Friday, 21st June 2024

ರಾವಣ ತೇಲಿಸಿದ ಕಲ್ಲೂ, ಬಾಲಿವುಡ್ ಗುಲ್ಲೂ

ಅಭಿಮತ

ಪೃಥ್ವಿರಾಜ್ ಕುಲಕರ್ಣಿ

ರಾಮಾಯಣದಲ್ಲಿ ರಾಮ ಸೇತುವೆ ಕಟ್ಟುವಾಗ ವಾನರ ಸೈನ್ಯ ಬಂಡೆಗಳನ್ನು ಆಯ್ದು ತಂದು, ಅದರ ಮೇಲೆ ಜೈ ಶ್ರೀರಾಮ ಎಂದು ಬರೆದು ತೇಲಿ ಬಿಡುತ್ತಿದ್ದರು. ಅದರ ಬಗ್ಗೆ ಲಂಕಾದಲ್ಲಿ ಚರ್ಚೆಯಾಗುತ್ತದೆ. ಜನರು ರಾವಣನ ಹತ್ತಿರ ಬಂದು ‘ನಿಮ್ಮ ಶತ್ರು ಮಾಯಾವಿ ಇದ್ದಾನೆ. ಅವನ ಹೆಸರಲ್ಲಿ ಕಲ್ಲುಗಳೂ ತೇಲುತ್ತವೆ’ ಎಂದು ತಮ್ಮ ಆತಂಕ ತೋಡಿಕೊಳ್ಳತೊಡಗಿದರು.

ಆಗ ರಾವಣ, ‘ಆ ಕಾರ್ಯವನ್ನೂ ನಾನೂ ಮಾಡಬಲ್ಲೆ, ಬನ್ನಿ’ ಎನ್ನುತ್ತಾ ಸಮುದ್ರದ ದಡಕ್ಕೆ ಕರೆದುಕೊಂಡು ಹೋಗಿ ಒಂದು ಕಲ್ಲನ್ನು ಎತ್ತಿಕೊಂಡು ಅದರ ಮೇಲೆ ‘ರಾವಣೇಶ್ವರ’ ಎಂದು ಬರೆದು ತೇಲಿ ಬಿಟ್ಟನು. ಆಗ ಪ್ರಜೆಗಳಿಗೆ ಮತ್ತು ಲಂಕೆಯ ಸೈನಿಕರಿಗೆ ಧೈರ್ಯ ಬಂತು. ರಾತ್ರಿ ರಾವಣನ ಸತಿ ಮಂಡೊದರಿ, ‘ಕಲ್ಲನ್ನು ಹೇಗೆ ತೇಲಿಸಿದಿರಿ’ ಎಂದು ಪ್ರಶ್ನಿಸಿದರು. ಅದಕ್ಕೆ ರಾವಣ ಉತ್ತರಿಸಿದ್ದು ಏನೆಂದು ಗೊತ್ತೇ? ‘ಕಲ್ಲಿನ ಮೇಲೆ ನನ್ನ ಹೆಸರನ್ನೇ ಬರೆದೆ. ಆದರೆ, ಅದನ್ನು ನೀರಿನಲ್ಲಿ ಹಾಕುವಾಗ-ನೀನು ಮುಳುಗಿದರೆ ಶ್ರೀರಾಮನ ಆಣೆ ಎಂದಿದ್ದೆ.

ಹಾಗಾಗಿ ಕಲ್ಲು ಮುಳುಗಲಿಲ್ಲ’ ಎಂದನಂತೆ. ಹಾಗಾಗಿದೆ ಸದ್ಯ ಬಾಲಿವುಡ್‌ನ ಕತೆ! ಬಾಲಿ ವುಡ್‌ನ ಮಂದಿ ಮಾಡೋದೆಲ್ಲವನ್ನೂ ಮಾಡಿ, ಹಿಂದೂ ದೇಗಲುಗಳ, ಕ್ಷೇತ್ರಗಳ ದರ್ಶನದ ಸೋಗು ಹಾಕುತ್ತಿದ್ದಾರೆ. ಅದೊಂದು ಕಾಲವಿತ್ತು, ಪ್ಯಾನ್ ಇಂಡಿಯಾ ಚಿತ್ರಗಳೆಂದರೆ ಬಾಲಿವುಡ್ ಚಿತ್ರಗಳಷ್ಟೇ ಎಂಬ ದಿನಗಳವು. ಬೇರೆ ಭಾಷಾ ಚಿತ್ರರಂಗಕ್ಕೆ ಪ್ಯಾನ್ ಇಂಡಿಯನ್ ಎಂದರೇನೆಂಬುದೇ ಗೊತ್ತಿರಲಿಲ್ಲ. ಒಬ್ಬ ಹೀರೊ ಯಶಸ್ವಿ ಎನಿಸಿಕೊಳ್ಳಬೇಕೆಂದರೆ ಅವನಿಗೆ ಬಾಲಿವುಡ್‌ನಿಂದ ಬುಲಾವ್ ಬಂದರೆ ಸಾಕಿತ್ತು. ಜನರ ಪಾಲಿಗೆ ಆತ ನೆಚ್ಚಿನ ಹೀರೊ ಆಗಿಬಿಡುತ್ತಿದ್ದ. ತಾನು ಹುಟ್ಟಿದ್ದೇ ಹಿಂದಿ ಭಾಷೆಯಲ್ಲಿ ಎನ್ನುವ ರೀತಿಯಲ್ಲಿ ಬಾಲಿವುಡ್‌ಗೆ ಆತ ಕೂಡ ಹೋಗಿ ಬಿಡುತ್ತಿದ್ದ.

ಒಬ್ಬ ಹೀರೊಯಿನ್ ಬಾಲಿವುಡ್‌ನ ದಿಗ್ಗಜರೊಂದಿಗೆ ನಟಿಸಿದರೆ ಸಾಕಿತ್ತು, ಆಕೆ ಪ್ಯಾನ್ ಇಂಡಿಯನ್ ಮಟ್ಟದಲ್ಲಿ ಫೇಮಸ್ ಆಗಿಬಿಡುತ್ತಿದ್ದಳು. ಇಂದಿಗೂ ಅಂತಹ ಉದಹಾರಣೆಗಳು ನಮ್ಮ ಕಣ್ಣ ಮುಂದಿವೆ. ಆದರೆ, ಇತ್ತೀಚೆಗೆ ಹಿಂದೂ ವಿರೋಧದ ಸಂತತಿ ಮತ್ತು ನೆಪೊಟಿಸಮ್‌ನಿಂದಾಗಿ ಸಿನಿಪ್ರಿಯರು ಬಾಲಿವುಡ್ ಕಂಡರೆ ದಷ ಮಾಡುತ್ತಿದ್ದಾರೆ. ‘ಪಠಾಣ್’ ಸಿನೆಮಾದ ಹಾಡೊಂದ ರ ದೃಶ್ಯದ ವಿವಾದದ ನಂತರ ಮತ್ತೆ ಹಿಂದೂ ಸಮಾಜದ ಜನರು ಎಚ್ಚೆತ್ತುಕೊಂಡು ಬೈಕಾಟ್ ಮಾಡುತ್ತಿದ್ದಾರೆ. ಇದರ ಸುಳಿವರಿಯುತ್ತಿದ್ದಂತೆಯೇ ‘ಬಾಲಿವುಡ್ ಬಾದ್‌ಶಹಾ’ ಎಂದು ಕರೆದುಕೊಂಡ ಶಾರುಖ್‌ಖಾನ್, ಹಿಂದೂಗಳ ಓಲೈಕೆ
ಗಾಗಿ ದೇಗುಲ ಯಾತ್ರೆ ಆರಂಭಿಸಿದ. ಅತ್ತ ಅಮೀರ್‌ಖಾನ್ ಕಳಶಪೂಜೆ ಮಾಡುತ್ತಾನೆ.

ಬಾಲಿವುಡ್‌ನ ಕಾಲ ಬದಲಾಗಿದ್ದನ್ನು ಅರಿತ ಈ ಮಂದಿಗೆ ಹಿಂದೂ ಸಮಾಜದವರ ಓಲೈಕೆಗಿಳಿಯುವುದು ಅನಿವಾರ್ಯವಾಗಿದೆ. ಇವರು ಸಹಜವಾಗಿ, ಸಿನೇಮಾದ ಶ್ರೀಮಂತಿಕೆಗಾಗಿ ಏನೋ ಒಂದು ಬಣ್ಣ ಬಳಸಿದರೂ ಅದರ ಹಿಂದೆ ಅನುಮಾನ ಹುಟ್ಟಿ ಕೊಳ್ಳುವಂತಾಗಿದೆ. ಬೇಷರಮ್ ರಂಗ್‌ನ ವಿಚಾರದಲ್ಲೂ ಆಗಿರುವುದು ಹೀಗೇ. ಕಾರಣ ಇಷ್ಟೇ, ಬಾಲಿವುಡ್‌ನಲ್ಲಿ ಮೊದಲಿಂದಲೂ ವಿಲನ್, ಗುಂಡಾ, ಕಿಡ್ನಾಪರ್, ಅಂಡರ್‌ವರ್ಡ್ ಡಾನ್, ಲಫಂಗರ ಪಾತ್ರದ ಕಾಸ್ಟ್ಯೂಮ್ ಡಿಸೈನಿಂಗ್‌ನಲ್ಲಿ ಕೊರಳಲ್ಲಿ ರುದ್ರಾಕ್ಷಿ ಹಾಗೂ ಹಣೆಯ ಮೇಲೆ ತಿಲಕ ಇದ್ದುಕೊಂಡೇ ಬಂದಿದೆಯಲ್ಲಾ? ಇದರ ಪ್ರಭಾವ ಜನ ಸಾಮಾನ್ಯರ ಮೇಲೆ ಎಷ್ಟಾಗಿದೆ ಎಂದರೆ, ಮನೆಯಲ್ಲಿ ಹಬ್ಬ ಹುಣ್ಣಿಮೆಗಳ ಹೊರತಾಗಿ ಯಾವಾಗಾದರೂ ಹಣೆ ಮೇಲೆ ಕುಂಕುಮ ಹಚ್ಚಿಕೊಂಡರೆ ಉತ್ತರ ಕರ್ನಾಟದ
ಮನೆಗಳಲ್ಲಿ ‘ಹಿಂಗ್ಯಾಕ್ ಗುಂಡಾ ಗತೆ ಆಗಿ’ ಎಂದು ಕೇಳುವಂತಾಗಿದೆ.

ಇನ್ನು ಪುರೋಹಿತರ ಧೊತಿ ಬಾಲಿವುಡ್ ಕಣ್ಣಿಗೆ ಯಾವಾಗಲೂ ಹಾಸ್ಯಾಸ್ಪದವಾಗಿಯೇ ಕಾಣುವುದೇಕೋ? ತೀರಾ ಮೊನ್ನೆಮೊನ್ನೆ ಯವರೆಗೂ ದೇವರ ವೇಷ-ಭೂಷಣ ಹಾಕಿಸಿ ಅವರಿಂದ ಕಳ್ಳತನ, ಮೋಸ, ವಂಚನೆ ಮಾಡುವ ದೃಶ್ಯಗಳನ್ನು ತೊರಿಸಿಕೊಂಡು ಬಂದಿದ್ದಾರೆ. ಬಾಲಿವುಡ್ ಸಿನೆಮಾಗಳಲ್ಲಿ ಶಿವನ ಪಾತ್ರಧಾರಿ ಗಾಂಜಾ, ಬಾಂಗ್ ಹೊಡೆಯುವ ದೃಶ್ಯಗಳನ್ನು ತೋರಿಸಿದ್ದೇನು ಕಡಿಮೆಯೇ? ರಾಸಲೀಲೆ ಎಂದಾಕ್ಷಣ ಕೃಷ್ಣ ಪರಮಾತ್ಮನನ್ನು ತೋರಿಸಲಾಗುತ್ತದೆ. ವಿಲನ್‌ಗೆ ಸುಲಭದಲ್ಲಿ ಸಿಗುವುದು ರಾಮಾಯಣದ ರಾವಣನೇ ಆದರೂ ರಾಮನ ಪಾತ್ರಧಾರಿ ಸದಾ ಸೊಣಕಲು ದೇಹದ, ಬೀದಿ ಭಿಕಾರಿ ಇವರಿಗೆ. ಒಮ್ಮೆಯೂ ಸರ್ವಶಕ್ತ, ಸದೃಢ ರಾಮ ಕಾಣಲೇ ಇಲ್ಲ.

ರಾಸಲೀಲೆ ಹೊರತುಪಡಿಸಿ, ಕೃಷ್ಣನ ಗೀತೋ ಪದೇಶದ ಪಾತ್ರ ಬಂದೇ ಇಲ್ಲ. ಏನು ಇವೆಲ್ಲದರ ಅರ್ಥ? ಇತ್ತೀಚೆಗೆ ಜನರು ಎಚ್ಚೆತ್ತುಕೊಂಡಿದ್ದಾರೆ. ಹೀಗೆ ಪರೋಕ್ಷವಾಗಿ ಅವಹೇಳನ ಮಾಡುವುದನ್ನೂ ಗುರುತಿಸುತ್ತಿದ್ದಾರೆ. ಶಾರುಖ್‌ನ ‘ಪಠಾಣ್’ನಲ್ಲಿ ಕೇಸರಿ, ಹಸಿರು ಬಣ್ಣ ಬಳಸಿರುವುದು ಕಾಕತಾಳೀಯವೇ ಆಗಿದ್ದರೂ, ಅದರ ಹಿಂದೆ ಉದ್ದೇಶ ಪೂರ್ವಕ ಪಿತೂರಿಯ ಬಗ್ಗೆ
ಶಂಕೆ ಇಲ್ಲದಿಲ್ಲ.

ಇರಲಿ, ೨೦೦೧ರಲ್ಲಿ ಬಿಡುಗಡೆ ಆದ ‘ಲಜ್ಜಾ’ ಚಿತ್ರದಲ್ಲಿ ಮಾಧುರಿ ದಿಕ್ಷಿತ್ ಮಧ್ಯ ಸೇವನೆ ಮಾಡಿ ಸೀತಾದೇವಿಯ ಪಾತ್ರ ಮಾಡಿದ್ದು ಗುಲ್ಲೆದ್ದಿತ್ತು! ಶಾರುಖ್ ಖಾನ್ ಅಭಿನಯದ ‘ಮೆ ಹೂ ನಾ’ ಚಿತ್ರದ ನಿರ್ದೇಶಕಿ ಫರಹಾ ಖಾನ್, ಚಿತ್ರದಲ್ಲಿನ ರೌಡಿ ಪಾತ್ರಕ್ಕೆ ಮುಸ್ಲಿಂ ಹೆಸರನ್ನು ಕೊಡಲು ಹಿಂಜರೆದು, ರಘು ಎಂಬ ಹಿಂದೂ ಹೆಸರನ್ನು ಸೂಚಿಸುತ್ತಾರೆ. ಅದನ್ನು ಅವರೇ ಮಾಧ್ಯಮದ ಮುಂದೆ ಒಪ್ಪಿಕೊಂಡಿದ್ದಾರೆ. ಇನ್ನು ‘ಜುಡ್ವಾ ೨’ಚಿತ್ರದ ಹಾಡಿನಲ್ಲಿ ಒಂದು ಸಾಲು ‘ಗಣಪತಿ ಬಪ್ಪಾ ಮೋರ‍್ಯಾ ಪರೆಶಾನ್ ಕರೆ ಮುಜೆ ಚೊರಿಯಾ’ಎಂದಿದೆ.

ನೀವೇ ಯೋಚಿಸಿ ದೇವರ ಹಾಡಿನಲ್ಲಿ ಇಂತಹ ಲಿರಿಕ್ಸ್ ಕಾಣಿಸುತ್ತದೆಯಾ? ‘ದಬಾಂಗ್’ ಚಿತ್ರದ ದೃಶ್ಯವೊಂದರಲ್ಲಿ ಸಾಧುಗಳನ್ನು ಅವಹೇಳನ ಮಾಡಲಾಯ್ತು. ಹಿಂದಿಯ ಸೀರಿಸ್ ‘ಸ್ಯಾಕ್ರೆಡ್ ಗೇಮ್ಸ್’ನಲ್ಲಿ ಅವಹೇಳನಕಾರಿ ಡೈಲಾಗ್ ಗಳು ಹೇರಳವಾಗಿವೆ. ಇದರ ವಿಲನ್ ಒಬ್ಬ ಗುರುಜಿ ಆಗಿದ್ದು, ಅವನಿಗೆ ಪೂಜೆ ತಂತ್ರಗಳು ಮತ್ತು ಗೀತೆಯ ಜ್ಞಾನವಿರುತ್ತದೆ. ‘ಓಎಮ್‌ಜಿ’ ಚಿತ್ರದಲ್ಲಿ ದೇವರನ್ನು ದುಡ್ಡಿನಿಂದ ಅಳೆಯಲಾಗಿದೆ. ತೀರಾ ಇತ್ತೀಚೆಗಿನ ‘ಪಿಕೆ’ ಚಿತ್ರದ ಬಗ್ಗೆ ಹೇಳುವುದೇ ಬೇಡ. ಅವಹೇಳನ ಮಾಡುವ ಉದ್ದೇಶ ದಿಂದಲೇ ಮಾಡಲಾದ ಚಿತ್ರವೆನ್ನುವಷ್ಟರ ಮಟ್ಟಿಗೆ ತೋರಿಸಲಾಗಿದೆ ಹಿಂದೂ ದೇವರುಗಳನ್ನು. ಸಲ್ಮಾನ್ ಖಾನ್ ಅಭಿನಯದ ‘ಬಜರಂಗಿ ಭಾಯಿ ಜಾನ್’ ಚಿತ್ರದಿಂದ ಜಾತ್ಯತೀತತೆ ಸಾರುವ ಯತ್ನದಲ್ಲಿ ಹನುಮನ ಭಕ್ತನ ಪಾತ್ರದಲ್ಲಿ ಆತ ಅಭಿನಯಿಸಿದ್ದರೂ, ಪಾಕಿಸ್ತಾನದ ಓಲೈಕೆ ಇಲ್ಲದಿಲ್ಲ.

ಸಂಜಯ್ ದತ್ತ ಅವರ ನೈಜ ಜೀವನಾಧಾರಿತ ಚಿತ್ರದಲ್ಲಿ ಸಂಜಯ್ ಅಂಡರ್ ವರ್ಡ್ ಡಾನ್ ಜತೆ ಸ್ನೇಹವಿದ್ದರೂ ಗಣೇಶೋ ತ್ಸವಕ್ಕೆ ಹೋಗಲು ನಿರಾಕರಿಸಿದ್ದರ ಅರ್ಥವೇನು? ಇನ್ನು ಚಿತ್ರಗೀತೆಗಳ ವಿಚಾರಕ್ಕೆ ಬಂದರೇ, ಅದರಲ್ಲೂ ಧರ್ಮದ ಅವಹೇಳನ ಹೇರಳ ವಾಗಿದೆ. ‘ದಮ್ ಮಾರೋ ದಮ್ ಮಿಟಜಾಯೇ ಗಮ್, ಬೊಲೊ ಸುಭ ಶಾಮ್, ಹರೆ ಕೃಷ್ಣ ಹರೆ ರಾಮ್’ ಎನ್ನುವ ಹಾಡು ಏನು ಮೆಸೆಜ್ ಕೊಡುತ್ತದೆ ಎಂದು ಇನ್ನುವರೆಗೆ ತಿಳಿ ಯದ ವಿಚಾರ. ಇವುಗಳು ಬರೀ ಉದಾಹರಣೆಗಳು. ಹೀಗೆ ನೋಡುತ್ತ ಹೋದರೆ ಇನ್ನು ಸಾಲೂ ಸಾಲು ಸಿನೆಮಾಗಳು ಸಿಗುತ್ತವೆ.

ಅದೇ ಹಿಂದುಗಳ ಮೇಲಾದ ದಬ್ಬಾಳಿಕೆ ಯನ್ನು ತೊರಿಸುವ ‘ಕಾಶ್ಮೀರ್ ಫೈಲ್ಸ್’ ನಂತಹ ಚಿತ್ರಗಳು ಬಂದರೆ ಆ ನಿರ್ದೇಶಿಕರಿಗೆ ಹೆಚ್ಚಿನ ಸೆಕ್ಯೂರಿಟಿಯನ್ನು ಕೊಡಬೇಕಾದ ಅನಿವಾರ್ಯವಿದೆ ನಮ್ಮಲ್ಲಿ. ನಮ್ಮ ಇತಿಹಾಸ ಪುಸ್ತಕ ಗಳಂತೇ ಮೊಘಲರ ಆಳ್ವಿಕೆಯನ್ನೇ ಬಾಲಿವುಡ್ ಸಹ ಯಾವಾಗಲೂ ಎತ್ತಿ ಹಿಡಿಯುತ್ತದೆ. ನೆನಪಿಡಿ, ಕಾಲ ಬದಲಾಗಿ ಹೋಗಿದೆ. ‘ಬಾಹುಬಲಿ’ಯಂತಹ ಚಿತ್ರಗಳಿಂದ ಜನರ ಚಿತ್ತ ಸೌತ್ ಸಿನೆಮಾಗಳತ್ತ ಸಾಗಲು ಪ್ರಾರಂಭಿಸಿದೆ. ಸುಶಾಂತ್ ಸಿಂಗ್‌ನ ಸಾವಿನ ನಂತರ ಬಾಲಿವುಡ್‌ಗೆ ಗಂಡಾಂತರ ಸೃಷ್ಟಿಯಾಗಿದೆ. ಜನರು ಬಾಲಿವುಡ್‌ನನ್ನು ದ್ವೇಷಿಸಲು ಪ್ರಾರಂಭಿಸಿದ್ದಾರೆ. ಅವರು ಮಾಡಿದ್ದೇ ‘ಮಹಾಪ್ರಸಾದ’ ಎಂಬ ಕಾಲ ಮುಗಿದು ಹೋಗಿದೆ.

ಯೂಟ್ಯೂಬರ್‌ಗಳು ಸಹ ಬಾಲಿವುಡ್ ಬಗ್ಗೆ ಟ್ರೋಲ್ ಮಾಡಲಾರಂಭಿಸಿದ್ದಾರೆ. ಕ್ಯಾರಿ ಮಿನಾಟಿ ಎಂಬ ಯುಟ್ಯೂಬರ್ ಬಾಲಿವುಡ್ ಅನ್ನು ರೋಸ್ಟ್ ಮಾಡಿದ್ದಾನೆ. 2021, 2022ರಲ್ಲಿ ಬಂದ ಕೆಜಿಎಫ್೧ ಮತ್ತು ೨, ಟ್ರಿಪಲ್ ಆರ್, ಪುಷ್ಪಾ, ವಿಕ್ರಮ್,
ಕಾಂತಾರದಂತಹ ಸಿನೆಮಾಗಳು ಬಂದ ನಂತರ ಬಾಲಿವುಡ್‌ಗೆ ಭಯ ಪ್ರಾರಂಭವಾಗಿದ್ದು ಸುಳ್ಳಲ್ಲ. ಇದರ ಬೆನ್ನಲ್ಲೇ ಹಿಂದುಗಳ ಓಲೈಕೆಗೆ ಎಡಬಿಡಂಗಿ ಕರಣ್ ಜೋಹರ್ ನಿರ್ಮಾಣದಲ್ಲಿ ‘ಬ್ರಹ್ಮಾಸ’ ಎಂಬ ಚಿತ್ರವನ್ನು ತೆರೆಗೆ ತರಲು ಪ್ರಯತ್ನಿಸಿದರು. ಆದರೆ
ಚಿತ್ರದ ನಾಯಕ ಮತ್ತೆ ಗೋ ಹತ್ಯಾದ ವಿವಾದವನ್ನು ತಲೆ ಮೇಲೆ ಹೊತ್ತುಕೊಂಡ.

ಅದರಿಂದ ನಿರೀಕ್ಷಿತ ಫಲ ದೊರಕಲಿಲ್ಲ. ಕೆಜಿಎಫ್ನ ನಂತರ ಸಂಜಯ್ ದತ್ತ ಅವರ ವರ್ತನೆ ಬಾಲಿವುಡ್‌ನಲ್ಲಿ ಚರ್ಚೆ ಯಾಗು ವಂತಿತ್ತು. ಭಾಷಾ ಚಿತ್ರಗಳು ಈಗ ಬಾಲಿವುಡ್‌ಗೆ ಯಾವುದೇ ರೀತಿಯಲ್ಲೂ ಕಡಿಯಾಗಿ ಉಳಿದಿಲ್ಲ. ಮೊದಲೂ ಇರಲಿಲ್ಲವಾದರೂ ಅವರ ‘ಖಾನ್‌ದಾನ್’ಗಳನ್ನು ನಂಬುವ ಕಾಲ ಈಗಿಲ್ಲ. ಹೀಗಾಗಿ ಬಾಲಿವುಡ್ ಮತ್ತೆ ಮೇಲೇಳಲು ತಡಕಾಡುತ್ತಿದೆ. ‘ಬೇಶರಮ್ ಖಾನ್’ಗಳಿಗೆ ಈ ಉಳಿದಿರುವುದು ‘ಟೆಂಪಲ್ ರನ್’ ಒಂದೇ ಮಾರ್ಗ. ಈ ಮೂಲಕ ರಿಯಲ್ ಲೈ-ನಲ್ಲೂ ಆಕ್ಟಿಂಗ್ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಸ್ವಚ್ಛ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ‘ಕಾಂತಾರ’ದಂಹ ಸಿನೆಮಾಗಳು ಬಂದರೆ ಅವುಗಳನ್ನು ಬೀಳಿಸಲು ಸೋ ಕಾಲ್ಡ್ ಹೋರಾಟಗಾರರು ಇನ್ನಿಲ್ಲದ ತಂತ್ರ ಹೂಡುತ್ತಿದ್ದಾರೆ. ಅದಿಲ್ಲದಿದ್ದರೆ, ಈ ಖಾನ್‌ಗಳಿಂದ ಒಂದೇ ಒಂದು ಮೆಚ್ಚುಗೆಯ ಮಾತು ಈ ಯಾವುದಾದರೂ ಯಶಸ್ವಿ ಚಿತ್ರದ ಬಗ್ಗೆ ಈವರೆಗೆ ಬಂದಿಲ್ಲವೇಕೆ?

Read E-Paper click here

error: Content is protected !!