Saturday, 14th December 2024

Raghu Kotian Column: ಮರೆಯಲಾಗದ ದುರ್ಘಟನೆ

ಕಹಿ ನೆನಪು

ರಘು ಕೋಟ್ಯಾನ್

ಡಿಸೆಂಬರ್ ೩, ೧೯೮೪ ಭೋಪಾಲ್ ನಗರದಲ್ಲಿರುವ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್‌ನಲ್ಲಿ ನಡೆದ ಅನಿಲ ದುರಂತದಲ್ಲಿ ೮,೦೦೦ ಜನ ಸಾವನ್ನಪ್ಪಿ ಆರು ಲಕ್ಷ ಜನ ಗಾಯಗೊಂಡಿದ್ದರು. ಘಟನೆಗೆ ಕಾರಣ ಆ ಕಂಪನಿಯ ಬೇಜವಾಬ್ದಾರಿ. ಈ ವಿಷಾನಿಲವನ್ನು ೬೮,೦೦೦ ಲೀಟರ್ ಸಾಮರ್ಥ್ಯದ ಮೂರು ಭೂಗತ ಟ್ಯಾಂಕ್‌ಗಳಲ್ಲಿ ಶೇಕರಿಸಲಾಗಿತ್ತು. ಸುರಕ್ಷತೆಯ ನಿಯಮದ ಪ್ರಕಾರ ಎರಡು ಟ್ಯಾಂಕ್‌ಗಳನ್ನು ಶೇ.೫೦ ರಷ್ಟು ತುಂಬಿಸಿ ಮೂರನೇ ಟ್ಯಾಂಕ್ ಅನ್ನು ಖಾಲಿ ಬಿಡಬೇಕು. ಕಾರಣ ಯಾವುದೇ ಕಾರಣಗಳಿಂದಾಗಿ ವಿಷಕಾರಿ ಅನಿಲಗಳಿರುವ ಟ್ಯಾಂಕ್‌ನ ಒತ್ತಡ ಹೆಚ್ಚಿದಲ್ಲಿ ನೈಟ್ರೋಜೆನ್ ಅನಿಲದ ಬೆಂಬಲದೊಂದಿಗೆ ವಿಷಕಾರಿ ಅನಿಲವನ್ನು ಖಾಲಿ ಇರುವ ಟ್ಯಾಂಕಿಗೆ ವರ್ಗಾಯಿಸಿ ಒತ್ತಡವನ್ನು ಕಡಿಮೆಗೊಳಿಸಬಹುದು.

ಹಾಗೂ ಒಂದು ವೇಳೆ ಅನಿಲ ಸೋರಿಕೆಯಾದಲ್ಲಿ ಆ ಅನಿಲವನ್ನು ಕ್ಯಾಸ್ಟಿಕ್ ಸೋಡಾದೊಂದಿಗೆ ಬೆರಸಿ ವಿಷಾನಿಲವನ್ನು ದುರ್ಬಲಗೊಳಿ
ಸುವ ವ್ಯವಸ್ಥೆಯನ್ನು ಹೊಂದಿರಬೇಕು. ಜೊತೆಗೆ ಅಲ್ಲಿಂದಲೂ ಹೊರ ಬರುವ ವಿಷಕಾರಿ ಅನಿಲವನ್ನು ಚಿಮಿಣಿಯಲ್ಲೂ ಬೆಂಕಿಯೊಂದಿಗೆ
ಉರಿಸಿ ಸಂಪೂರ್ಣವಾಗಿ ಇಂಗಾಲದ ಡೈ ಆಕ್ಸಿಡ್ ಅನ್ನಾಗಿ ಪರಿವರ್ತಿಸಲಾಗುವ ವ್ಯವಸ್ಥೆಯನ್ನು ಹೊಂದಿರಬೇಕು. ಅಲ್ಲದೆ ಸೋರಿಕೆ
ಯಾಗುವ ಅನಿಲದ ಮೇಲೆ ನೀರನ್ನು ಚಿಮ್ಮಿಸುವ ಮೂಲಕ ಕೂಡಾ ಆ ವಿಷಾನಿಲವನ್ನು ದುರ್ಬಲಗೊಳಿಸಬಹುದು. ಇಂಥ ಕಾರಣಗಳಿಂದ ತಾಪಮಾನ ಹೆಚ್ಚಾಗದಂತೆ ಟ್ಯಾಂಕಿನ ತಾಪಮಾನವನ್ನು ೦ ಡಿಗ್ರಿ ಉಷ್ಣಾಂಶದಲ್ಲಿತುಕೊಳ್ಳುವಂತೆ ಶೀತಲೀಕೃತ ವ್ಯವಸ್ಥೆಯನ್ನು ಹೊಂದುವುದು ಕಡ್ಡಾಯವಾಗಿತ್ತು.

ಆದರೆ ೧೯೮೦ ರಲ್ಲಿ ಸಂಸ್ಥೆ ಲಾಭದಲ್ಲಿಲ್ಲದ ಕಾರಣ ವೆಚ್ಚ ಕಡಿತದ ಸಲುವಾಗಿ ಎಲ್ಲ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು.
ಅಕ್ಟೋಬರ್ ೧೯೮೦ ರಲ್ಲಿ ಶೇಖರಣೆಯಲ್ಲಿದ್ದ ವಿಷಾನಿಲವನ್ನು ಕಾರ್ಖಾನೆಗೆ ಸರಬರಾಜು ಗೊಳಿಸುವ ವ್ಯವಸ್ಥೆ ಕೈ ಕೊಟ್ಟಿತ್ತು. ಶೀತಲೀಕೃತ ವ್ಯವಸ್ಥೆಯನ್ನು ವೆಚ್ಚ ಕಡಿತದ ಸಲುವಾಗಿ ನಿಲ್ಲಿಸಲಾಗಿತ್ತು. ಚಿಮಿಣಿಯಲ್ಲಿ ವಿಷಾನಿಲಕ್ಕೆ ಬೆಂಕಿ ಹಚ್ಚಿ ದುರ್ಬಲಗೊಳಿಸುವ ವ್ಯವಸ್ಥೆಯ ಪೈಪ್ ಲೈನ್‌ಗಳನ್ನೂ ಮೈಟೆನ ಸಲುವಾಗಿ ಬಿಚ್ಚಿ ಇಡಲಾಗಿತ್ತು. ಕ್ಯಾಸ್ಟಿಕ್ ಸೋಡಾದೊಂದಿಗೆ ಬೆರೆಸಿ ವಿಷಾನಿಲವನ್ನು ದುರ್ಬಲಗೊಳಿಸುವ ವ್ಯವಸ್ಥೆಕೂಡಾ ನಿರ್ವಹಣೆಯ ಕೊರತೆಯಿಂದಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ.

ವಿಷಾನಿಲವನ್ನು ಕಾರ್ಖಾನೆಗೆ ಸರಬರಾಜು ಗೊಳಿಸುವ ವ್ಯವಸ್ಥೆ ಕೈ ಕೊಡಲು ಮುಖ್ಯ ಕಾರಣ ಪೈಪ್ ಲೈನಿನಲ್ಲಿ ಉಂಟಾದ ಬ್ಲಾಕ್.
ಹಾಗಾಗಿ ಪೈಪ್ ಲೈನಿನಲ್ಲಿ ಉಂಟಾದ ಬ್ಲಾಕ್ ಅನ್ನು ಕ್ಲೀನ್ ಮಾಡುವ ಸಲುವಾಗಿ ಹೆಚ್ಚು ಒತ್ತಡದಿಂದ ನೀರನ್ನು ಹಾಯಿಸಲಾಗಿತ್ತು. ಆದರೆ
ವಿಷಾನಿಲದ ಟ್ಯಾಂಕ್ ನೊಂದಿಗೆ ಸಂಪರ್ಕಗೊಂಡಿದ್ದ ಪೈಪಿನಲ್ಲಿದ ವಾಲ್‌ಗಳು ಸರಿಯಾಗಿ ಕೆಲಸ ಮಾಡದ ಕಾರಣ ನೀರು ನೇರವಾಗಿ ವಿಷಾನಿಲದ ಟ್ಯಾಂಕ್ ಸೇರಿತ್ತು. ನೀರು ಟ್ಯಾಂಕ್ ಸೇರದಂತೆ ಕೈಗೊಂಡಿದ್ದ ಎಲ್ಲಾ ವ್ಯವಸ್ಥೆಗಳು ಏಕ ಕಾಲಕ್ಕೆ ಕೈ ಕೊಟ್ಟಿತ್ತು.

ಮೀಥೈಲ್ ಐಸೊಸೈನೇಟ್ (Iಐಇ) ವಿಷಾನಿಲಕ್ಕೆ ನೀರು ಸೇರಿಕೊಂಡಿದ್ದರಿಂದಾಗಿ ರಾಸಾಯನಿಕ ಕ್ರಿಯೆ ಉಂಟಾಗಿ ಡಿಸೆಂಬರ್ ೨ ರ ರಾತ್ರಿ ೧೧: ೩೦ ರ ಹೊತ್ತಿಗೆ ವಿಷಾನಿಲ ಟ್ಯಾಂಕಿನ ಒತ್ತಡ ಹೆಚ್ಚಿದ್ದು ಪ್ರೆಷರ್ ಮಾಪನದಲ್ಲಿ ತಾಂತ್ರಿಕ ಕೆಲಸಗಾರರಿಗೆ ಗೋಚರವಾಗುತ್ತೆ. ಆದರೆ ಅವರ
ಉದಾಸೀನ ಮತ್ತು ನಿರ್ಲಕ್ಷತೆ, ಒತ್ತಡ ಮಾಪನ ಸರಿಯಾಗಿ ಕೆಲಸ ಮಾಡುತ್ತಿಲ್ಲವೋ ಏನೋ ಎಂಬ ಆಲೋಚನೆ ಮತ್ತಷ್ಟು ನೀರು ವಿಷಾನಿಲದ ಟ್ಯಾಂಕ್ ಸೇರುವಂತೆ ಮಾಡಿತು. ಆದರೆ ರಾತ್ರಿ ೧೨:೩೦ ಕ್ಕೆ ಮತ್ತಷ್ಟು ಹೆಚ್ಚಿದ ಟ್ಯಾಂಕಿನ ಒತ್ತಡ ಮತ್ತು ಉಷ್ಣತೆಯನ್ನು ಗಮನಿಸಿದ ಸಿಬ್ಬಂದಿ ಗಳಿಗೆ ದುರ್ಘಟನೆಯ ವಾಸನೆ ಗೋಚರಿಸಿತ್ತು. ತುರಾತುರಿಯಲ್ಲಿ ಒತ್ತಡದಲ್ಲಿದ್ದ ಅನಿಲವನ್ನು ಖಾಲಿಯಿದ್ದ ಟ್ಯಾಂಕಿಗೆ ವರ್ಗಾಯಿಸಲು ಪ್ರಯತ್ನಿಸ ಲಾಯಿತು. ಆದರೆ ದುರಾದೃಷ್ಟ ವಶಾತ್ ಅಲ್ಲಿನ ಪೈಪ್ ಲೈನ್ ಕೂಡಾ ಬ್ಲಾಕ್ ಆಗಿದ್ದ ಕಾರಣ ಖಾಲಿ ಟ್ಯಾಂಕಿಗೆ ವಿಷಾನಿಲವನ್ನು ವರ್ಗಾಯಿಸುವ ಕೆಲಸ ಸಫಲವಾಗಲಿಲ್ಲ.

ಜೊತೆಗೆ ಶೀತಲೀಕೃತ ವ್ಯವಸ್ಥೆಯೂ ಕೈಕೊಟ್ಟ ಕಾರಣ ಟ್ಯಾಂಕಿನ ಉಷ್ಣತೆ ಒಂದೇ ಸಮನೆ ಏರಿ ಸೇಫ್ಟಿ ವಾಲ್ವು ಓಪನ್ ಆಗಿ ಅನಿಲ ಸೋಲಿಕೆ
ಯಾಗಲು ಪಾರಂಭಿಸಿತು. ವಿಷಾನಿಲವನ್ನು ದುರ್ಬಲಗೊಳಿಸುವ ಮುಂದಿನ ಸರದಿಯಾಗಿ ವಿಷಾನಿಲವನ್ನು ಕ್ಯಾಸ್ಟಿಕ್ ಸೋಡಾದೊಂದಿಗೆ
ಬೆರೆಸುವ ವ್ಯವಸ್ಥೆ ಕುಡಾ ಕಾರ್ಯನಿರ್ವಹಿಸಲಿಲ್ಲ ಹಾಗೆ ಕೊನೆಯದಾಗಿದ್ದ ಚಿಮಿಣಿಯಲ್ಲಿ ಬೆಂಕಿ ಹಚ್ಚುವ ವ್ಯವಸ್ಥೆ ಕೂಡ ನಿರ್ವಹಣೆಗಾಗಿ ನಿಲ್ಲಿಸಿದ ಪರಿಣಾಮ ಸೋರಿಕೆಯಾದ ಅನಿಲ ಸೀದಾ ವಾತಾವರಣದಲ್ಲಿ ಸೇರಿಕೊಂಡು ದೊಡ್ಡ ಮಟ್ಟದಲ್ಲಿ ಒಂದು ದುರಂತ ವನ್ನೇ ಸೃಷ್ಟಿಸಿತ್ತು.

ವಿಷಾನಿಲ ಸೋರಿಕೆಯಾದ ಸಮಯದಲ್ಲಿ ನಗರ ದಲ್ಲ ಮಳೆಯಾಗುತ್ತಿದ್ದ ಕಾರಣ ಸಾವಿನ ಸಂಖ್ಯೆ ಸಣ್ಣ ಮಟ್ಟಿಗೆ ಕಡಿಮೆಯಾಗಿರಬಹುದಷ್ಟೆ. ಒಟ್ಟಿನಲ್ಲಿ ಕಾರ್ಖಾನೆ ಕಾರ್ಮಿಕರ, ಅಧಿಕಾರಿಗಳ, ಆಡಳಿತವರ್ಗದ ಮತ್ತು ಅಲ್ಲಿನ ಸರಕಾರಗಳ ಬೇಜವಾಬ್ದಾರಿಯಿಂದಾಗಿ ಒಂದು ದೊಡ್ಡ ದುರಂತವೇ ನಡೆದು ಹೋಯಿತು.

ಇದನ್ನೂ ಓದಿ: Kannadacolumn