Wednesday, 30th October 2024

ಸಂಶೋಧನೆ ಅಂದ್ರ ತೊಂಬತ್ತರ ಹೊಸ್ತಿಲಲ್ಲೂ ಚಿಮೂಗೆ ಹುರುಪು!

ಪರಂಪರೆ

ದೇವಿ ಮಹೇಶ್ವರ ಹಂಪಿನಾಯ್ಡು

ತೊಂಬತ್ತರ ವಯಸ್ಸಿನಲ್ಲೂ ಚಿದಾನಂದಮೂರ್ತಿಗಳ ಸಂಶೋಧನಾ ಆಸಕ್ತಿ ವೃತ್ತಿ ಕುತೂಹಲ ಸಂವೇದನಾಶೀಲತೆ ಮಾತ್ರ ಇನ್ನು ಚಿಗುರು ಎಂದೇ ಹೇಳಬೇಕು. ಅವರ ಹೊಸಾ ಕೃತಿಗಳಲ್ಲಿ ಒಂದೋ ಕರಡು ಸಿದ್ಧತೆಯಲ್ಲಿರುತ್ತದೆ ಮುದ್ರಣದ ಹಂತದಲ್ಲಿರುತ್ತದೆ ಅಥವಾ ಪ್ರಕಟಗೊಳ್ಳಲು ತಯಾರಾಗಿರುತ್ತದೆ. ಇವುಗಳಲ್ಲದೆ ಅವರ ಸಂಶೋಧನಾತ್ಮಕ ಬರಹಗಳು ಆಗಾಗ ದಿನಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಲೇ ಇರುತ್ತದೆ.

ಮೊನ್ನೆೆಷ್ಟೇ ವಿಶ್ವವಿಖ್ಯಾಾತ ಮೈಸೂರಿನ ನವರಾತ್ರಿಿ ದಸರಾ ಅಂಬಾರಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಆದರೆ ಈ ಜಗತ್ವಿಿಖ್ಯಾಾತ ಉತ್ಸವಕ್ಕೆೆ ಚಾಲನೆ ದೊರಕಿದ್ದು ಸನಾತನ ಪರಂಪರೆಯ ಹಿಂದೂ ಧರ್ಮದ ಹೃದಯವೆನಿಸಿದ್ದ ವಿಜಯನಗರ ಸಾಮ್ರಾಾಜ್ಯದಲ್ಲಿ ಎಂಬುದು ಸಾಕಷ್ಟು ಮಂದಿಗೆ ತಿಳಿದೇ ಇಲ್ಲ. ಮತ್ತೂ ಹೇಳಬೇಕೆಂದರೆ ಇಂತಹ ಸಾಂಸ್ಕೃತಿಕ ಮತ್ತು ಆಧ್ಯಾಾತ್ಮಿಿಕ ಉತ್ಸವ ಹುಟ್ಟು ಪಡೆದದ್ದು ವಿಜಯನಗರ ಸಾಮ್ರಾಾಜ್ಯ ಪೂರ್ವದಲ್ಲಿ ಎಂಬ ವಿಚಾರ ಮತ್ತಷ್ಟು ಸೋಜಿಗ. ಇದರ ಖಚಿತವಾದ ಪುರಾವೆಗಳಿಗಾಗಿ ಕಳೆದ ವಾರ ತುಂಗಭದ್ರ ತೀರದ ಹಂಪಿ ಮತ್ತು ಗಂಗಾವತಿಗೆ ಚಿಮೂ ಜತೆ ಸಹಾಯಕನಾಗಿ ತೆರಳುವ ಅವಕಾಶ ನನಗೆ ದಕ್ಕಿಿತು.

ಪ್ರಾಾಥಮಿಕವಾಗಿ ತಿಳಿದಿರುವ ಇತಿಹಾಸದಂತೆ ವಿಜಯನಗರ ಸಾಮ್ರಾಾಜ್ಯ ಉದಯಿಸಿದ್ದು ಶೃಂಗೇರಿ ಶಂಕರಾಚಾರ್ಯರ ಮಠದಲ್ಲಿ ಸಂನ್ಯಾಾಸಿಯಾಗಿದ್ದ ವಿದ್ಯಾಾರಣ್ಯರ ಪೌರೋಹಿತ್ಯದಲ್ಲಿ ಸಂಗಮವಂಶದ ಐವರು ಗಂಡು ಮಕ್ಕಳಲ್ಲಿ ಮೊದಲಿಗರಾದ ಹರಿಹರ ಮತ್ತು ಬುಕ್ಕರಾಯ ಸಹೋದರರಿಂದ ಎಂಬುದು ಸ್ಪಷ್ಟ. ಇದನ್ನು ಬಾಗೇಪಲ್ಲಿಯ ಬೆಸ್ತರಹಳ್ಳಿಿ ಶಾಸನ ಹಾಗೂ ಆಂಧ್ರಪ್ರದೇಶದ ನೆಲ್ಲೂರಿನ ಕಾಪಲೂರು ಶಾಸನ ಸ್ಪಷ್ಟಪಡಿಸಿವೆ. ಆದರೆ ವಿಜಯನಗರ ಸಾಮ್ರಾಾಜ್ಯ ಸ್ಥಾಾಪನೆಯ ಕುರಿತು ಇರುವಷ್ಟು ಗೊಂದಲ ಬೇರೆ ಯಾವ ಸಾಮ್ರಾಾಜ್ಯದ ವಿಷಯದಲ್ಲೂ ಇಲ್ಲ. ಇದಕ್ಕೆೆ ಕಾರಣ ಅನೇಕ ವಿದ್ವಾಾಂಸರು, ನಕಲಿ ಸಂಶೋಧಕರು, ಎಡವಾದಿ ಇತಿಹಾಸಕಾರರು ತಮ್ಮಿಿಷ್ಟಕ್ಕೆೆ ಬಂದಂತೆ ಇತಿಹಾಸವನ್ನು ತಿರುಚಿ ಸಾಮ್ರಾಾಜ್ಯದ ಸ್ಥಾಾಪನೆಯ ಲಾಭವನ್ನು ಜಾತೀಯತೆಯ ಬಲೆಯೊಳಗೆ ಸಿಲುಕಿಸಿದ್ದಾಾರೆ.

ಇದರ ಪರಿಣಾಮವಾಗಿ ಹಕ್ಕಬುಕ್ಕರು ಬೇಡ ಸಮುದಾಯದವರೆಂದು ನಾಯಕ ಜನಾಂಗದವರು ಆರಾಧಿಸಿದರೆ, ಮತ್ತೊೊಂದೆಡೆ ಕುರುಬರು ಎಂಬ ಊಹೆಯಲ್ಲಿ ಕುರುಬ ಸಮಾಜದವರು ಬರಿಯ ಜಾತಿಕಾರಣಕ್ಕೆೆ ಹಕ್ಕಬುಕ್ಕ ಹೆಸರಿನಲ್ಲಿ ಸಂಘಸಂಸ್ಥೆೆಗಳನ್ನು ಕಟ್ಟಿಿಕೊಂಡು ಸಮಾಧಾನಪಟ್ಟಿಿದ್ದಾಾರೆ. ಸತ್ಯಾಾಂಶವೆಂದರೆ ಯಾವುದೇ ಶಾಸನಗಳಲ್ಲಿಯೂ ಅವರ ಜಾತಿ ಉಲ್ಲೇಖವಿಲ್ಲ.

ಹಾಗೆಯೇ ವಿದ್ಯಾಾರಣ್ಯರ ಕುರಿತು ಇದ್ದ ಗೊಂದಲ ನಿವಾರಿಸುವ ತಾಕತ್ತು ಇರುವ ಶಾಸನವೊಂದನ್ನು ಹದಿನೆಂಟು ವರ್ಷಗಳ ಹಿಂದೆ ಕನ್ನಡ ವಿಶ್ವವಿದ್ಯಾಾಲಯದಲ್ಲಿ ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಕ್ರಿಿಯಾಶೀಲ, ವಸ್ತುನಿಷ್ಠ ಸಂಶೋಧಕರಾದ ಡಾ.ಡಿ.ವಿ. ಪರಮಶಿವಮೂರ್ತಿಯವರು ಬೆಳಕಿಗೆ ತಂದರು. ಅದು ಒಂದನೇ ಹರಿಹರರಾಯನ ಹಾಲ್ಕಾಾವಟಗಿಯ ಏಳು ಪ್ರತ್ಯೇಕ ತಾಮ್ರಪಟಗಳಿಂದ ಕೂಡಿದ ಕೂಟಶಾಸನ. ಈ ಶಾಸನದಲ್ಲಿ ವಿದ್ಯಾಾರಣ್ಯರ ಅಸ್ತಿಿತ್ವ ಹಾಗೂ ಅವರ ವೈಚಾರಿಕತೆಯನ್ನು ವರ್ಣಿಸಲಾಗಿದೆ. ಅವರಿಗೂ ಶೃಂಗೇರಿ ಮಠಕ್ಕೂ ಇದ್ದ ಸಂಬಂಧಗಳನ್ನು ದೃಢಪಡಿಸುತ್ತದೆ. ಒಟ್ಟಾಾರೆಯಾಗಿ ಈ ಶಾಸನವು ವಿಜಯನಗರ ಸಾಮ್ರಾಾಜ್ಯದಲ್ಲಿದ್ದ ವಿದ್ಯಾಾರಣ್ಯ-ಹರಿಹರರಾಯ-ಬುಕ್ಕರಾಯರ ಸಂವೇದನೆಯನ್ನು ಸಾಕ್ಷೀಕರಿಸುತ್ತದೆ.

ದಾಂಡೇಲಿಯ ಪುರೋಹಿತ ಮನೆತನದವರಾದ ದತ್ತಾಾತ್ರೇಯ ಪುರೋಹಿತ್ ಅವರ ಪುರಾತನ ವಂಶಸ್ಥರ ಈ ಶಾಸನದಲ್ಲಿ ವಿಜಯನಗರ ಸಾಮ್ರಾಾಜ್ಯವು ಶಾಲಿವಾಹನ ಶಕ 1258ರ ಧಾತೃನಾಮ ಸಂವತ್ಸರದ ವೈಶಾಖಮಾಸದ ಸಪ್ತಮಿ ತಿಥಿಯಂದು, ಅಂದರೆ 1336 ಏಪ್ರಿಿಲ್ 18ರಂತೆ ಸ್ಥಾಾಪನೆಯಾಗಿರುವುದಾಗಿ ದೃಢಪಡಿಸುತ್ತದೆ. ಈ ಶಾಸನವನ್ನು ಒಂದು ವರ್ಷದ ಕಾಲ ಎಲ್ಲಾಾ ದೃಷ್ಟಿಿಕೋನಗಳಿಂದಲೂ ಪರೀಕ್ಷಿಸಿ ಹಲವಾರು ವಿದ್ವಾಾಂಸರುಗಳೊಂದಿಗೆ ಚರ್ಚಿಸಿ ಹಂಪಿ ವಿಶ್ವವಿದ್ಯಾಾಲಯದ ವಿಚಾರಸಂಕೀರ್ಣದಲ್ಲಿ ಮಂಡಿಸಿ, ಹಂಪಿ ಉತ್ಸವ ಮತ್ತು ಮೈಸೂರಿನ ಆಲ್ ಇಂಡಿಯಾ ಎಪಿಗ್ರಾಾಫಿಕಲ್ ಸೊಸೈಟಿ ಕಾನ್ಫರೆನ್‌ಸ್‌ ನಲ್ಲೂ ಪ್ರದರ್ಶಿಸಿ ಸಾಮ್ರಾಾಜ್ಯ ಸ್ಥಾಾಪನೆಯಲ್ಲಿನ ಗೊಂದಲವನ್ನು ಡಾ ಪರಮಶಿವಮೂರ್ತಿಗಳು ನಿವಾರಿಸಿದ್ದಾಾರೆ. ದುರಂತವೆಂದರೆ ಈಗಲೂ ಕೆಲ ಅರೆಬೆಂದ ಪ್ರೊೊಫೆಸೆರ್‌ಗಳು, ಸತ್ಯ ಇತಿಹಾಸವನ್ನು ಒಪ್ಪಿಿಕೊಳ್ಳುವ ಮನಸ್ಸಿಿಲ್ಲದ ಡಾಕ್ಟರೇಟ್ ಜೀವಿಗಳು ಆಳವಾದ ಅಧ್ಯಯನಗಳಿಲ್ಲದೆ ಸಾಮ್ರಾಾಜ್ಯ ಸ್ಥಾಾಪನೆಯ ಕಾಲಮಾನವಾದ 1336ರನ್ನೇ ಅಳಿಸಿಹಾಕುವ ಪ್ರಯತ್ನದಲ್ಲಿದ್ದಾಾರೆ. ಇದೇ ವಿಚಾರವಾಗಿ ಡಾ.ಚಿದಾನಂದಮುರ್ತಿಗಳು ವಿಜಯನಗರ ಸಾಮ್ರಾಾಜ್ಯದ ಪೂರ್ವದಲ್ಲಿದ್ದ ಗಂಡುಗಲಿ ಕುಮಾರರಾಮ ಬೆನ್ನತ್ತಿಿದ್ದಾಾರೆ.

ಮೊನ್ನೆೆ ಅವರ ಪ್ರವಾಸದಲ್ಲಿ ಕುಮಾರರಾಮನ ವಂಶಸ್ಥರೆಂದು ಗುರುತಿಸಿಕೊಂಡಿರುವ ಗಂಗಾವತಿಯ ರಾಜೇಶನಾಯಕ ಎಂಬ ವ್ಯಕ್ತಿಿಯ ಪರಿಚಯವಾಯಿತು. ಅವರ ಮೂಲಕ ಕುಮಾರರಾಮನ ಕುಮ್ಮಟದುರ್ಗ ಎಂಬ ದುರ್ಗಮ ಪ್ರಾಾಕೃತಿಕ ಪ್ರದೇಶ ತಲುಪಿ ಕುಮಾರರಾಮನ ಕೋಟೆ ಹೆಬ್ಬಾಾಗಿಲನ್ನು ಬಹಳ ಶ್ರಮದಿಂದ ಹತ್ತಿಿರದಿಂದ ನೋಡಿ ಬಂದಿದ್ದಾಾರೆ ಚಿದಾನಂದಮೂರ್ತಿಗಳು. ಹಕ್ಕಬುಕ್ಕರು ಕುಮಾರರಾಮನ ಅಕ್ಕನ ಮಕ್ಕಳು. ಅಂದರೆ ಅಳಿಯಂದಿರು ಎಂಬುದು ಐತಿಹಾಸಿಕ ವಿಷಯವಾಗಿದೆ. ಆದರೆ ವಿಜಯನಗರ ಸ್ಥಾಾಪನೆಯ 1336ರ ನಂತರ ಲಭ್ಯವಿರುವ ಶಾಸನಗಳಷ್ಟು ಐತಿಹ್ಯ-ದಾಖಲೆಗಳು ಕುಮಾರರಾಮನ ಕುರಿತು ವಿರಳವಾಗಿ ದೊರಕುತ್ತದೆ.

ಲಭ್ಯವಿರುವ ಇತಿಹಾಸದ ಪ್ರಕಾರ, ಗಂಗಾವತಿ ತಾಲ್ಲೂಕಿನ ಕುಮ್ಮಟದುರ್ಗ 13ನೇ ಶತಮಾನದಲ್ಲಿ ಮುಮ್ಮಡಿ ಸಿಂಗೇನಾಯಕ ಎಂಬ ಬೇಡದೊರೆಯ ಆಳ್ವಿಿಕೆಗೆ ಒಳಪಟ್ಟಿಿತ್ತು. ಈ ದೊರೆಗಳೇ ಉತ್ತರದ ಮುಸ್ಲಿಿಂ ಆಕ್ರಮಣಕಾರರನ್ನು ನಿಯಂತ್ರಿಿಸಿ ಕುಮ್ಮಟದುರ್ಗವನ್ನು ಕೇಂದ್ರವಾಗಿಸಿಕೊಂಡು ಸಾಮ್ರಾಾಜ್ಯವನ್ನು ವಿಸ್ತರಿಸಿ ದಕ್ಷಿಣದಲ್ಲಿ ಹಿಂದೂ ಧರ್ಮವನ್ನು ರಕ್ಷಿಸಿದ ಕೀರ್ತಿಯನ್ನು ಹೊಂದಿದ್ದರು. ಮುಮ್ಮಡಿ ಸಿಂಗೇನಾಯಕನ ಶೌರ್ಯದ ಗೌರವಾರ್ಥ ಮಹಾರಾಷ್ಟ್ರದ ದೇವಗಿರಿಯ ರಾಜ 750 ಕೆಜಿ ತೂಕದ ರತ್ನ ಖಚಿತ ಬಂಗಾರದ ಅಂಬಾರಿಯನ್ನು ನಾಯಕನಿಗೆ ನೀಡಿದ ಎಂಬ ನಂಬಿಕೆ ಇದೆ. ಅದೇ ಅಂಬಾರಿಯನ್ನು ಕುಮ್ಮಟದುರ್ಗದ ದುರ್ಗಾದೇವಿಯ ಉತ್ಸವದಲ್ಲಿ ಬಳಸಿ ನವರಾತ್ರಿಿ ಮತ್ತು ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿಿತ್ತು ಎಂಬ ಪ್ರತೀತಿ ಈಗಲೂ ಸಾಗಿಬಂದಿದೆ. ತದನಂತರ ಯುದ್ಧದಲ್ಲಿ ಸುಲ್ತಾಾನರ ಮೋಸ ಕುತಂತ್ರದಿಂದ ಕುಮಾರರಾಮನಿಗೆ ಸೋಲುಂಟಾಗಿ ಆತ ತನ್ನ ಅಳಿಯಂದಿರಾದ ಹಕ್ಕಬುಕ್ಕರಿಗೆ ಸಾಮ್ರಾಾಜ್ಯವನ್ನು ಉಳಿಸಿಕೊಳ್ಳುವುದಕ್ಕೆೆ ಆದೇಶಿಸುತ್ತಾಾನೆ. ಹೀಗೆ ಹರಿಹರಬುಕ್ಕರು ಆನೆಗುಂದಿ ಪ್ರವೇಶಿಸಿ ಬರುವಾಗ ಕಾಡುನಾಯಿಯನ್ನು ಮೊಲವೊಂದು ಬೇಟೆಯಾಡುವ ಅಪರೂಪದ ದೃಶ್ಯವನ್ನು ಕಾಣುತ್ತಾಾರೆ.

ಇದನ್ನು ನೋಡಿ ಬೆರಗಾದ ಸಹೋದರರು ಹಂಪಿಯ ವಿರೂಪಾಕ್ಷ ದೇವಳದಲ್ಲಿ ಧ್ಯಾಾನಸ್ಥರಾಗಿದ್ದ ವಿದ್ಯಾಾರಣ್ಯರ ಬಳಿಬಂದು ನಿವೇದಿಸಿಕೊಳ್ಳುತ್ತಾಾರೆ. ಇದೇ ವಿಷಯವನ್ನೊೊಳಗೊಂಡ ಶಾಸನಗಳು ರಚನೆಗೊಂಡು ಅಂದು ವಿದ್ಯಾಾರಣ್ಯರಿಂದ ವಿದ್ಯಾಾನಗರ ಸ್ಥಾಾಪನೆಯಾಗಿ ಮುಂದೆ ಪ್ರೌೌಢದೇವರಾಯ ಶ್ರೀಕೃಷ್ಣದೇವರಾಯನಿಂದ ಸಾಮ್ರಾಾಜ್ಯ ಇಡೀ ದಕ್ಷಿಣಭಾರತವನ್ನು ತನ್ನ ಅಧೀನದಲ್ಲಿಟ್ಟುಕೊಂಡು ಇಸ್ಲಾಾಂ ಆಕ್ರಮಣವು ದಕ್ಷಿಣಕ್ಕೆೆ ಕಾಲಿಡದಂತೆ ಹಿಂದೂಧರ್ಮವನ್ನು ರಕ್ಷಿಸಿದ ವಿಶ್ವವಿಖ್ಯಾಾತ ಸಾಮ್ರಾಾಜ್ಯವಾಗುತ್ತದೆ. ಇಷ್ಟು ಈಗಿರುವ ಶಾಸನಗಳಾಧರಿತ ವಿಜಯನಗರ ಸ್ಥಾಾಪನೆಯ ಇತಿಹಾಸ.

ಆದರೆ, ಹಕ್ಕಬುಕ್ಕ ವಿದ್ಯಾಾರಣ್ಯರಿಗಿಂತ ಮೊದಲು ನಾಯಕ ಜನಾಂಗದ ಕುಮ್ಮಟದುರ್ಗದ ರಾಜರುಗಳೂ ಸುಲ್ತಾಾನರೊಡನೆ ಹೋರಾಡಿ ಹಿಂದೂಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಿಸಿರುವುದು ಇತಿಹಾಸದಲ್ಲಿ ಖಂಡಿತಾ ಸುಳ್ಳಲ್ಲ. ಆದರೆ ಆ ಕಾಲಮಾನದ ಶಾಸನಗಳ ಅಲಭ್ಯತೆಯಿಂದಾಗಿ ಕುಮ್ಮಟದುರ್ಗದ ಗಟ್ಟಿಿಯಾದ ಇತಿಹಾಸ ಇನ್ನೂ ನಮಗೆ ಪರಿಚಿತವಾಗಿಲ್ಲ. ಇದರಿಂದಾಗಿ ಗಂಡುಗಲಿ ಕುಮಾರರಾಮನ ಶೌರ್ಯ ಆಳ್ವಿಿಕೆ ರಾಜ್ಯಭಾರದ ಸಂಪೂರ್ಣ ಚಿತ್ರಣದ ಕೊರತೆಯಿಂದ ಕುಮಾರರಾಮ ಇತಿಹಾಸದಿಂದ ದೂರ ಸರಿಯುವ ಅಪಾಯವಿದೆ.

ಈ ದೃಷ್ಟಿಿಕೋನದಿಂದಲೇ ಡಾ. ಚಿದಾನಂದಮೂರ್ತಿಗಳು ತೊಂಬತ್ತರ ಇಳಿವಯಸ್ಸಿಿನಲ್ಲೂ ಸಂಶೋಧನೆಯ ಧರ್ಮದಲ್ಲಿ ತೊಡಗಿಸಿಕೊಂಡಿದ್ದಾಾರೆ. ಇದೇ ಹಾದಿಯಲ್ಲಿ ಮೊನ್ನೆೆಯ ಪ್ರವಾಸದಲ್ಲಿ ವಿದ್ಯಾಾರಣ್ಯ ಹಂಪಿ ಕನ್ನಡ ವಿಶ್ವವಿದ್ಯಾಾಲಯಕ್ಕೆೆ ಭೇಟಿ ನೀಡಿದ್ದರು. ವಿವಿಯ ಮುಖ್ಯ ಕಛೇರಿಯಲ್ಲಿ ಕುಲಪತಿಗಳಿರದ ಕಾರಣ ಕುಲಸಚಿವ ಡಾ. ಎ. ಸುಬ್ಬಣ್ಣ ರೈ ಅವರನ್ನು ಭೇಟಿಯಾಗಿ ಕೆಲ ಮಾಹಿತಿಗಳನ್ನು ಕಲೆಹಾಕಿದರು. ನಮ್ಮ ನಾಡಿನಲ್ಲಿ ಸಾಹಿತ್ಯವನ್ನು ಸಾರಸ್ವತ ಲೋಕವೆಂದು ಬಣ್ಣಿಿಸಲಾಗುತ್ತದೆ. ಆದರೆ ಸರಸ್ವತಿ ಭುವನೇಶ್ವರಿದೇವಿಯರು ತಾಂಡವಾಡಬೇಕಿದ್ದ ಹಂಪಿ ಕನ್ನಡ ವಿಶ್ವವಿದ್ಯಾಾಲಯದಲ್ಲಿ ಇಂದು ಎಂತಹ ಸಾಂಸ್ಕೃತಿಕ ಮತ್ತು ಧಾರ್ಮಿಕ ದಾರಿದ್ರ್ಯವಿದೆ ಎಂದರೆ ಅಲ್ಲಿನ ಕಛೇರಿಯಲ್ಲಿ ಗಣೇಶ ಸರಸ್ವತಿಯ ಬದಲಾಗಿ ಬುದ್ಧನ ದೊಡ್ಡ ಪಟ ಹಾಗೂ ಮೂರ್ತಿಯನ್ನು ಇರಿಸಲಾಗಿದೆ.

ಇರಲಿ, ಶ್ರೀಕೃಷ್ಣ, ಬುದ್ಧ, ಬಸವಣ್ಣ ರಾಮಾಯಣ ಬರೆದ ಬೇಡರಾದ ವಾಲ್ಮೀಕಿ ಎಲ್ಲರೂ ಸನಾತನ ಪರಂಪರೆಯ ಮೇರು ಮಹಾಪುರುಷರೇ ಆಗಿದ್ದಾಾರೆ. ಆದರೆ ಇಂದಿನ ಅಸಾಂಸ್ಕೃತಿಕ ಆಧುನಿಕ ಬುದ್ಧಿಿಜೀವಿಗಳ ಅಲಿಖಿತ ಹಿಂದೂವಿರೋಧಿ ಮನಸ್ಥಿಿತಿಗಳ ಪ್ರತಿಬಿಂಬವಾಗಿ ಬುದ್ಧ, ಬಸವಣ್ಣನವರನ್ನು ಬಳಸಿಕೊಂಡು ಒಂದು ವರ್ಗದ ಜನರನ್ನು ಹಿಂದೂಧರ್ಮದಿಂದ ವಿಕೇಂದ್ರಿಿಕರಣಗೊಳಿಸುವ ಕೆಟ್ಟ ಪರಂಪರೆ ಹಂಪಿ ವಿಶ್ವವಿದ್ಯಾಾಲಯದಲ್ಲಿ ನೆಲೆಗೊಂಡಿದೆ. ಇಂತಹ ಅನಿಷ್ಟಗಳಿಂದ ಕೂಡಿರುವ ವಿಶ್ವವಿದ್ಯಾಾಲಯದ ಈಗಿನ ಮಂದಿಗೆ ಡಾ ಚಿದಾನಂದಮೂರ್ತಿಗಳೆಂದರೆ ಕೋಮುವಾದಿ ಹಿಂದುತ್ವವಾದಿ ಎಂಬ ಸೂತಕ ಆವರಿಸಿಕೊಳ್ಳುತ್ತದೆ.

ಕನ್ನಡ ವಿಶ್ವವಿದ್ಯಾಾಲಯ ಭುವನೇಶ್ವರಿದೇವಿಯ ನೆಲೆಯಾದ ಹಂಪಿಯ ವ್ಯಾಾಪ್ತಿಿಯಲ್ಲಿ ಸ್ಥಾಾಪನೆಗೊಳ್ಳಲು ಚಿಮೂ ಅವರ ಶ್ರಮ ಏನೆಂಬುದು ಕೆಲವರಿಗೆ ಮಾತ್ರ ತಿಳಿದು ಅವರನ್ನು ಕಂಡ ಕೂಡಲೇ ಕಾಲಿಗೆರಗಿ ನಮಸ್ಕರಿಸುತ್ತಾಾರೆ. ಒಟ್ಟಿಿನಲ್ಲಿ ಕನ್ನಡಿಗರಾದ ನಮಗೆ ನಾಡಿನ ಸತ್ಯ ಇತಿಹಾಸ, ಕುಮಾರರಾಮನಿಗೆ ಸಲ್ಲಬೇಕಾದ ಸಹಜ ಗೌರವ ದೊರಕಿ ಆತನನ್ನು ಎಲ್ಲಾಾ ಜಾತಿಯವರೂ ಆರಾಧಿಸುವಂತಾಗಲಿ, ಮುಂದಿನ ಪೀಳಿಗೆಯ ಮಕ್ಕಳಿಗೆ ಇದರ ಅನುಭೂತಿಯಾದರೆ ನಾಡಿನ ಹಿರಿಯ ವಿದ್ವಾಾಂಸರಾದ ನಡೆದಾಡುವ ಶಾಸನವೇ ಆಗಿರುವ ನಾಡೋಜ ಡಾ. ಎಂ ಚಿದಾನಂದಮೂರ್ತಿಗಳ ಶ್ರಮ ಸಾರ್ಥಕವಾದಂತೆ. ಅದಕ್ಕಾಾಗಿ ಅವರ ಮುಂದಿನ ಕೃತಿಶಾಸನಕ್ಕಾಾಗಿ ಕಾಯೋಣ.