ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಪಂದ್ಯದ ಭಾರತ ತಂಡದಲ್ಲಿ ಒಬ್ಬ ಕನ್ನಡಿಗನೂ ಇಲ್ಲದ್ದು ಕನ್ನಡಿಗರಲ್ಲಿ ನಿರಾಸೆ ಮೂಡಿಸಿತ್ತು. ಆಯ್ಕೆಯಾಗಿದ್ದ ಕೆ.ಎಲ್.ರಾಹುಲ್ ಮತ್ತು ಮನೀಶ್‌ಪಾಂಡೆ ಹನ್ನೊಂದು ಮಂದಿಯಲ್ಲಿ ಆಯ್ಕೆಯಾಗದೇ ಕನ್ನಡಿಗ ರಹಿತ ಭಾರತ ತಂಡದ
ಆಟವನ್ನು ನಾವುಗಳು ನೋಡುವಂತಾಯಿತು.
ಕೆ.ಎಲ.ರಾಹುಲ್ ಸದ್ಯಕ್ಕಿರುವ ನಾಡಿನ ಭರವಸೆಯ ಆಟಗಾರ. ಭಾರತ ತಂಡವೇ ಆದರೂ ಅದರಲ್ಲಿ ನಮ್ಮ ಕನ್ನಡಿಗರ ಪಾಲನ್ನು ಬಯಸುವುದು ನಮ್ಮೆಲ್ಲರ
ಮಾತೃಸ್ವಾರ್ಥ. ಗವಾಸ್ಕರ್ ಅಂಥ ಆಟಗಾರರೇ ನಮ್ಮ ಜಿ.ಆರ್.ವಿಶ್ವನಾಥ್ ಅವರ ಬ್ಯಾಟಿಂಗ್‌ಗೆ ಬೆರಗಾಗಿ ಅವರ ಅಭಿಮಾನಿಯಾಗಿ ಹೋದರು. ಅದು ಎಷ್ಟರ
ಮಟ್ಟಿಗೆ ಎಂದರೆ ವಿಶಿ ಅವರೊಂದಿಗೆ ತಮ್ಮ ತಂಗಿ ಕವಿತಾರನ್ನು ಕೊಟ್ಟು ವಿವಾಹ ಮಾಡಿ ಶಾಶ್ವತ ಸಂಬಂಧ ಬೆಳೆಸಿಕೊಂಡರು. ಅಷ್ಟರ ಮಟ್ಟಿಗೆ ಕನ್ನಡಿಗರು ನಮ್ಮ ದೇಶದ ಕ್ರಿಕೆಟ್‌ನಲ್ಲಿ ನಿರಂತರ ಸ್ಥಾನವನ್ನು ಕಾಪಾಡಿಕೊಂಡು ಮೆರೆದಿದ್ದರು.
1996ರ ಒಂದು ಪಂದ್ಯ ಕನ್ನಡಿಗರ ಪಾಲಿನ ಗತವೈಭವ. ಟೈಟನ್ ಕಪ್. ಬೆಂಗಳೂರಿನಲ್ಲಿ ನಡೆದ ಆ ಒಂದು ಪಂದ್ಯವನ್ನು ಕನ್ನಡಿಗರು ಮರೆಯಲಸಾಧ್ಯ.
ಪಂದ್ಯದ ಕಥೆ ಮುಗಿಯಿತು, ಇನ್ನೆಷ್ಟು ರನ್ನಿನ ಅಂತರದಲ್ಲಿ ಆಸ್ಟ್ರೇಲಿಯಾ ಗೆಲುತ್ತದೆ ಎಂಬುದೊಂದೇ ಲೆಕ್ಕಾಚಾರವಾಗಿತ್ತು. ಆಗೆ 50 ಓವರ್‌ನಲ್ಲಿ ಇನ್ನೂರೈವತ್ತು ಮುನ್ನೂರು ರನ್ನುಗಳನ್ನು ಗಳಿಸುವುದೇ ಒಂದು ಸವಾಲು. ಆಸೀಸ್ ಪಡೆಯಲ್ಲಿ ವಾ ಸೋದರರು, ಮಾರ್ಕ್ ಟೇಲರ್, ಮೈಕಲ್ ಬೇವನ್, ಸ್ಟುವಟ್, ಮೈಕಲ್ ಸ್ಲೇಟರ್‌ರಂಥ ಬಲಿಷ್ಠ ಪಡೆಯನ್ನು ಕೇವಲ 215 ರನ್ನುಗಳಿಗೆ ನಿಯಂತ್ರಿಸುತ್ತಾರೆ ನಮ್ಮ ಬೌಲರ್‌ಗಳು.
ಆದರೆ ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತ ಕೇವಲ 164 ರನ್ನಿಗೆ ಎಂಟನೇ ವಿಕೆಟ್ ರೂಪದಲ್ಲಿ ನಾಯಕ ಸಚಿನ್ 88 ರನ್ ಗಳಿಸಿ ಔಟಾಗಿ ತಂಡ
ಸೋಲಿನಂಚಿನಲ್ಲಿ ನಿಲ್ಲುತ್ತದೆ. ಆಗಲೇ ಇಡೀ ಕ್ರೀಡಾಂಗಣದಲ್ಲಿ ಸೂತಕ ಮೌನ ಆವರಿಸುತ್ತದೆ. ಆಗ ಗೆಲ್ಲಲು ಭಾರತಕ್ಕೆ ಬೇಕಿರುವುದು 47 ಚೆಂಡುಗಳಲ್ಲಿ 51
ರನ್ನುಗಳು. ಆದರೆ ಕ್ರೀಸಿನಲ್ಲಿ ನಿಂತಿದ್ದು ಕನ್ನಡಿಗರೇ ಆದ ಮೈಸೂರು ಎಕ್ಸ್‌ಪ್ರೆಸ್ ಜಾವಗಲ್ ಶ್ರೀನಾಥ್ ಮತ್ತು ಜಂಬೋ ಅನಿಲ್ ಕುಂಬ್ಳೆ. ಇಬ್ಬರಲ್ಲಿ ಒಬ್ಬರು ಔಟಾದರೆ ಕೊನೆಯವರಾಗಿದ್ದದ್ದು ವೆಂಕಟೇಶ್ ಪ್ರಸಾದ್. ಈ ಮೂವರೂ 47 ರನ್ನುಗಳನ್ನು ಅದೂ 51 ಬಾಲ್‌ಗಳಲ್ಲಿ ಬಾರಿಸುತ್ತಾರೆಂಬುದು ಕನಸಿನ ಮಾತಾಗಿತ್ತು.
ಒಂದೊಂದು ಬಾಲೂ ಔಟಾಗುವ ಎಸೆತಗಳೇ ಆಗಿದ್ದವು. ಅದೂ ಆಸಿಸ್‌ನ ಯಮವೇಗಿ ಗ್ಲೆನ್ ಮೆಗ್ರಾತ್, ಲೆಗ್ ಸ್ಪಿನ್ನರ್ ಬ್ರಾಡ್‌ಹಾಗ್ ಅವರಿಗೆ ವಿಕೆಟ್‌ಗಳು ತರಗೆಲೆಗಳೇ ಆಗಿದ್ದವು. ಆದರೆ ಅಂದು ನಡೆದದ್ದು ಮಾತ್ರ ಅದ್ಭುತ ಮತ್ತು ಪವಾಡ. ಏಕೆಂದರೆ ಇದು ಕನ್ನಡಿಗರ ನೆಲ ಕನ್ನಡಿಗರ ಆಟ ಮತ್ತು ಕನ್ನಡಿಗರ ಬೆಂಬಲವೇ ಆಗಿದ್ದಿತ್ತು. ನೋಡ ನೋಡುತ್ತಿದ್ದಂತೆ ಶ್ರೀನಾಥ್ ಮತ್ತು ಕುಂಬ್ಳೆ ಎಲ್ಲಾ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿ 7 ಚೆಂಡುಗಳು ಉಳಿದಿರುವಾಗಲೇ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಈ ಇಬ್ಬರು ಕನ್ನಡಿಗರಿಗೆ ಛಲ, ಸ್ಪೂರ್ತಿ, ಉತ್ತೇಜನ, ಹುಮ್ಮಸ್ಸು ನೀಡಿದ್ದು ನೆರೆದಿದ್ದ ಕನ್ನಡಿಗ ಅಭಿಮಾನಿಗಳಾದರೂ ಇಮ್ಮಡಿ ಗೊಳಿಸಿದ್ದು ಮಾತ್ರ ಕುಂಬ್ಳೆ ಮತ್ತು ಶ್ರೀನಾಥ್ ಅವರ ಹೆತ್ತಮ್ಮಂದಿರ ಉಪಸ್ಥಿತಿ.
ಇದಕ್ಕಿಂತ ಮುಖ್ಯವಾಗಿ ಹೇಳಬೇಕಾದ ಸಂಗತಿಯೆಂದರೆ, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಮೈದಾನದಲ್ಲಿ ಅಂಕಣಕ್ಕಿಳಿದಿದ್ದ ಹನ್ನೊಂದು ಆಟಗಾರರ ಪೈಕಿ ಅರ್ಧಕ್ಕೂ ಹೆಚ್ಚು ಆಟಗಾರರು ಇದ್ದದ್ದು ಕನ್ನಡಿಗರೇ !. ಅಂದರೆ ಹನ್ನೊಂದರಲಿ ಬರೋಬ್ಬರಿ ಆರು ಮಂದಿ ನಮ್ಮ ಹೆಮ್ಮೆಯ ಕನ್ನಡಿಗರು. ಆರಂಭಿಕ ಸುಜಿತ್ ಸೋಮ ಸುಂದರ್, ರಾಹುಲ್ ದ್ರಾವಿಡ್, ಆಲ್ ರೌಂಡರ್ ಸುನೀಲ್ ಜೋಶಿ, ಬೌಲರ್‌ಗಳಾಗಿ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ. ಕರ್ನಾಟಕ ಕ್ರಿಕೆಟ್ ಇತಿಹಾಸದಲ್ಲಿ ಈ ಟೈಟನ್ ಕಪ್ ‘ಸುವರ್ಣಯುಗ’ ಎಂದೇ ಹೇಳಬಹುದು.
ಅದೇ ಕೊನೆ, ಅಂಥ ತಂಡವನ್ನು ಕನ್ನಡಿಗರು ಮತ್ತೆ ನೋಡಿಲ್ಲ. ಕ್ರಿಕೆಟ್ ಒಂದು ದೇಶಾಭಿಮಾನದ ಆಟವಾಗಿದ್ದರೂ ಪ್ರಾದೇಶಿಕತೆಯ ವೈವಿಧ್ಯತೆಯನ್ನೊಳ ಗೊಂಡ ನಮ್ಮಲ್ಲಿ ನಮ್ಮ ರಾಜ್ಯದವರು ದೇಶದ ಗೆಲುವಲ್ಲಿ ಮೆರೆಯಲಿ, ನಮ್ಮ ರಾಜ್ಯದವ ಮಿಂಚಲಿ’ ಎಂಬ ಸಣ್ಣ ಸ್ವಾರ್ಥ ಎಲ್ಲಾ ರಾಜ್ಯಗಳಲ್ಲೂ ಇರುತ್ತದೆ.
1985ರಲ್ಲಿ ಸದಾನಂದ ವಿಶ್ವನಾಥ್ ಅವರು ಕೊನೆಯ ಕನ್ನಡಿಗರಾಗಿ ಭಾರತ ತಂಡದಲ್ಲಿ ಆಡಿದ ನಂತರ ಮತ್ತೊಬ್ಬ ಕನ್ನಡಿಗ ಭಾರತವನ್ನು ಪ್ರತಿನಿಽಸಲು
ಬರೋಬ್ಬರಿ 5 ವರ್ಷಗಳು ಬೇಕಾಯಿತು. ಅಂದರೆ ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಪಂದ್ಯದ ಭಾರತ ತಂಡದಲ್ಲಿ ಒಬ್ಬ ಕನ್ನಡಿಗನೂ ಇಲ್ಲದ್ದು ಕನ್ನಡಿಗರಲ್ಲಿ ನಿರಾಸೆ ಮೂಡಿಸಿತ್ತು. ಆಯ್ಕೆಯಾಗಿದ್ದ ಕೆ.ಎಲ್.ರಾಹುಲ್ ಮತ್ತು ಮನೀಶ್‌ಪಾಂಡೆ ಹನ್ನೊಂದು ಮಂದಿಯಲ್ಲಿ
ಆಯ್ಕೆಯಾಗದೇ ಕನ್ನಡಿಗ ರಹಿತ ಭಾರತತಂಡದ ಆಟವನ್ನು ನಾವುಗಳು ನೋಡುವಂತಾಯಿತು.
ಕೆ.ಎಲ್.ರಾಹುಲ್ ಸದ್ಯಕ್ಕಿರುವ ನಾಡಿನ ಭರವಸೆಯ ಆಟಗಾರ. ಭಾರತ ತಂಡವೇ ಆದರೂ ಅದರಲ್ಲಿ ನಮ್ಮ ಕನ್ನಡಿಗರ ಪಾಲನ್ನು ಬಯಸುವುದು ನಮ್ಮೆಲ್ಲರ
ಮಾತೃಸ್ವಾರ್ಥ. ಗವಾಸ್ಕರ್ ಅಂಥ ಆಟಗಾರರೇ ನಮ್ಮ ಜಿ.ಆರ್.ವಿಶ್ವನಾಥ್ ಅವರ ಬ್ಯಾಟಿಂಗ್‌ಗೆ ಬೆರಗಾಗಿ ಅವರ ಅಭಿಮಾನಿಯಾಗಿ ಹೋದರು. ಅದು ಎಷ್ಟರ
ಮಟ್ಟಿಗೆ ಎಂದರೆ ವಿಶಿ ಅವರೊಂದಿಗೆ ತಮ್ಮ ತಂಗಿ ಕವಿತಾರನ್ನು ಕೊಟ್ಟು ವಿವಾಹ ಮಾಡಿ ಶಾಶ್ವತ ಸಂಬಂಧ ಬೆಳೆಸಿಕೊಂಡರು. ಅಷ್ಟರ ಮಟ್ಟಿಗೆ ಕನ್ನಡಿಗರು ನಮ್ಮ ದೇಶದ ಕ್ರಿಕೆಟ್‌ನಲ್ಲಿ ನಿರಂತರ ಸ್ಥಾನವನ್ನು ಕಾಪಾಡಿಕೊಂಡು ಮೆರೆದಿದ್ದರು.
1996ರ ಒಂದು ಪಂದ್ಯ ಕನ್ನಡಿಗರ ಪಾಲಿನ ಗತವೈಭವ. ಟೈಟನ್ ಕಪ್. ಬೆಂಗಳೂರಿನಲ್ಲಿ ನಡೆದ ಆ ಒಂದು ಪಂದ್ಯವನ್ನು ಕನ್ನಡಿಗರು ಮರೆಯಲಸಾಧ್ಯ.
ಪಂದ್ಯದ ಕಥೆ ಮುಗಿಯಿತು, ಇನ್ನೆಷ್ಟು ರನ್ನಿನ ಅಂತರದಲ್ಲಿ ಆಸ್ಟ್ರೇಲಿಯಾ ಗೆಲುತ್ತದೆ ಎಂಬುದೊಂದೇ ಲೆಕ್ಕಾಚಾರವಾಗಿತ್ತು. ಆಗೆ 50 ಓವರ್‌ನಲ್ಲಿ ಇನ್ನೂರೈವತ್ತು ಮುನ್ನೂರು ರನ್ನುಗಳನ್ನು ಗಳಿಸುವುದೇ ಒಂದು ಸವಾಲು. ಆಸೀಸ್ ಪಡೆಯಲ್ಲಿ ವಾ ಸೋದರರು, ಮಾರ್ಕ್ ಟೇಲರ್, ಮೈಕಲ್ ಬೇವನ್, ಸ್ಟುವಟ್, ಮೈಕಲ್ ಸ್ಲೇಟರ್‌ರಂಥ ಬಲಿಷ್ಠ ಪಡೆಯನ್ನು ಕೇವಲ 215 ರನ್ನುಗಳಿಗೆ ನಿಯಂತ್ರಿಸುತ್ತಾರೆ ನಮ್ಮ ಬೌಲರ್‌ಗಳು.
ಆದರೆ ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತ ಕೇವಲ 164 ರನ್ನಿಗೆ ಎಂಟನೇ ವಿಕೆಟ್ ರೂಪದಲ್ಲಿ ನಾಯಕ ಸಚಿನ್ 88 ರನ್ ಗಳಿಸಿ ಔಟಾಗಿ ತಂಡ
ಸೋಲಿನಂಚಿನಲ್ಲಿ ನಿಲ್ಲುತ್ತದೆ. ಆಗಲೇ ಇಡೀ ಕ್ರೀಡಾಂಗಣದಲ್ಲಿ ಸೂತಕ ಮೌನ ಆವರಿಸುತ್ತದೆ. ಆಗ ಗೆಲ್ಲಲು ಭಾರತಕ್ಕೆ ಬೇಕಿರುವುದು 47 ಚೆಂಡುಗಳಲ್ಲಿ 51
ರನ್ನುಗಳು. ಆದರೆ ಕ್ರೀಸಿನಲ್ಲಿ ನಿಂತಿದ್ದು ಕನ್ನಡಿಗರೇ ಆದ ಮೈಸೂರು ಎಕ್ಸ್‌ಪ್ರೆಸ್ ಜಾವಗಲ್ ಶ್ರೀನಾಥ್ ಮತ್ತು ಜಂಬೋ ಅನಿಲ್ ಕುಂಬ್ಳೆ. ಇಬ್ಬರಲ್ಲಿ ಒಬ್ಬರು ಔಟಾದರೆ ಕೊನೆಯವರಾಗಿದ್ದದ್ದು ವೆಂಕಟೇಶ್ ಪ್ರಸಾದ್. ಈ ಮೂವರೂ 47 ರನ್ನುಗಳನ್ನು ಅದೂ 51 ಬಾಲ್‌ಗಳಲ್ಲಿ ಬಾರಿಸುತ್ತಾರೆಂಬುದು ಕನಸಿನ ಮಾತಾ ಗಿತ್ತು. ಒಂದೊಂದು ಬಾಲೂ ಔಟಾಗುವ ಎಸೆತಗಳೇ ಆಗಿದ್ದವು. ಅದೂ ಆಸಿಸ್‌ನ ಯಮವೇಗಿ ಗ್ಲೆನ್ ಮೆಗ್ರಾತ್, ಲೆಗ್ ಸ್ಪಿನ್ನರ್ ಬ್ರಾಡ್‌ಹಾಗ್ ಅವರಿಗೆ ವಿಕೆಟ್‌ಗಳು ತರಗೆಲೆಗಳೇ ಆಗಿದ್ದವು. ಆದರೆ ಅಂದು ನಡೆದದ್ದು ಮಾತ್ರ ಅದ್ಭುತ
ಮತ್ತು ಪವಾಡ. ಏಕೆಂದರೆ ಇದು ಕನ್ನಡಿಗರ ನೆಲ ಕನ್ನಡಿಗರ ಆಟ ಮತ್ತು ಕನ್ನಡಿಗರ ಬೆಂಬಲವೇ ಆಗಿದ್ದಿತ್ತು. ನೋಡ ನೋಡುತ್ತಿದ್ದಂತೆ ಶ್ರೀನಾಥ್ ಮತ್ತು ಕುಂಬ್ಳೆ ಎಲ್ಲಾ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿ 7 ಚೆಂಡುಗಳು ಉಳಿದಿರುವಾಗಲೇ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಈ ಇಬ್ಬರು ಕನ್ನಡಿಗರಿಗೆ ಛಲ, ಸ್ಫೂರ್ತಿ, ಉತ್ತೇಜನ, ಹುಮ್ಮಸ್ಸು ನೀಡಿದ್ದು ನೆರೆದಿದ್ದ ಕನ್ನಡಿಗ ಅಭಿಮಾನಿಗಳಾದರೂ ಇಮ್ಮಡಿಗೊಳಿಸಿದ್ದು ಮಾತ್ರ ಕುಂಬ್ಳೆ ಮತ್ತು ಶ್ರೀನಾಥ್ ಅವರ ಹೆತ್ತಮ್ಮಂದಿರ ಉಪಸ್ಥಿತಿ. ಇದಕ್ಕಿಂತ ಮುಖ್ಯವಾಗಿ ಹೇಳಬೇಕಾದ ಸಂಗತಿಯೆಂದರೆ, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಮೈದಾನದಲ್ಲಿ ಅಂಕಣಕ್ಕಿಳಿದಿದ್ದ ಹನ್ನೊಂದು ಆಟಗಾರರ ಪೈಕಿ ಅರ್ಧಕ್ಕೂ ಹೆಚ್ಚು ಆಟಗಾರರು ಇದ್ದದ್ದು ಕನ್ನಡಿಗರೇ !.
ಅಂದರೆ ಹನ್ನೊಂದರಲಿ ಬರೋಬ್ಬರಿ ಆರು ಮಂದಿ ನಮ್ಮ ಹೆಮ್ಮೆಯ ಕನ್ನಡಿಗರು. ಆರಂಭಿಕ ಸುಜಿತ್ ಸೋಮ ಸುಂದರ್, ರಾಹುಲ್ ದ್ರಾವಿಡ್, ಆಲ್ ರೌಂಡರ್ ಸುನೀಲ್ ಜೋಶಿ, ಬೌಲರ್‌ಗಳಾಗಿ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ. ಕರ್ನಾಟಕ ಕ್ರಿಕೆಟ್ ಇತಿಹಾಸದಲ್ಲಿ ಈ ಟೈಟನ್ ಕಪ್
‘ಸುವರ್ಣಯುಗ’ ಎಂದೇ ಹೇಳಬಹುದು. ಅದೇ ಕೊನೆ, ಅಂಥ ತಂಡವನ್ನು ಕನ್ನಡಿಗರು ಮತ್ತೆ ನೋಡಿಲ್ಲ. ಕ್ರಿಕೆಟ್ ಒಂದು ದೇಶಾಭಿಮಾನದ ಆಟವಾಗಿದ್ದರೂ
ಪ್ರಾದೇಶಿಕತೆಯ ವೈವಿಧ್ಯತೆಯನ್ನೊಳಗೊಂಡ ನಮ್ಮಲ್ಲಿ ನಮ್ಮ ರಾಜ್ಯದವರು ದೇಶದ ಗೆಲುವಲ್ಲಿ ಮೆರೆಯಲಿ, ನಮ್ಮ ರಾಜ್ಯದವ ಮಿಂಚಲಿ’ ಎಂಬ ಸಣ್ಣ ಸ್ವಾರ್ಥ ಎಲ್ಲಾ ರಾಜ್ಯಗಳಲ್ಲೂ ಇರುತ್ತದೆ.
1985ರಲ್ಲಿ ಸದಾನಂದ ವಿಶ್ವನಾಥ್ ಅವರು ಕೊನೆಯ ಕನ್ನಡಿಗರಾಗಿ ಭಾರತ ತಂಡದಲ್ಲಿ ಆಡಿದ ನಂತರ ಮತ್ತೊಬ್ಬ ಕನ್ನಡಿಗ ಭಾರತವನ್ನು ಪ್ರತಿನಿಽಸಲು
ಬರೋಬ್ಬರಿ ೫ ವರ್ಷಗಳು ಬೇಕಾಯಿತು. ಅಂದರೆ 1990ರಲ್ಲಿ ಅನಿಲ್ ಕುಂಬ್ಳೆ ಆಯ್ಕೆಯಾಗುವವರೆಗೂ 5 ವರ್ಷಗಳು ಕನ್ನಡಿಗರಿಲ್ಲದ ಭಾರತ ಕ್ರಿಕೆಟ್ ತಂಡವಿತ್ತು. ಆದರೆ, ಅಲ್ಲಿಂದ ಕನ್ನಡಿಗರು ಸಾಲುಸಾಲಾಗಿ ತಮ್ಮ ಶ್ರಮ, ಪ್ರತಿಭೆಯ ಮೂಲಕ ಭಾರತ ತಂಡವನ್ನು ಸೇರಿಕೊಳ್ಳುತ್ತಾರೆ. ಜಾವಗಲ್ ಶ್ರೀನಾಥ್, ಸುನಿಲ್ ಜೋಶಿ, ವೆಂಕಟೇಶ್ ಪ್ರಸಾದ್, ರಾಹುಲ್ ದ್ರಾವಿಡ್, ಡೇವಿಡ್ ಜಾನ್ಸನ್, ದೊಡ್ಡ ಗಣೇಶ್ (ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಾಲ್ಕೂ ಮಂದಿ ವೇಗಿಗಳೂ ಕನ್ನಡಿಗರೇ) ವಿಜಯ ಭಾರದ್ವಾಜ್, ಅಭಿಮನ್ಯು ಮಿಥುನ್, ವಿನಯ ಕುಮಾರ್, ಸ್ಟುವರ್ಟ್ ಬಿನ್ನಿ, ಕೆ.ಎಲ.ರಾಹುಲ್, ಕರುಣ್ ನಾಯರ್, ಮಯಾಂಕ್ ಅಗರವಾಲ, ರಾಬಿನ್ ಉತ್ತಪ್ಪ, ಶ್ರೀನಾಥ್ ಅರವಿಂದ್, ಮನೀಷ್‌ಪಾಂಡೆ ಮತ್ತು ಈಗ ಪ್ರಸಿದ್ಧ ಕೃಷ್ಣ.
ಕನ್ನಡಿಗ ಕ್ರಿಕೆಟ್ ಅಭಿಮಾನಿಗಳ ಭಾಷೆಯಲ್ಲಿ ಹೇಳಬೇಕೆಂದರೆ ಶ್ರೀನಾಥ್, ಕುಂಬ್ಳೆ , ದ್ರಾವಿಡ್, ವೆಂಕಿ ಈ ನಾಲ್ವರೂ ದಶಕಗಳ ಕಾಲ ಭಾರತ ತಂಡದಲ್ಲಿ ಕಚ್ಚಿಕೊಂಡಿದ್ರು. ನಂತರದಲ್ಲಿ ಒಬ್ಬೊಬ್ಬರಾಗಿ ನಿವೃತ್ತಿಯಾಗಿ ಕೊನೆಯದಾಗಿ ರಾಹುಲ್ ದ್ರಾವಿಡ್ ಅವರು 2012ರಲ್ಲಿ ನಿವೃತ್ತಿಯಾದ ನಂತರ ಯಾವ ಕನ್ನಡಿಗ ಆಟಗಾರರೂ ಕಚ್ಚಿಕೊಳ್ಳಲಿಲ್ಲ. ಅಲ್ಲಿಂದ ಕನ್ನಡಿಗರಿಲ್ಲದ ಭಾರತೀಯ ಕ್ರಿಕೆಟನ್ನೇ ನೋಡು ವಂತಾಯಿತು. ಟೆಸ್ಟ್‌ನಲ್ಲಿ ತ್ರಿಶತಕ ಬಾರಿಸಿದ ಎರಡನೇ ಆಟಗಾರ ಎನಿಸಿದ ಕರುಣ್ ನಾಯರ್ ಅವರೇ ಭಾರತೀಯ ತಂಡದಲ್ಲಿ ತಳವೂರಲಿಲ್ಲ. ಆಗೆ ಕನ್ನಡಿಗರು ಕಚ್ಚಿಕೊಳ್ಳಲು ಅಂದಿನ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ಕನ್ನಡಿಗ ಜಿ.ಆರ್.ವಿಶ್ವನಾಥ್ ಮತ್ತು ನಾಯಕನಾಗಿದ್ದ ದಕ್ಷಿಣದ ಅಜರುದ್ದೀನ್ ಅವರ ಒಲವು ವಿಶ್ವಾಸ ನಮ್ಮ ಕನ್ನಡಿಗರಿಗಿದ್ದು ಅದಕ್ಕೆ ತಕ್ಕಂತೆ ಸಮರ್ಥ ಆಟವನ್ನೂ ಆಡಿಕೊಂಡು ಬಂದಿದ್ದರು.
ನಂತರದಲ್ಲಿ ಕನ್ನಡಿಗರಲ್ಲಿ ಬಲವಾದ ಭರವಸೆ ಮೂಡಿಸಿದ್ದು ಕಣ್ಣೂರು ಲೋಕೇಶ್ ರಾಹುಲ್. ಅವರಿಗೆ ನಾಯಕರಾದ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೋಹ್ಲಿಗೆ ಹತ್ತಿರದ ಒಡನಾಟವಿದ್ದದರಿಂದ ರಾಹುಲ್‌ಗೆ ನಿರಂತರ ಅವಕಾಶಗಳು ದೊರಕಿದವು. ಒಂದು ಬಾರಿ ಕಳಪೆ ಫಾರಂನಲ್ಲಿದ್ದ ರಾಹುಲ್‌ರನ್ನು ಹೊರ ಉಳಿಸುತ್ತಾರೆ ಎಂದು ಕನ್ನಡಿಗರು ಅಂದುಕೊಂಡಾಗಲೆ ನಾಯಕರ ವಿಶ್ವಾಸಗಳಿಸಿದ ರಾಹುಲ್ ಮತ್ತೆ ಪುಟಿದೆದ್ದು ಆಡಿ ತೋರಿಸುತ್ತಿದ್ದರು. ಧೋನಿಯವರು ನಿವೃತ್ತಿಯಾದ ಮೇಲೆ ರಾಹುಲ್ ವಿಕೆಟ್ ಕೀಪಿಂಗ್ ಅವಕಾಶವನ್ನೂ ಸದುಪಯೋಗಪಡಿಸಿಕೊಂಡು ತಂಡದಲ್ಲಿ ಮಹತ್ವದ ಪಾತ್ರವಹಿಸಿಕೊಂಡು ಬಂದರು. ಹೀಗೆ ರಾಹುಲ್ ಭಾರತ ತಂಡದಲ್ಲಿ ಭದ್ರಬುನಾದಿ ಕಟ್ಟಿಕೊಂಡು ಇನ್ನೂ ಐದಾರು ವರ್ಷ (ಈಗ ವಯಸ್ಸು 28) ಆಡಿ ಜಿ.ಆರ್. ವಿಶ್ವನಾಥ್, ರಾಹುಲ್ ದ್ರಾವಿಡರ ನಂತರ ಕರ್ನಾಟಕದಿಂದ ಅಗ್ರಪಂಕ್ತಿ ಬ್ಯಾಟ್ಸ್ಮನ್ ಆಗಿ ಕಂಗೊಳಿಸುತ್ತಾರೆಂಬ ವಿಶ್ವಾಸ ಮೂಡಿಸಿದ್ದರು.
ಆದರೆ ಕ್ರಿಕೆಟ್‌ನಲ್ಲೂ ಕಾಲ ಮೊದಲಿನಂತಿಲ್ಲ. ನಮ್ಮ ದೇಶದ ಕ್ರಿಕೆಟ್‌ನಲ್ಲಿ ಭಯಂಕರ ಪೈಪೋಟಿ ಇದೆ. ಮೂವತ್ತು ರಾಜ್ಯಗಳಿಂದಲೂ ಹೆಚ್ಚೆಚ್ಚು ಪ್ರತಿಭಾವಂತರು
ಆಯ್ಕೆದಾರರ ಗಮನ ಸೆಳೆಯುತ್ತಾರೆ. ಒಂದು ಪಂದ್ಯದಲ್ಲಿ ಒಬ್ಬ ಆಟಗಾರ ವಿಫಲನಾದರೆ ಆತನ ಬದಲಿ ಆಟಗಾರರಾಗಿ ಹತ್ತಾರು ಮಂದಿ ಸಾಲಿನಲ್ಲಿ ಕಾಯುತ್ತಾ
ನಿಂತಿರುತ್ತಾರೆ. ಹೀಗಾಗಿ ಒಂದು ಅಥವಾ ಎರಡು ಪಂದ್ಯಗಳಲ್ಲಿ ಅವಕಾಶ ಸಿಕ್ಕರೆ ಅದರ ವಿರಾಟ ಪ್ರದರ್ಶನ ನೀಡಬೇಕು. ಇಲ್ಲದಿದ್ದರೆ ಆತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪುನಃ ಆಯ್ಕೆಯಾಗುವುದು ಅಷ್ಟು ಸುಲಭವಲ್ಲ.
ಇಂಥ ಪರಿಸ್ಥಿತಿಯಲ್ಲಿ ಕೊಟ್ಟ ಕುದುರೆಯನ್ನು ಏರಲೇ ಬೇಕು ಎಂಬಂತಾಗಿದೆ. ಹೀಗಿರುವಾಗ ನಾಡಿನ ಸೌಭಾಗ್ಯವೆಂಬಂತೆ ಕೆ.ಎಲ್.ರಾಹುಲ್ ದೇಶಿ ಮತ್ತು
ವಿದೇಶಗಳಲ್ಲೂ ಆರಂಭಿಕನಾಗಿ, ಮೂರನೇ ಕ್ರಮಾಂಕವನಾಗಿ ವಿಕೆಟ್ ಕೀಪರ್ ಆಗಿ ಉತ್ತಮ ಪ್ರದರ್ಶನ ನೀಡುತ್ತಾ, ಕಾಲಕಾಲಕ್ಕೆ ಐವತ್ತು, ನೂರುಗಳನ್ನು ಗಳಿಸುತ್ತಾ ತಂಡದಲ್ಲಿ ಶಾಶ್ವತ ಆಟಗಾರನಾಗುವತ್ತ ಕ್ರಿಕೆಟ್ ಪ್ರೇಮಿಗಳಲ್ಲಿ, ಹೆಚ್ಚಾಗಿ ಕನ್ನಡಿಗರಲ್ಲಿ ಭರವಸೆ ಮೂಡಿಸಿದ್ದಾರೆ.
ಆದರೆ ಕಳೆದ ಇಂಗ್ಲೆಂಡ್ ವಿರುದ್ಧದ ನಾಲ್ಕೂ ಟೆಸ್ಟ್ ಪಂದ್ಯಗಳಿಗೆ ಆಯ್ಕೆಯಾದರೂ ನಾಲ್ಕೂ ಪಂದ್ಯಗಳಲ್ಲಿ ಬೆಂಚ್ ಆಟಗಾರನಾಗಿ ಕೂರುವಂತಾಯಿತು. ಆ ನಂತರ ಟಿ-ಟ್ವೆಂಟಿ ಪಂದ್ಯಾವಳಿಯ ಮೊದಲ ನಾಲ್ಕೂ ಪಂದ್ಯಾವಳಿಯಲ್ಲಿ ಅವಕಾಶ ದೊರಕಿದರೂ ಗಳಿಸಿದ್ದು ಮಾತ್ರ ೧-೦-೦-೧೪ ರನ್‌ಗಳು. ಅಲ್ಲಿಗೆ ರಾಹುಲ್ ಕಥೆ ಮುಗಿಯಿತು ಎಂದೇ ಕನ್ನಡಿಗರು ಭಾವಿಸುವಂತಾಗಿತ್ತು. ಆಗಿದ್ದರೂ ವಿರಾಟ್ ಕೊಯ್ಲಿಯ ವಿಶ್ವಾಸದಿಂದ ಮೊದಲ ಏಕದಿನ ಪಂದ್ಯದಲ್ಲಿ ಅವಕಾಶ ಪಡೆದುಕೊಂಡು ಐದನೇ ಕ್ರಮಾಂಕದಲ್ಲಿ ಆಟಕ್ಕಿಳಿದು ವೇಗದ 62 ರನ್ ಬಾರಿಸಿ ತಂಡಕ್ಕೆ ಆಸರೆಯಾಗಿದ್ದು ಕನ್ನಡಿಗರಲ್ಲಿ ಹೊಸ ಭರವಸೆ ಮೂಡಿಸಿತ್ತು.
ರಾಹುಲ್‌ಗೆ ಈ ಮಟ್ಟದ ವಿಫಲ ಪ್ರದರ್ಶನಕ್ಕೆ ಸ್ವಯಂಕೃತ ನಡವಳಿಕೆಗಳೂ ಕಾರಣವೆಂದರೆ ತಪ್ಪಲ್ಲ. ಅನವಶ್ಯಕ ವಿವಾದಗಳನ್ನು ಸೃಷ್ಟಿಸಿಕೊಂಡರು. ಅಮಾನತು ಶಿಕ್ಷೆಗೆ ಒಳಗಾಗಿ ಹಿರಿಯ ಆಟಗಾರರ ಸಹಾನುಭೂತಿಯಿಂದ ಪಾರಾದರು. ಆಟವನ್ನು ಮೀರಿ ನಾನು ಇನ್ನೇನೋ ಎಂದು ತೋರಿಸಿಕೊಳ್ಳಲಾ ರಂಭಿಸಿದರು. ಪರಿಣಾಮ ಪ್ರಚಲತೆ ಮತ್ತು ಪಂದ್ಯಗಳನ್ನೂ ಕಳೆದುಕೊಳ್ಳಲಾರಂಭಿಸಿದರು. ಆದರೆ ರಾಜ್ಯವನ್ನು ಪ್ರತಿನಿಧಿಸುವ ಯಾವ ಆಟಗಾರನೇ
ಆಗಲಿ, ತನ್ನನ್ನು ಕನ್ನಡಿಗರು ಗುರುತಿಸುತ್ತಾರೆ, ಪ್ರೀತಿಸುತ್ತಾರೆ, ಅವರ ವಿಶ್ವಾಸ ನಂಬಿಕೆಯನ್ನು ಸಾರ್ಥಕಪಡಿಸೋಣ ಎಂಬ ಮನೋಭಾವನೆಯನ್ನು
ಬೆಳೆಸಿಕೊಳ್ಳಬೇಕಿದೆ. ಕ್ರೀಡಾಂಗಣ ದಲ್ಲಿ ಒಂದು ಪದ ಕನ್ನಡದಲ್ಲಿ ಮಾತನಾಡಿದರೆ ಅಭಿಮಾನಿಗಳು ಪುಳಕಗೊಳ್ಳುತ್ತಾರೆ. ಇದನ್ನು ಆಟಗಾರರು ಮೊದಲು ಮನದಲ್ಲಿ ಸ್ಥಾಪಿಸಿಕೊಂಡು ದೇಶದ ಪರ ಆಡಿ, ನಾಡಿನ ಗೌರವವನ್ನು ಹೆಚ್ಚಿಸುವ ನೈತಿಕ ಹೊಣೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು.
ಕೆ.ಎಲ್.ರಾಹುಲ್ ಮೊದಲು ಅರ್ಥ ಮಾಡಿಕೊಳ್ಳಬೇಕಾದದ್ದು ರಾಹುಲ್ ದ್ರಾವಿಡ್ ಅವರ ಅಚಲತೆ, ಜಂಟಲ್‌ಮನ್ ತನವನ್ನು. ಕುಂಬ್ಳೆ, ಶ್ರೀನಾಥ್ ಅವರ ಛಲ, ಕ್ರೀಡಾ ಗಾಂಭೀರ್ಯವನ್ನು, ಹೆಮ್ಮೆ ಪಡುವಂಥ ಕ್ರೀಡಾ ಮನೋಭಾವವನ್ನು. ಇತ್ತೀಚಿನ ದಿನಗಳಲ್ಲಿ ನಾಲ್ಕು ಪಂದ್ಯಗಳಲ್ಲಿ ಮಿಂಚಿದ ತಕ್ಷಣ ಆಟಗಾರರಿಗೆ ಪ್ರೇಯಸಿಯರು ಸಿನಿಮಾ ನಟಿಯರು ತಗುಲಿಕೊಳ್ಳುವ ಚಾಳಿ – ಶೋಕಿ ಶುರುವಾಗಿದೆ. ಮೊದಲು ಇಂಥ ರೋಗದಿಂದ ಹೊರಬರಬೇಕು. ಬಡತನವಿದ್ದರೂ ಕೂಲಿಮಾಡಿ, ಸಾಲಮಾಡಿ, ಕ್ರಿಕೆಟ್ ಕಿಟ್ ಕೊಡಿಸಿ ಅಯ್ಯೋ ನನ್ನ ಮಗ ಮೊದಲು ಅಂಡರ್ 13, ಅಂಡರ್ 19 ಆಡಿದರೆ ಸಾಕು, ರಣಜಿ ಆಡಿದರೆ ಸಾಕೆಂದು ತಮ್ಮ ಜೀವನವನ್ನೇ ಮಗನ ಕ್ರಿಕೆಟ್ ಭವಿಷ್ಯಕ್ಕೆ ಮುಡಿಪಾಗಿಟ್ಟು ದೇಶಕ್ಕೆ ಕೀರ್ತಿ ತರಲೆಂದು ಕನಸುಕಾಣುತ್ತಾರೆ. ಅಂಥ ಕನಸನ್ನು ನನಸು ಮಾಡುವ ಅವಕಾಶ ಕೆ.ಎಲ್.ರಾಹುಲ್ ಅಂಥವರಿಗೆ ಸಿಕ್ಕಾಗ ಆಟವನ್ನು ಒಂದು ವ್ರತವನ್ನಾಗಿ ಪರಿಗಣಿಸಿ ಆಡಬೇಕಿರುತ್ತದೆ.
ಕ್ರೀಡಾಂಗಣದಲ್ಲಿ ಸರಿಯಾಗಿ ಪ್ರದರ್ಶನ ತೋರಿದರೆ ಹೆಣ್ಣು ಹೊನ್ನು ಮಣ್ಣು ಪ್ರಶಸ್ತಿ ಪುರಸ್ಕಾರಗಳೆ ತಾನಾಗೇ ಒಲಿಯುತ್ತವೆ. ನಾಲ್ಕೂ ವಿಕೆಟ್ಟು ಕಿತ್ತು, ಐವತ್ತು ರನ್ನು ಹೊಡೆದ ತಕ್ಷಣ ವಿಲಾಸಿತನ ಐಷರಾಮಿತನಕ್ಕೆ ಒಳಗಾಗುವುದು ಶೋಭೆಯಲ್ಲ. ದವಡೆಯ ಮೂಳೆ ಮುರಿದರೂ ಬ್ಯಾಂಡೇಜು ಸುತ್ತಿಕೊಂಡು ಕನ್ನಡಕ ಧರಿಸಿಕೊಂಡು ವಿಶ್ವಕ್ರಿಕೆಟಲ್ಲಿ ದಂತಕಥೆಯಾದ ಅನಿಲ್ ಕುಂಬ್ಳೆ , ತನ್ನ ಬಲಗೈನ ವಿಕಲತೆಯನ್ನೇ ಭಯಾನಕ ಲೆಗ್‌ಸ್ಪಿನ್‌ಗೆ ಬಳಸಿಕೊಂಡು ಎದುರಾಳಿಗಳನ್ನು ನಡುಗಿಸುತ್ತಿದ್ದ ಬಿ.ಎಸ್.ಚಂದ್ರಶೇಖರ್ ಅವರ ಸಾಧನೆ ಯಾವುದೇ ಕ್ರಿಕೆಟಿಗನಿಗೆ ಒಂದು ಪಾಠ.
ಕ್ರಿಕೆಟ್ ಆಟಗಾರ ಒಂದು ರೀತಿಯ ಸೈನಿಕರ ಪಾತ್ರದಂತೆ. ಬಲಹೀನತೆಗೆ ಒಳಗಾಗದೆ ನಿರಂತರ ಕ್ಷಮತೆಯನ್ನು ಕಾಪಾಡಿಕೊಳ್ಳಬೇಕಿರುತ್ತದೆ. ಅದರಂತೆ ಧೋನಿ ಸೇನೆಯ ಸಮವಸ ಧರಿಸುವಂತಾಗಿದ್ದು ಒಂದು ದೊಡ್ಡ ಹೆಮ್ಮೆ. ಇಂದಿನ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ನಿರಂತರ ಪ್ರದರ್ಶನ ನೀಡಿದರೆ ಮಾತ್ರ ಉಳಿಗಾಲ. ಅದರಲ್ಲೂ ಬಾಂಬೆ ಕ್ರಿಕೆಟ್ ರಾಜಕೀಯ, ಆಯ್ಕೆ ಸಮಿತಿಯೊಳಗಿನ ಪ್ರತಿಷ್ಠೆ, ಸ್ವಾರ್ಥಗಳನ್ನು ಮೀರಿ ತಂಡದಲ್ಲಿ ಉಳಿದುಕೊಳ್ಳುವುದೂ ದೊಡ್ಡ ಸಾಧನೆಯೇ. ಹೀಗಾಗಿ ಪ್ರತಿಯೊಂದು ಪಂದ್ಯವೂ ಕೊಟ್ಟ ಕುದುರೆಯೇ ಆಗಿರುತ್ತದೆ. ಅದನ್ನು ಏರಿದವನು ಮಾತ್ರ ತಂಡದಲ್ಲಿ ಉಳಿಯಬಲ್ಲ. ಏರಲಾಗದವನಿಗೆ ತಂಡದ ಬಾಗಿಲು ಮುಚ್ಚಿದಂತೆ. ಆದ್ದರಿಂದ ಇನ್ನು ಮುಂದಾದರೂ ಕನ್ನಡಿಗರು ತಮಗೆ ಸಿಕ್ಕ ಸದಾವಕಾಶವನ್ನು ಬಳಸಿಕೊಂಡು ಕ್ರಿಕೆಟಲ್ಲಿ ದೇಶವನ್ನು ನಿರಂತರ ಪ್ರತಿನಿಧಿಸು ವಂತಾಗಲಿ.