Friday, 13th December 2024

ಆರ್‌ಎಂಜಿ ಕೈಗಾರಿಕೆಗೆ ಜಿಎಸ್‌ಟಿಯ ಪರಿಣಾಮವೇನು ?

ಅರ್ಥ-ನೀತಿ

ಡಾ.ಅರುಣಾ ಶರ್ಮಾ

ಕರ್ನಾಟಕ ಭಾರತದ ಮಾಹಿತಿ ತಂತ್ರಜ್ಞಾನ(ಐಟಿ) ಕೇಂದ್ರ ಎಂದು ಖ್ಯಾತಿ ಗಳಿಸಿರುವುದಲ್ಲದೆ, ಅನೇಕ ಆನ್‌ಲೈನ್ ಗೇಮಿಂಗ್ ಕಂಪನಿಗಳು ಮತ್ತು
ಡವಲಪರ್‌ ಗಳ ತಾಣವಾಗಿದೆ. ಆದರೆ, ಅಸ್ಪಷ್ಟ ನಿಯಂತ್ರಣ ನಿಯಮಗಳಿಂದಾಗಿ ಆನ್‌ಲೈನ್ ಗೇಮಿಂಗ್ ಉದ್ಯಮ ಅನಿಶ್ಚಿತತೆಯನ್ನು ಎದುರಿಸುತ್ತಿದೆ. ಇದರಿಂದ ಬಂಡವಾಳ ಮತ್ತು ಹೂಡಿಕೆಗಳು ಮಾಯವಾಗುವ ದಾರಿಯಲ್ಲಿವೆ.

ನ್ಯಾಯಾಲಯದ ಆದೇಶವು ತಾತ್ಕಾಲಿಕವಾಗಿ ಆತಂಕವನ್ನು ನಿವಾರಿಸಿದ್ದರೂ ಕೂಡ ಈ ಕ್ಷೇತ್ರದ ಪಾಲುದಾರರು ಸುಪ್ರಿಂಕೋರ್ಟ್‌ನ ಅಂತಿಮ ನಿರ್ಣಯಕ್ಕಾಗಿ ಕಾಯುತ್ತಿದ್ದು, ಇದರ ಮೇಲೆ ಜಿಎಸ್‌ಟಿ ಸಮಿತಿಯಲ್ಲಿನ ಚರ್ಚೆಗಳು ಪ್ರಭಾವ ಬೀರುತ್ತವೆ. ಹೀಗಾಗಿ ಗೇಮಿಂಗ್ ಕ್ಷೇತ್ರವನ್ನು ಸ್ಥಿರಗೊಳಿಸಲು ಮತ್ತು ಅದರ ಬೆಳವಣಿಗೆಗೆ ಬೆಂಬಲ ನೀಡಲು ಸ್ಪಷ್ಟ ಮತ್ತು ಸತತವಾಗಿ ಒಂದೇ ರೀತಿಯಲ್ಲಿರುವ ನಿಯಂತ್ರಣದ ನಿಯಮಗಳು ಕಡ್ಡಾಯವಾಗಿರುತ್ತವೆ.

ಇತ್ತೀಚಿನ ಜಿಎಸ್‌ಟಿ ಸಮಿತಿ ಸಭೆಯಲ್ಲಿನ ಮುಖ್ಯಾಂಶಗಳು

ನೂತನ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ನಡೆದ ಇತ್ತೀಚಿನ ಜಿಎಸ್‌ಟಿ ಸಮಿತಿ ಸಭೆ ಪ್ರಾಥಮಿಕವಾಗಿ ಹಲವಾರು ಉದ್ಯಮಗಳ ಸಮಸ್ಯೆಗಳತ್ತ ಗಮನ ಕೇಂದ್ರೀಕರಿಸಿತ್ತು.

ಆದರೆ, ಆನ್‌ಲೈನ್ ಗೇಮಿಂಗ್ ಕ್ಷೇತ್ರಕ್ಕೆ ನಿರ್ದಿಷ್ಟವಾದ, ಅದರಲ್ಲಿಯೂ ಕೌಶಲ್ಯದ ಆಟಗಳಾದ ಗೇಮ್ಸ್ ಆಫ್ ಸ್ಕಿಲ್ ಗಳ ಬಗೆಗಿನ ವಿಶೇಷವಾದ ಕಾಳಜಿಗಳ ಬಗ್ಗೆ ಗಮನ ನೀಡಲಿಲ್ಲ. ಹಾಗೆಯೇ ಅಂಶ ಎಂದರೆ ಈ ಕ್ಷೇತ್ರದ ಮೇಲಿ ಜಿಎಸ್‌ಟಿ ದರಗಳು ಶೇ.೨೮ರಿಂದ ಶೇ.೧೮ಕ್ಕೆ ಇಳಿಸಬೇಕಾದ ನಿರ್ಣಯವನ್ನು ಗಮನಿಸಿಲ್ಲ. ಇದರ ಹಾಗೂ ಆನ್‌ಲೈನ್ ಗೇಮಿಂಗ್ ಸೇರಿದಂತೆ ವಿಭಿನ್ನ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ಇತರೆ ಜಿಎಸ್‌ಟಿ ದರಗಳ ಪರಿಷ್ಕರಣೆಯನ್ನು ಸರಕಾರದ ಸಚಿವರ ಸಮಿತಿಗೆ ಒಪ್ಪಿಸಲಾಗಿದೆ.

ಜುಲೈ ೨೦೧೭ರಿಂದ ಪೂರ್ವಾನ್ವಯವಾಗಿ ವಿಧಿಸಲಾಗಿರುವ ಹೆಚ್ಚು ಉನ್ನತವಾದ ಜಿಎಸ್‌ಟಿ ದರಗಳ ಸುತ್ತ ಈವರೆಗೆ ಪರಿಹರಿಸಲಾಗದ ಸಮಸ್ಯೆ ಗಮನಾರ್ಹ ವಿಷಯವಾಗಿದೆ. ಈ ಪೂರ್ವಾನ್ವಯ ತೆರಿಗೆ ಕುರಿತ ವಿಷಯಗಳನ್ನು ಸರಿಪಡಿಸಲು ಕೇಂದ್ರ ಮತ್ತು ರಾಜ್ಯಸರಕಾರಗಳಿಗೆ ೧೧ಎ ವಿಭಾಗದಲ್ಲಿನ ತಿದ್ದುಪಡಿಗಳು ಸಬಲೀಕರಿಸುತ್ತವೆ. ಆದರೆ, ರಿಯಲ್ ಮನಿ ಗೇಮ್(ಆರ್‌ಎಂಜಿ)ಗಳಿಂದ ಗಳಿಕೆಗೆ ಸಂಬಂಧಿಸಿದಂತೆ ಗೊಂದಲ ಉಳಿದುಕೊಂಡಿದೆ. ಇವುಗಳನ್ನು ಸರಕುಗಳು
ಅಥವಾ ಸೇವೆಗಳಲ್ಲಿ ವರ್ಗೀಕರಿಸಿಲ್ಲ. ಆದರೆ, ಶೇ.೩೦ರಷ್ಟು ನೇರ ತೆರಿಗೆ ಕಡಿತಕ್ಕೆ ಒಳಪಟ್ಟಿರುತ್ತವೆ. ಆರಂಭದ Z ರ್ಚೆಗಳ ನಂತರವೂ ಕೂಡ ನಿರ್ಣಾಯಕ ಪರಿಹಾರವನ್ನು ಇನ್ನು ತಲುಪಬೇಕಾಗಿದೆ. ಇದರಿಂದ ಭವಿಷ್ಯದ ತೆರಿಗೆಗಳ ಪರಿಣಾಮಗಳನ್ನು ಕುರಿತು ಈ ಕ್ಷೇತ್ರದ ಪಾಲುದಾರರು ಅನಿಶ್ಚಿತತೆಯಲ್ಲಿ ಉಳಿಯುವಂತಾಗಿದೆ.

ಉದ್ಯಮದ ಸವಾಲುಗಳು ಮತ್ತು ಆರ್ಥಿಕ ಮುನ್ಸೂಚನೆಗಳು

ಗ್ರಾಹಕರನ್ನು ಗೇಮ್‌ಗಳಿಗೆ ಸೇರಿಸಿಕೊಳ್ಳುವಾಗ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ತಡೆಯಲು, ಡಿಜಿಟಲ್ ಪಾವತಿಗಳ ಖಾತ್ರಿ ಮಾಡಲು ಮತ್ತು ನೊ ಯುವರ್ ಕಸ್ಮರ್(ಕೆವೈಸಿ) ಕ್ರಮಗಳನ್ನು ಅನುಷ್ಟಾನಕ್ಕೆ ತರುವುದಕ್ಕೆ ಸ್ವಯಂ ನಿಯಂತ್ರಣ ಸಂಸ್ಥೆ(ಎಸ್‌ಆರ್‌ಒ)ಗಳು ಕಾರ್ಯಾಚರಣೆ ಮಾರ್ಗದರ್ಶಿ ಸೂತ್ರ ಗಳನ್ನು ಸ್ಥಾಪಿಸಿವೆ. ಇದಲ್ಲದೆ, ಕೌಶಲ್ಯದ ಆಟಗಳಾದ ಗೇಮ್ಸ್ ಆಫ್ ಸ್ಕಿಲ್ ಮತ್ತು ಅವಕಾಶದ ಆಟಗಳಾದ ಗೇಮ್ಸ್ ಆಫ್ ಚಾನ್ಸ್‌ಗಳ ನಡುವಿನ ಪ್ರತ್ಯೇಕತೆ ಗಳನ್ನು ತಿಳಿಸುವ ಮಾನದಂಡಗಳ ಪಟ್ಟಿಯನ್ನು ಎಸ್‌ಆರ್‌ಒಗಳು ಎಂಇಐಟಿವೈ ನೊಂದಿಗೆ ಅದರಲ್ಲಿಯೂ ಕೇಂದ್ರ ಸರಕಾರದೊಂದಿಗೆ ಹಂಚಿಕೊಂಡಿವೆ. ಆದರೆ, ಈ ಪ್ರತ್ಯೇಕವಾಗಿಸುವಂತಹ ಮಾನದಂಡಗಳನ್ನು ಕಾನೂನುಬದ್ಧವಾಗಿಸುವ ನಿಟ್ಟಿನಲ್ಲಿ ಸರಕಾರ ಕಾರ್ಯೋನ್ಮುಖವಾಗ ಬೇಕಾಗಿದೆ. ಆದ್ದರಿಂದ ಈಗ ಮುಂದು ವರಿಯುತ್ತಿರುವ ಕಟ್ಟುನಿಟ್ಟಿನ ತೆರಿಗೆ ನೀತಿಗಳು ಉದ್ಯಮಕ್ಕೆ ಗಮನಾರ್ಹ ಬೆದರಿಕೆವೊಡ್ಡುವುದನ್ನು ಮುಂದುವರಿಸಿವೆ. ಇದು ಸಮಂಜಸವಾದ ಮತ್ತು ಸಮರ್ಥ ನೀಯ ತೆರಿಗೆಯ ಅನುಷ್ಟಾನವನ್ನು ಪ್ರೇರೇಪಿಸುತ್ತದೆ.

ಈ ರೀತಿಯ ಉನ್ನತ ತೆರಿಗೆಗಳು ಮತ್ತು ನಿಯಂತ್ರಣ ನಿಯಮಗಳಲ್ಲಿ ಅಸ್ಥಿರತೆಯಿಂದಾಗಿ ಗೇಮಿಂಗ್ ಕಂಪನಿಗಳು ವಿದೇಶಗಳಿಗೆ ತಮ್ಮ ಕಾರ್ಯಾಚರಣೆಯನ್ನು ವರ್ಗಾಯಿಸುವಂತೆ ಮಾಡುತ್ತವೆ. ಅಥವಾ ಅವು ಅನಧಿಕೃತ ಮಾರುಕಟ್ಟೆಗಳಿಗೆ ಪ್ರವೇಶಿಸುವಂತೆ ಮಾಡುತ್ತವೆ. ಇದರಿಂದ ಸ್ಥಳೀಯ ಉದ್ಯೋಗಾವಕಾಶಗಳಿಗೆ ಅಪಾಯ ಉಂಟಾಗಬಹುದಾಗಿದೆ. ಭಾರತದ ಗೇಮಿಂಗ್ ಕ್ಷೇತ್ರ ೧,೪೦೦ಕ್ಕೂ ಹೆಚ್ಚಿನ ಸಂಖ್ಯೆಯ ಸಂಸ್ಥೆಗಳನ್ನು ಒಳಗೊಂಡಿದ್ದು, ೨೦೨೮ರ ವೇಳೆಗೆ ೬
ಶತಕೋಟಿ ಅಮೆರಿಕನ್ ಡಾಲರ್ ಆದಾಯದ ನಿರೀಕ್ಷೆ ಹೊಂದಿವೆ. ಆದರೆ, ಅವು ಈಗ ಸಂಭಾವ್ಯ ಅಡೆತಡೆಗಳನ್ನು ಎದುರಿಸುತ್ತಿದ್ದು ಆರ್‌ಎಂಜಿ ವೇದಿಕೆಗಳು ನಿಯಂತ್ರಣದ ಒತ್ತಡದಲ್ಲಿ ಬಂಡವಾಳವನ್ನು ಹಿಂತೆಗೆಯುವುದನ್ನು ಕುರಿತು ಚಿಂತಿಸಬೇಕಾಗಿದೆ.

ಭವಿಷ್ಯದ ಮೇಲ್ನೋಟ ಮತ್ತು ಆರ್ಥಿಕ ಪರಿಣಾಮ

ಭವಿಷ್ಯದಡೆಗೆ ಕಣ್ಣು ಹಾಯಿಸಿದಲ್ಲಿ (ಭಾರತದಲ್ಲಿ ವಿಕಸನಗೊಳ್ಳುತ್ತಿರುವ ಆನ್‌ಲೈನ್ ಗೇಮಿಂಗ್ ಕ್ಷೇತ್ರವನ್ನು ಮುಂದೆ ಸಾಗಿಸುವುದು) ಡಿಸೆಂಬರ್ ೨೦೨೩ರಲ್ಲಿ ಪ್ರಕಟಿಸಲಾದ ಇವೈ ವರದಿ ಗನುಗುಣವಾಗಿ ಆರ್‌ಎಂಜಿ ಉದ್ಯಮ ಭರವಸೆಯ ತೆರಿಗೆ ಆದಾಯದ ಸಾಮರ್ಥ್ಯ ಹೊಂದಿದೆ. ಅಲ್ಲದೆ, ೨೦೨೮ರ ಹೊತ್ತಿಗೆ ೬,೮೦೦ ಕೋಟಿ ರು. ಗಳಿಗೆ ತಲುಪುವ ನಿರೀಕ್ಷೆ ಇದೆ. ಇದಲ್ಲದೆ, ಪೂರ್ವಾನ್ವಯದ ತೆರಿಗೆ ಸವಾಲುಗಳನ್ನು ಗಮನಿಸಲು ೧೧ಎ ವಿಭಾಗವನ್ನು ಬಳಸಿಕೊಳ್ಳು ವಂತೆ ನ್ಯಾಯವಾದಿಗಳು ಒತ್ತಾಯಿಸುತ್ತಾರೆ.

ಜತೆಗೆ ಈ ಉದ್ಯಮ ದೇಶದ ಎಲ್ಲೆಡೆ ವಿಸ್ತರಿಸುವುದನ್ನು ಪೋಷಿಸುವುದಕ್ಕಾಗಿ ಕೌಶಲ್ಯಾಧಾರಿತ ಆಟಗಳ ಮೇಲೆ ಜಿಎಸ್‌ಟಿ ಕಡಿಮೆ ಮಾಡುವಂತೆ ವಾದಿಸುತ್ತಾರೆ.
ಕೌಶಲ್ಯಾಧಾರಿತ ಗೇಮ್‌ಗಳನ್ನು ಪ್ರತ್ಯೇಕಿಸುವ ಗುರಿಯೊಂದಿಗೆ ರಾಜ್ಯದ ನಿಯಂತ್ರಣ ಸಂಸ್ಥೆಯನ್ನು ಸ್ಥಾಪಿಸುವ ತಮಿಳು ನಾಡಿನ ಪ್ರಸ್ತಾಪವು ಗೇಮಿಂಗ್ ಶುಲ್ಕಗಳ ಮೇಲೆ ವಿಧಿಸುವ ಜಿಎಸ್‌ಟಿ ಮೇಲೆ ಸಂಘಟಿತ ರಾಷ್ಟ್ರೀಯ ಮಾರ್ಗದರ್ಶಿ ಸೂತ್ರಗಳನ್ನು ವಿಧಿಸುವ ತುರ್ತು ಅಗತ್ಯವನ್ನು ಒತ್ತಿ ಹೇಳುತ್ತದೆ. ಭಾರತೀಯ ಚಲನಶೀಲ ಗೇಮಿಂಗ್ ಕೈಗಾರಿಕೆಯೊಳಗಡೆ ಸುಸ್ಥಿರ ಬೆಳವಣಿಗೆಯ ಖಾತ್ರಿ ಮಾಡಿಕೊಳ್ಳಲು ಹಾಗೂ ಹೂಡಿಕೆದಾರರ ವಿಶ್ವಾಸವನ್ನು ಉಳಿಸಿ ಕೊಳ್ಳಲು ತೆರಿಗೆ ನೀತಿಗಳ ಮೇಲೆ ಸ್ಪಷ್ಟತೆ ಅನಿವಾರ‍್ಯವಾಗಿರುತ್ತದೆ.

ಅಂತಿಮ ತೀರ್ಮಾನ

ಭಾರತದಲ್ಲಿ ಗೇಮಿಂಗ್ ಕ್ಷೇತ್ರದ ಸಾಮರ್ಥ್ಯವನ್ನು ಪೋಷಿಸಲು ಸ್ಪಷ್ಟ ಮತ್ತು ಬೆಂಬಲ ನೀಡುವಂತಹ ನೀತಿಗಳನ್ನು ಅನುಷ್ಟಾನಕ್ಕೆ ತರುವುದು ಮತ್ತು ಈ ನಿಯಂತ್ರಣದಲ್ಲಿನ ಸವಾಲುಗಳನ್ನು ಕುರಿತು ಗಮನಿಸುವುದು ಮುಖ್ಯವಾಗಿರುತ್ತದೆ. ಕ್ಷೇತ್ರಕ್ಕೆ ನೆರವಾಗುವಂತಹ ನಿಯಂತ್ರಣ ವಾತಾವರಣವನ್ನು ಪೂರೈಸು ವುದರ ಜತೆಗೆ ನೀತಿ ರೂಪಿಸುವವರು ನವೀನತೆಗೆ ಚಾಲನೆ ನೀಡಬಹುದಲ್ಲದೆ, ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಬಹುದು. ಜತೆಗೆ ಈ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಕೈಗಾರಿಕೆಯಲ್ಲಿ ಉದ್ಯೋಗ ಸೃಷ್ಟಿಯ ಸಂರಕ್ಷಣೆ ಕೈಗೊಳ್ಳಬಹುದು.

ಅನಿಶ್ಚಿತತೆಗಳನ್ನು ಇಲ್ಲವಾಗಿಸುವ, ಹೂಡಿಕೆಗಳನ್ನು ಆಕರ್ಷಿಸುವ ಮತ್ತು ಗೇಮಿಂಗ್ ಕ್ಷೇತ್ರವನ್ನು ಸುಸ್ಥಿರ ಬೆಳವಣಿಗೆಯ ಕಡೆಗೆ ಕರೆದೊಯ್ಯುವ ನಿರ್ಣಯಾತ್ಮಕ ನಿಯಂತ್ರಣ ಕಾರ್ಯಗಳನ್ನು ಕೈಗೊಳ್ಳಬೇಕಾದ ಪ್ರಮುಖ ಹಂತದಲ್ಲಿ ಭಾರತ ಇದೆ. ಯೋಜನಾತ್ಮಕ ನೀತಿ ಹಸ್ತಕ್ಷೇಪಗಳು, ಸ್ಥಿರವಾದ ತೆರಿಗೆ ನಿಯಮಗಳು ಮತ್ತು ಪಾಲುದಾರರ ಸಹಭಾಗಿತ್ವದ ಜತೆಗೆ ಭಾರತ ತನ್ನ ಗೇಮಿಂಗ್ ಕೈಗಾರಿಕೆಯ ಸಂಪೂರ್ಣ ಆರ್ಥಿಕ ಸಾಮರ್ಥ್ಯವನ್ನು ಬಳಸಿಕೊಳ್ಳಬಹುದು. ಅಲ್ಲದೆ,
ಇದರೊಂದಿಗೆ ಮುಂಬರುವ ಭವಿಷ್ಯದ ವರ್ಷಗಳಲ್ಲಿ ರಾಷ್ಟ್ರದ ಡಿಜಿಟಲ್ ಆರ್ಥಿಕತೆಗೆ ಗೇಮಿಂಗ್ ಉದ್ಯಮ ಗಮನಾರ್ಹ ಕೊಡುಗೆ ನೀಡಬಹುದು.

(ಲೇಖಕರು: ಅಭಿವೃದ್ಧಿ ಆರ್ಥಿಕ ತಜ ರು ಮತ್ತು ಭಾರತ
ಸರಕಾರದ ನಿವೃತ್ತ ಕಾರ್ಯದರ್ಶಿ )