Sunday, 15th December 2024

ಬಾಲಕ ಬುದ್ಧಿಯ ವಿದೇಶಿ ಷಡ್ಯಂತ್ರ

ವೀಕೆಂಡ್‌ ವಿತ್‌ ಮೋಹನ್‌

ಮೋಹನ್‌ ವಿಶ್ವ

camohanbn@gmail.com

ಪ್ರಜಾಪ್ರಭುತ್ವದಲ್ಲಿ ವಿರೋಧಪಕ್ಷದ ನಾಯಕನ ಸ್ಥಾನ ಶಾಡೋ ಪ್ರಧಾನಮಂತ್ರಿಯ ರೀತಿಯಲ್ಲಿರುತ್ತದೆ, ಆಡಳಿತ ಪಕ್ಷದ ವಿರುದ್ಧ ಧ್ವನಿ ಎತ್ತುವ ಕೆಲಸವನ್ನು ವಿರೋಧ ಪಕ್ಷದ ನಾಯಕರಾದವರು ಮಾಡಬೇಕೆಂಬುದು ಸಂವಿಧಾನದ ಮೂಲ ಆಶಯ. ವಿರೋಧಪಕ್ಷದ ಸ್ಥಾನದಲ್ಲಿ ಕುಳಿತವರು ದೇಶದೊಳಗಿನ ಸಮಸ್ಯೆಗಳ ಬಗ್ಗೆ ದೇಶದೊಳಗೆ ಧ್ವನಿ ಎತ್ತಬೇಕು.

ಭಾರತದೊಳಗಿರುವ ಸಮಸ್ಯೆಗಳ ಕುರಿತು ಧ್ವನಿ ಎತ್ತುವ ಕೆಲಸವನ್ನು ಅಧಿಕೃತ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಬೇಕೆಂಬು ದು ಆಡಳಿತ ಪಕ್ಷದ ನಾಯಕರ ಅಭಿಪ್ರಾಯ. ಭಾರತದೊಳಗಿನ ಆಂತರಿಕ ಸಮಸ್ಯೆಗಳನ್ನು ಅಂತರಿಕವಾಗಿಯೇ ಬಗೆಹರಿಸಿ ಕೊಳ್ಳಬೇಕಿರುವುದು ಪ್ರತಿಯೊಬ್ಬ ಚುನಾಯಿತ ಭಾರತೀಯ ನಾಯಕನ ಕರ್ತವ್ಯವಾಗಿದೆ.

ಆಡಳಿತ ಪಕ್ಷದ ವಿರುದ್ಧ ಮಾತನಾಡಲು ಅಥವಾ ಚರ್ಚೆ ಮಾಡಲು ಸಂಸತ್ತಿನ ಅಧಿವೇಶನವಿದೆ ಅಥವಾ ಮಾಧ್ಯಮಗಳಿವೆ ಅಥವಾ ಸಾಮಾಜಿಕ ಜಾಲತಾಣಗಳಿವೆ. ಮನೆಯಲ್ಲಿನ ವಿಚಾರಗಳು ಮನೆಯೊಳಗೆ ಚರ್ಚೆಯಾದರೆ ಪರಿಹಾರ ಸಿಗುತ್ತವೆ, ಅದನ್ನು ಬಿಟ್ಟು ರಸ್ತೆಗಿಳಿದು ಮಾತನಾಡಿದರೆ ಅನಗತ್ಯವಾಗಿ ಇತರರು ನಮ್ಮ ಸಂಸಾರದಲ್ಲಿ ತಲೆ ಹಾಕಿ ದಂತಾಗುತ್ತದೆ. ಕಳೆದ ಹತ್ತು ವರ್ಷಗಳಿಂದ ಭಾರತ ದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷ ಪಡಬಾರದ ಪ್ರಯತ್ನ ಪಟ್ಟರೂ ಸಹ ನೂರರ ಅಂಕಿ ದಾಟುತ್ತಿಲ್ಲ, ದೇಶದೊಳಗೆ ರಾಹುಲ್ ಮಾತನ್ನು ನಂಬುವ ಜನರ ಸಂಖ್ಯೆ ಬಹಳ ಕಡಿಮೆ.

ರಾಹುಲ್ ಗಾಂಧಿ ಮೋದಿಯವರ ಮೇಲೆ ಮಾಡಿದ ಅಪಾದನೆಗಳೆಲ್ಲವೂ ಸುಳ್ಳೆಂದು ನ್ಯಾಯಾಲಯಗಳು ತೀರ್ಪು ನೀಡಿವೆ. ಭಾರತೀಯರು ರಾಹುಲ್ ಗಾಂಽಯ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ, ರಾಹುಲ್ ಗಾಂಧಿ ತನ್ನ ಹೇಳಿಕೆ ಗಳಿಂದ ಅತೀ ಹೆಚ್ಚು ಟ್ರೋಲ್ ಆದ ನಾಯಕ. ರಾಹುಲ್ ಗಾಂಧಿ ತಾನು ನೀಡುವ ಹೇಳಿಕೆಗಳ ಮೇಲೆ ಹಿಡಿತವಿರುವುದಿಲ್ಲ, ಅವರ ಆರೋಪಗಳಲ್ಲಿ ಸಾಕ್ಷ್ಯಗಳಿರುವುದಿಲ್ಲ, ರಾಹುಲ್ ನೀಡುವ ಹೇಳಿಕೆಗಳಲ್ಲಿ ಅನೇಕ ಬಾರಿ ದ್ವಂಧ್ವ ನಿಲುವುಗಳು ಎದ್ದು ಕಾಣುತ್ತವೆ.

ರಾಹುಲ್ ನೀಡುವ ಹೇಳಿಕೆಗಳಲ್ಲಿ ಸ್ಪಷ್ಟತೆ ಇಲ್ಲದಿರುವುದು ಸಾಮಾನ್ಯ ನಾಗರಿಕನಿಗೂ ತಿಳಿಯುತ್ತದೆ, ಜನರಿಗೆ ಹೇಳಬೇಕಿರುವ ವಿಷಯವನ್ನು
ಸರಿಯಾಗಿ ಹೇಳಲೂ ಬಾರದ ವ್ಯಕ್ತಿ ರಾಹುಲ್ ಗಾಂಧಿ. ನೆಹರು ಕುಟುಂಬದವರು ವಿರೋಧಪಕ್ಷದಲ್ಲಿ ಕುಳಿತು ಆಡಳಿತ ಪಕ್ಷಗಳ ವಿರುದ್ಧ ಆರೋಪ ಮಾಡಿದರೆ, ಅವರ ಹಳೆಯ ಪಾಪಗಳ ಸರಮಾಲೆ ಒಂದೊಂದಾಗಿ ಚರ್ಚೆಗೆ ಬರುತ್ತವೆ. ಗಾಜಿನ ಮನೆಯಲ್ಲಿ ಕುಳಿತು ರಾಹುಲ್ ಒಂದು
ಕಲ್ಲು ಎಸೆದರೆ ತನ್ನದೇ ಕುಟುಂಬದ ಮೇಲೆ ನೂರಾರು ಕಲ್ಲುಗಳು ಕ್ಷಣಾರ್ಧದಲ್ಲಿ ಬಂದು ಬೀಳುತ್ತವೆ. ಭಾರತದಲ್ಲಿ ರಾಹುಲ್ ಗಾಂಧಿಯ ಮಾತಿಗೆ ಬೆಲೆ ಇಲ್ಲದ ಕಾರಣ, ರಾಜೀವ್ ಗಾಂಧಿಯ ಪರಮಾಪ್ತ ಸ್ಯಾಮ್ ಪಿತ್ರೋಡಾ, ವಿದೇಶಿ ನೆಲದಲ್ಲಿ ರಾಹುಲ್ ಗಾಂಧಿಯ ಕಾರ್ಯಕ್ರಮ
ಗಳನ್ನು ಆಯೋಜಿಸುತ್ತಾರೆ.

ಚುನಾವಣೆ ಸಂದರ್ಭದಲ್ಲಿ ಸ್ಯಾಮ್ ಪಿತ್ರೋಡಾ ಜಗತ್ತಿನ ವಿವಿಧ ನಗರಗಳಲ್ಲಿ ರಾಹುಲ್ ಗಾಂಧಿಯ ಸಂದರ್ಶನವನ್ನು ಏರ್ಪಡಿಸಿದ್ದರು. ರಾಹುಲ್
ಗಾಂಽ ವಿದೇಶಿ ನೆಲದಲ್ಲಿ ಕುಳಿತು ಭಾರತದ ವಿರುದ್ಧ ಮಾತನಾಡುವುದನ್ನು ಚಾಳಿ ಮಾಡಿಕೊಂಡಿದ್ದಾರೆ.

ಭಾರತದ ಆಂತರಿಕ ವಿಷಯಗಳನ್ನು ವಿದೇಶಿ ನೆಲದಲ್ಲಿ ಚರ್ಚೆ ಮಾಡಬಾರದೆಂಬ ಕನಿಷ್ಠ ಜ್ಞಾನ ರಾಹುಲ್ ಗಾಂಧಿಗೆ ಇಲ್ಲ. ಅಮೆರಿಕದಲ್ಲಿ ಕುಳಿತು ಭಾರತ ಮತ್ತು ಚೀನಾ ನಡುವಿನ ಅಭಿವೃದ್ಧಿ ಮತ್ತು ಕಾರ್ಯಕ್ರಮತೆಯ ಬಗ್ಗೆ ಮಾತನಾಡುತ್ತಾ, ಚೀನಾವನ್ನು ಬೆಂಬಲಿಸಿ ಭಾರತವನ್ನು ಹೀಯಾಳಿ
ಸುವ ಮಾತುಗಳನ್ನಾಡುತ್ತಾರೆ. ಚೀನಾ ದೇಶವನ್ನು ಹೊಗಳಿ ಭಾರತವನ್ನು ತೆಗಳಿದರೆ, ಅದರ ನೇರ ಕಾರಣ ಭಾರತವನ್ನು ಸುಮಾರು ಆರು ದಶಕಗಳ ಕಾಲ ಆಳಿದ ತನ್ನದೇ ಕುಟುಂಬದ ನಾಯಕರೆಂಬ ಸಾಮಾನ್ಯ ಜ್ಞಾನ ಆತನಿಗಿಲ್ಲ.

ವಿದೇಶಿ ನೆಲದಲ್ಲಿ ಕುಳಿತು ಭಾರತವನ್ನು ತೆಗಳಿದರೆ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ಬರುತ್ತದೆಯೆಂಬ ವಿಚಾರ ಬಾಲಕ ಬುದ್ಧಿಗೆ ತಿಳಿದಿಲ್ಲ. ನೆಹರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿದೇಶಿಗರು ಭಾರತವನ್ನು ಹಾವಾಡಿಗರ ದೇಶವೆಂದು ಕರೆಯುತ್ತಿದ್ದರು. ರಾಹುಲ್ ಗಾಂಽ ಕೂಡ
ನೆಹರು ಮಾದರಿಯನ್ನೇ ಅನುಸರಿಸಿ ಜಗತ್ತಿನಲ್ಲಿ ಭಾರತ ವನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ.

ವಿದೇಶಿ ನೆಲದಲ್ಲಿ ಕುಳಿತು ಭಾರತದ ಸಂವಿಧಾನದ ಬಗ್ಗೆ ರಾಹುಲ್ ಗಾಂಧಿ ಮಾತನಾಡುತ್ತಾರೆ, ಭಾರತದಲ್ಲಿ ಮೂಲ ಭೂತ ಹಕ್ಕುಗಳಿಗೆ ಚ್ಯುತಿ ಬಂದಿದೆಯೆಂಬ ಹೇಳಿಕೆ ನೀಡುತ್ತಾರೆ. ರಾಹುಲ್ ಸಂದರ್ಶನವನ್ನು ವೀಕ್ಷಿಸಲು ಬಂದಿರುವವರು ಭಾರತದ ವಿರುದ್ಧ ಋಣಾತ್ಮಕ ಅಭಿಪ್ರಾಯವನ್ನು
ತಲೆಗೆ ಏರಿಸಿಕೊಳ್ಳಲು, ಇದಕ್ಕಿಂತಲೂ ಬೇರೆ ವೇದಿಕೆಯಿಲ್ಲ. ಮೋದಿಯವರ ವಿರುದ್ಧ ಪ್ರತಿನಿತ್ಯ ಬೈಗುಳಗಳ ಸರಮಾಲೆಯನ್ನೇ ಆಡುವ ಕಾಂಗ್ರೆಸ್ ಪಕ್ಷದ ನಾಯಕರು ಭಾರತದಲ್ಲಿ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗಿದೆಯೆಂದು ಅಮೆರಿಕದ ವಿಶ್ವವಿದ್ಯಾಲದಲ್ಲಿ ಹೇಳುತ್ತಾರೆ.

ಸಿಖ್ಖರ ಪರವಾಗಿ ವಿದೇಶಿ ನೆಲದಲ್ಲಿ ಮಾತನಾಡುತ್ತಾ, ರಾಹುಲ್ ಗಾಂಽ ಸಿಖ್ಖರಿಗೆ ಭಾರತದಲ್ಲಿ ತಮ್ಮ ತಲೆಯ ಮೇಲಿನ ಪೇಟ ಹಾಕಿಕೊಳ್ಳುವ ಸ್ವಾತಂತ್ರ್ಯವಿಲ್ಲ ಎಂಬ ಸುಳ್ಳನ್ನು ಹೇಳುತ್ತಾರೆ. ಇಂದಿರಾಗಾಂಽಯವರ ಹತ್ಯೆಯ ನಂತರ ನಡೆದ ಗಲಭೆಯಲ್ಲಿ ಕಾಂಗ್ರೆಸ್ಸಿಗರು ಸಿಖ್ಖರನ್ನು ಕಂಡ
ಕಂಡಲ್ಲಿ ಕೊಂದ ವಿಷಯವನ್ನು ಬಾಲಕ ಬುದ್ಧಿ ರಾಹುಲ್ ಗಾಂಧಿ ಹೇಳುವುದಿಲ್ಲ. ದೆಹಲಿಯ ಸಿಂಘು ಗಡಿಯಲ್ಲಿ ನಡೆದ ರೈತ ಪ್ರತಿಭಟನೆಯ ಸಂದರ್ಭದಲ್ಲಿ ತಿಂಗಳುಗಟ್ಟಲೆ ಹೆದ್ದಾರಿಯನ್ನು ತಡೆ ಹಿಡಿಯಲಾಗಿತ್ತು, ಭಾರತದಲ್ಲಿ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಂದಿದ್ದರೆ ಆ ಮಟ್ಟದ
ಪ್ರತಿಭಟನೆಗೆ ಅವಕಾಶ ಇರುತ್ತಿರಲಿಲ್ಲ. ಪ್ರತಿಭಟನಾನಿರತರು ದೆಹಲಿಯ ಕೆಂಪುಕೋಟೆಯ ಮೇಲೆ ಖಲಿಸ್ತಾನಿ ಧ್ವಜಹಾರಿಸುವ ಮೂಲಕ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದ್ದರು, ಆಗ ನೆನಪಾಗದ ಸಂವಿಧಾನದ ಮೂಲ ಆಶಯ ಬಾಲಕ ಬುದ್ಧಿ ರಾಹುಲ್ ಗಾಂಽಗೆ ವಿದೇಶಿ ನೆಲದಲ್ಲಿ ಭಾರತವನ್ನು ಟೀಕಿಸುವಾಗ ನೆನಪಾಗಿದೆ. ಅಮೆರಿಕದಲ್ಲಿ ಕುಳಿತು ಮೀಸಲಾತಿಯ ಬಗ್ಗೆ ಅಭಿಪ್ರಾಯ ಕೇಳಿ ದಾಗ, ಮುಂದಿನ ದಿನಗಳಲ್ಲಿ ಮೀಸಲಾತಿಯನ್ನು ರದ್ದುಗೊಳಿಸಬಹುದೆಂಬ ಹೇಳಿಕೆಯನ್ನು ರಾಹುಲ್ ಹೇಳಿದ್ದಾರೆ.

ಬಾಬಾಸಾಹೇಬರ ಸಂವಿಧಾನದ ಪುಸ್ತಕವನ್ನು ಕೈಯಲ್ಲಿ ಹಿಡಿದು ಭಾಷಣ ಮಾಡಿದ್ದ ರಾಹುಲ್ ಗಾಂಧಿ, ಮೀಸಲಾತಿ ರದ್ಧತಿಯ ಬಗ್ಗೆ ವಿದೇಶಿ ನೆಲದಲ್ಲಿ ಮಾತನಾಡುತ್ತಾರೆ. ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಮೀಸಲಾತಿ ವಿರೋಧಿ ನಡೆಯನ್ನು ಅನುಸರಿಸಿಕೊಂಡು ಬಂದಿದೆ. ನೆಹರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೀಸಲಾತಿ ವಿರುದ್ಧವಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು, ಮತ್ತೊಂದೆಡೆ ಹಿಂದುಳಿದ ವರ್ಗಗಳ ಮೀಸಲಾತಿಯ ಬಗ್ಗೆ ಮಾತನಾಡುವ ರಾಹುಲ್ ಗಾಂಧಿ ತಮ್ಮ ಕುಟುಂಬದ ಇತಿಹಾಸವನ್ನೊಮ್ಮೆ ಕೆದಕಿ ನೋಡಬೇಕು.ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಯಾರೊಬ್ಬರೂ ಕೂಡ ಹಿಂದುಳಿದ ವರ್ಗಗಳ ಮೀಸಲಾತಿಯ ಪರವಾಗಿ ಇರಲಿಲ್ಲ. ರಾಹುಲ್ ಅಪ್ಪ ರಾಜೀವ್ ಗಾಂಧಿ ಸಂಸತ್ತಿನಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ವಿರೋಧಿಸಿದ್ದರು.

ವಿಶ್ವ ಸುಂದರಿ ಸ್ಪರ್ಧೆಯಯೂ ಜಾತಿಯನ್ನು ಹುಡುಕಿ ಮಾತನಾಡುವ ರಾಹುಲ್ ಗಾಂಧಿಗೆ ಮೀಸಲಾತಿಯ ಅರ್ಥವೇ ತಿಳಿದಿಲ್ಲ, ಹೋದ ಕಡೆಯೆಲ್ಲ ಜಾತಿಯನ್ನು ಮುನ್ನೆಲೆಗೆ ತರುವ ರಾಹುಲ್ ಗಾಂಧಿಯ ಮನಸ್ಥಿತಿಗೂ, ಭಾರತವನ್ನು ಒಡೆದು ಆಳಿದ ಬ್ರಿಟಿಷರ ಮನಸ್ಥಿತಿಗೂ ಯಾವುದೇ ವ್ಯತ್ಯಾಸವಿಲ್ಲ. ಅಂದು ಬ್ರಿಟಿಷರು ಸಮಾಜವನ್ನು ಒಡೆದು, ಒಂದು ಜಾತಿಯನ್ನು ಮತ್ತೊಂದು ಜಾತಿಯ ಮೇಲೆ ಎತ್ತಿಕಟ್ಟಿ ದೇಶ ಆಳಿದ್ದರು. ರಾಹುಲ್ ಗಾಂಽ ಕೂಡ ಬ್ರಿಟಿಷರ ಮಾದರಿಯನ್ನೇ ಅನುಸರಿಸಿ, ಸಮಾಜ ಒಡೆಯುವ ಕೆಲಸಕ್ಕೆ ಕೈ ಹಾಕಿzರೆ. ಭಾರತ ಮತ್ತು
ಚೀನಾ ಗಡಿ ವಿವಾದಕ್ಕೆ ಸಂಬಂಧಪಟ್ಟಂತಹ ವಿಷಯಗಳು ಮಾತುಕತೆಯಲ್ಲಿ ಬಗೆಹರಿಯುವ ಹಂತದಲ್ಲಿವೆ, ವಿದೇಶಾಂಗ ಸಚಿವ ಜೈ ಶಂಕರ್ ಹೇಳಿರುವ ಪ್ರಕಾರ ಶೇಕಡಾ ೭೫ರಷ್ಟು ಗಡಿವಿವಾದ ಮಾತುಕತೆಯ ಮೂಲಕ ಬಗೆಹರಿದಿದೆ. ಕರೋನ ಸಂದರ್ಭದಲ್ಲಿ ಚೀನಾ ದೇಶ ಹೆಚ್ಚಿನ
ಸೈನ್ಯವನ್ನು ತನ್ನ ಗಡಿಯಲ್ಲಿ ನಿಯೋಜಿಸಿತ್ತು, ತದನಂತರ ಭಾರತ ಕೂಡ ಹೆಚ್ಚಿನ ಸೇನಾ ಪಡೆಗಳನ್ನು ಗಡಿಯಲ್ಲಿ ನಿಯೋಜಿಸಿತ್ತು. ಕಳೆದ ಮೂರು ವರ್ಷಗಳ ಸಮಸ್ಯೆ ಬಹುತೇಕ ಸಂಪೂರ್ಣವಾಗಿ ಮುಗಿಯುವತ್ತ ಸಾಗಿದ್ದು, ಎರಡೂ ದೇಶಗಳ ಸೇನಾ ಪಡೆಗಳ ನಡುವೆ ಮಾತುಕತೆ ಅಂತಿಮ ಹಂತದಲ್ಲಿರುವ ವಿಷಯವನ್ನು ವಿದೇಶಾಂಗ ಸಚಿವರು ಹೇಳಿದ್ದಾರೆ.

ರಾಹುಲ್ ಗಾಂಧಿ ವಿದೇಶದಲ್ಲಿ ಕುಳಿತು ಭಾರತದ ವಿರುದ್ಧ ಮಾತನಾಡುವುದರ ಹಿಂದೆ ದೊಡ್ಡ ಷಡ್ಯಂತ್ರವೇ ಅಡಗಿದೆ, ಭಾರತವನ್ನು ವಿದೇಶಿ ನೆಲದಲ್ಲಿ ಕೆಟ್ಟದಾಗಿ ಬಿಂಬಿಸಿ ಭಾರತದಲ್ಲಿ ಅನೇಕ ಸಮಸ್ಯೆಗಳಿವೆ ಎಂಬ ಸುಳ್ಳು ನಿರೂಪಣೆಯನ್ನು ಜಗತ್ತಿನ ಬುದ್ಧಿಜೀವಿ ಸಂಕುಲದ ಮುಂದೆ ಪ್ರದರ್ಶಿಸುವುದು ಕಾಂಗ್ರೆಸ್ಸಿನ ಉದ್ದೇಶ. ಪಾಶ್ಚಿಮಾತ್ಯ ದೇಶಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಅನೇಕ ದೇಶಗಳಲ್ಲಿ ಇಲ್ಲದ ಸಮಸ್ಯೆಗಳನ್ನು ಹುಟ್ಟುಹಾಕಿ ಆಂತರಿಕ ಯುದ್ಧ ನಡೆಯುವಂತೆ ಮಾಡಿದ ಇತಿಹಾಸವಿದೆ. ತಮ್ಮ ವಿರುದ್ಧದ ದೇಶದೊಳಗಿನ ದೇಶವಿರೋಧಿ ನಾಯಕರನ್ನು ಹುಡುಕಿ ಅವರ ಮೂಲಕ ಅಲ್ಲಿ ಸಮಸ್ಯೆಗಳಿವೆ ಎಂಬ ನಿರೂಪಣೆ ಸೃಷ್ಟಿಸಿ, ಆಂತರಿಕ ಯುದ್ಧವಾಗುವಂತೆ ಮಾಡಿ ಆ ದೇಶದ ಜನರ ರಕ್ಷಣೆಗೆ ನಾವಿದ್ದೇವೆಂದು ಹೇಳಿ ಯುದ್ಧಕ್ಕೆ ಬಂದು ಅಲ್ಲಿನ ವ್ಯವಸ್ಥೆಯನ್ನೇ ಹಾಳುಮಾಡುವ ಚಾಳಿ ದೊಡ್ಡಣ್ಣರಿಗೆ ಹೊಸತೇನಲ್ಲ.

ರಾಹುಲ್ ಗಾಂಧಿ ಮಾತಿಗೆ ಭಾರತದೊಳಗೆ ಹೆಚ್ಚಿನ ಮನ್ನಣೆಯಿಲ್ಲ, ಹಾಗಾಗಿ ವಿದೇಶಿ ನೆಲದಲ್ಲಿ ಕುಳಿತು ಭಾರತ ವಿರೋಧಿ ಹೇಳಿಕೆಗಳನ್ನು ನೀಡಿ
ದೇಶದೊಳಗೆ ಆಂತರಿಕ ಕಲಹ ಸೃಷ್ಟಿಸುವ ಹುನ್ನಾರ ಕಾಂಗ್ರೆಸ್ ಪಕ್ಷzಗಿದೆ. ಪಾಶ್ಚಿಮಾತ್ಯ ದೇಶಗಳ ಸಹಾಯ ಪಡೆದು ಅಧಿಕಾರಕ್ಕೆ ಬರಬೇಕೆಂಬ ಷಡ್ಯಂತ್ರ ಆತನ ನಿರೂಪಣೆಯಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಎಡಚರರ ನಿರೂಪಣೆಗಳನ್ನು ಬಳಸಿಕೊಂಡು ದೇಶದೊಳಗೆ ಆಂತರಿಕ ಕಲಹ ಸೃಷ್ಟಿಸಿ ಸಹಾಯದ ನೆಪದಲ್ಲಿ, ಅನೇಕ ದೇಶಗಳನ್ನು ಸರ್ವನಾಶ ಮಾಡಿದ ಪಾಶ್ಚಿಮಾತ್ಯರ ಉದಾಹರಣೆಗಳು ಕಣ್ಣ ಮುಂದಿರುವಾಗ ರಾಹುಲ್ ಗಾಂಧಿ ವಿದೇಶಿ ನೆಲದಲ್ಲಿ ಕುಳಿತು ಭಾರತದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಅಮೆರಿಕದ ಬಿಲೆನಿಯರ್ ‘ಜಾರ್ಜ್ ಸೊರೋಸ್’ ತನ್ನ ಸಂಸ್ಥೆಯ ಮೂಲಕ ಕೋಟಿಗಟ್ಟಲೆ ಹಣ ಭಾರತಕ್ಕೆ ಚುನಾವಣಾ ಸಂದರ್ಭದಲ್ಲಿ ಬಂದಿರುವ ಅನುಮಾನವಿದೆ, ಭಾರತದ ಚುನಾವಣೆಯಲ್ಲಿ ವಿದೇಶಿ ಶಕ್ತಿಗಳು ಕೈ ಜೋಡಿಸಿ ಆಂತರಿಕ ಕಲಹ ಸೃಷ್ಟಿಸುವ ದೊಡ್ಡದೊಂದು ಷಡ್ಯಂತ್ರವೇ
ನಡೆದಿತ್ತೆಂದು ಹಲವು ವರದಿಗಳು ಹೇಳಿವೆ. ವಿದೇಶಿ ನೆಲದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ನಿರೂಪಣೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಧಿಕಾರಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲು ರಾಹುಲ್ ಗಾಂಧಿ ಸಿದ್ಧವಾದಂತಿದೆ.

ವಿದೇಶಿ ನೆಲದಲ್ಲಿ ಎಡಚರ ಬೆಂಬಲಿತ ಸಂಸ್ಥೆಗಳ ಜೊತೆ ಕೈಜೋಡಿಸಿ ಅಲ್ಲಿನ ಗೂಢಚಾರಿ ಸಂಸ್ಥೆಗಳನ್ನು ಬಳಸಿಕೊಂಡು ಭಾರತ ವಿರೋಽ ಕೃತ್ಯಗಳಿಗೆ ಕುಮ್ಮಕ್ಕು ನೀಡುವ ಕೆಲಸಕ್ಕೆ ರಾಹುಲ್ ಗಾಂಧಿ ಕೈಹಾಕಿದ್ದಾರೆ. ರಾಹುಲ್ ಗಾಂಧಿ ಮಾತನ್ನು ಕೇಳಿದಾಕ್ಷಣ ಅವರು
ಪೆದ್ದನಂತೆ ಕಾಣಿಸಬಹುದು, ಆದರೆ ತುಸು ಆಳಕ್ಕೆ ಹೊಕ್ಕರೆ ಅಧಿಕಾರದ ಆಸೆಗಾಗಿ ವಿದೇಶಿ ಶಕ್ತಿಗಳನ್ನು ಬಳಸಿಕೊಂಡು ಭಾರತದ ವಿರುದ್ಧ ವಿದೇಶಿ ನೆಲದಲ್ಲಿ ಕುಳಿತು ಋಣಾತ್ಮಕ ನಿರೂಪಣೆ ನಡೆಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.