Sunday, 15th December 2024

ಸಂಸ್ಕೃತ ವಿರೋಧ: ಜ್ಞಾನದಿಂದ ಶೂದ್ರರ ವಂಚಿಸುವ ಹುನ್ನಾರ

ಪ್ರಚಲಿತ

ಚಂದ್ರಶೇಖರ ನಂಜನಗೂಡು

ಕನ್ನಡವನ್ನು ಮುಂದಿಟ್ಟುಕೊಂಡು ಬಡಮಕ್ಕಳು ಇಂಗ್ಲಿಷ್ , ಹಿಂದಿ ಕಲಿಕೆಯಿಂದ ವಂಚಿರಾಗುವಂತೆ ಮಾಡುತ್ತಿರುವ ಕಪಟಿಗಳು ತಮ್ಮ ಮಕ್ಕಳನ್ನು ಮಾತ್ರ ಆಂಗ್ಲ ಮಾಧ್ಯಮದ ಶಾಲೆಯ ಓದಿಸುತ್ತಾರೆ! ಇಂಥವರೇ ಇಂದು ಕನ್ನಡ ಶಾಲೆಗಳನ್ನು ಮುಂದಿಟ್ಟು ಸಂಸ್ಕೃತ ಕಲಿಕೆ ಆಸಕ್ತಿ ಹೊಂದಿದ ಶೂದ್ರರನ್ನು ಜ್ಞಾನದಿಂದ ವಂಚಿಸಲು ಯತ್ನಿಸುತ್ತಿದ್ದಾರೆ.

ನಿಜಕ್ಕೂ ಸಂಸ್ಕೃತ ಕನ್ನಡಕ್ಕೆ, ಕನ್ನಡಿಗರಿಗೆ ಪೂರಕವೊ, ಮಾರಕವೊ ಎಂಬುದನ್ನು ಪ್ರಜ್ಞಾವಂತ ಕನ್ನಡಿಗರು ಮೊದಲು ಗುರುತಿಸಬೇಕಾಗಿದೆ. ಒಂದಷ್ಟು ಜನ ಸ್ವಹಿತಾಸಕ್ತಿಗಾಗಿ ಬೇಡವೆಂದು ಭಾವನಾತ್ಮಕವಾಗಿ ಹೇಳಿದ ಮಾತ್ರಕ್ಕೆ ಬೇಡ ಎಂದೋ, ಬೇಕು ಎಂದೋ ಟ್ವೀಟ್ ಮಾಡಿ ಸುಮ್ಮನಾಗದೇ, ವಿಷಯವನ್ನು ಒರೆಗೆ ಹಚ್ಚಿ ವಾಸ್ತವವನ್ನು ತಿಳಿಯುವ ಪ್ರಯತ್ನ ಮಾಡಬೇಕು.

ಸಂಸ್ಕೃತದಿಂದ ಕನ್ನಡಕ್ಕೆ ತೊಂದರೆ ಆಗುತ್ತಿದೆಯಾ? ಸಂಸ್ಕೃತದ ಹೇರಿಕೆ ಕನ್ನಡದ ಮೇಲೆ ನಡೆಯುತ್ತಿದೆ ಯಾ? ಸಂಸ್ಕೃತ ಭಾಷಿಕರ ದಬ್ಬಾಳಿಕೆ ಹೆಚ್ಚಾಗಿ ದೆಯಾ? ಸಂಸ್ಕೃತ ಭಾಷಿಗರು ಕನ್ನಡಿಗರ ಉದ್ಯೋಗವನ್ನು ಕಸಿದುಕೊಳ್ಳುತ್ತಿzರಾ? ಅಥವಾ ಕನ್ನಡ ಶಾಲೆಗಳಿಗೆ ಅನುದಾನ ನಿಲ್ಲಿಸಿ ಸಂಸ್ಕೃತ ವಿವಿ ಕಟ್ಟುತ್ತಿದ್ದಾರಾ? ಇದ್ಯಾವುದೂ ಇಲ್ಲವೆಂದ ಮೇಲೆ ಏಕೆ ಸಂಸ್ಕೃತ ವಿವಿಯ ಅಭಿವೃದ್ಧಿಗೆ ಹೋರಾಟಗಾರರ ಅಡ್ಡಗಾಲು! ಕನ್ನಡ ಹಾಗೂ ಸಂಸ್ಕೃತದ ಅವಿನಾಭಾವ ಸಂಬಂಧ ಹೇಗಿದೆ, ಸಂಸ್ಕೃತವನ್ನು ಏತಕ್ಕಾಗಿ ಕಲಿಯಬೇಕು ಎಂಬುದನ್ನು ತಿಳಿಯುವ ಅವಶ್ಯಕತೆ ಈಗ ಬಂದೊದಗಿದೆ.

ಕನ್ನಡ ಲಿಪಿಗಳ ರಾಣಿ, ಆದರೆ ಸಂಸ್ಕೃತ ಭಾಷೆಗಳ ತಾಯಿ. ಕನ್ನಡ ಭಾಷೆಯ ಒಳಗೆ ಅಸಂಖ್ಯಾತ ಸಂಸ್ಕೃತ ಪದಗಳು ಹಾಲು-ಜೇನಿನಂತೆ ಸಮ್ಮಿಳಿತ ಗೊಂಡಿವೆ. ಸಂಸ್ಕೃತ ಪದವಿಲ್ಲದೆ ನಾಲ್ಕೇ ನಾಲ್ಕು ಸಾಲು ಸಹ ಕನ್ನಡದಲ್ಲಿ ಬರೆಯಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಇದೆ. ಇಂಗ್ಲಿಷ್ ಭಾಷೆಯ ಪದಗಳಿಗೆ ಸಮಾನ ಪದಗಳು ಬೇಕಾದಾಗ, ಈಗಲೂ ಸಹ ಸಂಸ್ಕೃತ ದಿಂದಲೇ ಎರವಲು ಪಡೆಯುವುದು ನೋಡಿದ್ದೇವೆ.

ಕನ್ನಡದ ರಾಜ ಮನೆತನಗಳು ಹೊರಡಿಸಿದ ಶಾಸನಗಳು ಸಹ ಸಂಸ್ಕೃತದ ಇವೆ. ಅಪ್ಪಟ ಕನ್ನಡದ ರಾಜ ಮಯೂರ ವರ್ಮನ ಚಂದ್ರವಳ್ಳಿ ಶಾಸನ, ತಾಳ ಗುಂದದ ಸ್ತಂಭಶಾಸನ, ದಕ್ಷಿಣಾಪಥೇಶ್ವರ ಇಮ್ಮಡಿ ಪುಲಿಕೇಶಿಯ ಐಹೊಳೆ ಶಾಸನ, ತಲಕಾಡು ಗಂಗರ ತಾಮ್ರಶಾಸನಗಳು, ಹೊಯ್ಸಳರ ವಿಷ್ಣುವರ್ಧನನ ಬೇಲೂರು ಶಾಸನ ಸೇರಿದಂತೆ ಕನ್ನಡದ ಇತಿಹಾಸ, ಸಂಸ್ಕೃತಿ, ಕನ್ನಡಿಗರ ಪರಾಕ್ರಮ ವಿವರಿಸುವ ಹಲವಾರು ಶಾಸನಗಳು ಇರುವುದೇ ಸಂಸ್ಕೃತದಲ್ಲಿ. ಕನ್ನಡದ ಮೊಟ್ಟ ಮೊದಲ ಶಾಸನ ಎಂದು ಹೆಮ್ಮೆ ಪಡುವ ಕಾಕುತ್ಸ ವರ್ಮನ ಹಲ್ಮಿಡಿ ಶಾಸನ ಕನ್ನಡದಲ್ಲಿದ್ದರೂ ಸಂಸ್ಕೃತದಿಂದ ತುಂಬಿದೆ. ಕನ್ನಡದ ಶ್ರೇಷ್ಠ ಕವಿಗಳಾದ ಕುಮಾರವ್ಯಾಸ, ಹರಿಹರ, ಪಂಪ,ಜನ್ನ, ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ಕುವೆಂಪು, ಬೇಂದ್ರೆ, ಡಿವಿಜಿ ಮುಂತಾದ ಕವಿಗಳು ಸಂಸ್ಕೃತವನ್ನು ಅರಗಿಸಿಕೊಂಡೇ ಸಂಸ್ಕೃತದ ಆಶಯ, ಆಕೃತಿ ಗಳನ್ನು ಪ್ರಸ್ತುತಕ್ಕೆ ತಕ್ಕಂತೆ ರಸವತ್ತಾಗಿ ಪೋಣಿಸಿ ಕನ್ನಡಿಗರಿಗೆ ಉಣಬಡಿಸಿದ್ದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ!

ಹಾಗೆಯೇ ರಾಷ್ಟ್ರಕ್ಕೆ ಕರುನಾಡಿನ ವಿದ್ವಾಂಸರು ನೀಡಿದ ಮಹಾಕೃತಿಗಳಾದ ಶರ್ವವರ್ಮನ ಕಾತಂತ್ರ ವ್ಯಾಕರಣ, ಮಹಾವೀರನ ಗಣಿತ ಸಾರಸಂಗ್ರಹ, ಜಯಕೀರ್ತಿಯ ಛಂದೋನುಶಾಸನ, ಭಾಸ್ಕರಾಚಾರ್ಯರು ಬರೆದ ಲೀಲಾವತಿ ಎಂಬ ಗಣಿತದ ನಿಧಿ, ಭಾರವಿ ಬರೆದ ಕಿರಾತಾರ್ಜುನೀಯ, ವಸುಭಾಗಭಟ್ಟರ ಪಂಚತಂತ್ರ, ವಿಜ್ಞಾನೇಶ್ವರರ ಮಿತಾಕ್ಷರಾ, ಬಸವಭೂಪಾಲರು ಬರೆದ ಶಿವತತ್ವರತ್ನಾಕರ, ಜಿನಸೇನಾ ಚಾರ್ಯರ ಮಹಾಪುರಾಣ, ಗಂಗಾದೇವಿ ವಿಜಯ ನಗರದ ಸಾಮ್ರಾಜ್ಯದ ವೈಭವ, ವೀರತ್ವ ವರ್ಣಿಸುತ್ತ ಬರೆದ ವೀರಕಂಪಣರಾಯ ಚರಿತೆ, ಬಿಲ್ಹಣನು ಬರೆದ ವಿಕ್ರಮಾಂಕದೇವ ಚರಿತೆ, ಹಾಗೂ ಸಾಯಣಾ ಚಾರ್ಯರ 18 ಕೃತಿಗಳು ಮತ್ತು ಮಧ್ವಚಾರ್ಯರ 37 ಕೃತಿಗಳು ಸೇರಿದಂತೆ ಸಾವಿರಾರು ಕೃತಿಗಳನ್ನು ನಾಡಿನ ನೂರಾರು ಶ್ರೇಷ್ಠ ವಿದ್ವಾಂಸರು ಸ್ಕೃತದ ರಚಿಸಿದ್ದಾರೆ.

ಇವಷ್ಟೇ ಅಲ್ಲದೆ ವೇದಗಳು, ಉಪನಿಷತ್ತುಗಳು, ಮಹಾಭಾರತ, ರಾಮಾಯಣ, ಭಗವದ್ಗೀತೆ, ಆಯುರ್ವೇದ, ಖಗೋಳಶಾಸ್ತ್ರ, ತರ್ಕಶಾಸ್ತ್ರ, ಜೋತಿಷ್ಯ ಶಾಸ್ತ್ರ, ಗಣಿತಶಾಸ್ತ್ರ, ಅರ್ಥಶಾಸ್ತ್ರ ಹೀಗೆ ಎಲ್ಲವನ್ನೂ ಆಮೂಲಾಗ್ರವಾಗಿ ಒಳಗೊಂಡಿದೆ. ಅದಕ್ಕಾಗಿಯೇ ಅದನ್ನು ಸಂಸ್ಕೃತ ಎಂದು ಕರೆಯುವುದು. ಸಂಸ್ಕೃತ ಎಂದರೆ ‘ಸಮ್ಯಕ್ ಕೃತಂ’. ಯಾವುದು ಪರಿಪೂರ್ಣ ರೂಪದಲ್ಲಿದೆಯೋ ಅದೇ ಸಂಸ್ಕೃತ ಎಂದು.

ಎಲ್ಲವೂ ಸಂಸ್ಕೃತದಲ್ಲಿ ಅಡಗಿರುವಾಗ ಕೃತಿಗಳು ಮೂಲದಲ್ಲಿ ಹೇಗೆ ಇದೆಯೊ ಹಾಗೆ ಅರಿತುಕೊಳ್ಳಬೇಕಾದ ಅವಶ್ಯಕತೆ ಪ್ರತಿಯೊಬ್ಬ ಜ್ಞಾನ ಪಿಪಾಸುವಿಗೂ ಇದ್ದೇ
ಇರುತ್ತದೆ. ಈ ಜ್ಞಾನ ಸಂಪತ್ತು ಕನ್ನಡಿಗನಿಗೆ ಬೇಡವೇ? ಈ ಜ್ಞಾನ ಸಂಪತ್ತು ಶೂದ್ರನಿಗೆ ಬೇಡವೇ? ಬೇಡ ಎಂದಾದರೆ ಆಸ್ತಿಕ ಎಂದರೆ ಆಸ್ತಿ, ಅಂತಸ್ತು ಉಳ್ಳವನು ಎಂದು ಹೇಳುವ ಪ್ರೊ.ಭಗವಾನ್‌ನಂಥವರು ಹೇಳಿದ್ದೇ ಸತ್ಯ ಎಂದು ನಂಬಬೇಕಾಗುತ್ತದೆ. ಮಹಾಭಾರತ, ರಾಮಾಯಣ, ಭಗವದ್ಗೀತೆಗಳ ಶ್ಲೋಕಗಳ ಅರ್ಥ ತಿಳಿಯದೇ ತಾವು ತಿಳಿದ ಅರ್ಧಂಬರ್ಧವನ್ನೇ ಸುತ್ತಿಬಳಸಿ ಹೇಳುವ ತಿಳಿಗೇಡಿಗಳ ಮಧ್ಯಸ್ಥಿಕೆಗೆ ಪೂರ್ಣವಿರಾಮ ಹಾಕಿ, ಜ್ಞಾನಗಳಿಸುವ ಆಸಕ್ತಿ ಇದ್ದವರೆಲ್ಲ ಸಂಸ್ಕೃತದಲ್ಲಿ ಇರುವ ಮೂಲಗ್ರಂಥಗಳ ಅಧ್ಯಯನ ಹಾಗೂ ಅವುಗಳ ಕುರಿತು ಸಂಶೋಧನೆಗೆ ಅವಕಾಶ ದೊರೆಯಬೇಕಾಗಿದೆ.

ಅದಕ್ಕಾಗಿಯೇ ಸಂಸ್ಕೃತ ವಿಶ್ವವಿದ್ಯಾಲಯದ ಅಭಿವೃದ್ಧಿಯ ಅವಶ್ಯಕತೆ ಇದೆ. ಅದೊಂದು ಕಾಲದಲ್ಲಿ ಶೂದ್ರನು ವೇದವನ್ನು ಕೇಳಿದರೆ ಅವನ ಕಿವಿಗೆ ಕಾದಸೀ ಸವನ್ನು ಸುರಿಯಬೇಕು, ಶ್ಲೋಕ ಉಚ್ಚರಿಸಿದರೆ ಅವನ ನಾಲಿಗೆಯನ್ನು ಕತ್ತರಿಸಬೇಕು ಎಂಬ ನೀಚ ಮನಃಸ್ಥಿತಿಯನ್ನು ಕೆಲವರು ಹೊಂದಿದ್ದರು. ಕಾಲ ಕಳೆದಂತೆ ಶೂದ್ರರಿಗೆ ತೊಂದರೆ ಕೊಡಬೇಡಿ, ಆದರೆ ಉತ್ತಮ ವಿಷಯಗಳನ್ನು ಬೋಽಸಬೇಡಿ ಎಂಬ ಕುತಂತ್ರವನ್ನು ಆರಂಭಿಸಿದರು. ಅಂಥವರನ್ನು ಈಗಲೂ ಕಾಣುತ್ತೇ ವಲ್ಲ.

ಇಂಗ್ಲಿಷ್, ಹಿಂದಿಗಳನ್ನು ಶಾಲೆಗಳಲ್ಲಿ ಬೋಽಸುವುದನ್ನು, ಕನ್ನಡವನ್ನು ಮುಂದಿಟ್ಟು ವಿರೋಧಿಸುತ್ತ ಬಡಮಕ್ಕಳು ಇಂಗ್ಲಿಷ್, ಹಿಂದಿ ಕಲಿಕೆಯಿಂದ ವಂಚಿರಾಗು ವಂತೆ ಮಾಡುವ ಈ ಕಪಟಿಗಳು ತಮ್ಮ ಮಕ್ಕಳನ್ನು ಮಾತ್ರ ಆಂಗ್ಲ ಮಾಧ್ಯಮದ ಶಾಲೆಯ ಓದಿಸುತ್ತಾರೆ! ಇಂಥವರೇ ಇಂದು ಕನ್ನಡ ಶಾಲೆಗಳನ್ನು ಮುಂದಿಟ್ಟು ಸಂಸ್ಕೃತ ವಿ.ವಿಯಲ್ಲಿ ಸಂಸ್ಕೃತ, ಶ್ಲೋಕ ಕೇಳುವ, ಕಲಿಯುವ, ಉಚ್ಚರಿಸಲು ಆಸಕ್ತಿ ಹೊಂದಿದ ವರನ್ನು ಸಂಸ್ಕೃತ ಜ್ಞಾನದಿಂದ ವಂಚಿಸಲು ಯತ್ನಿಸುತ್ತಿದ್ದಾರೆ.

ದೇವಾಲಯಗಳಲ್ಲಿ ಶೂದ್ರರಿಗೂ, ಪುರೋಹಿತನ ಕೆಲಸ ಕೊಡಿ ಎಂದು ವಾದಿಸುವ ಇವರಿಗೆ ಪುರೋಹಿತನಾಗ ಬೇಕಾದವನು ಆಗಮ ಶಾಸ ಕಲಿತಿರಬೇಕು. ಅದರ ಪ್ರಮಾಣ ಪತ್ರ ಬೇಕು ಎಂಬ ಕಾನೂನಿನ ಅರಿವಿದೆ. ಆದರೆ ಶೂದ್ರ ಆಗಮಶಾಸ್ತ್ರ ಕಲಿಯುವ ಅವಕಾಶವನ್ನು ತಪ್ಪಿಸುವ ನರಿ ಬುದ್ಧಿಯು ಇದೆ. ಶೂದ್ರ ಜ್ಯೋತಿಷ್ಯ ಶಾಸ್ತ್ರ ಕಲಿತು ಜ್ಯೋತಿಷಿ ಆದರೆ, ತರ್ಕಶಾಸ್ತ್ರ ಕಲಿತು ಪಂಡಿತನಾದರೆ, ವೇದ ಕಲಿತು ವೇದಾಂತಿಯಾದರೆ, ಉಪನಿಷತ್ತುಗಳು, ಭಾಗವತಗಳನ್ನು,
ಕಲಿತು ಜ್ಞಾನಿಯಾಗಿ ಉತ್ತಮ ಸಮಾಜ ನಿರ್ಮಾಣವಾದರೆ, ಮೇಲು-ಕೀಳೆಂಬ ಕಂದಕ ಮುಚ್ಚಿಹೋಗಿ ರಾಜಕೀಯ ಲಾಭದ ಲೆಕ್ಕಾಚಾರ ತಪ್ಪಿಹೋಗುತ್ತದೆ ಎಂಬ ಭಯದಿಂದ ಇಂತಹ ಹುನ್ನಾರಗಳನ್ನು ಮಾಡುತ್ತಾರೆ.

ಸಮ ಸಮಾಜದ ಆಶಯ ಹೊತ್ತಿದ್ದ ಸ್ವಾಮಿ ವಿವೇಕಾನಂದರು, ಬಿ.ಆರ್. ಅಂಬೇಡ್ಕರ್, ಸಾವರ್ಕರ್, ಕುವೆಂಪು ಸೇರಿದಂತೆ ಹಲವು ದಾರ್ಶನಿಕರು ಸಂಸ್ಕೃತ ವನ್ನು ಎಲ್ಲರೂ ಕಲಿಯಬೇಕು ಎನ್ನುತ್ತಿದ್ದರು. ಸ್ವಾಮಿ ವಿವೇಕಾನಂದ ರಂತೂ ಮದ್ರಾಸಿನಲ್ಲಿ ಭಾಷಣ ಮಾಡುತ್ತ ಕೆಳ ವರ್ಗ ದಲ್ಲಿರುವವರು ಮೇಲೆ ಬರಬೇಕಾದರೆ ಒಂದೇ ಸುರಕ್ಷಿತ ಮಾರ್ಗ ಇರುವುದು. ಅದೇ ಸಂಸ್ಕೃತ ಭಾಷೆಯನ್ನು ಕಲಿಯುವುದು ಎನ್ನುತ್ತ ನಮ್ಮ ಶಾಸ್ತ್ರಗಳಲ್ಲಿ ಹುದುಗಿರುವ, ಮಠ ಮತ್ತು ಅರಣ್ಯಗಳಲ್ಲಿ ಅಡಗಿರುವ ಕೆಲವೇ ವ್ಯಕ್ತಿಗಳ ಸ್ವತ್ತಾಗಿರುವ ಅಧ್ಯಾತ್ಮಿಕ ರತ್ನಗಳನ್ನು ಬಯಲಿಗೆ ತರಬೇಕು.

ಯಾರಲ್ಲಿ ಅವು ರಹಸ್ಯವಾಗಿರುವುವೋ ಅಂತಹ ಕೆಲವು ವ್ಯಕ್ತಿಗಳಿಂದ ಹೊರಗೆ ತರುವುದು ಮಾತ್ರವಲ್ಲ, ದುರ್ಭೇದ್ಯ ವಾದ ಯಾವ ಭಾಷಾ ಪೆಟ್ಟಿಗೆಯಲ್ಲಿ ಅವು ಸುರಕ್ಷಿತವಾಗಿ ವೆಯೋ, ಅಂತಹ ಸಂಸ್ಕೃತ ಶಬ್ದಜಲದಿಂದ ಅವನ್ನು ಬಿಡಿಸಬೇಕು. ಅದು ಭಾರತದ ಪ್ರತಿಯೊಬ್ಬರ ಸಂಪತ್ತಾಗಬೇಕು. ಈ ಮಾರ್ಗದಲ್ಲಿರುವ ಮೊದಲನೆಯ ಅಡಚಣೆಯೇ ನಮ್ಮ ಶ್ರೇಷ್ಠ ಸಂಸ್ಕೃತ ಭಾಷೆ. ನಮ್ಮ ದೇಶದವರೆಲ್ಲರೂ ಸಂಸ್ಕೃತದಲ್ಲಿ ವಿದ್ಯಾ ವಂತರಾಗುವವರೆಗೆ ಈ ಅಡಚಣೆಯನ್ನು ನಿವಾ ರಿಸುವುದು ಕಷ್ಟ. ನಾನು ಇಡೀ ಜೀವನವೆಲ್ಲ ಈ ಭಾಷೆಯ ಅಧ್ಯಯನ ಮಾಡುತ್ತಿರುವೆನು.

ಆದರೂ ಪ್ರತಿಯೊಂದು ಹೊಸ ಗ್ರಂಥವೂ ನನಗೆ ಹೊಸದಾಗಿ ತೋರುತ್ತದೆ ಎಂದರೆ ಆ ಭಾಷೆ ಎಷ್ಟು ಕ್ಲಿಷ್ಟವಾದುದು ಎಂಬುದು ನಿಮಗೆ ಅರಿವಾಗುತ್ತದೆ. ಈ ಭಾಷೆಯನ್ನು ವಿವರವಾಗಿ ಅಧ್ಯಯನ ಮಾಡುವು ದಕ್ಕೆ ಸಮಯವಿಲ್ಲದವರಿಗೆ ಕಷ್ಟ ಎಷ್ಟಿರಬಹುದು! ಆದಕಾರಣವೇ ಭಾವನೆಗಳನ್ನು ದೇಶಭಾಷೆಗಳ ಮೂಲಕ ಜನರಿಗೆ ಪ್ರಚಾರಮಾಡಬೇಕು. ಜತೆಗೆ ಸಂಸ್ಕೃತ ವಿದ್ಯಾಭ್ಯಾಸವೂ ನಡೆಯಬೇಕು. ಏಕೆಂದರೆ ಸಂಸ್ಕೃತ ಭಾಷೋಚ್ಚಾರಣೆಯೆ ಜನರಿಗೆ ಗೌರವ, ಶಕ್ತಿ, ತೇಜಸ್ಸು ಇವನ್ನು ನೀಡುವುದು ಎಂಬುದು ಸ್ವಾಮೀಜಿಯವರ ಆಲೋಚನೆ.

ಹಾಗೆ ಜನಸಾಮಾನ್ಯರು ಸಂಸ್ಕೃತ ಭಾಷೆಯನ್ನು ಓದದಂತೆ ಮಾಡುವುದರ ಮೂಲಕ ಭಗವಾನ್ ಬುದ್ಧ ದೇವನೂ ಒಂದು ತಪ್ಪನ್ನು ಮಾಡಿದನು. ಅವನಿಗೆ ಶೀಘ್ರ ವಾಗಿ ಫಲ ಬೇಕಾಗಿತ್ತು. ಆದ್ದರಿಂದ ಜನರ ಅಂದಿನ ಭಾಷೆಯಾದ ಪಾಲಿಯಲ್ಲಿ ಪ್ರಚಾರಮಾಡಿದನು. ಇದರಿಂದ ಭಾವನೆ ವೇಗವಾಗಿ ಬಹಳ ದೂರ ಪ್ರಚಾರ ವಾಗುವುದಕ್ಕೆ ಸಾಧ್ಯವಾಯಿತು. ಅದರ ಜತೆಗೆ ಸಂಸ್ಕೃತ ಭಾಷೆಯೂ ಹರಡಬೇಕಾಗಿತ್ತು, ಅದಾಗಲಿಲ್ಲ. ಅದರಿಂದ ಬರಿ ಜ್ಞಾನ ಬಂತು, ಗೌರವ ಬರಲಿಲ್ಲ. ಸಂಸ್ಕೃತಿ ಬರಲಿಲ್ಲ. ಆದ್ದರಿಂದಲೇ ಅದರ ಪ್ರಗತಿ ಸ್ಥಿರ ವಾಗಲಿಲ್ಲ ಎನ್ನುತ್ತಾರೆ ಸ್ವಾಮೀಜಿ. ಸ್ವಾಮಿ ವಿವೇಕಾನಂದರು ಕಡೆಯದಾಗಿ, ಎಲ್ಲ ಜತಿಗಳಿಗೂ ಸಂಸ್ಕೃತ ಭಾಷೆಯನ್ನು ಹರಡುವುದಕ್ಕೆ ಕೋಟ್ಯಂತರ ರೂಪಾಯಿ ಗಳನ್ನು ಏತಕ್ಕೆ ಖರ್ಚು ಮಾಡಬಾರದು? ಇದನ್ನು ಮಾಡಿ ದೊಡನೆಯೇ ಬ್ರಾಹ್ಮಣನಿಗೆ ನೀವು ಸರಿಸಮ ರಾಗುತ್ತೀರಿ, ಭಾರತದ ಶಕ್ತಿ ಲಾಭದ ಗೂಢರಹಸ್ಯವೇ ಇದು.

ಭಾರತದಲ್ಲಿ ಸಂಸ್ಕೃತ ಭಾಷೆ ಮತ್ತು ಗೌರವ ಒಟ್ಟಿಗೆ ಹೋಗುವುದು. ಸಂಸ್ಕೃತ ನಿಮ್ಮಲಿದ್ದರೆ ಯಾರಿಗೂ ನಿಮ್ಮನ್ನು ಟೀಕಿಸಲು ಆಗುವುದಿಲ್ಲ ಎನ್ನುತ್ತಾರೆ. ಅಂದು ಅಂಬೇಡ್ಕರ್ ದೂರದೃಷ್ಟಿ ಅರಿಯದ ಕೆಲವರು ಸಂಸ್ಕೃತ ರಾಷ್ಟ್ರಭಾಷೆಯಾಗಿ ಮಾಡುವು ದನ್ನು ವಿರೋಧಿಸಿದ್ದರು. ಅದರಲ್ಲಿ ಶೆಡ್ಯೂಲ್ ಕ್ಯಾಸ್ಟ್ ಫೆಡರೇ ಶನ್‌ನ ಬಿ.ಪಿ. ಮೌರ್ಯ ಕೂಡ ಒಬ್ಬರು. ನಂತರದ ದಿನದಲ್ಲಿ ‘ಅಂಬೇಡ್ಕರರು ಸಂಸ್ಕೃತದ ಬಗ್ಗೆ ಮಂಡಿಸಿದ್ದ ಠರಾ ವನ್ನು ನಾನು ಆಗ ಅಕಾರಣ ವಿರೋಧಿಸಿ ತಪ್ಪು ಮಾಡಿದೆ. ಅವರ ದೂರದೃಷ್ಟಿ ನನಗೆ ತಿಳಿಯಲಿಲ್ಲ’ ಎಂದು ಅವಲತ್ತುಕೊಂಡಿದ್ದರು.

ಸಂಸ್ಕೃತದಲ್ಲಿ ಜ್ಞಾನ ಭಂಡಾರ ಇದೆ ಅದನ್ನು ಕಲಿಯಿರಿ, ನಿಮಗೆ ಗೌರವ ಬರುತ್ತದೆ ಎಂದು ಹೇಳಿದ ಸ್ವಾಮಿ ವಿವೇಕಾನಂದ, ಅಂಬೇಡ್ಕರ್‌ರಂತಹ ಮೇಧಾವಿ ರಾಷ್ಟ್ರ ಪುರುಷರ ಮಾತಿಗೆ ಕಿವಿ ಕೊಡಬೇಕೊ ಅಥವಾ ಸ್ವಾರ್ಥಕ್ಕಾಗಿ ಕನ್ನಡವನ್ನು ಮುಂದಿಟ್ಟು ಸಂಸ್ಕೃತ ಬೇಡ ಎಂದು ಊಳಿಡುವ ಕೂಗುಮಾರಿಗಳ ಮಾತಿಗೆ ಮನ್ನಣೆ ಕೊಡಬೇಕು ಯೋಚಿಸಿ! ಸಂಸ್ಕೃತ ವಿವಿ ಅವಶ್ಯಕತೆ ಏನು ಬ್ರಾಹ್ಮಣರಿಗಿಲ್ಲ. ಅವರು ಈಗಲೂ ಮನೆ, ಮಠ, ಅಗ್ರಹಾರಗಳ ವೇದ, ಉಪನಿ ಷತ್, ಆದಿಯಾಗಿ ಎಲ್ಲ ಸಂಸ್ಕೃತ ಶ್ಲೋಕಗಳನ್ನು ಅಭ್ಯಾಸ ಮಾಡುತ್ತಾರೆ. ನಿಜವಾಗಿಯೂ ಸಂಸ್ಕೃತ ವಿವಿಯ ಅವಶ್ಯ ಇರುವುದೇ ಬ್ರಾಹ್ಮಣೇತರರಿಗೆ. ತರ್ಕಶಾಸ್ತ್ರ, ಗಣಿತ ಶಾಸ್ತ್ರ, ಉಪನಿಷತ್, ಭಗವದ್ಗೀತೆ, ರಾಮಾಯಣ, ಮಹಾ ಭಾರತ, ವ್ಯಾಕರಣ ಶಾಸ್ತ್ರ, ಹೀಗೆ ವೇದದಿಂದ, ಆಯು ರ್ವೇದದ ವರೆಗೆ ಖಗೋಳದಿಂದ, ಕಂಪ್ಯೂಟರ್ ಸಂಕೇತದ ವರೆಗೆ ಸಂಸ್ಕೃತ ಭಾಷೆ ಎಲ್ಲ eನವನ್ನು ತನ್ನೊಳಗೆ ಅಡಗಿಸಿ ಕೊಂಡಿ ರುವುದರಿಂದ ಆ ಭಾಷಾಕಲಿಕೆ ಕನ್ನಡಿಗನಿಗೆ ಅತ್ಯಗತ್ಯ.

ಸಂಸ್ಕೃತದ ಜ್ಞಾನಜ್ಯೋತಿಯಿಂದ ಕನ್ನಡದ ಜಲೆ ಮತ್ತಷ್ಟು ಬೆಳಗಲು ಸಂಸ್ಕೃತ ಕಲಿಕೆಗೆ ವಿವಿಯ ಸಹಕಾರಿಯಾಗಲಿ.