Sunday, 15th December 2024

ಮೀಸಲು ರಾಜಕಾರಣ, ಜಾತಿ ಧ್ರುವೀಕರಣ ಸಾಧ್ಯತೆ

ಅಭಿಪ್ರಾಯ 

ಪ್ರಶಾಂತ್‌ ಭೀಮಯ್ಯ, ಸಿಂಡಿಕೇಟ್ ಸದಸ್ಯ, ಕನ್ನಡ ವಿಶ್ವವಿದ್ಯಾಲಯ

abprashanth@gmail.com

ಕರ್ನಾಟಕ ರಾಜ್ಯ ಚುನಾವಣಾ ಆಯೋಗ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸ್ಥಳೀಯ ಮೀಸಲಾತಿ ಕರಡು ಅಧಿಸೂಚನೆ ಹೊರ ಬೀಳು ತ್ತಿದ್ದಂತೆ, ಸ್ಥಳೀಯ ರಾಜಕೀಯ ಪ್ರಕ್ರಿಯೆಗಳು ಚುರುಕುಗೊಳ್ಳಲಾರಂಭಿಸಿವೆ.

ಕೊಡಗಿನಲ್ಲೂ ರಾಜಕೀಯ ಚಟುವಟಿಕೆಗಳು ಪ್ರಾರಂಭವಾಗಿದ್ದು, ರಾಜಕೀಯ ಪಕ್ಷದ ಆಕಾಂಕ್ಷಿಗಳು ಲಾಭಿ ಪ್ರಾರಂಭಿಸಿದ್ದಾರೆ. ಒಂದೆಡೆ ಮೀಸಲಾತಿ ಬಗ್ಗೆ ಅಸಮಾಧಾನದ ಕೂಗು, ಇನ್ನೊಂದೆಡೆ ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರಿಗಳಿಗೆ ಟಿಕೆಟ್ ಕೊಡುತ್ತಾರೆ ಎಂಬ ಆತಂಕ. ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ತಮ್ಮ ವೈಯಕ್ತಿಕ ಹಿತಾಸಕ್ತಿಯಿಂದಾಗಿ ರಾಜಕೀಯ ಪಕ್ಷ ಬದಲಾಯಿಸುವುದು, ಆಯಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸುತ್ತದೆ. ಈಗಲೂ ಅದೇ ನಡೆಯುತ್ತಿದೆ.

ಕರ್ನಾಟಕ ಗ್ರಾಮ ಸ್ವರಾಜ್ಯ ಹಾಗೂ ಪಂಚಾಯತ್ ರಾಜ್ 1993 ಅಧಿನಿಯಮದಲ್ಲಿ ಐದು ಪ್ರಕಾರದ ಮೀಸಲಾತಿಗಳನ್ನು ಒಳಗೊಂಡಿರುತ್ತದೆ. ಮಹಿಳೆ, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಹಿಂದುಳಿದವರ್ಗ ಪ್ರವರ್ಗ (ಎ) ಹಾಗೂ ಹಿಂದುಳಿದವರ್ಗ ಪ್ರವರ್ಗ (ಬಿ). ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಯ ಮೀಸಲಾತಿಯ ಪ್ರಮಾಣವನ್ನು ಆಯಾ ಜಿಲ್ಲೆಯ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಯ ಶೇಕಡಾವಾರು ಜನಸಂಖ್ಯೆಗೆ (Percentage of SC ST Population) ಅನುಸಾರವಾಗಿ ನಿರ್ಧರಿಸಲಾಗುತ್ತದೆ.

ಶೇ.33 ಮೀಸಲಾತಿಯನ್ನು ಹಿಂದುಳಿದ ವರ್ಗದವರಿಗೆ ಮೀಸಲಾಗಿದ್ದು , ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಯ ಹಾಗೂ ಹಿಂದುಳಿದ ವರ್ಗದ ಮೀಸಲಾತಿ ಶೇ.50 ಮೀರಬಾರದು. ಹಾಗಾಗಿ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಗಳಿಗೆ ಮೀಸಲಾತಿ ನೀಡಿದ ನಂತರ ಶೇ.೫೦ರಲ್ಲಿ ಉಳಿದ ಮೀಸಲಾತಿಯನ್ನು ಶೇ.33 ಮೀರದಂತೆ ಹಿಂದುಳಿದ ವರ್ಗದವರಿಗೆ ನೀಡಲಾಗವುದು.

ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮೀಸಲಾತಿಯನ್ನು ಚುನಾವಣಾ ಆಯೋಗವು ಅಽನಿಯಮದ ಅನುಸಾರ ನಿರ್ಧರಿಸುತ್ತದೆ. ಅಽನಿಯಮದ ಪ್ರಕಾರ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಹಾಗೂ ಮಹಿಳೆಯರ ಹೆಚ್ಚು ಜನಸಂಖ್ಯೆ ಇರುವ ಕ್ಷೇತ್ರಗಳನ್ನು ಪಟ್ಟಿ ಮಾಡಿ ಆವರ್ತದ ಆಧಾರದ ಮೇಲೆ ಮೀಸಲು ನೀಡಲಾಗವುದು. ಕ್ಷೇತ್ರದ ಪುನರ್‌ವಿಂಗಡಣೆ ಆದಲ್ಲಿ ಆಯಾ ಕ್ಷೇತ್ರದ ದೊಡ್ಡ ಪ್ರದೇಶದ ಹಿಂದಿನ ಮೀಸಲಾತಿಯನ್ನು ಪರಿಗಣಿಸಲಾಗುವುದು. ಕೊಡಗಿನಲ್ಲಿ ಎರಡು ಹೊಸ ತಾಲೂಕು ರಚನೆಯ ಹಿನ್ನೆಲೆಯಲ್ಲಿ ಕೊಡಗಿನ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನು ಪುನರ್‌ ವಿಂಗಡಿಸಲಾಯಿತು.

ಪುನರ್‌ವಿಂಗಡನೆಯ ನಂತರ ಜಿಲ್ಲೆಯಲ್ಲಿ 29 ಜಿಲ್ಲಾ ಪಂಚಾಯತ್ ಕ್ಷೇತ್ರ ಹಾಗೂ 52 ತಾಲೂಕು ಪಂಚಾಯತ್ ಕ್ಷೇತ್ರಗಳನ್ನು ರಚಿಸಲಾಯಿತು. ಮುಂದಿನ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಸ್ತುತ ಡೆಮೊಗ್ರಫಿಯನ್ನು ಸಂಕ್ಷಿಪ್ತವಾಗಿ ನೋಡಬೇಕಿದೆ. ಜಿಲ್ಲೆಯ ಹಾಲಿ ಜನಸಂಖ್ಯೆ 5,96,718 ಅದರಲ್ಲಿ 4, 19, 550 ಮತದಾರರಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ 87,274 ಮುಸ್ಲಿಂ ( ಶೇ 15,74%) , 17,130 ಕ್ರಿಶ್ಚಿಯನ್ (ಶೇ 3.09%) ಹಾಗೂ 4,48,986 ಹಿಂದೂ (ಶೇ 80,97%) ಗಳಿದ್ದಾರೆ.

ಶೇ.80.97 ಹಿಂದೂ ಸಮುದಾಯದಲ್ಲಿ 73,584 ಪರಿಶಿಷ್ಟ ಜಾತಿಯವರು (ಶೇ 13.27%) ಮತ್ತು 58,054 (ಶೇ 10.47%) ಪರಿಶಿಷ್ಟ ಪಂಗಡ ದವರು ಇದ್ದರೆ. ಹಿಂದುಳಿದ ಕೊಡಗು ಭಾಷಿಗ ಸಮುದಾಯಗಳನ್ನು ಒಳಗೊಂಡಂತೆ ಶೇ೩೬ ಹಿಂದುಳಿದವರಿzರೆ. ಇತ್ತೀಚಿನ ದಿನಗಳಲ್ಲಿ ಕೊಡಗಿನ ಹಲವು ಅಂಚಿನಲ್ಲಿರುವ ಹಿಂದುಳಿದ ಸಮುದಾಯಗಳು ಧ್ರುವೀಕರಿಸುತಿದ್ದು , ಮುಂದಿನ ರಾಜಕೀಯ ಲೆಕ್ಕಾಚಾರ ಬದಲಾಗಬಹುದು.

ಹಿಂದುಳಿದ ಹಾಗೂ ಪರಿಶಿಷ್ಟ ವರ್ಗದವರಿಗೆ ಸಮಾನಾಂತರ ಮೀಸಲಾತಿ ನೀಡಿದ್ದರೂ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಅಂಚಿ ನಲ್ಲಿರುವ ಹಿಂದುಳಿದ ಹಾಗೂ ಪರಿಶಿಷ್ಟ ಸಮುದಾಯಗಳನ್ನು ಎಲ್ಲರನ್ನೂ ಒಳಗೊಳ್ಳುವ ಸಹಭಾಗಿತ್ವ ರಾಜಕಾರಣದಿಂದ ದೂರ ಇಟ್ಟಿರುವುದು. ಮೀಸಲಾತಿಯ ಹೊಸ ಚರ್ಚೆ ರಾಜಕಾರಣದ ಹೊಸ ಅಧ್ಯಾಯ ಬರೆಯಬಹುದು ಎಂಬ ನಿರೀಕ್ಷೆ ಹುಟ್ಟಿಸಿz