Saturday, 14th December 2024

ವಿಮರ್ಶೆಗಳನ್ನ ಸ್ವೀಕರಿಸಿ ಗೆಲ್ಲುವ ಮನಸ್ಸಿರಲಿ

ಪರಿಶ್ರಮ

ಪ್ರದೀಪ್‌ ಈಶ್ವರ್‌

parishramamd@gmail.com

ಸೋಲು, ಗೆಲುವು, ಹತಾಶೆ, ಒಂಟಿತನ, ಬೇಸರ, ಏನೋ ಸಾಽಸಬೇಕೆಂಬ ಹಂಬಲ, ಏನೂ ಸಾಧಿಸಲಾಗದೆ ಉಳಿದು ಹೋಗುವ ನಿಸ್ಸಹಾಯಕತೆ, 4 ಜನ ಮೆಚ್ಚುವ ತರಹ ಬದುಕಬೇಕೆಂಬ ಆಸೆ, ಅವಮಾನಗಳಿಗೆ ಒಳಪಟ್ಟು ಬಿಡ್ತೀವಿ ಅನ್ನೋ ಆತಂಕ ಇವೆಲ್ಲ ಇದ್ದದ್ದೇ.
ಅವಮಾನ ಆದಾಗ ಬಹಳಷ್ಟು ಜನ ಬೇಜಾರ್ ಬೀಳ್ತಾರೆ, ಕಣ್ಣಿರು ಹಾಕ್ತಾರೆ, ಕೆಲವ ರಂತೂ ಈ ಪ್ರಪಂಚವನ್ನೇ ಬಿಟ್ಟು ಹೋಗಿ ಬಿಡುತ್ತಾರೆ. ಜೀವನದಲ್ಲಿ ಒಂದು ತರ ಟ್ವಿಸ್ಟ್ ಇರುತ್ತೆ.

ತುಂಬ ಕಷ್ಟ ಪಟ್ಟು ಉತ್ತರ ಹುಡುಕಿದರೆ ಆ ಭಗವಂತ Question Paper ಚೇಂಜ್ ಮಾಡಿ ಬಿಡ್ತಾನೆ. ಆದ್ರೆ ಅಂತ ಸಂದಿಗ್ಧತೆಯಿಂದ ಆಚೆ ಬರಬೇಕು. ಸೋಲು ಸನಿಹಕ್ಕೆ ಬರುವುದಕ್ಕಿಂತ ಮುಂಚೆ ಗೆಲುವು ಬಾಳ ಸಂಗಾತಿಯಾಗಬೇಕು. ಸೋಲು ಬರಬಾ ರದು ಅಂತ ಅನ್ಕೋಬೇಡಿ, ಸೋಲು ಬರಬೇಕು ಆದ್ರೆ ಅದನ್ನ ಹತ್ರ ಬಿಟ್ಕೊಡಬಾರದು. ಗೆಲುವು ಮಾತ್ರ ಲೈಫ್ ಪಾರ್‌ಟ್ನರ್ ಆಗಿ ಬಿಡಬೇಕು.

ಎಲ್ಲಾ ಯುವಕ ಯುವತಿಯರಿಗೆ ಹೇಳೋಕೆ ಇಷ್ಟಪಡ್ತೀನಿ. ಹೆಂಗೆ ಬದುಕಬೇಕು ಅಂದ್ರೆ ಭಯ ಕೂಡ ಧೈರ್ಯ ತಗೊಂಡು ಬೀಡಬೇಕು. ಸೋಲು ಕೂಡ ಗೆದ್ದು ಬಿಡಬೇಕು. ಕರೆಕ್ಟ್ ಆಗಿ ಹುಡುಕಿದರೆ ಈ ಪ್ರಪಂಚದಲ್ಲಿ ಪ್ರತಿ ಸಮಸ್ಯೆಗೂ ಉತ್ತರವಿದೆ. ನನ್ನ ಲೈಫ್ ಲಾಂಗು ಕಷ್ಟ ನೇ, ನಾನೆನೇ ಮಾಡಿದ್ರು ಕಷ್ಟ ನೇ. ನೀನು ನಡೆಯುವಾಗ ಕಷ್ಟ ಬರ್ತಿದೆ ಅಂದ್ರೆ ಕಷ್ಟ ಮುಂದೆ ಹೋಗ್ತಿದೆ ಅಂತ. ಬದುಕು ಅನ್ನೋದೇ ಒಂದು ದೊಡ್ಡ ಹೋರಾಟ. ಇಲ್ಲಿ ಸೋಲೂ ಇರುತ್ತೆ, ಗೆಲುವೂ ಇರುತ್ತೆ. ಪ್ರಶಂಸೆ, ವಿಮರ್ಶೆ, ಅವಮಾನ ಎದರ ನಡುವೆ ಬದುಕು ಸಾಗಿಸ ಬೇಕಾಗುತ್ತೆ.

ಆದರೆ ಪ್ರತಿಯೊಬ್ಬ ವ್ಯಕ್ತಿಯ ಲೈಫಲ್ಲಿ ಅತಿ ದೊಡ್ಡ ಚಾಲೆಂಜ್ ಅಂದರೆ ವಿಮರ್ಶೆಗಳು. ಯಾರೋ ಬೈದ ತಕ್ಷಣ ಡಿಪ್ರೆಸ್ ಆಗ್ತಾರೆ. ಜೀವನ ದಲ್ಲಿ ಗೆಲ್ಲಬೇಕು ಎಂದು ಹೊರಟವರಿಗೆ ಕಾಸ್ಸ್‌ನ್ಟ್ರೆಟ್ ಮಾಡಬೇಕಾದುದ್ದು ಗೆಲುವಿನ ಬಗ್ಗೆ ಅಲ್ಲ ಗೇಮ್ ಬಗ್ಗೆ. ಆ ಗೇಮ್‌ನ ಕಡೆ ಗಮನ ಕೊಟ್ಟರೆ ಗೆಲುವು ಆಟೋಮಿಟಿಕ್ ಆಗಿ ಬರುತ್ತೆ. ಜೀವನದಲ್ಲಿ ಏನಾದರೂ ಸಾಧಿಸಬೇಕು ಅಂದ್ರೆ ಫಸ್ಟ್ ವಿಮರ್ಶೆಗಳನ್ನ ಫೇಸ್ ಮಾಡ ಬೇಕು.

ಸೋಲನ್ನ ಹ್ಯಾಂಡಲ್ ಮಾಡಕ್ಕೆ ಸಾಧ್ಯ ವಾದವರೇ ಸಕ್ಸಸ್‌ನ್ನು ಹ್ಯಾಂಡಲ್ ಮಾಡ್ಬೋದು. ಒಂದು ಚಿಕ್ಕ ಸೋಲನ್ನ ಹ್ಯಾಂಡಲ್ ಮಾಡೋಕೆ ನಿಮ್ಮ ಕೈಯಲ್ಲಿ ಆಗಲಿಲ್ಲ ಅಂದ್ರೆ, ನಾಳೆ ಒಂದು ದೊಡ್ಡ ಗೆಲುವನ್ನೂ ನೀವು ಹ್ಯಾಂಡಲ್ ಮಾಡಲಾರಿರಿ. ನೀವೆಷ್ಟು ದೊಡ್ಡ
ಸೋಲನ್ನು ಹ್ಯಾಂಡಲ್ ಮಾಡುತ್ತಿರೋ, ಅಷ್ಟು ದೊಡ್ಡ ಗೆಲುವನ್ನು ಹ್ಯಾಂಡಲ್ ಮಾಡೋಕೆ ಸಾಧ್ಯ. ಬಹಳಷ್ಟು ಜನ ಹೇಳ್ತಾರೆ; ನನಗೆ ಆಸ್ತಿ ಇಲ್ಲ, ಬ್ಯಾಗ್ರೌಂಡ್ ಇಲ್ಲ, ಕರೆನ್ಸಿ ಇಲ್ಲ ಅಂತ. ಗೆದ್ದಕ್ಕೆ ಇದವುದೂ ಬೇಕಿಲ್ಲ. ಕಾನಿಡೆನ್ಸ್ ಬೇಕು. ವಿಮರ್ಶೆ ಮಾಡೋಕೆ ಜನರಿಗೆ ಒಂದಲ್ಲಾ ಒಂದು ವಶಯ ಇರುತ್ತೆ. ಒಂದು ಪರೀಕ್ಷೆ, ಒಂದು ಟೆಸ್ಟ್ ಹಣೆಬರಹ ಡಿಸೈಡ್ ಮಾಡುತ್ತಾ? ಬಿ ಕೂಲ್ ಧೈರ್ಯವಾಗಿರಬೇಕು.

ನಿಮ್ಮನ್ನ ನಂಬಿರೋರಿಗೆ ವಿವರಣೆ ಬೇಕಾಗಿಲ್ಲ. ನೀನು ವಿವರಣೆ ಮಾಡಿದ್ರು ನಿನ್ನ ನಂಬದೆ ಇರೋರು ಕೇಳಲ್ಲ. ಸಿಂಹ ಕುಳಿತುಕೊಳ್ಳೋಕೆ ಸಿಂಹಾಸನಾನೇ ಬೇಕಾಗಿಲ್ಲ; ಸಿಂಹ ಕೂತಿದ್ದೇ ಸಿಂಹಾಸನ ಆಗಿಬಿಡಬೇಕು. ಸಿಂಹದ ತರಹ ಯೋಚನೆ ಮಾಡಿ. ಸಿಂಹ 8 ರಿಂದ 10 ದಿನ ಬೇಟೆಗೆ ಹೋಗಲ್ಲ. ಹೋದ್ರೆ ಯಾವತ್ತು ಸೋತು ವಾಪಸ್ಸು ಬರೊಲ್ಲ. ಜೀವನದಲ್ಲಿ ಎರು ಗ್ರೇಟ್ ಆಗಿ ಬದುಕಬೇಕು ಜೀವನದ ಮೇಲಿನ ಭರವಸೆ ಕಳೆದುಕೊಳ್ಳಬೇಡಿ.

ಅವಮಾನಗಳಿಗೆ ಅಂಜಬೇಡಿ. ಬಹಳಷ್ಟು ಜನ ಯುವಕರು ಓವರ್ ಆಗಿ ಥಿಂಕ್ ಮಾಡ್ತಾರೆ. ನನಗೆ ಎಷ್ಟು ಅವಮಾನ ಆಯ್ತು ಗೊತ್ತ? ನೋಡಿ ನೀವು ಅಂದುಕೊಂಡಷ್ಟು ನಿಮಗೆ ಅವಮಾನಗಳು ಆಗಿರಲ್ಲ. ಅಟ್ ದಿ ಸೇಮ್ ಟೈಮ್ ನೀವ್ ಅಂದುಕೊಂಡಿರೋ ಅಷ್ಟು ನಿಮಗೆ ಗೌರವವೂ ಇರಲ್ಲ. ನೀವೇ ಜಾಸ್ತಿ ಊಹಿಸಿಕೊಳ್ತೀರಾ ಅಯ್ಯೋ ನನಗೆ ಇಷ್ಟು ಗೌರವ ಇದೆ; ನನಗೆ ಇಷ್ಟು ಇನ್ಸಲ್ಟ ಆಯ್ತು; ಈ ಪ್ರಪಂಚ ದಲ್ಲಿ ಯಾರು ಅಂದುಕೊಳ್ಳೋ ಅಷ್ಟು ಶ್ರೀಮಂತರು ಆಗಿರಲ್ಲ, ಅಂದುಕೊಂಡಿರೋ ಅಷ್ಟು ಯಾರು ಬಡವರೂ ಆಗಿರಲ್ಲ. ಬಡವರು
ನೋಡಿ ಹೇಳ್ತೀವಿ ಪಾಪ ಅವರಿಗೆ ಒಂದು ಹೊತ್ತು ಊಟಕ್ಕೂ ಕಷ್ಟ ಅಂತ. ಆದರೆ ಅವರು ನೆಮ್ಮದಿಯಾಗಿ ಊಟ ಮಾಡಿಕೊಂಡು ಹ್ಯಾಪಿ ಆಗಿ ಇರ್ತಾರೆ.

ಅಯ್ಯೋ ಅವರೆಷ್ಟು ಆಗರ್ಭ ಶ್ರೀಮಂತರು ಅಂತ. ಅವರಿಗೂ ಎಷ್ಟೋ ಟೈಮ್ E M I ಕಟ್ಟೋಕೆ ಆಗಿರಲ್ಲ. ಜನ ಏನ್ ಅನ್ಕೋತಾರೆ
ಅನ್ನೋದರ ಮೇಲೆ ಲೈಫ್ ನಿಂತಿರಲ್ಲ. ಬಹಳಷ್ಟು ಜನಕ್ಕೆ ಹೇಳೋದು ಒಂದು. ಅವಮಾನ ಆದಾಗ ಅದನ್ನ ರಿಸೀವ್ ಮಾಡಿ. ಕ್ರಿಟಿಸೈಜ್ ಆದಾಗ ಸ್ವೀಕರಿಸಿ. ಬಹಳಷ್ಟು ಜನಕ್ಕೆ ಅವಮಾನ ಆದಾಗ ಅತ್ತು ಬಿಡ್ತಾರೆ. ಚಿಕ್ಕ ಚಿಕ್ಕ ಸಮಸ್ಯೆಗಳಿಗೆ ಅಳುವುದನ್ನು ಬಿಟ್ಟು ಬಿಡಿ. ನಿಮಗೆ ಕಣ್ಣೀರು ಹಾಕಿಸೋ ವ್ಯಕ್ತಿಗೆ ಒಂದು ಅರ್ಹತೆ ಇರಬೇಕು.

ಒಂದು ರೇಂಜ್ ಇರಬೇಕು. ಅಂಥವರಿಗೆ ಮಾತ್ರ ಕಣ್ಣೀರು ಹಾಕಿ. ಚಿಕ್ಕ ಸಮಸ್ಯೆಗಳಿಗೆಲ್ಲ ಕಣ್ಣೀರು ಹಾಕುತ್ತಾ ಕುಳಿತುಕೊಂಡ್ರೆ ನಾಳೆ ಸಾಮ್ರಾಜ್ಯಗಳನ್ನ ಹೇಗೆ ಕಟ್ಟುತ್ತೀರಾ? ಜಸ್ಟ್ ಬಿ ಬೋಲ್ಡ್. ಒಂದು ಅವಮಾನ ಆಯ್ತಾ ಕರೆಕ್ಟ್ ಆಗಿ ಥಿಂಕ್ ಮಾಡಿ. ನಾನು ಎಲ್ಲಿ ಎಡವಿದೆ, ಎಲ್ಲಿ ತಪ್ಪು ಮಾಡಿದೆ ಅಂತ. ನೆನಪಿರಲಿ, ಈ ಪ್ರಪಂಚದಲ್ಲಿ ಪ್ರತಿಯೊಬ್ಬರನ್ನೂ ಅವಮಾನಿಸುತ್ತಾರೆ.

ಇವತ್ತಿನ ಸಾಮ್ರಾಜ್ಯವನ್ನ ಕಟ್ಟಿರೋ ಪ್ರತಿಯೊಬ್ಬರೂ ಮೊದಲು ಸೋತು ಸುಣ್ಣವಾದವರೇ. ಅವಮಾನಗಳಿಗೆ ಒಳಪಟ್ಟಿರುವವರೇ. ಜಸ್ಟ್ ಬಿ ಸ್ಟ್ರಾಂಗ್. ಎಲ್ಲ ಕರ್ನಾಟಕದ ಯುವಕ ಯುವತಿಯರಿಗೆ ಮನವಿ ಮಾಡ್ತೀನಿ, ನಮ್ಮ ರಾಜ್ಯದ ಕೀರ್ತಿ ಪತಾಕೆಯನ್ನ ಹಾರಿಸಬೇಕು. ನಮ್ಮ ರಾಜ್ಯದ ಭವಿಷ್ಯ, ನಮ್ಮ ರಾಜ್ಯದ ಕೀರ್ತಿ ಮುಂದಿನ ಪ್ರಗತಿ ಎಲ್ಲಾ ನಿಮ್ಮ ವಿಲ್ ಪವರ್ ಮೇಲೆ ನಿಂತಿದೆ. ನೀವು ಸಣ್ಣ ಸಮಸ್ಯೆಗೆ
ಹೆದರಿಕೊಂಡು ಕುಳಿತುಕೊಂಡ್ರೆ ಲೈಫಲ್ಲಿ ಏನೂ ಸಾಧಿಸಲು ಆಗಲ್ಲ. ಚಿಕ್ಕ ಚಿಕ್ಕ ಸಮಸ್ಯೆಗಳಿಗೆ ಹೆದರಬಾರದು. ಪ್ರಪಂಚದಲ್ಲಿ ಏನು ಮಾಡೋಕೆ ಹೋದ್ರೂ ಕಾಲನ್ನ ಎಳೀತಾರೆ. ಅವರು ಯಾರೋ ನಿಮ್ಮ ಕಾಲನ್ನ ಎಳೀತಾರೆ ಅಂದ್ರೆ ಅವ್ರು ನಿಮಗಿಂತ ಕೆಳಗೆ ಇರ್ತಾರೆ ಅಂತ. ಅವರು ಯಾರೋ ನಿಮ್ಮ ಬೆನ್ನಹಿಂದೆ ಮಾತಾಡಿದ್ದಾರೆ ಅಂದ್ರೆ ಅವರು ನಿಮಗಿಂತ ಹಿಂದೆ ಇದಾರೆ ಅಂತ.

ಧೈಯ ಇರಲಿ ಗೆಲ್ಲಬೇಕು ಅಂದ್ರೆ ಸೋಲಕ್ಕೆ ರೆಡಿ ಇರಿ. ಸಾಯ್ತಿವಿ ಅನ್ನೋ ಭಯ ಬದುಕಿಸುತ್ತೆ ಸೋಲುತ್ತೀವಿ ಅನ್ನೋ ಭಯ ನಮ್ಮನ್ನ ಗೆಲ್ಸುತ್ತೆ. ತುಂಬ ಗಟ್ಟಿಯಾಗಿರಬೇಕು ಸೋಲಾಗಲಿ ಗೆಲುವಾಗಲಿ ಪ್ರಪಂಚದಲ್ಲಿ ಇರಲ್ಲ. ಅದು ನಿಮ್ಮ ತಲೆಲಿ ಇರುತ್ತೆ. ಕಷ್ಟ ಆಗಲಿ
ಕಣ್ಣೀರಾಗಲಿ, ಸಂತೋಷವಾಗಲಿ ನಿಮ್ಮ ತಲೆಲಿ ಇರುತ್ತೆ ಇಟ್ಸ್ ಜಸ್ಟ್ ಅಬೌಟ್ ಯುವರ್ ಮೈಂಡ್ ಸೆಟ್. ಎಲ್ಲವೂ ಸಂದರ್ಭದಿಂದ ತೀರ್ಮಾನವಾಗುತ್ತೆ.

ಅಹಂಕಾರ ಅನ್ನೋದು ಹತ್ರನೇ ಬರಬಾರದು, ದುರಹಂಕಾರ ಅನ್ನೋದು ನಿನ್ನ ಜತೆ ಸಹವಾಸವನ್ನೇ ಮಾಡಬಾರದು. ಹಿಂಗೆ ಬದುಕಬೇಕು. ಪ್ರತಿ ಚಿಕ್ಕ ಸಮಸ್ಯೆಗೂ ಅಳೋದು, ಡಿಪ್ರೆಶನ್ ಆಗೋದು ನನ್ನನ್ನ ಯಾರು ನಂಬುತಿಲ್ಲ ಅನ್ನೋದು. ಯಾರು ನಂಬಬೇಕು ನಿನ್ನ. ನಿನಗೆ ನಿನ್ನ ಮೇಲೆ ನಂಬಿಕೆ ಇರಲಿ. ಅಪ್ಪ ಅಮ್ಮ ನಂಬಬೇಕು, ನೆಂಟರು ನಂಬಬೇಕು ಇದಾವುದಕ್ಕೂ ಅಂಜಬೇಡಿ ತಲೆ ಕೆಡಿಸಿಕೊ
ಳ್ಳಬೇಡಿ. ಸ್ಟೇ ಕೂಲ್ ನೀವು ಅಂದುಕೊಂಡಿದ್ದು ಸಾಧಿಸಬೇಕು. ಗಂಧದ ನಾಡಲ್ಲಿ ಹುಟ್ಟಿರೋದು ನಾವು ನೀವೆಲ್ಲ ಚಿನ್ನದಂಥ ಯುವಕರು.
ಈ ಚಿನ್ನದಂಥ ನಾಡಿಗೆ ಹೆಸರು ತರುವ ವಿಲ್ ಪವರ್ ನಿಮ್ಮಲಿ ಇದೆ. ಮೊದಲಿನಿಂದ ಈ ಭೂಮಿ ಹುಟ್ಟಿದಾಗಿನಿಂದ ಮರದಿಂದ ಹಣ್ಣು ಬೀಳ್ತಾನೆ ಇತ್ತು. ಇದನ್ನು ಕೋಟ್ಯಂತರ ಜನ ನೋಡಿದರು.

ಆದ್ರೆ ನ್ಯೂಟನ್ ಮಾತ್ರ ಯಾಕೆ ಬಿತ್ತು ಅಂತ ಯೋಚನೆ ಮಾಡಿದ್ರು, ಗ್ರಾವಿಟಿ ಕಂಡು ಹಿಡಿದುಬಿಟ್ರು. ಸಮಸ್ಯೆ ಮೇಲೆ ಕಾನ್ಸನ್ಟ್ರೇಶನ್
ಮಾಡೋದಲ್ಲ. ಅದು ಯಾಕೆ ಬಂತು ಅಂತ ಉತ್ತರ ಹುಡುಕಬೇಕು. ಜೀವನದಲ್ಲಿ ಎಂತಹ ಕಷ್ಟ ಬಂದರೂ ಎಲ್ಲವನ್ನು ಎದುರಿಸುವ ತಾಕತ್ತಿರಬೇಕು. ಕಷ್ಟಗಳಿಗೆ ಹೆದರಿ ಅಳುತ್ತಾ ಬದುಕುವುದಕ್ಕಿಂತ ಹೂವಿನಂತೆ ಅರಳುತ್ತಾ ಬದುಕಬೇಕು. ನಮ್ಮ ಕಂಪು ಘಮ್ಮೆಂದಾ ಗಲೆಲ್ಲ ವೈರಿಗಳ ಎದೆ ಝನ್ನಬೇಕು.