Tuesday, 10th December 2024

ಸಾಮಾಜಿಕ ಜಾಲತಾಣಗಳಿಗೆ ಕಡಿವಾಣ ಅತ್ಯಗತ್ಯ

 ಕಳಕಳಿ

ಪ್ರಹ್ಲಾಾದ್ ವಾಸುದೇವ ಪತ್ತಾಾರ, ಶಿಕ್ಷಕ, ಕಲಬುರಗಿ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಳ್ಳುವುದಕ್ಕಿಿಂತ, ದುರುಪಯೋಗ ಮಾಡಿಕೊಳ್ಳುವುದೇ ಹೆಚ್ಚಾಾಗಿದೆ. ಯಾರದೋ ಹೆಸರಿನಲ್ಲಿ ಇನ್ನಾಾರೋ ಅಕೌಂಟ್ ಸೃಷ್ಟಿಿಕೊಂಡು ಸಮಾಜದಲ್ಲಿ ಶಾಂತಿ ಕದಡುವ, ಮೌಢ್ಯ ಬಿತ್ತುವ, ವ್ಯಕ್ತಿಿಯ ತೇಜೋವಧೆ ಮಾಡುವ, ಅವಹೇಳನಕಾರಿಯಾದ, ಭಯ ಹುಟ್ಟಿಿಸುವ, ಹಿಂಸಾತ್ಮಕವಾದ, ಅಶ್ಲೀಲವಾದ, ವಿಡಿಯೋ, ಪೋಸ್‌ಟ್‌‌ಗಳನ್ನು ಹಾಕುತ್ತಿಿದ್ದಾರೆ. ಇದು ಸಮಾಜದ ಸ್ವಾಾಸ್ಥ್ಯ ಹಾಳುಮಾಡುತ್ತಿಿದೆ. ದೇಶದ ಭದ್ರತೆಗೆ ಮಾರಕವಾದ ಕೋಮು ಪ್ರಚೋದನಕಾರಿಯಾದ, ಧಾರ್ಮಿಕ ಅಸಹಿಷ್ಣುತೆಯನ್ನುಂಟು ಮಾಡುವ ಕಾನೂನು ಸುವ್ಯವಸ್ಥೆೆ ಹದಗೆಡಿಸುವ ಹೇಳಿಕೆಗಳು, ವಿಡಿಯೋಗಳು ಶೇರ್ ಮಾಡುವುದು ಕಾನೂನಿನ ಪ್ರಕಾರ ಅಪರಾಧ. ಆದರೆ ಇಂದಿನವರೆಗೂ ಇಂಥ ಪ್ರಕರಣಗಳು ಗಂಭೀರ ಸ್ವರೂಪ ಪಡೆದುಕೊಂಡಿಲ್ಲ. ಗುರುತರವಾದ ಆರೋಪದಡಿ ಯಾರನ್ನು ಬಂಧಿಸಿಲ್ಲ, ಕಠಿಣ ಶಿಕ್ಷೆಯೂ ಆಗಿಲ್ಲ.

ಸಾಮಾಜಿಕ ಜಾಲತಾಣಗಳ ಬಳಕೆ ಯುವ ಜನಾಂಗದಲ್ಲಿ ಇದೊಂದು ಗೀಳಾಗಿ ಪರಿಣಮಿಸಿದೆ. ಮುಂದೆ ಇದು ಸಾಮಾಜಿಕ ಸಮಸ್ಯೆೆಯಾಗಿ ಕಾಡುವ ಎಲ್ಲಾ ಲಕ್ಷಣಗಳೂ ಕಾಣುತ್ತಿಿವೆ.

ಇತ್ತೀಚೆಗೆ ಸುಪ್ರೀಂ ಕೋರ್ಟ್ ಸಾಮಾಜಿಕ ಜಾಲತಾಣಗಳ ಬಳಕೆ ಕಡಿವಾಣದ ಕುರಿತು ಸರಕಾರಕ್ಕೆೆ ಅಭಿಪ್ರಾಾಯ ಕೇಳಿದೆ. ಸರಕಾರವು ಇದು ಅತ್ಯಂತ ಮಹತ್ವದ ಗಂಭೀರ ವಿಚಾರವೆಂದು ಪರಿಗಣಿಸಬೇಕಿದೆ. ಮುಗ್ಧರು, ಅಮಾಯಕರು, ಮಹಿಳೆಯರು, ಸಣ್ಣ ಮಕ್ಕಳು, ಗೊತ್ತಿಿದ್ದೋೋ, ಗೊತ್ತಿಿಲ್ಲದೆಯೋ ಅನೇಕ ಸಮಸ್ಯೆೆಗಳನ್ನು ತಮ್ಮ ಮೈಮೇಲೆ ಎಳೆದುಕೊಂಡು ಕಾನೂನಿನ ಕುಣಿಕೆಯಲ್ಲಿ ಸಿಲುಕಿಕೊಂಡು, ಜೀವನ ಹಾಳು ಮಾಡಿಕೊಂಡ ವರದಿಗಳು ಆಗಾಗ ಮಾಧ್ಯಮದಲ್ಲಿ ವರದಿಯಾಗುವುದನ್ನು ಕಾಣುತ್ತೇವೆ.

ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲ ಸಲ್ಲದ ಸುಳ್ಳು ಸುದ್ದಿ ಹರಡಿದ ಪರಿಣಾಮ, ಕೆಲವು ಅಮಾಯಕರು ಅವಮಾನ, ನಿಂದನೆ, ಅವಹೇಳನ ತಾಳದೆ ಆತ್ಮಹತ್ಯೆೆ ಮಾಡಿಕೊಂಡಿದ್ದಾರೆ. ಕೆಲವು ಕಡೆ ಸಾಮಾಜಿಕ ಸ್ವಾಾಸ್ಥ್ಯ ಹದಗೆಡುವಂಥ ಘಟನೆಗಳು ನಡೆದಿವೆ. ಕೋಮು ಪ್ರಚೊದನಕಾರಿ ವಿಚಾರಗಳು ಸಮೂಹ ಸನ್ನಿಿ ಪಡೆದು, ದೊಂಬಿಯಾಗಿ ಪ್ರಾಾಣಾಪಾಯ, ಸಾರ್ವಜನಿಕ ಆಸ್ತಿಿ-ಪಾಸ್ತಿಿ ನಷ್ಟವಾದ ಘಟನೆಗಳೂ ನಡೆದಿವೆ. ಭವಿಷ್ಯದ ದಿನಗಳಲ್ಲಿ ಇವುಗಳ ಸಂಖ್ಯೆೆ ಹೆಚ್ಚಾಾಗುವ ಸಾಧ್ಯತೆ ಇದೆ.

ಕಾಲೇಜು ಮೆಟ್ಟಿಿಲೇರಿದ ಬಹುತೇಕ ಯುವ ಸಮುದಾಯವು ಯಾವಾಗಲೂ ಸ್ಮಾಾರ್ಟ್‌ಫೋನ್ ಗೀಳು ಹಚ್ಚಿಿಕೊಂಡಿದ್ದಾರೆ. ನಿರ್ಬಂಧಿತ ಪ್ರದೇಶದಲ್ಲೂ ಸಿಕ್ಕ ಸಿಕ್ಕವರ ಫೋಟೊ ವಿಡಿಯೋ ಕ್ಲಿಿಕ್ಕಿಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿಿದ್ದಾರೆ. ತಮ್ಮ ಜವಾಬ್ದಾಾರಿ ಮರೆತು ಕಾನೂನು ಮೀರಿ ವರ್ತಿಸುತ್ತಿಿದ್ದಾರೆ. ಅಶ್ಲೀಲ ಜೋಕ್, ವಿಡಂಬನೆ, ಉದ್ರೇಕಕಾರಿ ಅಂಶ, ಮಾನಹಾನಿ ಮಾಡುವುದು ಫ್ಯಾಾಶನ್ ಆಗಿ ಮಾಡಿಕೊಂಡಿದ್ದಾರೆ.

ನಾನಾ ಜಾಲತಾಣಗಳಲ್ಲಿ ಸುಲಭವಾಗಿ ಸಿಗುವ ನಗ್ನದೃಶ್ಯಗಳು, ನೀಲಿಚಿತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು, ರಿಮೇಕ್, ಎಡಿಟ್ ಮಾಡುವುದು ಹಾಗೆಯೇ ತಮಗೆ ದ್ವೇಷ, ಅಸೂಯೆ ಇರುವವರ ವಿರುದ್ಧ ಸೇಡು ತೀರಿಸಿಕೊಳ್ಳಲು ಇಂಥವುಗಳನ್ನು ಬಳಸಿಕೊಳ್ಳಲಾಗುತ್ತಿಿದೆ.

ಇಂಥ ಇಂಟರ್‌ನೆಟ್ ಮತ್ತು ಸಾಮಾಜಿಕ ಜಾಲತಾಣಗಳ ದುರ್ಬಳಕೆಗೆ ಕಡಿವಾಣ ಹಾಕುವ ಬಗ್ಗೆೆ ಈಗ ಇರುವ ಸೈಬರ್ ಕಾನೂನು ಇನ್ನಷ್ಟು ಕಠಿಣ ಗೊಳಿಸಬೇಕಾದ ಅನಿವಾರ್ಯತೆ ಇದೆ.

ಸಾಮಾಜಿಕ ಜಾಲತಾಣಗಳ ಬಳಕೆಗೆ ಕಟ್ಟುನಿಟ್ಟಿಿನ ಕ್ರಮ ರೂಪಿಸಿ, ಆಧಾರ್, ದೂರವಾಣಿ ಸಂಖ್ಯೆೆ ಜೋಡಣೆ, ಓಟಿಪಿ ಕೋಡ್ ನೀಡುವ ಮೂಲಕ ನಿರ್ಬಂಧಿಸಬೇಕಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ದುರ್ಬಳಕೆಯಾಗದಂತೆ ದೇಶದ ಸುಭದ್ರತೆಗಾಗಿ, ಸಮಾಜದ ಸ್ವಾಾಸ್ಥ್ಯ ಕಾಪಾಡುವಲ್ಲಿ ಕಟ್ಟುನಿಟ್ಟಿನ ಕಡಿವಾಣ ಹಾಕಬೇಕಿದೆ.