Thursday, 12th December 2024

ಅಶಕ್ತರಿಂದಲೂ ದೇಣಿಗೆ, ಉಳ್ಳವರಿಂದಲೇ ಕೊಂಕು

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

ರಾಜಕೀಯ ಪಕ್ಷಗಳು ಶ್ರೀಮಂತರ ಬಳಿ ಪಾರ್ಟಿ ಫಂಡ್ ರೂಪದ ವಸೂಲಿ ಮಾಡುವುದು ಕಲೆಕ್ಷನ್ನು. ಅಕ್ರಮ ಸಂಪಾದನೆ, ಅಡ್ಡದಾರಿಗಳ ಮೂಲಕ ಐಷರಾಮಿಪತಿಗಳಾದವರಿಂದ ದೇಣಿಗೆ ಹೆಸರಿನಲ್ಲಿ ಪಕ್ಷಗಳು ಖಜಾನೆ ತುಂಬಿಸಿಕೊಳ್ಳುವುದು ಕಲೆಕ್ಷನ್ನು. ಗ್ರಾಮ ಪಂಚಾಯಿತಿಯಿಂದ ಆರಂಭಿಸಿ ವಿಧಾನಸಭೆಗೆ, ಮಂತ್ರಿಗಿರಿಗೆ, ವಿಧಾನ ಪರಿಷತ್ತಿಗೆ, ರಾಜ್ಯಸಭೆ ಸದಸ್ಯತ್ವಕ್ಕಾಗಿ ವಸೂಲಿ
ಮಾಡುವುದೆ ಬರೋಬ್ಬರಿ ಕಲೆಕ್ಷನ್ನೇ ಆಗಿರುತ್ತದೆ.

ಇದರ ಪರಮಾವಧಿ ತಲುಪಿದಾಗಲೇ ಆಯಾ ಪಕ್ಷದವರೇ ಇದರಿಂದ ರೋಸಿಹೋಗಿ ತಮ್ಮ ಪಕ್ಷ ಗಳನ್ನೇ ಸೂಟ್ಕೇಸ್ ಪಕ್ಷ ಎಂದು ಲೆವಡಿ ಮಾಡುವುದೂ ಕಲೆಕ್ಷನ್ನಿನ ಮಹಿಮೆ. ಪರದೇಶಗಳಲ್ಲಿನ ಮೋಜು ಡುಯೇಟ್ಟು, ರೆಸಾರ್ಟು ಫೈವ್ ಸ್ಟಾರ‍್ಸ್ ಹೋಟೆಲ್ಲು ಗಳಲ್ಲಿ ನಡೆಯುವ ಆಟ ಆಡಳಿತ ಕಲೆಕ್ಷನ್ನಿನ ಪ್ರೊಟೆಕ್ಷನ್‌ನಿಂದಲೇ. ಇನ್ನು ಅಧಿಕಾರ ಹಿಡಿದ ನಂತರ ಡಿ ದರ್ಜೆ ನೌಕರನಿಂದ ಐಎಎಸ್ ಅಧಿಕಾರಿಗಳ ವರೆಗೂ ವರ್ಗಾವಣೆ ಮಹೋತ್ಸವ ಆಚರಿಸಿ ಸುಲಿಗೆ ಮಾಡುವುದೆ ಕಲೆಕ್ಷನ್ನೇ.

ದೇಶದ ಅತಿದೊಡ್ಡ ಭ್ರಷ್ಟಾಚಾರದ ಜಾತ್ರೆ ಎನಿಸಿರುವ ಚುನಾವಣೆಯಲ್ಲಿ ಹರಿದಾಡುವ ಕುಣಿದಾಡುವ ಕುಡಿದಾಡುವ ಹಣವೆ
ಕಲೆಕ್ಷನ್ನೇ. ಹಾಗೆಯೇ ನಟಿ ಹೊನ್ನು ಮಣ್ಣು, ಐಷರಾಮಿ ಭಂಗಲೆಗಳು, ದುಬಾರಿ ಕಾರುಗಳು ವಾಚುಗಳು ಬಳಸುವ ವಸ್ತುಗಳು ಸ್ನೇಹಿತರಿಂದಲೋ ಪ್ರೀತಿಯಿಂದಲೋ ಅಥವಾ ಅಭಿಮಾನಿಗಳಿಂದಲೋ ಪ್ರಾಪ್ತವಾದರೂ ಅದೂ ಒಂದು ರೀತಿಯ ಋಣಸಂದಾಯ ರೂಪದ ಕಲೆಕ್ಷನ್ನುಗಳೇ ಆಗಿರುತ್ತವೆ.

ಜತೆಗೆ ನಕಲಿ ಹೋರಾಟ ಗಾರರು ನಡೆಸುವ ಹೋರಾಟ ಪ್ರತಿಭಟನೆಗಳ ಹಿಂದಿನ ನಿಯತ್ತು ಬಾಬತ್ತು ಇವೆಲ್ಲದರ ಮೂಲಾ ಧಾರವೇ ರಾಜಕೀಯ ಪಕ್ಷಗಳ ಕಲೆಕ್ಷನ್ನುಗಳಾಧರಿತ ಅಧಿಕ ಪ್ರಸಂಗಗಳೇ ಆಗಿರುತ್ತದೆ. ಆದರೆ, ಈಗ ಆಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಅವಶ್ಯವಿರುವ ಹಣಕ್ಕಾಗಿ ದೇಶಾದ್ಯಂತ ಭಾರತೀಯರಿಂದ ಪಡೆಯುತ್ತಿರುವ ದೇಣಿಗೆಯನ್ನು ಮಾತ್ರ ಪರಿಶುದ್ಧ
ಸಮರ್ಪಣೆ ಎನ್ನಲಾಗುತ್ತಿದೆ ಹೊರತು ಕುಲಗೆಟ್ಟ ಕಲೆಕ್ಷನ್ ಅಲ್ಲವೇ ಅಲ್ಲ.

ಇಲ್ಲಿ ಸೂಕ್ಷ್ಮವಾದ ವಿಷಯವೆಂದರೆ ಮಾಡುವ ಕಲೆಕ್ಷನ್ನೇ ಬೇರೆ, ಬೇಡುವ ಸಮರ್ಪಣೆಯೇ ಬೇರೆ. ಅದು ಒಂದು ರೀತಿಯ ದಾನವೂ ಅಲ್ಲ. ಅದು ಸನಾತನ ಭಾರತೀಯ ಪರಂಪರೆಯಲ್ಲಿ ವಿದ್ಯಾರ್ಥಿ, ವಾನಪ್ರಸ್ಥಿ, ಸನ್ಯಾಸಿ, ಬೈರಾಗಿ, ಭಿಕ್ಕುಗಳ ಜೀವನದ
ಅಗತ್ಯಗಳ ಪೂರೈಕೆ, ರಾಜ್ಯವನ್ನು ದೇಶವನ್ನು ಕಟ್ಟುವುದು ಮತ್ತು ತಮ್ಮ ಸಹಜ ಸ್ವಾರ್ಥಗಳನ್ನು ಮೀರಿ ಹೊಣೆಯನ್ನು
ಹೊರುವುದು, ದೇವಾಲಯ – ತೀರ್ಥಕ್ಷೇತ್ರಗಳಲ್ಲಿ ಧರ್ಮಛತ್ರಗಳ ನಿರ್ಮಾಣ ಮತ್ತು ಇನ್ನಿತರ ಸೌಕರ್ಯ ಗಳನ್ನು ಒದಗಿಸುವಲ್ಲಿ ಸಹಕಾರ ಸಹಯೋಗಗಳನ್ನು ಸ್ವಯಂ ಪ್ರೇರಿತರಾಗಿ ನೀಡುವುದು ಸಮಾಜದ ಸಹಜ ಸ್ವಭಾವ ವಾಗಿರುತ್ತದೆ. ಇದನ್ನು ಸಿರಿವಂತರ ಸಾಮಾಜಿಕ ಹೊಣೆಗಾರಿಕೆ ಎಂದೇ ಭಾವಿಸಲಾಗುತ್ತದೆ.

ಅಂಥ ಮನಪೂರ್ವಕ ಭಕ್ತಿಪೂರ್ವಕ ಮನಸ್ಥಿತಿಯಿಂದಲೇ ರಾಮಾಯಣದಲ್ಲಿ ವಾನರೊಂದಿಗೆ ಅಳಿಲಿನಂಥ ಸೌಮ್ಯ ಪ್ರಾಣಿಗಳು ಪಕ್ಷಿಗಳೂ ಸಹ ರಾಮಸೇತು ನಿರ್ಮಾಣದಲ್ಲಿ ಪಾಲ್ಗೊಂಡಿದ್ದವು. ಇಂಥ ಭಾವನೆಯನ್ನೇ ಅನುಸರಿಸಿ ದೇಶದ ಗುಲಾಮಗಿರಿಯನ್ನು
ಕಳೆಯಲು ಅಂದು ಶ್ರೀಮಂತರು ಸ್ವಯಂಪ್ರೇರಿತರಾಗಿ ನೇತಾಜಿಯವರ ಭಾರತೀಯ ರಾಷ್ಟ್ರೀಯ ಸೇನೆಗೆ ದೇಣಿಗೆಯನ್ನು ಸಮರ್ಪಿಸಿದ್ದರು. ಅದೇ ಚಿಂತನೆಯಲ್ಲಿಯೇ ಇಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ವಿನ್ಯಾಸವು ಸಮಾಜದ ಸಮಸ್ತ ಭಾಂದವರಲ್ಲಿ ಮಂದಿರ ನಿರ್ಮಾಣಕ್ಕಾಗಿ ಕೈಲಾದ ದೇಣಿಗೆಯನ್ನು ಸಮರ್ಪಿಸಲು ಕೋರಿ ಅಭಿಯಾನ ನಡೆಸುತ್ತಿದೆ.

ಇಷ್ಟಕ್ಕೂ ನಿಧಿ ಸಮರ್ಪಣೆ ಎಂಬ ಅಭಿಯಾನ ಏಕಾಎಕಿ ಆರಂಭವಾದುದ್ದಲ್ಲ. ಸಂಕ್ರಮಣದ ಉತ್ತರಾಯಣ ಅಂದರೆ ಜನವರಿ ೧೫ರಂದು ಆರಂಭವಾಗಿ ಫೆಬ್ರವರಿ ೨೭ರ ವರೆಗೂ ನಡೆಯುವ ಈ ಅಭಿಯಾನ ಆರಂಭಕ್ಕೂ ಮೂರು ತಿಂಗಳ ಮುಂಚೆಯೇ ಇದರ ವ್ಯವಸ್ಥಿತ ರೂಪರೇಷಗಳನ್ನು ಸಿದ್ಧಪಡಿಸಿ ಕ್ರಮಬದ್ಧವಾಗಿ ಶಿಸ್ತುಬದ್ಧವಾಗಿ ಜಾರಿ ಯಾಗುವಂತೆ ಯೋಜಿಸಲಾಗಿತ್ತು. ಲಕ್ಷಾಂತರ ಮಂದಿ ಕಾರ್ಯಕರ್ತರು ಈ ಅಭಿಯಾನದಲ್ಲಿ ಕಾರ್ಯನಿರತರಾಗಿದ್ದಾರೆ.

ಮಂಡಲ, ಪಂಚಾಯಿತಿ, ತಾಲೂಕು, ಜಿಲ್ಲಾಮಟ್ಟದ ಹಂತದ ಅಭಿಯಾನಗಳನ್ನು ರೂಪಿಸಿ ಆಸ್ತಿಕ ನಾಸ್ತಿಕರಿಂದಲೂ ಸ್ವಯಂ ಪ್ರೇರಣೆಯಿಂದ ಮಾತ್ರ ನಿಧಿಯನ್ನು ಸಂಗ್ರಹಿಸಲಾಗುತ್ತಿದೆ. ಪ್ರತಿ ಅಭಿಯಾನದ ತಂಡದಲ್ಲೂ ಕಕ್ಟರ್ ಮತ್ತು ಡೆಪಾಸಿಟರ್ ಎಂಬ
ಹೊಣೆಗಾರಿಕೆಯುಳ್ಳ ಕಾರ್ಯವಾಹಕರುಗಳಿರುತ್ತಾರೆ. ಇಂದು ಸಂಗ್ರಹವಾದ ನಿಽಯನ್ನೆ ನಾಳೆ ಬೆಳಿಗ್ಗೆ ೧೧ ಗಂಟೆಯೊಳಗೆ ಟ್ರಸ್ಟ್‌ನ ಖಾತೆಗೆ ಜಮಾ ಮಾಡಲೇಬೇಕು.

ಸಂಗ್ರಹವಾದ ಹಣವನ್ನು ಯಾರ‍್ಯಾರೋ ಹೋಗಿ ಬ್ಯಾಂಕಿಗೆ ಕಟ್ಟುವ ಹಾಗಿಲ್ಲ. ಒಂದು ರುಪಾಯಿಯನ್ನೂ ಲೆಕ್ಕದ ಸಮೇತ
ಕಲೇಕ್ಟರುಗಳು ಡೆಪಾಸಿಟರ್‌ಗೆ ಒಪ್ಪಿಸಲೇಬೇಕು. ಇಪ್ಪತ್ತು ಸಾವಿರ ಮೇಲ್ಪಟ್ಟು ನೀಡುವ ದೇಣಿಗೆಯನ್ನು ಹಣದ ರೂಪದಲ್ಲಿ ಪಡೆಯುವಂತಿಲ್ಲ. ಚೆಕ್ ಆಗಲಿ ಕ್ಯಾಶ್ ಆಗಲಿ ಅಥವಾ ಭೀಮ್ -ನ್ಪೇ, ಗೂಗಲ್ಪೇ ಮಾದರಿಯ ಡಿಜಿಟಲ್ ಪೇಮೆಂಟ್‌ಗಳೂ ಸಹ ಸರಿಯಾದ ವಿವರ ಗಳೊಂದಿಗೆ ಡೆಪಾಸಿಟರ್ ಕೈಗೆ ತಪ್ಪದೇ ತಲುಪುತ್ತದೆ.

ಅದನ್ನು ಯಾವುದಾದರೂ ಬ್ಯಾಂಕುಗಳಲ್ಲಿ ಜಮಾ ಮಾಡುವಂತಿಲ್ಲ. ಅದಕ್ಕಾಗಿ ರಿಸರ್ವ್ ಬ್ಯಾಂಕ್‌ನೊಂದಿಗೆ ಒಪ್ಪಂದ
ಮಾಡಿಕೊಂಡು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್.ಬಿ.ಐ). ಬ್ಯಾಂಕ್ ಆಫ್ ಬರೋಡ ಹಾಗೂ ಪಂಜಾಬ್  ನ್ಯಾಷನಲ್ ಬ್ಯಾಂಕ್ ಈ ಮೂರು ಬ್ಯಾಂಕ್‌ಗಳ ಶಾಖೆ ಗಳಲ್ಲಿರುವ ಪ್ರತ್ಯೇಕ ಕೌಂಟರ್‌ನ ಜಮಾ ಮಾಡಲಾಗುತ್ತದೆ. ಈ ಅಭಿಯಾನ ಎಷ್ಟು ಶಿಸ್ತುಬದ್ಧ ಮತ್ತು ಕ್ರಮಬದ್ಧ ವಾಗಿರುತ್ತದೆಯೆಂದರೆ ಒಂದು ಬೀದಿಗೆ ಅಥವಾ ಒಂದು ಮನೆಗೆ ಅಭಿಯಾನದ ಕಾರ್ಯ ಕರ್ತರು ಭೇಟಿ ನೀಡಿದರೆ ಆ ಜಾಗಕ್ಕೆ ಮತ್ತೊಮ್ಮೆ ಮತ್ತೊಂದು ತಂಡ ತೆರಳಲು ಸಾಧ್ಯವಿರುವುದಿಲ್ಲ.

ಹತ್ತು ರುಪಾಯಿ ನೂರು ರುಪಾಯಿ ಮತ್ತು ಸಾವಿರ ರುಪಾಯಿ ಬೆಲೆಯ ಕೂಪನ್‌ಗಳು ಅಷ್ಟೇ ಹಣದ ಬದಲಿಗೆ ಸ್ವೀಕರಿಸ ಲಾಗುತ್ತದೆ. ನೋಟುಗಳನ್ನೇ ನಕಲು ಮಾಡುವ ಖದೀಮರಿರುವಾಗ ಈ ಕೂಪನ್‌ಗಳನ್ನು ನಕಲು ಮಾಡಲು ಸಾಧ್ಯವೇ ಇಲ್ಲದಂತೆ ರೂಪಿಸ ಲಾಗಿದೆ.  ಒಂದೊಮ್ಮೆ ನಕಲು ಮಾಡಿಕೊಂಡು ಯಾವನಾದರು ವಂಚಕ ಕಲೆಕ್ಷನ್ನಿಗಿಳಿದರೆ ಅದು ಕೂಡಲೇ ಅಭಿಯಾನ ಯಂತ್ರದ ಮನಕ್ಕೆ ಬಂದುಬಿಡುತ್ತದೆ. ಇನ್ನೂ ಯಾರ‍್ಯಾರೋ ದೇಣಿಗೆ ಸಂಗ್ರಹಕ್ಕೆ ಹೊರಡುವ ಅವಕಾಶವಿಲ್ಲ. ಅಭಿಯಾನದ
ಪ್ರತಿಯೊಬ್ಬ ವ್ಯಕ್ತಿಯೂ ವ್ಯವಸ್ಥಿತ ನೆಟ್‌ವರ್ಕ್ ನಿಂದಲೇ ಹೊರಡುತ್ತಾನೆ.

ಬೆಂಗಳೂರಿನಂಥ ನಗರದಲ್ಲಿ ೯೫೦ ವಸತಿಯನ್ನಾಗಿ ಹೆಸರಿಸಿ ವಿಂಗಡಿಸಲಾಗಿದೆ. ಒಂದು ವಸತಿಯೆಂದರೆ ಹತ್ತು ಸಾವಿರ ಜನಸಂಖ್ಯೆಯ ಒಂದು ಪ್ರದೇಶ. ಈ ಒಂದು ವಸತಿಯೊಳಗೆ ಉಪವಸತಿಗಳೂ ಇರುತ್ತದೆ. ಒಂದು ಉಪವಸತಿಯಲ್ಲಿ ಕನಿಷ್ಠ ಇನ್ನೂರರಿಂದ ಮುನ್ನೂರು ಮನೆಗಳಿದ್ದು, ಐದು ಮಂದಿ ಕಾರ್ಯಕರ್ತರನ್ನು ಈ ಉಪವಸತಿಯ ಅಭಿಯಾನದ ಪ್ರತಿನಿಧಿಗಳಾಗಿ ನೇಮಿಸಲಾಗುತ್ತದೆ. ಈ ಐದು ಮಂದಿ ಕಾರ್ಯಕರ್ತರೇ ಕೋಲೆ ಬಸವನಂತೆ ಜಾತಿಭೇದ ಗಳಿಲ್ಲದೆ ಮನೆಬಾಗಿಲುಗಳ ಮುಂದೆ
ಬಂದು ನಿಲ್ಲುತ್ತಾರೆ. ಬಾಗಿಲು ಬಡಿದು ಶ್ರೀರಾಮಚಂದ್ರನ ಹೆಸರೇಳುತ್ತಾರೆಯೇ ಹೊರತು ವೋಟಿಗಾಗಿ ಎಂಥ ಹೊಲಸನ್ನೂ ತಿನ್ನುವ ನೀತಿಗೆಟ್ಟ ರಾಜಕೀಯ ಜಾತಿನಾಯಕನ ಹೆಸರನ್ನು ಹೇಳುವುದಿಲ್ಲ.

ಹಾಗೆಯೇ ಆ ಮನೆಯವರಿಗೂ ಮರ್ಯಾದ ಪುರುಷೋತ್ತಮ ಶ್ರೀರಾಮನ ಹೆಸರಿನ ಅನುಭೂತಿಯಾಗಿ ಅದರಿಂದ ಆತ್ಮಾಭಿಮಾನ ಜಾಗೃತಿಯಾಗಿ ಹತ್ತು ರುಪಾಯಿಯೋ, ಸಾವಿರ ರುಪಾಯಿಯೋ ನೀಡುತ್ತಾರೆಯೇ ಹೊರತು, ಹಣ ಕೊಟ್ಟ ಮೇಲೆ ಪ್ರತಿಯಾಗಿ
ನನಗೇನು ಸಿಗುತ್ತದೆ ಎಂದು ಯೋಚಿಸುವುದಿಲ್ಲ. ಆತನಿಗೆ ಕಾಣುವುದೇ ಭಾರತೀಯರ ಶತಮಾನದ ಕನಸಿನ ಭವ್ಯ ರಾಮ ಮಂದಿರದ ಚಿತ್ರಣವಷ್ಟೆ.

ಪ್ರತಿ ರುಪಾಯಿಗೂ ಅಧಿಕೃತ ರಶೀದಿಯನ್ನೂ ನೀಡಲಾಗುತ್ತದೆ. ಇಂಥ ಶಿಸ್ತುಬದ್ಧ ಯೋಜನಾಬದ್ಧ ಪಾರದರ್ಶಕವಾದ ದೇಣಿಗೆ ಸಂಗ್ರಹ ಅಭಿಯಾನವನ್ನು ಆರ್‌ಎಸ್‌ಎಸ್‌ನಂಥ ಸಂಘಟನೆಯಿಂದ ಮಾತ್ರ ನಡೆಸಲು ಸಾಧ್ಯವೆಂದರೆ ಅತಿಶಯೊಕ್ತಿಯಲ್ಲ. ಈ
ಅಭಿಯಾನಕ್ಕಾಗಿ ಶ್ರಮದಾನ ನೀಡುವ ಲಕ್ಷಾಂತರ ಕಾರ್ಯಕರ್ತರ ಓಡಾಟ ವಸತಿ ಊಟ ಇದಾವುದಕ್ಕೂ ಈ ನಿಧಿಯ ಹಣವನ್ನು ಬಳಸಲಾಗುವುದಿಲ್ಲ. ಅವೆಲ್ಲವೂ ಸ್ವಯಂ ಸೇವಕರ ಸ್ವಯಂ ನಿರ್ವಹಣೆಗಳಾಗಿರುತ್ತದೆ. ಆದರೆ ನೋಡಿ, ರಾಜಕಾರಣಿ ಗಳು ನಡೆಸುವ ಸಮಾವೇಶ ಗಳಿಗೆ ಜನಸೇರಲು ತಲೆಗಿಷ್ಟು ರುಪಾಯಿ, ಬಿರಿಯಾನಿ ಊಟ, ಗುಂಡುತುಂಡುಗಳು ಇರಲೇಬೇಕು.

ಇಲ್ಲದಿದ್ದರೆ ಬೀದಿ ನಾಯಿಯೂ ಮೂಸುವುದಿಲ್ಲ. ಬಂದರೆ ಜಾತಿಪ್ರೇತಗಳು ಬರಬಹುದಷ್ಟೆ. ಇತ್ತೀಚೆಗೆ ತೀರ್ಥಕ್ಷೇತ್ರ ಟ್ರಸ್ಟ್ ಬಿಡುಗಡೆಗೊಳಿದ ಮಾಹಿತಿಯಂತೆ ಕೇವಲ ಇಪ್ಪತ್ತು ದಿನಗಳಲ್ಲಿ ಒಂದು ಸಾವಿರದ ಐದುನೂರ ಹನ್ನೊಂದು ಕೋಟಿ ರುಪಾಯಿ ಗಳು ಸಂಗ್ರಹವಾಗಿದೆಯೆಂದರೆ ಆ ಹಣವೆ ಎಷ್ಟು ಮೌಲ್ಯಯುತವಾಗಿರಬೇಕು ಹೇಳಿ. ಕರ್ನಾಟಕದಲ್ಲಿ ಇದೇ ಫೆಬ್ರವರಿ ಐದರಂದು ಮುಕ್ತಾಯ ಕಂಡ ನಿಧಿಗೆ ಸುಮಾರು ನೂರು ಕೋಟಿಯಷ್ಟು ಸಂಗ್ರಹವಾಗಿದೆ.

ಇನ್ನೂ ೨೭ನೇ ದಿನಾಂಕಕ್ಕೆ ಮುಕ್ತಾಯವಾಗುವ ಈ ಅಭಿಯಾನ ಸುಮಾರು ಎರಡು ಸಾವಿರ ಕೋಟಿ ದಾಟುವುದು ಖಚಿತ. ರಾಮಾಯಣದಲ್ಲಿ ದ್ವಿಪಾತ್ರ ದಲ್ಲಿ ಎದುರಾಗುವ ಪರುಶುರಾಮ ಮತ್ತು ಶ್ರೀರಾಮರಲ್ಲಿ ಪರಶುರಾಮರಿಗೆ ತಾನು ಮಹಾವಿಷ್ಣು
ಎಂದು ತಿಳಿದಿದ್ದರೂ (ರಾಮನಿಗೆ ತಾನು ವಿಷ್ಣು ಎಂದು ತಿಳಿದಿರುವುದಿಲ್ಲ ಮತ್ತು ಸಾಮಾನ್ಯ ಮಾನವ ನಂತೆಯೇ ಬದುಕುತ್ತಾರೆ) ಶ್ರೀರಾಮನಿಗೆ ನೀನು ದೇವರೆಂದು ತಿಳಿಸುವುದಿಲ್ಲ. ಹಾಗೆಯೇ ಕೇಂದ್ರ ಸರಕಾರ ಮನಸ್ಸು ಮಾಡಿದ್ದರೆ ಅಂಬಾನಿ, ರತನ್ ಟಾಟಾ, ಬಾಬಾ ರಾಮದೇವ ಅಥವಾ ಇನ್ನಾರೋ ಶ್ರೀಮಂತರೋ ಇಡೀ ಮಂದಿರವನ್ನು ನಿರ್ಮಿಸಿ ನಿಲ್ಲಿಸಿಬಿಡುತ್ತಿದ್ದರು.

ಆದರೆ ಆಧುನಿಕ ಶ್ರೀರಾಮನಿಗೂ ಜಟಾಯುಯಂಥ ಮುಗ್ಧರು, ಶಬರಿಯಂಥ ನಿರ್ಗತಿಕರು, ಬಡವರು, ಹನುಮ ಸುಗ್ರೀವ ಅಂಗಧರಂಥ ಬಲಿಷ್ಠ ಭಕ್ತರುಗಳು, ಅಳಿಲಿನಂಥ ದಿನಗೂಲಿ ನೌಕರರು ಶ್ರಮಿಕರು ಕೊನೆಗೆ ಭಿಕ್ಷುಕರೂ ಮಂಗಳಮುಖಿಯರೂ,
ಸಮಾಜದ ಎ ಜಾತಿ ಸಮುದಾಯದವರನ್ನೂ ಸಂಪರ್ಕಿಸಿ ಆಪ್ತತೆ ಯನ್ನುಂಟು ಮಾಡಿ ಈ ಅಭಿಯಾನದಲ್ಲಿ ಜೋಡಿಸಿಕೊಂಡು ಪವಿತ್ರವಾದ ಹಣದಿಂದ ಮಂದಿರವನ್ನು ಕಟ್ಟುವುದು ಶ್ರೇಷ್ಠ.

ಹೀಗೆ ಸನಾತನ ಧರ್ಮದ ಸಿದ್ಧಾಂತವನ್ನು ಅನುಷ್ಠಾನಗೊಳಿಸಲಾಗಿದೆ. ಏಕೆಂದರೆ ದೇವಾಲಯ ವೆಂಬುದು ಹಿಂದೂಧರ್ಮದ ಎಲ್ಲಾ ಜಾತಿಯ ಆತ್ಮಗೌರವದ ಮಹಾಸ್ಥಾನವಾಗಿರುತ್ತದೆ. ಇಂಥ ಅಭಿಯಾನದಲ್ಲಿ ಪಾಲ್ಗೊಂಡು ಸಾತ್ವಿಕ ದೇಣಿಗೆ ಸಮರ್ಪಣೆಗೆ ಹೊರಡುವ ಕಾರ್ಯಕರ್ತರನ್ನು ಸರಿಯಾಗಿ ಗಮನಿಸಿದರೆ ತಮ್ಮ ಮನೆಯ ಹೆಣ್ಣುಮಗಳ ಮದುವೆಗಾಗಿ, ಮಕ್ಕಳ ವಿದ್ಯಾಭ್ಯಾಸ ಕ್ಕಾಗಿ ವೈದ್ಯಕೀಯ ವೆಚ್ಚಕ್ಕಾಗಿ ಅಲೆಯುವ ಬೇಡುವ ದಯನೀಯ ಮುಖಗಳು ಗೋಚರವಾಗುತ್ತದೆಯೇ ಹೊರತು ಹೊಟ್ಟೆಪಾಡಿ ಗಾಗಿ ಬೆದರಿಸಿ ಬ್ಲಾಕ್ಮೇಲ್, ಗೂಂಡಾಗಿರಿ ಮಾಡಿ, ಭಾಷೆ, ಜಾತಿ, ಧರ್ಮಗಳೆಂಬ ವಿಷಯವನ್ನಿಟ್ಟುಕೊಂಡು ರೋಲ್ಕಾಲ್‌ಗೆ
ಇಳಿಯುವ ಗಿರಾಕಿಗಳಂತೆ ಕಾಣುವುದೇ ಇಲ್ಲ. ಅಂಥವರೆ ರಾಜಕೀಯ ನಾಯಕರ ಸುತ್ತಮುತ್ತಲೇ ಇರುತ್ತಾರೆ.

ಇಂಥ ಹಣ ಸಂಗ್ರಹದ ಕೆಲಸವನ್ನು ರಾಜಕೀಯ ಪಕ್ಷಗಳಿಗೆ ಮಾಡಲು ಹೇಳಿ!, ಸಫಾರಿ ದಿರಿಸಿನೊಂದಿಗೆ ಆರಂಭವಾಗಿ ಅದು ಅಂತಿಮವಾಗಿ ಲೆಕ್ಕಹಾಕುವ ಕಾಲಕ್ಕೆ ಪುಟಗೋಸಿಯಲ್ಲಿ ನಿಂತಿರುತ್ತದೆ. ಧರ್ಮಸ್ಥಳದಂಥ ದೇವಾಲಯದಲ್ಲಿ ನಡೆಯುವ ಅನ್ನದಾನವನ್ನು ನಡೆಸಲು ಹೇಳಿ. ಇವರ ಯೋಗ್ಯತೆಗೆ ಒಂದು ದಿನವೂ ನಡೆಸಲು ಸಾಧ್ಯವಾಗುವುದಿಲ್ಲ. ಸರಕಾರದ ಧಾರ್ಮಿಕ ದತ್ತಿ ಇಲಾಖೆಯೇ ಹಿಂದೂ ದೇವಾಲಯಗಳಿಂದ ಸಂಗ್ರಹವಾಗುವ ಹುಂಡಿಹಣವನ್ನು ಮಸೀದಿಗಳಿಗೆ ಚರ್ಚ್‌ಗಳಿಗೆ ಉಪಯೋಗಿಸುವ ದರಿದ್ರವಿದೆ.

ಮೊನ್ನೆ ಕುಮಾರಸ್ವಾಮಿ ಮಂದಿರದ ಹಣ ಸಂಗ್ರಹದ ಕುರಿತು ಮಾತನಾಡುತ್ತಾರೆ. ತಮಗೆ ಮತ ನೀಡಿಲ್ಲವೆಂಬ ಕಾರಣಕ್ಕೆ ಪ್ರಜೆಗಳ ಮೇಲೆ ಎಗರಾಡುವ ಇವರು ತಮ್ಮ ಮನೆಯ ಮಗನೇ ತಮ್ಮ ಪಕ್ಷವನ್ನು ಸೂಟ್ಕೇಸ್ ಪಕ್ಷವೆಂದು ಹೇಳಿರುವುದನ್ನು ಆತ್ಮವಿಮರ್ಶೆ ಮಾಡಿಕೊಳ್ಳ ಬೇಕಿದೆ. ಇನ್ನು ವಿಶ್ವನಾಯಕ ಸಿದ್ದರಾಮಯ್ಯ ವಕೀಲರಾದರೂ ಈ ದೇಶದ ಪರಮೋಚ್ಚ ನ್ಯಾಯಾಲಯವೇ ಭೂಮಿಯನ್ನು ಶ್ರೀರಾಮ ಮಂದಿರ ನಿರ್ಮಾಣಕ್ಕೆ ನೀಡಿ ನ್ಯಾಯವನ್ನು ಎತ್ತಿಹಿಡಿದಿರುವುದನ್ನು ಒಪ್ಪಿಕೊಳ್ಳದೆ ವಿವಾದದ ಜಾಗದಲ್ಲಿನ ಮಂದಿರಕ್ಕೆ ದೇಣಿಗೆ ನೀಡುವುದಿಲ್ಲವೆಂದು ಹೇಳಿರುವುದು ಅವರ ರಾಜಕೀಯ ಮನಸ್ಥಿತಿ ಯನ್ನು ಬೆಳಗಿಸುತ್ತಿದೆ.

ಇರಲಿ, ಇಂಥದೆ ಬಹಿರಂಗ ವಾದರೇನೇ ಮತದಾರನಿಗೆ ಆತ್ಮಾಭಿಮಾನ ಹೆಚ್ಚಿ ಯೋಚಿಸಲು ಸುಲಭವಾಗುತ್ತದೆ. ಇನ್ನು ಪೋಲಿ ಪುಂಡರು ಸೃಷ್ಟಿಯಾಗುವುದೇ ರಾಜಕೀಯ ಪುಡಾರಿ ಗಳಿಂದ. ಹೀಗಾಗಿ ಪೋಲಿ ಪುಂಡರುಗಳು, ಹಿರಿಯ ರಕ್ತಸಂಬಂಧಿಗಳ ಮುಖಕ್ಕೇ ಆಸಿಡ್ ಎರಚುವ ಪಾಪಿಗಳು, ವಂಚಕರು, ದೇಶದ್ರೋಹಿ ಗಳು, ಊರಿಗೇ ಬೆಂಕಿಹಚ್ಚುವ ಅನಕ್ಷರಸ್ಥರು ಇವರುಗಳೆ ರಾಜಕೀಯ ನಾಯಕರ ಸಂಬಂಧಿಗಳು ಒಡನಾಡಿ ಗಳು ಮತದಾರರುಗಳೇ ಆಗಿರುತ್ತಾರೆ.

ಪರಂತು ದೇಶವನ್ನು ಕಟ್ಟುವ ವಿಶ್ವಹಿಂದೂ ಪರಿಷತ್ತು, ಆರ್‌ಎಸ್‌ಎಸ್ ಅಥವಾ ಯಾವುದೇ ಹಿಂದೂ ಸಂಘಟನೆಗಳಾ ಗಿರುವುದಿಲ್ಲ. ಇದು ಈ ಮತಿಗೇಡಿ ನಾಯಕರಿಗೂ ಸ್ಪಷ್ಟವಾಗಿ ಗೊತ್ತು. ಆದರೂ ಇವರು ಹಿಂದೂಗಳ ಮೇಲೆಯೇ ಗೂಬೆಕೂರಿಸಿ ತಮ್ಮ ಅವಿವೇಕಿತನ ವನ್ನು ಪ್ರದರ್ಶಿಸಿ ವಿಕೃತ ಮಜಾ ಅನುಭವಿಸುತ್ತಾ ನೈತಿಕ ಬೆತ್ತಲಾಗುತ್ತಾರೆ. ಬೆಂಗಳೂರಿನಲ್ಲಿ ನಿಧಿ ಸಮರ್ಪಣಾ ಅಭಿಯಾನಕ್ಕೆ ಮೊದಲ ದೇಣಿಗೆ ನೀಡಿದವರು ಯಾರು ಗೊತ್ತೇ?.

ಅಭಿಯಾನದ ಮುಖ್ಯಸ್ಥರಾದ ತಿಪ್ಪೇಸ್ವಾಮಿಯವರು ಪುಟ್ಟೇನಹಳ್ಳಿಯ ಉಪೇಕ್ಷಿತ (ಸ್ಲಂ ನಿವಾಸಿಗಳು) ಪ್ರದೇಶದ ಮುರುಕು ಮನೆಯೊಂದಕ್ಕೆ ತೆರಳಿದಾಗ ಅವರನ್ನು ನಿಲ್ಲಿಸಿದ ಆಕೆ ಒಳಹೋಗಿ ಮೂರ್ನಾಲ್ಕು ನೋಟುಗಳನ್ನು ಜೋಡಿಸಿ ನೀಡಿದ್ದು ಐವತ್ತು ರುಪಾಯಿಗಳು. ಮತ್ತು ಆಕೆಯ ಹೆಸರು ಕೌಸಲ್ಯಮ್ಮ. ಪಾಪ ಆಕೆಗೆ ಆ ಐವತ್ತು ರುಪಾಯಿ ಒಂದೂವರೆ ಕೆಜಿ ಅಕ್ಕಿಗೆ ಆಗಬಹುದು. ಆದರೆ ಅದಕ್ಕಾಗಿ ಆಕೆ ಎಲ್ಎಲ್‌ಬಿ ಮಾಡಿರಬೇಕಿರಲಿಲ್ಲ. ಇನ್ನು ಕಾಂಗ್ರೆಸ್‌ನವರೇ ಆದ ನಿವೃತ್ತ ಅಧಿಕಾರಿ ಅಲೆಕ್ಸಾಂಡರ್ ಅವರು ರಾಮನನ್ನು ಕೊಂಡಾಡಿ, ಯೇಸುಮೂರ್ತಿಯ ಮುಂದೆ ನಿಧಿ ಸಮರ್ಪಣೆ ಮಾಡಿದ್ದಾರೆ.

ಸಿದ್ದರಾಮಯ್ಯನವರ ಒಡಹುಟ್ಟಿದ ತಮ್ಮ ಸಿದ್ದೇಗೌಡರೇ ದೇಣಿಗೆ ಸಮರ್ಪಿಸಿ ಮಾನವ ಸಹಜತೆಯನ್ನು ಮೆರೆದಿದ್ದಾರೆ. ಸಿದ್ದರಾಮ ಹುಂಡಿಯ ೪೦ ಸಾವಿರ ದೇಣಿಗೆ ಸಮರ್ಪಣೆಯಾಗಿದೆ. ಜಿ. ಪರಮೇಶ್ವರ, ಕೆ.ಎಚ್. ಮುನಿಯಪ್ಪನವರು ಕೂಡಾ
ರಾಮನಿಗಾಗಿ ಇಲ್ಲ ಎನ್ನಲಿಲ್ಲ ಎನ್ನುತ್ತಾರೆ. ಅಭಿಯಾನದ ಮುಖ್ಯಸ್ಥರಬ್ಬರಾದ ಮಂಜುನಾಥಸ್ವಾಮಿಗಳು. ಮುಸಲ್ಮಾನರು, ಕ್ರಿಶ್ಚಿಯನ್ನರು, ಅಂಗವಿಕಲರು, ಅಂಧರು, ಭಿಕ್ಷುಕರು, ಅಶಕ್ತರು, ಅಸಹಾಯಕರುಗಳೂ ಸ್ವಚ್ಛ ಮನಸ್ಸಿನಿಂದ ದೇಣಿಗೆ ಸಮರ್ಪಿಸಿದ್ದಾರೆ.

ಆದರೆ ಏರಲಾಗದ ಮಂಗ ಮರವನ್ನೇ ಡೊಂಕು ಎನ್ನುವಂಥವರಿಂದ, ಕಪಟಿ ಗಳಿಂದ, ಪಾಪಿಗಳಿಂದ ಶ್ರೀರಾಮ ಮಂದಿರದ
ಮಹಾತ್ಕಾರ್ಯಕ್ಕೆ ಅಪವಿತ್ರ ಹಣ ಜೋಡಣೆ ಯಾಗದಿರುವುದೇ ಶ್ರೇಷ್ಠವಲ್ಲವೇ?.