ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
ಈಸಿನಿಮಾ ರಂಗ ಅಂದ್ರೆ ಹಿಂಗೆ ಕೆಲವರು ಸಂತೆ ಹೊತ್ತಿಗೆ ಮೂರು ಮೊಳ ಎಂಬಂತೆ ವರ್ಷಕ್ಕೆ ೪ ಸಿನಿಮಾ ಮಾಡ್ತಾ ಇದ್ರೆ ಇನ್ನು ಕೆಲವರು ಪಂಚವಾರ್ಷಿಕ
ಯೋಜನೆ ಥರ ಸಿನಿಮಾ ಮಾಡ್ತಾರೆ.
ಹಾಗಂತ ಬೇಗ ಬೇಗ ಮಾಡೋ ಸಿನಿಮಾಗಳು ಕೆಟ್ಟ ಸಿನಿಮಾಗಳಲ್ಲ. ವರ್ಷಗಟ್ಟಲೆ ತೆಗೆದುಕೊಂಡು ಮಾಡೋ ಎಲ್ಲ ಸಿನಿಮಾಗಳೂ ಬಾಹುಬಲಿ, ಕೆಜಿಎಫ್ ಆಗಲ್ಲ. ಯಾಕಂದ್ರೆ, ಮಠ ಗುರುಪ್ರಸಾದ್ ಮಾಮೂಲಿ ಬಜೆಟ್ ಸಿನಿಮಾಗಳಿಗೂ ವರ್ಷಗಟ್ಟಲೇ ಸಮಯ ತಗೋತಾರೆ. ಈಗ ವರ್ಷಗಟ್ಟಲೆ ಆದ್ರೂ ಸಿನಿಮಾ
ಇನ್ನೂ ಶೂಟಿಂಗೇ ಮುಗಿದಿಲ್ಲ ಅನ್ನೋ ಹಂತದಲ್ಲಿ ಇರೋದು ಆರ್. ಚಂದ್ರು ನಿರ್ದೇಶನದ ‘ಕಬ್ಜ’ ಚಿತ್ರ. ಸಿನಿಮಾ ಆಗ್ಲೇ ಬಿಡುಗಡೆ ಆಗಿ ಹೋಯ್ತಾ ಅನ್ನೋ
ಅನುಮಾನ ಬರುವ ಮಟ್ಟಕ್ಕೆ ಈ ಸಿನಿಮಾ ತಡ ಆಗ್ತಿದೆ. ಅಂದಹಾಗೆ ಈ ಸಿನಿಮಾ ನಿರ್ಮಾಪಕರು ಎಂಟಿಬಿ ನಾಗರಾಜ.
ಈ ಕಡೆ ನಮ್ಮ ಹಂಬಲ್ ಪೊಲಿಟಿಷಿಯನ್ ನಾಗರಾಜ್ ಡ್ಯಾನಿಷ್ ಸೇಠ್, ಒಂದರ ಹಿಂದೊಂದು ಸಿನಿಮಾ ಮಾಡ್ತಾ ಇದ್ರೆ, ಅತ್ತ ಅಷ್ಟೇನೂ ಹಂಬಲ್ ಅಲ್ಲದ ಪೊಲಿಟಿಷಿಯನ್ ಎಂಟಿಬಿ ನಾಗರಾಜ್ ಮಾತ್ರ ಕಬ್ಜ ಸಿನಿಮಾ ಸುತ್ತ ಸುತ್ತುತ್ತಲೇ ಇದ್ದಾರೆ. ಅದಕ್ಕೆ ಕಾರಣ ಆರ್. ಚಂದ್ರು ಇನ್ನೂ ಸಿನಿಮಾನ ಸುತ್ತುತ್ತ ಇರೋದು. ಹಾಲು ಕೋಡೋ ಆಕಳು ಸಿಕ್ಕಾಗ ಸಿಕ್ಕಷ್ಟು ಕರ್ಕೊಂಡ್ ಬಿಡಬೇಕು ಅನ್ನೋ ಯೋಜನೆಯಲ್ಲಿ ಚಂದ್ರು ಇನ್ನೂ ಸಿನಿಮಾ ಮಾಡ್ತಾನೆ ಇದ್ದಾರೆ.
ಈ ಸಿನಿಮಾ ಹೆಂಗೇ ಇರಲಿ, ಚಂದ್ರು ಅವರಿಗೆ ಮಾರ್ಕೆಟಿಂಗ್ ಮಾಡೋದು ಚೆನ್ನಾಗಿ ಗೊತ್ತು. ಅದಕ್ಕೇ ಅವರು ಈಗಾಗಲೇ ಚಿತ್ರದ ನಾಯಕ ಉಪೇಂದ್ರ ಅವರ ಜತೆಗೆ ಕಿಚ್ಚ ಸುದೀಪ್ ಅವರ ಹೆಸರನ್ನೂ ಭರ್ಜರಿಯಾಗೇ ಬಳಸಿಕೊಳ್ಳುತ್ತಿದ್ದಾರೆ. ಪಾಪ, ಕಿಚ್ಚ ಸುದೀಪ್ ಯಾವುದೋ ಮುಲಾಜಿಗೆ ಕಟ್ಟು ಬಿದ್ದು ಗೆಸ್ಟ್ ರೋಲ್ ಮಾಡಲು ಒಪ್ಪಿಕೊಂಡರೆ, ನಮ್ಮ ಚಂದ್ರು ಪೋಸ್ಟರ್‌ಗಳಲ್ಲಿ ಸುದೀಪ್ ಕಟೌಟ್ ಹಾಕಿಸಿಕೊಂಡು ಕಿಚ್ಚ ಹೆಸರನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಅವಕಾಶ ಸಿಕ್ಕಾಗ ಅದನ್ನು ಹೇಗೆ ಯೂಸ್ ಮಾಡಿಕೊಳ್ಳೋದು ಅಂತ ಅವರಿಗೆ ಚೆನ್ನಾಗಿ ಗೊತ್ತು. ಬೇರೆಯವರು ಅದನ್ನು ಮಿಸ್ ಯೂಸ್ ಅಂತ ತಿಳ್ಕೊಂಡರೂ ಚಂದ್ರು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಲ್ಲ. ಒಟ್ಟಿನಲ್ಲಿ ಒಟಿಟಿಯಲ್ಲಿ ಉಪೇಂದ್ರ ಹೆಸರಿನ ಜತೆಗೆ ಕಿಚ್ಚ ಸುದೀಪ್ ಹೆಸರು ಪ್ಲೇ ಮಾಡಿದ್ರೆ ಪ್ರಾಫಿಟ್ ಗ್ಯಾರಂಟಿ ಅನ್ನೋ ಲೆಕ್ಕಾ ಚಾರ ಅವರದ್ದು.
ಲೂಸ್ ಟಾಕ್
ಹಿಜಾಬ್ ವರ್ಸಸ್ ಶಾಲು (ಕಾಲ್ಪನಿಕ ಸಂದರ್ಶನ)
? ಹಿಜಾಬ್ – ಏನಪ್ಪಾ, ಕಪ್ಪು, ಕೇಸರಿ, ಕೆಂಪು, ನೀಲಿ, ಹಿಂಗೆ ಎಲ್ಲ ಬಣ್ಣ ಮುಗಿದೋಗ್ತಾ ಇದ್ದಾವೆ, ಕಿರಿಕ್ ಮಾಡೋಕೆ ಹೊಸ ಕಲರ್‌ಗಳನ್ನ ಎಲ್ಲಿಂದ ತರ್ತೀರಾ?
ಶಾಲು- ನಾವೇನ್ ಕಿರಿಕ್ ಮಾಡ್ತಿಲ್ಲ, ಮಕ್ಕಳಿಸ್ಕೂಲ್ ಮನೇಲಲ್ವೇ ಅಂತ ದೊಡ್ಡೋರ್ ಹೇಳಿzರೆ. ನಿಮಗೆ ಯೂನಿ-ರ್ಮ್ ಹಾಕೋದ್ ಇಷ್ಟ ಇಲ್ಲ ಅಂದ್ರೆ ಮನೇಲೆ ಓದ್ಕೊಳ್ಳಿ ಅಷ್ಟೇ..
? ಹಿಜಾಬ- ಓಹೋ ಶಾಲು ಸುತ್ಕೊಂಡ್ ಹೊಡೆದಂಗೆ ಮಾತಾಡ್ತಾ ಇದ್ದೀಯಾ..
ಅದ್ಸರಿ, ನಿಮ್ದೇನ್ ಸಮಸ್ಯೆ, ಹೆಣ್ಮಕ್ಕಳು ಮೈ ತುಂಬಾ ಬಟ್ಟೆ ಹಾಕ್ಕೊಳ್ಳದಿದ್ರೂ ಕಿರಿಕ್, ಹಾಕ್ಕೊಂಡ್ರೂ ಕಿರಿಕ್. ಶಾಲು- ಅವೆಲ್ಲ ನಮಗ್ ಗೊತ್ತಿಲ್ಲ, ಒಟ್ನಲ್ಲಿ ಮೈ ತುಂಬಾ ಹಾಸಿ ಹೊದ್ಕೊಳ್ಳುವಷ್ಟು ಸಮಸ್ಯೆಗಳಿದ್ರೆ ಮಾತ್ರ ನಮಗೆ ಸಮಾಧಾನ.
? ಹಿಜಾಬ- ದೊಡ್ಡ ದೊಡ್ಡ ಕಾಲೇಜುಗಳಲ್ಲಿ ಹುಡುಗೀರು ಚಡ್ಡಿ ಹಾಕ್ಕೊಂಡ್ ಬರ್ತಾರೆ. ಅವರನ್ನೇನು ಕೇಳಲ್ವಾ ನೀನು?
ಶಾಲು- ಚಡ್ಡಿ ವಿಷ್ಯಕ್ಕೆ ಬರಂಗಿಲ್ಲ ನೀನು, ಅದು ನಮ್ ಟ್ರೇಡ್ ಮಾರ್ಕು. ? ಹಿಜಾಬ- ಸರಿ, ಅದ್ಯಾಕೆ ನಿಂಗೆ ಹಸಿರು ಬಣ್ಣ ಕಂಡ್ರೆ ಅಷ್ಟು ಕಷ್ಟ ಆಗುತ್ತೆ?
ಶಾಲು- ಹಂಗೆ ಏನಿಲ್ಲ, ಮರಗಳ ಬಣ್ಣನೂ ಹಸಿರೇ ಅಲ್ವಾ. ಸ್ಕೂಲ್ ಪುಸ್ತಕದಲ್ಲಿ ‘ಅಶೋಕನು ರಸ್ತೆಯ ಎರಡೂ ಬದಿಗಳಲ್ಲಿ ಶಾಲು ಮರಗಳನ್ನು ನೆಡಿಸಿದನು’ ಅಂತ ನಾವೂ ಓದಿದ್ದೀವಲ್ಲ?
? ಹಿಜಾಬ- ಹಲೋ, ಅದು ಶಾಲು ಮರ ಅಲ್ಲ, ಸಾಲು ಮರ. ಸರಿ, ಆದ್ರೂ ಹಿಂಗೆಲ್ಲ ಸಣ್ಣಬುದ್ಧಿ ಮಾಡಬಾರದು ಅಲ್ವಾ, ನಾವೆಲ್ಲ ಒಂದೇ ಅನ್ನೋ ಥರ ಇರಬೇಕು ತಾನೇ ಶಾಲು- ನಮ್ಗೂ ಅದೇ ಆಸೆ ಇದೆ.. ನಮ್ಮ ಮಧ್ಯೆ ಮತೀಯ, ಸಾರಿ, ಆತ್ಮೀಯ ಸಂಬಂಧ ಇರಬೇಕು ಅಂತ. ನಾವು ಕೂಡ ವಿ‘ಶಾಲು’ ಹೃದಯದವರು.
ನೆಟ್ ಪಿಕ್ಸ್
ಖೇಮುಗೆ ಜಂಗಲ್ ಸಫಾರಿ ಮಾಡೋ ಆಸಕ್ತಿ ಜಾಸ್ತಿ. ಹಂಗಾಗಿ ಗೆಳೆಯರ ಜತೆ ಆಗಾಗ ಸಫಾರಿ ಹೋಗ್ತಾ ಇದ್ದ. ಅವನ ಈ ಜಂಗಲ್ ಸ-ರಿಯಲ್ಲಿ ಸಾಕಷ್ಟು ಬಾರಿ ಅಪಾಯಕಾರಿ ಎನಿಸುವಂಥ ಘಟನೆಗಳು ನಡೆದಿದ್ದವು. ಆದರೆ ಈ ಬಾರಿ ಅವನು ಸೋಮು ಜತೆಗೆ ಮೊದಲ ಬಾರಿ ಜಂಗಲ್ ಸಫಾರಿ ಹೊರಟಿದ್ದ. ಸೋಮು ಸ್ವಲ್ಪ ದಡ್ಡ. ಜತೆಗೆ, ಸ್ಲೋ ಕೂಡ ಆಗಿದ್ರಿಂದ, ಖೇಮು ಹೆಚ್ಚು ಹುಷಾರಾಗಿದ್ದು, ಕಾಡಿನಲ್ಲಿ ಸಿಗೋ ಪ್ರಾಣಿಗಳಿಂದ ಹೇಗೆ ತಪ್ಪಿಸಿಕೊಳ್ಳಬೇಕು ಅಂತ ಯೋಜನೆ ಹಾಕ್ಕೊಂಡು ಸೋಮುವನ್ನು ಕರ್ಕೊಂಡು ಹೊರಟ. ಇಬ್ಬರೂ ಜಂಗಲ್ ಸಫಾರಿ ಹೊರಟ್ರು.
ಹೋಗುವಾಗ, ಖೇಮು, ನಾನು ಮುಂದೆ ಹೋಗ್ತೀನಿ, ನಂಗೆ ಯಾವುದಾದ್ರೂ ಪ್ರಾಣಿ ಕಾಣಿಸಿದ್ರೆ ಎಚ್ಚರಿಕೆ ಕೊಡ್ತೀನಿ ಅಂತ ಹೇಳಿದ. ಸರಿ ಅಂತ ಇಬ್ಬರೂ
ಹೊರಟರು. ಈ ಬಾರಿ ಯಾಕೋ ಯಾವ ಕಾಡುಪ್ರಾಣಿಗಳೂ ಕಾಣಿಸಲಿಲ್ಲ. ಕಾಡಿನ ಒಳಗೆ ಸ್ವಲ್ಪ ದೂರ ಹೋದ ಮೇಲೆ, ಖೇಮುಗೆ ಇದ್ದಕ್ಕಿದ್ದಂತೆ ಸೈಡಿನ ಪೊದೆಯಿಂದ ಒಂದು ಚಿರತೆ ನುಗ್ಗಿ ಬರ್ತಾ ಇದ್ದಿದ್ದು ಕಾಣಿಸಿತು. ಕೂಡಲೇ, ‘ಚಿರತೆ, ಓಡು’ ಅಂತ ಕೂಗಿ ಓಡಿ ತಪ್ಪಿಸಿಕೊಂಡ ಖೇಮು. ಆದರೆ ಸೋಮು ಮಾತ್ರ ಅ ನಿಂತಿದ್ದ. ಚಿರತೆ ಅವನ ಮೇಲೆ ಅಟ್ಯಾಕ್ ಮಾಡಿತು. ಅಷ್ಟರಲ್ಲಿ ಖೇಮು ವಾಪಸ್ ಬಂದು ತನ್ನ ಬಳಿ ಇದ್ದ ದೊಡ್ಡ ಕುಡುಗೋಲು ತೋರಿಸಿ ಚಿರತೆಯನ್ನು ಹೇಗೋ ಹೆದರಿಸಿ ಓಡಿಸಿದ.
ಆಮೇಲೆ ಸೋಮು ಕಡೆ ನೋಡಿ, ‘ನಿಂಗೇನ್ ಬುದ್ಧಿ ಇದ್ಯಾ? ಚಿರತೆ, ಓಡು ಅಂತ ನಾನು ಎಚ್ಚರಿಕೆ ಕೊಟ್ರೂ ನೀನ್ಯಾಕೆ ಇ ನಿಂತಿz, ಚಿರತೆ ಬಂದಿದ್ದು ಕಾಣಿಸಲಿಲ್ವಾ
ನಿಂಗೆ?’ ಅಂತ ಕೇಳಿದ ಖೇಮು. ಅದಕ್ಕೆ ಸೋಮು ಹೇಳಿದ ‘ಚಿರತೆ ಏನೋ ಕಾಣಿಸ್ತು. ಆದ್ರೆ, ನೀನು ಚಿರತೆ, ಓಡು ಅಂತ ಎಚ್ಚರಿಕೆ ಕೊಟ್ಟಿದ್ದು ಚಿರತೆಗೆ
ಅಂದ್ಕೊಂಡು ಸುಮ್ನೆ ಇದ್ದೆ’.
ಲೈನ್ ಮ್ಯಾನ್
? ‘ಹಾಲಕೋಡಾ’ ಗ್ರಾಮದಲ್ಲಿ ಅಕ್ರಮ ಮರಳು ಸಾಗಣೆ -ಊರ ಹೆಸರು ಯಾಕೋ ಸರಿ ಇಲ್ಲ, ಅದು ‘ಹಾಕೋ ಲೋಡಾ’ ಆಗಬೇಕಿತ್ತುಲ್ವಾ?
? ಲೆಜೆಂಡರೀ ಡೆಂಟಿಸ್ಟ್ ಜೀವನ ಚರಿತ್ರೆ
-‘ದಂತ’ಕಥೆ
? ಜೇಮ್ಸ ಚಿತ್ರದ ಟೀಸರ್ ನೋಡಿದ ಮೇಲೆ ಜನ ಏನಂತಿದ್ದಾರೆ?
-ಟೀಸರ್ ನೋಡಿದ್ಮೇಲೆ ಇದು ಚೇತನ್ ಸಿನಿಮಾ ಅನ್ನಿಸ್ತಿಲ್ಲ. ಯಾಕಂದ್ರೆ ಚೆನ್ನಾಗಿದೆ.
? ಫಿಲಾಸಫಿ
-ನಾನೇನೂ ಅವನಷ್ಟು ದೊಡ್ಡ ತಪ್ಪು ಮಾಡಿಲ್ಲ ಅಂತ ನಮ್ಮನ್ನ ನಾವು ಸಮರ್ಥನೆ
ಮಾಡಿಕೊಳ್ಳೋದು ತಪ್ಪು. ಯಾಕಂದ್ರೆ ದುಡ್ ಕದ್ರೂ ಕಳ್ಳಾನೇ, ಬ್ರೆಡ್ ಕದ್ರೂ
ಕಳ್ಳಾನೇ.
? ಜೋಕ್ ಹೇಳುವುದಕ್ಕಿಂತ ದೊಡ್ಡ ಕಷ್ಟ ಯಾವುದು?
-ಅದನ್ನ ಎಕ್ಸ್‌ಪ್ಲೈನ್ ಮಾಡೋದು
? ಟೆರರಿಸ್ಟ್ ಅಂದ್ರೆ ಉಗ್ರ
-ಹಂಗಾದ್ರೆ ಉಗ್ರ ನರಸಿಂಹನೂ ಟೆರರಿಸ್ಟಾ?
? ಮೊಬೈಲ್‌ನಲ್ಲಿ ರಾತ್ರಿ ಹೊತ್ತು ರೊಮ್ಯಾಂಟಿಕ್ ಆಗಿ ಚಾಟ್ ಮಾಡೋದು
-ಚಾಟ್ ಮಸಾಲಾ
? ಗಾಂಜಾ ಸೇದಿದ್ರೆ ಬೇಲಿಲ್ಲದ ಕೇಸ್ ಆಗುತ್ತೆ
ಗಾಂಜಾ ಗಿರಾಕಿ- ನಾವ್ ಅದಕ್ಕೆಲ್ಲ ‘ಸೊಪ್ಪು’ ಹಾಕಲ್ಲ
? ಫ್ರೀ ಹಿಟ್‌ನಲ್ಲಿ ಸ್ಟೇಡಿಯಂ ಆಚೆ ಹೋಗುವಂಥ ಸಿಕ್ಸ್ ಹೊಡೆದ್ರೆ ಏನಾಗುತ್ತೆ ?
– ‘ನೋ’ ಬಾ