವನ್ನು ನಿಮ್ಮ ಮನೆಗೇ ತಲುಪಿಸುತ್ತಾರೆ. ಅದರಲ್ಲಿ ಒಂದು ಭಗವದ್ಗೀತೆಯ ಶ್ಲೋಕಗಳಿರುವ ಪುಸ್ತಕ, ಇನ್ನೊಂದು ಶ್ಲೋಕ ಬರೆಯಲು ಖಾಲಿ ಪುಟಗಳಿರುವ ಪುಸ್ತಕ. ಪುತ್ತಿಗೆ ಶ್ರೀಗಳ ಪರ್ಯಾಯದ ಅವಽಯಲ್ಲಿ ಗೀತೆಯ ಎಲ್ಲ ಶ್ಲೋಕಗಳನ್ನು ಬರೆದು, ಹಸ್ತಲಿಖಿತ ಪ್ರತಿಯನ್ನು ಉಡುಪಿಗೆ ಕೊಂಡುಹೋಗಬೇಕು. ಶ್ರೀಗಳು ಅದನ್ನು ಶ್ರೀಕೃಷ್ಣನ ಸಾನ್ನಿಧ್ಯದಲ್ಲಿಟ್ಟು, ಶ್ರೀಕೃಷ್ಣನಿಗೆ ಸಮರ್ಪಿಸಿ, ಪ್ರಸಾದದೊಂದಿಗೆ ಅದನ್ನು ಹಿಂದಿರುಗಿಸುತ್ತಾರೆ. ಅದನ್ನು ತಂದು ನಿಮ್ಮ ಮನೆಯ ದೇವರ ಪೀಠದಲ್ಲಿಟ್ಟು ನೀವು ಪೂಜಿಸುವುದಷ್ಟೇ ಅಲ್ಲ, ಮುಂದಿನ ತಲೆಮಾರಿನವರೂ
ಅದನ್ನು ಪೂಜಿಸುವ ಅವಕಾಶ ಇರುತ್ತದೆ.
ಒಂದು ವೇಳೆ ನಿಮಗೆ ಉಡುಪಿಗೆ ಹೋಗಲು ಆಗಲಿಲ್ಲವೆಂದುಕೊಳ್ಳಿ, ಅಂಚೆಯ ಮೂಲಕ ಅದನ್ನು ಕಳಿಸಿಕೊಟ್ಟರೂ ಸಾಕು. ಆಗಲೂ ಪುಸ್ತಕ ನಿಮಗೆ ಹಿಂತಿರುಗಿ ಬಂದು ತಲುಪುತ್ತದೆ, ಶುಭಾಶೀರ್ವಾದದ ಸಮೇತ! ಅಂದಂತೆ, ಕನ್ನಡವೂ ಸೇರಿದಂತೆ, ಇಂಗ್ಲಿಷ್, ಹಿಂದಿ ಮತ್ತು ಸಂಸ್ಕೃತ ಭಾಷೆಯಲ್ಲೂ ಇದನ್ನು ಬರೆಯಬಹುದು. ‘ಕನ್ನಡ್ ಗೊತ್ತಿಲ್ಲ… ’ ಎಂಬ ನೆಪ ಹೇಳುವಂತಿಲ್ಲ. ಒಟ್ಟೂ ಒಂದು ಕೋಟಿ ಜನ ಭಗವದ್ಗೀತೆಯನ್ನು ಬರೆದು, ಶ್ರೀಕೃಷ್ಣನಿಗೆ ಸಮರ್ಪಿಸಿದರೆ, ಅಲ್ಲಿಗೆ ಕೋಟಿ ಗೀತ ಲೇಖನ ಯಜ್ಞ ಸಂಪನ್ನ.
ಭಗವದ್ಗೀತೆಯನ್ನು ಬರೆಯುವಾಗ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಪುಸ್ತಕದ ಜತೆ ಇರುವ ದೀಕ್ಷಾಸೂತ್ರವನ್ನು ಬಲ ಕೈಗೆ ಕಟ್ಟಿಕೊಂಡು ದೀಕ್ಷಾಬದ್ಧರಾಗಬೇಕು. ಜತೆಗೆ ಒಂದಷ್ಟು ಸಂಕಲ್ಪಗಳನ್ನು ಮಾಡಿಕೊಳ್ಳಬೇಕು. ನಿಮ್ಮಲ್ಲಿ ಯಾವುದಾದರೂ ದುಶ್ಚಟಗಳಿದ್ದರೆ ಬಿಡುವುದು. ಉದಾಹರಣೆಗೆ, ಮದ್ಯಪಾನ, ಧೂಮಪಾನ ಇತ್ಯಾದಿ ವ್ಯಸನಗಳನ್ನು ತ್ಯಜಿಸುವುದು. ಲಂಚ ಸ್ವೀಕರಿಸುವುದು, ವರದಕ್ಷಿಣೆ ಪಡೆಯುವುದು, ಸುಳ್ಳು ಹೇಳುವುದು, ಸಿಟ್ಟು, ಪರನಿಂದನೆ ಇತ್ಯಾದಿಗಳಿಂದ ದೂರ ಇರುವುದು. ಶ್ರೀಗಳು ಬಹ್ರೈನ್ ಭೇಟಿಯ ಸಂದರ್ಭದಲ್ಲಿ ಹೇಳಿದ ಒಂದು ಮಾತು ಸದಾ ನೆನಪಿನಲ್ಲಿರುವಂಥದ್ದು. ‘ನನಗೆ ಯಾವುದೇ ಕೆಟ್ಟ ಚಟ ಇಲ್ಲ ಎಂದು ಹೇಳಬೇಡಿ, ಇತ್ತೀಚಿನ ದಿನಗಳಲ್ಲಿ ಬೆಳಗ್ಗೆ ಎದ್ದ ಕೂಡಲೇ ಮೊಬೈಲ್ ಬಳಸುವುದರಿಂದ ಅನೇಕ ಕಾರ್ಯಗಳು ವಿಳಂಬ ವಾಗುತ್ತವೆ. ಅದೂ ಒಂದು ದುಶ್ಚಟವೇ! ಕೊನೆ ಪಕ್ಷ ದನ್ನು ಬಿಟ್ಟರೂ ಸಾಕು!’ ಎಂದಿದ್ದರು.
ಅದರ ಜತೆಗೆ, ಸ್ನಾನ ಮಾಡಿ, ಪ್ರಾರ್ಥನೆ ಮುಗಿಸಿಯೇ ಉಪಾಹಾರ ಮಾಡುತ್ತೇನೆ, ಏಕಾದಶಿ ವ್ರತವನ್ನು ಆಚರಿಸುತ್ತೇನೆ, ಪ್ರತಿನಿತ್ಯ ಭಗವದ್ಗೀತೆಯ ಒಂದು ಅಧ್ಯಾಯವನ್ನಾದರೂ ಓದುತ್ತೇನೆ, ನಿತ್ಯ ಸಂಧ್ಯಾವಂದನೆ ಮಾಡುತ್ತೇನೆ, ದುಡಿಮೆಯ ಒಂದು ಭಾಗವನ್ನು ಧಾರ್ಮಿಕ ಕೆಲಸಕ್ಕಾಗಲಿ, ಸಾಮಾಜಿಕ ಕಾರ್ಯ ಕ್ಕಾಗಲಿ ತೆಗೆದಿಡುತ್ತೇನೆ ಇತ್ಯಾದಿ ಒಳ್ಳೆಯ ಸಂಕಲ್ಪಗಳನ್ನೂ ಮಾಡಿಕೊಳ್ಳಬೇಕು. ನಾವು ಬರೆಯುವುದಷ್ಟೇ ಅಲ್ಲ, ಬೇರೆಯವರಿಂದ ಬರೆಸಬೇಕು. ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥರು ಹೇಳುತ್ತಾರೆ, ‘ಉZe ಟ್ಞಛಿ Zಠ್ಚಿe ಠಿಛ್ಞಿ’ ಎನ್ನುವುದು ಧ್ಯೇಯವಾಕ್ಯವಾಗಿರಲಿ, ಸಾಧ್ಯವಾಗದಿದ್ದಲ್ಲಿ, ಕನಿಷ್ಠಪಕ್ಷ ’ಉZe ಟ್ಞಛಿ Zಠ್ಚಿe
ಟ್ಞಛಿ’ ಎನ್ನುವುದಾದರೂ ಘೋಷವಾಕ್ಯವಾಗಿರಲಿ. ನಾನಂತೂ ಕೋಟಿ ಗೀತಾ ಲೇಖನ ಯಜ್ಞದ ಕಾರ್ಯ