Thursday, 12th December 2024

ಆರೋಗ್ಯಪಥ ಬದಲಿಸಿದ ಸಂಶೋಧನಾ ಪ್ರಬಂಧಗಳು

ವೈದ್ಯ ವೈವಿಧ್ಯ

drhsmohan@gmail.com

ಇಂಜೆಕ್ಷನ್ ಮೂಲಕ ಕೊಡುವ ವ್ಯಾಕ್ಸೀನ್. ನಂತರ ಆಲ್ಬರ್ಟ್ ಸೇಬಿನ್ ಎನ್ನುವವರು ಬಾಯಿಯ ಮೂಲಕ ಕೊಡುವ ಹನಿಗಳ ರೀತಿಯ ಲಸಿಕೆ ಕಂಡುಹಿಡಿದರು. ಇದು ಬಹಳ ಜನಪ್ರಿಯವಾಯಿತು. ಜಗತ್ತಿನ ಹಲವು ದೇಶಗಳಲ್ಲಿ ಇದನ್ನು ಉಪಯೋಗಿಸಿ ಪೋಲಿಯೋ ನಿರ್ಮೂಲನೆ ಮಾಡಲಾಗಿದೆ.

ಸಿಡುಬು ಕಾಯಿಲೆ ಜಗತ್ತಿನಿಂದ ಕಣ್ಮರೆಯಾಗಿಯೇ ಬಹಳ ವರ್ಷಗಳಾಗಿದ್ದ ರಿಂದ ಈಗಿನ ಯುವಜನರಿಗೆ ಅದರ ಬಗ್ಗೆ ಹೆಚ್ಚು ಗೊತ್ತಿಲ್ಲ. ಮುಖ, ಮೈಮೇಲೆಲ್ಲ ದೊಡ್ಡ ಗುಳ್ಳೆಗಳ ರೀತಿ ಕಾಣಿಸಿಕೊಂಡು ಎಷ್ಟೋ ಸಂದರ್ಭ ದೊಡ್ಡ ದೊಡ್ಡ ಕಲೆ ಉಳಿಸುತ್ತಿತ್ತು. ಹೆಚ್ಚಿನ ಸಂದರ್ಭ ಕಾಯಿಲೆ ಪೀಡಿತ ವ್ಯಕ್ತಿ ಮರಣ ಹೊಂದುತ್ತಿದ್ದ.

೧೮ನೇ ಶತಮಾನದಲ್ಲಿ ಈ ಸಿಡುಬು ಕಾಯಿಲೆಗೆ ಲಕ್ಷಾಂತರ ಜನರು ಮರಣ ಹೊಂದುತ್ತಿದ್ದರು. ಆಗ ಯಾವ ಕಾಯಿಲೆಗಳಿಗೂ
ವ್ಯಾಕ್ಸಿನ್ ಅಥವಾ ಲಸಿಕೆ ಕೊಡುವ ಪದ್ಧತಿ ಇರಲಿಲ್ಲ. 1721ರಲ್ಲಿ ಬ್ರಿಟನ್ನಿನ ಲೇಡಿ ಮೇರಿ ವೋರ್ಟ್ಲಿ ಎನ್ನುವ ಮಹಿಳೆ ಈ ಬಗೆಗೆ ಮೊದಲು ಮನಸ್ಸು ಮಾಡಿದಳು. ಆಗಾಗ ಸಿಡುಬು ಕಾಯಿಲೆ ಬಂದು ಎಲ್ಲರಲ್ಲೂ ಕಾಣಿಸಿಕೊಳ್ಳುತ್ತಿದ್ದಾಗ, ಆಕೆ ತನ್ನ ಮಗಳಿಗೆ ಕಾಯಿಲೆ ಬರದಿರುವಂತೆ ಮಾಡಲು ವ್ಯಾಕ್ಸಿನ್ ಕೊಡಲು ವೈದ್ಯರನ್ನು ವಿನಂತಿಸಿಕೊಂಡಳು.

ಬ್ರಿಟನ್ನಿನ ರಾಯಲ್ ವೈದ್ಯರುಗಳು ಆಗ ಲಸಿಕೆ ಕೊಡಲು ಆರಂಭಿಸಿದರು. ನಂತರ ಇಂಗ್ಲೆಂಡಿನಾದ್ಯಂತ ಆ ಪದ್ಧತಿ ಪ್ರಚಲಿತ  ವಾಯಿತು. ಆಗ ಲಸಿಕೆಗಳ ಬಗ್ಗೆ ಜನರಿಗೆ ಗೊತ್ತಿಲ್ಲದಿರುವುದರಿಂದ ಲಸಿಕೆ ತೆಗೆದುಕೊಂಡ ವ್ಯಕ್ತಿಗೆ ಅದೇ ಕಾಯಿಲೆ ಬರುತ್ತದೆ ಎಂದು ಭಾವಿಸಿದ್ದರು. ಫಿಲಸಾಫಿಕಲ್ ಟ್ರಾನ್ಸಾಕ್ಷನ್‌ನ ಸಂಪಾದಕ ಜೇಮ್ಸ ಜ್ಯೂರಿನ್ ಇಂಗ್ಲೆಂಡಿನ ಎಲ್ಲ ಕಡೆಯಿಂದ ವರದಿ ತರಿಸಿಕೊಂಡು ವಿವರವಾದ ಸಂಶೋಧನಾ ಪ್ರಬಂಧವನ್ನು 1723 ರಲ್ಲಿ ತಮ್ಮ ಜರ್ನಲ್‌ನಲ್ಲಿ ಪ್ರಕಟಿಸಿದರು.

ಸಿಡುಬು ಕಾಯಿಲೆಯಿಂದ ಜನರು ಮರಣ ಹೊಂದುತ್ತಾರೆಯೇ ಹೊರತು ಅದರ ವ್ಯಾಕ್ಸಿನ್ ನಿಂದ ಅಲ್ಲ ಎಂಬ ವಿಷಯವನ್ನು ಸ್ಪಷ್ಟವಾಗಿ ಸಂದೇಶದ ರೂಪದಲ್ಲಿ ಪ್ರಕಟಿಸಿದ್ದರು. ನಂತರ ಈ ಬಗೆಗೆ ಕರ ಪತ್ರಗಳನ್ನು ಮಾಡಿ ಹಂಚಲಾಯಿತು. ಹೀಗೆ
ಒಂದು ಕಾಯಿಲೆಯ ಬಗೆಗಿನ ಲಸಿಕೆ ಜನಪ್ರಿಯತೆ ಪಡೆದುಕೊಂಡಿತು.

ಜೋಸೆ- ಲಿಸ್ಟರ್:
19ನೇ ಶತಮಾನದವರೆಗೆ ಯಾವುದೇ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾದ ರೋಗಿ ಜೀವಂತವಾಗಿ ಉಳಿದು ಹೊರಬರುವ ಸಾಧ್ಯತೆ ಶೇಕಡ 50 ಮಾತ್ರ ಇತ್ತು. ಆಗ ರೋಗಿಗಳನ್ನು ಪರೀಕ್ಷಿಸುವಾಗ, ಶಸ್ತ್ರಕ್ರಿಯೆಯ ಸಂದರ್ಭದಲ್ಲಿ ಸರ್ಜನ್ನರು ತಮ್ಮ ಕೈಗಳನ್ನು ಸರಿಯಾಗಿ ತೊಳೆಯುತ್ತಿರಲಿಲ್ಲ. ಗಾಳಿಯಲ್ಲಿ ಹರಡುವ ಸೋಂಕಿನಿಂದ ಕಾಯಿಲೆ ಬರುತ್ತದೆ ಎಂಬುದು ಆಗಿನ ತಿಳಿವಳಿಕೆಯಾಗಿತ್ತು. ಚರಂಡಿಯಲ್ಲಿರುವ ಕಲ್ಮಷಗಳನ್ನು ಸ್ವಚ್ಛಗೊಳಿಸಲು ಕಾರ್ಬಾಲಿಕ್ ಆಸಿಡ್ ಉಪಯೋಗಿಸುತ್ತಾರೆ ಎನ್ನುವ ಅಂಶ ಜೋಸೆಫ್ ಲಿಸ್ಟರ್ ಎನ್ನುವ ವೈದ್ಯ ವಿಜ್ಞಾನಿಯ ಗಮನಕ್ಕೆ ಬಂದಿತು.

ಮೂಳೆಗಳು ಮುರಿದ ಕ್ಲಿಷ್ಟವಾದ ಸಂದರ್ಭಗಳಲ್ಲಿ ತಾನು ಕಾರ್ಬಾಲಿಕ್ ಆಮ್ಲವನ್ನು ಉಪಯೋಗಿಸಿ ಚಿಕಿತ್ಸೆ ಮಾಡಿದ ಬಗೆಗೆ 1867 ರಲ್ಲಿ ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ ಆತ ಸಂಶೋಧನಾ ಪ್ರಬಂಧ ಪ್ರಕಟಿಸಿದ. ಕೆಳಮಟ್ಟದ ಜೀವಿಗಳನ್ನು
ಕೊಲ್ಲುವ ಗುಣವನ್ನು ಕಾರ್ಬಾಲಿಕ್ ಆಮ್ಲ ಹೊಂದಿದೆ ಎಂದು ಅದರಲ್ಲಿ ತಿಳಿಸಿ ಎಲ್ಲ ಗಾಯಗಳನ್ನು ಆ ಆಮ್ಲದಿಂದ ತೊಳೆಯು ವುದು ಒಳ್ಳೆಯದು ಎಂಬುದನ್ನು ವಿಷದೀಕರಿಸಿದ. ಆತನ ಸಂಶೋಧನೆಯನ್ನು ಆತನ ದೇಶ ಬ್ರಿಟನ್ನಿನಲ್ಲಿಯೇ ಒಪ್ಪಲಿಲ್ಲ.

ಏಕೆಂದರೆ ಆಗ ಕಣ್ಣಿಗೆ ಕಾಣದ ಬ್ಯಾಕ್ಟೀರಿಯಾಗಳ ಬಗ್ಗೆ ವಿeನಿಗಳಿಗೆ, ವೈದ್ಯರಿಗೆ ಸ್ಪಷ್ಟ ಅರಿವಿರಲಿಲ್ಲ. ಆದರೆ ನಂತರ
ಯುರೋಪಿನ ಇತರ ದೇಶಗಳಲ್ಲಿ ಮತ್ತು ಅಮೇರಿಕದಲ್ಲಿ ಈತನ ಥಿಯರಿಯನ್ನು ಒಪ್ಪಲಾಯಿತು. ರಿಚರ್ಡ್ ಡೊಲ್:
1940 ರ ದಶಕದ ಉತ್ತರಾರ್ಧದಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ಕೆನಡಾ, ಅಮೆರಿಕ, ಟರ್ಕಿ ಮತ್ತು ಜಪಾನ್‌ಗಳಲ್ಲಿ ಶ್ವಾಸ ಕೋಶದ ಕ್ಯಾರ್ನ್ಸ ನಿಂದ ಜನರು ಹೆಚ್ಚು ಮರಣ ಹೊಂದುತ್ತಿರುವುದು ವೈದ್ಯರ ಗಮನಕ್ಕೆ ಬಂದಿತು.

ಆಗ ಮೊದಲ ಜಾಗತಿಕ ಮಹಾಯುದ್ಧ ಮುಗಿದು ಎರಡನೇ ಮಹಾಯುದ್ಧದ ಸಮಯ. ಆಗ ಕ್ಯಾನ್ಸರ್‌ ಬರಲು ಔದ್ಯಮಿಕ ವಾಯುಮಾಲಿನ್ಯ ಅಥವಾ ಧೂಮಪಾನ ಕಾರಣವಿರಬಹುದೆಂದು ಕೆಲವಾರು ಊಹೆ ಮಾಡಿದ್ದರು. 1950 ರಲ್ಲಿ ರಿಚರ್ಡ್ ಡೊಲ್ ಎಂಬ ಇಂಗ್ಲೆಂಡಿನ ಸಂಖ್ಯಾ ಶಾಸ್ತ್ರಜ್ಞ (Statistician) ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ ಧೂಮಪಾನಕ್ಕೂ ಶ್ವಾಸಕೋಶದ ಕ್ಯಾನ್ಸರ್‌ ಗೂ ಇರುವ ಸಂಬಂಧವನ್ನು ದೃಢೀಕರಿಸುವ ಬಗ್ಗೆ ಒಂದು ಸಂಶೋಧನಾ ಪ್ರಬಂಧ ಪ್ರಕಟಿಸಿದರು.

ಅದಕ್ಕಾಗಿ ಭಿನ್ನ ಸ್ಥಳಗಳ ಹಲವಾರು ಸಾವಿರ ರೋಗಿಗಳ, ಧೂಮಪಾನಿಗಳ ಮಾಹಿತಿ ಕಲೆ ಹಾಕಿದ್ದರು. ಈಗಿನಂತೆ
ಆಗಲೂ ತಂಬಾಕಿನ ಉದ್ಯಮ ಈ ಮಾಹಿತಿಯನ್ನು ಒಪ್ಪಿರಲಿಲ್ಲ.

ಫ್ರೆಡರಿಕ್ ಬ್ಯಾಂಟಿಂಗ್: 1922 ರಲ್ಲಿ ಕೆನಡಾದ ಟೋರೆಂಟೋದಲ್ಲಿ ಲಿಯೋನಾರ್ಡ್ ಥಾಮ್ಸನ್ ಎಂಬ ರೋಗಿ ಗಂಭೀರವಾದ
ಡಯಾಬಿಟಿಸ್ ಕಾಯಿಲೆಯಿಂದ ಆಸ್ಪತ್ರೆಯಲ್ಲಿದ್ದ. ಆಗ ಡಯಾಬಿಟಿಸ್ ಗೆ ಲಭ್ಯವಿದ್ದ ಚಿಕಿತ್ಸೆ ಎಂದರೆ ಸಕ್ಕರೆ ಅಂಶವನ್ನು ಕೊಡದೆ ರೋಗಿಯನ್ನು ಉಪವಾಸ ಕೆಡವುವುದು. ಹಾಗಾಗಿ ಆತ ಬಹಳಷ್ಟು ಕೃಷವಾಗಿದ್ದ. ಫ್ರೆಡರಿಕ್ ಬ್ಯಾಂಟಿಂಗ್ ಎಂಬ ವೈದ್ಯ ಹಸುಗಳಿಂದ ತೆಗೆದು ಸಂಸ್ಕರಿಸಿದ ಇನ್ಸುಲಿನ್ ಔಷಧವನ್ನು ಮೊಟ್ಟಮೊದಲ ಬಾರಿಗೆ ಈತನ ಮೇಲೆ ಪ್ರಯೋಗ ಮಾಡಿದ. ಪರಿಣಾಮ ಎಂದರೆ ಆಶ್ಚರ್ಯಕರವಾಗಿ ಈತ ಬದುಕುಳಿದ.

ಆಮೇಲೆ ೧೩ ವರ್ಷಗಳ ಕಾಲ ಆತ ಜೀವಿಸಿದ್ದ. ಡಯಾಬಿಟಿಸ್ ಕಾಯಿಲೆಯಲ್ಲಿ ಮೇದೋಜೀರಕ ಗ್ರಂಥಿ (ಪ್ಯಾಂಕ್ರಿಯಾಸ್) ಯಲ್ಲಿ ಏನೋ ತೊಂದರೆಯಾಗಿ ರಕ್ತದಲ್ಲಿ ಸಕ್ಕರೆಯ ಅಂಶ ವೃದ್ಧಿಸುತ್ತದೆ ಎಂಬುದು ವೈದ್ಯರಿಗೆ ಗೊತ್ತಿತ್ತು. ಆದರೆ ಸೂಕ್ತ ಔಷದವಿರಲಿಲ್ಲ. ಆಗಲೇ ಬ್ಯಾಂಟಿಂಗ್ ಮತ್ತು ಸಹೋದ್ಯೋಗಿಗಳು ಔಷಧ ಕಂಡುಹಿಡಿದು ಇನ್ಸುಲಿನ್ ಎಂದು ಹೆಸರಿಸಿದರು. ಅದು ನಂತರ ಕೆನಡಿಯನ್ ಮೆಡಿಕಲ್ ಜರ್ನಲ ನಲ್ಲಿ ಪ್ರಬಂಧವಾಗಿ ಪ್ರಕಟವಾಯಿತು. ಬ್ಯಾಂಟಿಂಗ್ ಮತ್ತು ಆತನ ಸಹೋ ದ್ಯೋಗಿ ಜಾನ್ ಮೆಕ್ಲಿಯೋಡ್ ರಿಗೆ 1923 ರ ವೈದ್ಯಕೀಯ ನೊಬೆಲ್ ಪ್ರಶಸ್ತಿ ಲಭ್ಯವಾಯಿತು.

ಬ್ಯಾರಿ ಮಾರ್ಷಲ್:
ಜಠರ ಮತ್ತು ಹೊಟ್ಟೆಯ ಭಾಗದ ಅಲ್ಸರ್‌ಗಳು ಕೆಲಸದ ಒತ್ತಡ, ಧೂಮಪಾನ, ವಂಶವಾಹಿಗಳಿಂದ ಬರುತ್ತವೆ ಎಂದು ಜನರು ನಂಬಿದ್ದರು. ಹಾಗಾಗಿ ಆಸಿಡ್‌ಗಳನ್ನು ಕಡಿಮೆಗೊಳಿಸುವ ಔಷಧಗಳಿಂದ ಚಿಕಿತ್ಸೆ ಮಾಡುತ್ತಿದ್ದರು. 1980ರಲ್ಲಿ ಆಸ್ಟ್ರೇಲಿಯಾದ
ಸಂಶೋಧನಕಾರರಾದ ರಾಬಿನ್ ವಾರೆನ್ ಮತ್ತು ಬ್ಯಾರಿ ಮಾರ್ಷಲ್, ಬೇರೆ ಕಾರಣಗಳಿರಬಹುದೆಂದು ಹುಡುಕಲಾ ರಂಭಿಸಿದರು. 1982ರ ಹೊತ್ತಿಗೆ ಹೆಲಿಕೋಬ್ಯಾಕ್ಟರ್ ಪೈಲೋರಿ ಎಂಬ ಬ್ಯಾಕ್ಟೀರಿಯಾ ಇದಕ್ಕೆ ಕಾರಣ ಎಂದು
ನಿರೂಪಿಸಿದರು.

ಜಠರದಲ್ಲಿರುವ ಆಮ್ಲೀಯ ವಾತಾವರಣವನ್ನು ಬ್ಯಾಕ್ಟೀರಿಯಾಗಳು ತಡೆದುಕೊಳ್ಳುವುದಿಲ್ಲ ಎಂಬ ವಾದವನ್ನು ಮುಂದೊಡ್ಡಿ
ಸಮಕಾಲೀನ ವಿeನಿಗಳು ಅವರ ಶೋಧನೆಯನ್ನು ಒಪ್ಪಿರಲಿಲ್ಲ. ಆಗ ಬ್ಯಾರಿ ಮಾರ್ಷಲ್ ತಮ್ಮ ವಾದವನ್ನು ಸಶಕ್ತಗೊಳಿಸಲು
ಅದೇ ಬ್ಯಾಕ್ಟೀರಿಯಾಗಳಿರುವ ದ್ರಾವಣವನ್ನು ಸ್ವತಃ ತಾವೇ ಕುಡಿದರು. ನಂತರ ಅವರಿಗೆ ಅರ್ಲ್ಸ ಕಾಯಿಲೆ ಬಂದಿತು. ಹತ್ತು ದಿನಗಳ ನಂತರ ತನ್ನ ಜಠರಕ್ಕೆ ಎಂಡೋಸ್ಕೋಪ್ ತೂರಿಸಿ ಪರೀಕ್ಷಿಸುವಂತೆ ಸಹೋದ್ಯೋಗಿಗಳನ್ನು ಕೇಳಿಕೊಂಡರು.

ಆಗ ಅವರ ಹೊಟ್ಟೆಯಲ್ಲಿ ಅಲ್ಸರ್‌ನ ಎಲ್ಲ ಲಕ್ಷಣಗಳೂ ಇದ್ದವು. ಆಗ ಹೆಲಿಕೋಬ್ಯಾಕ್ಟರ್ ಪೈಲೋರಿ ಬ್ಯಾಕ್ಟೀರಿಯಾವು ಈ ಅಲ್ಸರ್‌ಗಳಿಗೆ ಕಾರಣ ಎಂದು ಒಪ್ಪಲಾಯಿತು. 1984ರಲ್ಲಿ ಲ್ಯಾನ್ಸೆಟ ಜರ್ನಲ್ ನಲ್ಲಿ ಇವರ ಸಂಶೋಧನಾ ಪ್ರಬಂಧ
ಪ್ರಕಟವಾಯಿತು. ಈ ಸಂಶೋಧನೆಗಾಗಿ ವಾರೆನ್ ಮತ್ತು ಮಾರ್ಷಲ್‌ರಿಗೆ 2005 ರ ವೈದ್ಯಕೀಯದ ನೊಬೆಲ್ ಪಾರಿ ತೋಷಕ ಲಭ್ಯವಾಯಿತು. ಈಗ ಕಡಿಮೆ ಅವಧಿಯ ಆಂಟಿಬಯೋಟಿಕ್ ಕೋಸ್ ನಿಂದ ಅಲ್ಸರ್ ಚಿಕಿತ್ಸೆ ಮಾಡಲಾಗುತ್ತದೆ. ಇದೇ ರೀತಿಯ ಇನ್ನೊಂದು ಅನ್ವೇಷಣೆಯ ಬಗೆಗೆ ಗಮನಹರಿಸೋಣ.

ಪೋಲಿಯೊ ಲಸಿಕೆಯ ಅನ್ವೇಷಣಾ ಗಾಥೆ : 1954 ರಲ್ಲಿ ಅಮೆರಿಕ, ಕೆನಡಾ ಮತ್ತು ಫಿನ್ಲೆಂಡ್ ದೇಶಗಳ ಮೂರು ಲಕ್ಷ ವೈದ್ಯರು, ನರ್ಸ್‌ಗಳು, ಶಾಲಾ ಶಿಕ್ಷಕರು ಹಾಗೂ ಇತರ ಸ್ವಯಂಸೇವಕರು ಒಂದು ಬೃಹತ್ ದಾಖಲೆ ನಿಮಿಸಿದ ವೈದ್ಯಕೀಯ ಪ್ರಯೋಗ ದಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಜಗತ್ತಿನಲ್ಲಿ ಲಕ್ಷಾಂತರ ಮಕ್ಕಳಿಗೆ ಹಾನಿ ಉಂಟು ಮಾಡುತ್ತಿದ್ದ ಪೋಲಿಯೋ ಕಾಯಿಲೆಗೆ ಹೊಸದಾಗಿ ಕಂಡುಹಿಡಿಯಲಾಗಿದ್ದ ಚುಚ್ಚುಮದ್ದಿನ ಪರಿಣಾಮವನ್ನು ಪರೀಕ್ಷಿಸುವುದು ಅವರ ಉದ್ದೇಶವಾಗಿತ್ತು. ಅದು ಬಹಳ ಯೋಚಿಸಿ, ಯೋಜಿಸಿದ ಅತಿ ದೊಡ್ಡ ಪ್ರಾಜೆಕ್ಟ್ ಆಗಿತ್ತು.

ಆರೂವರೆ ಲಕ್ಷ ಶಾಲಾ ಮಕ್ಕಳಿಗೆ ವ್ಯಾಕ್ಸಿನ್ ಕೊಡಲಾಗಿತ್ತು. ಏಳೂವರೆ ಲಕ್ಷ ಮಕ್ಕಳಿಗೆ ಔಷಧರಹಿತ ಇಂಜೆಕ್ಷನ್ ಕೊಡ ಲಾಗಿತ್ತು. ನಾಲ್ಕು ಮಕ್ಕಳಿಗೆ ಏನೂ ಕೊಡದೆ ಕಂಟ್ರೋಲ್ ಗ್ರೂಪ್ ಎಂದು ಮಾನ್ಯ ಮಾಡಿ ಅವರನ್ನು ಹಾಗೇ
ಇರಿಸಲಾ ಗಿತ್ತು. ಈ ಪ್ರಾಜೆಕ್ಟ್‌ನಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರಿಗೂ ಪೋಲಿಯೋ ಪಯೋನಿಯರ್ ಎಂಬ ಸರ್ಟಿಫಿಕೇಟ್ ಮತ್ತು ಒಂದು ಸಿಹಿತಿಂಡಿ ಕೊಡಲಾಗುತ್ತಿತ್ತು.

ಇದರ ಫಲಿತಾಂಶವನ್ನು 1955 ರಲ್ಲಿ ಪ್ರಕಟಿಸಲಾಯಿತು. ಪೋಲಿಯೋ ಲಸಿಕೆ ಅಥವಾ ವ್ಯಾಕ್ಸಿನ್ ಅಪಾಯಕಾರಿಯಲ್ಲ,
ಹಾಗೆಯೇ ಆ ಕಾಯಿಲೆಯ ವಿರುದ್ಧ ಪರಿಣಾಮಕಾರಿ ಎಂದು ಸಾಬೀತಾಯಿತು. ಇದರ ನೇರ ಪರಿಣಾಮವೆಂದರೆ 1979 ರ ಹೊತ್ತಿಗೆ ಅಮೆರಿಕದಲ್ಲಿ ಪೋಲಿಯೋ ಸಂಪೂರ್ಣವಾಗಿ ನಿರ್ಮೂಲವಾಯಿತು. ಅಮೆರಿಕದ ಪಿಟ್ಸಬರ್ಗ್ ವಿಶ್ವವಿದ್ಯಾನಿಲಯದ
ಸಂಶೋಧಕ ಡಾ. ಜೋನಸ್ ಸಾಕ್ ಅವರು ಹಲವು ವರ್ಷಗಳ ಅವಿಶ್ರಾಂತ ಪರಿಶ್ರಮದಿಂದ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದರು.

ಸಾಕ್ ಅವರ ಈ ಸಂಶೋಧನೆ ಹಲವಾರು ಕಾರಣಗಳಿಗೆ ಬಹಳ ಮಹತ್ವ ಎನಿಸುತ್ತದೆ. ಇನ್ನೂ ಹಲವು ವೈಜ್ಞಾನಿಕ ಸಂಶೋಧನೆಗಳೊಂದಿಗೆ ಇದು ತಳುಕು ಹಾಕಿಕೊಂಡಿದೆ. ಹೊಸ ಲಸಿಕೆ ಕಂಡು ಹಿಡಿಯಲು ಸಾಕ್ ರಿಗೆ ಪೋಲಿಯೋ ವೈರಸ್ ಅನ್ನು ಅಭಿವೃದ್ಧಿ ಪಡಿಸಲು ಜೀವಕೋಶಗಳ ಮಾಧ್ಯಮ ದ ಅವಶ್ಯಕತೆ ಇತ್ತು. ಅದಕ್ಕೆ ಅವರು ‘ಹೆ -ಲಾ – ಜೀವಕೋಶಗಳು’ ಎಂಬ ವಿಶಿಷ್ಟ ಜೀವಕೋಶಗಳನ್ನು ಉಪಯೋಗಿಸಿದರು. ಈ ಜೀವಕೋಶಗಳ ಬಗೆಗೇ ಅಪರೂಪದ ಚರಿತ್ರೆ ಅಥವಾ ಕಥೆ ಇದೆ. ಇವು ಪ್ರಯೋಗಾಲಯದಲ್ಲಿ ಬಹಳ ಕಾಲದವರೆಗೆ ಜೀವಕೋಶಗಳನ್ನು ಬೆಳೆಸುವ ಶಕ್ತಿಯುಳ್ಳ ಜೀವಕೋಶಗಳು.

ಈ ಜೀವಕೋಶಗಳು ಹೆನ್ರಿಟ್ಟಾ ಲಾಕ್ಸ್ ಎಂಬ ಮಹಿಳೆಯ ಜೀವಕೋಶಗಳು. 1951 ರಲ್ಲಿ ಆಕೆ ಗರ್ಭಕೊರಳಿನ ಕ್ಯಾನ್ಸರ್‌ಗೆ ವಿಕಿರಣ ಚಿಕಿತ್ಸೆ (ರೇಡಿಯೇಶನ್ ಟ್ರೀಟ್ಮೆಂಟ) ತೆಗೆದುಕೊಳ್ಳುತ್ತಿದ್ದಳು ಆ ಸಂದರ್ಭದಲ್ಲಿ ವೈದ್ಯರು ಆಕೆಯ ಗರ್ಭಕೋಶದ
ಆರಂಭದ ಭಾಗ ಸರ್ವಿಕ್ಸ್ ಅಥವಾ ಗರ್ಭಕೊರಳಿನ ಸ್ವಲ್ಪ ಭಾಗವನ್ನು ಬಯಾಪ್ಸಿಗೆಂದು ಶಸ್ತ್ರಕ್ರಿಯೆ ಮಾಡಿ ತೆಗೆದುಕೊಂಡರು. ಈ ಜೀವಕೋಶಗಳು ಆನಂತರ ವಿವಿಧ ಸಂಶೋಧನೆಗಳಲ್ಲಿ ಉಪಯೋಗಗೊಳ್ಳತೊಡಗಿದವು.

ಮುಖ್ಯ ಕಾರಣ ಎಂದರೆ ಈ ಜೀವಕೋಶಗಳನ್ನು ಮೂಲದ ರೀತಿಯಲ್ಲಿಯೇ ನಕಲು ತೆಗೆದು ಸಂಶೋಧನಾತ್ಮಕವಾಗಿ ಉಪಯೋಗಿಸಲು ಸಾಧ್ಯವಾಯಿತು. ಜಗತ್ತಿನಾದ್ಯಂತ ಈ ಜೀವಕೋಶಗಳನ್ನು ಉಪಯೋಗಿಸಿ ಹಲವು ರೀತಿಯ ಕ್ಯಾನ್ಸರ್‌ ಸಂಶೋಧನೆಗಳನ್ನು ಕೈಗೊಳ್ಳಲಾಗಿದೆ. ಅಂತೆಯೇ ಬಾಹ್ಯಾಕಾಶದ ವಿವಿಧ ಸಂಶೋಧನೆಗಳಲ್ಲಿಯೂ ಉಪಯೋಗಿಸಲಾಗಿದೆ.

ಸಾಕ್ ರ ಲಸಿಕೆ, ಇಂಜೆಕ್ಷನ್ ಮೂಲಕ ಕೊಡುವ ವ್ಯಾಕ್ಸೀನ್. ನಂತರ ಆಲ್ಬರ್ಟ್ ಸೇಬಿನ್ ಎನ್ನುವವರು ಬಾಯಿಯ ಮೂಲಕ ಕೊಡುವ ಹನಿಗಳ ರೀತಿಯ ಲಸಿಕೆ ಕಂಡುಹಿಡಿದರು. ಇದು ಬಹಳ ಜನಪ್ರಿಯವಾಯಿತು. ಜಗತ್ತಿನ ಹಲವು ದೇಶಗಳಲ್ಲಿ ಇದನ್ನು ಉಪಯೋಗಿಸಿ ಪೋಲಿಯೋ ನಿರ್ಮೂಲನೆ ಮಾಡಲಾಗಿದೆ. ಆದರೆ ನಿರ್ಮೂಲನೆ ಆದ ಪ್ರದೇಶದಲ್ಲಿ ಪೋಲಿಯೋ ಪುನಃ ಕಾಣಿಸಿಕೊಂಡರೆ ಸಾಕ್ ರ ಇಂಜೆಕ್ಷನ್ ಲಸಿಕೆಯೇ ಪರಿಣಾಮಕಾರಿ. ಹಾಗಾಗಿ ಆ ಲಸಿಕೆ ಈಗಲೂ ಪ್ರಸ್ತುತವಿದೆ.

ಈ ಎರಡು ಲಸಿಕೆಗಳು ಜಗತ್ತಿನ ಕೋಟ್ಯಂತರ ಮಕ್ಕಳಿಗೆ ಪೋಲಿಯೋ ಬರುವುದನ್ನು ತಡೆಗಟ್ಟಿ ಬಹಳ ದೊಡ್ಡ ಸೇವೆ ಮಾಡಿವೆ ಎಂಬುದು ತುಂಬಾ ಗಮನಾರ್ಹ ಸಂಗತಿ.