Thursday, 12th December 2024

ಸಲಹೆ ಮುಖ್ಯವೋ, ಅದನ್ನು ಜಾರಿಗೊಳಿಸಿದ್ದು ಮುಖ್ಯವೋ !

ಇದೇ ಅಂತರಂಗ ಸುದ್ದಿ

vbhat@me.com

ಇತ್ತೀಚೆಗೆ ನಾನು ನನ್ನ ಮಾಮೂಲಿ ಹೇರ್ ಡ್ರೆಸ್ಸಿಂಗ್ ಸೆಲೂನ್‌ಗೆ ಹೋಗಿದ್ದೆ. ಹಿಂದೆ ಒಂದು ಬಾರಿ ಹೋಗಿದ್ದಾಗ, ನಾನು ಕೊಟ್ಟಿದ್ದ ಸಲಹೆ ಜಾರಿ ಆಗಿದ್ದಕ್ಕೆ ಸೆಲೂನಿನ ಮಾಲೀಕ ನನಗೆ ಧನ್ಯವಾದ ತಿಳಿಸಿದ.

ಅದು ಕೆಲ ತಿಂಗಳ ಹಿಂದಿನ ಮಾತು. ನಾನು ಆತನ ಸೆಲೂನಿನಲ್ಲಿದ್ದೆ. ಆಗ ಅಲ್ಲಿಗೆ ಸಿರಿವಂತ ವ್ಯಕ್ತಿಯೊಬ್ಬ ಕಾಲಿಟ್ಟ. ಆತ ಏನೋ ಕಳೆದುಕೊಂಡ ಮನಃಸ್ಥಿತಿಯಲ್ಲಿದ್ದ. ಬಂದವನೇ ತರಾತುರಿಯಲ್ಲಿ, ‘ಐಫೋನ್ ಚಾರ್ಜರ್ ಇದೆಯಾ?’ ಎಂದು ಕೇಳಿದ. ಅಷ್ಟರಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ನೌಕರನೊಬ್ಬ ವ್ಯಂಗ್ಯದ ದನಿಯಲ್ಲಿ, ‘ನಾವು ಇಲ್ಲಿ ಕೂದಲು ಕತ್ತರಿಸುವ ಕೆಲಸ ಮಾಡು ವವರು, ಎಲ್ಲಿ ನಾವು ಐಫೋನ್ ಹೊಂದುವುದು ಸಾಧ್ಯ? ಇಲ್ಲಿ ಯಾರಲ್ಲೂ ಐಫೋನ್ ಇಲ್ಲ, ಹೀಗಾಗಿ ಅದರ ವೈರ್ ಕೂಡ ಇಲ್ಲ’ ಎಂದುಬಿಟ್ಟ.

ಆ ಶ್ರೀಮಂತ ಗ್ರಾಹಕನಿಗೆ ಕಸಿವಿಸಿಯಾಯಿತು. ಆತ ಮುಖ ಸಿಂಡರಿಸಿ ಕೊಂಡು ಹೊರಕ್ಕೆ ಹೋದ. ‘ಏನು ಸೆಲೂನ್ ಇಡ್ತಾರಪ್ಪ, ಒಂದು ಐಫೋನ್ ಚಾರ್ಜರ್ ಇಡೋಕೆ ಆಗಲ್ವ? ಅಷ್ಟೊಂದು ದುಡ್ಡು ತಗೋತಾರೆ’ ಅಂತೆಲ್ಲ ಹೇಳಿಕೊಂಡು ಸಿಡಿಮಿಡಿಯಿಂದಲೇ ಹೊರ ನಡೆದ. ಸೆಲೂನ್ ಮಾಲೀಕನಿಗೆ ಆ ಮಾತುಗಳನ್ನು ಕೇಳಿ ತುಂಬಾ ಬೇಸರವಾಗಿತ್ತು. ಆತ ತನ್ನ ಭಾವನೆಗಳನ್ನು ನನ್ನ ಬಳಿ ಹೇಳಿಕೊಂಡ.

‘ಏನ್ಸಾರ್, ನಾನು ಸೆಲೂನ್ ನಡೆಸ್ತಾ ಇದೀನೋ, ಇಲ್ಲ ಟೆಕ್ ಕಂಪನಿ ನಡೆಸ್ತಾ ಇದೀನೋ ಗೊತ್ತಾಗ್ತಿಲ್ಲ, ಜನ ಏನೇನೆಲ್ಲ
ಕೇಳ್ತಾರೆ ಅಂತ ಬೇಜಾರು ಮಾಡಿಕೊಂಡ. ಅಲ್ಲಿದ್ದವರೆಲ್ಲ ನಗುತ್ತಿದ್ದರೆ ಸೆಲೂನ್ ಮಾಲೀಕ ಮಾತ್ರ ಬೇಸರದ ಇದ್ದ. ನಾನು ಆತನನ್ನು ಸಮಾಧಾನಿಸಿ, ಅಷ್ಟೊಂದು ಭಾವುಕನಾಗುವ ಅಗತ್ಯವಿಲ್ಲ. ಒಬ್ಬ ದೂರದರ್ಶಿ ಬ್ಯುಸಿನೆಸ್‌ಮನ್ ತನ್ನ ಗ್ರಾಹಕರಿಗೆ ಏನು ಬೇಕು ಎಂಬುದನ್ನು ಅರಿತು ಒದಗಿಸುವುದು ಜಾಣತನ ಎಂದು ನನ್ನ ಜ್ಞಾ ಉಪಯೋಗಿಸಿ ಸಲಹೆಗಳನ್ನು ಕೊಟ್ಟೆ.

‘ಈಗಿನ ಪೀಳಿಗೆಯ ಜನರು ನೆಟ್ ಕನೆಕ್ಷನ್ ಇಲ್ಲದಿದ್ದರೆ, ಮೊಬೈಲ್ ಬ್ಯಾಟರಿ ಡೌನ್ ಆಗಿದ್ದರೆ ಆಕಾಶವೇ ತಲೆಮೇಲೆ
ಬಿದ್ದವರಂತೆ ಆಡುತ್ತಾರೆ. ನೀನು ನಿನ್ನ ಸೆಲೂನ್ ಸೀಟಿನ ಪಕ್ಕದಲ್ಲಿ ಒಂದು ಪ್ಲಗ್ ಸಿಕ್ಕಿಸಿ, ಅಲ್ಲಿ ಎಲ್ಲ ಬಗೆಯ ಮೊಬೈಲ್ ಚಾರ್ಜರ್ ವೈರ್ ನೇತುಹಾಕಿಬಿಡು, ಯಾರಿಗೆ ಯಾವುದು ಬೇಕೋ ಅದು ಸಿಕ್ಕಿಸಿಕೊಳ್ಳುತ್ತಾರೆ. ಇನ್ನೊಂದು ರೌಟರ್ ಇಟ್ಟುಬಿಡು. ಇಲ್ಲಿ ಇದ್ದಷ್ಟು ಹೊತ್ತು ಗ್ರಾಹಕರು ಏನು ಬೇಕಾದರೂ ಡೌನ್ ಲೋಡ್ ಮಾಡುವುದಕ್ಕೆ ಅದು ಸಹಾಯಕ ವಾಗುತ್ತದೆ.

ಇದಕ್ಕೆಲ್ಲ ನಿನಗೆ ಒಂದಷ್ಟು ಸಾವಿರ ಖರ್ಚಾಗಬಹುದು. ಆದರೆ ಇಲ್ಲಿಗೆ ಬಂದ ಗ್ರಾಹಕ ಹೆಚ್ಚು ಹೊತ್ತು ಇಲ್ಲಿಯೇ ಕಳೆಯು ವಂತಾಗುತ್ತದೆ ಮತ್ತು ನಿನ್ನಿಂದ ಬೇರೆ ಬೇರೆ ಸೇವೆಗಳನ್ನು ಪಡೆಯುವುದು ಸಾಧ್ಯವಾಗುತ್ತದೆ’ ಎಂದು ಸಮಾಧಾನದಿಂದ ತಿಳಿಸಿ ಹೇಳಿದೆ. ಆತ ಅದನ್ನು ಜಾರಿಗೆ ತಂದ ಮತ್ತು ಗ್ರಾಹಕರು ಹೆಚ್ಚು ಹೊತ್ತು ಸೆಲೂನಿನಲ್ಲಿ ಕಾಲಕಳೆಯುವುದನ್ನು ಗಮನಿಸಿದ. ಅದರಿಂದ ಆತನ ವ್ಯಾಪಾರ ವೃದ್ಧಿಯೂ ಆಯಿತು.

ನಾನು ಕೊಟ್ಟ ಸಲಹೆ ಕ್ಲಿಕ್ ಆಗಿದ್ದರಿಂದ ಆತನ ಮೊಗದಲ್ಲಿ ಮಂದಹಾಸವಿತ್ತು. ನಾನು ಮಾತನಾಡುತ್ತಾ ಹೇಳಿದೆ, ನೋಡು ರಾವಣ ಭಾವಾವೇಶದಲ್ಲಿ ತನ್ನ ತಂಗಿ ಹೇಳಿದ ಮಾತನ್ನು ಕೇಳಿ ಏನೋ ಮಾಡಲು ಹೋದನಲ್ಲ, ಆತ ಕೊಂಚ ಶಾಂತಚಿತ್ತ ದಿಂದ ಆಲಿಸಿ ಮುಂದಡಿ ಇಟ್ಟಿದ್ದರೆ ರಾಮಾಯಣದ ಕಥೆಯೇ ಬದಲಾಗುತ್ತಿತ್ತು. ನಾನು ಸೆಲೂನ್‌ಗೆ ಕೊಟ್ಟ ಸಲಹೆಯಲ್ಲಿ ಮಹಾನ್ ಎನಿಸುವಂಥದ್ದೇನೂ ಇರಲಿಲ್ಲ. ಆದರೆ ಆ ಸಮಯದಲ್ಲಿ ಅದು ತಟ್ಟನೆ ಅವನ ಮನಸ್ಸಿನೊಳಗೆ ಇಳಿಯಿತು. ಆತ ತಕ್ಷಣ ಅದನ್ನು ಕಾರ್ಯರೂಪಕ್ಕೆ ತಂದ. ಅದರಿಂದ ಅವನ ಬಿಜಿನೆಸ್‌ಗೆ ಸಹಾಯಕವಾಯಿತು.

ನಾವು ಬದಲಾಗುತ್ತಿರುವ ವಿಶ್ವದಲ್ಲಿದ್ದೇವೆ. ಯೋಚನೆ ಮಾಡುವುದಕ್ಕೆ ಹಲವಾರು ಸಂಗತಿಗಳಿವೆ. ನಾವು ದಿನನಿತ್ಯ ಸಾವಿರಾರು ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ. ಬೆಳಗ್ಗೆ ತಿಂಡಿಗೆ ಏನು ತಿನ್ನುವುದು ಎಂಬುದರಿಂದ ಮೊದಲುಗೊಂಡು ದೊಡ್ಡ ವಹಿವಾಟಿನ ಲೆಕ್ಕಾಚಾರದ ತನಕ ದಿನನಿತ್ಯ ಅಸಂಖ್ಯ ನಿರ್ಣಯಗಳನ್ನು ನಮ್ಮ ಮನಸ್ಸು ತೆಗೆದುಕೊಳ್ಳುತ್ತದೆ. ಇಷ್ಟೆಲ್ಲ ನಿರ್ಣಯಗಳ ಹಿಂದೆ ನಮ್ಮ ಮನಸ್ಸಿನಲ್ಲಿ ಯಾವುದು ಬೇಕು, ಯಾವುದು ಬೇಡ ಎಂಬ ಲೆಕ್ಕಾಚಾರ ಆಗುತ್ತಲೇ ಇರುತ್ತದೆ. ಕೆಲವೊಮ್ಮೆ ನಿರ್ಣಯ ಫಟಾಫಟ್ ಅಂತ ಆಗಿಬಿಡುತ್ತದೆ, ಇನ್ನು ಕೆಲವೊಮ್ಮೆ ಅದು ಸಮಯ ತೆಗೆದುಕೊಳ್ಳುತ್ತದೆ. ಇದಕ್ಕೆ ಹ್ಯೂರಿಸ್ಟಿಕ್ (heuristic) ಅಂತ ಕರೆಯುತ್ತಾರೆ.

ಇದರಿಂದ ದೊಡ್ಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಫಲರಾಗುತ್ತೇವೆ. ಪ್ರತಿ ಕ್ಷಣವೂ ಬದಲಾಗುತ್ತದೆ. ಆದರೆ ನಾವು ಅದನ್ನು ಗುರುತಿಸುವುದಿಲ್ಲ. ಈ ಪ್ರಸಂಗವನ್ನು ನನಗೆ ಹೇಳಿದವರು ಯೋಗಿ ದುರ್ಲಭಜೀ.

ಸಮಾಧಿಲೇಖ ಸಾಹಿತ್ಯ
ತಂದೆ-ತಾಯಿ ನಿಧನರಾದಾಗ ಅವರ ಸಮಾಧಿಯ ಮೇಲೆ ಏನು ಬರೆಯಿಸಬೇಕು ಎಂದು ಅವರ ಮಕ್ಕಳು ಬಹಳ ತಲೆ
ಕೆಡಿಸಿಕೊಳ್ಳುತ್ತಾರೆ. ಇನ್ನು ಕೆಲವರು ಈ ಕಷ್ಟವನ್ನು ಬೇರೆಯವರಿಗೆ ಕೊಡದೇ, ತಮ್ಮ ನಿಧನದ ಬಳಿಕ ಸಮಾಧಿಯನ್ನೂ ತಾವೇ ನಿರ್ಮಿಸಿ, ಅದರ ಮೇಲೆ ನೆಡುವ ಕಲ್ಲಿನ ಮೇಲಿನ ಬರಹವನ್ನೂ ತಾವೇ ಮುಂಚಿತವಾಗಿ ಬರೆಯಿಸಿರುತ್ತಾರೆ. ಈ ವಿಷಯದಲ್ಲಿ ಕೆಲವರು ಅಷ್ಟು ಮುಂದಾಲೋಚನೆ ಮಾಡಿರುತ್ತಾರೆ.

ಖುಷವಂತ ಸಿಂಗ್ ಅವರಂತೂ ತಾವು ನಿಧನರಾಗುವುದಕ್ಕಿಂತ ಹತ್ತು ವರ್ಷಗಳ ಮೊದಲೇ, ತಮ್ಮ ಸಮಾಧಿಲೇಖ (Epitaph) ವನ್ನು ಸಿದ್ಧಪಡಿಸಿದ್ದರು – Here lies one who spared neither man nor God; Waste not your tears on him, he was a sod; Writing nasty things he regarded as great fun; Thank the Lord he is dead, this son of a gun.

ಲಂಡನ್ ನಲ್ಲಿ ಒಬ್ಬ ವಕೀಲರ ಸಮಾಧಿಯ ಮೇಲೆ Sir John Strange, Here lies an honest man; And that
is Strange ಎಂದು ಬರೆದಿತ್ತು. ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಸೈನಿಕ, ಬ್ಯಾಂಕರ್ ಮತ್ತು ಅಧ್ಯಾಪಕ  ಅನ್ಯೋನ್ಯ ವಾಗಿ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದರು. ಒಂದು ದಿನ ಆ ಮೂವರೂ ಸೇರಿ ತಮ್ಮ ಸಮಾಧಿಲೇಖದ ಮೇಲೆ ಏನು ಬರೆದಿರಬೇಕು ಎಂದು ನಿರ್ಧರಿಸಿದರು.

ಸೈನಿಕ ಬರೆಯಿಸಿದ್ದ – Old Soldiers never die, they just fade away. ಅದರಿಂದ ಪ್ರಚೋದಿತನಾದ ಬ್ಯಾಂಕರ್, Old Bankers never die, they just lose interest ಎಂದು ಬರೆಯಿಸಿದ. ಅಧ್ಯಾಪಕ ತಾನೂ ಕಮ್ಮಿಯಲ್ಲ ಎಂದು ಬರೆಯಿಸಿದ – Old Professors never die, they just live on in footnotes. 1947ರಲ್ಲಿ ತಮ್ಮ 75 ನೇ ಜನ್ಮದಿನವನ್ನು ಆಚರಿಸಿಕೊಳ್ಳುವ ಸಂದರ್ಭದಲ್ಲಿ ಬ್ರಿಟನ್‌ನ ಪ್ರಧಾನಿಯಾಗಿದ್ದ ವಿನ್‌ಸ್ಟನ್ ಚರ್ಚಿಲ್ ತಮ್ಮ ಸಮಾಧಿಲೇಖದ ಮೇಲೆ ಏನಿರಬೇಕು ಎಂಬ ಪ್ರಶ್ನೆಗೆ ತಮಾಷೆಗೆ, I am ready to meet my Maker. Whether my Maker is prepared for the great ordeal of meeting me is another matter ಎಂದಿರಲಿ ಎಂದು ಹೇಳಿದ್ದರು.

ವಾರೆನ್ ವೆಸ್ಲಿ ಎಂಬ ತಮಾಷೆಯಾಗಿ ಮಾತಾಡುವ ವ್ಯಕ್ತಿಯಿದ್ದ. ಆತ ನಿಧನನಾದಾಗ ಅವನ್ ಸ್ನೇಹಿತರು ಸೇರಿ I am ready to meet my Maker. Whether my Maker is prepared for the great ordeal of meeting me is another matter  ಎಂದು ಬರೆಯಿಸಿದ್ದು ನೆನಪಾಗುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಸಮಾಧಿಲೇಖ ಸಾಹಿತ್ಯ ಎಂಬ ಒಂದು ವಿಶಿಷ್ಟ ಪ್ರಕಾರವೇ ಇದೆ. ಆದರೆ ನಮ್ಮಲ್ಲಿ ಈ ಬಗ್ಗೆ ಇನ್ನೂ ಅಷ್ಟು ಆಸಕ್ತಿ ಮೂಡಿದಂತಿಲ್ಲ.

ಉತ್ತಮ ಫೀಲ್ಡರ್ ಕೂಡ!
ಕೆಲವು ದಿನಗಳ ಹಿಂದೆ, ‘ದಿ ಹಿಂದು’ ಪತ್ರಿಕೆಯಲ್ಲಿ ಖ್ಯಾತ ಕ್ರಿಕೆಟ್ ಬರಹಗಾರ ಸುರೇಶ ಮೆನನ್, ‘ಭಾರತದ ಕ್ರಿಕೆಟ್‌ನಲ್ಲಿ
ಫೀಲ್ಡಿಂಗ್ ಮಹತ್ವವನ್ನು ಎತ್ತಿ ತೋರಿದ ಟೈಗರ್ ಪಟೌಡಿ’ ಎಂಬ ಅಂಕಣ ಬರೆದಿದ್ದರು. ಪಟೌಡಿ ಒಬ್ಬ ಶ್ರೇಷ್ಠ ಬ್ಯಾಟ್ಸಮನ್ ಎಂಬ ಸಂಗತಿ ಎಲ್ಲರಿಗೂ ಗೊತ್ತು. ಆದರೆ ಅವರೊಬ್ಬ ಅದ್ಭುತ ಫೀಲ್ಡರ್ ಆಗಿದ್ದರು ಮತ್ತು ಫೀಲ್ಡಿಂಗ್ ಮಹತ್ವವನ್ನು ಭಾರತ ತಂಡಕ್ಕೆ ಮನಗಾಣಿಸಿದ ನಾಯಕರಾಗಿದ್ದರು ಎಂಬುದು ಗೊತ್ತಿರಲಿಕ್ಕಿಲ್ಲ.

ಭಾರತ ತಂಡದಲ್ಲಿ ವಿನೂ ಮಂಕಡ್ ಅದ್ಭುತ ಫೀಲ್ಡರ್ ಆಗಿ ಹೊರಹೊಮ್ಮಿದ್ದರು. ಹೇಮು ಅಧಿಕಾರಿ ಕವರ್ ಪಾಯಿಂಟಿನಲ್ಲಿ
ಅದ್ಭುತ ಆಟಗಾರನಾಗಿ ಗಮನ ಸೆಳೆದಿದ್ದರು. ಆದರೆ ಟೈಗರ್ ಪಟೌಡಿ ಬಂದ ನಂತರ ಫೀಲ್ಡಿಂಗ್ ಚಿತ್ರಣವೇ ಬದಲಾಯಿತು.
ಫೀಲ್ಡಿಂಗ್‌ಗೆ ಸಂಬಂಧಿಸಿದಂತೆ, ಇಂದಿನ ದಿನಗಳ ಆಟಗಾರರು ಮಾಡುವುದನ್ನು ಪಟೌಡಿ ಅರವತ್ತರ ದಶಕದ ಮಾಡಿದ್ದರಂತೆ. ದಕ್ಷಿಣ ಆಫ್ರಿಕಾದಲ್ಲಿ ಪಂದ್ಯ ನಡೆದಾಗ ಅಲ್ಲಿನ ಅದ್ಭುತ ಕವರ್ ಫೀಲ್ಡರ್ ಎಂದು ಖ್ಯಾತರಾಗಿರುವ ಕೊಲಿನ್ ಬ್ಲಾಂಡ್, ಸುರೇಶ ಮೆನನ್ ಅವರಿಗೆ ಹೇಳಿದ್ದರಂತೆ – ಜಾಂಟಿ ರೋಡ್ಸ್ ಗಿಂತ ಪಟೌಡಿ ಅದ್ಭುತವಾದ ಫೀಲ್ಡರ್ ಆಗಿದ್ದರು ಮತ್ತು ಅವರ ನಿರೀಕ್ಷಣಾ ಸಾಮರ್ಥ್ಯ ವಿಶೇಷವಾಗಿತ್ತು.

‘ನಾನು ನನ್ನ ಫೀಲ್ಡಿಂಗಿನ ದುರಭಿಮಾನಿಯಾಗಿದ್ದೆ’ ಎಂದು ಪಟೌಡಿ ಒಂದೆಡೆ ಬರೆದುಕೊಂಡಿದ್ದರಂತೆ. ಇಂಗ್ಲೆಂಡಿನಲ್ಲಿ ಆಡುವಾಗ ಪಟೌಡಿ ಅವರು ತಮ್ಮ ಟೀಮ್ ಸದಸ್ಯರೊಂದಿಗೆ ಮಾತನಾಡುತ್ತಾ, ನಾವು ಪೆವಿಲಿಯನ್‌ನಿಂದ ಹೊರಹೋಗ ಬೇಕಾದರೆ ವಿಶೇಷವಾದದ್ದನ್ನು ಸಾಧಿಸಿರಬೇಕು. ನಮ್ಮ ಮೊಣಕಾಲು ಮೈದಾನದ ಧೂಳಿನಿಂದ ಕೊಳಕಾಗಿರಬೇಕು, ಅಂಥದ್ದೊಂದು ತಂಡ ನನ್ನ ಜತೆಗಿರಬೇಕು’ ಎಂದು ಹೇಳಿದ್ದರಂತೆ.

ಪಟೌಡಿ ಈ ಮಾತನ್ನು ಆಗಾಗ ಹೇಳುತ್ತಿದ್ದರಂತೆ. ಪೆವಿಲಿಯನ್‌ಗೆ ಮರಳುವಾಗ ಆಟಗಾರನೊಬ್ಬನ ಡ್ರೆಸ್ ನೀಟಾಗಿದ್ದನ್ನು
ನೋಡಿದ ಪಟೌಡಿ, ‘ಏನು, ನೀವು ಪಾರ್ಟಿಗೆ ಹೋಗುತ್ತಿದ್ದೀರಾ ಅಥವಾ ಆಡಲು ಹೋಗುತ್ತಿದ್ದೀರಾ?’ ಎಂದು ತೀಕ್ಷ್ಣವಾಗಿ
ಹೇಳಿದ್ದರಂತೆ. ಪಟೌಡಿ ಗರಡಿಯಲ್ಲಿ ಪಳಗಿದವರೇ ಆದ ಅಜಿತ್ ವಾಡೇಕರ್, ಏಕನಾಥ ಸೋಲ್ಕರ್, ಆಬಿದ್ ಆಲಿ,
ವೆಂಕಟರಾಘವನ್, ಸುನಿಲ್ ಗಾವಸ್ಕರ್ ಫೀಲ್ಡರ್ ಆಗಿಯೂ ಗಮನ ಸೆಳೆದವರು.

ಬೌಂಡರಿ ಹತ್ತಿರವಿದ್ದ ಆಟಗಾರರು ನೆಲಕ್ಕೆ ಬಿದ್ದು ಚೆಂಡನ್ನು ತಡೆಯದಿದ್ದಾಗ, ಆಟಗಾರನ ಹತ್ತಿರ ಓಡಿ ಬರುತ್ತಿದ್ದ ಪಟೌಡಿ,
‘ಚೆಂಡು ಯಾವತ್ತೂ ನಮ್ಮ ಕೈಗೆ ಬಂದು ಬೀಳುವುದಿಲ್ಲ. ನಾವು ಅದರ ಬೆನ್ನಟ್ಟಿ ಹಿಡಿಯಬೇಕಾಗುತ್ತದೆ. ಬಿದ್ದು ಹಿಡಿಯ
ಬೇಕಾಗುತ್ತದೆ’ ಎಂದು ಹೇಳುತ್ತಿದ್ದರಂತೆ. ಫೀಲ್ಡಿಂಗ್ ಬಗ್ಗೆ ಪಟೌಡಿ ಅವರ ಧೋರಣೆಯಿಂದಾಗಿ ಆಟದ ಫಲಿತಾಂಶದಲ್ಲಿ
ಗಣನೀಯ ಬದಲಾವಣೆ ಕಾಣಲಾರಂಭಿಸಿತು. ಫೀಲ್ಡಿಂಗ್ ಕೂಡ ಆಟದ ಗತಿಯನ್ನು ಬದಲಿಸಬಲ್ಲುದು ಎಂಬುದನ್ನು ಪಟೌಡಿ
ಪದೇ ಪದೆ ತೋರಿಸಿಕೊಟ್ಟರು. ಅದಾದ ಬಳಿಕ ತಂಡದ ಆಟಗಾರರನ್ನು ಆಯ್ಕೆ ಮಾಡುವಾಗ, ಉತ್ತಮ ಫೀಲ್ಡರ್
ಗುಣವೂ ಮಾನದಂಡವಾಯಿತು.

ಜಗತ್ತಿನ ಅತ್ಯುತ್ತಮ ಫೀಲ್ಡರ್ ಎಂದೇ ಹೆಸರುವಾಸಿಯಾದ ಜಾಂಟಿ ರೋಡ್ಸ್ ಕೂಡ ಪಟೌಡಿ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ‘ಪಟೌಡಿ ಒಬ್ಬ ಅದ್ಭುತ ಫೀಲ್ಡರ್ ಕೂಡ ಆಗಿದ್ದರು ಎಂದು ಕೇಳಿದ್ದೇನೆ. ಅವರಿಂದ ಪ್ರೇರಣೆ ಪಡೆದಿದ್ದೇನೆ’ ಎಂದು ಹೇಳಿದ್ದನ್ನು ಮರೆಯುವಂತೆಯೇ ಇಲ್ಲ. (ಇಲ್ಲಿ ನನಗೆ ಜಾಂಟಿ ರೋಡ್ಸ್ I got more bruises, grass burns and cuts in practice than in match play. . ಎಂಬ ಮಾತು ನೆನಪಾಗುತ್ತಿದೆ. ಒಮ್ಮೆ ಯಾರೋ ರೋqಗೆ ಕೇಳಿದರಂತೆ – ‘ಆ ಕ್ಯಾಚನ್ನು ನೀವು ಹೇಗೆ ಹಿಡಿದಿರಿ?’ ಅದಕ್ಕೆ ರೋಡ್ಸ್ ಹೇಳಿದ್ದರಂತೆ – ‘ಪ್ರಾಕ್ಟೀಸ್ ಸೆಷನ್‌ನಲ್ಲಿ ನಾನು ಪ್ರತಿದಿನ ಅಂಥ ಇಪ್ಪತ್ತು ಕ್ಯಾಚ್ ಹಿಡಿದಿರುತ್ತೇನೆ’ ಎಂದು ಹೇಳಿದ್ದನ್ನು ಮರೆಯುವಂತೆಯೇ ಇಲ್ಲ.)

ವಿಮಾನದಲ್ಲಿ ಊಟ, ತಿಂಡಿ, ನಿದ್ದೆ

ವಿಮಾನದಲ್ಲಿ ಊಟ, ತಿಂಡಿ, ನಿದ್ದೆ ಬಗ್ಗೆ ಸ್ವಲ್ಪ ಹೇಳಿ ಎಂದು ಓದುಗರೊಬ್ಬರು ವಿನಂತಿಸಿ ಕೊಂಡಿದ್ದಾರೆ. ಆ ಬಗ್ಗೆ ಸಣ್ಣ ಟಿ – ಹಿಂದಿನ ದಿನದಿಂದಲೇ ನಾವು ಹೋಗಬೇಕಾದ ದೇಶಕ್ಕೆ ಅನುಗುಣವಾಗಿ ಹೊಂದಿಸಿ ಕೊಂಡರೆ, ದೇಹದ ಗಡಿಯಾರ ಅದಕ್ಕೆ ತಕ್ಕಂತೆ ಸೆಟ್ ಆಗುತ್ತದೆ. ಪೈಲಟ್‌ಗಳು ಇದನ್ನು ಒಂದು ವ್ರತದಂತೆ ಪಾಲಿಸುವು ದರಿಂದ ಪದೇ ಪದೆ ವಿದೇಶ ಯಾತ್ರೆ ಕೈಗೊಂಡರೂ ಆರಾಮಾಗಿಯೇ ಇರುತ್ತಾರೆ. ನೀವು ಬಿಸಿನೆಸ್ ಕ್ಲಾಸ್ ಪ್ರಯಾಣಿಕರಾದರೆ, ನಿಮಗೆ ಈ ನಿಯಮದಲ್ಲಿ ಸ್ವಲ್ಪ ಸಡಿಲಿಕೆಯಿದೆ. ಕಾರಣ ನೀವು ವಿಮಾನದಲ್ಲಿ ಹಾಯಾಗಿ ಮನೆಯಲ್ಲಿ ಮಲಗಿದಂತೆ ಮಲಗಬಹುದು.

ಬಿಸಿನೆಸ್ ಕ್ಲಾಸ್ ಟಿಕೆಟ್ ತೆಗೆದುಕೊಂಡಿದ್ದರೆ, ವಿಮಾನ ನಿಲ್ದಾಣದ ಲೌಂಜ್ ವ್ಯವಸ್ಥೆ ಉಚಿತವಾಗಿರುವುದರಿಂದ, ಅಲ್ಲಿಯೇ
ಗುಂಡು’ ಹೀರಿ ಊಟ ಮಾಡುವುದು ಜಾಣತನ. ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಗಗನಸಖಿಗೆ ಡಿಸ್ಟರ್ಬ್ ಮಾಡಬೇಡಿ
ಎಂದು ಮನವಿ ಮಾಡಿ ಮಲಗಿಬಿಡಬಹುದು. ವಿಮಾನದಲ್ಲಿ ಮದ್ಯ ಮತ್ತು ಊಟ ಸರಬರಾಜು ಮಾಡಿ, ಪ್ಲೇಟ್ ತೆಗೆಯಲು ಕನಿಷ್ಠ ಒಂದು, ಒಂದೂವರೆ ಗಂಟೆಯಾದರೂ ಬೇಕು.

ಅಷ್ಟು ಹೊತ್ತು ನಿದ್ದೆ ಹಾಳು. ಬಿಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುವುದೇ ನಿದ್ದೆ ಮಾಡಲೆಂದು. ಆ ಕ್ಲಾಸ್‌ನಲ್ಲಿ ಪ್ರಯಾಣಿಸುವಾಗ, ಸಿನಿಮಾ ನೋಡುವುದರಿಂದ ಅಥವಾ ಪುಸ್ತಕ, ಪತ್ರಿಕೆ ಓದುವುದರಿಂದ ನಮಗೇ ನಷ್ಟ. ಎಕಾನಮಿ ಕ್ಲಾಸ್ ನಲ್ಲಿ ಪ್ರಯಾಣಿಸು ವವರಿಗೆ ಮಲಗುವುದು ಕಷ್ಟ. ಆ ಕ್ಲಾಸ್‌ನಲ್ಲಿ ಇರುವ ಸೀಟ್‌ಗಳು ಮಲಗುವುದಕ್ಕೆ ಯೋಗ್ಯವಲ್ಲ. ಅಲ್ಲಿ ಕುಳಿತು ನಿದ್ರಿಸಬಹುದು. ಆದರೂ ಅದು ಸ್ವಲ್ಪ ಕಿರಿಕಿರಿಯೇ. ಅದರಲ್ಲೂ ಇಬ್ಬರ ಮಧ್ಯೆ ಕುಳಿತರೆ, ಒಂದೋ ನಮ್ಮ ಹೆಗಲನ್ನು ಬೇರೆಯವರಿಗೆ ಕೊಡ ಬೇಕು, ಇಲ್ಲವೇ ನಾವು ಬೇರೆಯವರ ಹೆಗಲಿನ ಮೇಲೆ ತಲೆಯಿಡಬೇಕು. ಅದು ಇಬ್ಬರಿಗೂ ಅಲವರಿಕೆ.

ಹೀಗಾಗಿ ಎಕಾನಮಿ ಕ್ಲಾಸ್‌ನಲ್ಲಿ ಪಯಣಿಸುವಾಗ, ವಿಮಾನ ದಲ್ಲಿಯೇ ಊಟ ಮಾಡುವುದು, ಸಿನಿಮಾ ನೋಡುವುದು,
ಓದುವುದು, ವಿಡಿಯೋ ಗೇಮ್ಸ ಆಡುವುದು..ಮುಂತಾದ ಚಟುವಟಿಕೆಗಳಲ್ಲಿ ನಿರತರಾಗಬಹುದು. ಊಟ ಮಾಡಿ, ಒಂದು
ಗಂಟೆ ಓದಿ, ಎರಡು ಸಿನಿಮಾ ನೋಡಿ, ಅತ್ತಿತ್ತ ಹೊರಳಾಡಿ, ಒಂದೆರಡು ಗಂಟೆ ಮಲಗಿದರೆ, ನೀವು ಸೇರಬೇಕಾದ ದೇಶ,
ಊರು ಬಂದಿರುತ್ತದೆ. ಹೀಗಾಗಿ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುವಾಗ, ಮೊದಲೇ ನಿದ್ದೆ ಬಗ್ಗೆ ಸೂಕ್ತ ಪ್ಲಾನ್ ಮಾಡಿ ಕೊಳ್ಳಬೇಕು. ಇಲ್ಲದಿದ್ದರೆ ಗೋಳು ತಪ್ಪಿದ್ದಲ್ಲ.

ಇನ್ನೊಂದು ಸಂಗತಿ ಗೊತ್ತಿರಲಿ, ವಿಮಾನದಲ್ಲಿ ವಿತರಿಸುವ ಊಟ, ತಿಂಡಿ ಬಿಸಿಯಾಗಿರಬಹುದು, ಫ್ರೆಶ್ ಇದ್ದಂತೆ ಕಾಣ
ಬಹುದು, ಆದರೆ ಅವು ಕನಿಷ್ಠ ಮೂವತ್ತಾರು ಗಂಟೆ ಮೊದಲು ಸಿದ್ಧಪಡಿಸಿದ್ದು ಎಂಬುದು ಗೊತ್ತಿರಲಿ. ಆದರೆ ಬೇರೆ ಉಪಾಯ ವಿಲ್ಲ, ವಿಮಾನದಲ್ಲಿ ನೀಡುವ ಆಹಾರ ಸೇವಿಸುವುದು ಅನಿವಾರ್ಯ. ಆದರೆ ಯಾವ ಆಹಾರವನ್ನು, ಎಷ್ಟು ಸೇವಿಸಬೇಕು ಎಂಬ ವಿವೇಚನೆ ಇರಬೇಕು. ಹಣ್ಣು, ಜ್ಯೂಸು ಮತ್ತು ನೀರಿನ ಬಳಕೆ ಇದಕ್ಕೆ ಪರ್ಯಾಯವಾಗಬಹುದು. ಇದನ್ನು ಯಾವ ಟ್ರಾವೆಲ್ ಏಜೆಂಟರೂ ಹೇಳುವುದಿಲ್ಲ .

ಪ್ಲಾನ್ ಮತ್ತು ಪ್ಲಾನಿಂಗ್
ಜೀವನದಲ್ಲಿ ನಾವು ಪ್ಲಾನ್ ಮಾಡಿದಂತೆ ನಡೆಯುವುದಿಲ್ಲ. ಎಷ್ಟೇ ಕರಾರುವಾಕ್ಕಾಗಿ ಪ್ಲಾನ್ ಮಾಡಿದರೂ, ಅಂತಿಮ
ಫಲಿತಾಂಶ ಬೇರೆಯದೇ ಆಗಿರುತ್ತದೆ. plans ಗಿಂತ planning ಮುಖ್ಯ ಎಂಬ ಮಾತಿದೆ. ನಿಮ್ಮ ಮುಂದೆ ಎಷ್ಟು ಯೋಜನೆ ಗಳಿವೆ ಎಂಬುದು ಮುಖ್ಯ ಅಲ್ಲ. ಅವನ್ನು ಹೇಗೆ ಜಾರಿಗೊಳಿಸುತ್ತೀರಿ ಎಂಬುದು ಮುಖ್ಯ. ಅಮೆರಿಕದದರೆ, ಮೂರು ವರ್ಷಗಳ ನಂತರ, ಆಗ ಒಂದರ ಸಾಯಂಕಾಲ, ಐದು ಗಂಟೆ ನಲವತ್ತೇಳು ನಿಮಿಷಕ್ಕೆ ಮ್ಯಾನ್‌ಹಟನ್‌ನಲ್ಲಿರುವ ರೋಸ್ ಬರ್ರ‍ಿ ರೆಸ್ಟುರಾದಲ್ಲಿ ಸೇರಬೇಕು ಎಂದು ಮೂವರು ಸ್ನೇಹಿತರು ಇಂದು ನಿರ್ಧರಿಸಿದರೆ, ಸೇರುತ್ತಾರಂತೆ. ಅಲ್ಲಿ ಅದು ಸಾಧ್ಯ.

ಭಾರತದಂಥ ದೇಶದಲ್ಲಿ ಇಂದು ಪ್ಲಾನ್ ಮಾಡಿ ನಾಳೆ ಅದನ್ನು ಜಾರಿಗೊಳಿಸುವುದು ಅಷ್ಟು ಸುಲಭವಲ್ಲ. ಮೂವರಲ್ಲಿ ಒಬ್ಬರಾನ್ನಾದರೂ ತಡವಾಗಿ ಆಗಮಿಸುತ್ತಾರೆ. ಇಲ್ಲಿ ಪ್ಲಾನ್ ಪ್ರಕಾರ ಏನೂ ನಡೆಯುವುದಿಲ್ಲ. ಕೆಲವು ದಿನಗಳ ಹಿಂದೆ, ನನ್ನ ಪತ್ನಿಯ ಜನ್ಮದಿನದಂದು ಆಕೆಗೆ ನೀಡಲು, ಒಂದು ಗ್ರೀಟಿಂಗ್ ಕಾರ್ಡಿಗಾಗಿ ಹುಡುಕುತ್ತಿದ್ದೆ. ಬಹಳ ಹುಡುಕಿದ ನಂತರ, ಒಂದು ಕಾರ್ಡ್ ಸಿಕ್ಕಿತು. ಅದರಲ್ಲಿ ಬರೆದಿತ್ತು – You are the best thing I never planned. ಪ್ಲಾನ್ ಮಾಡದಿದ್ದರೂ ಸಿಗುವವಳು ಹೆಂಡತಿ ಮಾತ್ರ!