Saturday, 14th December 2024

ವಿಜ್ಞಾನ- ತಂತ್ರಜ್ಞಾನದ ಶ್ರೇಷ್ಠ ರಾಷ್ಟ್ರ ಭಾರತ

ಅಭಿಮತ

ವಿನಾಯಕ್‌ ಮಲರ್‌ಖಾನ್‌

ಭಾರತೀಯ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರ ಇಡೀ ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠವಾದುದು ಹಾಗೂ ಮಾನನೀಯವಾದುದು. ಬರೀ ಇವತ್ತು ನಿನ್ನೆ ಯಿಂದ ಭಾರತ ಡಿಜಿಟಲೀಕರಣವಾಗದೆ ಪ್ರಪಂಚದಲ್ಲಿನ ಎಲ್ಲಾ ರಾಷ್ಟ್ರಗಳಲ್ಲಿ ನಾಗರಿಕತೆಯೇ ಇಲ್ಲದಿರುವ ಸಮಯದಲ್ಲಿ ಭಾರತದ ವಿಜ್ಞಾನಿಗಳು, ಋಷಿಮುನಿ ಗಳು, ವೇದ, ಪುರಾಣ, ಉಪನಿಷದ್ ನಂಥ ಮಹಾನ್ ಗ್ರಂಥಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ಆಯುರ್ವೇದ, ಧ್ಯಾನ, ಯೋಗಗಳಂಥ ಮಹಾನ್ ದಾರಿ ದೀಪಗಳನ್ನು ಬಳಸುತ್ತಿದ್ದರು.

ಹಾಗೆಯೇ, ನಾವು ನೋಡಿರಬಹುದು ರಾಮಾಯಣ ಕಾಲದಲ್ಲಿನ ಪುಷ್ಪಕ ವಿಮಾನ, ಮಹಾಭಾರತ ಕಾಲದಲ್ಲಿ ೧೦೧ಕೌರವರು ಹುಟ್ಟಿದ ಬಗೆ, ಕುರುಕ್ಷೇತ್ರ ಯುದ್ಧ ವನ್ನು ಅರಮನೆಯಲ್ಲಿ ಕುಳಿತು ದಿವ್ಯದೃಷ್ಟಿಯಿಂದ ಸಂಜಯನು ನೋಡಿದ ಬಗೆ ಕೇಳಿದರೆ ಇವತ್ತು ನಾವು ಉಪಯೋಗಿಸುವ ವಿಮಾನ, ಟೆಸ್ಟ್ ಟ್ಯೂಬ್ ಬೇಬಿ, ಸಿಸಿಟಿವಿ ಕ್ಯಾಮೆರಾಗಳನ್ನು ಆವಾಗಲೂ ಬಳಸುತ್ತಿದ್ದರಾ ಎಂಬ ಪ್ರಶ್ನೆ ಬರುವುದು ಸುಲಭ. ಆಗಿನ ಪುರಾಣದಿಂದ ಇಂದಿನ ವಿಜ್ಞಾನದವರೆಗೆ, ಅಂದಿನ ಗಣಿತ ಶಾಸ್ತ್ರ ಸದಿಂದ ಇಂದಿನ ಆರ್ಟಿಫಿಸಿಯಲ್ ಇಂಟೆಲ್ಲಿಜೆಂಸ್‌ವರೆಗೂ, ಅಂದಿನ ಆಯುರ್ವೇದದಿಂದ ಇಂದಿನ ಕೋವಿಡ್ ಮೆಡಿಸಿನ್‌ವರೆಗೂ ಭಾರತ ಅತಿ ದೊಡ್ಡ ಸೇವೆಯನ್ನು, ಸಂಶೋಧನೆಗಳನ್ನು ಮಾಡುತ್ತಾ ಬಂದಿದೆ.

ವಿಶ್ವದ ಎಷ್ಟೋ ಆವಿಷ್ಕಾರಗಳ ತಳಹದಿ ಭಾರತ: ಹೌದು ಇವತ್ತಿನ ದಿನ ಎಷ್ಟೋ ಆವಿಷ್ಕಾರಗಳು, ಎಷ್ಟೋ ಆವಿಷ್ಕಾರಿ (ehq||)ಗಳು ಭಾರತವನ್ನು ಆಧಾರಿಸಿಕೊಂಡು ತಮ್ಮ ಆವಿಷ್ಕಾರಗಳನ್ನು ಮಂಡಿಸಿದ್ದಾರೆ. ಬ್ರಹ್ಮಗುಪ್ತನ (¨hws) ಇಲ್ಲದೆ ಗಣಿತಕ್ಷೇತ್ರ ಊಹಿಸಲಸಾಧ್ಯ. ಕಣದನ ಪರಮಾಣು ಸಿದ್ಧಾಂತ ಇವತ್ತಿನ ವರಹಾಮಿಹಿರನ ಬೃಹತ್ ಸಂಹಿತೆಯಲ್ಲಿ ಹೇಳಿದ ಹಾಗೆ ಭೂಕಂಪನವು ಗ್ರಹಗಳ ಪ್ರಭಾವಕ್ಕೆ, ಸಾಗರದೋಳಗಿನ ಚಟುವಟಿಕೆಗಳಿಗೆ, ಅಂತರ್ಜಲದಿಂದ ಆಗುತ್ತದೆ. ಈ ಪ್ರಕ್ರಿಯೆಯಿಂದ ಪ್ರಾಣಿಗಳಲ್ಲಿ ಅಸಹಜ ವರ್ತನೆ ಹಾಗೂ ಅಸಾಮಾನ್ಯ ಮೋಡದ ರಚನೆ ಆಗುತ್ತದೆ ಎಂದು. ಹಾಗೆಯೇ ನಾಗಾರ್ಜುನನ
ಲೋಹಶಾಸ್ತ್ರವು ಕೂಡ ಭಾರತದ ಆವಿಷ್ಕಾರವನ್ನೇ ಇವತ್ತಿಗೂ ಉಪಯೋಗಿಸುತ್ತಿದ್ದಾರೆ.

ವೈದ್ಯಕೀಯ ಕ್ಷೇತ್ರದ ಭಾರತ: ವೈದ್ಯಕೀಯ ಭಾರತ ಎಂದರೆ ಎಲ್ಲರಿಗೂ ನೆನಪಾಗುವುದು ಆಯುರ್ವೇದ. ಪ್ರಾಚೀನ ಕಾಲದಿಂದಲೂ ಭಾರತವನ್ನು ಸಂಜೀವಿನಿ ತರಹ ಕಾಪಾಡಿತು. ಪ್ರಾಚೀನ ಕಾಲದಲ್ಲಿ ಅಭಿವೃದ್ಧಿ ಪಡಿಸಿದ ಔಷಧ ವ್ಯವಸ್ಥೆ ಅಕ್ಷರಶಃ ಉತ್ತಮ ಆರೋಗ್ಯ ಮತ್ತು ಜೀವನದ ದೀರ್ಘಾಯುಷ್ಯವನ್ನು ಪ್ರಾಪ್ತಿ ಮಾಡುವ ವ್ಯವಸ್ಥೆಯು ಸಹ ಭಾರತದಲ್ಲಿ ಇತ್ತು. ಭಾರತದಲ್ಲಿ ಉಗಮವಾದ ಆಯುರ್ವೇದವು ಔಷಧಗಳ ಪಿತಾಮಹವಾಗುತ್ತೆ. ಭಾರತೀನಾದ ಶುಶೃತನು ಶಸ ಚಿಕಿತ್ಸೆಯ ತಂದೆಯಾಗುತ್ತಾನೆ. ಹಾಗೆಯೇ ಭಾರತದಲ್ಲಿ ಉಗಮವಾದ ಯೋಗವನ್ನು ಪ್ರಪಂಚಾದ್ಯಾಂತ ಜನರು ಉಪಯೋಗಿಸುತ್ತಾರೆ ಧ್ಯಾನವನ್ನು ಮಾಡು ತ್ತಾರೆ. ಅಷ್ಟೇ ಯಾಕೆ ಇತ್ತೀಚಿನ ಬೆಳವಣಿಗೆಗಳಲ್ಲೊಂದಾದ ಕರೋನಾ ಲಸಿಕೆಯನ್ನೂ ಸಹ 35ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಸ್ನೇಹ ಪೂರ್ವಕವಾಗಿ ಕಳುಹಿಸಿ ಭಾರತೀಯರು ವಸುದೈವ ಕುಟುಂಬಕಂ ಎನ್ನುವ ಹಾಗೆಯೇ ಇಡೀ ಪ್ರಪಂಚವನ್ನು ನನ್ನ ಸ್ವಂತ ಕುಟುಂಬ ಎಂದು ಸಾರುವ ಭಾರತವು ವಿಶ್ವಗುರುವೇ.

ಭಾರತದ ನಾಗರಿಕತೆಗಳಲ್ಲಿನ ವಿಜ್ಞಾನ: ಭಾರತದ ವಿಜ್ಞಾನವು ಕಾಲದಿಂದ ಕಾಲಕ್ಕೆ ಬೆಳೆಯುತ್ತಾ ಬಂದಿದೆ. ದೆಹಲಿಯ ಕಬ್ಬಿಣದ ಕಂಬ, ಸ್ಥೂಪಗಳು, ನಾವು ಮೊದಲಿನಿಂದ ಬಳಕೆ ಮಾಡುತ್ತಿರುವ ಲೋಹಗಳು ಹಾಗೆಯೇ ಹಲವಾರು ದೇವಸ್ಥಾನ ಅದರ ಕೆತ್ತನೆಗಳಲ್ಲೂ ಸಹ ಭಾರತೀಯತೆಯನ್ನು ಅದರ ವಿಜ್ಞಾನವನ್ನು ಸಹ ಕಾಣಬಹುದು.

ನವಯುಗದ ವಿಜ್ಞಾನ: ಪ್ರಾಚೀನ ಕಾಲದಿಂದ ಇಂದಿನವರೆಗೂ ಭಾರತದ ವಿಜ್ಞಾನ ಅಂತಾರಾಷ್ಟ್ರೀಯ ಮಟ್ಟದವರೆಗೂ ಬೆಳೆದು ನಿಂತಿದೆ. ವಿಜ್ಞಾನ, ತಂತ್ರಜ್ಞಾನ, ಭೌತಶಾಸ, ರಾಸಾಯನಿಕ ಶಾಸ್ತ್ರ , ಹಾಗೆಯೇ ಹಲವಾರು ಕ್ಷೇತ್ರಗಳಲ್ಲಿ ಭಾರತೀಯರ ಸಾಧನೆಯು ಅತ್ಯುತ್ತಮವಾಗಿದೆ. ಸರ್ ಸಿ.ವಿ ರಾಮನ್, ವಿಕ್ರಮ್ ಸಾರಾಬಾಯಿ, ಹೋಮಿಯೋ ಜಹಾಂಗೀರ್ ಬಾಬಾ, ಎಪಿಜೆ ಅಬ್ದುಲ್ ಕಲಾಂನಂಥ ಪ್ರಚಂಡರು ನವಯುಗದ ವಿಜ್ಞಾನಕ್ಕೆ ಭಾರತೀಯ ತಳಹದಿಯನ್ನು ಹಾಕಿ ಮುಂದಿನ ಪೀಳಿಗೆಗೆ ಅಡಿಪಾಯ ಹಾಕಿದರು. ಇಡೀ ಪ್ರಪಂಚವನ್ನು ಆಳುತ್ತಿರುವ ಮೈಕ್ರೋಸಾಫ್ಟ್, ಗೂಗಲ್‌ನಂಥ ಕಂಪನಿಗಳನ್ನು ಆಳುತ್ತಿರುವ ಸುಂದರ್ ಪಿಚ್ಬೈ,
ಸತ್ಯಾ ನಡೆಲ್ಲಾರ ವರೆಗೂ ಭಾರತೀಯ ಮೂಲದರೆಂದು ಹೇಳಲು ಹೆಮ್ಮೆಯಾಗುತ್ತದೆ.

ಚಂದ್ರ, ಮಂಗಳನ ಮೇಲೆ ಸಂಶೋಧನೆ, ಹಲವಾರು ಜೀವಿಗಳ ರೋಗಗಳ ಸಂಶೋಧನೆ ಹಲವಾರು ಕಡೆಗಳಲ್ಲಿನ ಸಾಧನೆ ಹಮ್ಮೆಯಾದುದೇ. ನೀವೇನೇ ಹೇಳಿ ಇಡೀ ಪ್ರಪಂಚದ ದೇಶಗಳು ಮೊಬೈಲ್, ಸಾಫ್ಟ್ವೇರ್‌ಗಳನ್ನು ಕೊಟ್ಟವು ಎಂದು ಹೇಳುವ ಸಮಯದಲ್ಲಿ ಭಾರತವು ಆಯುರ್ವೇದ, ಸಂಸ್ಕೃತಿ, ಧ್ಯಾನ, ಯೋಗ ಗಳನ್ನು ಕೋಟ್ಟು ಇಡೀ ಪ್ರಪಂಚದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಯಶಸ್ವಿಯಾಗಿದೆ. ಇಷ್ಟೊಂದೆಲ್ಲ ಪರಂಪರೆಯನ್ನು ಹೊಂದಿದ, ಇಷ್ಟೋಂದು ಮುಂದುವರಿದ ರಾಷ್ಟ್ರದಲ್ಲಿ ಹುಟ್ಟಿದ ನಾವೇ ಧನ್ಯರು.