Thursday, 12th December 2024

ಈ ರೇಣುಕಾಚಾರ್ಯ ತೆಪ್ಪಗಿರಲ್ಲ

ತುಂಟರಗಾಳಿ

ಸಿನಿಗನ್ನಡ

ಸ್ಯಾಂಡಲ್‌ವುಡ್‌ನಲ್ಲಿ ಅನೇಕ ನಟರು ತಮಗೆ ತಾವೇ ಬಿರುದು ಕೊಟ್ಟುಕೊಳ್ಳುವ ಟ್ರೆಂಡ್ ಹೊಸದೇನಲ್ಲ. ಒಬ್ಬರನ್ನು ನೋಡಿ ಒಬ್ಬರು ಕಾಂಪಿಟೇಶನ್ ಮೂಲಕ ತಮಗೆ ತಾವೇ ಹೆಸರು ಕೊಟ್ಟುಕೊಳ್ಳುತ್ತಾರೆ. ಇಲ್ಲಿ, ಗೋಲ್ಡನ್ ಸ್ಟಾರ್ ಬಂದ್ರೆ, ಅವರ ಹಿಂದೇ ಡೈಮಂಡ್ ಸ್ಟಾರ್ ಬರ್ತಾರೆ. ಒಬ್ಬ ಕಿಂಗ್ ಆದ್ರೆ ಇನ್ನೊಬ್ಬ ಸುಲ್ತಾನ್ ಆಗ್ತಾನೆ. ಒಬ್ಬ ಬಾದ್ ಶಾ ಅಂದ್ರೆ, ಮತ್ತೊಬ್ಬ ಬಾಸ್ ಅಂತಾನೆ.

ಕರುನಾಡ ಚಕ್ರವರ್ತಿಯ ಬೆನ್ನ ಹಿಂದೆ ಅಭಿನಯ ಚಕ್ರವರ್ತಿ ಬರ್ತಾನೆ. ಹೋಗಲಿ, ಅವರೇನೋ ಫೀಲ್ಡನಲ್ಲಿ ಹೆಸರು ಮಾಡಿದ ಮೇಲೆ ನಾಮಕರಣ ಮಾಡಿಕೊಂಡವರು. ಆದರೆ ಹೆಸರು ಮಾಡುವ ಮುನ್ನವೇ ತಮಗೆ ತಾವು ದೊಡ್ಡ ದೊಡ್ಡ ಹೆಸರುಗಳನ್ನು ಇಟ್ಟುಕೊಳ್ಳೋದು ಎಷ್ಟು ಸರಿ ಅನ್ನೋದು ಸಿನಿಕರ ಪ್ರಶ್ನೆ. ಅಂದಹಾಗೆ, ಈ ಶೋ ಕಾಲ್ಡ ಸ್ಟಾರ್, ಸಾರಿ, ಸೋ ಕಾಲ್ಡ್ ಸ್ಟಾರ್‌ಗಳು ಇತ್ತೀಚೆಗೆ ಜಾಸ್ತಿ ಆಗ್ತಾ ಇದ್ದಾರೆ. ಈ ಪಟ್ಟಿಗೆ ಲೇಟೆ ಸೇರ್ಪಡೆ ಸಂಚಿತ್.

ಯಾರಿವರು ಅಂತ ಕೇಳಬೇಡಿ. ಚಿತ್ರರಂಗದಲ್ಲಿ ಬಹುತೇಕರಿಗೆ ಉತ್ತರ ಗೊತ್ತಿಲ್ಲದ ಪ್ರಶ್ನೆ ಇದು. ಈತ ನಮ್ಮ ನಟ ಕಿಚ್ಚ ಸುದೀಪ್ ಅವರ ಸೋದರಿಯ ಮಗ. ಆದರ ವಿಶೇಷ ಅಂದ್ರೆ ಮೊದಲ ಚಿತ್ರದಲ್ಲಿ ಈತ ನಾಯಕನಾಗಿ ಅಭಿನಯಿಸಿ ನಿರ್ದೇಶನ ಮಾಡುತ್ತಿದ್ದಾನೆ. ಸಂತೋಷ, ಆದರೆ ಜಿಮ್ಮಿ ಅನ್ನೋ ಚಿತ್ರದ ಈ ಪೋಸ್ಟರ್‌ನಲ್ಲಿ ಈತ ತನ್ನನ್ನು ತಾನು ಜೂನಿಯರ್ ಕಿಚ್ಚ ಅಂತ ಕರ್ಕೊಂಡಿರೋದ್ ನೋಡಿ ಸಿನಿಪ್ರಿಯರು ತಲೆ ಕೆರ್ಕೊತಿದ್ದಾರೆ.

ಇನ್ನೂ ಈತ ಪರದೆಯ ಮೇಲೆ ತನ್ನ ಮುಖವನ್ನೇ ತೋರಿಸಿಲ್ಲ. ನಮ್ಮ ಚಿತ್ರರಂಗದ ನಿರ್ದೇಶಕರು ಇವರನ್ನು ಕರೆದು ಅವಕಾಶ ಕೊಡುವ ಮಟ್ಟಕ್ಕೂ ಈ ಹುಡುಗ ಬೆಳೆದಿಲ್ಲ. ಆದ್ರೆ ಬಿರುದು ಇಟ್ಕೊಳ್ಳೋ ಶೋಕಿ ಮಾತ್ರ ಕಮ್ಮಿ ಇಲ್ಲ. ಇವ್ರ್ ಸಿನಿಮಾ ಬಿಡುಗಡೆ ಆದಾಗ ಚಿತ್ರಮಂದಿರದಲ್ಲಿ ಎ ಶೋ ಹೌ ಫುಲ್ ಆಗುತ್ತೋ ಗೊತ್ತಿಲ್ಲ. ಆದರೆ ಅಷ್ಟೊಂದು ಸಾಧನೆ ಮಾಡಿರುವ ಸುದೀಪ್ ಅವರ ಹೆಸರನ್ನು ತನ್ನ ಮೊದಲ ಚಿತ್ರಕ್ಕೆ ಮುನ್ನವೇ ಬಳಸಿರೋದು ಮಾತ್ರ ಹಾಸ್ಯಾಸ್ಪದ. ಅಂದು ಈ ಚಿತ್ರದ ಆಡಿಯೋ ಬಿಡುಗಡೆ ವೇದಿಕೆಯಲ್ಲಿ ಕಿಚ್ಚನ ಮಗಳು ಇಂಗ್ಲಿಷ್ ಹಾಡು ಹಾಡಿದ್ದಕ್ಕೆ ಟ್ರಾಲ್ ಮಾಡಿದ ಮಂದಿ, ಅದನ್ನು ಬಿಟ್ಟು ಈ ಆತುರದ ಹುಡುಗನಿಗೆ ಕೊಂಚ ಕ್ಲಾಸ್ ತೆಗೆದುಕೊಳ್ಳುವ ದೊಡ್ಡ ಬುದ್ಧಿ ತೋರಿಸಿದ್ದಿದ್ದರೆ ಒಳ್ಳೆಯದಿತ್ತು.

ಲೂಸ್ ಟಾಕ್
ರೇಣುಕಾಚಾರ್ಯ (ಕಾಲ್ಪನಿಕ ಸಂದರ್ಶನ)
ಏನ್ ಆಚಾರ್ಯರೇ ನಿಮ್ಮ ಪ್ರವಚನ ಜೋರಾಗಿದೆಯಲ್ಲ?

-ಏನ್ ಮಾಡೋದು, ಪ್ರಮಾಣವಚನ ಸ್ವೀಕರಿಸಿ ದೊಡ್ಡ ಸ್ಥಾನಕ್ಕೆ ಹೋದವರು
ವಚನ ಭ್ರಷ್ಟರಾದ್ರೆ ನಮ್ಮಂಥವರು ಪ್ರವಚನ ಮಾಡ್ಲೇಬೇಕು.
ಆದ್ರೂ ಬಾಳಾ ಬೇಜಾರಾಗಿದ್ದೀರಪ್ಪ, ಈಗೇನೋ ಲೋಕಸಭಾ ಚುನಾವಣೆ ಮೇಲೆ ಕಣ್ಣಾಕಿದ್ದೀರಂತೆ?
-ಹ್ಞೂ ಮತ್ತೆ, ಎಂಪಿ ರೇಣುಕಾಚಾರ್ಯ ಆಗಿದ್ದಕ್ಕೆ ಎಂಎಲ್‌ಎ ಅಲ್ಲದಿದ್ರೂ ಎಂಪಿನಾದ್ರೂ ಆಗೋಣ ಅಂತ.

ಓಕೆ ಓಕೆ, ಆದರೂ ನಿಮ್ಮ ಪಕ್ಷದವರನ್ನ ನೀವೇ ಬೈಯ್ಯೋದು ಚೆನ್ನಾಗಿರುತ್ತಾ?
-ಅಯ್ಯೋ, ನಾವು ವಿರೋಧ ಪಕ್ಷದವರಲ್ವೆ, ನಮ್ಮ ಕೆಲ್ಸ ವಿರೋಧ ಮಾಡೋದೆ. ಅದರಲ್ಲಿ ನಾವು ಪಕ್ಷ ಭೇದ ಮಾಡಲ್ಲ.

ಹೋಗ್ಲಿ, ಎಲ್ಲರಿಗೂ ನೀವು ಕಾಂಗ್ರೆಸ್ ಸೇರ್ತೀರಾ ಅಂತ ಅನ್ನಿಸ್ತಿದೆ ನಿಜಾನಾ?
-ಅಯ್ಯೋ, ನಾನು ಹೊನ್ನಾಳಿ ಹೋರಿ, ಪಕ್ಷಾಂತರಿ ತಳಿ ಅಲ್ಲ ನಾನು

ಆದ್ರೂ ನೀವ್ ಇ ಮಾತಾಡ್ತೀರ ಅಂತ ಯಾರೂ ಅಂದ್ಕೊಂಡಿರಲಿಲ್ಲ ಬಿಡಿ
ಅಯ್ಯೋ, ಪ್ರವಾಹ ಬಂದಾಗ, ಮೊಣಕಾಲುದ್ದ ನೀರಲ್ಲಿ ತೆಪ್ಪ ತಗೊಂಡು ಹೋದೋನ್ ನಾನು, ಈಗ ಎಲೆಕ್ಷನ್ ಸೋತ ಮೇಲೆ ತೆಪ್ಪಗಿರ್ತೀನಾ?

ನೆಟ್ ಪಿಕ್ಸ್
ಖೇಮು ಒಂದು ದಿನ ಸಂಜೆ ಆಫೀಸಿನಿಂದ ಮನೆಗೆ ಬಂದ. ಮನೆಯ ಹೊರಗೆ ಅಂಗಳದಲ್ಲಿ ಕಸದ ರಾಶಿ ರಾಶಿ ಬಿದ್ದಿತ್ತು. ರಂಗೋಲಿ ಇರಲಿ, ಹೊಸ್ತಿಲನ್ನೂ ಕೂಡ ತೊಳೆದಿರಲಿಲ್ಲ. ಎ ಧೂಳು ಮಯ. ಮನೆಯೊಳಗೆ ಅಡಿ ಇಡುತ್ತಿದ್ದಂತೆ ಖೇಮುಗೆ ಮಕ್ಕಳು ಆಟವಾಡುವ ಸದ್ದು ಕೇಳಿಸಿ ಆ ಕಡೆ ತಿರುಗಿ ನೋಡಿದ. ಮಕ್ಕಳು ಮನೆಯ ಸಾಮಾನುಗಳನ್ನೆ ಎಲ್ಲಂದ್ರಲ್ಲಿ ಹರಡಿ ಕಿತ್ತು ಹಾಕಿ ರಾಡಿ ಮಾಡಿಟ್ಟಿದ್ದರು. ಮೊದಲು ನೀರು ಕುಡಿಯೋಣ ಅಂತ ಅಡುಗೆ ಮನೆಗೆ ಹೋದ ಖೇಮುಗೆ ಅಲ್ಲೂ ಶಾಕ್ ಕಾದಿತ್ತು. ಬೆಳಗ್ಗೆ ಮಾಡಿದ ತಿಂಡಿ ಪಾತ್ರೆಗಳು, ತಿಂಡಿ ತಿಂದ ಪ್ಲೇಟ, ಕಾಫಿ ಗ್ಲಾಸ್ ಎಲ್ಲವೂ ಎಂದರಲ್ಲಿ ಅಸ್ತವ್ಯಸ್ತವಾಗಿ ಬಿದ್ದಿದ್ದವು.

ಖೇಮುಗೆ ಏನಾಯ್ತು ಅಂತ ಒಂದು ಕ್ಷಣ ಗಾಬರಿ ಆಯ್ತು. ಬೆಡ್ ರೂಮಿಗೆ ಹೋಗಿ ನೋಡಿದರೆ ಅಲ್ಲಿ ಖೇಮುಶ್ರೀ ಇರಲಿಲ್ಲ. ಅದರ ಬದಲಾಗಿ ಇಡೀ ರೂಮ್ ತುಂಬಾ ಚೆಪಿಲ್ಲಿಯಾಗಿ ಹರಡಿದ್ದ ಬಟ್ಟೆಗಳು ಬಿದ್ದಿದ್ದವು. ಹಾಸಿಗೆಯ ಮೇಲಿನ ದಿಂಬು, ಬೆಡ್ ಶೀಟ್‌ಗಳು ಅಗಸರ ಅಂಗಡಿಯನ್ನು ನೆನಪಿಸುತ್ತಿದ್ದವು. ಹಾಲಿನಲ್ಲಿ ಹಾಕಿದ ಟಿವಿ ಹಾಗೇ ಇತ್ತು. ಯಾರೂ ನೋಡುತ್ತಿರಲಿಲ್ಲ. ದೇವರ ಮನೆಯ ದೀಪ ಹಚ್ಚಿರಲಿಲ್ಲ. ಬಚ್ಚಲು ಮನೆಯ
ನಲ್ಲಿಯಿಂದ ನೀರು ಸೋರಿ ಹೋಗುತ್ತಿತ್ತು. ಆಫ್ ಮಾಡುವವರೇ ಇರಲಿಲ್ಲ.

ಇದನ್ನೆ ನೋಡಿದ ಖೇಮುಗೆ ಪಿತ್ತ ನೆತ್ತಿಗೇರಿತು. ಮನೆಯನ್ನು ಹೀಗೆ ಅಧ್ವಾನ ಮಾಡಿ ಖೇಮುಶ್ರೀ ಎಲ್ಲಿಗೆ ಹೋದಳು ಅಂತ ಹುಡುಕಿಕೊಂಡು ಹೊರಟ. ಆಗ ಹೆಂಡತಿ ಲಿವಿಂಗ್ ರೂಮ್ ನಲ್ಲಿ ಇzಳೆ ಅಂತ ಗೊತ್ತಾಯ್ತು. ಅಲ್ಲಿಗೆ ಹೋಗಿ ನೋಡಿದರೆ ಖೇಮುಶ್ರೀ ಯಾವುದೋ ಹಳೆಯ ನೈಟಿ ಹಾಕಿಕೊಂಡು ಒಂದು ಮ್ಯಾಗಝೀನ್ ಹಿಡಿದುಕೊಂಡು ಓದುತ್ತಾ ಅಡ್ಡಾದಿಡ್ಡಿಯಾಗಿ ಮಲಗಿದ್ದಳು.

ಖೇಮುಗೆ ಸಿಟ್ಟು ಇನ್ನಷ್ಟು ಜಾಸ್ತಿಯಾಗಿ, ಏನಿದು, ಮನೆ ಹೀಗಿದೆ, ಏನಾಗಿದೆ ನಿಂಗೆ? ಅಂತ ಜೋರು ದನಿಯಲ್ಲಿ ಅವಳನ್ನು ಕೇಳಿದ. ಅದಕ್ಕೆ ಖೇಮುಶ್ರೀ ಶಾಂತವಾಗಿ ಕೇಳಿದಳು, ಪ್ರತಿದಿನ ನೀನು ಆಫೀಸಿನಿಂದ ಮನೆಗೆ ಬಂದಾಗ, ನಂಗೆ ಆಫೀಸಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಎಲ್ಲಾ ಕೆಲಸ ಇರುತ್ತೆ ಗೊತ್ತಾ. ಎಷ್ಟು ಸುಸ್ತಾಗಿರ್ತೀನಿ, ನೀನೇನು ಇಡೀ ದಿನ ಮನೆಯಲ್ಲಿ ಕಡಿದು ಕಿತ್ತಾಕುವಂಥ ಕೆಲಸ ಮಾಡ್ತೀಯಾ? ಅಂತ ಕೇಳ್ತೀಯ ಅಲ್ವಾ ಅಂತ ಕೇಳಿದಳು. ಅದಕ್ಕೆ ಖೇಮು, ಹೌದು ಕೇಳ್ತೀನಿ ಅದಕ್ಕೇನೀಗ? ಅಂದ. ಅದಕ್ಕೆ ಖೇಮುಶ್ರೀ ಹೇಳಿದಳು, ಇವತ್ತು ಮನೇಲಿದ್ಕೊಂಡು ನಾನು ಏನೂ
ಕಡಿದು ಕಿತ್ತಾಕಲಿಲ್ಲ.

ಲೈನ್ ಮ್ಯಾನ್
ಟೋಮ್ಯಾಟೋ ಬಾತ್ 
ಇರೋವರೆಗೂ ಎಲ್ಲರನ್ನೂ ಪ್ರೀತಿಸಿ ಯಾಕಂದ್ರೆ, ಹೋಗ್ಬೇಕಾದ್ರೆ ಯಾರೂ ಟೊಮ್ಯಾಟೋ ಹೊತ್ಕೊಂಡ್ ಹೋಗಲ್ಲ
ಹಳೇ ಜೋಕ್, ಹೊಸ ಟ್ರೆಂಡ್
ಬಿಜೆಪಿ ಆಫೀಸಿಗೆ ಒಬ್ಬ ಕಾಲ್ ಮಾಡಿದ.
-‘ನಾನು ನಿಮ್ ಪಕ್ಷದಿಂದ ವಿರೋಧ ಪಕ್ಷದ ನಾಯಕ ಆಗೋಣ ಅಂತಿದ್ದೀನಿ,
ಯಾವಾಗ್ ಬರ್ಲಿ?’
-‘ಏನ್, ತಲೆ ಕೆಟ್ಟಿದ್ಯಾ ನಿಂಗೆ?’
-‘ಅದು ಕಂಪಲ್ಸರಿ ನಾ?’

ಬೊಮ್ಮಾಯಿ ಅವರು ಅರ್ಜೆಂಟ್ ಆಗಿ ರಿವ್ಯೂ ಮಾಡಬೇಕಾಗಿರೋ ಸಿನಿಮಾ ಅಂದ್ರೆ
-‘ರೊಚ್ಚಿಗೆದ್ದ ಹೋರಿ- ಅರ್ಥಾತ್ ರೇಣುಕಾ ಮಹಾತ್ಮೆ’

೫ ಬಾಲ್ ಬೋಲ್ ಮಾಡಿ, ೬ ಬಾಲ್ ಆಯ್ತು ಅಂತ ಅಂದ್ಕೊಳ್ಳೋದು
-‘ಓವರ್’ ಕಾನ್ಫಿಡೆನ್ಸ್
ಡಾಕ್ಟರ್ಸ್ ಡೇ ಸ್ಪೆಷಲ್
-ಆಪರೇಷನ್ ಥಿಯೇಟರ್ ಡಾಕ್ಟರ್‌ಗಳನ್ನು ಬಿಟ್ಟು, ಸಿನಿಮಾ ಥಿಯೇಟರ್
ಡಾಕ್ಟರ್‌ಗಳ ಡೈಲಾU
‘ನಮ್ ಕೈಲಾದಷ್ಟು ಪ್ರಯತ್ನ ಪಟ್ಟಿದ್ದೀವಿ. ಉಳಿದಿದ್ದು ದೇವರಿಗೆ ಬಿಟ್ಟಿದ್ದು’
-‘ವಾತಾವರಣ ಚೇಂಜ್ ಆದ್ರೆ ಅವರು ಸುಧಾರಿಸಿಕೊಳ್ಳ?ಹುದು. ಅವರನ್ನ
ಎದ್ರೂ ಬೇರೆ ಊರಿಗೆ ಕರ್ಕೊಂಡ್ ಹೋಗಿ’
-‘ಯಾವ್ ಮೆಡಿಸಿನ್ನೂ ವರ್ಕ್ ಆಗ್ತಿಲ್ಲ. ಇನ್ನೇನಿದ್ರೂ ನಿಮ್ಮ ಪ್ರೀತಿ ಮಾತ್ರ ಅವರ
ಪ್ರಾಣ ಉಳಿಸೋಕೆ ಸಾಧ್ಯ’
-‘ಅವರ ಮನಸ್ಸಿಗೆ ಆಘಾತ ಆಗುವಂಥ ಯಾವ ವಿಷಯಗಳನ್ನೂ ಅವರಿಗೆ
ಹೇಳಬೇಡಿ’
-‘ಹೆಚ್ಚು ಅಂದ್ರೆ ಇನ್ನು ೬ ತಿಂಗಳು ಬದುಕಬಹುದು, ಅವರ ಆಸೆ ಏನಿದೆಯೋ
ಅದನ್ನ ಈಡೇರಿಸಿ’
-‘ನಾನು ಡಾಕ್ಟರ್, ದೇವರಲ್ಲ’
-‘ಇದರಲ್ಲಿ ನಮ್ಮದೇನೂ ಇಲ್ಲ, ಅವರ ಜೀವ ಉಳಿಸಿದ ಕ್ರೆಡಿಟ, ಹಗಲೂ ರಾತ್ರಿ
ಅವರ ಜೊತೆ ಇದ್ದು ನೋಡಿಕೊಂಡ ಆಕೆಯ ಗಂಡನಿಗೆ ಹೋಗಬೇಕು’
ಕೊನೆಗೆ’I am Sorry’