Thursday, 19th September 2024

ಎದೆ ಮೇಲೆ ಬರೆಸ್ಕೊಂಡಿದ್ದು – ದಾಸನ ಪದಗಳು

ತುಂಟರಗಾಳಿ

ಸಿನಿಗನ್ನಡ

ಭಾರತೀಯ ಚಿತ್ರರಂಗದಲ್ಲಿ ಯಾರಿಗೂ ಐ ಡೋಂಟ್ ಕೇರ್ ಅನ್ನೋದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ವ್ಯಕ್ತಿತ್ವ. ಇತ್ತೀಚಿಗೆ ಸಿನಿಮಾ ಮಾಡಿದ್ದು ಸಾಕು ಅನ್ನೋ ಥರ ತಮ್ಮ ಜೀವನವನ್ನು ಮನಸ್ಸಿಗೆ ಬಂದ ಹಾಗೆ ಎಂಜಾಯ್ ಮಾಡ್ತಾ ಇzರೆ ವರ್ಮಾ. ಬಾಯಿಗೆ ಬಂದ ಹಾಗೆ ಮಾತನಾಡೋದು, ಯಾರನ್ನು ಬೇಕಾದರೂ ಕೆಟ್ಟ ಮಾತುಗಳಲ್ಲಿ ಟೀಕೆ ಮಾಡೋದಷ್ಟೇ ಅಲ್ಲ, ಕ್ಯಾಮೆರಾ ಮುಂದೆ ಹೀರೋಯಿನ್ ಅನ್ನು ಕೂಡಿಸಿ ಆಕೆಯ ಕಾಲಿನ ಕೆಳಗೆ ಕೂತ್ಕೊಂಡು ಅವಳ ಕಾಲಿನ ಬೆರಳನ್ನು ಚೀಪೋ ಅಸಹ್ಯಗಳನ್ನೂ ಮಾಡ್ತಾರೆ ವರ್ಮಾ.

ಅವರಿಗೆ ಹೋಲಿಸಿದರೆ ನಮ್ಮ ನಟ ದರ್ಶನ್ ಎಷ್ಟೋ ವಾಸಿ. ಅಟ್‌ಲೀ ಅವರು ತಮ್ಮ ಅಭಿಮಾನಿ ಗಳಿಗಾದ್ರೂ ಕೇರ್ ಮಾಡ್ತಾರೆ. ಈಗ ದರ್ಶನ್ ತಮ್ಮ ಅಭಿಮಾನಿಗಳ ಮೇಲಿನ ಅಭಿಮಾನ ತೋರಿಸಿಕೊಳ್ಳೋಕೆ ಎದೆ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ, ಇದು ಇಡೀ ರಾಜ್ಯವೇ ಅಲ್ಲದಿದ್ರೂ ದರ್ಶನ್ ಅಭಿಮಾನಿ ಗಳಂತೂ ಖುಷಿ ಪಡೋ ವಿಷಯ. ಆದರೆ ಕೆಲವು ದಿನಗಳ ಹಿಂದೆ ತನ್ನ ಅಭಿಮಾನಿಗಳು ನನ್ನ ಹೆಸರನ್ನ ಹಚ್ಚೆ ಹಾಕಿಸಿಕೊಳ್ತಾರೆ, ಇದು ತಪ್ಪು, ಹಾಕೋದಿದ್ರೆ ಅವರ ತಂದೆ ತಾಯಿಯಂದಿರ ಹೆಸರು ಹಾಕಿಸಿಕೊಳ್ಳಬೇಕು ಅಂತ ಬುದ್ಧಿವಾದ ಹೇಳಿದ್ರು. ಈಗ ಅದು ಅವರಿಗೆ ಮರೆತು ಹೋಗಿರುವ ಕಾರಣ ತಾವೇ ಹಚ್ಚೆ ಹಾಕಿಸಿಕೊಂಡಿದ್ದಾರೆ.

ಅದೆಲ್ಲ ಸರಿ, ಆದರೆ ಇದರಿಂದ ಏನು ಬದಲಾವಣೆ ಆಗುತ್ತೆ? ಹಿರಿಯ ನಟರಿಂದ ಹಿಡಿದು ಇಂದಿನ ಪೀಳಿಗೆಯ ನಟ ತಂತ್ರಜ್ಞರು ಸಿನಿಮಾದ ವೇದಿಕೆ ಏರುವ ಮೊದಲು ಅದನ್ನು ಕೈ ಮುಟ್ಟಿ ಕಣ್ಣಿ ಗೊತ್ತಿಕೊಂಡು ನಮಸ್ಕರಿಸಿ ನಂತರ ವೇದಿಕೆ ಏರುತ್ತಾರೆ. ಆದರೆ ಅಂಥ ವೇದಿಕೆಯ ಮೇಲೆ ನಿಂತು ಮೊನ್ನೆ ಮತ್ತೆ, ಕ್ರಾಂತಿ ಸಿನಿಮಾ ಚೆನ್ನಾಗಿಲ್ಲ ಅಂದವರಿಗೆ ತಮ್ಮ ತಲೆಯ ವಿಗ್‌ನ ಕೂದಲು ಕಿತ್ತು ಹಾಕಿ, ಏಯ್ ಥೂ, ಏ ಥೂ ಅಂತ ಮೂರ್ನಾಲ್ಕು ಬಾರಿ ಉಗಿದು ವೇದಿಕೆಗೆ ಮಹಾನ್ ಮರ್ಯಾದೆ ಮಾಡಿದ ದೊಡ್ಡ ಸೆಲೆಬ್ರಿಟಿ ಇವರು .ಇವರ ಇಂಥ ಆಟಗಳಿಗೆ ಸಪೋರ್ಟ್ ಮಾಡಲು ಯಾರಾದ್ರೂ ಬೇಕಲ್ಲ ಅನ್ನೋ ಕಾರಣಕ್ಕೆ ಈಗ ಅಭಿಮಾನಿಗಳನ್ನು ಓಲೈಸಲು ಹೊರಟಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯವೇ ಬಿಡಿ.

ಲೂಸ್ ಟಾಕ್
ದರ್ಶನ್ ಅಭಿಮಾನಿ (ಕಾಲ್ಪನಿಕ ಸಂದರ್ಶನ)
ನೋಡಪ್ಪಾ ಮೊದ್ಲೇ ಹೇಳ್ತಾ ಇದ್ದೀನಿ, ‘ಇದು ಸೋಷಿಯಲ್ ಮೀಡಿಯಾ ಅಲ್ಲ, ಪೇಪರ್ ಇಂಟರ್‌ವ್ಯೂ, ಇಲ್ಲಿ ದಾಸನ ಪದಗಳು’ ಬಳಸೋ ಹಾಗಿಲ್ಲ..
-ಅವ್ನ.. ಸಾರಿ, ಅದಿಲ್ಲ ಅಂದ್ರೆ ನಮ್ಗೆ ಮಾತಾಡೋಕೆ ಬರಲ್ಲ, ಆದ್ರೂ ಟ್ರೈ ಮಾಡ್ತೀನಿ..

ಸರಿ ನಿಮ್ಮ ದರ್ಶನ್ ಎದೆ ಮೇಲೆ ‘ಅಭಿಮಾನಿಗಳ ಹೆಸರನ್ನ ಟ್ಯಾಟೂ’ ಹಾಕಿಸಿಕೊಂಡಿದ್ದಾರಲ್ಲ, ಖುಷಿನಾ?
-ಖುಷಿನೇ ಮತ್ತೆ, ನಿಮಗೆಲ್ಲ ಹೊಟ್ಟೆ ಉರಿ, ಬರೀ ನಮಗೆ ಮಾತ್ರ ‘ಹಚ್ಚೇ’ ದಿನ್ ಬಂತು ಅಂತ ಅಲ್ವಾ?

ಅದ್ಸರಿ, ದರ್ಶನ್ ಟ್ಯಾಟೂ ಹಾಕಿಸಿಕೊಂಡಿರೋದು ಏನಕ್ಕೆ?
-ಇನ್ನೇನಕ್ಕೆ, ಅವರಿಗೆ ಪಾಪ ಈಗ ಸಪೋರ್ಟ್ ಮಾಡೋಕೆ ಅಂತಿರೋದು ಬರೀ ನಾವ್ ಮಾತ್ರ, ಮೀಡಿಯಾ ಸೇರಿದಂತೆ ಬಹಳ ಜನ ಅವರಿಗೆ ಟೂ
ಬಿಟ್ಟಿದ್ದಾರೆ. ಅದಕ್ಕೆ ಅವರು ಈಗ ನಮ್ಮನ್ನ ಹೊತ್ತುಕೊಂಡು ಮೆರೆಸ್ತಾ ಇದ್ದಾರೆ.

ಈ ಟ್ಯಾಟೂ ಹಾಕಿಸಿಕೊಳ್ಳೋ ಐಡಿಯಾ ಪುನೀತ್ ರಾಜ್ ಕುಮಾರ್ ಅವರದ್ದು ಅಂತ ಒಬ್ಬ ನಿರ್ಮಾಪಕರು ತುಂಬಾ ಮುಂಚೆನೇ ಸಂದರ್ಶನ
ಒಂದರಲ್ಲಿ ಹೇಳಿದ್ರಲ್ಲ. ಅವರ ಐಡಿಯಾನ ದರ್ಶನ್ ಕದ್ದಿದ್ದಾರೆ ಅನ್ಸಲ್ವಾ?
-ಅಯ್ಯೋ, ಐಡಿಯಾ ಯಾರ್ದೇ ಆಗಿರ್ಲಿ, ಕದಿಯೋರು ನಾವಾಗಿರ್ಬೇಕು. ಥೋ, ಹೋಗತ್ಲಾಗೆ ಈ ಡೈಲಾಗ್ನೂ ಕದಿತೀರಲ್ರೋ, ಸರಿ, ಅವನ್ಯಾರೋ ಪಾಪ ಕ್ರಾಂತಿಗೆ ಪ್ರಚಾರ ಮಾಡೋಕೋಗಿ ಆಫೀಸಲ್ಲಿ ಕೆಲಸ ಕಳ್ಕೊಂಡ್ನಂತೆ -ಒಳ್ಳೇದೇ ಆಯ್ತು, ಈಗ ಅವನು ದರ್ಶನ್ ಅಭಿಮಾನಿ ಆಗೋಕೆ ೧೦೦% ಲಾಯಕ್ಕು.

ನೆಟ್ ಪಿಕ್ಸ್
ಖೇಮುಗೆ ಮೂರು ದಿನದಿಂದ ಮೋಷನ್ ಆಗ್ತಾ ಇರಲಿಲ್ಲ. ಹೊಟ್ಟೆಯಲ್ಲಿ ಏನೋ ಸಮಸ್ಯೆ ಇದೆ ಅಂತ ಗೊತ್ತಾಗಿ ಖೇಮು ತಲೆ ಕೆಡಿಸಿಕೊಂಡಿದ್ದ. ಮರುದಿನ ಪಕ್ಕದ ಇದ್ದ ಆಸ್ಪತ್ರೆಗೆ ಹೋದ. ಅಲ್ಲಿ ಡಾಕ್ಟರ್ ಅನ್ನು ಭೇಟಿ ಮಾಡಿ, ಡಾಕ್ಟ್ರೇ ಮೂರು ದಿನದಿಂದ ಮೋಷನ್ ಆಗ್ತಾ ಇಲ್ಲ ಅಂತ ಸಮಸ್ಯೆ ಹೇಳಿಕೊಂಡ. ಸರಿ ಡಾಕ್ಟರ್ ಒಂದಷ್ಟು ಮಾತ್ರೆ ಕೊಟ್ರು. ಮೂರು ದಿನ ಮಾತ್ರೆ ತೆಗೆದುಕೊಂಡ ಖೇಮು. ಏನೂ ಉಪಯೋಗ ಆಗ್ಲಿಲ್ಲ. ಮತ್ತೆ ಡಾಕ್ಟರ್ ಬಳಿ ಹೋದ. ಸರಿ ಹೋಯ್ತಾ ಸಮಸ್ಯೆ? ಅಂತ ಕೇಳಿದ್ರು ಡಾಕ್ಟರ್. ಇ ಡಾಕ್ಟ್ರೇ, ೬ ದಿನ ಆಯ್ತು ಮೋಷನ್ ಆಗಿಲ್ಲ ಅಂದ. ಸರಿ ಈ ಸಲ ಸಿರಪ್ ಬರ್ಕೊಟ್ರು ಡಾಕ್ಟರ್. ಅದನ್ನೂ ಮೂರು ದಿನ ತಗೊಂಡ ಖೇಮು. ಮತ್ತೆ ಡಾಕ್ಟರ್ ಬಳಿ ಹೋದ.

ಸರಿ ಹೋಯ್ತಾ ಸಮಸ್ಯೆ? ಅಂದ್ರು ಡಾಕ್ಟರ್ ಇ ಡಾಕ್ಟರ್ ೯ ದಿನ ಆಯ್ತು ಮೋಷನ್ ಆಗಿಲ್ಲ ಅಂದ ಖೇಮು. ಡಾಕ್ಟರ್ ಈ ಸಲ ಸ್ಟ್ರಾಂಗ್ ಮಾತ್ರೆ, ಇಂಜೆಕ್ಷನ್ ಕೊಟ್ಟು ಈ ಸಲ ಸರಿ ಹೋಗುತ್ತೆ ಅಂತ ಹೇಳಿ ಕಳಿಸಿದ್ರು. ಖೇಮು ಮತ್ತೆ ಮೂರು ದಿನ ಆದಮೇಲೆ ಡಾಕ್ಟರ್ ಹತ್ರ ಹೋದ. ಈಗ ಸಮಸ್ಯೆ ಸರಿ ಹೋಗಿರಬೇಕಲ್ವಾ? ಅಂದ್ರು ಡಾಕ್ಟರ್. ಖೇಮು ಇ ಡಾಕ್ಟರ್ ೧೨ ದಿನ ಆಯ್ತು, ಮೋಷನ್ ಆಗಿಲ್ಲ ಅಂದ. ಡಾಕ್ಟರ್‌ಗೆ ಗಾಬರಿ ಆಯ್ತು. ಇನೋ ಗಂಭೀರ ಸಮಸ್ಯೆ ಇದೆ ಅಂತ ಅನ್ನಿಸಿ, ನೀವು ಎಲ್ಲಿ ಕೆಲ್ಸ ಮಾಡೋದು? ಅಂತ ಕೇಳಿದ್ರು. ಅದಕ್ಕೆ ಖೇಮು, ಅದಾನಿ ಗ್ರೂಪ್ ಆಫ್ ಕಂಪನೀಸ್ ಅಂದ. ಅದಕ್ಕೆ ಡಾಕ್ಟ್ರು ಮೊದಲೇ ಹೇಳೋದಲ್ವಾ? ಅಂತ ಜೇಬಿಂದ ೨೦೦ ರುಪಾಯಿ ತೆಗೆದುಕೊಡ್ತಾ ಹೇಳಿದ್ರು ‘ತಗೋ ಮೊದ್ಲು ಹೊಟ್ಟೆಗೆ ಏನಾದ್ರೂ
ತಿನ್ನು, ಆಮೇಲೆ ಮೋಷನ್ ತಾನಾಗೇ ಆಗುತ್ತೆ’

ಲೈನ್ ಮ್ಯಾನ್

ವ್ಯಾಟೆಂಟೈ ದಿನ ಹಸುಗಳನ್ನ ತಬ್ಬಿಕೋಬೇಕು
-ಲವರ್ ಬಾಯ್‌ಗಳನ್ನ ಕೌಬಾಯ್ ಮಾಡಿಬಿಟ್ರ
ಕಿಚನ್ ಬಾತ್
ಕುಕ್ಕರ್‌ನಲ್ಲಿ ಚಿಕನ್ ಇಟ್ಟು ಸ್ವಲ್ಪ ಹೊತ್ತಾದ ಮೇಲೆ
ಹೆಂಡತಿ- ರೀ ಎಲ್ಲಾ ಸಲ ಕೂಗ್ತು?
ಗಂಡ- ತಗೊಂಡ್ ಬಂದ್ ಕೊಯ್ದು, ಸಾಂಬಾರ್ ಮಾಡೋಕಿಟ್ಟಿದ್ದೀಯ, ಅದೆಂಗೇ ಕೂಗುತ್ತೆ?
ಧ್ಯಾನೋಸ್ಮಿ
ಶಿವರಾತ್ರಿ ದಿನ ಹುಡುಗ್ರು ಶಿವನ ಧ್ಯಾನ ಮಾಡ್ತಾರೆ
-ವ್ಯಾಲೆಂಟೈ ದಿನ ‘ವ’ ಬಿಟ್ಟು ಬರೀ ‘ಖಏಉ’ ಧ್ಯಾನ ಮಾಡ್ತಾರೆ
ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್‌ಗೆ ಜಗ್ಗೇಶ್ ಅವರು ಬಂದ್ರೆ ಏನಾಗುತ್ತೆ?
-‘ಮಂಜ’ ಟಾಕೀಸ್ ಆಗುತ್ತೆ
ಬಿಜೆಪಿಯವರು ಚುನಾವಣೆ ಪ್ರಚಾರಕ್ಕೆ ಅಂತ ಜನರಿಗೆ ತಟ್ಟೆ, ಲೋಟ ಕೊಡ್ತಾ ಇದ್ದಾರಂತೆ
-ಈಗ ತಟ್ಟೆ, ಲೋಟ.. ಆಮೇಲೆ ಚೊಂಬು.

ದರ್ಶನ್ ಎದೆ ಮೇಲೆ ಬರೆಸಿಕೊಂಡಿರೋದು ಏನು?
-ದಾಸ ಸಾಹಿತ್ಯ
ಬೇಂದ್ರೆ ಉದ್ಯಾನವನದ ಬೋರ್ಡಲ್ಲಿ ಬೇಂದ್ರೆ ಬಿಟ್ಟು ಆರ್. ಅಶೋಕ್ ಫೊಟೋ ಹಾಕಿದ್ದಾರೆ

-ಏನ್ ಮೈಸೂರ್ ಪಾಕ್‌ನಲ್ಲಿ ಮೈಸೂರು ಇರುತ್ತಾ, ಇಲ್ಲೇ ಪಾಕಿಸ್ತಾನ ಇರುತ್ತಾ, ಹೋಗ್ಲಿ ಬಿಡ್ರೀ

ಗಂಡ ಹೆಂಡ್ತಿ ಮ್ಯಾಟ್ರು 
-ಅಲ್ಲ ಕಣೇ, ಊಟಕ್ಕೆ ಉಪ್ಪಿನಕಾಯಿನೇ ಹಾಕಲ್ವಲ್ಲ ನೀನು, ಅದನ್ನ ಹಂಗೇ ಇಟ್ಕೊಂಡು ಏನ್ ಮಾಡ್ತಿಯಾ.. ಏನ್ ಉಪ್ಪಿನಕಾಯಿ ಹಾಕ್ಕೊಂಡ್ ನೆಕ್ತೀಯಾ

ಮೂಗು ಔಟ್ ಆಫ್ ಆರ್ಡರ್ ಆಗಿದ್ರೆ ಅದು
-‘ನಾಕ್’ ಔಟ್
ಮೂಗು ಕಟ್ಟಿಕೊಂಡ್ರೆ ಅದು
-ನಾಕಾ ಬಂದಿ
ನೀವು ಸರಿಯಾಗಿ ಯೋಚನೆ ಮಾಡ್ತಾ ಇಲ್ಲ ಅನ್ನೋದನ್ನು ಕಣ್ಣು, ಮೂಗು ಪದಗಳನ್ನ ಬಳಸಿ ಹೇಳುವಾಗ ಆಗುವ ವ್ಯತ್ಯಾಸ

-ನೀವು ವಕ್ರದೃಷ್ಠಿ ಬೀರ್ತಾ ಇದ್ದೀರಿ.

-ನೀವು ನಿಮ್ಮ ಮೂಗಿನ ನೇರಕ್ಕೆ ಮಾತಾಡ್ತಾ ಇದ್ದೀರಿ.
ಜನ ಸಂದಣಿಯಲ್ಲಿ ಸಮಯ ನೋಡಿ ಕಾದು ಹೊಂಚು ಹಾಕಿ ಜನರ ಪರ್ಸ್,
ಮೊಬೈಲ್ ಎತ್ತೋನು
-‘ವೆಯ್ಟ್’ ‘ಲಿಫ್ಟರ್’