Saturday, 20th April 2024

ಈ ಎಲ್ಲದರ ನಡುವೆ ಸಂಬಂಧಗಳು ಸತ್ತು ಹೋಗಿವೆ !

ಪರಿಶ್ರಮ

parishramamd@gmail.com

ನೀವೇ ಒಂದು ಬಾರಿ ಯೋಚನೆ ಮಾಡಿ ನಿಮಗೆ ಫೇಸ್‌ಬುಕ್‌ನಲ್ಲಿ ಸಾವಿರಾರು ಸ್ನೇಹಿತರು ಇರಬಹುದು. ಇನ್‌ಸ್ಟಾಗ್ರಾಮ್‌ ನಲ್ಲಿ ಸಾವಿರಾರು ಜನ ಫಾಲೋವರ‍್ಸ್ ಇರಬಹುದು. ಆದರೆ ನಿಮಗೆ ಕಷ್ಟ ಬಂದಾಗ ನೀವು ಕರೆ ಮಾಡುವುದು ಮೊದಲ ನಂಬರ್  ಯಾರದ್ದು ಗೊತ್ತಾ? ಅದರ ಮೇಲೆ ನೀವು ನಿಮ್ಮ ಸಂಬಂಧಗಳನ್ನು ಹೇಗೆ ಇಟ್ಟುಕೊಂಡಿದ್ದೀರಾ ಎನ್ನುವುದು ನಿರ್ಧಾರವಾಗುತ್ತದೆ.

ಮುಂಜಾನೆ ಕಣ್ಣು ಬಿಡುವ ಮುಂಚೆ ಪೋನ್ ರಿಂಗಾಗುತ್ತದೆ. ‘ಅಣ್ಣಾ ಬೆಂಗಳೂರಿಗೆ ಬಂದಿದ್ದೀನಿ, ನಿಮ್ಮ ಮನೆ ಎಲ್ಲಿರೋದು ಅಣ್ಣ’, ಅಂತ ಆ ಕಡೆಯಿಂದ ಧ್ವನಿ ಕೇಳಿದ ಕೂಡಲೇ ‘ಪೋನ್ ಮಾಡಿ ಬರುವುದಿಲ್ಲವೆ’ ಎಂದು ಈ ಕಡೆ ಇದ್ದವರು ಕೇಳಿದರು. ‘ನಾನು ಹೊರಗಡೆ ಇದ್ದೀನಿ ಅಣ್ಣ, ಮೂರು ದಿನ ಆಗುತ್ತದೆ ಬರುವುದಕ್ಕೆ’ ಎಂದು ಹೇಳಿ, ಆ ಕಡೆಯಿಂದ ಉತ್ತರ ಬರುವ ಮೊದಲೇ ಪೋನ್ ಕಟ್ ಮಾಡುತ್ತೇವೆ. ನಮ್ಮನ್ನು ನಂಬಿ ಬೆಂಗಳೂರಿಗೆ ಬಂದವರನ್ನು ದಾರಿಯಲ್ಲಿಯೆ ಬಿಟ್ಟು ಬಿಡುತ್ತೇವೆ.

ಒಂದು ವಿಷಯ ಕೇಳಬೇಕಿತ್ತು. ‘ಏನಿಲ್ಲ ಅಣ್ಣ ನನಗೆ ಸ್ವಲ್ಪ ಹಣ ಬೇಕಾಗಿತ್ತು’. ಅಂತ ಕೇಳಿದಾಗ ‘ಅಣ್ಣ ಸರಿಯಾಗಿ ಸಿಗ್ನಲ್ ಇರೋ ಕಡೆ ಬಂದು ಮಾತನಾಡು ನೀನು ಹೇಳುತ್ತಿರುವುದು ನನಗೆ ಕೇಳಿಸುತ್ತಿಲ್ಲ’ ಅಂತ ಹೇಳಿ ಕಟ್ ಅದ ಕಾಲ್ ಮತ್ತೇ ಕರೆಬರುವುದೆಯಿಲ್ಲ. ಅಂದರೆ ಸಂಬಂಧಗಳು ಸತ್ತು ಎಷ್ಟು ದಿನಗಳಾ ಗಿವೆ? ನೀವು ನಿಮ್ಮ ಅಪ್ಪ-ಅಮ್ಮಂದಿರ ಹತ್ತಿರ ಕುಳಿತುಕೊಂಡು ಸರಿಯಾಗಿ ಅವರನ್ನು ಮಾತನಾಡಿಸಿ ಎಷ್ಟೋ ದಿನಗಳಾ ದವು? ನಿಮ್ಮ ಹೆಂಡತಿ ಆರೋಗ್ಯ ಚೆನ್ನಾಗಿದಿಯಾ ಎಂದು ಕೇಳಿ ನೆನಪಿದೆಯೇ? ಮಗ ಅಥವಾ ಮಗಳು ಏನು ಓದುತ್ತಿದ್ದಾರೆ ಎಂಬುದು ನಿಮಗೆ ಗೊತ್ತೆ? ನಿಮ್ಮ ಊರಿನಲ್ಲಿ ಜಾಮೀನು ಎಷ್ಟಿದೆ ಮತ್ತು ಎಲ್ಲಿದೆ ಎಂಬುದು ನೆನಪಿದಿಯಾ? ಊರಿನ ಜಾತ್ರೆಗೆ ಹೋಗಿ ಎಷ್ಟು ವರ್ಷಗಳಾಗಿವೆ? ನಿಮ್ಮ ಮಕ್ಕಳನ್ನು ನಿಮ್ಮ ಊರಿಗೆ ಕರೆದುಕೊಂಡು ಹೋಗಿ, ಸಂಬಂಧಿಕ ರನ್ನು ಪರಿಚಯಿಸಿಕೊಟ್ಟ ನೆನಪಿದೆಯೇ? ಸಂಬಂಧಗಳು ಸಾಯುವುದಿಲ್ಲ! ಅದನ್ನು ಸಾಯಿಸಲಾಗುತ್ತಿದೆ.

೧೫ ವರ್ಷಗಳ ಹಿಂದೆ, ಮೊದಲೆಲ್ಲ ರಜೆ ಬಂತೆಂದರೆ ನಮಗೆಲ್ಲ ಅಜ್ಜಿ-ಅಜ್ಜನ ಮನೆಗೆ ಹೋಗುವ ಕಾತುರ ಮತ್ತು ಮಾವನ ಮಕ್ಕಳು, ಊರಿನ ಹೊಸ ಗೆಳೆಯರ ಜೊತೆ ಊರು ಸುತ್ತುವುದು, ತೋಟಕ್ಕೆ ನುಗ್ಗಿ ಹಳ್ಳದಲ್ಲಿ ಬೀಳುವುದು, ತೆಂಗಿನ ಬ್ಯಾಟಿನಲ್ಲಿ ಕ್ರಿಕೆಟ್ ಆಟವಾಡುವಾಗ, ಅಜ್ಜಿ ಕರೆಯುವ ತನಕ ಮೈದಾನ ಬಿಟ್ಟು ಬರದೆ. ಅಜ್ಜ ಪೇಟೆಯಿಂದ ತಂದು ಕೊಡುತ್ತಿದ್ದ ತಿಂಡಿಗೆ
ಕಾಯುತ್ತಿದ್ದ ಆ ದಿನಗಳನ್ನು ಒಮ್ಮೆ ನಿಮ್ಮ ಮಕ್ಕಳಿಗೆ ಹೇಳಿ, ನೀವು ಓದುತ್ತಿದ್ದ ವಿದ್ಯಾಸಂಸ್ಥೆಯನ್ನು ನಿಮ್ಮ ಮಕ್ಕಳಿಗೆ
ತೋರಿಸಿ, ನಿಮ್ಮ ಸ್ನೇಹಿತರ ಪರಿಚಯ ಮಾಡಿಸಿ.

ನೀವು ಸತ್ತಾಗ ಬರುವುದು ನಿಮ್ಮವರೆ ಹೊರತು, ಹಣಕ್ಕೆ ಬೆಲೆಕೊಟ್ಟು ನಿಮ್ಮ ಜೊತೆ ಇದ್ದವರು ಕಾರಿನಲ್ಲಿ ನೇರವಾಗಿ ಸುಡು ಗಾಡಿಗೆ ಬರುತ್ತಾರೆ. ಇದೇ ವ್ಯತ್ಯಾಸ ನಿಮ್ಮನ್ನು ಹೊತ್ತು ಕೊನೆ ಗಟ್ಟಿಮುಟ್ಟಿಸುವುದು ನಿಮ್ಮವರೆ, ಆದ್ದುದರಿಂದ ಸಂಬಂಧಗಳು ನಮಗೆ ಬಹಳ ಮುಖ್ಯ.

ನಮಗೆ ಸಂಬಂಧಗಳ ಬಗ್ಗೆ ಸಂಬಂಧಿಕರ ಬಗ್ಗೆ ಹೇಳಿಕೊಳ್ಳುವುದ್ಯಾವುದೊಂದು ದೊಡ್ಡ ಶಕ್ತಿ ನಿಮಗೆ ಅಡ್ಡ ಬರುತ್ತದೋ ಗೊತ್ತಿಲ್ಲ. ಹರಿದ ಬಟ್ಟೆಯವರನ್ನು ನಮ್ಮ ಬಂಧುಗಳು ಎಂದು ಹೇಳಿಕೊಳ್ಳುವುದಕ್ಕೆ ನಮಗೆ ಮುಜುಗರವಾಗುತ್ತದೆ. ನಾವು ಹಿಂದೆ ಒಂದು ದಿನ ಅವರ ನೆರಳಲ್ಲೇ ಇದ್ದೆವು ಎಂಬುದನ್ನೂ ಮರೆತು ಬಿಡುತ್ತೇವೆ. ಸಿನಿಮಾ ಕಣ್ಣ ಮುಂದೆ ಬಂದು
ಹೋಗುತ್ತದೆ. ಆಗಾಗ ಬಂದು ಹೋಗುವ ಇಂತಹ ಆದರ್ಶಯುತ ಸಿನಿಮಾಗಳು ನಮಗೆ ಜೀವನ ಪಾಠ ಹೇಳಿಕೊಡುತ್ತದೆ.

ಅಪ್ಪ ಹಳ್ಳಿಯಿಂದ ಕಳಿಸುವ ಹಣ ಒಂದು ದಿನ ತಡವಾದರೆ ಕೋಪಗೊಳ್ಳುವ ನಾವು ಅಪ್ಪ ಅದನ್ನು ಕಳುಹಿಸುವುದಕ್ಕೆ ಎಷ್ಟು ಕಷ್ಟಪಡುವ ಬಗ್ಗೆ ಯಾಕೆ ಸ್ವಲ್ಪವು ಯೋಚಿಸುವುದಿಲ್ಲ ನಾವು? ಅಮ್ಮ ಊಟ ಕೊಡುವುದಕ್ಕೆ ಸ್ವಲ್ಪ ಸಮಯ ತಡವಾದರೆ ಕೂಗಾಡುವ ನಾವು, ಅಮ್ಮ ಬೆಳಿಗ್ಗೆಯಿಂದ ನಮಗಾಗಿ ಎಷ್ಟು ದುಡಿಯುತ್ತಿದ್ದಾಳೆ ಎಂದು ಯಾಕೆ ಯೋಚಿಸುವುದಿಲ್ಲ? ನಮ್ಮ ದಾರಿ ಕಾಯುತ್ತ ಊರಿನಲ್ಲಿ ಕಾಯುವ ಅಜ್ಜ-ಅಜ್ಜಿ, ಅತ್ತೆಯ ಮಕ್ಕಳು, ಊರಿನ ಗೆಳೆಯರು ನಮ್ಮನ್ನು ನಿಜವಾಗಿ ಪ್ರೀತಿಸುವ ಜೀವಗಳು.

ನಾವು ಅವರಿಗೆ ಪ್ರತಿದಿನ ಕರೆ ಮಾಡುವ ಅವಶ್ಯಕತೆ ಇಲ್ಲ. ಅವರಿಗೆ ನಿಮ್ಮ ದುಡ್ಡಿನ ಅವಶ್ಯಕತೆ ಅದು ಅವರಿಗೆ ಬೇಕಾಗುವುದಿಲ್ಲ. ನಿವೇನಾದರೂ ತಂದು ಕೊಡುತ್ತಿರೆಂದು ಅವರು ನಿಮ್ಮ ದಾರಿ ಕಾಯುವವರು ಅಲ್ಲ. ಒಮ್ಮೆ ಯೋಚನೆ ಮಾಡಿ ನಮ್ಮ ಅಜ್ಜನೋ-ಅಜ್ಜಿಯೋ, ಊರಿನಲ್ಲಿರುವ ಅಪ್ಪನೋ-ಅಮ್ಮನೋ ಎಂದಿಗಾದರೂ ನೀವು ಹೋದ ಕೂಡಲೇ ನೀವೆನಾದರೂ ತಂದಿದ್ದಿರಾ ಎಂದು ನಿಮ್ಮ ಕೈ ನೋಡಿದ ಉದಾಹರಣೆ ಕೊಡಿ? ಅಥವಾ ಬಂದ ಕೂಡಲೇ
ಕುಡಿಯುವು ದಕ್ಕೆ ನೀರು ಕೊಟ್ಟು, ಈ ಬಿಸಿಲಿನಲ್ಲಿ ಬಂದಿದ್ದಿಯಾ ಮಗು ಮೊದಲು ಊಟ ಮಾಡು, ತದನಂತರ ಮಾತನಾಡೋಣ ಎಂದು ಹೇಳಿರುವ ಮಾತು ನಿಮಗೆ ನೆನಪು ಬರುತ್ತದೆಯಾ? ನೀವೇ ಒಂದು ಬಾರಿ ಯೋಚನೆ ಮಾಡಿ ನಿಮಗೆ ಫೇಸ್ ಬುಕ್‌ನಲ್ಲಿ ಸಾವಿರಾರು ಸ್ನೇಹಿತರು ಇರಬಹುದು.

ಇನ್ ಸ್ಟಾಗ್ರಾಮ್‌ನಲ್ಲಿ ಸಾವಿರಾರು ಜನ ಫಾಲೋವರ‍್ಸ್ ಇರಬಹುದು. ಆದರೆ ನಿಮಗೆ ಕಷ್ಟ ಬಂದಾಗ ನೀವು ಕರೆ
ಮಾಡುವುದು ಮೊದಲ ನಂಬರ್ ಯಾರದ್ದು ಗೊತ್ತಾ? ಅದರ ಮೇಲೆ ನೀವು ನಿಮ್ಮ ಸಂಬಂಧಗಳನ್ನು ಹೇಗೆ ಇಟ್ಟುಕೊಂಡಿ ದ್ದೀರಾ ಎನ್ನುವುದು ನಿರ್ಧಾರವಾಗುತ್ತದೆ. ನಿಮ್ಮ ದುಃಖಕ್ಕೆ ನಿಮ್ಮ ಫೇಸ್‌ಬುಕ್ ಸ್ನೇಹಿತರ ಡಿಛಿ Zಛಿ ಡಿಜಿಠಿe qsಟ್ಠ, oಟ oZb ಎಂದು ಹೇಳಿ ಕಾಮೆಂಟ್ ಹಾಕಬಹುದೇ ಹೊರತು ನೀವು ಕಣ್ಣೀರಿಡುವಾಗ ಹೆಗಲಾಗಲಿ, ಕಣ್ಣೀರೋರೆಸುವ ಕೈಯಾಗಲೀ ಎಂದು ನಿಮ್ಮ ಹತ್ತಿರ ಬರಲು ಸಾಧ್ಯವೇ ಇಲ್ಲ? ಫೋನಿನಲ್ಲಿ ನಾವು ಕಳೆಯುವ ಸಮಯವನ್ನು ನಮ್ಮ ಸಂಬಂಧಗಳನ್ನು ಗಟ್ಟಿ
ಮಾಡುವಲ್ಲಿ ವಿನಿಯೋಗಿಸಿ.

ಅದು ನಿಮಗೆ ಸಹಾಯದ ರೂಪದಲ್ಲಿ ನಿಮ್ಮ ಕಷ್ಟಕ್ಕೆ ಹಿಂತಿರುಗಿ ಬರುತ್ತದೆ. ಏಕೆಂದರೆ ಪೋನ್ ಬರಿ ಚಾರ್ಚ್ ಆದರೆ ಮಾತ್ರ ವರ್ಕ್ ಆಗುತ್ತದೆ. ನಿಮ್ಮ ಸಂಬಂಧಗಳು ಯಾವಾಗಲೂ ಚೆನ್ನಾಗಿದ್ದರೆ ಮಾತ್ರ ಚಾರ್ಚ್ ಆಗುತ್ತದೆ. ಆದ್ದುದರಿಂದ ಇದು ನಿಮಗೆ
ಗೊತ್ತಿರದ ವಿಷಯವೆನಲ್ಲಾ. ಸ್ನೇಹಿತರೇ ಒಂದು ಮಾತನ್ನು ಈ ಬರವಣಿಗೆಯ ಮೂಲಕ ನಿಮಗೆ ತಲುಪಿಸುತ್ತಿದ್ದೇನೆ. ಇದೇನು ಹೊಸ ವಿಷಯವಲ್ಲ, ಆದರೂ ಹೇಳುತ್ತಿದ್ದೇನೆ, ನಮಗೆ ಹೊರಗಿನವರು ಅಂತ ಇಲ್ಲ ಯಾರು ಗ್ಯಾರೆಂಟಿನೂ ಇಲ್ಲ. ಆದರೆ ಸಂಬಂಧಗಳು, ಸಂಬಂಧಿಕರೇ ನಮಗೆ ಸಮಯಕ್ಕೆ ಆಗುವುದು.

ಹಾಗಾಗಿ ಮೊದಲು ಮನೆಯವರು, ಆಮೇಲೆ ಹೊರಗಿನವರು ಏಕೆಂದರೆ ನೀವು ಅತ್ತರೆ, ನೀವು ಸತ್ತರೆ ಅಳೋದು ಅವರೇ, ಕೊರಗುವುದು ಅವರೇ. ಹಾಗಾಗಿ ಸಂಬಂಧಗಳ ನಡುವೆ ಸಂಬಂಧಗಳನ್ನು ಸತ್ತು ಹೋಗಲು ಬಿಡಬೇಡಿ.

error: Content is protected !!