ನಾಟಕೀಯ
ರಮಾನಂದ ಶರ್ಮಾ
ಹಿಂದುಗಳ ಆರಾಧ್ಯ ದೇವರಾದ ಪೂರಿ ಜಗನ್ನಾಥ ಪ್ರಧಾನಿ ಮೋದಿಯವರ ಭಕ್ತರಾಗಿದ್ದರು ಎಂಬುವ ಭಾರತೀಯ ಜನತಾ ಪಕ್ಷದ ಹಿರಿಯ ಧುರೀಣ, ಭಾಜಪದ ರಾಷ್ಟ್ರೀಯ ವಕ್ತಾರ ಮತ್ತು ಲೋಕಸಭೆ ಆಭ್ಯರ್ಥಿ ಸಂಬಿತ್ ಪಾತ್ರರ ಹೇಳಿಕೆ ದೇಶಾದ್ಯಂತ ಭಾರೀ ವೈರಲ್ ಅಗಿದ್ದು, ನಿರೀಕ್ಷೆಯಂತೆ ಖಂಡನೆಗೆ
ಗುರಿಯಾಗಿದೆ.
ಭಾರತದ ರಾಜಕೀಯದಲ್ಲಿ ಮನೆಮಾತಾಗಿರುವ ವ್ಯಕ್ತಿ ಪೂಜೆಯ ಅತಿರೇಕ ಇದು ಎಂದು ರಾಜಕೀಯ ವಿಶ್ಲೇಷಕರು, ಪ್ರeವಂತರು ಮತ್ತು ಜನಸಾಮಾನ್ಯ ರು ಇವರ ಹೇಳಿಕೆ ವಿರುದ್ದ ಅಕ್ರೋಶ ವ್ಯಕ್ತಮಾಡಿzರೆ. ರಾಜಕಾರಣದಲ್ಲಿ ಆಧಿಕಾರದಲ್ಲಿ ಇರುವವರನ್ನು ನೀನೇ ಇಂದ್ರ- ಚಂದ್ರ ಎಂದು ಹಾಡಿ ಅಟ್ಟಕ್ಕೇರಿಸಿ ಅಟ್ಟಕ್ಕೆ ಏರುವುದು ತೀರಾ ಮಾಮೂಲು ಮತ್ತು ಅದು ಪಕ್ಷ ಭೇದವಿಲ್ಲದೆ ದೇಶದಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ. ಅದರೆ, ಅದು ಒಂದು ಮಿತಿಯೊಳಗೆ ಇದ್ದರೆ ಅದಕ್ಕೊಂದು ಅರ್ಥ ಇರುತ್ತದೆ ಮತ್ತು ಲೇವಡಿಗೆ ಅಹಾರವಾಗುವುದಿಲ್ಲ. ಅದರೆ ಇದು ಇತ್ತೀಚೆಗೆ ಸಹನೀಯ ಮೇರೆಯನ್ನು ಮೀರುತ್ತಿದೆ ಎಂದು ಪ್ರeವಂತರು ಬೇಸರಿಸುತ್ತಿದ್ದಾರೆ.
ಸಂಬಿತ್ ಪಾತ್ರ ತಮ್ಮ ಹೇಳಿಕೆಯ ಪರಿಣಾಮ ಮತ್ತು ದುಷಲವನ್ನು ತಕ್ಷಣ ಗೃಹಿಸಿ ತಮ್ಮಹೇಳಿಕೆಗೆ ಕ್ಷಮೆಯಾಚಿಸಿ ಮೂರು ದಿನಗಳ ಉಪವಾಸಮಾಡಿ ಪಶ್ಚಾತ್ತಾಪ ವ್ಯಕ್ತ ಪಡಿಸಿದ್ದಾರಂತೆ. ಇದು ಸದ್ಯ ಮುಗಿದ ಅಧ್ಯಾಯದಂತೆ ಕಾಣುತ್ತಿದ್ದು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ ಮತ್ತು ಮುಜುಗರದಿಂದ ಪಾರಾಗಿದ್ದಾರೆ. ಇಂದು ವ್ಯಕ್ತಿ ಪೂಜೆ ಮತ್ತು ಪಕ್ಷ ಪೂಜೆ ಟ್ರೆಂಡ್ ಹೆಚ್ಚಾಗಿ ಕಾಣುತ್ತಿರುವುದರಿಂದ, ಸಂಬಿತ್ ಪಾತ್ರರ ಸ್ಪಷ್ಟೀಕರಣವನ್ನು ಜನರು ಡಿಸ್ಕೌಂಟ್ ಮಾಡುವ ಸಾದ್ಯತೆಯೇ ಹೆಚ್ಚು. ಪಕ್ಷದ ಕೆಳ ಸ್ತರದ ಧುರೀಣರಿಂದ ಇಂಥಹ ಹೇಳಿಕೆಗಳು ಬಂದರೆ ಅದು ಹೆಡ್ ಲೈನ್ ಅಗುವುದಿಲ್ಲ ಮತ್ತು ಯಾರೂ ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸುವುದಿಲ್ಲ.
ಅಂತೆಯೇ ವೈರಲ್ ಅಗಿ ಸಂಚಲನ ಮೂಡಿಸುವುದಿಲ್ಲ. ಅದರೆ, ಜವಾಬ್ದಾರಿಯುತ ಹಿರಿಯ ಧುರೀಣರು ಮಾಡಿದರೆ ಅದರ ಪರಿಣಾಮವೇ ಬೇರೆ.
ಜಗತ್ತಿನಲ್ಲಿ ದೇವರು, ಧರ್ಮ, ಸಂಸ್ಕೃತಿ,ಅಚಾರ-ವಿಚಾರ ಪರಂಪರೆ, ಜಾತಿಗಳಿಗೆ ವಿಶೇಷ ಸ್ಥಾನಮಾನ ಮತು ಗೌರವ ಇದೆ. ಯಾರು ಎಷ್ಟೇ ವಿದ್ಯಾ ವಂತರಾಗಿರಲಿ, ಸಂಸ್ಕಾರವಂತರಾಗಿರಲಿ, ಆಧುನಿಕ ವಿಚಾರಧಾರೆಯವರಾಗಲಿ ಇವುಗಳಿಗೆ ಅಗುವ ಅ ಪಚಾರವನ್ನು ಸಹಿಸುವುದಿಲ್ಲ. ಹುಲು ಮಾನವ ರನ್ನು ದೇವರಿಗಿಂತ ದೊಡ್ಡವರನ್ನಾಗಿ ನೋಡುವುದನ್ನು, ದೇವರಿಗೆ ಹೋಲಿಸುವುದನ್ನು ಕೆಟ್ಟ ಕನಸಿನಲ್ಲೂ ಸಹಿಸುವುದಿಲ್ಲ. ಈ ನಿಟ್ಟಿನಲ್ಲಿ ಸಮರ್ಥಿಸಿ ಕೊಳ್ಳುವ ಪ್ರಯತ್ನ ಮಾಡಿದರೆ, ಪಶ್ಚಾತ್ತಾಪ ಪಡದಿದ್ದರೆ ದುಬಾರಿ ಬೆಲೆ ನೀಡಬೇಕಾಗುತ್ತದೆ.
ಇದಕ್ಕೆ ಈ ದೇಶದಲ್ಲಿ ಸಾಕಷ್ಟು ನಿದರ್ಶನಗಳಿವೆ. ಸಂಬಿತ್ ಪಾತ್ರ ಹಿರಿಯ ಮತ್ತು ಅನುಭವಿ ರಾಜಕಾರಿಣಿಯಾಗಿದ್ದು ತಮ್ಮ ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಿದ್ದಾರೆ. ಹಾಗೆಯೇ ನ್ಯೂಸ್ ಚಾನೆಲ್‌ಗಳ ಚರ್ಚೆಯಲ್ಲಿ ಪಕ್ಷದ ಪರವಾಗಿ ಪರಿಣಾಮಕಾರಿಯಾಗಿ ವಿಷಯವನ್ನು ಮಂಡಿಸಿದ ಖ್ಯಾತಿಯನ್ನೂ ಹೊಂದಿದ್ದಾರೆ. ಅವರೆಂದೂ ಮಾತಿನಲ್ಲಿ ಹಳಿ ತಪ್ಪಿದ ಉದಾಹರಣೆ ಕಾಣುವುದಿಲ್ಲ. ಅವರ ಸದ್ಯದ ಹೇಳಿಕೆ ಮಾತಿನ ಭರದಲ್ಲಿ ಅಗಿರಬಹುದಾದ ಅಚಾತುರ್ಯ ಇರಬಹುದು ಅಥವಾ ಶಬ್ದಗಳ ಅದಲು ಬದಲಾದ ಪ್ರಮೇಯವೂ ಇರಬಹುದು.
ಸಾರ್ವಜನಿಕ ಭಾಷಣಗಳನ್ನು ಮಾಡುವಾಗ ಇವು ತೀರಾ ಸಾಮಾನ್ಯ ಎಡವಟ್ಟುಗಳು. ಪಾಟ್ನಾದಲ್ಲಿನ ಡೆದ ಒಂದು ಚುನಾವಣಾ ಸಭೆಯಲ್ಲಿ ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ಬಾರಿ ಎನ್‌ಡಿಎ ೪೦೦೦ ಸೀಟುಗಳನ್ನು ಗೆಲ್ಲಲಿದೆ ಎಂದು ಹೇಳಿ ಟ್ರೋಲ್‌ಗೆ ಅಹುತಿಯಾಗಿದ್ದರು. ಇಂಡಿಯಾ ಒಕ್ಕೂಟದ ಮಲ್ಲಿಕಾರ್ಜುನ ಖರ್ಗೆಯವರು ಎನ್‌ಡಿಎ ಗೆ ೪೦೦ ಸೀಟುಗಳು ನಿರಾಯಾಸವಾಗಿ ದೊರಕಲಿದೆ ಎಂದು ಹೇಳಿ ನಗೆಪಾಟಲಿಗೆ ಈಡಾಗಿದ್ದರು. ಕೆಲವರು ತಮ್ಮ ತಪ್ಪನ್ನು ಕೂಡಲೇ ತಿದ್ದಿಕೊಂಡು, ವಿಷಾದಿಸಿ ಪ್ರಕರಣ ವಿವಾದವಾಗದಂತೆ ತೆರೆ ಎಳೆಯುತ್ತಾರೆ.
ಕೆಲವರು ತಮ್ಮನ್ನು ತಪ್ಪಾಗಿ ಅರ್ಥೈಸಲಾಗಿದೆ, ತಾವು ಹಾಗೇ ಹೇಳಲೇ ಇಲ್ಲ, ತಾವು ಅ ಅರ್ಥದಲ್ಲಿ ಹೇಳಲಿಲ್ಲ ಮುಂತಾಗಿ ಮೊಂಡುವಾದ ಮಾಡುತ್ತಾರೆ. ತಪ್ಪು ಮಾಡುವುದು ಮನುಷ್ಯನ ಸಹಜ ದರ್ಮ. ಅದನ್ನು ಮನ್ನಿಸಿ ಸರಿ ಪಡಿಸಿಕೊಂಡು ಮುಂದೆ ಹೋಗುವುದು ದೊಡ್ಡತನ. ಸಂಬಿತ್ ಪಾತ್ರ ಇದನ್ನೇ ಮಾಡಿದ್ದಾರೆ. ವ್ಯಕ್ತಿ ಪೂಜೆಗೆ ಈ ದೇಶದಲ್ಲಿ ಸುದೀರ್ಘ ಇತಿಹಾಸ ಇದೆ. ಮಹಾರಾಜರ ಕಾಲದಲ್ಲಿ ಅಸ್ಥಾನದಲ್ಲಿ ರಾಜರ ದರ್ಭಾರ ಅರಂಭ ವಾಗುವುದೇ ರಾಜಭಟರು(ಹೊಗಳು ಭಟರು) ರಾಜರನ್ನು ಹೊಗಳಿ ಸ್ವಾಗತಿಸುವುದರಿಂದ.
ರಾಜಾಧಿರಾಜ, ರಾಜ ತ್ರೈಲೋಕ್ಯ ಮುಂತಾದ ಬಿರುದು ಬಾವಲಿಗಳು ಹತ್ತಾರು ಅಲಂಕಾರಿಕ ಪದಪುಂಜಗಳು ಮುಗಿಲು ಮುಟ್ಟುತ್ತಿದ್ದವು. ರಾಜರಿಗೆ ಮಂತ್ರಿಮಹೋದಯರು ಅರ್ಪಿಸುವ ಭಿನ್ನವತ್ತಳೆಗಳಲ್ಲಿ ಮಹಾರಾಜರನ್ನು ಹಾಡಿ ಹೊಗಳುವುದೇ ಹೆಚ್ಚಾಗಿರುತ್ತಿತ್ತಂತೆ. ಹೀಗೆ ಹಾಡಿ ಹೊಗಳಿದವರಲ್ಲಿ ಅನೇಕರಿಗೆ ಕೈತುಂಬಾ ಬಕ್ಷೀಸು ಸಿಗುತ್ತಿತ್ತಂತೆ. ಇಂಥಹ ಬಕ್ಷೀಸುಗಳಿಗಾಗಿ ಹಾಡಿಹೊಗಳುವವರೂ ಇದ್ದರಂತೆ. ಈಗ ಇಂತಹ ಟ್ರೆಂಡ್ ಕಾಣದಿದ್ದರೂ ಅಽಕಾರದಲ್ಲಿ ಇದ್ದವರನ್ನು ಸುಪ್ರೀತಗೊಳಸಿ ನಿನ್ನೊಲುಮೆ ನನಗಿರಲಿ ಎಂದು ಕೇಳುವ ಪರಿ ಅಥವಾ ಖಯಾಲಿ ಹೆಚ್ಚಿದೆ ಎನ್ನಲಾಗುತ್ತದೆ.
ಭಾರತದ ರಾಜಕಾರಣದಲ್ಲಿ ಈ ರೀತಿಯ ವ್ಯಕ್ತಿ ಪೂಜೆ ಅನಾವರಣಗೊಂಡಿದ್ದು ಇಂದಿರಾಗಾಂಧಿಯವರ ಕಾಲದಲ್ಲಿ. ಇದು ತುರ್ತು ಪರಿಸ್ಥಿತಿಯ ಕಾಲದಲ್ಲಿ ಉತ್ತುಂಗದಲ್ಲಿ ಇತ್ತು. ಇದು ಯಾವ ಮಟ್ಟದಲ್ಲಿ ಇತ್ತು ಎಂದರೆ ೧೯೭೭ ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಡಿ.ಕೆ.ಬರುವಾ ಅವರು ಇಂದಿರಾ ಈಜ್ ಇಂಡಿಯಾ, ಇಂಡಿಯಾ ಈಜ್ ಇಂದಿರಾ ಎಂದು ಹೇಳಿಕೆ ನೀಡಿ ನಗೆ ಪಾಟಲಿಗೀಡಾಗಿದ್ದರು. ಇದನ್ನು ದೇಶಾದ್ಯಂತ ಪ್ರಜ್ಞಾವಂತರು ಮತ್ತು ಜನಸಾಮಾನ್ಯರು ವಿರೋಧಿಸಿದ್ದರು ಅಂದು ಇಂದಿನಂತೆ ಸಾಮಾಜಿಕ ಜಾಲತಾಣ ಇಲ್ಲದಿದ್ದು ಮತ್ತು ಮುದ್ರಣ ಮಾಧ್ಯಮ ಸೆನ್ಸಾರ್‌ಗೆ
ಒಳಪಟ್ಟಿದ್ದರಿಂದ ಅವರ ಹೇಳಿಕೆ ವೈರಲ್ ಆಗಿಲ್ಲ ಮತ್ತು ಟ್ರೋಲ್ ಕೂಡಾ ಅಗಿರಲಿಲ್ಲ.
ಅಂತೆಯೇ ಅವರು ಭಾರೀ ಮುಜುಗರದಿಂದ ಪಾರಾಗಿದ್ದರು. ಮೊದಲಿನ ಸಾಂದ್ರತೆ ಇರದಿದ್ದರೂ ಇಂದಿರಾಗಾಂಧಿ ಅಥವಾ ಇಂದಿರಾ ಕುಟುಂಬ
ಎನ್ನುವ ಖಯಾಲಿ ಈಗಲೂ ಇದೆ. ಮತ ಬಿಕ್ಷೆ ಕೇಳುವಾಗ ಇದು ಮೇಲ್ಮೆಗೆ ಬರುತ್ತದೆ. ಜನರು ಇಂದಿರಾ ಗಾಂಧಿಗೆ ಮತ ಹಾಕುತ್ತಿದ್ದರೆ ವಿನಾಃ ಕಾಂಗ್ರೆಸ್ ಪಕ್ಷಕ್ಕೆ ಅಲ್ಲ ಎಂದು ಹೇಳಲಾಗುತ್ತಿತ್ತು. ಪಶ್ಚಿಮ ಬಂಗಾಲದಲ್ಲಿ ಜ್ಯೋತಿ ಬಸು ಇರುವವರೆಗೆ ಅವರ ಸ್ತುತಿ ಸದಾ ನಡೆಯುತ್ತಿತ್ತು. ಪ್ರಸ್ತುತ ಮೋದಿಗೆ ಮತ ಎನ್ನುವಂತೆ ಆ ಕಾಲದಲ್ಲಿ ಜ್ಯೋತಿದಾದಾಗೆ ಮತ ಎನ್ನುತ್ತಿದ್ದರು. ಸಿಪಿಎಮ್ ಎನ್ನುವುದು ಕೇವಲ ನೆಪ ಮಾತ್ರಕ್ಕೆ ಇರುತ್ತಿತ್ತು. ವಿಶೇಷವೆಂದರೆ ವ್ಯಕ್ತಿ ಪೂಜೆ ಅಲ್ಲಿ ಅಷ್ಟು ಅಳವಾಗಿ ಇತ್ತು ಎಂದರೆ, ಜ್ಯೋತಿ ಬಸು ನಂತರ ಸಿಪಿಎಮ್‌ನ ಕುಡುಗೋಲು ಅಲ್ಲಿ ಮೊಂಡಾಗಿದೆ.
ತಮಿಳುನಾಡಿನಲ್ಲಿ ಎಮ.ಜಿ.ಅರ್ ಮತ್ತು ಜಯಲಲಿತಾ ಕಾಲದಲ್ಲಿ ವ್ಯಕ್ತಿ ಪೂಜೆ ತಾರಕಕ್ಕೇರಿತ್ತು. ಅ ಕಾಲ ದಲ್ಲಿ ತಮಿಳರು ಪಕ್ಷಕ್ಕಿಂತ ವ್ಯಕ್ತಿಯನ್ನು ನೋಡಿಯೇ ಮತ ಹಾಕುತ್ತಿದ್ದರಂತೆ. ಅವಿಭಜಿತ ಆಂಧ್ರದಲ್ಲಿ ಎನ್.ಟಿ .ಅರ್., ಚರಿ ಸ್ಮಾವೇ ತೆಲುಗು ದೇಶವನ್ನು ಪಕ್ಷವನ್ನು ಗದ್ದುಗೆ ಏರಿಸಿತ್ತಂತೆ.
ಶ್ರೀಕೃಷ್ಣನ ಪಾತ್ರದಲ್ಲಿ ಮಿಂಚಿ ಜನರ ಹೃದಯಲ್ಲಿ ಮೆರೆದ ಅವರನ್ನು ಜನರು ಶ್ರೀಕೃಷ್ಣನಂತೆ ಭಾವಿಸಿದ್ದರು. ತ್ರಿಪುರಾ ರಾಜ್ಯದಲ್ಲಿ ಮಾಣಿಕ ಸರ್ಕಾರ್‌ಗೆ ಜನರು ತೋರಿದ ಒಲುಮೆ, ಸಿಪಿಎಮ್‌ನ್ನು ಬಹುಕಾಲ ಗದ್ದುಗೆಯಲ್ಲಿ ಕುಳಿಸಿತ್ತಂತೆ. ಓಡಿಸ್ಸಾದಲ್ಲಿ ಬಿಜೆಡಿ ಪಕ್ಷ ಹೆಸರಿಗೆ ಮಾತ್ರ ಇದ್ದು ಜನರು ಮತ ಹಾಕುವುದು ಪಾಟ್ನಾಯಕ ಕುಟುಂಬದ ಹೆಸರಿನಲ್ಲಿ. ಶೇಖ್ ಅಬ್ದು ಇರುವವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ ಫರೆನ್ಸ್ ಹೆಸರಿನಲ್ಲಿ ಅವರಿಗೆ ಮತ ಹಾಕುತ್ತಿದ್ದರು.
ಪಕ್ಷ ಕೇವಲ ಹೆಸರಿಗೆ ಮಾತ್ರವಾಗಿತ್ತು. ಇದೂ ವ್ಯಕ್ತಿ ಪೂಜೆ ಯಲ್ಲವೇ? ಪಕ್ಷ ರಾಜಕಾರಣದಲ್ಲಿ ಪ್ರಭಾವಿಗಳು, ಮಾತುಗಾರರು, ಅಕರ್ಷಕ ವ್ಯಕ್ತಿತ್ವದವರು ಎಲ್ಲರನ್ನೂ ಒಟ್ಟು ಗೂಡಿಸಿಕೊಂಡು ಹೋಗುವವರು, ಮತದಾರರನ್ನು ಹಿಡಿದಿಟ್ಟು ಕೊಳ್ಳುವವರು, ಮತಪೆಟ್ಟಿಗೆಯನ್ನು ನಿರಾಯಾಸವಾಗಿ ತುಂಬಿಸಿ ಕೊಡುವವರು ಬೇಡಿಕೆಯಲ್ಲಿರುತ್ತಾರೆ. ಅಂತೆಯೇ ಅವರ ಹಿಂದೆ ಹಿಂಡು ಹಿಂಡಾಗಿ ಜನರಿರುತ್ತಾರೆ. ರಾಜಕೀಯದಲ್ಲಿ ತಮ್ಮ ಭವಿಷ್ಯವನ್ನು ಉಜ್ವಲ ಗೊಳಿಸಿಕೊಳ್ಳಲು ಅವರ ಹಿಂದೆ ಹಲವರು ಒಡಾಡುತ್ತಿರುತ್ತಾರೆ, ಅವರನ್ನು ಸದಾ ಹೊಗಳಿ ಅಟ್ಟಕ್ಕೇರಿಸಿ ಸಮಯ ಬಂದಾಗ ಗಾಳ ಹಾಕುತ್ತಾರೆ. ಮತ್ತು ತಮ್ಮ ಆಶಯವನ್ನು ಈಡೇರಿಸಿಕೊಳ್ಳುತ್ತಾರೆ.
ಇದೇ ರಾಜಕಾರಣದಲ್ಲಿ ವ್ಯಕ್ತಿ ಪೂಜೆಯ ಹಿಂದಿನ ಉದ್ದೇಶ. ಒಬ್ಬ ರಾಜಕಾರಣಿ ಇನ್ನೊಬ್ಬ ರಾಜಕಾರಣಿಯನ್ನು ಒಂದು ಮಿತಿಯನ್ನು ಮೀರಿ ಹೊಗಳು ವಾಗ ಅದರ ಹಿಂದೆ ಅವರ ಸ್ವಹಿ ತ ಇರುತ್ತದೆ. ಅವರು ಹೊಗಳಿಕೆಯಲ್ಲಿ ಬಳಸಿದ ಪದ ಪುಂಜಗಳನ್ನು ವಿಶೇಷವಾಗಿ ಪರಿಗಣಿಸುವಂತಿಲ್ಲ. ಅದಕ್ಕೆ ಅವರ ಬದ್ಧತೆ ಇರುವುದಿಲ್ಲ. ಅದು ಆಶಯಗಳನ್ನು ಈಡೇರಿಸಿಕೊಳ್ಳುವ ಕವರ್ ಅಪರೇಷನ್ ಮಾತ್ರ.
(ಲೇಖಕರು: ಅರ್ಥಿಕ ಮತು ರಾಜಕೀಯ ವಿಶ್ಲೇಷಕರು)