ಪ್ರಚಲಿತ
ಮರಿಲಿಂಗಗೌಡ ಮಾಲಿಪಾಟೀಲ್
marilingagowdapatil@gmail.com
ನಾಡಹಬ್ಬದ ಸಂತಸದ ಸಂದರ್ಭದಲ್ಲಿ ಕನ್ನಡಿಗರಿಗೆ ಬಂದ ಶುಭವಾರ್ತೆ ಹಬ್ಬದ ಹರ್ಷವನ್ನು ಇಮ್ಮಡಿಸಿದೆ. ಮೈಸೂರು ದಸರಾದ ಉದ್ಘಾಟನೆಗೆ ಎಸ್.ಎಂ
ಕೃಷ್ಣರ ಆಯ್ಕೆ ಮಾಡಿದ್ದು, ನೂರಕ್ಕೆ ನೂರು ಸಮಂಜಸ ಎನ್ನುವುದು ಕನ್ನಡಿಗರೆಲ್ಲರ ಒಕ್ಕೊರಲ ಅಭಿಮತ.
‘ಮನುಷ್ಯ ಸ್ಥಿತಪ್ರಜ್ಞನಾಗಿರಬೇಕು’ ಎಂದದ್ದು ದ್ವಾಪರಯುಗದ ಶ್ರೀ ಕೃಷ್ಣ ಸ್ಥಿತಪ್ರಜ್ಞ ಹೇಗಿರುತ್ತಾನೆ ಎನ್ನುವುದನ್ನು ಆಧುನಿಕ ಯುಗದಲ್ಲಿ ತೋರಿಸಿ ಕೊಟ್ಟವರಲ್ಲಿ ಎಸ್.ಎಂ ಕೃಷ್ಣರು ಒಬ್ಬರು. ಮುಖ್ಯಮಂತ್ರಿಯಾಗಿದ್ದಾಗ ಎಸ್‌ಎಮ್‌ಕೆಅವರನ್ನ ಕಾಡಿದ ಸಮಸ್ಯೆಗಳಿಗೆ ಬೇರೆ ಯಾರಾದರೂ ಕುಸಿದು ಹೋಗಿರುತ್ತಿದ್ದರು. ರಾಜ್ಯವನ್ನು ಕಾಡಿದ ನಿರಂತರ ಬರ, ಜತೆಗೆ ನೀರಿಗಾಗಿ ತಮಿಳುನಾಡಿನ ರಾದ್ಧಾಂತ, ಅಭಿಮಾನಿಗಳ ಆರಾಧ್ಯ ದೈವ ಡಾ.ರಾಜ್ ಕುಮಾರ್ ಅಪಹರಣ … ಹೀಗೆ ಸಾಲು ಸಾಲು ಸಮಸ್ಯೆಗಳು ಎಸ್.ಎಂಕೃಷ್ಣ ಕಂಗೆಡಿಸಲು ಕಾದು ನಿಂತಿದ್ದವು.
ಆದರೆ ವರ್ತಮಾನದ ಸಮಸ್ಯೆಗಳಿಗೆ ಪ್ರಾಗ್ನನೊಬ್ಬ ಹೇಗೆ ಮುಖಾಮುಖಿಯಾಗಿ ಸಮಚಿತ್ತವನ್ನು ಬಳಸಿಕೊಳ್ಳ ಬಹುದು ಎನ್ನುವುದಕ್ಕೆ ಎಸ್.ಎಂಕೆರವರು ಸಾಕ್ಷಿಯಾಗಿ ನಿಂತಿದ್ದಾರೆ. ಶ್ರೀಕೃಷ್ಣನ ಮಾರ್ಗದರ್ಶನದಲ್ಲಿ ಇಂದ್ರಪ್ರಸ್ಥ ದಂತಹ ನಗರ ಮಾಯಸಭೆಯಂತಹ ಅದ್ಭುತಗಳು ಸೃಷ್ಟಿಯಾದವು. ಆಧುನಿಕ ಭಾರತದ ಎಸ್.ಎಂ. ಕೃಷ್ಣರ ದೂರದೃಷ್ಟಿಯ -ಲವಾಗಿ ರಾಜಧಾನಿ ಐಟಿಬಿಟಿ ಸಿಟಿಯಾಯಿತು ಎಂದು ಕನ್ನಡಿಗರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಬೆಂಗಳೂರನ್ನು ಸಿಂಗಾಪುರ ಮಾಡುವ ಎಸ್‌ಎಮ್‌ಕೆ ರವರ ಬಯಕೆಯ ಪರಿಣಾಮವಾಗಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ವರ್ಚಸ್ಸನ್ನು ಹೆಚ್ಚಿಸಿಕೊಂಡಿದೆ.
ಎಸ್.ಎಂ ಕೃಷ್ಣಅವರು ಮುಖ್ಯಮಂತ್ರಿಯಾಗಿ, ಕೇಂದ್ರ ವಿದೇಶಾಂಗ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲ ರಾಗಿ ಸೇವೆ ಸಲ್ಲಿಸಿದ್ದು ಸ್ಮರಣೀಯ. ಆದರೆ ಅವರ ಬದುಕಿನ ಎಲ್ಲಾ ಸಾಧನೆಗಳಿಗಿಂತಲೂ ನಮ್ಮದೇ ರಾಜ್ಯದ ನಾಡಹಬ್ಬದ ಉದ್ಘಾಟಕರಾಗಿ ಆಯ್ಕೆಯಾದುದು ಹೆಚ್ಚಿನ ಗೌರವದ ವಿಚಾರ ಎನ್ನುವುದು ಎಲ್ಲರ ಅಂತರಂಗದ ಅನಿಸಿಕೆ. ಶ್ರೀಕೃಷ್ಣನ ವ್ಯಕ್ತಿತ್ವವೇ ಮನಮೋಹಕ. ಕೃಷ್ಣ ಎಂದರೆ ಆಕರ್ಷಕ ಎಂದರ್ಥ. ತಂತ್ರ ಕೃಷ್ಣನ ಆಯುಧ. ದೂರದೃಷ್ಟಿ ಕೃಷ್ಣನ ವೈಶಿಷ್ಟ್ಯ. ಸರ್ವರನ್ನೂ ಸಮಾನ ಭಾವದಿಂದ ಕಾಣುವುದು ಕೃಷ್ಣನ ವ್ಯಕ್ತಿತ್ವದ ವಿಶೇಷತೆ. ದೇವಕಿ ಮತ್ತು ಯಶೋಧೆಯರೆಂಬ ಇಬ್ಬರು ತಾಯಿಯರ ಪುತ್ರನಾಗಿ, ನಂದಗೋಕುಲ ಮತ್ತು ಮಥುರೆಯ ಜನರ ಕಣ್ಮಣಿಯಾಗಿ ಸುದರ್ಶನ ಚಕ್ರ ಧರಿಸಿ ದುಷ್ಟರ ವಿನಾಶಕನಾಗಿ, ಗೋವರ್ಧನ ಗಿರಿಯನ್ನೆತ್ತಿ ಶಿಷ್ಟ ರಕ್ಷಕನಾಗಿ, ಧರ್ಮದ ಸಂಸ್ಥಾಪಕನಾಗಿ, ಭಗವದ್ಗೀತೆ ಬೋಽಸಿದ ಗೀತಾಚಾರ್ಯನಾಗಿ ಭಾರತೀಯ ಸಂಸ್ಕೃತಿಯಲ್ಲಿ ಶ್ರೀಕೃಷ್ಣ ಬಹುಮಾನ್ಯ.
ಮೇಲಿನದು ದ್ವಾಪರ ಯುಗದ ಶ್ರೀಕೃಷ್ಣನ ವಿಷಯವಾದರೆ ಮುಂದಿನದು ಆಧುನಿಕ ಭಾರತದ ಷ್ಣ ಚರಿತ್ರೆ. ಸ್ವತಂತ್ರ ಅಭ್ಯರ್ಥಿಯಾಗಿ ರಾಜಕೀಯ ಪ್ರವೇಶಿಸಿ, ಚುನಾವಣೆ ಗೆದ್ದು ಶಾಸಕರಾಗಿ, ಸಚಿವರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರ ಸಚಿವ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿ… ಅತ್ಯಂತ ಗೌರವಪೂರ್ವಕವಾಗಿ ಸಾರ್ವಜನಿಕ ಜೀವನವನ್ನು ನಿಭಾಯಿಸಿದ ರಾಜಕೀಯ ಮುತ್ಸದ್ದಿ ಎಸ್.ಎಂ. ಕೃಷ್ಣರಿಗೆ ನಮ್ಮ ನಾಡಿನ ಅತ್ಯಂತ ಗೌರವದ ಅವಕಾಶವೊಂದು ಒದಗಿ ಬಂದಿದೆ. ಅದುವೇ ನಾಡಹಬ್ಬ ದಸರಾದ ಉದ್ಘಾಟನೆಯ ಅವಕಾಶ.
ನಾಡಹಬ್ಬ ನವರಾತ್ರಿ ಎಂದರೆ ಹಲವು ಕಾರಣಗಳಿಗೆ ನಮ್ಮ ಬದುಕಿನಲ್ಲಿ ಮಹತ್ವದ್ದು. ಹಬ್ಬಗಳು ಭಾರತೀಯರ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಆದರೆ ದಸರೆಯ ವೈಶಿಷ್ಟ್ಯವೇ ಬೇರೆ. ಇಲ್ಲಿ ಮಾತೆಯರ ಪೂಜೆಗೆ ಪ್ರಾಧಾನ್ಯ. ತಾಯಿ ಸಮಾನಳಾದ ದುರ್ಗೆ ಒಂಭತ್ತು ದಿನಗಳ ಕಾಲ ಜನರಿಂದ ಪೂಜೆಗೊಳಗಾಗುವ ಹಬ್ಬವೇ ನವರಾತ್ರೆ. ಸಂಗೀತ, ನೃತ್ಯ, ಪೂಜೆಯಂತಹ ಸಾಂಸ್ಕೃತಿಕ, ಧಾರ್ಮಿಕ ಕಲಾಪಗಳು ಜನರ ಮನವನ್ನು ರಂಜಿಸುತ್ತದೆ. ವಿಶೇಷವಾಗಿ ನಾಡಹಬ್ಬ ಆಚರಿಸುವ ಮೈಸೂರು ಬೆಳಕಿನ ರಂಗುಗಳಲ್ಲಿ ಓಕುಳಿಯಾಡಿ ಇಂದ್ರನ ಅಮರಾವತಿಯಂತೆ ಕಂಗೊಳಿಸುತ್ತದೆ.
ದೇಶ-ವಿದೇಶಗಳಿಂದ ಬಂದ ಪ್ರವಾಸಿಗರಿಂದ ಮೈಸೂರು ತುಂಬಿ ತುಳುಕುತ್ತದೆ. ಹೀಗೆ ದಸರಾ ನಾವು ಆಚರಿಸುವ ಎಲ್ಲಾ ಹಬ್ಬಗಳಿಂದ ಮಿಗಿಲೆನಿಸಿ
ನಾಡಹಬ್ಬ ಎನಿಸಿಕೊಂಡಿದೆ. ಇಂತಹ ನಾಡಹಬ್ಬದ ಉದ್ಘಾಟನೆಯ ಅವಕಾಶ ಈ ಬಾರಿ ಒಲಿದು ಬಂದಿದ್ದು ಮುತ್ಸದ್ದಿ ಎಸ್.ಎಂ. ಕೃಷ್ಣರಿಗೆ. ಎಸ್.ಎಂ.ಕೃಷ್ಣರೇ ಯಾಕೆ ದಸರಾವನ್ನು ಉದ್ಘಾಟಿಸಬೇಕು ಎಂದು ಕೆಲವು ಟೀಕಾಕಾರರು ಪ್ರಶ್ನಿಸಿದ್ದಾರೆ. ‘ಯಾಕಾಗಬಾರದು’ ಎನ್ನುವುದೇ ಅದಕ್ಕೆ ಉತ್ತರ. ಈವರೆಗೆ ರಾಜಕಾರಣಿಗಳು ಯಾರೂ ದಸರೆಯನ್ನು ಉದ್ಘಾಟಿಸಲಿಲ್ಲ ಎನ್ನುವವರು ಪರಂಪರೆಯನ್ನು ಮುರಿಯುವುದು ತಪ್ಪೇನೂ ಅಲ್ಲ ಎನ್ನುವುದನ್ನು ಗಮನಿಸಬೇಕು. ಕಳಂಕಿತರಿಗೆ, ಬೇಲ್ ಮೇಲೆ ಹೊರಗಿರುವವರಿಗೆ, ಆರೋಪಿಗಳಿಗೆ ದಸರೆಯ ಉದ್ಘಾಟನೆಯ ಅವಕಾಶ ನೀಡಿದ್ದರೆ ಪ್ರಶ್ನಿಸಬಹುದಿತ್ತು.
ಸಕ್ರಿಯ ರಾಜಕಾರಣಿಗಳನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದರೆ ಅದಕ್ಕೆ ರಾಜಕೀಯ ಬಣ್ಣವನ್ನು ಬಳಿಯಬಹುದಿತ್ತು. ಕೃಷ್ಣ ಸದ್ಯಕ್ಕೆ ಬಿಜೆಪಿಯಲ್ಲಿದ್ದರೂ ಸಕ್ರಿಯ ರಾಜಕಾರಣದಲ್ಲಿಲ್ಲ. ಸುದೀರ್ಘ ಕಾಲ ಕೃಷ್ಣ ಅಽಕಾರ ಅನುಭವಿಸಿದ ಪಕ್ಷ ಕಾಂಗ್ರೆಸ್ ಆದ್ದರಿಂದ ಕಾಂಗ್ರೆಸ್ಸಿಗರು ಈ ನಿರ್ಣಯವನ್ನು ಬೆಂಬಲಿಸಬ ಹುದಿತ್ತು. ಪ್ರಸ್ತುತ ಬಿಜೆಪಿಯಲ್ಲಿ ಕೃಷ್ಣ ಇರುವುದರಿಂದ ಬಿಜೆಪಿಯವರು ಬೆಂಬಲಿಸದಿ ರುವುದಿಲ್ಲ. ಮಂಡ್ಯ ಜೆಡಿಎಸ್‌ನ ಭದ್ರಕೋಟೆಯಾಗಿ ರುವುದರಿಂದ, ಕೃಷ್ಣ ಒಕ್ಕಲಿಗ
ಜನಾಂಗಕ್ಕೆ ಸೇರಿರುವುದರಿಂದ ಜೆಡಿಎಸ್ ಪಕ್ಷವೂ ಕೃಷ್ಣರ ಆಯ್ಕೆಯನ್ನು ಟೀಕಿಸುವ ಸಾಧ್ಯತೆಗಳಿಲ್ಲ.
ಇನ್ನು ಎಸ್.ಎಂ.ಕೃಷ್ಣರ ರಾಜಕೀಯ ಜೀವನವನ್ನು ಪರಿಶೀಲಿಸಿದರೂ ಅವರ ನಿಷ್ಕಳಂಕ ವ್ಯಕ್ತಿತ್ವ ಎದ್ದು ಕಾಣುತ್ತದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಎಂಬ ಗ್ರಾಮೀಣ ಪ್ರದೇಶದಲ್ಲಿ ಜಗತ್ತಿನ ಬೆಳಕು ಕಂಡ ಎಸ್.ಎಂ.ಕೃಷ್ಣ, ತಮ್ಮ ರಾಜಕೀಯ ಬದುಕಿನ ಕೊನೆಯ ಹಂತದಲ್ಲಿ ಜಗತ್ತಿಗೇ ಪರಿಚಿತರಾದವರು. ಮೈಸೂರಿನ ಮಹಾರಾಜ ಕಾಲೇಜಿನ ಪದವೀಧರ ರಾಗಿ, ಬೆಂಗಳೂರಿನ ಕಾನೂನು ಕಾಲೇಜಿನಿಂದ ಕಾನೂನು ಪದವಿಯನ್ನೂ ಪಡೆದ ಎಸ್.ಎಂ.ಕೃಷ್ಣ ವಿದೇಶದಲ್ಲಿಯೂ ವ್ಯಾಸಂಗ ಮಾಡಿದವರು.
ವಿದೇಶದಿಂದ ಮರಳಿದವರೇ ರಾಜಕೀಯ ಕ್ಷೇತ್ರಕ್ಕೆ ಧುಮುಕಿ ೧೯೬೨ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪಽಸಿ ಗೆಲುವಿನ ರುಚಿ ಸವಿದರು. ಪ್ರಥಮ ಮುಖಾಮುಖಿಯಲ್ಲಿಯೇ ಇವರು ಪರಾಭವ ಗೊಳಿಸಿದ್ದು ಕಾಂಗ್ರೆಸ್‌ನ ಕೆ.ವಿ.ಶಂಕರೇಗೌಡ ಅವರನ್ನು. ಶಂಕರೇಗೌಡರನ್ನು ಸ್ವತಃ ಜವಾಹರ
ಲಾಲ್ ನೆಹರು ಅವರೇ ಪ್ರಚಾರ ಮಾಡಿ ಬೆಂಬಲಿಸಿದರೂ ಎಸ್.ಎಂ.ಕೃಷ್ಣ ಗೆಲುವು ಸಾಽಸಿದ್ದು ಎಲ್ಲರಿಗೂ ಒಂದು ಅದ್ಭುತ ಎನಿಸಿಕೊಂಡಿತು. ಪ್ರಥಮ ಪ್ರಯತ್ನದಲ್ಲಿಯೇ ಗೆಲುವು ಸಾಽಸಿದ ಕೃಷ್ಣ ನಂತರ ಇಟ್ಟಿದ್ದೆಲ್ಲವೂ ಯಶಸ್ವೀ ಹೆಜ್ಜೆಗಳೇ. ಬಳಿಕ ಕಾಂಗ್ರೆಸ್ ಸೇರಿದ ಎಸ್.ಎಂ.ಕೃಷ್ಣ ೧೯೭೧ ಮತ್ತು ೧೯೮೦ರಲ್ಲಿ ಚುನಾವಣಾ ಸಮರಗಳಲ್ಲಿ ಜಯಶಾಲಿಯಾದರು. ಕೃಷ್ಣರ ಕಾಲದಲ್ಲಿ ಮಂಡ್ಯ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿಕೊಂಡಿದ್ದು ಕೃಷ್ಣರ ಜನಾನುರಾಗದ ದ್ಯೋತಕವಾಗಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಮಧ್ಯೆ ಕೇಂದ್ರ ಮತ್ತು ರಾಜ್ಯಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿಭಾಯಿಸಿದ ಎಸ್.ಎಂ.ಕೃಷ್ಣ, ೧೯೯೯ರಲ್ಲಿ ಕರ್ನಾಟಕ ಕಾಂಗ್ರೆಸ್‌ನ ಅಧ್ಯಕ್ಷರಾಗಿ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷವನ್ನು ವಿಜಯದತ್ತ ಮುನ್ನಡೆಸಿದರು.
ಸಹಜವಾಗಿಯೇ ಮುಖ್ಯಮಂತ್ರಿ ಹುದ್ದೆ ಕೃಷ್ಣರಿಗೆ ಒಲಿದು ಬಂತು. ೧೯೯೯ರಿಂದ ೨೦೦೪ರ ತನಕ ಮುಖ್ಯಮಂತ್ರಿ ಯಾಗಿದ್ದ ಅವಽ ಕೃಷ್ಣರ ರಾಜಕೀಯ ಬದುಕಿ
‘ಸುವರ್ಣ ಕಾಲ’ ಎಂದೇ ಗುರುತಿಸಲ್ಪಡುತ್ತದೆ. ಬೆಂಗಳೂರನ್ನು ಸಿಂಗಾಪುರವನ್ನಾಗಿಸುವ ಕನಸು ಕಂಡ ಕೃಷ್ಣ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿ ದರು. ವಿದ್ಯುತ್ ನಿಗಮಗಳ ಸುಧಾರಣೆ, ಭೂಮಿಯ ದಾಖಲೆಗಳ ಡಿಜಿಟಲೀಕರಣ ಸೇರಿದಂತೆ ನಾಗರಿಕರಿಗೆ ಅನುಕೂಲಕರವಾದ ಹಲವಾರು ಯೋಜನೆಗಳನ್ನು ಜಾರಿಗೆ ತಂದರು. ಬೆಂಗಳೂರು ನಗರ ಐಟಿಬಿಟಿ ಸಿಟಿ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗುವುದರ ಹಿಂದೆ ಕೃಷ್ಣರ ಯೋಜನಾ ಶಕ್ತಿ ಮತ್ತು ಇಚ್ಛಾಶಕ್ತಿಗಳು ಕೆಲಸ ಮಾಡಿವೆ.
ಇಷ್ಟಲ್ಲದೇ ಕೇಂದ್ರದ ವಿದೇಶಾಂಗ ಸಚಿವರಾಗಿಯೂ ಮನಮೋಹನ್ ಸಿಂಗ್ ಸರಕಾರದಲ್ಲಿ ಕೆಲಸ ಮಾಡಿದ್ದಾರೆ. ಮಹಾರಾಷ್ಟ್ರದ ಗವರ್ನರ್ ಆಗಿ
ಕಾರ್ಯ ನಿರ್ವಹಿಸಿದ್ದಾರೆ. ೫ ದಶಕಗಳಿಗೂ ಹೆಚ್ಚು ಸಮಯ ಸಾರ್ವಜನಿಕ ಜೀವನದಲ್ಲಿದ್ದ ಕೃಷ್ಣ ತಮ್ಮ ವರ್ಚಸ್ಸಿಗೆ ಯಾವ ಕಳಂಕವನ್ನೂ ತಂದುಕೊಳ್ಳಲಿಲ್ಲ.
ಮನುಷ್ಯನ ವ್ಯಕ್ತಿತ್ವವನ್ನು ಪರೀಕ್ಷಿಸಬೇಕಿದ್ದರೆ ಅಽ ಕಾರ ಕೊಟ್ಟು ನೋಡು ಎಂಬ ಮಾತಿದೆ. ಸುದೀರ್ಘ ಅವಽಯ ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರದ
ಸುಳಿಯಲ್ಲಿ ಸಿಲುಕದೆ ನಿಷ್ಕಳಂಕ ವ್ಯಕ್ತಿತ್ವವನ್ನು ಉಳಿಸಿ ಕೊಂಡಿದ್ದು ಕೃಷ್ಣರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ.
ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಹೋಗಲಿಲ್ಲ ಎನ್ನುವ ಕಾರಣಕ್ಕೆ ಬಿಜೆಪಿಗೆ ಬಂದ ಕೃಷ್ಣ ಬಳಿಕ ಸಕ್ರಿಯ ರಾಜಕಾರಣದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಆದರೆ
ಇದ್ದಷ್ಟು ದಿನವೂ ತಮ್ಮನ್ನು ತಾವು ಸ್ವಚ್ಛವಾಗಿ ಉಳಿಸಿಕೊಂಡಿದ್ದ ಕೃಷ್ಣ, ಅಷ್ಟಿಷ್ಟು ಬರೆದವರೂ ಹೌದು. ತಮ್ಮ ಆತ್ಮಕಥೆಯನ್ನು ಸ್ಮತಿ ವಾಹಿನಿ ಎನ್ನುವ
ಹೆಸರಿನಲ್ಲಿ ಹೊರತಂದಿದ್ದಾರೆ. ಮುಖ್ಯಮಂತ್ರಿ ಯಾಗಿದ್ದಾಗ ಹಲವಾರು ಆಸಕ್ತಿಕರ ಲೇಖನಗಳನ್ನು ಬರೆದಿದ್ದಾರೆ. ಕೃಷ್ಣರಿಗೆ ಸಾಹಿತ್ಯದಲ್ಲಿ ಅಭಿರುಚಿ ಇದೆ
ಎನ್ನುವುದಕ್ಕೆ ಇದೇ ಸಾಕ್ಷಿ. ಹೀಗಿರುವಾಗ ಕೃಷ್ಣರಂ ತಹ ಮುತ್ಸದ್ದಿ ನಾಡಹಬ್ಬ ದಸರೆಯನ್ನು ಉದ್ಘಾಟಿಸುವುದನ್ನು ಪ್ರಶ್ನಿಸುವುದು ಖಂಡಿತ ಸಮರ್ಥನೀ
ಯವಲ್ಲ. ಇತರ ಪಕ್ಷಗಳು ಅಽಕಾರದಲ್ಲಿದ್ದಾಗ ಅವರ ಮರ್ಜಿಗೆ ತಕ್ಕಂತೆ ನಾಡಹಬ್ಬ ಉದ್ಘಾಟಕರ ಆಯ್ಕೆಯಾಗಿದ್ದು ಕರ್ನಾಟಕದ ಸಮಸ್ತ ಜನರಿಗೂ
ಗೊತ್ತು. ಹಾಗಿದ್ದೂ ಅದ್ಯಾವುದೂ ಆಕ್ಷೇಪಕ್ಕೆ ಕಾರಣವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನಾಡಹಬ್ಬ ದಸರಾದ ಉದ್ಘಾಟನೆಗೆ ಎಸ್.ಎಂ.ಕೃಷ್ಣರ ಆಯ್ಕೆ ಸಮರ್ಥನೀಯವೇ ಹೌದು.
ನಾಡಹಬ್ಬದ ಉದ್ಘಾಟನೆಗೆ ಅವರೊಂದಿಗೆ ಕನ್ನಡಿಗರೆಲ್ಲ ಇದ್ದೇವೆ ಎನ್ನುವುದು ನಮಗೆ ಧನ್ಯತೆಯ, ಹೆಮ್ಮೆಯ ವಿಷಯ. ಜಾತಿ, ಮತ, ಪಕ್ಷಭೇದವಿಲ್ಲದೆ ಕನ್ನಡಿಗರೆಲ್ಲರೂ ಸಂಭ್ರಮದಿಂದ ಆಚರಿಸುವ ಮೈಸೂರು ದಸರಾ ನಮ್ಮೆಲ್ಲರ ಅಭಿಮಾನದ ಪ್ರತೀಕ. ಹಬ್ಬವನ್ನು ಈ ಬಾರಿ ಸರಳವಾಗಿಯಾದರೂ ಸಂತಸದಿಂದ ಆಚರಿಸೋಣ. ದೇವಿಯ ಕೃಪೆಗೆ ಪಾತ್ರರಾಗೋಣ. ಕೊನೆಯದಾಗಿ ಮತ್ತೊಂದು ವಿಷಯ ಹೇಳಬೇಕು ಎಂದರೆ ಅಽಕಾರ ರಾಜಕಾರಣದಿಂದ ದೂರ ಉಳಿದಿದ್ದರು ಕರೋನದ ಎರಡನೇಯ ಅಲೆಯ ಸಂದರ್ಭದಲ್ಲಿ ಎಸ್.ಎಂಕೃಷ್ಣರ ವರು ತಮ್ಮ ಸ್ವಂತ ಹಣದಿಂದ ಮಂಡ್ಯ ಜಿಲ್ಲೆ ಆಕ್ಸಿಜ ನ್ ಸಹಿತ ಅನೇಕ ಸಹಾಯವನ್ನ ತೆರೆ ಮರೆಯಲ್ಲಿ ಮಾಡಿದ್ದಾರೆ ಹಾಗಾಗಿ ಎಸ್ ಎಂಕೃಷ್ಣರವರನ್ನ ದಸರಾ ಉದ್ಘಾಟನೆಯ ಅತಿಥಿಯಾಗಿ ಆಯ್ಕೆ ನಿರ್ಧಾರವನ್ನ ನಾವು ಸ್ವಾಗತಿಸಬೇಕು,ಗೌರವಿಸಬೇಕು..!!