ಅಭಿಪ್ರಾಯ
ಕೆ.ವಿ.ವಾಸು, ಮೈಸೂರು
ಭಾರತದ ಸಂವಿಧಾನದ ಪ್ರಸ್ಥಾವನೆಯಲ್ಲಿ ಹಲವಾರು ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. ಈ ಪ್ರಸ್ಥಾವನೆಯಲ್ಕಿ ದಾಖಲಾಗಿರುವ ಹಲವಾರು ಅಂಶಗಳನ್ನು ಈಗಾಗಲೇ ಕಾರ್ಯರೂಪಕ್ಕೆ ತರಲಾಗಿದೆಯಾದರೂ ದೇಶದಲ್ಲಿ ಇಂದು ಉಳ್ಳವರು ಮತ್ತು ಇಲ್ಲದವರ ಅಂತರ ಹೆಚ್ಚುಗುತ್ತಲೇ ಹೋಗುತ್ತಿದೆ. ದೇಶದ ಒಟ್ಟಾರೆ ಸಂಪತ್ತು ಕೆಲವೇ ಕೆಲವು ವ್ಯಕ್ತಿಗಳ ಕಪಿಮುಷ್ಟಿಯಲ್ಲಿ ಸಿಲುಕಿದೆ.
ಪ್ರತಿಯೋರ್ವ ಭಾರತೀಯನಿಗೂ ಪ್ರತಿ ವರ್ಷದ ಆಗಸ್ಟ್ ೧೫ ಹಾಗೂ ಜನವರಿ ೨೬ ಸಡಗರ ಹಾಗೂ ಸಂಭ್ರಮ ಪಡಬಹುದಾದ ದಿನಗಳಾಗಿವೆ. ಇವುಗಳನ್ನು ರಾಷ್ಟ್ರೀಯ ಹಬ್ಬಗಳಾಗಿ ಕೂಡ ಆಚರಿಸಲಾ ಗುವುದರಿಂದ ಇವುಗಳಿಗೆ ಹೆಚ್ಚಿನ ಮಹತ್ವ ಲಭಿಸಿದೆಯೆಂದು ಹೇಳಬಹುದು. ಎಲ್ಲರಿಗೂ ತಿಳಿದಿರುವ ಹಾಗೆ, ಆಗಸ್ಟ್ ೧೫, ೧೯೪೭ರಂದು ದೇಶದ ಜನರಿಗೆ ಸ್ವಾತಂತ್ರ್ಯ ದೊರೆತರೆ, ಜನವರಿ ೨೬, ೧೯೫೦ ರಂದು ನಮ್ಮ ದೇಶದ ಸಂವಿಧಾನವನ್ನು ಅಂಗೀಕರಿಸಲಾಯಿತು.
ಇದರ ಕುರುಹಾಗಿ ಪ್ರತಿವರ್ಷದ ಜನವರಿ ೨೬ರಂದು ಗಣರಾಜ್ಯೋತ್ಸವವನ್ನು ದೇಶಾದ್ಯಂತ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಕೂಡ ಸಡಗರ ಹಾಗೂ ಸಂಭ್ರಮದಿಂದ ಆಚರಿಸುತ್ತಾರೆ. ಒಂದು ಸಮಾಜವಾದಿ, ಜಾತ್ಯತೀತ ಹಾಗೂ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿರುವ ನಮ್ಮ ದೇಶಕ್ಕೆ ವಿಶ್ವಭೂಪಟದಲ್ಲಿ ಮಹತ್ತರವಾದ ಸ್ಥಾನವಿದೆ. ಜಗತ್ತಿನ ಅತಿ ದೊಡ್ಡ ಪ್ರಜಾಸತ್ತಾತ್ಮಕ ದೇಶವೂ ನಮ್ಮದಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಕಂಡು ಕೊಂಡಿರುವ ನಮ್ಮ ದೇಶ ವಿಶ್ವ ಶಾಂತಿ ಹಾಗೂ ಅಂತಾರಾಷ್ಟೀಯ ಭ್ರಾತೃತ್ವಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ನಮ್ಮ ದೇಶವನ್ನು ಸರ್ವ ಜನಾಂಗದ ಶಾಂತಿಯ ತೋಟವೆಂದು ರಾಷ್ಟಕವಿ ಡಾ.ಕುವೆಂಪು ಬಣ್ಣಿಸಿರುವುದು ಇಲ್ಲಿ ಸ್ಮರಣೀಯ. ೧೯೭೧ರಲ್ಲಿ ಸ್ವತಂತ್ರ ಬಾಂಗ್ಲಾದೇಶದ ಉದಯಕ್ಕೆ ಮುಖ್ಯ ಕಾರಣ ನಮ್ಮ ದೇಶವೇ ಎಂದು ಹೆಮ್ಮೆಯಿಂದ ಹೇಳಬಹುದು.
ಚೀನಾ ದೇಶದ ನಂತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ದೇಶ ಕೃಷಿ, ಕೈಗಾರಿಕೆ, ಹೈನುಗಾರಿಕೆ, ಮಾಹಿತಿ ತಂತ್ರಜ್ಞಾನ ಮುಂತಾದ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಸಾಽಸಿರುವ ಪ್ರಗತಿ ಗಮನಾರ್ಹವಾಗಿದೆ. ಇತೀಚಿನ ವರದಿಗಳ ಪ್ರಕಾರ ಚೀನಾ ದೇಶದ ಜನಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದರಿಂದ, ಮುಂದಿನ ಕೆಲವೇ ವರ್ಷಗಳ ಅಂತರದಲ್ಲಿ ಭಾರತ ವಿಶ್ವದ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ
ರಾಷ್ಟವಾಗಿ ಹೊರಹೊಮ್ಮಲಿದೆ ಎಂದು ಹೇಳಲಾಗುತ್ತಿದೆ.
ಅಂತೆಯೇ ಭಾರತದ ಹಲವಾರು ವಿಜ್ಞಾನಿಗಳು, ತಂತ್ರಜ್ಞರು, ಸಾಹಿತಿಗಳು, ಕಲಾವಿದರು, ಅರ್ಥಶಾಸ್ತ್ರಜ್ಞರು, ಹಾಗೂ ಇನ್ನಿತರ ಸಾಧಕರು ಅಂತರಾಷ್ಟ್ರೀಯ ಮನ್ನಣೆ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಭಾರತೀಯ ಮೂಲದ ರಿಷಿ ಸುನಕ್ ಕಳೆದ ವರ್ಷ ಬ್ರಿಟನ್ ಪ್ರಧಾನಿಯಾಗಿ ಆಯ್ಕೆ ಹೊಂದಿದ್ದನ್ನು ಇಲ್ಲಿ ಸ್ಮರಿಸಬಹುದು. ೨೦೧೪ ರಲ್ಲಿ ಪ್ರಥಮ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸನ್ಮಾನ್ಯ ನರೇಂದ್ರ ಮೋದಿಯವರು ಇಂದು ಜಾಗತಿಕ ಮಟ್ಟದ ನಾಯಕರಾಗಿ ಹೊರಹೊಮ್ಮಿದ್ದಾರೆ.
ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಎರಡು ಬಾರಿ ಕೇಂದ್ರದಲ್ಲಿ ಸರಕಾರ ರಚಿಸಿರುವುದು ಕೂಡ ದಾಖಲಾರ್ಹವಾಗಿದೆ. ದೇಶಕ್ಕೆ
ಸ್ವಾತಂತ್ರ್ಯ ದೊರಕಿಸಿಕೊಡಲು ರಾಷ್ಟ್ರಪಿತ ಮಹಾತ್ಮ ಗಾಂಧಿ ನೇತೃತ್ವದಲ್ಲಿ ಅಸಂಖ್ಯಾತ ದೇಶಭಕ್ತರು ಹೋರಾಡಿದ್ದಾರೆ. ಅನೇಕರು ಹುತಾತ್ಮ ರಾಗಿದ್ದಾರೆ.
ದಿನದ ೨೪ ಗಂಟೆಗಳ ಕಾಲವೂ ದೇಶದ ಗಡಿಗಳನ್ನು ಕಾಯುವ ಸೈನಿಕರನ್ನು, ಕ್ಲಿಷ್ಟಕರ ಸಂಧರ್ಭಗಳಲ್ಲಿ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಹೋರಾಡುವ ಯೋಧರನ್ನು, ಹಾಗೂ ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಬ್ಬಿಸಿದ ಸ್ವಾತಂತ್ರ್ಯ ಹೋರಾಟಗಾರರನ್ನು ಹಾಗೂ ದೇಶ
ಪ್ರೇಮಿಗಳನ್ನು ಅತ್ಯಂತ ಗೌರವಪೂರ್ವಕವಾಗಿ ಸ್ಮರಿಸಬೇಕಾದ ದಿನವೂ ಇದಾಗಿದೆ.
ಭಾರತದ ಸಂವಿಧಾನದ ಪ್ರಸ್ಥಾವನೆಯನ್ನು ಸಂವಿಧಾನದ ರಚನಾ ಸಭೆ ೨೨.೦೧.೧೯೪೭ರಲ್ಲಿ ಅಂಗೀಕರಿಸಿತು. ದುರದೃಷ್ಟವಶಾತ್, ಕಳೆದ
ಮೂರು ವರ್ಷಗಳಿಂದ ಇಡೀ ವಿಶ್ವವನ್ನೇ ಕಾಡುತ್ತಿರುವ ಕರೊನಾ ಸೋಂಕು, ನಮ್ಮ ದೇಶದ ಮೇಲೂ ತನ್ನ ಕಬಂಧ ಹಸ್ತ ಚಾಚಿ ಲಕ್ಷಾಂತರ ಜನರ ಪ್ರಾಣ ಹರಣ ಮಾಡಿತು. ಸುದೈವವಶಾತ್, ಪ್ರಸ್ತುತ ನಮ್ಮ ದೇಶದಲ್ಲಿ ಈ ಸೋಂಕು ಈಗ ಸಂಪೂರ್ಣವಾಗಿ ನಿಯಂತ್ರಣದಲ್ಲಿರುವುದು ಆಶಾದಾಯಕ ಸಂಗತಿ. ಅದೂ ಅಲ್ಲದೇ ಇಡೀ ವಿಶ್ವದ ಕರೋನಾ ನಿಯಂತ್ರಣದಲ್ಲಿ ನಮ್ಮ ದೇಶ ಇತರ ದೇಶಗಳಿಗೆ ಮಾದರಿಯಾಗಿದೆ.
ನಮ್ಮ ಸಂವಿಧಾನದ ಹೃದಯ ಭಾಗವೆಂದೇ ಪರಿಗಣಿತ ವಾಗಿರುವ ಪ್ರಸ್ತಾವನೆಯನ್ನು ಈ ಕೆಳಗೆ ಕೊಡಲಾಗಿದೆ. ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ; ಸಮಾಜವಾದಿ; ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ವ್ಯವಸ್ಥೆಗೊಳಿಸಲು ಮತ್ತು ಅದರ ಎಲ್ಲಾ ಪೌರರಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನಾ ಸ್ವಾತಂತ್ರ್ಯ ಸ್ಥಾನಮಾನ ಗಳು ಮತ್ತು ಅವಕಾಶಗಳಲ್ಲಿ ಸಮಾನತೆ ದೊರೆಯುವಂತೆ ಮಾಡುವುದಕ್ಕೆ; ವ್ಯಕ್ತಿ ಗೌರವ ಮತ್ತು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ರಕ್ಷಿಸಿ, ಭ್ರಾತೃ ಭಾವನೆಯನ್ನು ಎಲ್ಲರಿಗೂ ವೃದ್ದಿಗೊಳಿಸಿಕೊಳ್ಳುವುದಕ್ಕಾಗಿ ದೃಢ ಸಂಕಲ್ಲ ಮಾಡಿ ನಮ್ಮ ಸಂವಿಧಾನ ರಚನಾ ಸಭೆಯಲ್ಲಿ ೨೬.೧೧.೧೯೪೯ ರಂದು ಈ ಸಂವಿಧಾನವನ್ನು ಅಂಗೀಕರಿಸಿ ಕಾನೂನು ರೂಪದಲ್ಲಿ ಆತ್ಮಾರ್ಪಿತ ಮಾಡಿಕೊಂಡಿದ್ದೇವೆ.
ಭಾರತ ವಿಧಾನ ರಚನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ಪಾತ್ರ ಗಮನಾರ್ಹವಾಗಿದೆ. ಹೀಗಾಗಿಯೇ ಅವರನ್ನು ಭಾರತದ ಸಂವಿಧಾನದ ಪಿತಾಮಹ ಎಂದು ಕರೆಯಲಾಗುತ್ತದೆ. ಅದೇ ರೀತಿ ಡಾ.ರಾಜೇಂದ್ರ ಪ್ರಸಾದ, ಗೋಪಾಲ ಸ್ವಾಮಿ ಅಯ್ಯಂಗಾರ್, ಜವಹರಲಾಲ್ ನೆಹರು, ಬೆನಗಲ್
ನರಸಿಂಗ ರಾವ್, ಕೆಂಗಲ್ ಹನುಮಂತಯ್ಯ, ಕೆ.ಕಾಮರಾಜ್, ಟಿ.ಟಿ. ಕೃಷ್ಣಮಾಚಾರ್ಯ, ಕೆ.ಎಂ. ಮುನ್ಷಿ ಕೆ.ಸಿ. ರೆಡ್ಡಿ ಸೇರಿದಂತೆ ಹಲವು ಮಹನೀಯರು ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಭಾರತದ ಸಂವಿಧಾನದ ಪ್ರಸ್ಥಾವನೆಯಲ್ಲಿ ಹಲವಾರು ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. ಈ ಪ್ರಸ್ಥಾವನೆಯಲ್ಕಿ ದಾಖಲಾಗಿರುವ ಹಲವಾರು ಅಂಶಗಳನ್ನು ಈಗಾಗಲೇ ಕಾರ್ಯರೂಪಕ್ಕೆ ತರಲಾಗಿದೆಯಾದರೂ ದೇಶದಲ್ಲಿ ಇಂದು ಉಳ್ಳವರು ಮತ್ತು ಇಲ್ಲದವರ (ಏZqಛಿo Zb ಏZqಛಿ ಟಠಿo) ಅಂತರ ಹೆಚ್ಚುಗುತ್ತಲೇ ಹೋಗುತ್ತಿದೆ. ದೇಶದ ಒಟ್ಟಾರೆ ಸಂಪತ್ತು ಕೆಲವೇ ಕೆಲವು ವ್ಯಕ್ತಿಗಳ ಕಪಿಮುಷ್ಟಿಯಲ್ಲಿ ಸಿಲುಕಿದೆ. ನಿರುದ್ಯೋಗವಂತೂ ದಿನೇ
ದಿನೇ ಹೆಚ್ಚುತ್ತಾ ಹೋಗುತ್ತಿದೆ. ದೇಶದ ಸಾವಿರಾರು ಕಾರ್ಖಾನೆಗಳು ಮುಚ್ಚಿ ಹೋಗುತ್ತಿವೆ. ಆದರೂ ಭಾರತದ ಅರ್ಥ ವ್ಯವಸ್ಥೆ ವಿಶ್ವದ ಪ್ರಮುಖ ಅರ್ಥ ವ್ಯವಸ್ಥೆಗಳಲ್ಲಿ ಒಂದಾಗಿರುವುದು ಹೆಮ್ಮೆಯ ವಿಚಾರ. ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಸಂಘರ್ಷ ಮನೋಭಾವ ಮೂಡುತ್ತಿವೆ. ಇಂತಹ ವಿಚಾರಗಳ ಬಗ್ಗೆ ದೇಶ ಬಾಂಧವರು ಯೋಚಿಸಬೇಕಾಗಿದೆ.
ಇನ್ನು ಜಾತಿ ಧರ್ಮಗಳ ಹೆಸರಿನಲ್ಲಿ ದೇಶದಲ್ಲಿ ಕೋಮು ಗಲಭೆ ಆಗಿಂದಾಗ್ಗೆ ಸಂಭವಿಸುತ್ತಲೇ ಇದ್ದು, ಇದು ದೇಶದ ಪ್ರಗತಿಗೆ ಅಡ್ಡಗಾಲಾಗಿ ಪರಿಣಮಿಸಿದೆ. ಇನ್ನು ಗಣರಾಜ್ಯದ ಬಗ್ಗೆ ಒಂದಿಷ್ಟು ವಿಚಾರಗಳನ್ನು ತಿಳಿದುಕೊಳ್ಳುವುದು ಪ್ರಸ್ತುತವೆನಿಸುತ್ತದೆ. ರಿಪಬ್ಲಿಕ್ ಎಂಬ ಪದ ಹಲವಾರು ಅರ್ಥಗಳನ್ನು ಹೊಂದಿದೆ. ರಿಪಬ್ಲಿಕ್ ಸರಕಾರ ರಾಜ ಪ್ರಭುತ್ವಕ್ಕೆ ವಿರುದ್ದವಾದದ್ದು ಎಂದು ರಾಜನೀತಿಜ್ಞ ಲೀಕಾಕ್ ಹೇಳಿದರೆ; ಜೆನೆಲಿಕೆ ಪ್ರಕಾರ
ರಿಪಬ್ಲಿಕ್ ಅನೇಕ ವ್ಯಕ್ತಿಗಳಿಂದ ನಡೆಸುವ ಸರಕಾರವಾಗಿದೆ.
ರಾಷ್ಟ್ರದ ಮುಖ್ಯಸ್ಥರು ಚುನಾವಣೆಯ ಮೂಲಕ ಆಯ್ಕೆಯಾಗುವ ವ್ಯವಸ್ಥೆಯನ್ನು ರಿಪಬ್ಲಿಕ್ ಎಂದು ಕರೆಯಲಾಗುತ್ತದೆ. ಅಂತೆಯೇ ನಮ್ಮ ದೇಶದ
ಮುಖ್ಯಸ್ಥರಾದ ರಾಷ್ಡಪತಿಗಳನ್ನು ೫ ವರ್ಷಗಳಿಗೊಮ್ಮೆ ಚುನಾವಣೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಬುಡಕಟ್ಟು ಜನಾಂಗಕ್ಕೆ ಸೇರಿದ ದ್ರೌಪದಿ ಮುರ್ಮು ಕಳೆದ ವರ್ಷ ದೇಶದ ರಾಷ್ಟಪತಿಯಾಗಿ ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಈ ಚುನಾವಣೆಯಲ್ಲಿ ದೇಶದ ಜನತೆ ನೇರವಾಗಿ ಮತ ಚಲಾಯಿಸದೆ ಹೋದರೂ, ಅವರಿಂದ ಸಂಸತ್ತಿಗೆ ಹಾಗೂ ರಾಜ್ಯ ವಿಧಾನ ಸಭೆಗಳಿಗೆ ಆಯ್ಕೆ ಹೊಂದುವ ಸದಸ್ಯರು ಮತ
ಚಲಾಯಿಸುತ್ತಾರೆ. ಯಾವುದೇ ಒಂದು ಪಕ್ಷ ಸತತವಾಗಿ ಅಧಿಕಾರದಲ್ಲಿ ಮುಂದುವರೆಯದಂತೆ ತಡೆಯುವ ಅಧಿಕಾರವೂ ದೇಶದ ಜನತೆಗೆ ಇದೆ (ಚುನಾವಣೆಯ ಮೂಲಕ). ಈ ರೀತಿ ಭಾರತದ ಗಣರಾಜ್ಯ ವ್ಯವಸ್ಥೆ ಹತ್ತು ಹಲವು ಘನ ಧ್ಯೇಯೋದ್ದೇಶಗಳನ್ನು ಹೊಂದಿದೆ.
ಪುರಾತನ ಇತಿಹಾಸವನ್ನು ಇಣುಕಿ ನೋಡಿದರೆ ಪ್ರಾಚೀನ ಕಾಲದಲ್ಲಿ ಸಹ ಹಲವಾರು ಸಣ್ಣ ಸಣ್ಣ ಗ್ರೀಕ್ ಗಣರಾಜ್ಯಗಳ ಅಸ್ತಿತ್ವದ ಬಗ್ಗೆ ಮಾಹಿತಿ ದೊರಕುತ್ತದೆ. ಅದೇ ರೀತಿ ರೋಮನ್ ಸಾಮ್ರಾಜ್ಯದಲ್ಲೂ ಹಲವಾರು ಗಣರಾಜ್ಯಗಳಿದ್ದವು. ಬುದ್ದನ ಕಾಲದಲ್ಲಿ ಅಂದಿನ ವೈಶಾಲಿ ರಾಜ್ಯದಲ್ಲಿ (ಇಂದಿನ ಬಿಹಾರ್) ಗಣರಾಜ್ಯಗಳಿದ್ದ ಬಗ್ಗೆ ದಾಖಲೆಗಳಿವೆ. ಗಣರಾಜ್ಯೋತ್ಸವವಾದ ಇಂದು ದೇಶದ ಅಭಿವೃದ್ಧಿಗೆ, ಪ್ರಗತಿಗೆ ಸಂಬಂಧಪಟ್ಟವರೆ ಪ್ರಾಂಜಲಿಬದ್ಧರಾಗಿ ದುಡಿದು, ದೇಶದ ಪ್ರತಿಯೋರ್ವ ಪ್ರಜೆಗೂ ಸಂವಿಧಾನದ ಪ್ರಸ್ತಾವನೆಯಲ್ಲಿ ಹೇಳಲಾಗಿರುವ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ದೊರೆಯಲಿ ಎಂದು ಆಶಿಸೋಣ.