ವೀಕೆಂಡ್ ವಿಥ್ ಮೋಹನ್
ಮೋಹನ್ ವಿಶ್ವ
ದಕ್ಷಿಣ ಭಾರತದಲ್ಲಿ ದೇವಸ್ಥಾನಗಳೆಂದರೆ ಥಟ್ಟನೆ ನೆನಪಾಗುವುದು ‘ತಮಿಳುನಾಡು’, ಅಲ್ಲಿ ಕಾಣಸಿಗದ ದೇವಸ್ಥಾನವಿಲ್ಲವೆಂಬ ಮಾತಿದೆ. ಮನೆಯಲ್ಲಿನ ವಯಸ್ಸಾದ ಪೋಷಕರು ದಕ್ಷಿಣ ಭಾರತದ ತೀರ್ಥಯಾತ್ರೆಯೆಂದರೆ ಸಾಕು ತಮಿಳುನಾಡನ್ನು ನೆನಪಿಸಿ ಕೊಳ್ಳುತ್ತಾರೆ.
ದಕ್ಷಿಣ ತಮಿಳುನಾಡಿನ ’ಕನ್ಯಾಕುಮಾರಿ’ಯಿಂದ ಶುರುವಾಗಿ ಉತ್ತರ ತಮಿಳುನಾಡಿನ ‘ಕಂಚಿ ಕಾಮಾಕ್ಷಿ’ಯವರೆಗೂ ಪ್ರಮುಖ ದೇವಸ್ಥಾನಗಳ ಸರಮಾಲೆಯೇ ಕಾಣಸಿಗುತ್ತದೆ. ಇತ್ತ ಪೂರ್ವದಲ್ಲಿ ‘ತಂಜಾವೂರಿನ ಬೃಹದೇಶ್ವರ’ ದೇವಸ್ಥಾನದಿಂದ ಶುರುವಾಗಿ ಪಶ್ಚಿಮದಲ್ಲಿನ ‘ಭವಾನಿ’ಯ ದೇವಸ್ಥಾನದವರೆಗೂ ಮತ್ತಷ್ಟು ಪ್ರಮುಖ ದೇವಸ್ಥಾನಗಳ ಸರಮಾಲೆಯಿದೆ. ಇಡೀ ತಮಿಳುನಾಡಿನ ದೇವಸ್ಥಾನಗಳನ್ನು ಕೇವಲ ಪ್ರವೇಶಿಸಿ ದರ್ಶನ ಮಾಡಿ ಬರಲು ಕನಿಷ್ಠವೆಂದರೂ
ಒಂದು ತಿಂಗಳುಗಳ ಸಮಯವಾದರೂ ಬೇಕು. ಪ್ರತಿಯೊಂದು ದೇವಸ್ಥಾನವೂ ಬೃಹದಾಕಾರದ ಪ್ರಾಂಗಣಗಳನ್ನು ಹೊಂದಿದೆ. ತಮಿಳುನಾಡಿನ ಪ್ರಮುಖ ದೇವಸ್ಥಾನ ಗಳಿಗೆ ನಾಲ್ಕು ದಿಕ್ಕುಗಳಲ್ಲಿ ಪ್ರವೇಶ ಮಂದಿರಗಳನ್ನು ನೂರಾರು ವರ್ಷಗಳ ಹಿಂದೆಯೇ ನಿರ್ಮಿಸಲಾಗಿದೆ. ‘ಪಾಂಡ್ಯರು’ ‘ಚೋಳರ’ ಆಡಳಿತದಲ್ಲಿ ತಮಿಳುನಾಡಿನ ಪ್ರಮುಖ ದೇವಸ್ಥಾನಗಳನ್ನು ನಿರ್ಮಿಸಲಾಗಿದೆ,
ಪ್ರತಿಯೊಂದು ದೇವಸ್ಥಾನವು ತನ್ನದೇ ಆದಂತಹ ಸುದೀರ್ಘ ಇತಿಹಾಸವನ್ನು ಹೊಂದಿದೆ.
ಸಾವಿರಾರು ವರ್ಷಗಳ ಕೆಳಗೆ ತಮಿಳುನಾಡಿನಲ್ಲಿ ಹಿಂದೂ ಧರ್ಮವು ಎಷ್ಟು ಆಳವಾಗಿ ಬೇರೂರಿತ್ತೆಂಬುದಕ್ಕೆ ತಮಿಳುನಾಡಿನ ದೇವಾಲಯಗಳೇ ಸಾಕ್ಷಿ. ತಮಿಳುನಾಡಿನ ಪ್ರತಿಯೊಂದು ದೇವಸ್ಥಾನದಲ್ಲಿ ಇಂದಿಗೂ ಸಹ ನೂರಾರು ವರ್ಷಗಳ ಹಿಂದೆ ಅಲ್ಲಿನ ರಾಜಮಹಾರಾಜರು ಆಚರಿಸಿ ಕೊಂಡು ಬಂದಂತಹ ಸನಾತನ ಧರ್ಮದ ಕುರುಹುಗಳಿವೆ. ದೇವಸ್ಥಾನದ ಪ್ರತಿಯೊಂದು ಕಂಬದ ಮೇಲಿನ ಕೆತ್ತನೆಗಳಮೇಲೆ ಹಿಂದೂ ಧರ್ಮದ ಆಚರಣೆಗಳ ಲಕ್ಷಾಂತರ ಕುರುಹುಗಳಿವೆ. ಒಂದು ಅಂದಾಜಿನ ಪ್ರಕಾರ ತಮಿಳುನಾಡಿ ನಲ್ಲಿ ಸುಮಾರು 33000 ಪುರಾತನ ದೇಗುಲಗಳಿವೆ.
ಇವುಗಳಲ್ಲಿ ಬಹುತೇಕ ದೇವಾಲಯಗಳು 800 ರಿಂದ ದಕ್ಷಿಣ ಭಾರತದಲ್ಲಿ ದೇವಸ್ಥಾನಗಳೆಂದರೆ ಥಟ್ಟನೆ ನೆನಪಾಗುವುದು ‘ತಮಿಳುನಾಡು’, ಅಲ್ಲಿ ಕಾಣಸಿಗದ ದೇವಸ್ಥಾನವಿಲ್ಲವೆಂಬ ಮಾತಿದೆ. ಮನೆಯಲ್ಲಿನ ವಯಸ್ಸಾದ ಪೋಷಕರು ದಕ್ಷಿಣ ಭಾರತದ ತೀರ್ಥಯಾತ್ರೆಯೆಂದರೆ ಸಾಕು ತಮಿಳುನಾಡನ್ನು ನೆನಪಿಸಿಕೊಳ್ಳುತ್ತಾರೆ. ದಕ್ಷಿಣ ತಮಿಳುನಾಡಿನ ’ಕನ್ಯಾಕುಮಾರಿ’ಯಿಂದ ಶುರುವಾಗಿ ಉತ್ತರ ತಮಿಳುನಾಡಿನ ‘ಕಂಚಿ ಕಾಮಾಕ್ಷಿ’ಯವರೆಗೂ ಪ್ರಮುಖ ದೇವಸ್ಥಾನಗಳ ಸರಮಾಲೆಯೇ ಕಾಣಸಿಗುತ್ತದೆ.
ಇತ್ತ ಪೂರ್ವದಲ್ಲಿ ‘ತಂಜಾವೂರಿನ ಬೃಹದೇಶ್ವರ’ ದೇವಸ್ಥಾನದಿಂದ ಶುರುವಾಗಿ ಪಶ್ಚಿಮದಲ್ಲಿನ ‘ಭವಾನಿ’ಯ ದೇವಸ್ಥಾನದ ವರೆಗೂ ಮತ್ತಷ್ಟು ಪ್ರಮುಖ ದೇವಸ್ಥಾನಗಳ ಸರಮಾಲೆಯಿದೆ. ಇಡೀ ತಮಿಳುನಾಡಿನ ದೇವಸ್ಥಾನಗಳನ್ನು ಕೇವಲ ಪ್ರವೇಶಿಸಿ ದರ್ಶನ ಮಾಡಿ ಬರಲು ಕನಿಷ್ಠವೆಂದರೂ ಒಂದು ತಿಂಗಳುಗಳ ಸಮಯವಾದರೂ ಬೇಕು. ಪ್ರತಿಯೊಂದು ದೇವಸ್ಥಾನವೂ ಬೃಹದಾಕಾರದ ಪ್ರಾಂಗಣ ಗಳನ್ನು ಹೊಂದಿದೆ. ತಮಿಳುನಾಡಿನ ಪ್ರಮುಖ ದೇವಸ್ಥಾನಗಳಿಗೆ ನಾಲ್ಕು ದಿಕ್ಕುಗಳಲ್ಲಿ ಪ್ರವೇಶ ಮಂದಿರಗಳನ್ನು ನೂರಾರು ವರ್ಷಗಳ ಹಿಂದೆಯೇ ನಿರ್ಮಿಸಲಾಗಿದೆ.
‘ಪಾಂಡ್ಯರು’ ‘ಚೋಳರ’ ಆಡಳಿತದಲ್ಲಿ ತಮಿಳುನಾಡಿನ ಪ್ರಮುಖ ದೇವಸ್ಥಾನಗಳನ್ನು ನಿರ್ಮಿಸಲಾಗಿದೆ, ಪ್ರತಿಯೊಂದು ದೇವಸ್ಥಾನವು ತನ್ನದೇ ಆದಂತಹ ಸುದೀರ್ಘ ಇತಿಹಾಸವನ್ನು ಹೊಂದಿದೆ. ಸಾವಿರಾರು ವರ್ಷಗಳ ಕೆಳಗೆ ತಮಿಳುನಾಡಿನಲ್ಲಿ ಹಿಂದೂ ಧರ್ಮವು ಎಷ್ಟು ಆಳವಾಗಿ ಬೇರೂರಿತ್ತೆಂಬುದಕ್ಕೆ ತಮಿಳುನಾಡಿನ ದೇವಾಲಯಗಳೇ ಸಾಕ್ಷಿ. ತಮಿಳುನಾಡಿನ
ಪ್ರತಿಯೊಂದು ದೇವಸ್ಥಾನದಲ್ಲಿ ಇಂದಿಗೂ ಸಹ ನೂರಾರು ವರ್ಷಗಳ ಹಿಂದೆ ಅಲ್ಲಿನ ರಾಜಮಹಾರಾಜರು ಆಚರಿಸಿಕೊಂಡು ಬಂದಂತಹ ಸನಾತನ ಧರ್ಮದ ಕುರುಹುಗಳಿವೆ.
ದೇವಸ್ಥಾನದ ಪ್ರತಿಯೊಂದು ಕಂಬದ ಮೇಲಿನ ಕೆತ್ತನೆಗಳ ಮೇಲೆ ಹಿಂದೂ ಧರ್ಮದ ಆಚರಣೆಗಳ ಲಕ್ಷಾಂತರ ಕುರುಹುಗಳಿವೆ. ಒಂದು ಅಂದಾಜಿನ ಪ್ರಕಾರ ತಮಿಳುನಾಡಿನಲ್ಲಿ ಸುಮಾರು 33000 ಪುರಾತನ ದೇಗುಲಗಳಿವೆ. ಇವುಗಳಲ್ಲಿ ಬಹುತೇಕ ದೇವಾಲಯಗಳು 800 ರಿಂದ 5000 ವರ್ಷಗಳ ಹಿಂದೆ ಕಟ್ಟಲಾಗಿದೆ. ಪ್ರಪಂಚದ ಬಹುದೊಡ್ಡ ಹಿಂದೂ ದೇವಾಲಯಗಳು
ತಮಿಳುನಾಡಿನಲ್ಲಿರುವುದು, ದಕ್ಷಿಣ ಭಾರತದವರಾಗಿ ನಮ್ಮೆ ಹೆಮ್ಮೆ.
ತಮಿಳುನಾಡಿನ ದೇವಸ್ಥಾನದ ಪ್ರಾಂಗಣಗಳಲ್ಲಿ ನೂರಾರು ವರ್ಷಗಳ ಹಿಂದೆ ನಿರ್ಮಿಸಿದ ಸುಮಾರು 2359 ಕಲ್ಯಾಣಿಗಳಿವೆ. ಹಿಂದೂ ಧರ್ಮದಲ್ಲಿ ಪೂಜಿಸಲ್ಪಡುವ ಅಷ್ಟೂ ದೇವರ ದೇವಸ್ಥಾನ ಗಳಿರುವ ರಾಜ್ಯ ತಮಿಳುನಾಡಿನಲ್ಲಿ ಇಂದು, ‘ದೇವಸ್ಥಾನ ಗಳನ್ನು ಸರಕಾರದಿಂದ ಬಿಡಿಸಿ’ ಎಂಬ ಅಭಿಯಾನವನ್ನು ಕೈಗೊಳ್ಳಬೇಕಿರುವ ಪರಿಸ್ಥಿತಿ ಎದುರಾಗಿರುವುದು ಮಾತ್ರ
ದುರದೃಷ್ಟಕರ ಸಂಗತಿ.
1930 ರಿಂದ 1950ರ ದಶಕದಲ್ಲಿ ತಮಿಳುನಾಡಿನಲ್ಲಿ ‘ದ್ರಾವಿಡರ’ ಹೋರಾಟದಲ್ಲಿ ಬ್ರಾಹ್ಮಣತ್ವವನ್ನು ಧಿಕ್ಕರಿಸಲಾಯಿತು, ಹಿಂದೂ ಧರ್ಮದ ಆಚರಣೆಗಳನ್ನು ಕೇವಲ ಮೂಢನಂಬಿಕೆ ಎಂದು ಬಿಂಬಿಸಲಾಯಿತು. ಇಡೀ ದಕ್ಷಿಣ ಭಾರತ ದ್ರಾವಿಡರ ನಾಡು, ಉತ್ತರ ಭಾರತದಿಂದ ಬಂದಂತಹ ಜನರು ದ್ರಾವಿಡರ ಮೇಲೆ ಆಕ್ರಮಣ ಮಾಡಿ ಹಿಂದೂ ಧರ್ಮವನ್ನು ಹೇರಿಗೂರೆಂಬ ಚಳವಳಿ ಶುರುವಾಯಿತು. ಬ್ರಾಹ್ಮಣರು ಹಾಗು ಉತ್ತರ ಭಾರತದವರು ಆರ್ಯರು, ದಕ್ಷಿಣ ಭಾರತದ ದ್ರಾವಿಡ ನಾಡಿನ ಮೇಲೆ
ತಮ್ಮ ಧರ್ಮವನ್ನು ಬಲವಂತವಾಗಿ ಹೇರಿದರೆಂಬ ಹೊಸ ಇತಿಹಾಸವನ್ನು ದ್ರಾವಿಡ ಚಳವಳಿಯ ಮೂಲಕ ಹೇಳಲಾಯಿತು.
ತಮಿಳುನಾಡಿನಲ್ಲಿ ದ್ರಾವಿಡ ಚಳವಳಿ ಶುರುವಾಗುದರ ಹಿಂದೆ ಕ್ರಿಶ್ಚಿಯನ್ ಮಿಷನರಿಗಳ ಷಡ್ಯಂತ್ರ ಬಹಳ ಇತ್ತು.ಪಾಶ್ಚಿಮಾತ್ಯ ದೇಶಗಳಿಂದ ಬಂದಂತಹ ಕ್ರಿಶ್ಚಿಯನ್ ಧರ್ಮಗುರುಗಳಿಗೆ, ಬ್ರಿಟನ್‌ನ ರಾಣಿಯರೇ ಭಾರತದಲ್ಲಿ ಮತಾಂತರ ಮಾಡಲು ನೂರಾರು ಕೋಟಿಗಳಷ್ಟು ಹಣವನ್ನು ಕಳುಹಿಸುತ್ತಿದ್ದರು. ತಮ್ಮ ಮತಾಂತರದ ಷಡ್ಯಂತ್ರಕ್ಕೆ ಕ್ರಿಶ್ಚಿಯನ್ ಮಿಷನರಿಗಳು ದಕ್ಷಿಣ ಭಾರತದಲ್ಲಿ
ಹೆಚ್ಚಿನ ಸಮಯವನ್ನು ಕಳೆದದ್ದು ತಮಿಳುನಾಡಿನಲ್ಲಿ.
ಹಿಂದೂ ಧರ್ಮಕ್ಕೆ ಹೋಲುವ ಕ್ರಿಶ್ಚಿಯನ್ ಆಚರಣೆಗಳ ಮೂಲವು ಬೈಬಲ್ ಎಂದು ಹೇಳುವ ಮೂಲಕ ಮಂಕುಬೂದಿ ಎರಚಿದ್ದರು. ಹಿಂದೂ ಧರ್ಮದ ಹಲವು ಆಚರಣೆಗಳು ’ಬೈಬಲ’ ಮೂಲದಿಂದ ಬಂದಿವೆಯೆಂದು ಜನರ ತಲೆಕೆಡಿಸಿದರು. ಶ್ರೀ ಕೃಷ್ಣನ ಮತ್ತೊಂದು ಅವತಾರವೇ ‘ಯೇಸು’ವೆಂದು ಹೇಳಿದರು, ಶ್ರೀ ಕೃಷ್ಣನ ’ಗೀತೋಪದೇಶ’ದ ರೀತಿಯಲ್ಲಿ ಯೇಸುವೂ ಸಹ ಜೀವನದ ನೀತಿಪಾಠಗಳನ್ನು ಹೇಳಿದ್ದನೆಂದರು. ವೇದಗಳ ಮೂಲವು ’ಬೈಬಲ’ ಎಂದೆಲ್ಲ ಸುಳ್ಳು ಹೇಳಿ ತಮಿಳುನಾಡಿನ
ಜನರ ತಲೆಯಲ್ಲಿ ಹಿಂದೂ ಧರ್ಮದ ಮೇಲಿನ ನಂಬಿಕೆಯನ್ನು ಕಡಿಮೆ ಮಾಡಿಸಿದರು.
ಇಂದಿಗೂ ಸಹ ಕನ್ಯಾಕುಮಾರಿ ಜಿಲ್ಲೆಯಲ್ಲಿ ‘ವೇತ ಕೋಯಲ’ಗಳಿವೆ. ಯಾವಾಗ ನಿಧಾನ ವಾಗಿ ತಮಿಳುನಾಡಿನ ಜನರು ಹಿಂದೂ
ಧರ್ಮದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಲು ಶುರುಮಾಡಿದರೋ, ಆಗ ‘ದ್ರಾವಿಡ’ರ ಹೋರಾಟ ಶುರುವಾಯಿತು. ಬ್ರಾಹ್ಮಣರನ್ನು ದ್ರಾವಿಡರ ಶತ್ರುಗಳಂತೆ ಬಿಂಬಿಸಿ ದ್ರಾವಿಡ ಹಾಗೂ ಬ್ರಾಹ್ಮಣರ ನಡುವೆ ದೊಡ್ಡದೊಂದು ಕಂದಕವನ್ನೇ ಸೃಷ್ಟಿಸ ಲಾಯಿತು. ಇನ್ನು ಉತ್ತರ ಭಾರತದವರನ್ನು ಆರ್ಯರೆನ್ನುವ ಮೂಲಕ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ನಡುವೆ ಮತ್ತೊಂದು ಬಹುದೊಡ್ಡ ಕಂದಕವನ್ನು ಸೃಷ್ಟಿಸಲಾಯಿತು.
ಇತಿಹಾಸವನ್ನೊಮ್ಮೆ ಕೆದಕಿ ನೋಡಿದರೆ, ಬ್ರಾಹ್ಮಣನು ಪೂಜಿಸುವ ಯಾವ ದೇವರೂ ಬ್ರಾಹ್ಮಣನಲ್ಲ. ‘ಶ್ರೀ ಕೃಷ್ಣ’ ಕ್ಷತ್ರಿಯನಾಗಿ ಹುಟ್ಟಿ, ಯಾದವ ಕುಲದಲ್ಲಿ ಬೆಳೆದವನು. ’ಶ್ರೀ ರಾಮಚಂದ್ರ’ ಕ್ಷತ್ರಿಯ ಕುಲದಲ್ಲಿ ಹುಟ್ಟಿದ ವನು,’ರಾವಣ’ ಬ್ರಾಹ್ಮಣನಾದರೂ ಅವನನ್ನು ಪೂಜಿಸುವುದಿಲ್ಲ, ಶಿವನನ್ನು ಸ್ಮಶಾನ ಕಾಯುವನೆಂದು ಕರೆದರೂ ಬ್ರಾಹ್ಮಣರು ಅವನನ್ನು ಪೂಜಿಸುತ್ತಾರೆ. ಅಷ್ಟೇ ಯಾಕೆ ವೇದ ಗಳನ್ನು ಬರೆದ ‘ವ್ಯಾಸರು’ ಬ್ರಾಹ್ಮಣರಲ್ಲ, ‘ರಾಮಾಯಣ’ ವನ್ನು ಬರೆದ ‘ವಾಲ್ಮೀಕಿ’ ಒಬ್ಬ ಬೇಡ ಜನಾಂಗದವನು.
‘ಭಾರತದ ಸಂವಿಧಾನದ ಪಿತಾಮಹ’ ‘ಸಾಮಾಜಿಕ ಕ್ರಾಂತಿ ಸೂರ್ಯ’ ‘ಬಾಬಾಸಾಹೇಬ್ ಅಂಬೇಡ್ಕರ್ ದಲಿತರು.
ಇಷ್ಟೆ ಉದಾಹರಣೆಗಳು ಕಣ್ಣ ಮುಂದಿದ್ದರೂ ಸಹ ಕ್ರಿಶ್ಚಿಯನ್ ಮಿಷ‘ನರಿ’ಗಳ ಸತತ ಹಣ ಬಲದ ಪ್ರಯತ್ನದಿಂದಾಗಿ ತಮಿಳುನಾಡಿನಲ್ಲಿ ’ಬ್ರಾಹ್ಮಣರು’ ಹಾಗೂ ‘ದ್ರಾವಿಡ’ರೆಂಬ ಎರಡು ಭಾಗವನ್ನು ಮಾಡಲಯಿತು. ಕ್ರಿಶ್ಚಿಯನ್ ಮಿಷನರಿಗಳ ಹುನ್ನಾರದಿಂದ ಶುರುವಾದಂತಹ ದ್ರಾವಿಡ ಚಳವಳಿಯನ್ನು ಹೈಜಾಕ್ ಮಾಡಿದ ರಾಜಕೀಯ ಪಕ್ಷಗಳು ತಮಿಳುನಾಡಿನಲ್ಲಿ ದ್ರಾವಿಡ ಸಿದ್ಧಾಂತವನ್ನೇ ಬಂಡವಾಳವನ್ನಾಗಿಸಿಕೊಂಡು ಅಧಿಕಾರದ ಗದ್ದುಗೆ ಹಿಡಿದವು. ಕರುಣಾನಿಧಿ ನೇತೃತ್ವದಲ್ಲಿ ‘ಡಿ.ಎಂ.ಕೆ’
ಪಕ್ಷ ಅಧಿಕಾರವನ್ನು ಸ್ಥಾಪಿಸಿದರೆ, ’ಎಂ.ಜಿ.ಆರ್’ ನೇತೃತ್ವದಲ್ಲಿ ’ಎ.ಐ.ಎ.ಡಿ.ಎಂಕೆ’ ಅಧಿಕಾರದ ಚುಕ್ಕಾಣಿ ಹಿಡಿಯಿತು.
’ಎಂ.ಜಿ.ಆರ್’ನ ಮರಣದ ನಂತರ ’ಜಯಲಲಿತ’ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಿ ಮಾಡಿದ್ದೂ ಮತ್ತದೇ ದ್ರಾವಿಡ ರಾಜಕಾರಣ. ಹಿಂದೂ ಧರ್ಮದ ಸಾವಿರಾರು ದೇವಸ್ಥಾನಗಳ ನಾಡಿನಲ್ಲಿ ಹಿಂದೂ ಸಂಸ್ಕೃತಿಗೆ ಮಾಡಿದ ಅಪಮಾನಗಳು ಒಂದೆರಡಲ್ಲ. ಜನಿವಾರ ಧರಿಸಿದವರನ್ನು ನೋಡಿ ಆಡಿಕೊಂಡು ನಗುವಂತೆ ಮಾಡಲಾಯಿತು, ದೇವಸ್ಥಾನಗಳನ್ನು ಸರಕಾರದ
ಸುಪರ್ದಿಗೆ ತೆಗೆದುಕೊಳ್ಳಲಾಯಿತು. ಆದರೆ ಹಿಂದೂ ಧರ್ಮದ ಆಚರಣೆಗಳ ವಿರುದ್ಧ ಶುರುವಾದಂತಹ ದ್ರಾವಿಡ
ರಾಜಕಾರಣದಲ್ಲಿ ಬಳಕೆಯಾದದ್ದು ಹಿಂದೂ ದೇವಸ್ಥಾನಗಳ ಹಣ.
ತಮಿಳುನಾಡಿನ ಹಲವು ದೇವಸ್ಥಾನಗಳ ಆಡಳಿತ ಮಂಡಳಿಗಳು ರಾಜಕೀಯ ನಾಯಕರ ಮಧ್ಯಸ್ಥಿಕೆಯಿಂದ ಚುನಾಯಿತ ವಾಗುತ್ತವೆ, ದೇವಸ್ಥಾನದ ಆಡಳಿತ ಮಂಡಳಿಯನ್ನು ಸರಕಾರಗಳು ನಿಯಂತ್ರಿಸುತ್ತವೆ. ’ಈಶಾ ಫೌಂಡೇಶನ್’ನ ಸಂಸ್ಥಾಪಕ ದಂತಹ ’ಜಗ್ಗಿ ವಾಸುದೇವ್’ ಅವರು ಇತ್ತೀಚಿಗೆ ’ಫ್ರೀ ತಮಿಳುನಾಡು ಟೆಂಪಲ್ಸ’ಎಂಬ ಅಭಿಯಾನವನ್ನು ಶುರು ಮಾಡಿzರೆ. ಅವರೇ ಹೇಳುವ ಹಾಗೆ ದೇವಸ್ಥಾನದ ಜಾಗ, ವಡವೆ, ಹಣವನ್ನು ಸರಕಾರದ ಸುಪರ್ದಿಗೆ ತೆಗೆದುಕೊಳ್ಳುವ ಕೆಲಸವು ಸುಮಾರು 300ವರ್ಷಗಳ ಕೆಳಗೆ ಬ್ರಿಟಿಷರ ’ಈ ಇಂಡಿಯಾ ಕಂಪನಿ’ಯಿಂದ ಶುರುವಾಯಿತು.
ವಿಪರ್ಯಾಸವೆಂದರೆ ಸ್ವಾತಂತ್ರ್ಯ ಬಂದು 74 ವರ್ಷಗಳು ಕಳೆದರೂ ಸಹ ತಮಿಳುನಾಡಿನಲ್ಲಿ ಇಂದಿಗೂ ಅದೇ ಮಾದರಿಯ ಆಡಳಿತವನ್ನು ಸರಕಾರಗಳು ನಡೆಸಿಕೊಂಡು ಬರುತ್ತಿವೆ. ದೇವಸ್ಥಾನಗಳನ್ನು ಭಕ್ತರಿಗೆ ನಡೆಸಿಕೊಂಡು ಹೋಗಲು ಬಿಟ್ಟರೆ, ಇತಿಹಾಸದಲ್ಲಿ ಹಾಳಾಗಿರುವ ತಮಿಳುನಾಡಿನ ಹಲವು ದೇವಸ್ಥಾನಗಳನ್ನು ಪುನರುಜ್ಜೀವನಗೊಳಿಸುವಲ್ಲಿ ಯಶಸ್ವಿಯಾಗ ಬಹುದು.
’ಜಗ್ಗಿ ವಾಸುದೇವ್’ ಅವರು ಹೇಳಿದ ಹಾಗೆ ಬ್ರಿಟಿಷರು ತಮ್ಮ ಈ ಇಂಡಿಯಾ ಕಂಪನಿಯ ಮೂಲಕ ಭಾರತದ ಹಿಂದೂ ಸಂಸ್ಕೃತಿ ಯನ್ನು ನಾಶಮಾಡಲು ‘ದೇವಸ್ಥಾನಗಳನ್ನು’ ತಮ್ಮ ಸುಪರ್ದಿಗೆ ತೆಗೆದುಕೊಂಡು ಇಲ್ಲಸಲ್ಲದ ರಾಜಕೀಯಗಳನ್ನು ಮಾಡಲು ಶುರು ಮಾಡಿದ್ದರು. ದೇವಸ್ಥಾನದಲ್ಲಿನ ಹುಂಡಿಯ ಹಣ, ಚಿನ್ನ, ಪೂರ್ವಜರು ದಾನ ಮಾಡಿದ್ದಂತಹ ಸಾವಿರಾರು ಎಕರೆ ದೇವಸ್ಥಾನದ ಜಮೀನುಗಳನ್ನು ತಮ್ಮ ವಶಕ್ಕೆ ಪಡೆದು ಸರಕಾರಗಳು ಹೇಳಿದಂತೆ ದೇವಸ್ಥಾನದ ಆಡಳಿತ ಮಂಡಳಿ
ಕೇಳುವಂತೆ ನೋಡಿಕೊಂಡರು.
ಭಾರತೀಯ ಸಮಾಜದಲ್ಲಿನ ಅಸ್ಪೃಶ್ಯತೆಯನ್ನೇ ಅಸ್ತ್ರವನ್ನಾಗಿಸಿಕೊಂಡು ಲಂಡನ್‌ನ ’ಚರ್ಚಿನ ಬಿಷಪ್’ಗಳ ಮೂಲಕ ಭಾರತದಲ್ಲಿ ದಲಿತರನ್ನು ಹೆಚ್ಚಾಗಿ ಮತಾಂತರ ಮಾಡಿದರು. ಸ್ವಾತಂತ್ರ್ಯ ಬಂದಮೇಲೂ ಸಹ ತಮಿಳುನಾಡಿನ ಸರಕಾರಗಳು ಅದೇ ಕೆಲಸವನ್ನೇ ಮಾಡಿಕೊಂಡು ಬಂದಿವೆ, ದ್ರಾವಿಡರ ಹೆಸರಿನಲ್ಲಿ ಹಿಂದೂ ದೇವಸ್ಥಾನಗಳ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ತಮಗಿಷ್ಟ ಬಂದಂತೆ ಆಡಳಿತ ನಡೆಸುತ್ತಿದ್ದರು.
ತಮಿಳುನಾಡಿನಲ್ಲಿ ಕಣ್ಣಿಗೆ ಕಾಣುವ ದೇವಸ್ಥಾನಗಳ ಪರಿಸ್ಥಿತಿ ಇದಾದರೆ, ಪೂಜೆಯೇ ಮಾಡದೆ ಸುಮಾರು ’119999’ ದೇವಸ್ಥಾನ ಗಳು ಪಾಳುಬಿದ್ದಿವೆ. ಸರಕಾರಗಳು ಇದರ ಬಗ್ಗೆ ಇದುವರೆಗೂ ಗಮನವನ್ನೇ ಹರಿಸಿಲ್ಲ. ಕಳೆದ 25 ವರ್ಷಗಳಲ್ಲಿ ಸುಮಾರು 1200 ಪುರಾತನ ವಿಗ್ರಹಗಳ ಕಳ್ಳಸಾಗಣೆಯಾಗಿವೆ, 37000 ದೇವಸ್ಥಾನಗಳಲ್ಲಿ ಕೇವಲ ಒಬ್ಬ ಪೂಜಾರಿಯಿzನೆ, ಅಂದರೆ ಭಕ್ತರೇ ಇಲ್ಲದ ದೇಗುಲಗಳಿವು, 24000 ದೇವಸ್ಥಾನಗಳು ವರ್ಷಕ್ಕೆ 10000ಕ್ಕಿಂತಲೂ ಕಡಿಮೆ ಆದಾಯದಿಂದ ತಮ್ಮ ಅಸ್ತಿತ್ವವನ್ನು ಉಳಿಸಿ ಕೊಳ್ಳಲು ಒದ್ದಾಡುತ್ತಿವೆ.
ವರ್ಷಕ್ಕೆ ನೂರಾರು ಕೋಟಿ ಆದಾಯವನ್ನು ನೀಡುವ ದೊಡ್ಡ ದೊಡ್ಡ ದೇವಸ್ಥನಾನಗಳು ತಮಿಳುನಾಡಿನಲ್ಲಿರುವಾಗ ಇಷ್ಟೊಂದು ದೊಡ್ಡ ಮಟ್ಟದ ಪುರಾತನ ದೇವಸ್ಥಾನಗಳು ಹೀನಾಯ ಪರಿಸ್ಥಿತಿ ತಲುಪಿದ್ದು ಮಾತ್ರ ವಿಪರ್ಯಾಸ. ಸರಕಾರಗಳ ಅಧೀನದಲ್ಲಿರುವವರೆಗೂ ಈ ದೇವಸ್ಥಾನಗಳು ಪುನರುಜ್ಜೀವನವಾಗುವುದಿಲ್ಲವೆಂಬ ಸತ್ಯ ’ಜಗ್ಗಿ ವಾಸುದೇವ್’ರಿಗೆ ತಿಳಿದಿದೆ.
ದೇವಸ್ಥಾನಗಳನ್ನು ಸರಕಾರದ ಅಧೀನದಿಂದ ಬಿಡುಗಡೆಗೊಳಿಸಿ ಭಕ್ತಾದಿಗಳ ಅಧೀನದಲ್ಲಿರಿ ಸಿದರೆ ಪಾಳು ಬಿದ್ದಿರುವ ಹಲವಾರು
ದೇವಸ್ಥಾನಗಳನ್ನು ಪುನ ರುಜ್ಜೀವನಗೊಳಿಸಬಹುದೆಂಬುದು ಅವರ ಹೋರಾಟದ ಮೂಲ ಉದ್ದೇಶ. ಹಿಂದೂ ಧರ್ಮದ
ಆಚರಣೆಗಳನ್ನೇ ನಂಬದ ತಮಿಳುನಾಡಿದ ರಾಜಕೀಯ ಪಂಡಿತರ ನಡುವೆ ’ಇಶಾ ಫೌಂಡೇಶನ್’ನಂತಹ ಬಹುದೊಡ್ಡ ಧಾರ್ಮಿಕ ಕೇಂದ್ರವನ್ನು ತಮಿಳುನಾಡಿನಲ್ಲಿ ಸ್ಥಾಪನೆ ಮಾಡಿ ಇತಿಹಾಸದಲ್ಲಿ ಹುದುಗಿಹೋಗಿರುವ ಹಿಂದೂ ಧರ್ಮದ ದೇವಸ್ಥಾನಗಳ ಪುನರುಜ್ಜೀವನಗೊಳಿಸಲು ಹೋರಾಡುವುದು ಸುಲಭದ ಮಾತಲ್ಲ.
ದ್ರಾವಿಡರಿಗೆ ’ಕಮ್ಯುನಿಸ್ಟರು’ ಕೈಜೋಡಿಸಿರುವಂತಹ ರಾಜ್ಯ ತಮಿಳುನಾಡು. ಕಮ್ಯುನಿಸ್ಟರಿಗೆ ತಮಿಳುನಾಡಿನಲ್ಲಿ ರಾಜಕೀಯ ನೆಲೆಯಿಲ್ಲದಿದ್ದರೂ ಸಹ, ಹಿಂದೂ ಧರ್ಮದ ಆಚರಣೆಗಳ ಬಗ್ಗೆ ವಿರೋಧ ವ್ಯಕ್ತಪಡಿಸುವವರ ಪರವಾಗಿ ಕಮ್ಯುನಿಸ್ಟರು ಸದಾ ಕಾಲು ಕೆರೆದುಕೊಂಡು ನಿಂತಿರುತ್ತಾರೆ. ಮುಸಲ್ಮಾನರ ಮಸೀದಿಗಳ ಮೇಲೆ ಮಾತ್ರ ಇಲ್ಲದ ಸರಕಾರದ ಅಧಿಪತ್ಯ ಹಿಂದೂಗಳ ದೇವಸ್ಥಾನಗಳ ಮೇಲೆ ಯಾಕೆ? ಅಪ್ಪಿ ತಪ್ಪಿ ಮಸೀದಿಗಳ ಮೇಲೆ ಸರಕಾರ ತಮ್ಮ ಅಧಿಪತ್ಯ ನಡೆಸಲು ಶುರುಮಾಡಿದರೆ ಇಡೀ ತಮಿಳುನಾಡೇ ಹೊತ್ತಿ ಉರಿಯುತ್ತದೆಯೆಂಬ ಭಯ ದ್ರಾವಿಡ ಪಕ್ಷಗಳಿಗಿದೆ.
ನಿಜವಾದ ಜಾತ್ಯತೀತರೆಂದರೆ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದ ದೇವಸ್ಥಾನಗಳ ಆಡಳಿತದಲ್ಲಿ ಸರಕಾರವು ಮೂಗುತೂರಿಸ ಬಾರದು. ದ್ರಾವಿಡರ ಹೆಸರಿನಲ್ಲಿ ಕ್ರಿಶ್ಚಿಯನ್ ಮಿಷನರಿಗಳು ತಮಿಳುನಾಡಿನ ಹಳ್ಳಿ ಹಳ್ಳಿಗಳಲ್ಲಿ ಚರ್ಚು ಗಳನ್ನು ಸ್ಥಾಪಿಸಿ ಲಕ್ಷಾಂತರ ಹಿಂದೂಗಳನ್ನು ಮತಾಂತರ ಮಾಡಿಸಿzರೆ, ಸ್ವಾತಂತ್ರ್ಯ ಪೂರ್ವದಿಂದಲೂ ನಡೆದು ಕೊಂಡು ಬಂದಿರುವಂತಹ ಮಿಷ’ನರಿ’ಗಳ ಕಳ್ಳಾಟಕ್ಕೆ ತಮಿಳುನಾಡಿನ ಹಿಂದೂ ಸಂಸ್ಕೃತಿ ಬಲಿಯಾಯಿತು.
ಇಷ್ಟು ವರ್ಷಗಳ ಕಾಲ ತಮಿಳುನಾಡಿನ ದೇವಸ್ಥಾನಗಳ ಮೇಲೆ ನಡೆದ ಸರಕಾರಿ ಆಡಳಿತ ದಾಳಿಯನ್ನು ಮುಕ್ತಗೊಳಿಸದಿದ್ದರೆ ಮುಂದಿನ 50 ರಿಂದ 100 ವರ್ಷಗಳಲ್ಲಿ ತಮಿಳುನಾಡಿನ ಪುರಾತನ ದೇವಸ್ಥಾನಗಳು ಸಂಪೂರ್ಣವಾಗಿ ನಶಿಸಿಹೋಗು ವಲ್ಲಿ
ಯಾವುದೇ ಅನುಮಾನವಿಲ್ಲ. ದೇವಸ್ಥಾನಗಳನ್ನು ನಶಿಸಿಹೋಗಲೆಂದೇ ಮೂರು ಶತಮಾನಗಳ ಕಾಲ ’ಕ್ರಿಶ್ಚಿಯನ್ ಮಿಷನರಿಗಳು’ ನಡೆಸಿದ ಕಳ್ಳಾಟಕ್ಕೆ ಜಯ ಸಿಕ್ಕಂತಾಗಿಬಿಡುತ್ತದೆ.
ಆ ’ರಥ’ವನ್ನು ಸೂಕ್ಷ್ಮವಾಗಿ ಹೋಲಿಸಿ ನೋಡಿದಾಗ, ಕುದುರೆಯಿಂದ ಚಾಲನೆ ಮಾಡಬಹುದಾದಂತಹ ರಥವಿದೆಂದು ಸಂಶೋಧಕರು ದೃಢಪಡಿಸಿದ್ದಾರೆ. ಇದರರ್ಥ ಸುಮಾರು 4500 ವರ್ಷಗಳ ಹಿಂದೆಯೇ ನಮ್ಮಲ್ಲಿ ಕುದುರೆಯಿತ್ತು. ಆದರೆ ಸುಳ್ಳು ಇತಿಹಾಸ ಬರೆದವರು ಹೇಳಿದ್ದೇನು ಗೊತ್ತಾ ?, ಭಾರತದ ಮೇಲೆ ‘ಆರ್ಯರು’ ದಾಳಿ ಮಾಡಿದಾಗ ಕುದುರೆಗಳಲ್ಲಿ ಬಂದರಂತೆ ಹಾಗಾಗಿ ಭಾರತದಲ್ಲಿ ಕುದುರೆಯನ್ನು ಮೊಟ್ಟ ಮೊದಲ ಬಾರಿಗೆ ಕುದುರೆಯನ್ನು ಪರಿಚಯಿಸಿದ್ದು ಅವರಂತೆ, ನಾವು ನೀವು ಪಠ್ಯ ಪುಸ್ತಕಗಳಲ್ಲಿ ಇದೇ ಸುಳ್ಳನ್ನೇ ವರ್ಷಗಟ್ಟಲೆ ಓದಿದ್ದು.
ಇದೇ ಆರ್ಯರ ಸುಳ್ಳನ್ನು ಬಳಸಿಕೊಂಡು ಕ್ರಿಶ್ಚಿಯನ್ ಮಿಷನರಿಗಳು ’ಉತ್ತರ ಭಾರತ’ ’ದಕ್ಷಿಣ ಭಾರತ’ವೆಂಬ ಎರಡು ಭಾಗಗಳ ನ್ನಾಗಿ ಮಾಡಲು ಪ್ರಯತ್ನಿಸಿ, ತಮಿಳುನಾಡಿನಲ್ಲಿ ದ್ರಾವಿಡರ ಸಿದ್ದಾಂತವನ್ನು ಪೋಷಿಸತೊಡಗಿದರು. ಹಿಂದೂ ಧರ್ಮದ ದೇವರ ವಿಷಯದಲ್ಲೂ ಸಹ ಉತ್ತರ ಭಾರತದ ದೇವರುಗಳನ್ನು ದಕ್ಷಿಣ ಭಾರತದ ಪೂಜಿಸುತ್ತಾರೆಂದು ಹೇಳಿದರು.
ಶಿವ, ರಾಮ, ಕೃಷ್ಣ ಎಲ್ಲರು ಸಹ ಉತ್ತರ ಭಾರತದವರು, ಅಲ್ಲಿ ಹುಟ್ಟಿದ ದೇವರುಗಳನ್ನು ದಕ್ಷಿಣ ಭಾರತದ ದೇವಸ್ಥಾನದಲ್ಲಿ ಪೂಜಿಸಲಾಗುತ್ತಿಯೆಂದು ವಾದ ಮಾಡಿದ ಹಲವು ಮಹಾಪುರುಷರು ಸಹ ಇದ್ದಾರೆ. ಶ್ರೀರಾಮನ ಕುರುಹುಗಳು ಅಯೋದ್ಯೆ ಯಿಂದ ಹಿಡಿದು, ಶ್ರೀಲಂಕಾದವರೆಗೂ ಇದೆ. ಹಾಗಾದರೆ ಶ್ರೀ ರಾಮನು ದಕ್ಷಿಣಕ್ಕೆ ಬಂದಿರಲಿಲ್ಲವೇ ? ಹನುಮಂತ ಹುಟ್ಟಿದ ಕ್ಷೇತ್ರ
’ಅಂಜನಾದ್ರಿ’ ಬೆಟ್ಟವಿರುವುದು ಕರ್ನಾಟಕದ ಕೊಪ್ಪಳದಲ್ಲಿ, ಹಾಗಾದರೆ ಹಿಂದೂಗಳು ಪೂಜಿಸುವ ಹನುಮಂತನು
ದಕ್ಷಿಣದವನಲ್ಲವೇ ? ಕ್ರಿಶ್ಚಿಯನ್ ಮಿಷನರಿಗಳ ಉಪಟಳಕ್ಕೆ ತಮಿಳುನಾಡು ಅದೆಷ್ಟು ಬಲಿಯಾಗಿದೆಯೆಂದರೆ, ’ರಾಮಸೇತು’ ವಿರುವುದು ತಮಿಳುನಾಡಿನ ರಾಮನಾಥಪುರ ಜಿಯಲ್ಲಿ,ಅಲ್ಲಿನ ಈಗಿನ ಸಂಸದ ಒಬ್ಬ ಮುಸ್ಲಿಂ ಧರ್ಮಕ್ಕೆ ಸೇರಿದವನು.
ಅಲ್ಲಿನ ಜನರು ಇಂದಿಗೂ ಸಹ ಹಿಂದೂ ಧರ್ಮದ ಆಚರಣೆಗಳನ್ನು ವಿರೋಧಿಸಿಕೊಂಡು ರಾಜಕೀಯ ಮಾಡುವ ಪಕ್ಷಕ್ಕೆ
ಮತಹಾಕಿ ಗೆಲ್ಲಿಸಿಕೊಂಡು ಬಂದಿದ್ದಾರೆ. ಅವರಿಗ್ಯಾರಿಗೂ ತಮ್ಮ ಧರ್ಮದ ಮೇಲೆ ಆಗಿರುವ ದಾಳಿಯ ಅರಿವೇ ಇಲ್ಲದಂತಾಗಿದೆ, ಹೀಗಾದರೆ ತಮಿಳುನಾಡಿನ ದೇವಸ್ಥಾನಗಳನ್ನು ಹೇಗೆ ತಾನೇ ಉಳಿಸಿಕೊಳ್ಳಲು ಸಾಧ್ಯ? ತಮಿಳುನಾಡಿನ ರಾಜರುಗಳು ಹಿಂದೂ ಧರ್ಮದ ಆಚರಣೆಗಳನ್ನು ಅದೆಷ್ಟು ಕಟ್ಟಿನಿಟ್ಟಾಗಿ ಪಾಲಿಸುತ್ತಿದ್ದರೆಂಬುದಕ್ಕೆ ಅಲ್ಲಿನ ಬೃಹತ್ ದೇವಸ್ಥಾನಗಳೇ ಸಾಕ್ಷಿ.
ಮಧುರೆಯ ಮೀನಾಕ್ಷಿ, ಕಂಚಿಯ ಕಾಮಾಕ್ಷಿ,ರಾಮೇಶ್ವರ ದೇಗುಲ,ತಿರುವಣ್ಣಾಮಲೈನ ಶಿವ, ತಿರುಚನಾಪಳ್ಳಿಯ ರಂಗನಾಥ ದೇಗುಲ, ತಂಜಾವೂರಿನ ಬೃಗದೇಶ್ವರ ದೇಗುಲ, ಕುಂಭಕೋಣಂ ದೇಗುಲ, ಈರೋಡ್ ಬಳಿಯ ವಿರುದಾಚಲಂ ದೇಗುಲ, ಚೆನ್ನೈ
ಮಹಾನಗರದಲ್ಲಿರುವ ಕಪಾಲೀಶ್ವರ ದೇವಾಲಯಗಳು ತಮಿಳುನಾಡಿನಲ್ಲಿ ಆಚರಣೆಯಲ್ಲಿದ್ದಂತಹ ಪುರಾತನ ಸನಾತನ ಧರ್ಮದ ಆಚರಣೆಗಳ ಕಥೆಯನ್ನು ಸಾರಿ ಸಾರಿ ಹೇಳುತ್ತವೆ. ಈ ದೇವಸ್ಥಾನಗಳ ಕಂಬಗಳ ಮೇಲಿನ ಕೆತ್ತನೆಗಳು ಹಿಂದೂ ಧರ್ಮದ ಆಚರಣೆಗಳ ಪ್ರತಿಯೊಂದು ಅಂಶವನ್ನೂ ಸೂಕ್ಷ್ಮವಾಗಿ ಹೇಳುತ್ತವೆ.
ವಿಜ್ಞಾನಕ್ಕೆ ಸವಾಲೆಸೆಯುವಂತಹ ಹಲವು ಶಿಲ್ಪಕಲೆಗಳು ಈ ದೇವಸ್ಥಾನಗಳಲ್ಲಿವೆ, ಚೋಳರ ಕಾಲದಲ್ಲಿ ತಂಜಾವೂರಿನ
ಬೃಹದೇಶ್ವರ ದೇವಸ್ಥಾನದ ಗೋಪುರದ ಮೇಲಿರಿಸಿರುವ 80 ಟನ್ ತೂಕದ ಗ್ರಾನೈಟನ್ನು 216 ಅಡಿ ಎತ್ತರಕ್ಕೆ ಕೊಂಡೊಯ್ದದ್ದು ಇಂದಿನ ವಿಜ್ಞಾನಕ್ಕೆ ದೊಡ್ಡ ಸವಾಲು. ತಮಿಳುನಾಡಿನ ರಾಜರುಗಳು ಸಾವಿರಾರು ವರ್ಷಗಳ ಹಿಂದೆ ಕಟ್ಟಿರುವ ಈ ದೇವಸ್ಥಾನ ಗಳು ಹಿಂದೂ ಧರ್ಮದ ಆಚರಣೆಗಳನ್ನು ಸಾರಿ ಸಾರಿ ಹೇಳುವಾಗ, ಹಿಂದೂ ಧರ್ಮದ ಆಚರಣೆಗಳನ್ನೇ ನಂಬದ ದ್ರಾವಿಡರ ಸಿದ್ದಾಂತ ಅದೆಲ್ಲಿಂದ ಉದ್ಭವವಾಯಿತೋ ದೇವರೇ ಬಲ್ಲ.
ದೇವಸ್ಥಾನಗಳ ತವರೂರಾಗಿರುವ ತಮಿಳುನಾಡಿನಲ್ಲಿ ದೇವರನ್ನೇ ನಂಬದ ’ದ್ರಾವಿಡ’ ಸಿದ್ದಾಂತ ಹುಟ್ಟಿಕೊಂಡದ್ದು ಮಾತ್ರ ಬಹುದೊಡ್ಡ ವಿಪರ್ಯಾಸ. ತಮಿಳುನಾಡಿನ ದೇವಸ್ಥಾನಗಳನ್ನು ಈಗಲಾದರೂ ಸರ್ಕಾರದ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳ ದಿದ್ದರೆ ಇನ್ನೊಂದು ಶತಮಾನದಲ್ಲಿ ಸಾವಿರಾರು ದೇಗುಲಗಳು ನಶಿಸಿಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ.