ಇದೇ ಅಂತರಂಗ ಸುದ್ದಿ
vbhat@me.com
ತನ್ನ ಜೀವ ಉಳಿಸಿದ್ದಕ್ಕಾಗಿ ಆ ಬಿಜಿನೆಸ್ ಮನ್ ಅವನಿಗೆ ಒಂದು ಲಕ್ಷ ರುಪಾಯಿ ಬಹುಮಾನ ಘೋಷಿಸಿದ್ದ. ಅದಾಗೆ ಅರ್ಧ ಗಂಟೆ ನಂತರ ತನ್ನ ಜೀವ ಉಳಿಸಿದ ಆ ಸೆಕ್ಯೂರಿಟಿ ಗಾರ್ಡ್‌ನನ್ನು ಕೆಲಸದಿಂದ ಕಿತ್ತು ಹಾಕಿದ್ದ. ಎಲ್ಲರಿಗೂ ಆಶ್ಚರ್ಯ. ಎಲ್ಲರಲ್ಲೂ ಗುಸುಗುಸು, ಬಿಸಿಬಿಸಿ ಚರ್ಚೆ.
ಅವರು ಮಹಾ ಬಿಜಿನೆಸ್ ಮನ್. ಲೆಕ್ಕ ಅಂದ್ರೆ ಲೆಕ್ಕ. ತನಗೆ ಹತ್ತು ಪೈಸೆ ಬರುವುದಿದ್ದರೂ ಬಿಡುತ್ತಿರಲಿಲ್ಲ. ಪ್ರತಿಯೊಂದರಲ್ಲೂ ಲೆಕ್ಕಾಚಾರ. ಪೈಸೆ ಪೈಸೆಗೂ ಕರಾರುವಾಕ್ಕು. ಊರಿನ ಜನರೆ ಅವನನ್ನು ‘ಅವನೊಬ್ಬ ಮಹಾ ಬಿಜಿನೆಸ್ ಮನ್, ಇದ್ದರೆ ಹಾಗಿರಬೇಕು’ ಎಂದು ಹೇಳುತ್ತಿದ್ದರು. ತನಗೆ ಬರಬೇಕಾದ ಹಣವನ್ನು ಆತ ವಸೂಲು ಮಾಡದೇ ಬಿಡುತ್ತಿರಲಿಲ್ಲ. ಅವನಿಗೆ ಯಾರಾದರೂ ಆಮಂತ್ರಣ ಪತ್ರಿಕೆ ಕಳಿಸಿದರೆ, ಅದರ ಕವರನ್ನು ಬೇರೆ ಉಪಯೋಗಗಳಿಗೆ ಬಳಸಿಕೊಳ್ಳುತ್ತಿದ್ದ. ತನ್ನ ಸಂಸ್ಥೆಯಲ್ಲಿರುವ ಇತರರೂ ಹಾಗೆ ಮಾಡುವಂತೆ ಸೂಚಿಸುತ್ತಿದ್ದ.
ಅನಗತ್ಯವಾಗಿ ಹತ್ತು ಪೈಸೆಯನ್ನೂ ಖರ್ಚು ಮಾಡುತ್ತಿರಲಿಲ್ಲ. ಆತ ಒಂದು ನಾಯಿ ಸಾಕಿದ್ದ. ಯಾರೇ ಬಂದರೂ ಕೂಗಬೇಕಿತ್ತು. ಕೂಗದಿದ್ದರೆ ನಾಯಿಯನ್ನು ಹೊಡೆದೋಡಿಸಿಬಿಡುತ್ತಿದ್ದ. ಪುಗಸಟ್ಟೆ ಅದಕ್ಕೆ ಯಾಕೆ ಊಟ, ತಿಂಡಿ ಕೊಡಬೇಕು ಎಂಬುದು ಅವನ ಯೋಚನೆಯಾಗಿತ್ತು. ಒಂದು ದಿನ ಒಂದು ಒಂದು ಪ್ರಸಂಗ ಜರುಗಿತು. ಆತ ವಿದೇಶ ಪ್ರಯಾಣಕ್ಕೆ ಹೊರಟಿದ್ದ. ಇನ್ನೇನು ಮನೆಯಿಂದ ಹೊರಡಬೇಕು ಎನ್ನುವಷ್ಟರಲ್ಲಿ ಅವನ ಮನೆಯ ಸೆಕ್ಯೂರಿಟಿ ಗಾರ್ಡ್ ಬಂದು,
ಯಜಮಾನರೇ, ಯಾವ ಕಾರಣಕ್ಕೂ ಹೋಗಬೇಡಿ. ನೀವು ತೆರಳಲಿರುವ ವಿಮಾನ ಈಗ ತಾನೇ ಅಪಘಾv ಕ್ಕೀಡಾದಂತೆ ನನಗೆ ಕನಸು ಬಿತ್ತು ಎಂದ. ಆ ಬಿಜಿನೆಸ್ ಮನ್‌ಗೆ ಅಪಶಕುನವಾದಂತಾಯಿತು. ವಿದೇಶ ಪ್ರವಾಸ ರದ್ದುಗೊಳಿಸಲು ನಿರ್ಧರಿಸಿದ. ಅದಾಗಿ ತುಸು ಹೊತ್ತಿನಲ್ಲಿ ಅವನಿಗೆ ಏರ್‌ಲೈನ್ಸ್ ಸಂಸ್ಥೆಯಿಂದ ಫೋನ್ ಬಂತು.
ನೀವು ಪ್ರಯಾಣಿಸಬೇಕಿರುವ ವಿಮಾನ ಅಪಘಾತಕ್ಕೀಡಾಗಿ ಎಲ್ಲ ಪ್ರಯಾಣಿಕರು ಸತ್ತಿzರೆ ’ ಎಂದು ತಿಳಿಸಿದರು. ಒಂದು ವೇಳೆ ತಾನೇನಾದರೂ ಆ ವಿಮಾನದಲ್ಲಿ ಪ್ರಯಾಣಿಸಿದ್ದಿದ್ದರೆ, ತಾನೂ ಸತ್ತು ಹೋಗುತ್ತಿz, ನನ್ನ ಸೆಕ್ಯೂರಿಟಿ ಗಾರ್ಡ್ ನಿಂದಾಗಿ ಪ್ರಾಣ ಉಳಿಯಿತು, ಗಾರ್ಡ್ ಸಮಯಪ್ರಜ್ಞೆ ನನ್ನನ್ನು ಉಳಿಸಿತು ಎಂದು ಸಮಾಧಾನದ ನಿಟ್ಟುಸಿರು ಬಿಟ್ಟ. ಮರುದಿನ ಆ ಸೆಕ್ಯೂರಿಟಿ ಗಾರ್ಡ್‌ಗೆ ಅಚ್ಚರಿ ಕಾದಿತ್ತು. ತನ್ನ ಜೀವ ಉಳಿಸಿದ್ದಕ್ಕಾಗಿ ಆ ಬಿಜಿನೆಸ್ ಮನ್ ಅವನಿಗೆ ಒಂದು ಲಕ್ಷ
ರುಪಾಯಿ ಬಹುಮಾನ ಘೋಷಿಸಿದ್ದ. ಅದಾಗೆ ಅರ್ಧ ಗಂಟೆ ನಂತರ ತನ್ನ ಜೀವ ಉಳಿಸಿದ ಆ ಸೆಕ್ಯೂರಿಟಿ ಗಾರ್ಡ್‌ನನ್ನು ಕೆಲಸ ದಿಂದ ಕಿತ್ತು ಹಾಕಿದ್ದ. ಎಲ್ಲರಿಗೂ ಆಶ್ಚರ್ಯ.
ಕಂಪನಿಯ ಮಾಲೀಕನ ಪ್ರಾಣ ಉಳಿಸಿದ್ದಕ್ಕಾಗಿ ಒಂದು ಲಕ್ಷ ಬಹುಮಾನ ಘೋಷಿಸಿ ಅರ್ಧ ಗಂಟೆಯಲ್ಲಿ ಡಿಸ್ಮಿಸ್ ಮಾಡಿದ್ದೇಕೆ ಎಂದು ಎಲ್ಲರಲ್ಲೂ ಗುಸುಗುಸು, ಬಿಸಿಬಿಸಿ ಚರ್ಚೆ. ಅದಕ್ಕೆ ಆ ಬಿಜಿನೆಸ್ ಮನ್ ನೀಡಿದ ಸ್ಪಷ್ಟನೆ – ‘ನನ್ನ ಜೀವ ಉಳಿಸಿದ್ದಕ್ಕಾಗಿ ಗಾರ್ಡ್‌ಗೆ ಒಂದು ಲಕ್ಷ ರುಪಾಯಿ ಬಹುಮಾನ. ಕೆಲಸದ ಸಮಯದಲ್ಲಿ ಮಲಗಿದ್ದಕ್ಕೆ ಡಿಸ್ಮಿಸ್’ ಆತ ಅದೆಂಥ ಬಿಜಿನೆಸ್ ಮನ್ ಇದ್ದಿರಬಹುದು ಊಹಿಸಿ.
ಭಾರತದಲ್ಲೊಂದೇ!
‘ರೀಡರ್ಸ್ ಡೈಜೆಸ್ಟ್’ ಮಾಸಿಕದಲ್ಲಿ It Happens Only In India ಎಂಬ ಒಂದು ಅಂಕಣ ಪ್ರಕಟವಾಗುತ್ತದೆ. ಅದನ್ನು ಓದಿದರೆ, ಆ ಎಲ್ಲ ಘಟನೆಗಳು ನಮ್ಮ ದೇಶವನ್ನು ಬಿಟ್ಟು ಬೇರೆಲ್ಲೂ ಜರುಗುವುದಿಲ್ಲ ಎಂದು ಅನಿಸಿಬಿಡುತ್ತದೆ. ಕೆಲ ವರ್ಷಗಳ ಹಿಂದೆ ಉತ್ತರ ಪ್ರದೇಶದ ಊರೊಂದರಲ್ಲಿ ಮದುವೆಯ ದಿಬ್ಬಣ (ಶಾದಿ
ಬರಾತ್) ಸಾಗುತ್ತಿತ್ತು. ಬರಾತ್ ಅಂದ ಮೇಲೆ ಡಾನ್ಸ್ ಇರಲೇ ಬೇಕು. ಅದರಲ್ಲೂ ನಾಗಿನ್ ಡಾನ್ಸ್ ಇಲ್ಲದೇ ಯಾವ ಬರಾತ್ ಕೂಡ ಮುಗಿಯುವುದಿಲ್ಲ. ಸಾಮಾನ್ಯವಾಗಿ ಈ ಡಾನ್ಸ್‌ನಲ್ಲಿ ಮದುಮಗ ಮತ್ತು ಮದುಮಗಳು ಡಾನ್ಸ್ ಮಾಡುವುದು ಸಂಪ್ರದಾಯ. ಆ ದಿನ ಮದುಮಗ ಅದ್ಯಾವ ಮೂಡಿನಲ್ಲಿದ್ದನೋ
ಏನೋ, ನಾಗಿನ್ ಡಾನ್ಸ್‌ಗೆ ಹೆಜ್ಜೆ ಹಾಕಲಾರಂಭಿಸಿದ.
ತನ್ನ ಗಂಡ ಯಾವ ರೀತಿ ಡಾನ್ಸ್ ಮಾಡಬಹುದು ಎಂಬ ಬಗ್ಗೆ ಮದುಮಗಳಿಗೆ ಕುತೂಹಲವಿತ್ತು. ಆದರೆ ಆತ ಡಾನ್ಸ್ ಮಾಡುವ ಪರಿ ನೋಡಿ ಅವಳು ಹೌಹಾರಿ ಹೋದಳು. ಆತ ಹಾವಿನಂತೆ ನೆಲದ ಮೇಲೆ ಹೊರಳಾಡಲಾರಂಭಿಸಿದ. ಹಾಡು ಮುಗಿದರೂ ಅವನ ಡಾನ್ಸ್ ಮಾತ್ರ ಮುಂದುವರಿದಿತ್ತು. ಅವಳಿಗೆ ತನ್ನ ಗಂಡನ
ಡಾನ್ಸ್ ವಾಕರಿಕೆ ತರಿಸಿತು. ಇಂಥ ಅಸಹ್ಯದ ವ್ಯಕ್ತಿ ಜತೆ ಒಂದಾಗಿ ಇರಲು ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಬಂದು ಬಿಟ್ಟಳು. ತನ್ನ ಡಾನ್ಸ್ ನೋಡಿ ಹೆಂಡತಿ ಖುಷಿಯಿಂದ ಬಿಗಿದಪ್ಪಿಕೊಳ್ಳಬಹುದು ಎಂದು ಗಂಡ ಯೋಚಿಸುತ್ತಿದ್ದ. ಆದರೆ ಅವಳು ನಿಜಕ್ಕೂ ಕೆರಳಿದ ಸರ್ಪ! ಚೆಂದವಾಗಿ ಡಾನ್ಸ್ ಮಾಡಲು ಬರದವನ ಜತೆ
ದಾಂಪತ್ಯವೇ? ಸಾಧ್ಯವೇ ಇಲ್ಲ. ನನಗೆ ಈ ಮದುವೆ ಬೇಡವೇ ಬೇಡ ಎಂದು ಅಲ್ಲಿಯೇ ಕಟ್ಟಿದ ತಾಳಿಯನ್ನು ಹರಿದು ಹಾಕಿ ಬಿಟ್ಟಳು. ಅಲ್ಲಿ ಸೇರಿದ ಗಂಡು-ಹೆಣ್ಣಿನ ಕಡೆಯವರು ಆಕೆಯನ್ನು ಸಂತೈಸಲು ಬಹಳ ಪ್ರಯತ್ನಿಸಿದರು. ಆದರೆ ಆಕೆ ಅವರ ಮಾತು ಗಳನ್ನು ಕೇಳಲೇ ಇಲ್ಲ.
ಬಿಲ್‌ಖುಲ್ ಸಾಧ್ಯವಿಲ್ಲ, ಇಂಥ ವ್ಯಕ್ತಿ ಜತೆ ಜೀವನ ಮಾಡುವುದು ಎಂದು ಹಿಡಿದ ಪಟ್ಟನ್ನು ಬಿಡಲೇ ಇಲ್ಲ. ಹೆಣ್ಣಿನ ಮನೆ ಕಡೆಯವರು ತಾವು ಪಡೆದ ಉಡುಗೊರೆ ಗಳನ್ನು ವಾಪಸ್ ಮಾಡಿದರು. ಈ ಮನುಷ್ಯನ ಜತೆ ಸಂಬಂಧ ಸಾಧ್ಯವಿಲ್ಲ ಎಂದು ಪೊಲೀಸರ ಸಮ್ಮುಖದಲ್ಲಿ ಹೆಣ್ಣಿನ ಕಡೆಯವರು ಬರೆದು ಕೊಟ್ಟರು. ಎರಡೂ ಕಡೆಯವರೂ ತಮ್ಮ ತಮ್ಮ ದಾರಿ ಹಿಡಿದು ಮನೆಗೆ ಹೋದರು. ಈಗ ಹೇಳಿ, ಇಂಥ ಘಟನೆ ಬೇರೆದರೂ ನಡೆಯುವುದು ಸಾಧ್ಯವಾ?!
RSVP ಅಂದರೆ..
ಹೀಗಂದರೆ (RSVP) ಅಂದರೆ ಏನು ಅಂತ ಹತ್ತು ಜನರನ್ನು ಕೇಳಿ ಒಂಬತ್ತು ಮಂದಿಗೆ ಅದರ ಅರ್ಥ ಗೊತ್ತಿರುತ್ತದೆ, ಆದರೆ ಅದರ ಫುಲ್ ಫಾರಂ ಗೊತ್ತಿರುವು ದಿಲ್ಲ.
ಅದರ ಪೂರ್ಣ ಸ್ವರೂಪ ಗೊತ್ತಿಲ್ಲದವರೂ, ಆಮಂತ್ರಣ ಪತ್ರಿಕೆ ಮೇಲೆ RSVP ಅಂತ ಬರೆಯಿಸಿರುತ್ತಾರೆ. ಈ ದಿನಗಳಲ್ಲಿ RSVP ಇಲ್ಲದ ಆಮಂತ್ರಣ ಪತ್ರಿಕೆ ಅಪರೂಪ ಎಂಬಷ್ಟರಮಟ್ಟಿಗೆ ಅದರ ಬಳಕೆ ಸರ್ವವ್ಯಾಪಿಯಾಗಿದೆ.
ಇತ್ತೀಚೆಗೆ ನನ್ನ ಸ್ನೇಹಿತರೊಬ್ಬರು ತಮ್ಮ ದಾಂಪತ್ಯಜೀವನದ ಇಪ್ಪತ್ತೈದನೇ ವರ್ಷದ ನಿಮಿತ್ತ ಒಂದು ಪಾರ್ಟಿಯನ್ನು ಪಂಚತಾರಾ ಹೊಟೇಲಿನಲ್ಲಿ ಏರ್ಪಡಿಸಿ ದ್ದರು. ಆ ಪ್ರಯುಕ್ತ ಒಂದು ಸುಂದರವಾದ ಆಮಂತ್ರಣ ಪತ್ರ ಕಳಿಸಿದ್ದರು. ಅದರ ಕೊನೆಯಲ್ಲಿ RSVP ಅಂತ ಬರೆದಿತ್ತು. ನಾನು ಅವರಿಗೆ ಫೋನ್ ಮಾಡಿ ಅವರ ಕಾಲೆಳೆಯಲೆಂಬಂತೆ, ‘ಸರ್, ಇನ್ವಿಟೇಶನ್ ಕೊನೆಯಲ್ಲಿ RSVP ಅಂತ ಬರೆದಿದ್ದೀರಲ್ಲ, ಹಾಗಂದ್ರೆ ಏನು?’ ಎಂದು ಕೇಳಿದೆ. ಅದಕ್ಕೆ ಅವರು, RSVP ಅಂದ್ರೆ ನೀವು ಕಾರ್ಯಕ್ರಮಕ್ಕೆ ಬರ್ತಿರೋ ಇಲ್ಲವೋ? ಬರುವುದಿದ್ದರೆ ಎಷ್ಟು ಜನ ಬರ್ತೀರಿ? ಮುಂತಾದ ವಿವರಗಳನ್ನು ತಿಳಿಸಿದರೆ ಆ ಪ್ರಕಾರ ಸಿದ್ಧತೆ ಮಾಡಲು ಅನುಕೂಲವಾಗಲಿ ಎಂದು ತಿಳಿಸುವ ವ್ಯವಸ್ಥೆ.
ಇದರಿಂದ ಎಷ್ಟು ಮಂದಿ ಅತಿಥಿಗಳು ಬರುತ್ತಾರೆ ಎಂಬುದು ಕಾರ್ಯಕ್ರಮ ಸಂಘಟಕರಿಗೆ ಮೊದಲೇ ಗೊತ್ತಾಗುತ್ತದೆ, ಆ ಪ್ರಕಾರ ಸೂಕ್ತ ಪೂರ್ವ ತಯಾರಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ’ಎಂದು ನನಗೆ ಏನೂ ಗೊತ್ತಿಲ್ಲ ಎಂದು ಭಾವಿಸಿ ವಿವರಿಸಲಾರಂಭಿಸಿದರು. ‘ಸ್ವಾಮೀ, ನನಗೆ ಅವೆಲ್ಲ ಗೊತ್ತು. ಆದರೆ ಅದರ ಫುಲ್ ಫಾರಂ ಅರ್ಥಾತ್ ಪೂರ್ಣ ವಿಸ್ತಾರ ರೂಪ ಹೇಳ್ತೀರಾ?’ ಎಂದು ಕೇಳಿದೆ. ಅದಕ್ಕೆ ಅವರು ‘ಹಾಗಂದ್ರೆ…. ಹಾಗಂದ್ರೆ… ’ ಎಂದು ಏನೋ
ಯೋಚಿಸಲಾರಂಭಿಸಿದರು. ‘ಹಾಗಂದ್ರೆ ಏನೋ ಇದೇರಿ… ತಕ್ಷಣ ನೆನಪಾಗ್ತಾ ಇಲ್ಲ… ನಿಮಗೆ ತಿಳೀಸುತ್ತೇನೆ’ ಎಂದು ಫೋನಿಟ್ಟರು.
ನಂತರ ಅವರ ಫೋನ್ ಬರಲಿಲ್ಲ. ಆಮಂತ್ರಣ ಪತ್ರದ ಮೇಲೆ ಹೀಗೆ ಬರೆಯಿಸಿದವರಿಗೂ ಅದರ ವಿಸ್ತಾರ ರೂಪ ಗೊತ್ತಿರುವುದಿಲ್ಲ ಎಂಬುದನ್ನು ಅವರು ಸಾಬೀತು ಮಾಡಿದರು.
ಇದನ್ನು ನೀವೂ ಪರೀಕ್ಷಿಸಬಹುದು
RSVP ವಿಸ್ತಾರ ರೂಪ R‚ pondez, S’il Vous Plat. ಹೀಗೆಂದರೆ ಯಾರಿಗೂ ಅರ್ಥವಾಗುವುದಿಲ್ಲ. ಇದು ಮೂಲತಃ ಫ್ರೆಂಚ್ ಪದ. ಇಟಾಲಿಯನ್ ಭಾಷೆಯಿಂದ ಕಡ ತಂದಿದ್ದು. ಹಾಗೆಂದರೆ Respond if you please ಅಥವಾ Please respond ಅಂತ ಅರ್ಥ. ನೀವು ಬರ್ತಿರೋ ಇಲ್ಲವೋ ಎಂಬು ದನ್ನು ತಿಳಿಸಿ ಅಥವಾ ನಿಮ್ಮ ಉಪಸ್ಥಿತಿ ಖಾತ್ರಿಪಡಿಸಿ ಎಂದರ್ಥ.
ಇಷ್ಟು ಸರಳವಾಗಿ ಹೇಳುವುದನ್ನು, ಯಾರಿಗೂ ಪೂರ್ಣ ವಿಸ್ತಾರ ಗೊತ್ತಿಲ್ಲದ ರಸ್ವ್ಪ್ ಅಂತ ಯಾಕೆ ಮುದ್ರಿಸುತ್ತಾರೋ ಗೊತ್ತಿಲ್ಲ. ತಮಾಷೆ ಅಂದ್ರೆ RSVP ವಿಸ್ತಾರ ಗೊತ್ತಿಲ್ಲದಿದ್ದರೇನಂತೆ, ಅದರ ಅರ್ಥ ಎಲ್ಲರಿಗೂ ಗೊತ್ತಿದೆ, ಅದು ಫ್ರೆಂಚ್ ಭಾಷೆಯಲ್ಲಿದ್ದರೂ. ಇನ್ನೂ ತಮಾಷೆಯ ಸಂಗತಿಯೇನೆಂದರೆ, ಫ್ರಾನ್ಸ್ ದೇಶದಲ್ಲಿ ಇದನ್ನು ಬಳಸದಿರುವುದು. ಇದನ್ನು ವ್ಯಾಪಕವಾಗಿ ಬಳಸುವುದು ಭಾರತದಲ್ಲಿ. ಹಿಮಾಚಲ ಭಾಷೆಯಲ್ಲಿ RSVP ಅಂದರೆ Rona Sarian Vayaye Prant.
ಹೀಗೆಂದರೆ ‘ಮದುವೆಯ ನಂತರ ಎಲ್ಲರೂ ಪಶ್ಚಾತ್ತಾಪ ಪಡುತ್ತಾರೆ’ ಎಂದರ್ಥವಂತೆ !
ಯೊಕೊ ಓನೋ ಬರೆದ ಸಾಲು
ಈ ಹೆಸರನ್ನು ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಇವಳು ಜಪಾನ್ ಮೂಲದ ಗಾಯಕಿ. ಬೀಟ್ಲ್ ತಂಡದಲ್ಲಿದ್ದ ಬ್ರಿಟನ್ ಮೂಲದ ಜಾನ್ ಲೆನ್ನನ್‌ನನ್ನು ಮದುವೆ ಯಾಗಿದ್ದರಿಂದ, ಅವನ ಜತೆ ಸೇರಿ ಅನೇಕ ಸಂಗೀತ ಕಾರ್ಯಕ್ರಮ ನೀಡಿದ್ದರಿಂದ ಪ್ರಸಿದ್ಧಳಾದಳು. ಓನೋ ಮತ್ತು ಲೆನ್ನನ್ ಮದುವೆಯನ್ನು ‘ದಿ ಗಾರ್ಡಿಯನ್ ಪತ್ರಿಕೆ, ಹಾಡು ಹಾಡನ್ನು ಮದುವೆ ಆಯಿತು’ ಎಂಬ ಶೀರ್ಷಿಕೆ ಯೊಂದಿಗೆ ಪ್ರಕಟಿಸಿತ್ತು. ಓನೋ ಜಪಾನೀಸ್ ಮತ್ತು ಇಂಗ್ಲಿಷ್ ಹಾಡುಗಳನ್ನು ಹಾಡುತ್ತಿದ್ದುದರಿಂದ ವಿಶ್ವವಿಖ್ಯಾತಿಯನ್ನು ಗಳಿಸಿದಳು. ೧೯೮೦ರಲ್ಲಿ ಲೆನ್ನನ್ ಹತ್ಯೆಯಾಗುವ ತನಕ, ಇಬ್ಬರೂ ಅನ್ಯೋನ್ಯವಾಗಿದ್ದರು. ಲೆನ್ನನ್ ವಿವಾಹವಾಗುವ ಮೊದಲು, ಓನೋ ಅಮೆರಿಕದ ಸಿನಿಮಾ ನಿರ್ಮಾಪಕ ಅಂಥೋನಿ ಕಾಕ್ಸ್ ನನ್ನು ಮದುವೆಯಾಗಿದ್ದಳು.
ಲೆನ್ನನ್ ನಿಧನ ನಂತರ, ಓನೋ ಶಾಂತಿ ಪ್ರತಿಪಾದಕಿಯಾಗಿ, ಕಲಾವಿದೆಯಾಗಿ ತನ್ನನ್ನು ರೂಪಿಸಿಕೊಂಡಳು. ಇದ್ದಕ್ಕಿದ್ದಂತೆ ಓನೋ ನೆನಪಾಗಲು ಕಾರಣ ವೇನೆಂದರೆ, ಇತ್ತೀಚೆಗೆ ಆಕೆ ಹೇಳಿದ ಪ್ರಸಿದ್ಧ ಸಾಲೊಂದನ್ನು ಓದಿದೆ. ಆ ಸಾಲನ್ನು ಅನೇಕರು ಆಗಾಗ ಪ್ರಸ್ತಾಪಿ ಸುವುದುಂಟು. ಅಂದ ಹಾಗೆ ಆ ಸಾಲು – A mirror becomes a razor when its broken. A stick becomes a flute when its loved’’
ಉಚ್ಚಾರ!
ಕೆಲವು ವರ್ಷಗಳ ಹಿಂದೆ ಜಾರ್ಜಿಯಾದ ರಾಜಧಾನಿ ಟಿಬಿಲಿಸಿ ಯಲ್ಲಿ ಹಿಂಸಾಚಾರವಾದಾಗ, ಕನ್ನಡದ ಪತ್ರಿಕೆಗಳು ವರದಿ ಮಾಡುವಾಗ, ಟಿಬಿಲಿಸಿ ಹೆಸರನ್ನು ಒಂದೊಂದು ಒಂದೊಂದು ರೀತಿಯಲ್ಲಿ ಬರೆದಿದ್ದವು.
ಇದಕ್ಕೆ ಕಾರಣ ಟಿಬಿಲಿಸಿ ಸ್ಪೆಲ್ಲಿಂಗ್-Tbilisi!
ಯಾರಿಗೇ ಆಗಲಿ, ಇದನ್ನು ಹೇಗೆ ಉಚ್ಚರಿಸಬೇಕು ಎಂಬುದು ಗೊತ್ತಾಗುವುದಿಲ್ಲ. ಒಬ್ಬೊಬ್ಬರು ಒಂದೊಂದು ಥರ ಹೇಳುತ್ತಾರೆ. ಕೆಲವರು ‘ಟಿ’ ಸೈಲೆಂಟ್ ಎಂದು ಭಾವಿಸಿ ‘ಬಿಲಿಸಿ’ ಅಂತಾರೆ. ಕೆಲವೊಮ್ಮೆ ಟೈಪ್ ಮಾಡಿದ್ದನ್ನು ನೋಡದಿದ್ದರೆ ಅಥವಾ ಆಟೋ ಕರೆಕ್ಟ್‌ನಿಂದಾಗಿ ‘ಬೀಳಿಸಿ’ ಎಂದಾಗುವುದೂ ಉಂಟು. ಇನ್ನು ಕೆಲವರು ಬಿ ಸೈಲಂಟ್ ಎಂದು ಭಾವಿಸಿ ‘ತಿಲಿಸಿ’ ಎಂದು ಹೇಳುವುದುಂಟು. ಅದು ಆಟೋ ಕರೆಕ್ಟ್‌ನಿಂದಾಗಿ ‘ತಿಳಿಸಿ’ ಎಂದಾಗುವುದೂ ಉಂಟು.
ಒಟ್ಟಾರೆ ಟಿಬಿಲಿಸಿ ಒಂದಷ್ಟು ಗೊಂದಲವನ್ನು ಉಂಟು ಮಾಡುವುದಂತೂ ನಿಜ. ಇದ್ಯಾವುದೂ ಬೇಡ ಎಂದು ಮಹಾಗುರು ‘ಗೂಗಲ್’ ಮೊರೆ ಹೋಗಿ ನನ್ನ ಸಂದೇಹವನ್ನು ನಿವಾರಿಸಿಕೊಂಡೆ. ಅದರ ಪ್ರಕಾರ, ಟಿಬಿಲಿಸಿ ಎಂಬುದು ಸರಿಯಾದ ಉಚ್ಚಾರ. ಅಲ್ಲದೇ ಕಳೆದ ನಾಲ್ಕು ದಿನಗಳಿಂದ ಇಲ್ಲಿ ಓಡಾಡುವಾಗ ಸ್ಥಳೀಯರು ಹೇಳುವುದನ್ನು ಕೇಳಿ ಪಕ್ಕಾ ಮಾಡಿಕೊಂಡೆ. Tbilisi ಯಲ್ಲಿ ಯಾವ ಅಕ್ಷರವೂ ಸೈಲೆಂಟ್ ಆಗಿಲ್ಲ. ಹೀಗಾಗಿ ಬರೆದಂತೆ ಓದಬೇಕು. ಆಫ್ರಿಕಾದ
ಪಶ್ಚಿಮದಲ್ಲಿ ಒಂದು ದೇಶವಿದೆ. ಸಿಯಾರ ಲಿಯೋನ್, ಲಿಬೇರಿಯಾ, ಬುರ್ಕಿನೋ -ಸೊ, ಟೋಗೊ ಮುಂತಾದ ದೇಶಗಳ ಗಡಿಗೆ ತಾಕಿಕೊಂಡಿರುವ ಅದರ ಹೆಸರನ್ನು ಇಲ್ಲಿಯ ತನಕ (ಮೊದಲು ನನ್ನನ್ನು ಸೇರಿಸಿದಂತೆ) ಯಾರೂ ಸರಿಯಾಗಿ ಹೇಳಿ ದ್ದನ್ನು ಕೇಳಿಲ್ಲ. ಕೆಲವರಿಗಂತೂ ಆ ದೇಶದ ಹೆಸರು ನಾಲಗೆಯಲ್ಲಿ ಹೊರಳುವುದೇ ಇಲ್ಲ. ‘ಅದ್ಯಾವುದೋ ದೇಶ ಇದೆಯಲ್ಲ …ಅದರ ಹೆಸರು ವಿಚಿತ್ರವಾಗಿದೆ..’ ಅಂತಾನೆ ಹೇಳುತ್ತಾರೆ.
ಆ ದೇಶದ ಹೆಸರಿನ ಸ್ಪೆಲ್ಲಿಂಗ್ ಹೀಗಿದೆ- Cote d Ivoire! ಇದನ್ನು ಸಹ ಬೇಕಾಬಿಟ್ಟಿ ಉಚ್ಚರಿಸುತ್ತಾರೆ. ಇದರ ಸರಿಯಾದ ಉಚ್ಚಾರ- ಕೋಟ್ ಡಿವೋರ್. ಕೊನೆಯ ಎರಡು ಅಕ್ಷರಗಳನ್ನು ಒಳಬಾ ಯಲ್ಲಿ ‘ವೋ ..ರ್’ ಎಂದು ತುಸು ಕಷ್ಟಪಟ್ಟು ಹೇಳಬೇಕು. ಆ ದೇಶದ ರಾಜಧಾನಿಯ ಹೆಸರೂ (Yamoussoukro) ಹಾಗೇ ಕಷ್ಟಪಟ್ಟು ಹೇಳಬೇಕು. ಟಿಬಿಲಿಸಿಯಲ್ಲಿ ಜನರ ಹೆಸರನ್ನು ಸುಲಭ ವಾಗಿ ಹೇಳಬಹುದು ಆದರೆ ಊರಿನ ಹೆಸರನ್ನು ಕೇಳುವುದು ಕಷ್ಟವೇ. ಊರಿನ
ಮಧ್ಯದಲ್ಲಿ Mtkvari ಎಂಬ ನದಿ ಹರಿಯು ತ್ತದೆ. ಇದರ ಹೆಸರನ್ನು ಹೇಳುವುದು ಹೇಗೆ ಎಂದು ಕೇಳಿ ತಿಳಿದು ಕೊಳ್ಳಬೇಕಾಯಿತು. ಅಂದ ಹಾಗೆ ಟಿಬಿಲಿಸಿ ಅಂದರೆ ಜಾರ್ಜಿ ಯನ್ ಭಾಷೆಯಲ್ಲಿ ಆಪ್ತವಾದ ಊರು ಅಥವಾ ಸ್ಥಳ ಎಂದರ್ಥ.
ಅಮರ ಸಾಹಿತ್ಯ!
ಇಂಗ್ಲಿಷಿನಲ್ಲಿ Epitaph literature ಅಂದರೆ ಸಮಾಧಿ ಸಾಹಿತ್ಯ ಎಂಬ ಪ್ರಕಾರವೇ ಇದೆ. ಸಮಾಧಿಯ ಮೇಲೆ ನೆಡುವ ಕಲ್ಲಿನ ಮೇಲೆ ಬರೆದಿರುತ್ತಾರಲ್ಲಾ ಅದಕ್ಕೆ ಭವ್ಯ ಇತಿಹಾಸವಿದೆ. ‘ಸತ್ತವರು ಸಾಯಲಿ, ಆದರೆ ಅವರ ಸಮಾಧಿಯ ಮೇಲೆ ಬರೆದಿದ್ದು ಮಾತ್ರ ಜೀವಂತವಾಗಿರಲಿ’ ಎಂಬ ಕಾರಣದಿಂದ ಸಮಾಽ ಸಾಹಿತ್ಯ ಮಹತ್ವ ಪಡೆದಿದೆ. ಇದಕ್ಕೆ ‘ಅಮರ ಸಾಹಿತ್ಯ’ ಎಂದೂ ಕರೆಯುವುದುಂಟು.
ಸಾಹಿತಿಗೆ ಸಾವಿರಬಹುದು, ಆದರೆ ಅವನ ಸಮಾಧಿಯ ಮೇಲೆ ಬರೆದಿದ್ದು ಮಾತ್ರ ಶಾಶ್ವತ. ಸಾಹಿತಿಯ ಬರಹ ನಶಿಸಿದರೂ, ಅವನ ಸಮಾಧಿಯ ಮೇಲೆ ಕಲ್ಲಿನಲ್ಲಿ ಬರೆದಿದ್ದು ಮಾತ್ರ ಅಜರಾಮರ. ಸಮಾಧಿಯ ಮೇಲೆ ಬರೆದ ಸಾಹಿತ್ಯ, ವ್ಯಕ್ತಿಯನ್ನು ಬಣ್ಣಿಸಬಹುದಾದ ಅತಿ ಸಂಕ್ಷಿಪ್ತ ಆದರೆ ಅತಿ ಪ್ರಖರ ಬರಹ ಎನ್ನಬಹುದು. ಒಂದೆರಡು ಸಾಲಿನಲ್ಲಿ ಸತ್ತ ವ್ಯಕ್ತಿಯ ಇಡೀ ವ್ಯಕ್ತಿತ್ವವನ್ನು ಕಟ್ಟಿಕೊಡಬೇಕು. ತಮಾಷೆ ಅಂದರೆ ಸಾಹಿತಿಯೊಬ್ಬ ಜೀವಿತ ಅವಧಿಯಲ್ಲಿ ಎಷ್ಟೇ
ಬರೆಯಲಿ ಅವನ ಸಮಾಧಿಯ ಮೇಲೆ ಬರೆಯಬೇಕಾದವರು ಬೇರೆಯವರೇ. ಆದರೆ ಈ ಉಸಾಬರಿಯೇ ಬೇಡ ಎಂದು ತಾವು ಬದುಕಿರುವಾಗಲೇ ಖುಷವಂತ್ ಸಿಂಗ್ ಅವರು ತಮ್ಮ ಸಮಾಽಯ ಮೇಲೆ ನೆಡುವ ಕಲ್ಲಿನ ಮೇಲೆ ಏನು ಕೆತ್ತಬೇಕೆಂಬು ದನ್ನು ಬರೆದಿಟ್ಟಿದ್ದರು – “Here lies one who spared neither man nor God; Waste not your tears on him, hewas a sod; Writing nasty things he regarded as great fun; Thank the Lord he is dead, this son of a gun’
ಲಂಡನ್‌ನಲ್ಲಿ ಇಪ್ಪತ್ತೊಂಬತ್ತು ಮಕ್ಕಳ ತಂದೆಯೊಬ್ಬ ಸತ್ತಾಗ, ಅವನ ಸಮಾಧಿಯ ಮೇಲೆ ಹೀಗೆ ಬರೆದಿದ್ದರು-“Here lies a father of 29 children. There would have been more but he did not have time’.. ಅವಳಿಗೆ ತನ್ನ ಗಂಡನ ಮೇಲೆ ಸದಾ ಸಂಶಯ. ಪ್ರತಿ ರಾತ್ರಿ ಗಂಡ ತಡವಾಗಿ
ಮನೆಗೆ ಬಂದಾಗಲೆಲ್ಲ ಬೇರೆ ಹೆಂಗಸಿನ ಸಹವಾಸ ಮಾಡಿ ಬಂದಿರಬಹುದಾ ಎಂಬ ಗುಮಾನಿ. ಒಂದು ದಿನ ಗಂಡ ಸತ್ತ. ಅವನ ಸಮಾಧಿ ಮೇಲಿನ ಕಲ್ಲಿನ ಮೇಲೆ ಏನು ಬರೆಯಬೇಕು ಎಂದು ಮೇಲ್ವಿಚಾರಕ ಕೇಳಿದ. ಆಕೆ ಬರೆದು ಕೊಟ್ಟಳು- “here lays my husband john…now i know where he is at night’..
ಆಕ್ಸ್ ಫರ್ಡ್‌ನ ತತ್ತ್ವಜ್ಞಾನಿಯೊಬ್ಬನ ಸಮಾಧಿಯ ಮೇಲೆ ಹೀಗೆ ಬರೆದಿತ್ತು- “i came here without being consulted and I leave without any consent.’’ ಸಂಚಾರಿ ಸೇಲ್ಸ್‌ಮನ್‌ನ ಸಮಾಧಿಯ ಮೇಲೆ ಬರೆದ ಸಾಲುಗಳು ಹೀಗಿದ್ದವು – “My trip is ended. Send my samples home’.
ನಮ್ಮಲ್ಲಿ ಈ ಸಂಪ್ರದಾಯ ಇಲ್ಲ. ಸತ್ತವರ ಹೆಸರು, ಹುಟ್ಟಿದ ಹಾಗೂ ನಿಧನರಾದ ಇಸವಿಯನ್ನಷ್ಟೇ ಬರೆಯುತ್ತಾರೆ. ಹೀಗೆ ನಮ್ಮಲ್ಲಿ ಸ್ಮಶಾನ ಸಾಹಿತ್ಯವೇ ಸಮಾಧಿಯಾಗಿದೆ.