Sunday, 15th December 2024

ಶಾಲಾ ಪಠ್ಯ: ದೇಶಪ್ರೇಮಿ ಯುವಕನೊಬ್ಬನ ಜಿಜ್ಞಾಸೆ

ಪ್ರಸ್ತುತ

ಅರ್ಜುನ್‌ ಶೆಣೈ

ದೇಶದ ಬಗ್ಗೆ ಗರ್ವದಿಂದ ಮಾತನಾಡುವುದು, ಅದನ್ನು ಮಕ್ಕಳಿಗೆ ತಿಳಿಹೇಳುವುದು, ಅವರಲ್ಲಿ ಆತ್ಮಗೌರವ ಸೃಷ್ಟಿಸು ವುದು ಕೇಸರೀಕರಣವಾಗುತ್ತದೆಯೇ? ದೇಶದ ಭವ್ಯಪರಂಪರೆಯನ್ನು ವಿದ್ಯಾರ್ಥಿಗಳಿಗೆ ಮುಟ್ಟಿಸುವುದರಿಂದ ಯಾವುದೋ ಒಂದು ನಿರ್ದಿಷ್ಟ ಪಕ್ಷಕ್ಕೆ ಲಾಭವಾಗುತ್ತದೆ ಎಂದು ನಿಮ್ಮ ಅನುಮಾನವಾದರೇ, ನಿಮ್ಮಲ್ಲಿ ದೇಶದ ಬಗ್ಗೆ ನಿಷ್ಠೆ ಇಲ್ಲ ಎಂದರ್ಥವಷ್ಟೆ!

ಹಳ್ಳಿಯೊಂದರಲ್ಲಿ ಬಾಲ್ಯ ಕಳೆದು ಪೇಟೆಯಲ್ಲಿ ಜೀವನ ನಡೆಸುತ್ತಿರುವವನಿಗೆ ಇದ್ದಕ್ಕಿದ್ದ ಹಾಗೆ ಇತ್ತೀಚೆಗೆ ನಡೆದ ಪಠ್ಯಪುಸ್ತಕ ಪರಿಷ್ಕರಣೆಯ ಗೌಜು ಕೆಲವಾರು ಪ್ರಶ್ನೆಗಳು ಮನದಳುವಂತೆ ಮಾಡಿತು. ನಾನು ಓದಿದ್ದು ಸರಕಾರಿ ಶಾಲೆಯೊಂದರಲ್ಲಿ. ಎಲ್ಲರಂತೆ ನನಗೂ ಗಣಿತವೆಂದರೆ ಕಬ್ಬಿಣವೇ. ವಿಜ್ಞಾನದ ಬಗ್ಗೆ ಆಸಕ್ತಿ ಅಷ್ಟಕ್ಕಷ್ಟೆ. ಸಮಾಜ ವಿಜ್ಞಾನ ಒಂದು ರೀತಿ ರೋಮಾಂಚಕ ವಿಷಯ ಅನ್ನಿಸುತ್ತಿತ್ತು.

ಯಾಕೆಂದರೆ ಅದರಲ್ಲಿ ಮತ್ತೆ ಇತಿಹಾಸ, ಪೌರನೀತಿ, ಭೂಗೋಳಶಾಸ್ತ್ರ ಮತ್ತು ಅರ್ಥಶಾಸ್ತ್ರ ಎಂಬ ನಾಲ್ಕು ವಿಭಾಗಗಳು ಅಚ್ಚುಮೆಚ್ಚಾಗಿತ್ತು. ಅರ್ಥಶಾಸ್ತ್ರ ಮತ್ತು ಪೌರನೀತಿ ಸಣ್ಣಮಟ್ಟಿಗೆ ಆಕಳಿಕೆ ತರಿಸಿ ದರೂ ಉಳಿದೆರಡು ಆ ಬೇಸರಿಕೆಯನ್ನು ಒದ್ದಾಡಿಸಿ ವಿಷಯಕ್ಕೆ ನ್ಯಾಯ ಒದಗಿಸುತ್ತಿದ್ದವು. ಇರುವುದರಲ್ಲಿ ಭಾಷಾ ವಿಷಯಗಳನ್ನು ಬಿಟ್ಟರೆ ಇಷ್ಟವೆಂದರೆ ಸಮಾಜ ವಿಜ್ಞಾನ.

ಓದುತ್ತಿದ್ದ ವಿಚಾರಗಳನ್ನು ವಿಮರ್ಶೆ ಮಾಡುವಷ್ಟು ಪ್ರಬುದ್ಧತೆಯಿದ್ದ ವಯಸ್ಸು ಅದಲ್ಲ! ಹೀಗಾಗಿ ಓದುತ್ತಿದ್ದುದೆಲ್ಲವೂ ಸತ್ಯವೆಂಬ ಭ್ರಮೆಯಿತ್ತು. ‘ಭಾರತದ ಮೇಲೆ ದಂಡೆತ್ತಿ ಬಂದ’ ಎಂದು ಸಮಾಜದ ಶಿಕ್ಷಕರು ಹೇಳುವಾಗಲಂತೂ ಅವನು ತರಗತಿಯ ಪ್ರಾಂಗಣದಿಂದ ಈಗಷ್ಟೇ ಹಾದುಹೋದನೇನೋ ಎಂಬಂಥ ರೋಮಾಂಚನ ಮೂಡುತ್ತಿತ್ತು!‘

ಲೂಟಿ ಹೊಡೆದ’ ಎನ್ನುವಾಗಲೂ ಆತನ ಆ ರೋಷಾವೇಷ ಚಿತ್ರಿಸಿಕೊಂಡು ಅವನನ್ನು ಸಿನಿಮಾ ನಾಯಕನಿಗೆ ಹೋಲಿಸಿದ್ದೂ ಇದೆ. ‘ಧ್ವಂಸ ಮಾಡಿದ’ ಎನ್ನುವಾಗಲಂತೂ ಆಚೀಚೆ ಸುಟ್ಟಬೂದಿಯ ಹೊಗೆಯಿಂದ ಆ ರಾಜ ಬರುತ್ತಿರುವುದನ್ನು ಮನಸ್ಸು ಚಿತ್ರೀಕರಿಸುತ್ತಿತ್ತು! ಬಹುಶಃ ನನ್ನಂತೆಯೇ ಇನ್ನೂ ಅನೇಕ ಅಮಾಯಕರಿಗೆ ಈ ರೀತಿಯ ಭ್ರಮೆ ಮೂಡಿದ್ದೀತು. ಮೊಘಲರು ಒಂದು ರೀತಿಯಲ್ಲಿ ನಮಗೆ ಸಮೀಪದ ಸಂಬಂಧಿಗಳು ಎನ್ನುವಂತಿತ್ತು.

ಯಾಕೆಂದರೆ ಅವರ ಸಂಪೂರ್ಣ ಚಿತ್ರಣ ಪಠ್ಯಪುಸ್ತಕದಲ್ಲಿ ಕಟ್ಟಿಕೊಡಲಾಗಿತ್ತು. ಅಕ್ಬರನ ಬಗ್ಗೆ ಓದುವಾಗಲಂತೂ ಬಹಳ ಹೆಮ್ಮೆಯೆನಿಸುತ್ತಿತ್ತು. ಅಕ್ಬರ್-ಬೀರಬಲ್ ಜೋಡಿಯ ಕತೆಗಳು ಓದುತ್ತಿದ್ದ ನನಗೆ ಅಕ್ಬರ್ ವಿಪರೀತ ಬುದ್ಧಿವಂತ ಅನ್ನಿಸಿದ್ದು ಸುಳ್ಳಲ್ಲ. ಮೊಘಲರ ಕಾಲದ ಅದ್ಭುತ ನಿರ್ಮಾಣವಾದ ತಾಜ್ ಮಹಲನ್ನು ಬದುಕಿನಲ್ಲಿ ಒಮ್ಮೆಯಾದರೂ ನೋಡಬೇಕು ಎಂದು
ಮನಸ್ಸು ಹಪಾಹಪಿಸುತ್ತಿತ್ತು.

ಆಗಷ್ಟೇ ಮೀಸೆ ಚಿಗುರುತ್ತಿದ್ದ ಹರೆಯದಲ್ಲಿ, ಪ್ರೀತಿಪ್ರೇಮ-ಅನುರಾಗದ ಚಿಗುರೊಡೆ ಯುವಿಕೆಯಲ್ಲಿ ತನ್ನ ನೆಚ್ಚಿನ ಮಡದಿಯ ನೆನಪಿಗೋಸ್ಕರ ಕಟ್ಟಿಸಿದ ಪ್ರೇಮಸೌಧ ಯಾರಿಗೆ ತಾನೇ ಇಷ್ಟವಾಗದು? ‘ಮೈಸೂರಿನ ಹುಲಿ’ ಟಿಪ್ಪು ಸುಲ್ತಾನನ ಪಠ್ಯದಲ್ಲಿ ಆತ
ಹುಲಿಯೊಂದಿಗೆ ಸೆಣಸಾಡುವ ಕಾರ್ಟೂನು ಸಾಂದರ್ಭಿಕ ಚಿತ್ರ ಎಂದು ಗೊತ್ತಿರಲಿಲ್ಲ. ಅದು ನಿಜವಾದ ದೃಶ್ಯಾವಳಿ ಎಂದೇ ನಂಬಿಕೊಂಡಿದ್ದೆವು. ಆತನ ಶೌರ್ಯ, ಪರಾಕ್ರಮದ ಬಗ್ಗೆ ಪಠ್ಯದಲ್ಲಿ ಕೊಟ್ಟ ಟಿಪ್ಪಣಿಗಳನ್ನು ಓದಿದಾಗೆಲ್ಲ ದೊಡ್ಡವನಾದ ಮೇಲೆ ಹುಲಿಯೊಂದಿಗೆ ಸೆಣಸಾಡದಿದ್ದರೂ ಪರವಾಗಿಲ್ಲ, ಈತನಂತೆ ಮೀಸೆಯಾದರೂ ಬೆಳೆಸಿಕೊಳ್ಳಬೇಕು ಎಂದೆನ್ನಿಸುತ್ತಿತ್ತು.

ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಈತ ವೀರಮರಣವನ್ನಪ್ಪಿದ ಎಂದಾಗಲಂತೂ ಮನಸ್ಸು ಆ ಕೊಲೆಗಾರನಿಗೆ ಹಿಡಿಶಾಪ ಹಾಕಿ ಹೃದಯ ಟಿಪ್ಪುವಿಗೋಸ್ಕರ ಬಿಕ್ಕುತ್ತಿತ್ತು. ೧೮೫೭ರ ಘಟನೆಯನ್ನು ಒಂದು ಕಡೆ ‘ಸಿಪಾಯಿ ದಂಗೆ’ ಎಂದರೆ ಇನ್ನೂ ಕೆಲವೆಡೆ ‘ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎಂದು ಕರೆಯಲಾಯಿತು. ಯಾರು, ಯಾತಕ್ಕೆ, ಯಾವ ಹೆಸರಿಟ್ಟರು ಎಂಬು ದೊಂದೂ ತಿಳಿಯದೇ ಹೋಯಿತು.

ಮಂಗಲಪಾಂಡೆ ಎಂಬ ಸೈನಿಕ ಯಾವ ಕಾರಣಕ್ಕಾಗಿ ದಂಗೆಯೆದ್ದ, ಅಷ್ಟಕ್ಕೂ ವಿಷಯ ಬಹಳ ಚಿಕ್ಕದಾಗಿತ್ತು. ಅದಕ್ಕೋಸ್ಕರ ಪ್ರಾಣ ತೆರುವ ಅಗತ್ಯವಿತ್ತೇ ಎಂದು ಅನಿಸಿದ್ದೂ ಇದೆ. ಮಹಾತ್ಮ ಗಾಂಧಿಯ ಹುಟ್ಟು, ತಂದೆ-ತಾಯಿಯ ಹೆಸರು, ಅವರ ಬಾಲ್ಯ, ಜೀವನ ಸಂಘರ್ಷವೆಲ್ಲವೂ ಬಾಯಿಪಾಠ ಮಾಡಿದಷ್ಟು ಲೀಲಾಜಾಲವಾಗಿ ಗೊತ್ತಿತ್ತು. ಇತಿಹಾಸದ ಪಠ್ಯದಲ್ಲಿ ಮಂದಗಾಮಿಗಳಿಗೆ ಪ್ರಾಧಾನ್ಯವೂ ಹಾಗಿದ್ದೀತು. ಅಲ್ಲಿಂದ ನಂತರದ ಇತಿಹಾಸ ಯುರೋಪಿಗೆ ಸ್ಥಳಾಂತರವಾಗಿ ಮಹಾಯುದ್ಧಗಳ ಪಠ್ಯಗಳು ಹೆಚ್ಚಿ ದರೂ ಬುದ್ಧ, ಮಹಾವೀರ, ಗುರುನಾನಕರ ಸಣ್ಣಪುಟ್ಟ ಟಿಪ್ಪಣಿಗಳು ಅಲ್ಲಲ್ಲಿದ್ದವು.

ಆದರೆ ಅವರಿಂದ ವಿಶ್ವದದ ಬದಲಾವಣೆಗಳು ಅಷ್ಟೊಂದು ತಿಳಿಯಲಿಲ್ಲ. ಪ್ಲಾಸಿ, ಬಕ್ಸಾರ್ ಕದನಗಳ ಇಸವಿಗಳನ್ನು ನೆನಪಿ ನಲ್ಲಿಟ್ಟುಕೊಳ್ಳುವ ಶೋಕಕ್ಕಿಂತ ದೊಡ್ಡದು ಬೇರೆಯದ್ದೇನೂ ಆ ಹರೆಯದಲ್ಲಿ ಕಾಣಲಿಲ್ಲ. ಎದೆಮುಟ್ಟಿ ಹೇಳುತ್ತೇನೆ, ನಿಜಕ್ಕೂ ಭಾರತ ಎಂದರೇನು ಎಂಬ ಹುಲ್ಲುಕಡ್ಡಿಯಷ್ಟರ ಕಲ್ಪನೆಯನ್ನೂ ಪಠ್ಯಪುಸ್ತಕ ನನಗೆ ನೀಡಲಿಲ್ಲ.

ಅದೇನೋ ಕಾಲೇಜಿನ ಮೆಟ್ಟಿಲೇರುತ್ತಿದ್ದಂತೆ ಯಾವ ವಿಷಯಗಳಲ್ಲಿ ಆಸಕ್ತಿಯೇ ಇರಲಿಲ್ಲವೋ ಅದು ಕುತೂಹಲವಾಗಿ ಮಾರ್ಪ ಟ್ಟಿತು. ಸಮಾಜವಿಜ್ಞಾನವೆಂದರೆ ಕೇವಲ ಇಸವಿಗಳಲ್ಲ, ಕದನಗಳಲ್ಲ, ಲೂಟಿ-ಧ್ವಂಸಗಳಲ್ಲ. ನಮ್ಮ ದೇಶಕ್ಕಿಂತ ಮಿಗಿಲಾಗಿ ಪರ್ಷಿಯನ್ನರ, ಆಂಗ್ಲರ, ಡಚ್ಚರ, ಫ್ರೆಂಚರ ಬಗ್ಗೆ ಓದಿದ್ದ ಪುಸ್ತಕಗಳು ಪರೀಕ್ಷೆಗಳಿಗೋಸ್ಕರ ತಯಾರಾದ ಪಠ್ಯಗಳೇ ಹೊರತು ಅವುಗಳಿಂದ ಜ್ಞಾನಾಭಿವೃದ್ಧಿವಾಗಿಲ್ಲ. ಕನಿಷ್ಠ ಈ ದೇಶದ ಪ್ರಜೆ ಎನ್ನಿಸಿಕೊಳ್ಳಲು ಗರ್ವಪಡುವಂತಹ ವಿಚಾರಗಳನ್ನೂ
ತಿಳಿಸಿಕೊಟ್ಟಿಲ್ಲ ಎಂದೂ ಅನ್ನಿಸಿತು. ವಿಶ್ವದ ಅತ್ಯಂತ ಪ್ರಾಚೀನ ದೇಶವೊಂದು ತನ್ನ ಇತಿಹಾಸವನ್ನು ಮರೆಮಾಚಿ ಇತರ ದೇಶಗಳ ಇತಿಹಾಸವನ್ನು ಕೆದಕುವುದು ಮತಿಭ್ರಮಣೆಯಲ್ಲವೇ ಎಂಬ ಪ್ರಶ್ನೆಯೂ ಮೂಡಿತು.

ದಂಡೆತ್ತಿ ಬಂದದ್ದು, ಲೂಟಿ ಮಾಡಿದ್ದು ಯಾವುದೋ ಪಾಳುಬಿದ್ದ ಪ್ರಾಂತ್ಯವನ್ನಲ್ಲ ಬದಲಿಗೆ ಶ್ರೀಮಂತವಾಗಿದ್ದ ನಮ್ಮ ಸಂಸ್ಕೃತಿ, ವಾಸ್ತುಶಿಲ್ಪವನ್ನು ಎಂದು ಅರಿವಾಯಿತು. ಘಜ್ನಿ 17 ಬಾರಿ ದಂಡೆತ್ತಿ ಬಂದ ಎನ್ನುವಾಗ ಮೂಡುತ್ತಿದ್ದ ರೋಮಾಂಚನ ಬದಲಾಗಿ ಆತನ ವಿಕೃತಿ ಕಣ್ಮುಂದೆ ಸುಳಿಯಿತು. ಮೊಘಲರ ಕಾಲದಲ್ಲಿ ಭಾರತ ಶ್ರೀಮಂತವಾಯಿತು ಎಂದು ಬಿಂಬಿಸುವವರು ತಮ್ಮ ಗುರಿಸಾಧನೆಗೆ ಈ ಮಾತು ಹೇಳುತ್ತಿದ್ದಾರೆ, ವಾಸ್ತವ ಬೇರೆಯೇ ಎಂದು ತಿಳಿಯಿತು. ಅಮೃತಶಿಲೆಯ ತಾಜ್ ಮಹಲನ್ನೇ ಭಾರತದ ಸಂಪತ್ತು ಎಂದುಕೊಂಡವನಿಗೆ ಇ ಮೈಸೂರಿನ ಸಮೀಪದ ಸೋಮನಾಥಪುರದ ಹೊಯ್ಸಳರ ಕೇಶವ ದೇಗುಲ ಕಂಡಾಗಲಂತೂ ಇದನ್ನು ಭಾರತೀಯರು ಕಟ್ಟಿಸಿದರೇ ಅದೂ 800 ವರ್ಷಗಳ ಹಿಂದೆ ಎಂಬ ಪ್ರಶ್ನೆ ಮೂಡಿತು.

ಅಲ್ಲಿನ ಕಲೆಕೆತ್ತನೆಗಳು ಕಣ್ಣನ್ನು ಆರ್ದ್ರಗೊಳಿಸಿದವು. ಅಲ್ಲಿನ ಶಿಲೆಗಳ ಮೂಗು, ಕೈಗಳು ವಿಕಾರವಾಗಿರುವುದು ಮುಸ್ಲಿಂ ಆಕ್ರಮಣ ಕಾರರ ಘನಕಾರ್ಯಗಳು ಎಂದರಿತೆ. ಟಿಪ್ಪುವಿನ ವೈಭವೀಕರಣ ರಾಜಕೀಯ ಕಾರಣಗಳಿಂದ ಮಾಡಲಾಯಿತೇ ಹೊರತು ಆತ ಒಬ್ಬ ಮತಾಂಧ ಮತ್ತು ಕ್ರೂರಿಯಾಗಿದ್ದ ಎಂದು ತಿಳಿಯಿತು. ಆತನ ಖಡ್ಗದ ಮೇಲಿರುವ ಬರಹಗಳನ್ನು  ಜರಂಗಿಗಳು ಕೆತ್ತಿದ್ದಲ್ಲ ಬದಲಾಗಿ ಆತನೇ ಖುದ್ದು ಬರೆಸಿದ್ದು ಎಂದಾಗ ಹುಲಿ ಎಂಬುದಕ್ಕಿಂತ ವ್ಯಾಘ್ರ ಎನ್ನುವುದೇ ಮೇಲು ಅನ್ನಿಸಿತು. ಮರಾಠ, ರಜಪೂತ, ಕುಶಾಣ, ಹೊಯ್ಸಳ, ಗಂಗ ಸಾಮ್ರಾಜ್ಯದ ಬಗ್ಗೆ ತಾನು ಪಠ್ಯದಲ್ಲಿ ಓದಲೇ ಇಲ್ಲವೇನೋ ಅನ್ನಿಸಿತು.

ಯಾಕೆಂದರೆ ಮುಸ್ಲಿಂ ಆಡಳಿತಗಾರರ ವೈಭವೀಕರಣ ಅದೆ ಲ್ಲವನ್ನೂ ಮುಚ್ಚಿ ಹಾಕಿತ್ತು. ಭವ್ಯ ಐತಿಹ್ಯದ ವಿಜಯ ನಗರ ಸಂಸ್ಥಾನಕ್ಕೆ ಸೇರಿರುವ ಅದೆಷ್ಟೋ ವಸ್ತುಗಳು ನೆಲದೊಳಗೆ ಹೂತೇ ಹೋಗಿದೆಯಂತೆ ಎನ್ನುವಾಗ ಅದರ ವೈಭವದ ದಿನಗಳು
ಹೇಗಿದ್ದೀತೆಂದು ಮನಸ್ಸು ಮೆಲುಕು ಹಾಕತೊಡಗಿತು.

1857ರಲ್ಲಿ ಮಂಗಲಪಾಂಡೆ ವಿರೋಧಿಸಿದ್ದು ತನ್ನ ಧಾರ್ಮಿಕ ಭಾವನೆಯ ಅತ್ಯಾಚಾರಕ್ಕೆ ಎಂದು ಅರಿವಾಗತೊಡಗಿತು.
ಭಾರತಕ್ಕೆ ಸ್ವಾತಂತ್ರ್ಯ ಮಂದಗಾಮಿಗಳ ತಾಳ್ಮೆಯಿಂದಲೇ ಸಿಕ್ಕಿದ್ದು ಎಂಬ ಭ್ರಮೆಯಲ್ಲಿ ನಾನಿದ್ದೆ. ಆದರೆ ಸ್ವಾತಂತ್ರ್ಯಕ್ಕೋಸ್ಕರ ಬಲಿಯಾದವರ ಪಟ್ಟಿ ತೆಗೆದು ಕಂಡರೆ ಅವರುಗಳ ಹೆಸರೇ ಅಪರೂಪzಗಿತ್ತು. ನಿಜ ಹೇಳುತ್ತೇನೆ, ನನ್ನ ಇತಿಹಾಸದ ಪಠ್ಯಪುಸ್ತಕ ಅದನ್ನೆಲ್ಲವೂ ಮರೆಮಾಚಿತ್ತು. ಆಗಸ್ಟ್ 15ಕ್ಕೆ ಶಾಲೆಗೆ ಬರುತ್ತಿದ್ದ ಅತಿಥಿಗಳಲ್ಲಿ ಕೆಲವೊಬ್ಬರು ಅಲ್ಲಲ್ಲಿ ಕೆಲವೊಂದು ಹೆಸರು ಹೇಳಿದ್ದರೂ ಆ ಹುತಾತ್ಮರ ಪೂರ್ಣ ಪರಿಚಯ ನನಗಿದ್ದಿರಲಿಲ್ಲ. ಕೆಲವೊಂದು ಹೆಸರನ್ನೇ ನಾನು ಕೇಳಿರಲಿಲ್ಲ.

ಕುಣಿಕೆಗೆ ಕೊರಳುಡ್ಡುವಾಗಲೂ ‘ವಂದೇಮಾತರಂ’ ಎಂದು ಚೀರಿದ ಖುದಿರಾಮ್ ಬೋಸ್, ‘ದೇಶ ಉಜ್ವಲವಾಗಲಿ, ನಾವು ಇದ್ದರೇನು, ಇಲ್ಲದಿದ್ದರೇನು?’ ಎಂದು ಕವಿತೆ ಬರೆದು ನಗುತ್ತಲೇ ಸ್ವರ್ಗ ಸೇರಿದ ಅಶಾಕ್ ಉ, ಜಲಿಯನ್ ವಾಲಾ ಬಾಗ್ ಹತ್ಯಾ ಕಾಂಡದ ಪ್ರತೀಕಾರ ತೀರಿಸಿಕೊಂಡೇ ವೀರಮರಣವನ್ನಪ್ಪಿದ ಉಧಮ್ ಸಿಂಗ್, ಎಂಜಿನಿಯರಾಗುವ ಬಯಕೆಯಲ್ಲಿ ಇಂಗ್ಲೆಂಡಿಗೆ ತೆರಳಿದರೂ ಮೂರೇ ವರ್ಷದಲ್ಲಿ ಹುತಾತ್ಮನಾದ ಮದನಲಾಲ್ ಧಿಂಗ್ರ ಇವರೆಲ್ಲರ ಬದುಕೇಕೆ ಇಂದಿಗೂ ಚರಿತ್ರೆಯ ಧೂಳಿನಲ್ಲಿ ಮುಚ್ಚಿಹೋಗಿದೆ ಎಂಬ ಪ್ರಶ್ನೆಗೆ ಉತ್ತರವೇ ಸಿಗಲಿಲ್ಲ.

ಭಗತ್ ಸಿಂಗ್, ಸುಖದೇವ್, ರಾಜಗುರು, ಚಂದ್ರಶೇಖರ ಆಜಾದ್, ವೀರ ಸಾವರ್ಕರ್, ಸುಭಾಶ್ಚಂದ್ರ ಬೋಸ್ ಇವರೆಲ್ಲ ಕೇವಲ ಪಠ್ಯದಲ್ಲಿ ಇಣುಕುನೋಟವಷ್ಟೇ ಯಾಕೆ ಬೀರಿದರು ಎಂದೂ ತಿಳಿಯಲಿಲ್ಲ. ನನ್ನ ಭಾರತ ಬರೀ ಹಾವಾಡಿಗರ ದೇಶವೇ? ಅಥವಾ
ಬಡರಾಷ್ಟ್ರವೇ? ಕಾಶ್ಮೀರ ನಮ್ಮದಲ್ಲವೇ? ‘ಅಖಂಡ ಭಾರತ’ ಎಂಬುದು ಆರೆಸ್ಸೆಸ್ಸಿಗರು ಸೃಷ್ಟಿಸಿದ ಪದವೇ? ದೆಹಲಿಯ ಸುಲ್ತಾನರು ಮತ್ತು ಮೊಘಲರನ್ನು ಬಿಟ್ಟು ಬೇರೆ ಯಾರೂ ನಮ್ಮ ದೇಶವನ್ನು ಆಳಲಿಲ್ಲವೇ? ರಾಮಸೇತು, ಮಥುರ, ಅಯೋಧ್ಯೆ, ಕಾಶಿ ಎಲ್ಲವೂ ಸುಳ್ಳೇ? ಆರ್ಯ ಭಟ, ಬ್ರಹ್ಮಗುಪ್ತ, ಚಾಣಕ್ಯ, ಚರಕ, ಸುಶ್ರುತ, ವರಾಹಮಿಹಿರ, ಭಾಸ್ಕರಾಚಾರ್ಯ, ಕಣಾದ, ಬೌಧಯಾನ, ಮಹಾವೀರಾಚಾರ್ಯ, ನಾಗಾರ್ಜುನ, ಪತಂಜಲಿ, ಕಪಿಲ, ಪಾಣಿನಿ ಶತಶತಮಾನಗಳ ಹಿಂದೆ ಸಾಧಿಸಿದ ಇವರೆಲ್ಲರ ಸಾಧನೆಯ ಪೇಟೆಂಟು, ಕೃತಿಚೌರ್ಯಗಳನ್ನಷ್ಟೇ ಮಾಡಿಸಿಕೊಂಡ ಪಾಶ್ಚಿಮಾತ್ಯರನ್ನು ಸಂಶೋಧಕರೆಂದು ಓದುತ್ತಿ
ರುವ ಪಠ್ಯಗಳು ಭವ್ಯಭಾರತದ ಇತಿಹಾಸವನ್ನು ಮರೆಮಾಚಿಲ್ಲವೇ? ಹಾಗೆಂದು ವಿಜ್ಞಾನ ಮತ್ತು ವಿಜ್ಞಾನಿಗಳೇ ಸುಳ್ಳೆನ್ನುತ್ತಿಲ್ಲ, ನಮ್ಮ ಇತಿಹಾಸದ ಸಮಾಧಿಯ ಮೇಲೆ ಅದನ್ನೇಕೆ ಸನ್ಮಾನಿಸಬೇಕು? ಅಷ್ಟಕ್ಕೂ ಮೂರು ಶೇಕಡಾ ಹಿಂದೂಗಳಿರುವ ಇಂಡೋ ನೇಷ್ಯಾದ ನೋಟಿನಕೆ ನಮ್ಮ ಗಣಪನಿದ್ದಾನೆ? ಅಕೆ ಅನೇಕ ಹಳೇ ಹಿಂದೂ ದೇಗುಲಗಳಿವೆ? ಅಂಕೋರ್ ವಾಟ್ ಏಕೆ ಪ್ರಸಿದ್ಧ? ತಕ್ಷಶಿಲೆ ತಿಂಗಳುಗಟ್ಟಲೇ ಉರಿದ್ದದ್ದೇಕೆ? ಕೊನೆಯದಾಗಿ, ನನ್ನ ಮಹಾಜಿeಸೆಯನ್ನು ನಿಮ್ಮೆದುರಿಗಿಟ್ಟು ಪತ್ರವನ್ನು ಕೊನೆಗೊಳಿ ಸುತ್ತೇನೆ.

100-150 ವರ್ಷಗಳ ಹಿಂದೆಯಷ್ಟೆ ಬ್ರಿಟಿಷರ ದಾಸ್ಯದಿಂದ ಬಿಡುಗಡೆಯಾಗಿ ದೇಶ ಸ್ವತಂತ್ರವಾಗಬೇಕು ಎಂದು ಹೋರಾಟ ನಡೆದದ್ದು ಇದೇ ಭೂಮಿಯಲ್ಲಿ ನಿಜವೇ? ಲೆಕ್ಕವೇ ಸಿಗದಷ್ಟು ಕ್ರಾಂತಿ ವೀರರು ಜನಿಸಿದ್ದು ಇದೇ ಭೂಮಿಯ? ಈ ಮಹಾಪ್ರಶ್ನೆ ಯಾಕೆಂದರೆ ಕೇವಲ ನೂರು ವರ್ಷಗಳಾಚೆಗೆ ಅದೇ ಹುತಾತ್ಮ ಕುಡಿದ ಭೂಮಿಯ ನೀರನ್ನು ಕುಡಿಯು ತ್ತಿರುವ ನಮಗೆ ಈ ಮಟ್ಟಿಗಿನ ಕೃತಘ್ನತೆ ಹೇಗೆ ಮೂಡುತ್ತಿದೆ? ದೇಶವನ್ನು ಟುಕ್ಡೆಟುಕ್ಡೆ ಮಾಡುವ ವಿಕೃತ ಮನಸ್ಸನ್ನು ಸೃಷ್ಟಿಸಿದ್ಯಾರು? ದೇಶದ ಬಗ್ಗೆ ಗರ್ವದಿಂದ ಮಾತನಾಡುವುದು, ಅದನ್ನು ಮಕ್ಕಳಿಗೆ ತಿಳಿಹೇಳುವುದು, ಅವರಲ್ಲಿ ಆತ್ಮಗೌರವ ಸೃಷ್ಟಿಸುವುದು ಕೇಸರೀಕರಣ ವಾಗುತ್ತದೆಯೇ? ದೇಶದ ಭವ್ಯಪರಂಪರೆ, ಇತಿಹಾಸವನ್ನು ವಿದ್ಯಾರ್ಥಿಗಳಿಗೆ ಮುಟ್ಟಿಸುವುದರಿಂದ ಯಾವುದೋ ಒಂದು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಲಾಭವಾಗುತ್ತದೆ ಎಂಬುದು ನಿಮ್ಮ ಅನುಮಾನವಾದರೆ ಅದರರ್ಥ ನಿಮ್ಮಲ್ಲಿ ದೇಶದ ಬಗ್ಗೆ ನಿಷ್ಠೆ
ಇಲ್ಲ ಎಂದರ್ಥವಷ್ಟೆ!

ಯಾಕೆಂದರೆ ಭಾರತಮಾತೆ ರಾಜಕೀಯಕ್ಕೆ, ಪಕ್ಷಕ್ಕೆ, ಪ್ರದೇಶಕ್ಕೆ ಸೀಮಿತಳಲ್ಲ. ಅವಳು ವಿಶ್ವವ್ಯಾಪಿ, ಅವಳ ಹರವು ಅಸೀಮ ವಾದದ್ದು..