Saturday, 14th December 2024

ಇದು ರಿಷಿ ವಿರಚಿತ ಆತ್ಮನಿರ್ಭರ ಭಾರತೀಯ ದಿನದರ್ಶಿಕೆ !

ತಿಳಿರುತೋರಣ

srivathsajoshi@yahoo.com

ಅಗ್ನಿಷ್ಟೋಮ ಎಂಬ ಹೆಸರು ಕೇಳಿದ್ದೀರಾ? ಅದು ವೇದೋಕ್ತ ಮಹಾಯಾಗಗಳ ಅನೇಕ ಪ್ರಕಾರಗಳಂದು. ಅಶ್ವಮೇಧ, ರಾಜಸೂಯ, ವಾಜಪೇಯ,
ಪುತ್ರಕಾಮೇಷ್ಟಿ ಅಂತೆಲ್ಲ ಪುರಾಣೇತಿಹಾಸಗಳಲ್ಲಿ ಉಲ್ಲೇಖವಾಗುವ ಯಜ್ಞಯಾಗಗಳ ರೀತಿಯದು. ಅಗ್ನಿಯನ್ನೇ ಪ್ರಧಾನವಾಗಿ ಅರ್ಚಿಸುವುದು. ಯಜ್ಞ ಪ್ರಕಾರಗಳಿಗೆಲ್ಲ ಪ್ರಥಮವೂ ಅತ್ಯಂತ ಸರಳವೂ ಅಷ್ಟೇ ಪುಣ್ಯಪ್ರದವೂ ಎನ್ನಲಾಗಿರುವುದು.

ಆದರೆ ಈಗಿನ ಕಾಲದಲ್ಲಿ, ಅದೂ ಜನಸಾಮಾನ್ಯರಿಗೆ, ಅಗ್ನಿಷ್ಟೋಮ ಯಾಗ ಮಾಡದೆಯೇ ಅಷ್ಟು ಪುಣ್ಯದ ಗಳಿಕೆ ಸಾಧ್ಯವಿದೆಯೇ? ಉತ್ತರ ಹೌದು ಎಂದು ಹೇಳಿದರೆ ನಿಮಗೆ ಆಶ್ಚರ್ಯವಾದೀತು! ಈ ಕೆಳಗಿನ ಸೋತ್ರವೊಂದು ಅಂತಹ ರಹಸ್ಯವನ್ನು ಬಿಚ್ಚಿಡುತ್ತದೆ: ತಿಥೇಶ್ಚ ಶ್ರೀಯಮಾಪ್ರೋತಿ ವಾರಾದಾಯುಷ್ಯವರ್ಧನಮ| ನಕ್ಷತ್ರಾ ದ್ಧರತೇ ಪಾಪಂ ಯೋಗಾದ್ರೋಗ ನಿವಾರಣಮ|| ಕರಣಾತ್ ಕಾರ್ಯ ಸಿದ್ಧಿಃ ಸ್ಯಾತ್ ಪಂಚಾಂಗ ಫಲಮುತ್ತ ಮಮ|| ಪಂಚಾಂಗಂ ಪಠಿತುಂ ನಿತ್ಯಂ ಶ್ರೋತುಮಿಚ್ಛಂತಿ ಯೇ ನರಾಃ| ಅಗ್ನಿಷ್ಟೋಮ -ಲಂ ತೇಷಾಂ ಗಂಗಾಸ್ನಾನಂ ದಿನೇದಿನೇ||’ ಕನ್ನಡದಲ್ಲಿ ಹೇಳುವುದಾದರೆ- ತಿಥಿ, ವಾರ, ನಕ್ಷತ್ರ, ಯೋಗ, ಮತ್ತು ಕರಣಗಳೆಂಬ ಪಂಚಾಂಗವನ್ನು ಪಠಿಸುವುದರಿಂದ ಅನು ಕ್ರಮವಾಗಿ ಸಂಪತ್ತು, ಆಯುಷ್ಯವೃದ್ಧಿ, ಪಾಪಹಾನಿ, ರೋಗ ನಿವಾರಣೆ ಮತ್ತು ಕಾರ್ಯಸಿದ್ಧಿಗಳು ಉಂಟಾಗುತ್ತವೆ. ಪ್ರತಿದಿನವೂ ಪಂಚಾಂಗವನ್ನು ಪಠಿಸಿದರೆ ಅಥವಾ ಶ್ರವಣ ಮಾಡಿದರೂ ಸಾಕು, ಅಗ್ನಿಷ್ಟೋಮ ಯಾಗ ಮತ್ತು ಗಂಗಾಸ್ನಾನ ಮಾಡಿದಷ್ಟೇ ಪುಣ್ಯಫಲ ಸಿಗುತ್ತದೆ!

ಪಂಚಾಂಗ ಪಠನ ಮಾಡುವುದು, ಅದರಲ್ಲೂ ಪ್ರತಿದಿನವೂ ಮಾಡುವುದು ಶ್ರೀಸಾಮಾನ್ಯನಿಂದ ಆಗುವಂಥ ವಿಚಾರವೇ? ಜ್ಯೋತಿಷಿಗಳು, ಪುರೋ ಹಿತರು, ಅರ್ಚಕರು ಮುಂತಾದವರಷ್ಟೇ ಪಂಚಾಂಗವನ್ನು ಪಠಿಸುವಂಥದ್ದು, ನಾವೇನಿದ್ದರೂ ಅದನ್ನು ಯುಗಾದಿಗೆ ಮುನ್ನ ಸಂಪ್ರದಾಯದಂತೆ ಕೊಂಡುತಂದು ತೂತು ಮಾಡಿ ಹಗ್ಗ ಕಟ್ಟಿ ಗೋಡೆಗೆ ನೇತುಹಾಕಿದೆವೆಂದರೆ ಮುಂದಿನ ವರ್ಷದ್ದು ಬರುವವರೆಗೆ ಹಾಗೆಯೇ ಧೂಳು ತಿಂದುಕೊಂಡು ಇರುವಂಥದ್ದು… ಇದು ರೂಢಿ. ಕ್ಯಾಲೆಂಡರ್‌ಗಾದರೂ ತಿಂಗಳಿಗೊಮ್ಮೆ ಪುಟ ತಿರುಗಿಸುವಾಗ ಅಥವಾ ಹಾಲಿನ ಲೆಕ್ಕ, ಫೀಸ್ ಕಟ್ಟಲಿಕ್ಕೆ ಗಡುವು, ಮದುವೆ-ಮುಂಜಿ-ಗೃಹಪ್ರವೇಶಾದಿ ಖಾಸಗಿ ಸಮಾರಂಭಗಳಿಗೆ ಹೋಗಲಿಕ್ಕಿರುವುದು ಮುಂತಾದುವನ್ನು ಗುರುತು ಹಾಕಿಡುವಾಗ ನಮ್ಮ ಸ್ಪರ್ಶಭಾಗ್ಯ.

ಪಂಚಾಂಗಕ್ಕೆ ಅದೂ ಇಲ್ಲ. ಈಗೀಗ ಪಂಚಾಂಗ ಪಿಡಿಎಫ್ ಗಳು- ಒಂಟಿಕೊಪ್ಪಲ, ಉತ್ತರಾದಿಮಠ, ದಾತೆ, ಉಡುಪಿ ಶಾಸಸಿದ್ಧ ಶ್ರೀಕೃಷ್ಣ… ಎಲ್ಲ
ವೆರೈಟಿಯವೂ- ವಾಟ್ಸ್‌ಆಪ್‌ನಲ್ಲಿ ಹರಿದಾಡುತ್ತವೆ, ಆದರೆ ಅವು ಗಳನ್ನು ಫಾರ್ವರ್ಡ್ ಮಾಡಿದವರೂ ಪಠಿಸುವುದು ಬಿಡಿ, ತೆರೆದೂ ನೋಡಿರುವುದಿಲ್ಲ. ಪಂಚಾಂಗದಲ್ಲಿ ಇನ್ನೊಂದು ಕಷ್ಟವೆಂದರೆ ಪುಟತುಂಬ ಕೋಷ್ಟಕಗಳು ಅತಿಚಿಕ್ಕ ಫಾಂಟುಗಳಲ್ಲಿ ಮುದ್ರಿತವಾದ ಅಂಕಿಸಂಖ್ಯೆಗಳ ಗೊಂಡಾರಣ್ಯವು ಶ್ರೀಸಾಮಾನ್ಯನಿಗೆ ತತ್‌ಕ್ಷಣವೇ ತಲೆಸುತ್ತು ಬರುವಂತೆ ಮಾಡುತ್ತವೆ.

ಅದು ಪಂಚಾಂಗದ ತಪ್ಪಲ್ಲ ನಾವದರ ಪಠನದಲ್ಲಿ ಪ್ರಬುದ್ಧರಾಗಿಲ್ಲ ಅಷ್ಟೇ. ಅಂದರೆ ನಮ್ಮಲ್ಲಿ ತೊಂಬತ್ತೊಂಬತ್ತು ಪ್ರತಿಶತ ಮಂದಿ ನಮ್ಮ ಬಳಿ ಪಂಚಾಂಗ ಇದ್ದರೂ ಅಗ್ನಿಷ್ಟೋಮ ಯಜ್ಞಸಮಾನ ಪುಣ್ಯಫಲದಿಂದ ನಮ್ಮನ್ನು ನಾವೇ ವಂಚಿಸಿಕೊಂಡಿದ್ದೇವೆ! ಈಗ ಇದಕ್ಕೊಂದು ಅತ್ಯುತ್ತಮ ರೀತಿಯ ಪರಿಹಾರೋಪಾಯ ಸಿಕ್ಕಿದೆ ‘ಭಾರತೀಯ ಪಂಚಾಂಗ ಕ್ಯಾಲೆಂಡರ್’ ರೂಪದಲ್ಲಿ. ಇದರ ಪರಿಕಲ್ಪನೆ ಮತ್ತು ನಿರ್ಮಾಣ ನನ್ನೊಬ್ಬ ಸನ್ಮಿತ್ರ ಉಡುಪಿ ನಿವಾಸಿ ಕೇಶವ ಮೆಹೆಂದಳೆ ಅವರದು. ಪಕ್ಕಾ ಎಂಜಿನಿಯರ್ ತಲೆಯೊಂದು ಜ್ಯೋತಿಷ್ಯ ಮತ್ತು ಸಂಸ್ಕೃತದ ಮಟ್ಟುಗಳನ್ನು ಚೆನ್ನಾಗಿ ಕರಗತ
ಮಾಡಿಕೊಂಡು, ಎಷ್ಟು ಕಾಲ ನಾವು ಇಂಗ್ಲಿಷ್ ಪದ್ಧತಿಯ ಗ್ರೆಗೋರಿಯನ್ ಕ್ಯಾಲೆಂಡರ್‌ಗೆ ಜೋತುಕೊಳ್ಳಬೇಕು ಅದೇ ಫಾರ್ಮ್ಯಾಟ್ ನಲ್ಲಿ ನಮ್ಮ ಭಾರತೀಯ ಕಾಲಗಣನಾ ಕ್ರಮವನ್ನು ಅಳವಡಿಸಿಕೊಳ್ಳುವುದು ಏಕೆ ಸಾಧ್ಯವಿಲ್ಲ ಎಂಬ ಸವಾಲಿನ ಕೆಚ್ಚನ್ನೂ ಹದವಾಗಿ ಬೆರೆಸಿ ರೂಪಿಸಿರುವ ದಿನದರ್ಶಿಕೆ ಇದು.

ಮೇಲ್ನೋಟಕ್ಕೆ ಕ್ಯಾಲೆಂಡರೂ ಹೌದು, ಅದಕ್ಕಿಂತಲೂ ಗಾಢವಾಗಿ ಪಂಚಾಂಗವೂ ಹೌದು. ಟೂ-ಇನ್-ವನ್ ಎಂಬುದಕ್ಕೆ ಆದರ್ಶ ನಿದರ್ಶನ. ಕೇಶವ
ಮೆಹೆಂದಳೆ ೨೦೨೩ರ ಕ್ಯಾಲೆಂಡರ್ ಅನ್ನೂ ಇದೇ ರೀತಿ ರಚಿಸಿದ್ದರಂತೆ. ನನಗೆ ಆ ವಿಚಾರ ಗೊತ್ತಿರಲಿಲ್ಲ. ಒಳ್ಳೆಯ ಸ್ಪಂದನ ಸಿಕ್ಕಿದ ಹುರುಪಿನಿಂದ ೨೦೨೪ರ ಕ್ಯಾಲೆಂಡರ್ ಅನ್ನು ಮತ್ತಷ್ಟು ಸುಧಾರಣೆ ಗಳೊಂದಿಗೆ ಸಮೃದ್ಧವನ್ನಾಗಿಸಿ ತಯಾರು ಮಾಡಿದ್ದಾರೆ.

ಕಳೆದ ತಿಂಗಳು ಮೈಸೂರಿನಿಂದ ಇಲ್ಲಿಗೆ ಬರುವವರಿದ್ದ ಸ್ನೇಹಿತರೊಬ್ಬರ ಸಂಗಡ ಹೊಸ ಕ್ಯಾಲೆಂಡರ್ ಜತೆಯ ಹೋಲಿಕೆಗಾಗಿ ೨೦೨೩ ರದೂ ಒಂದು ಪ್ರತಿ ಕಳುಹಿಸಿರುವ ಮೆಹೆಂದಳೆಯವರು ಹೇಗಿದೆ ತಿಳಿಸಿ ಎಂದು ನನ್ನನ್ನು ಕೇಳಿzರೆ. ನನ್ನ ಅಭಿಪ್ರಾಯ ಎರಡೇ ವಾಕ್ಯಗಳಲ್ಲಿ. ಒಂದು: ಕಳೆದ ೨೫-೩೦ ವರ್ಷಗಳಿಂದಲೂ ‘ಕಾಲ ನಿರ್ಣಯ’ ಕ್ಯಾಲೆಂಡರ್‌ನ ಅತಿನಿಷ್ಠ ಗಿರಾಕಿಯಾಗಿದ್ದ ನಾನು ಈ ಸಲ ಅದಕ್ಕೆ ತಿಲಾಂಜಲಿಯಿತ್ತು ಈ ಭಾರತೀಯ ಪಂಚಾಂಗ
ಕ್ಯಾಲೆಂಡರ್ ಅನ್ನು ಒಪ್ಪಿ-ಅಪ್ಪಿಕೊಂಡಿದ್ದೇನೆ; ಎರಡು: ನಾನು ಮಾತ್ರ ಇದರ ಫಲಾನುಭವಿಯಾದರೆ ಸಾಲದು, ನಿಮಗೆಲ್ಲರಿಗೂ ಅಗ್ನಿಷ್ಟೋಮ ಯಜ್ಞಸಮಾನ ಪುಣ್ಯ ಸಿಗಬೇಕಾದ್ದರಿಂದ ನೀವೂ ಒಮ್ಮೆ ಇದರ ರುಚಿ ನೋಡಿರೆಂದು ಶಿಫಾರಸು ಮಾಡುತ್ತಿದ್ದೇನೆ.

ಕೇಶವ ಮೆಹೆಂದಳೆ ಮೂಲತಃ ನಮ್ಮೂರಿನವರು. ನನಗಿಂತ ನಾಲ್ಕು ವರ್ಷ ಹಿರಿಯರು. ಕಾರ್ಕಳದಲ್ಲಿ ನಾನು ಭುವನೆಂದ್ರ ಹೈಸೂಲ್‌ನಲ್ಲಿ ೮ನೆಯ ತರಗತಿ, ಮತ್ತು ಕೇಶವ ಮೆಹೆಂದಳೆ ಭುವನೇಂದ್ರ ಕಾಲೇಜಿನಲ್ಲಿ ಸೆಕೆಂಡ್ ಪಿಯುಸಿ ಓದಲಿಕ್ಕೆ ಒಟ್ಟಿಗೆ ಒಂದೇ ವಸತಿ ವ್ಯವಸ್ಥೆಯಲ್ಲಿ, ಒಂದೇ ಕೊಠಡಿಯಲ್ಲಿದ್ದವರು. ಇಲ್ಲಿ ಇನ್ನೊಂದು ಸ್ವಾರಸ್ಯವನ್ನೂ ನಿಮಗೆ ತಿಳಿಸಬೇಕು. ಏನೆಂದರೆ ಶಾಲೆಯ ದಾಖಲಾತಿಗಳಲ್ಲಿ ಮತ್ತು ಸರ್ಟಿಫಿಕೇಟ್‌ಗಳಲ್ಲಿ ಮಾತ್ರ ಅವರು ಕೇಶವ. ಬಾಲ್ಯದಲ್ಲಿ ನಾಮಕರಣ ಆದದ್ದು ‘ಹೃಷೀಕೇಶ’ ಅಂತ. ಮನೆಯವರು, ನಾವೆಲ್ಲ ಊರಿನವರು ಕರೆಯುತ್ತಿದ್ದದ್ದು ‘ರಿಷಿ’ ಎಂದು. ಮರದ ಕೆಳಗೆ ಕುಳಿತವನು ಯಾರು? ಆತ ‘ಋಷಿ’ ಎಂದು ಒಂದನೆಯ ತರಗತಿ ಪಾಠಪುಸ್ತಕದ ಸಾಲನ್ನು ಬಳಸಿ ತಮಾಷೆ ಬೇರೆ. ಆ ಸಲಿಗೆಯಿಂದಲೇ ನಾನಿಂದು ತಲೆಬರಹದಲ್ಲಷ್ಟೇ ‘ರಿಷಿ’ ಬಳಸಿದ್ದೇನೆ. ಉಳಿದಂತೆ ಲೇಖನವಿಡೀ ಕೇಶವ ಮೆಹೆಂದಳೆಯಾಗಿಯೇ ಕಾಣಿಸಲಿದ್ದಾರೆ.

ಸರಿ, ಕಾರ್ಕಳದಲ್ಲಿ ಶಿಕ್ಷಣದ ಬಳಿಕ ಅವರು ಮಂಡ್ಯ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಲಿಕ್ಕೆ ಹೋದರು. ಪದವಿ ಗಳಿಸಿದ ಮೇಲೆ ಮುಂಬಯಿಯಲ್ಲಿ ಪ್ರೈವೇಟ್ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದರು. ಸಂಸಾರಸ್ಥರಾದರು. ಬಳಿಕ ದುಬೈಗೆ ಹೋಗಿ ಅಲ್ಲಿ ಕನ್‌ಸ್ಟ್ರಕ್ಷನ್ ಪ್ರಾಜೆPಕ್ಟ್
ಮ್ಯಾನೇಜರರಾದರು. ಅಂತೆಲ್ಲ ನನಗೆ ಊರಲ್ಲಿ ಸಮಾಚಾರ ಕೇಳಿಯಷ್ಟೇ ಗೊತ್ತಿತ್ತು. ಸಂಪರ್ಕ ಇರಲಿಲ್ಲ. ಮುಖತಃ ಭೇಟಿಯಂತೂ ಇಲ್ಲವೇ ಇಲ್ಲ. ಕೆಲ ವರ್ಷಗಳ ಹಿಂದೊಮ್ಮೆ ನಾನು ಊರಿಗೆ ಭೇಟಿ ಕೊಟ್ಟಿದ್ದಾಗ, ನಮ್ಮೂರ ದೇವಸ್ಥಾನದ ಲಕ್ಷದೀಪೋತ್ಸವದಲ್ಲಿ ಕೇಶವ ಮೆಹೆಂದಳೆ ಸಿಕ್ಕಿದ್ದರು. ಆಗಲೂ ದುಬೈಯ ವೃತ್ತಿಯಲ್ಲಿದ್ದವರು ರಜೆಯಲ್ಲಿ ಊರಿಗೆ ಬಂದಿದ್ದರು. ವಾಚಾಳಿ ಸ್ವಭಾವ ಅವರದೂ ಅಲ್ಲ ನನ್ನದೂ ಅಲ್ಲ. ಆದ್ದರಿಂದ ನಮ್ಮ ಮಾತುಕತೆ ನಮಸ್ಕಾರ ಹೇಗಿದ್ದೀರಿ ಎಂದಷ್ಟೇ ಇತ್ತೇನೊ.

ಆಮೇಲೆ ಮೂರು ವರ್ಷಗಳ ಹಿಂದೆ ‘ಕಣ್ಮರೆಯಾಗುತ್ತಿದೆ ಕುಕ್ಕರಗಾಲಿನಲ್ಲಿ ಕೂರುವಿಕೆ’ ತಿಳಿರುತೋರಣ ಅಂಕಣಬರಹ ಅದು ಹೇಗೋ ಅವರ ಕಣ್ಣಿಗೆ  ಬಿದ್ದು ಅವರಿಗೆ ತುಂಬ ಇಷ್ಟವಾಗಿ ನನ್ನನ್ನು ಸಂಪರ್ಕಿಸಿದ್ದರು. ಅದರ ಇಂಗ್ಲಿಷ್ ರೂಪಾಂತರವನ್ನು ಟೋಟ್‌ಸ್ಮಾಸ್ಟರ್ಸ್ ಕ್ಲಬ್‌ನಲ್ಲಿ ಮಾತುಗಾರಿಕೆಗೆ
ಬಳಸುವವನಿದ್ದೇನೆ ಎಂದು ಒಂದು ಚಿಕ್ಕ ವಿಡಿಯೊ ಮಾಡಿ ಕಳುಹಿಸಿದ್ದರು. ಆಗಲೂ ಅವರು ದುಬೈವಾಸಿಯೇ ಆಗಿದ್ದರು. ನನ್ನ ಮನದಲ್ಲಿ ಒಬ್ಬ ಮೆಕ್ಯಾನಿಕಲ್ ಎಂಜಿನಿಯರ್/ ಪ್ರಾಜೆಕ್ಟ್ ಮ್ಯಾನೇಜರ್ ಚಿತ್ರವಾಗಿಯೇ ಇದ್ದರು.

ಅಂತಹ ಕೇಶವ ಮೆಹೆಂದಳೆ ಏಕಾಏಕಿಯಾಗಿ ಪಂಚಾಂಗ ಕ್ಷೇತ್ರ ವನ್ನು ಹೇಗೆ ಪ್ರವೇಶಿಸಿದರು ಮತ್ತು ಇಷ್ಟೊಂದು ಅಚ್ಚುಕಟ್ಟಾದ ದಿನದರ್ಶಿಕೆಯನ್ನು ಹೇಗೆ ತಯಾರಿಸಿದರು ಎಂದು ನನಗೆ ಸೋಜಿಗ! ಇದು ಹೇಗೆ ಸಾಧ್ಯವಾಯಿತು ಎಂದು ಮೊನ್ನೆ ಒಂದು ದಿನ ವಾಟ್ಸ್ಯಾಪ್ ಕರೆ ಮಾಡಿ ಅವರಿಂದಲೇ ತಿಳಿದುಕೊಂಡೆ. ಅದನ್ನೇ ಇಲ್ಲಿ ಉತ್ತಮ ಪುರುಷ ಏಕವಚನ ಶೈಲಿಯಲ್ಲಿ ಅವರದೇ ಮಾತುಗಳೆಂಬಂತೆ ದಾಖಲಿಸಿದ್ದೇನೆ, ನಿಮ್ಮ ಓದಿಗೆ: ಕೋವಿಡ್ ಸಮಯದಲ್ಲಿ ದುಬೈಯಲ್ಲಿ ನಮ್ಮ ಕಂಪನಿಯವರು ಸಂಬಳವಿಲ್ಲದ ದೀರ್ಘಕಾಲದ ರಜೆ ಹೇರಿದ್ದರಿಂದ ನಾನು ವಂದೇ ಭಾರತ್ ಯೋಜನೆಯ ವಿಮಾನದಲ್ಲಿ ತಾಯ್ನಾಡಿಗೆ ಮರಳಿದೆನು.

ಇಬ್ಬರು ಹೆಣ್ಮಕ್ಕಳ ಶಿಕ್ಷಣಕ್ಕಾಗಿ ನನ್ನ ಸಂಸಾರ ಅದಾಗಲೇ ಉಡುಪಿ ಯಲ್ಲಿತ್ತು. ಲಾಕ್‌ಡೌನ್ ಯಾವಾಗ ಮುಗಿಯುತ್ತದೋ ಕಂಪನಿಯಿಂದ ಯಾವಾಗ ಕರೆ ಬರುತ್ತದೋ ಗೊತ್ತಿಲ್ಲ ಎಂಬ ಪರಿಸ್ಥಿತಿ. ಹೇಗೂ ಕೆಲಸ ಇಲ್ಲ. ನೆಚ್ಚಿನ ಹವ್ಯಾಸಗಳನ್ನಾದರೂ ಪುಷ್ಟೀಕರಿಸೋಣವೆಂದು ಸಂಸ್ಕೃತಭಾರತಿಯ ಆನ್‌ಲೈನ್ ತರಗತಿಗಳಿಗೆ ಸೇರಿದೆ. ಅದೇ ಹೊತ್ತಿನಲ್ಲಿ ಉಡುಪಿಯ ಸಂಸ್ಕೃತ ಕಾಲೇಜಿನವರು ಜ್ಯೋತಿಷ್ಯ ಆನ್‌ಲೈನ್ ತರಬೇತಿ ಆರಂಭಿಸಿದರು. ಅದಕ್ಕೂ ಸೇರಿಕೊಂಡೆ. ಆ ತರಗತಿಯಲ್ಲಿ ಪಂಚಾಂಗ ಮತ್ತು ಕಾಲಗಣನೆಯ ಕೆಲವು ಪ್ರಾಥಮಿಕ ಅಂಶಗಳನ್ನು ಕಲಿಸಿದರು. ಜ್ಯೋತಿಷ್ಯಶಾಸ್ತ್ರವು ಕಬ್ಬಿಣದ ಕಡಲೆಯೇನಲ್ಲ, ಗಮನವಿಟ್ಟು ಕಲಿತರೆ ಸುಲಭವೇ ಇದೆ ಎಂದು ನನಗೆ ಮನವರಿಕೆಯಾಯಿತು.

ಸಾಮಾನ್ಯವಾಗಿ ಯಾವುದೇ ಹಬ್ಬ, ಪೂಜೆ, ಏಕಾದಶಿ, ಗ್ರಹಣ ಇತ್ಯಾದಿಯಲ್ಲಿ ಆಚರಣೆಗೆ ನಿಖರ ಸಮಯ ನಿರ್ಧರಿಸುವಲ್ಲಿ ಎಲ್ಲರಲ್ಲೂ ಗೊಂದಲ ವಿರುತ್ತದೆ. ಪಂಚಾಂಗದ ವಿಚಾರವನ್ನು ನಾವೇ ತಿಳಿದು ಕೊಂಡರೆ, ಪ್ರತಿನಿತ್ಯವೂ ಆ ದಿನದ ಪಂಚಾಂಗ ಪಠಿಸುವ ಅಭ್ಯಾಸ ಮಾಡಿಕೊಂಡರೆ ಗೊಂದಲಗಳನ್ನೆಲ್ಲ ನಾವೇ ಪರಿಹರಿಸಿಕೊಳ್ಳಬಹುದು ಎಂದು ಅರಿವಾಯಿತು. ಮುಖ್ಯವಾಗಿ ಪಂಚಾಂಗ ಪಠನದ ಪಾಮುಖ್ಯ ಸಾರುವ ‘ತಿಥೇಶ್ಚ ಶ್ರೀಯಮಾಪ್ನೋತಿ…’ ಶ್ಲೋಕ ನನ್ನನ್ನು ಬಹಳವಾಗಿ ಆಕರ್ಷಿಸಿತು.

ಇದು ಸನಾತನ ಸಂಸ್ಕೃತಿಯಲ್ಲಿ ನಮ್ಮ ನಂಬಿಕೆಯನ್ನು ದೃಢಪಡಿಸುವ ಸದ್ವಿಚಾರ. ಪಂಚಾಂಗಪಠನ ಮತ್ತು -ಲ ಪ್ರತಿಯೊಬ್ಬರ ಸ್ವತ್ತಾಗಬೇಕು.
ಅದಕ್ಕೋಸ್ಕರ ನಾನು ಏನನ್ನಾದರೂ ಮಾಡಬೇಕು ಎಂದು ಆವತ್ತು ನಿರ್ಧರಿಸಿದೆ.’ ಇದುವರೆಗೆ ನಾವು ಬಳಸುವ ಕ್ಯಾಲೆಂಡರ್‌ಗಳಲ್ಲಿ ದಿನಾಂಕ ವೊಂದೇ ದೊಡ್ಡ -ಂಟುಗಳಲ್ಲಿ ಎದ್ದುಕಾಣುವಂತೆ ಇರುತ್ತದೆ. ತಿಥಿ ಮತ್ತು ನಕ್ಷತ್ರದ ಉಖವಿದ್ದರೂ ಚಿಕ್ಕ ಅಕ್ಷರಗಳಲ್ಲಿ, ಕೆಲವೊಮ್ಮೆ ಸಂಕೇತಗಳಲ್ಲಷ್ಟೇ ಇರುತ್ತದೆ. ತಿಥಿಯ ಸಮಯ ನಿರ್ಧಾರಕ್ಕೆ ೨೪ರ ಬದಲಿಗೆ ೩೦ ಗಂಟೆಗಳ ಆವರ್ತನ ಬಳಸುವುದೂ ಜನಸಾಮಾನ್ಯರಿಗೆ ಗೊಂದಲ ಮೂಡಿಸುತ್ತದೆ. ಇನ್ನೂ ಒಂದು ವಿಚಾರ ಆಗಲೇ ನನಗೆ ಹೊಳೆದzಂದರೆ ಪ್ರಧಾನಿ ಮೋದಿಯವರ ಕರೆಯಂತೆ ಆಗ ರಾಷ್ಟ್ರದಲ್ಲ ಆತ್ಮನಿರ್ಭರತೆಯ ಸಂಚಲನ ಇತ್ತು.

ನಮ್ಮ ಕ್ಯಾಲೆಂಡರ್‌ಗಳೆಲ್ಲ ಇಲ್ಲಿಯತನಕ ಗ್ರೆಗೋರಿಯನ್ ಪದ್ಧತಿಯವೇ ಆಗಿವೆ. ಅವುಗಳಲ್ಲಿ ಭಾರತೀಯತೆ ಇಲ್ಲವೇ ಇಲ್ಲ ಎಂಬಷ್ಟು ನಗಣ್ಯ. ನಮ್ಮ ಕ್ಯಾಲೆಂಡರ್‌ಗಳನ್ನೂ ಭಾರತೀಯವಾಗಿಸುವತ್ತ ಏಕೆ ನಾವು ಹೆಜ್ಜೆಯಿಡಬಾರದು? ಆತ್ಮನಿರ್ಭರ ಭಾರತಕ್ಕೆ ಆತ್ಮನಿರ್ಭರ ದಿನದರ್ಶಿಕೆಯೊಂದನ್ನು ರೂಪಿಸಬೇಕೆಂದು ನಾನು ಪಣ ತೊಟ್ಟೆ. ಅದು ರಾತ್ರಿ ಕಳೆವುದರೊಳಗೆ ಆಗಬಲ್ಲ ಬದಲಾವಣೆ ಅಲ್ಲವೆಂದು ಗೊತ್ತು. ಆದರೂ ಆರಂಭದ ಹೆಜ್ಜೆಯಿಡಲು ಧೈರ್ಯ ತಂದು ಕೊಂಡೆ. ನನ್ನ ಕ್ಯಾಲೆಂಡರ್ ಜನವರಿ ೧ರಿಂದ ಆರಂಭವಾಗಬೇಕೇ, ಚೈತ್ರ ಮಾಸದ ಪಾಡ್ಯದಿಂದ ಆರಂಭವಾಗಬೇಕೇ, ಮಾರ್ಚ್ ೨೧ರ
ಆಸುಪಾಸು ಆರಂಭವಾಗುವ ರಾಷ್ಟ್ರೀಯ ಕ್ಯಾಲೆಂಡರ್‌ನಂತಿರಬೇಕೇ ಎಂದು ಯೋಚನೇಡಾದೆ. ಸಂವತ್ಸರ ರೀತ್ಯಾ ಮಾಡುವು ದಿದ್ದರೆ ಚಾಂದ್ರಮಾನವೇ ಸೌರಮಾನವೇ ಎಂಬ ಪ್ರಶ್ನೆ.

ಚಾಂದ್ರ ಮಾನವನ್ನೇ ಆಯ್ದುಕೊಂಡರೂ ಅಮಾವಾಸ್ಯೆಯಿಂದ ಅಮಾವಾಸ್ಯೆಗೆ ತಿಂಗಳ ಲೆಕ್ಕವೇ ಅಥವಾ ಉತ್ತರ ಭಾರತದವರಂತೆ ಹುಣ್ಣಿಮೆಯಿಂದ ಹುಣ್ಣಿಮೆಗೆ ತಿಂಗಳ ಲೆಕ್ಕವೇ ಎಂಬ ಜಿಜ್ಞಾಸೆ. ಕೊನೆಗೆ ವರ್ಷ ಚಕ್ರ ಯಾವುದಾದರೇನಂತೆ, ನನ್ನ ಉದ್ದೇಶವಿರುವುದು ಪ್ರತಿದಿನದ ಪಂಚಾಂಗ (ತಿಥಿ, ವಾರ, ನಕ್ಷತ್ರ, ಯೋಗ, ಕರಣ) ವಿವರ ಪ್ರತಿ ದಿನವೂ ಅತ್ಯಂತ ಸ್ಪಷ್ಟವಾಗಿ ಶ್ರೀಸಾಮಾನ್ಯನಿಗೆ ಅರ್ಥವಾಗುವಂತೆ ಸರಳವಾಗಿ ಸಿಗಬೇಕು. ಅದನ್ನು ಈಗ
ಚಾಲ್ತಿಯಲ್ಲಿರುವ ಜನವರಿ-ಡಿಸೆಂಬರ್ ಕ್ಯಾಲೆಂಡರ್‌ನಲ್ಲಿ ಅಳವಡಿಸಿದರೇನೇ ಜನರಿಗೂ ಸುಲಭ ಎಂದು ನಿರ್ಧರಿಸಿದೆ.’

ಯೋಜನೆಯೇನೋ ಸಿದ್ಧವಾಯ್ತು. ಇನ್ನು ಕ್ಯಾಲೆಂಡರ್‌ನ ವಿನ್ಯಾಸ ಆಗಬೇಕಲ್ಲ? ನನ್ನ ಬಳಿ ಅದಕ್ಕೆ ಬೇಕಾದ ವಿಶೇಷ ಸಾಫ್ಟ್ ವೇರ್ ಯಾವುದೂ ಇರಲಿಲ್ಲ. ಎಕ್ಸೆಲ್ ಶೀಟ್‌ನಲ್ಲಿ ಜನವರಿ ೨೦೨೧ರ ಒಂದು ತಿಂಗಳಿನ ಕ್ಯಾಲೆಂಡರ್ ತಯಾರಿಸಿದೆ. ಇದನ್ನು ಮುದ್ರಿಸಲಿಕ್ಕಾಗುತ್ತದೆಯೇ ಎಂದು ಉಡುಪಿ ಯಲ್ಲಿ ಕೆಲ ಮುದ್ರಕರನ್ನು ಕೇಳಿದೆ. ಉತ್ತೇಜನದ ಪ್ರತಿಕ್ರಿಯೆ ಸಿಗಲಿಲ್ಲ. ಆಗ ೨೦೨೦ರ ನವೆಂಬರ್ ತಿಂಗಳು. ೨೦೨೧ರ ಪೂರ್ಣ ಕ್ಯಾಲೆಂಡರ್ ಮಾಡು ವುದು ಆಗದ ಮಾತೆಂದು ನನ್ನ ಯೋಜನೆಯನ್ನು ಸ್ಥಗಿತಗೊಳಿಸಿದೆ.

ಸಂಸ್ಕೃತ ತರಗತಿಗಳು ಮತ್ತು ಆಗಷ್ಟೇ ಸೇರಿಕೊಂಡಿದ್ದ ಯೋಗ ತರಗತಿಗಳತ್ತ ಗಮನ ಕೇಂದ್ರೀಕರಿಸಿದೆ. ೨೦೨೧ರ ಏಪ್ರಿಲ್‌ನಲ್ಲಿ ವಿದೇಶಗಳಿಗೆ ವಿಮಾನಯಾನ ಆರಂಭವಾಯಿತು. ಮತ್ತೆ ದುಬೈಗೆ ಮರಳಲೇ, ಭಾರತದ ಯಾವುದಾದರೂ ಉದ್ಯೋಗ ಹುಡುಕಲೇ, ನಿವೃತ್ತಿ ಘೋಷಿಸಲೇ, ಅಥವಾ ಸ್ವಂತ ಉದ್ಯೋಗ ಆರಂಭಿಸಲೇ ಎಂಬ ಚೌರಾಸ್ತಾದಲ್ಲಿ ನಿಂತಿz ನಾನಾಗ. ಆದರೆ ವಿಧಿಯ ಸಂಚು ಬೇರೆಯೇ ಇತ್ತು. ಮೇ ೨೦೨೧ರಲ್ಲಿ ನನ್ನ ಪತ್ನಿಗೆ ದೀರ್ಘ ಕಾಲೀನ ಚಿಕಿತ್ಸೆ ಅವಶ್ಯವಾದ ಭೀಕರ ಕಾಯಿಲೆ ಇರುವುದಾಗಿ ಪತ್ತೆಯಾಯ್ತು. ಚಿಕಿತ್ಸೆಗಾಗಿ ಅವಳೊಂದಿಗೆ ಇರಬೇಕಾಗುವುದ ರಿಂದ ನಿವೃತ್ತ ನಾಗುವುದೇ ಆಗ ನನ್ನ ಆಯ್ಕೆ.

೨೦೨೨ರ ಆಗಸ್ಟ್ ಹೊತ್ತಿಗೆ ಪತ್ನಿ ಚೇತರಿಸಿಕೊಂಡಳು. ಕ್ಯಾಲೆಂಡರ್ ರಚನೆಯ ನನ್ನ ಕನಸು ಮತ್ತೆ ಚಿಗುರಿತು. ಅಷ್ಟುಹೊತ್ತಿಗೆ ಒಬ್ಬ ಮುದ್ರಕರು ನನ್ನ
ಯೋಜನೆಯಲ್ಲಿ ಆಸಕ್ತಿ ತೋರಿದರು- ಅವರ ಡಿಸೈನರ್‌ಗೆ ಬಿಡುವು ಸಿಕ್ಕಾಗ ಮತ್ತು ಪಕ್ಕದಲ್ಲಿ ನಾನು ಕುಳಿತುಕೊಂಡಿದ್ದರಷ್ಟೇ ಕೆಲಸ ಸಾಧ್ಯ ಎಂಬ ಷರತ್ತಿನ ಮೇಲೆ. ಕೊನೆಗೂ ಡಿಸೆಂಬರ್ ೨೬ಕ್ಕೆ ೨೦೨೩ರ ಕ್ಯಾಲೆಂಡರ್ ಸಿದ್ಧವಾಯ್ತು. ೧೦೦೦ ಪ್ರತಿಗಳನ್ನು ಅಚ್ಚುಹಾಕಿಸಿದೆ. ಮಾರಾಟಕ್ಕೆ ತಡವಾಯ್ತು ಎಂದು ತಣ್ಣೀರೆರಚಿದರು ಪುಸ್ತಕ ಮಳಿಗೆ ಗಳವರು. ಧೃತಿಗೆಡದೆ ಸೋಷಿಯಲ್ ಮೀಡಿಯಾದಲ್ಲಿ ನಾನೇ ಪ್ರಚಾರ ಮಾಡಿ ೧೦೦೦ ಪ್ರತಿಗಳನ್ನು ಮಾರಲು ಯಶಸ್ವಿಯಾದೆ.

ನನ್ನ ಗಂಟೆಗಟ್ಟಲೆ ಶ್ರಮಕ್ಕಲ್ಲದಿದ್ದರೂ ಕೈಯಿಂದ ಹಾಕಿದ ಮುದ್ರಣ ವೆಚ್ಚಕ್ಕೆ ಫಲ ಸಿಕ್ಕಿತು.’ ೨೦೨೪ರ ಕ್ಯಾಲೆಂಡರ್ ರಚನೆಯ ಹೊತ್ತಿಗೆ, ಹಿಂದಿನ ವರ್ಷದ ಡಿಸೈನರ್ ಕೆಲಸವನ್ನು ಸೂಕ್ಷ್ಮವಾಗಿ ನೋಡಿದ್ದರಿಂದ, ಮತ್ತೊಂದಿಷ್ಟು ಯುಟ್ಯೂಬ್ ಮೂಲಕ ಕಲಿಕೆಯಿಂದ, ಕೋರಲ್ ಡ್ರಾ ತಂತ್ರಾಂಶದ ಮಟ್ಟುಗಳನ್ನೂ ಕಲಿತುಕೊಂಡೆ. ಏಪ್ರಿಲ್‌ನ ಕೆಲಸ ಆರಂಭಿಸಿದ್ದರಿಂದ ಸೆಪ್ಟೆಂಬರ್ ೨೭ಕ್ಕೆ ಅನಂತಚತುರ್ದಶಿಯ ದಿನಕ್ಕೆ ೨೦೨೪ರ ಕ್ಯಾಲೆಂಡರ್ ಸಿದ್ಧವಾಯ್ತು. ಕಳೆದ ವರ್ಷದ್ದಕ್ಕೆ ಬಂದಿದ್ದ ಪ್ರತಿಕ್ರಿಯೆಗಳಲ್ಲಿನ ರಚನಾತ್ಮಕ ಸಲಹೆಗಳನ್ನೆಲ್ಲ ಅಳವಡಿಸಿಕೊಂಡೆ. ಪಂಚಾಂಗಪಠನದ ಸಂಕಲ್ಪಮಂತ್ರ ಮತ್ತು ಫಲಶ್ರುತಿ ಶ್ಲೋಕ ಪ್ರತಿ ಪುಟದಲ್ಲೂ; ತಿಂಗಳಲ್ಲಿ ಬರುವ ಮುಖ್ಯ ಹಬ್ಬಗಳ ಚಿತ್ರಸಹಿತ ವಿವರಣೆ ಮೇಲ್ಭಾಗದಲ್ಲಿ; ಜನವರಿ ತಿಂಗಳ ಪುಟದಲ್ಲಿ
ಅಯೋಧ್ಯೆಯ ರಾಮಮಂದಿರ ಶುಭಾರಂಭಕ್ಕಾಗಿ ವಿಶೇಷ ಚಿತ್ರ; ಬೇರೆ ಕ್ಯಾಲೆಂಡರ್‌ಗಳಂತೆ ರಾಹುಕಾಲ-ಗುಳಿಕಕಾಲಗಳನ್ನು ವರ್ಷ ದುದ್ದಕ್ಕೂ ಒಂದೇ ರೀತಿ ಹಾಕದೆ ದಿನಮಾನಕ್ಕೆ ಅನುಗುಣವಾಗಿ ನಿಖರತೆ; ನಿತ್ಯನಕ್ಷತ್ರವಲ್ಲದೆ ತಿಂಗಳಲ್ಲಿ ಬರುವ ಮಳೆನಕ್ಷತ್ರಗಳ ದಾಖಲಾತಿ; ದಿನಾಂಕದ ಫ್ರಂಟ್‌ನಷ್ಟೇ ದೊಡ್ಡದಾಗಿ ತಿಥಿಯ ಹೆಸರು, ಅದೇ ಚೌಕದ ಬಲಭಾಗದಲ್ಲಿ ತಿಥಿ, ನಕ್ಷತ್ರ, ಯೋಗ, ಮತ್ತು ಕರಣ ಎಷ್ಟು ಹೊತ್ತಿಗೆ ಆರಂಭ ಎಂದು ಸುಲಭದ
ಗೊತ್ತಾಗುವಂತೆ ಗುರುತು. ಸುಧಾರಣೆಗೆ ಇನ್ನೂ ಅವಕಾಶವಿದೆ ಯೆಂದು ಬ.

ನ್ಯೂನಾನಿ ಚಾತಿರಿಕ್ತಾಣಿ ಕ್ಷಮಸ್ವ ಎಂದು ಪ್ರಾಮಾಣಿಕವಾಗಿ ಬೇಡಿಕೊಂಡರೆ ಕಾಲಪುರುಷನು ಕ್ಷಮಿಸುತ್ತ ನೆಂದೂ ಬ. ಆದರೆ ಏನೋ ಛಲದಿಂದ ಆರಂಭಿಸಿದ್ದನ್ನು ಇಷ್ಟು ರೂಪಕ್ಕೆ ತಂದಿರುವುದರ ಬಗ್ಗೆ ತೃಪ್ತಿಯಿದೆ, ಹೆಮ್ಮೆಯಿದೆ.’ ಕೇಶವ ಮೆಹೆಂದಳೆಯವರ ಜೊತೆ ಮೊನ್ನೆ ವಾಟ್ಸ್ಯಾಪ್ ಕರೆ
ಯಲ್ಲಿ ಮಾತನಾಡಿದಾಗ ಆ ಕೃತಕೃತ್ಯತೆಯ ಭಾವ ತುಳುಕುತ್ತಿತ್ತು. ೨೦೨೪ರ ಕ್ಯಾಲೆಂಡರ್‌ನ ೧೦೦೦ ಪ್ರತಿಗಳು ಈಗಾಗಲೇ ಮಾರಾಟ ವಾಗಿವೆಯಂತೆ. ಎರಡನೆಯ ಮುದ್ರಣದ ಪ್ರತಿಗಳು ಸಿದ್ಧವಾಗುತ್ತಿವೆ. ಬೆಲೆ ೮೦ ರೂ. ದರ್ಶಿನಿಯಲ್ಲಿ ಒಮ್ಮೆ ಕಾಫಿ-ತಿಂಡಿ ಸೇವನೆಗೆ ಅದಕ್ಕಿಂತ ಹೆಚ್ಚು ಬೇಕಾಗುತ್ತದೆ. ಸನಾತನ ಸಂಸ್ಕೃತಿಯನ್ನು ಉದ್ಧರಿಸುವಲ್ಲಿ ಅಳಿಲುಸೇವೆ ಇದು. ಮೆಚ್ಚುವ ಶ್ರೀರಾಮ ನೀವಾಗ ಬಹುದು ಭಾರತೀಯ ಪಂಚಾಂಗ ಕ್ಯಾಲೆಂಡರ್ ಪೋಷಕರಾಗಿ. ಸಂಪರ್ಕಸಂಖ್ಯೆ: ೮೨೧೭೬೪೪೯೧೩.