Sunday, 15th December 2024

ಸಿ ’ರಾಝ್’ ಕೀ ಬಾತ್‌

ತುಂಟರಗಾಳಿ

ಹರಿ ಪರಾಕ್

ನೆಟ್ ಪಿಕ್ಸ್

ಒಬ್ಬ ಸಾಹುಕಾರ ಒಮ್ಮೆ ಭಾರೀ ದುಡ್ಡು ಕೊಟ್ಟು ಒಂದು ಕುದುರೆ ಖರೀದಿಸಿದ. ಆದರೆ ಅದು ಎಲ್ಲಾ ಕುದುರೆಗಳಂತೆ ನಾರ್ಮಲ್ ಆಗಿದ್ದಲ್ಲ.
ಅದರ ಮಾಲೀಕ ಇವನಿಗೆ ಆ ಕುದುರೆ ಮಾರುವಾಗ ಹೇಳಿದ್ದ ಇದು ಓಡಲು ಶುರುಮಾಡ ಲು ಮತ್ತು ನಿಲ್ಲುವುದಕ್ಕೆ ಎರಡು ಪಾಸ್ ವರ್ಡ್ ಗಳಿವೆ.. ಅದರ ಮೇಲೆ ಕುಳಿತು ಜೀನು ಹಿಡಿದು ‘ಥ್ಯಾಂಕ್ ಗಾಡ್’ ಎಂದರೆ ತಕ್ಷಣ ಗಂಟೆಗೆ ೧೦೦ ಕಿಮೀ ವೇಗದಲ್ಲಿ ನೆಗೆದು ಓಡುತ್ತದೆ, ಅದೇ ಜೀನು ಹಿಡಿದು ‘ಓ ಮೈ ಗಾಡ್’ ಎಂದರೆ ತಕ್ಷಣ ನಿಲ್ಲುತ್ತದೆ’.

ಅಂಥ ವಿಶೇಷ ಕುದುರೆ ಸಿಕ್ಕಿದ್ದಕ್ಕೆ ಖುಷಿಯಾದ ಸಾಹುಕಾರ ಅವನು ಕೇಳಿದಷ್ಟು ದುಡ್ಡು ಕೊಟ್ಟು ಕುದುರೆಯನ್ನು ತನ್ನ ಲಾರಿಯಲ್ಲಿ ಹೇರಿಕೊಂಡು ತನ್ನ ಮನೆಗೆ ತಂದ. ಮರುದಿನ ಈ ವಿಶೇಷ ಕುದುರೆಯನ್ನು ಪರೀಕ್ಷಿಸಬೇಕು ಎಂದುಕೊಂಡು ಅದನ್ನು ಲಾರಿಯಿಂದ ಹೊರತೆಗೆದು ಮೇಲೆ ಹತ್ತಿ ಕುಳಿತು ಥ್ಯಾಂಕ್ ಗಾಡ್’ ಎಂದ. ಕುದುರೆ ಓಡಲು ಶುರು ಮಾಡಿತು. ಕುದುರೆ ಎಷ್ಟು ವೇಗವಾಗಿ ಹೋಗುತ್ತಿತ್ತು ಎಂದರೆ ಸಾಹುಕಾರನಿಗೆ ಅದು ಓಡುತ್ತಿರುವುದೇ ಗೊತ್ತಾಗದೆ ಹಾಗೇ ನಿದ್ದೆ ಬಂದಂತೆ ಎನಿಸುತ್ತಿತ್ತು.

ಹಾಗೇ ನಿದ್ದೆ ಬಂದಂತೆ ಎನಿಸುತ್ತಿತ್ತು. ಹಾಗೇ ಮೈಮರೆತು ಕಣ್ಣು ಮುಚ್ಚಿಕೊಂಡಿದ್ದವನು ಇದ್ದಕ್ಕಿದ್ದಂತೆ ಕಣ್ಣು ತೆರೆದರೆ ಕುದುರೆ ಯಾವುದೋ ಅಪರಿಚಿತ ಕಾಡಿನ ಕಾಲು ದಾರಿಯಲ್ಲಿ ನುಗ್ಗುತ್ತಿತ್ತು. ಕೊಂಚ ಗಾಬರಿಯಾದವನು ಕುದುರೆಯನ್ನು ನಿಲ್ಲಿಸಬೇಕೆಂದುಕೊಂಡ, ಆದರೆ ಅವನಿಗೆ ಪಾಸ್ ವರ್ಡ್ ಮರೆತುಹೋಗಿತ್ತು. ಅಷ್ಟರಲ್ಲಿ ಕುದುರೆ ಪ್ರಾತವೊಂದನ್ನು ಸಮೀಪಿಸುತ್ತಿತ್ತು. ಇನ್ನೇನು ಕುದುರೆ ತೀರಾ ಆ ಪ್ರಪಾತದ ಹತ್ತಿರ ಬಂದಾಗ ಕೆಳಗೆ ಬಗ್ಗಿ ಅದರ ಆಳ ನೋಡಿದ ಸಾಹುಕಾರನಿಗೆ ಹೃದಯ ಒಮ್ಮೆ ಕಂಪಿಸಲಾರಂಭಿಸಿ, ಒಮ್ಮೆಲೇ ಗಾಬರಿಯಿಂದ ‘ಓ ಮೈ ಗಾಡ್’ ಎಂದು ಕೂಗಿದ. ಅದು ಪಾಸ್ ವರ್ಡ್ ಗೆ ಮ್ಯಾಚ್ ಆಗಿದ್ದರಿಂದ ಕುದುರೆ ಪ್ರಪಾತದ ಅಂಚಿಗೆ ಬಂದು ಕೊನೇ ತುದಿಯಲ್ಲಿ ನಿಂತಿತು. ಇವನಿಗೆ ಹೋದ ಜೀವ ಬಂದಂತಾಗಿ ನಿಟ್ಟುಸಿರು ಬಿಟ್ಟು ಮೆಲ್ಲನೆ ತನ್ನಷ್ಟಕ್ಕೆ ತಾನು ಹೇಳಿಕೊಂಡ ಥ್ಯಾಂಕ್
ಗಾಡ’. ಅಷ್ಟೇ ಈ ಕತೆ ಮತ್ತೆ ಅವನ ಕತೆ ಎರಡೂ ಮುಗೀತು.

ಲೂಸ್ ಟಾಕ್
ಆರ್‌ಸಿಬಿ ಅಭಿಮಾನಿ (ಕಾಲ್ಪನಿಕ ಸಂದರ್ಶನ)
ನಿಮ್ಮ ಪ್ರಕಾರ ಈ ಸಲ ಐ ಪಿ ಎಲ್ ನಲ್ಲಿ ಆರ್‌ಸಿಬಿ ಯಾಕೆ ಗೆ ಲಕ್ಷಣ ಇಲ್ಲ?
-ಸಿರಾಜ್‌ಗೆ ಅಷ್ಟು ಕೋಟಿ ಕೊಟ್ಟು ತಗೊಂಡಿದ್ದೇ ಕಾರಣ. ಅಷ್ಟು ದುಡ್ಡ್ ಕೊಟ್ ಮೇಲೆ ಯಾರಿಗಾದ್ರೂ ಆಡೋಕೆ ಇಂಟರೆ ಇರುತ್ತಾ?

ಅಂದ್ರೆ ಸಿರಾಜ್‌ಗೆ ಆಡೋಕೆ ಇಂಟರೆಸ್ಟೇ ಇಲ್ಲ ಅಂತೀರಾ?

ಹೌದು ರೀ, ಫೀಲ್ಡಲ್ಲಿ ಇರೋವಾಗ ಆಡೋದ್ ಬಿಟ್ಟು ಅಷ್ಟು ಕೋಟಿಗೆ ಬ್ಯಾಂಕಲ್ಲಿ ಎಷ್ಟು ಇಂಟರೆ ಬರುತ್ತೆ ಅಂತ ಲೆಕ್ಕ ಹಾಕ್ತಾ ಇದ್ರೆ
ಆಡೋಕಿನ್ನೇನು ಇಂಟರೆ ಇರುತ್ತೆ.

ಆರ್‌ಸಿಬಿಲಿ ಎಲ್ರೂ ಡೂಪ್ಲಿಸಿಸ್, ಕೊಹ್ಲಿ, ಕಾರ್ತಿಕ್ ಹೆಸರೇ ಹೇಳ್ತಾರೆ, ನನ್ ಹೆಸರು ಹೇಳೋಲ್ಲ ಅಂತ ಅವರಿಗೆ ಬೇಜಾರ್ ಇರಬಹುದು.
ಸ್ಟೇಡಿಯಂ ಹೊರಗೆ ಅವನ್ದೊಂದು ಕಟೌಟ್ ಹಾಕಿಸಿದ್ರೆ ಸರಿ ಹೋಗ್ ಬಹುದಾ?

ಅವನು ಆಡ್ತಿರೋ ರೀತಿಗೆ ಕಟೌಟ್ ಅಲ್ಲ, ಟೀಮಿಂದ ಹೊರಗೆ ಹಾಕಿ ಸಿಟೌಟ್ ನಲ್ಲಿ ಕೂಡಿಸ್ ಬೇಕು. ನಿಮ್ ಪ್ರಕಾರ ಸಿರಾಜ್ ಸರಿ ಹೋಗ್ಬೇಕು ಅಂದ್ರೆ ಏನ್ ಮಾಡ್ಬೇಕು? ಸಿರಾಜ್‌ನ ರಜದ ಮೇಲೆ ಕಳಿಸಬೇಕು ಅಷ್ಟೇ ಅಂದ್ರೆ, ಸಿರಾಜ್‌ನಂಥ ಪ್ಲೇಯರ್‌ನ ಬೆಂಚ್ ಕಾಯಿಸೋ ಹಂಗೆ ಮಾಡ್ಬೇಕು ಅಂತೀರಾ? ಹೌದು ಮತ್ತೆ, ಬೆಂಚ್ ಕಾಯಿಸಿದಮೇಲಾದ್ರೂ ಠಿ೨೦ ಪ್ಲೇಯರ್‌ಗೆ ಇರೋ ಬೆಂಚ್
ಮಾರ್ಕ್ ಅವ್ನಿಗೆ ಗೊತ್ತಾಗಬಹುದು.

ಅಂದ್ರೆ, ಅ ಮೇಲೆ ನಂಬಿಕೆ ಇಡಂಗಿಲ್ಲ ಅಂತೀರಾ.. ಈ ಸೀಸನ್ ನಲ್ಲಂತು ಅವ್ನಿಗೆ ಸಿರಾಜ ಯೋಗ ಇಲ್ವಂತೆ, ಹೋಗ್ಲಿ ಬಿಡಿ ಅಂದಹಾಗೆ, ಸಿರಾಜ್ ಅಹಮದ್ ವೈಫಲ್ಯದ ಗುಟ್ಟು ಸಿ ‘ರಾಝ’ ಕೀ ಬಾತ್ ಬೇರೆ ಬೋಲರ್‌ಗಳೂ ಅಷ್ಟೇನೂ ಚೆನ್ನಾಗಿ ಬೋಲಿಂಗ್ ಮಾಡ್ತಾ ಇಲ್ವಲ್ಲ?
ಆದ್ರೂ, ಸಿರಾಜ್ ಮಾತ್ರ ಆರ್‌ಸಿಬಿ ಬೋಲರ್‌ಗಳ ಮಾನ ಹರಾಜ್ ಹಾಕ್ತಿದ್ದಾನೆ. ಅದ್ಸರಿ, ಆರ್‌ಸಿಬಿ ಗೆಲ್ ಬೇಕು ಅಂದ್ರೆ ನಿಮ್ ಪ್ರಕಾರ ಏನ್ ಮಾಡ್ಬೇಕು? ಇಟ್ಸ್ ಸೋ ಸಿಂಪಲ್. ನಮ್ ಟೀಮ್ ಓನರ್‌ಗೆ ಬುದ್ಧಿ ಇಲ್ಲ, ಕಾರ್ತಿಕ್ ಚೆನ್ನಾಗಿ ಆಡ್ತಾ ಇದಾನೆ. ಅವನನ್ನ ಪ್ಲೇಯರ್ ಆಗಿ ಇಟ್ಕೊಳ್ಳೊ ಬದಲು ಕೋಚ್ ಮಾಡಿದ್ರೆ ಆಗ ಎಲ್ಲರೂ ಅವನ್ ಥರಾನೇ ಆಡ್ತಾರೆ. ಆರ್‌ಸಿಬಿ ಗೆಲ್ಲುತ್ತೆ.

ಲೈನ್ ಮ್ಯಾನ್

ಕೂದಲು ಕತ್ತರಿಸುವ ಕಲೆ -‘ಹೇರ್’ ಕ್ರಾಫ್ಟ್
ಮೂರೂ ಬಿಟ್ಟವರು ಊರಿಗೆ ‘ದೊಡ್ಡವರು’ ಅಂತ ತೋರಿಸಿಕೊಟ್ಟಿದ್ದು ಯಾರು?
-ಐಪಿಎಲ್ ನಲ್ಲಿ ಮೂರೂ ಸ್ಟಂ ಬಿಟ್ಟು ಸ್ಕೂಪ್ ಶಾಟ್ ಹೊಡೆಯುವವರು

ಲೋಕಾರೂಢಿ ಹುಡುಗ ಬಿದ್ದ ಅಂದ್ರೆ ಏನಾಯ್ತು ಅಂತ ಕೇಳ್ತಾರೆ ಹುಡುಗಿ ಬಿದ್ಲು ಅಂದ್ರೆ ಯಾರಿಗೆ ಅಂತ ಕೇಳ್ತಾರೆ ಕನ್ನಡ ಮರೆತಿರುವ ಕನ್ನಡಿಗರಿಗೆ ಬೇಕಾಗಿರುವ ಪುಸ್ತಕ -೩೦ ದಿನಗಳಲ್ಲಿ ತಮಿಳು, ತೆಲುಗು, ಮಲಯಾಳಂ ಮರೆಯುವುದು ಹೇಗೆ? ಎರಡೆರಡು ಕಡೆ ಚುನಾವಣೆಗೆ ನಿಲ್ಲುವವರನ್ನು ಏನಂತ ಬಯ್ಯಬಹುದು?

-ಅವ್ನಿಗೆ ಕಾಲು ಒಂದ್ ಕಡೆ ನಿಲ್ಲಲ್ಲ ಕರ್ನಾಟಕದಲ್ಲಿ ಕನ್ನಡಕ್ಕಿಂತ ಹಿಂದಿಗೆ ಹೆಚ್ಚು ಪ್ರಾಶಸ್ತ್ಯಯ

-ಕನ್ನಡ ಭಾಷೆಯ ವಿಷಯದಲ್ಲಿ ಇನ್ನೂ ಮುಂದೆ, ಮನೆಯೇ ಕೊನೆಯ ಪಾಠಶಾಲೆ

ರಜನಿಕಾಂತ್ ಮನೆಯಲ್ಲಿ ಕೂತು ಟಿವಿಯಲ್ಲಿ ಕ್ರಿಕೆಟ್ ಮ್ಯಾಚ್ ನೋಡುವಾಗ ಸ್ಟೇಡಿಯಂನಲ್ಲಿ ಕ್ಯಾಮೆರಾಮ್ಯಾನ್ ಪ್ರೇಕ್ಷಕರ ಕಡೆ ಕ್ಯಾಮೆರಾ ತಿರುಗಿಸಿದ್ರೆ ಅವರ ರಿಯಾಕ್ಷನ್ ಏನಿರುತ್ತೆ?

-ಹೇ, ಅಲ್ನೋಡೋ..ರಜನಿಕಾಂತ್!

ಪ್ರಪಂಚದ ಭೂಪಟದಲ್ಲಿರುವ ಎಲ್ಲ ದೇಶಗಳಲ್ಲೂ ಹಣ ಹೂಡಿ ಲಾಸ್ ಆಗಿರುವ ಗ್ಲೋಬಲ್ ಬಿಸಿನೆಸ್ ಮ್ಯಾನ್
-ಅಟ್ -ಲಾಸ್

ಅಡಲ್ಟ ಸಿನಿಮಾಗಳ ಒಂದು ಸಾಲಿನ ವಿಮರ್ಶೆ
-ಹೆಂಗಳೆಯರ ಮೈ ಮುಟ್ಟುವ ಸಿನಿಮಾ
ಪೋ ಮಾರ್ಟಮ್ ಬಗ್ಗೆ ಸಿನಿಮಾ ಪತ್ರಕರ್ತರು ಏನಂತ ಬರೀತಾರೆ?
-ಅಂಗಾಂಗ ಪ್ರದರ್ಶನ
ಯಾವಾಗ್ಲೂ ನಾನು ಅಂತಲೇ ಮಾತು ಶುರು ಮಾಡುವ ಇಗೋ ಇರುವವನು
-‘ಐ’ ಸ್ಪೆಷಲಿ
ಟೆನ್ನಿಸ್ ಆಡುವವರ ಭಗ್ನ ಪ್ರೇಮ
-‘ಲವ್’ ಸ್ಟೋರಿ
ಮುತ್ತಪ್ಪ ರೈ ಸಿನಿಮಾಗೆ ನಿಜಕ್ಕೂ ಸೂಟ್ ಆಗೋ ನಟ
-ಇಮ್ರಾನ್ ಹಶ್ಮಿ…ಬಾಲಿವುಡ್‌ನ ‘ಮುತ್ತಪ್ಪ’
ಮುತ್ತಪ್ಪ ರೈ ‘ಬಲಗೈ’ ಭಂಟ
-‘ರೈ’ಟ್ ಹ್ಯಾಂಡ್
ಮುತ್ತಪ್ಪ ರೈ ಸಿನಿಮಾದಲ್ಲಿ ನಟಿಸುವ ಐಟಂ ಗರ್ಲ್
-‘ರೈ’ಸ್ ಐಟಂ