Saturday, 14th December 2024

ಶೌಚೋಪಚಾರದ ತಾಪತ್ರಯಗಳು

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್

journocate@gmail.com

ಟಾಯ್ಲೆಟ್ ಸೀಟಿನ ಮೇಲೆ ಕುಳಿತಾಗ ನಾನು ಮಸಾಲೆ ದೋಸೆ ತಿನ್ನಬ ಎಂದು ಒಮ್ಮೆ ಅರಣ್ಯ ಇಲಾಖೆಯ ಅಧಿಕಾರಿ ಯೊಬ್ಬರು ನನಗೆ ಹೇಳಿದ್ದರು. ಅಂದರೆ, ಅವರಿಗದು ಇಷ್ಟವೆಂತಲ್ಲ. ವಿಧಿಯೇ ಇಲ್ಲದಿದ್ದಾಗ, ಅದಕ್ಕೂ ಸೈ ಎಂಬುದು ಅವರ ಮಾತಿನ ಒಕ್ಕಣೆ.

ಸಿಯಾಚಿನ್‌ನಲ್ಲಿ ದೇಶದ ರಕ್ಷಣೆಗಾಗಿ ಅಹರ್ನಿಶಿ ಸೇವೆ ಸಲ್ಲಿಸುವ ಯೋಧರು ವೈರಿಯೊಡನೆ ಸೆಣಸಾಡಿ ಸಾಯುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೈಕಾಲುಗಳನ್ನು ಸೆಟೆಸುವಂಥ ಹಿಮ ಮಾರುತದಿಂದ, ಧಿಗ್ಗನೆ ಎರಗಿ ಕ್ಷಣದಲ್ಲಿ ಸಜೀವ ಸಮಾಧಿ ಕಟ್ಟಿ ಬಿಡುವ ಹಿಮಪಾತದಿಂದ, ಆಮ್ಲಜನಕ ದುರ್ಲಭವಾಗುವುದೇ ಮೊದಲಾದ ಕಾರಣಗಳಿಂದ ಸರಿ. ಆದರೆ, ಹಿಂದಿನಿಂದಲೂ, ಯಾವುದೇ ಸಮರದಲ್ಲಿ, ಯೋಧರನ್ನು ಬಲಿ ತೆಗೆದುಕೊಳ್ಳುತ್ತಿರುವುದು ಭೀಕರ ಸಾಂಕ್ರಾ ಮಿಕ ರೋಗಗಳು.

ಧೃಢಕಾಯದ ಬೃಹತ್ ಸಮೂಹಗಳನ್ನೇ ಕಾಡಿ ಕೆಡವುದರಲ್ಲಿ ಮಾನವ ನಿರ್ಮಿತ ಮಾರಕಾಸ್ತ್ರಗಳು ಒಂದೆಡೆಯಾದರೆ, ನಿಸರ್ಗ ಸೃಷ್ಟಿಯಾದ ಅಗೋಚರ ಕ್ಷುಲ್ಲಕ ರೋಗಾಣುಗಳು ಮತ್ತೊಂದೆಡೆ. ಅಲೆಗ್ಸಾಂಡರ್ ದೊರೆ ಸತ್ತದ್ದಕ್ಕೆ ಕೊಡಲಾಗಿರುವ ಹಲವಾರು ಕಾರಣಗಳಲ್ಲಿ ಮಲೇರಿಯಾ, ವೆಸ್ಟ್ ನೈಲ್ – ಕೂಡ ಇವೆ. ನಾನು ಈ ಲೇಖನ ವನ್ನು ಎಂದಿಗಿಂತ ಮೊದಲೇ ಬರೆಯ ತೊಡಗಿದ್ದೇನೆ – ಮಾರ್ಚ್ 13. ಇದೇ ದಿನ, 107 ವರ್ಷಗಳ ಹಿಂದೆ, ಮೊದಲನೇ ಮಹಾ ಸಮರದಲ್ಲಿ ಮರಣ ಹೊಂದಿದ ಬ್ರಿಟಿಷ್ ಸೈನಿಕ ನೊಬ್ಬನ ಹೆಸರು ಅರ್ನೆಸ್ಟ್ ಕೇಬಲ್.

ಈಸ್ಟ್ ಸರ್ರ‍ೆ ರೆಜಿಮೆಂಟಿನ ಎರಡನೇ ಬೆಟಾಲಿಯನ್ನಿಗೆ ಸೇರಿದ ಆತ ಡೀಸಂಟ್ರಿಯಾಗಿ ಫ್ರಾನ್ಸ್ ದೇಶದ ಆಸ್ಪತ್ರೆಯೊಂದರಲ್ಲಿ ಸತ್ತ.
28 ವಯಸ್ಸಿನ ಕೇಬಲ್ನ ಆಮಶಂಕೆಗೆ ಕಾರಣವಾದ ಬ್ಯಾಕ್ಟೀರಿಯಾವನ್ನು ಶಿಗೆಲ್ಲಾ ಫ್ಲೆಕ್ಸ್ನೆರಿ (Shigella Flexneri) ಎಂದು ಗುರುತಿಸಲಾಯಿತು. ಅದರ ಸ್ಯಾಂಪಲ್ಲನ್ನು ಇಂಗ್ಲೆಂಡಿನ ನ್ಯಾಷನಲ್ ಕಲೆಕ್ಷನ್ ಆಫ್ ಟೈಪ್ ಕಲ್ಚರ್ಸ್‌ನಲ್ಲಿ ಸಂಗ್ರಹಿಸಿಡಲಾಗಿದೆ. ಶೌಚ ಸ್ವಚ್ಛತೆಯ ಅಭಾವದಿಂದ ಹರಡುವ ಅತಿಸಾರಕ್ಕೆ ಬಲಿಯಾದ ಯೋಧ ಕೇಬಲ್ ಒಬ್ಬನೇ ಅಲ್ಲ. ಮಹಾಯುದ್ಧದ ಅವಧಿ ಯಲ್ಲಿ, ಅತಿಸಾರದಿಂದ ಆಸ್ಪತ್ರೆಗೆ ದಾಖಲಾದ ಸೈನಿಕರ ಸಂಖ್ಯೆ ಜರ್ಮನಿ ಒಂದರ ಮಿತಿ ಅಂದಾಜಿನಂತೆ 155000. ಯುದ್ಧಕಾಲ ದಲ್ಲಿ ರಕ್ಷಣೆಗಾಗಿ ನಿರ್ಮಿಸಿದ ಟ್ರೆಂಚ್ನಲ್ಲಿ ನೀರಿನ ಸಂಚಾರಕ್ಕೆ ಅವಕಾಶವಿಲ್ಲದ ಕಾರಣಕ್ಕೂ, ಸ್ವಚ್ಛತೆಗೆ ಗಮನ ಕೊಡಲಾಗದ ಕಾರಣಕ್ಕೂ ಸಾಂಕ್ರಾಮಿಕ ರೋಗಗಳಿಗೆ ಅವು ಉಗಮ ಸ್ಥಾನವಾಗಿದ್ದವು.

ಈ ರೋಗಗಳಿಗೆ ಮದ್ದು ಕಂಡುಹಿಡಿಯುವ ಪ್ರಯತ್ನ ಆರಂಭವಾಗುವುದರ ಜೊತೆಗೆ ಅವುಗಳ ಇತಿಹಾಸದ ಅಧ್ಯಯನ ಆರಂಭ ವಾಯಿತು. ಅದಕ್ಕೆ ಅವಕಾಶ ಒದಗಿಸಿಕೊಟ್ಟದ್ದು ಮೊದಲನೆಯ ಮಹಾಯುದ್ಧ. ಟ್ರೆಂಚ್ ಫೀವರ್ ಎನ್ನುವ ಜ್ವರ ಜಗತ್ತಿನ ಎಲ್ಲ ಸೇನೆಗಳನ್ನೂ ವೈದ್ಯಕೀಯ ಸಮುದಾಯವನ್ನೂ ಬಿಡದೇ ಕಾಡಿದೆ. ವೈದ್ಯಕೀಯ ಸಂಶೋಧನೆಯ ಮಿಲಿಟರೀಕರಣ ವಾದದ್ದೇ ಆ ಕಾರಣಕ್ಕೆ. ಸರ್ ಆರ್ಥರ್‌ ಫ್ರೆಡ್ರಿಕ್ ಹರ್ಸ್ಟ್ ಅವರ ಅಧ್ಯಯನ Medical Diseases of the War ಎಂಬ ಮಹತ್ವದ ಪ್ರಕಟಣೆ (1917) ಇಲ್ಲಿ ಉಲ್ಲೇಖಾರ್ಹ.

ಅತಿಸಾರದಲ್ಲಿ ಎರಡು ವಿಧ: ಅಮೀಬಾದಿಂದ ತಗುಲಿದ್ದು, ಮತ್ತೊಂದು ಬ್ಯಾಕ್ಟೀರಿಯಾದ ಬಳುವಳಿ.  ಮರನಿರತರಾದ ಎರಡೂ ಕಡೆಯ ಸೈನ್ಯವನ್ನು ಅದು ಕಾಡಿತು. ಅಸಮರ್ಪಕ ಶುಚಿತ್ವದ ಕಾರಣಕ್ಕೆ ಇಂದಿಗೂ ಲಕ್ಷಾಂತರ ಮಕ್ಕಳು, ವಿಶೇಷವಾಗಿ ಅಭಿವೃದ್ಧಿ ಹೊಂದದ ದೇಶಗಳಲ್ಲಿ ಅತಿಸಾರಕ್ಕೆ ಬಲಿಯಾಗುತ್ತಲಿದ್ದಾರೆ.

ಮಹಾಯುದ್ಧದ ಕಾಲದಲ್ಲಿ ತಲೆದೋರಿದ ಬ್ಯಾಕ್ಟೀರಿಯಾಗೂ ಅದರ ಇಂದಿನ ರೂಪಾಂತರಿ ತಳಿಗೂ ವ್ಯತ್ಯಾಸ ಕೇವಲ ಎರಡು ಪರ್ಸೆಂಟ್. ಆದರೆ ಮುಂಚಿನದ್ದು ಯಾಂಟಿಬಯಾಟಿ ಕ್ಕಿಗೆ ಬಗ್ಗುತ್ತಿರಲಿಲ್ಲ. ಅಷ್ಟೇಕೆ, ಸುಮಾರು ನೂರಾ ಅರವತ್ತು ವರ್ಷಗಳ ಹಿಂದೆ ಸಂಭವಿಸಿದ ಅಮೆರಿಕದ ಅಂತ ರ್ಯುದ್ಧದಲ್ಲೂ ಸಾವಿಗೀಡಾದ ಆರೂವರೆ ಲಕ್ಷಕ್ಕೂ ಹೆಚ್ಚು ಮಂದಿಯ ಮೂರನೇ ಎರಡರಷ್ಟು ಹೋರಾಟಗಾರರು ಆಹುತಿಯಾಗಿದ್ದು ನಿಯಂತ್ರಣಕ್ಕೆ ಬಾರದ ಸಾಂಕ್ರಾಮಿಕಗಳಿಂದಲೇ. ಸಾಂಕ್ರಾಮಿಕ ರೋಗ ಮತ್ತದರ ಹರಡುವಿಕೆಯ ಬಗ್ಗೆ ತಲೆಬುಡ ತಿಳಿಯದಿದ್ದ ಸನ್ನಿವೇಶದಲ್ಲಿ ಘಟಿಸಿದ ಕೊನೆಯ ಯುದ್ಧ ಅಮೆರಿಕದ ಆಂತರಿಕ ಯುದ್ಧ.

ಊಟೋಪಚಾರದಲ್ಲಿ ನ್ಯೂನತೆ, ಶ್ವಪಚತೆ, ಗಾಯಾಳುಗಳಿಗೆ ಅಲಭ್ಯವಾದ ಸಮರ್ಪಕ ಶುಶ್ರೂಷೆಗಳಿಂದ ರೋಗಗಳು ತಹಬದಿಗೆ ಬರಲಿಲ್ಲ. ಸ್ವಚ್ಛತೆಯ ಅಭಾವದ ಕಾರಣಗಳಿಂದಾಗಿಯೇ ಬ್ರಿಟಿಷರ ರಾಯಲ್ ನೇವಿಯ ನೌಕೆಗಳಲ್ಲೂ, ಹದಿನಾರರಿಂದ ಹದಿ ನೆಂಟನೇ ಶತಮಾನದವರೆಗೂ ಮಹಾಯುದ್ಧದ ಅವಧಿಯಲ್ಲಿ, ಯಾವ ಬೆಟಾಲಿಯನ್ ತನ್ನ ಸೈನಿಕರಿಗೆ ಸ್ನಾನದ ಸೌಕರ್ಯ ವನ್ನು ಒದಗಿಸಿತ್ತೋ, ಅಲ್ಲಿ ಹೇನಿನ ಕಾಟವಿರದೆ, ಟ್ರೆಂಚ್ ಫೀವರ್ ಸಮಸ್ಯೆ ತಲೆದೋರಿರಲಿಲ್ಲ.

ರಣರಂಗದಲ್ಲೂ ಪಾಲಿಸಬೇಕಾದ ನೀತಿಗಳನ್ನು ಸಹಸ್ರಾರು ವರ್ಷಗಳ ಹಿಂದೆಯೇ ರೂಢಿಸಿದ್ದ ನಾಗರಿಕತೆ ನಮ್ಮದು. ನಮ್ಮ ರಾಜರುಗಳು ಮೆರೆಯುತ್ತಿದ್ದುದು ಶೌರ್ಯ. ಕಾಲಾಂತರದಲ್ಲಿ ಅವರು ಎದುರಿಸಬೇಕಾಗಿ ಬಂದದ್ದು ಮ್ಲೇಚ್ಛರ ಬರ್ಬರತೆಯನ್ನು. ತತಲವಾಗಿ ಭರತ ಖಂಡದಲ್ಲಿ ಸಂಭವಿಸಿದ್ದು ನಾಗರಿಕತೆ ಮತ್ತು ಅನಾಗರಿಕತೆಗಳ ನಡುವಿನ ಸಂಘರ್ಷ. ಬಂಧಿತರಾದ ವೈರಿ ಗಳನ್ನು ನಡೆಸಿಕೊಳ್ಳುವುದರಲ್ಲೂ ತೋರಬೇಕಾದ ಸಂಹಿತೆ ಇದೆ. ವಿಶ್ವದ ಎಡೆ ಆ ಸಂಹಿತೆಯನ್ನು ಗಾಳಿಗೆ ತೂರಿ ಯುದ್ಧಖೈದಿ ಗಳನ್ನು ಕ್ರೌರ್ಯಕ್ಕೊಳ ಪಡಿಸುವುದೇ ಪದ್ಧತಿಯಾಗಿ ಬಿಟ್ಟಿದೆ.

ಎಲ್ಲ ಸಂದರ್ಭಗಳಲ್ಲೂ ಸೈನಿಕರಿಗೆ ಟಾಯ್ಲೆಟ್ ಸೌಲಭ್ಯವಿರುವುದಿಲ್ಲ. ಗುಂಡಿನ ದಾಳಿ ನಡೆಯುವಾಗ ಅವಸರವಾದರೆ ಸೈನಿಕ ಏನು ಮಾಡಬೇಕು? ಇದನ್ನು ಯೋಧರ ಬಾಯ ಕೇಳುವುದು ಸಮಂಜಸ. ಅದೇನು, ಬಗೆಹರಿಸಲಾಗದ ಸಮಸ್ಯೆ ಏನಲ್ಲ. ಇದು ಒಬ್ಬ ಸೈನಿಕನ ಸಮಸ್ಯೆಯೂ ಅಲ್ಲ. ಭೇದಿ ಕಿತ್ತುಕೊಳ್ಳುವುದು ಸಾಮಾನ್ಯ. ನಾಚಿಕೆ ಸಂಕೋಚ ಪಡದೆ ಪಕ್ಕದ ಹೋಗಿ ಮುಗಿಸಿ ಕೊಂಡು ಬರೋದು ಉತ್ತಮ. ಹಾಗೆ ಮಾಡದೇ, ಪ್ಯಾಂಟೊಳಗೇ ಮಾಡಿಕೊಂಡರೆ ಅದರಿಂದಾಗುವ ಮುಜುಗರ ಇನ್ನೂ ಹೆಚ್ಚು ಎಂದು ಬಹಳ ಪ್ರಾಕ್ಟಿಕಲ್ ಆದ ಸಲಹೆ ನೀಡುತ್ತಾರೆ ಕೊಸೊ ವೋ ಮುಕ್ತಿ ಸೇನೆಯಲ್ಲಿ ಸೇವೆ ಸಲ್ಲಿಸಿ ಅನುಭವವಿರುವ ಜರ್ಮನ್ ಯೋಧ ರೋಲ್ಯಾಂಡ್ ಬಾರ್ಟಜ್ಕೊ.

ಏಳು ವರ್ಷದ ಹಿಂದೆ, ಸಿರಿಯಾದ ನಿರಾಶ್ರಿತರನ್ನು ತನ್ನ ದೇಶದ ಹೆಬ್ಬಾಗಿಲನ್ನು ತೆಗೆದು ಅವರನ್ನು ಬರಮಾಡಿಕೊಂಡ ಅಲ್ಲಿಯ ಅಂದಿನ ಮುಖ್ಯಸ್ಥೆ ಏಂಜೆಲಾ ಮರ್ಕೆಲ್ ಟೀಕೆಗೊಳಪಟ್ಟರು. ಬೀದಿಲಿ ಹೋಗೋ ಮಾರೀ ನ ಮನೆಗೆ ಕರ್ಕೊಂಡು ಬಂದ್ರು ಅನ್ನೋ ಮಾತನ್ನು ನಿರಾಶ್ರಿತರು ನಿಜ ಮಾಡುತ್ತಲೇ ಬಂದಿzರೆ. ಆತಿಥೇಯರಿಗೆ ಅವರು ಒಡ್ಡಿದ ತಲೆನೋವು ಇದೊಂದೇ ಅಲ್ಲ. ಜರ್ಮ ಬನಿಯಲ್ಲಿನ ಶೌಚಾಲಯದ ಮಾದರಿ ಅವರಿಗೆ ಹೊಸದು.

ನಿರ್ದಿಷ್ಟ ಜಾಗದಲ್ಲಿ ಕೂರದೆ ಟಾಯ್ಲೆಟಿನ ಹೊರಗೆ ಗಲೀಜು ಮಾಡುತ್ತಾ ಬಂದರು. ಆಧುನಿಕ ಟಾಯ್ಲಟಿನ ದರ್ಶನವೇ
ಮಾಡದಿದ್ದ ಅನೇ ಕರಿಗೆ ಟಾಯ್ಲೆಟ್ ಪೇಪರ್ ಕೂಡ ಹೊಸತು. ಬಳಕೆಯಿಲ್ಲದಿರುವುದು ಒಂದು, ಆದರೆ ಆತಿಥೇಯರನ್ನು ಕಂಡರೆ ಅಸಡ್ಡೆ, ದುರಹಂಕಾರ ಮತ್ತೊಂದೆಡೆ. ಆ ಕಾರಣಕ್ಕೂ, ಉದ್ದೇಶ ಪೂರ್ವಕವಾಗಿ ಗಲೀಜು ಮಾಡಿ ಹಾಗೇ ಹೊರಬಂದಿರುವ ತಿರುಕೆ ಜಂಭವನ್ನೂ ಅಲ್ಲಗಳೆಯಲಾ ಗುವುದಿಲ್ಲ.

ಒಮ್ಮೆ, ಸಿರಿಯನ್ ರೆಫ್ಯೂಜಿಗಳ ಮಾದರಿಯಲ್ಲಿ ಯಾರೋ ಏರೋಪ್ಲೇನಿನ ಜಲಮುಕ್ತ ಟಾಯ್ಲೆಟನ್ನು ಫ್ಲಷ್ ಮಾಡದೆ ಬಂದ ದ್ದನ್ನು ನೋಡಿ ಅನುಭವಿಸಿದ್ದೆ. ಯೂ-ಟ್ಯೂಬ್ ಆಗಿನ್ನೂ ಬಂದಿರಲಿಲ್ಲ. ಅಮೆರಿಕ ವಾಸಿಯಾದ ಒಬ್ಬ ಪೈಲಟ್ ಸ್ನೇಹಿತರನ್ನು ಬೇಡಿ ನಿರ್ವಾತದಿಂದ ಫ್ಲಶ್ ಆಗುವ ಅಂತಹ ಟಾಯ್ಲೆಟ್ ಅನ್ನು ಹೇಗೆ ಬಳಸಬೇಕೆಂಬುದರ ಸಣ್ಣ ವೀಡಿಯೊ ತರಿಸಿಕೊಂಡು ಅಗತ್ಯ ವಿರುವವರ (ಮತ್ತು ಉಳಿದ ಪ್ರಯಾಣಿಕರ) ಲಾಭಕ್ಕಾಗಿ ಅದನ್ನು ನನ್ನ ವೆಬ್‌ಸೈಟ್‌ನಲ್ಲಿ ಹಾಕಿದ್ದೆ. ಯುದ್ಧಸಂತ್ರಸ್ತ ಭಾರತೀಯ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಸುರಕ್ಷಿತವಾಗಿ ತರಲು ನಿಯೋಜಿಸಿದ್ದ ಆಪರೇಷನ್ ಗಂಗಾ ಪೂರ್ಣಗೊಂಡಿದೆ. ಯುಕ್ರೇನ್‌ನಿಂದ ಹೊರಡುವ ಮುನ್ನ ಅವರು ಬೀಡುಬಿಟ್ಟಿದ್ದ ಶಿಬಿರಗಳಲ್ಲಿಯ ಟಾಯ್ಲೆಟ್‌ಗಳನ್ನು ಬಳಸಬೇಕಾದ ರೀತಿಯಲ್ಲಿ ಬಳಸದಿದ್ದುದ ರಿಂದ ಅವುಗಳನ್ನು ಸ್ವಚ್ಛಗೊಳಿಸಲು ಅವರಿಗೆ ಹೇಳಲಾಯಿತು.

ಅಭ್ಯಾಸವಿಲ್ಲವೆಂಬ ಕಾರಣಕ್ಕೋ ಏನೋ ಅವರು ಒಪ್ಪದಿರಲು ಯಾರು ಕ್ಲೀನ್ ಮಾಡುತ್ತಾರೋ ಅವರಿಗೆ ಪ್ಲೇನ್ ಹತ್ತಲು ಮೊದಲ ಆದ್ಯತೆ ಎಂದು ಪುಸಲಾಯಿಸಿ ಕೆಲಸ ಮಾಡಿಸಲಾಯಿತಂತೆ. ಪೋಲೆಂಡ್‌ನಲ್ಲಿ ಉಕ್ರೇನ್ ಪಾಸ್ಪೋರ್ಟ್ ಇದ್ದವರಿಗೆ
ಮಾತ್ರ ಟಾಯ್ಲೆಟ್ ಬಳಸಲು ಅವಕಾಶ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ವರ್ಣೀಯ ನೀತಿಯಿಂದ ಹೊರಬರದ ಬಿಳೀ ತೊಗಲಿಗೆ ಅಂಟಿದ ಜಾಡ್ಯವದು. ಬಿಡಿ. ಟಾಯ್ಲೆಟ್ ಬಳಸಲು ಅವಕಾಶ ನೀಡದಿದ್ದರೆ ಬಯಲ ಕೆಲಸ ಪೂರೈಸಿಕೊಳ್ಳುತ್ತಾರೆಂಬ ಆತಂಕವಾದರೂ ಬೇಡವೇ? ಬಯಲು ಶೌಚಾಲಯದೊಳಗೋ, ಶೌಚಾಲಯವು ಬಯಲೊಳಗೋ ಎಂಬಂತಹ ದುಸ್ಥಿತಿಯಿದ್ದ ಭಾರತವೇ ಮುಕ್ತ ಬಹಿರ್ದೆಶೆಯ ನ್ನು ನಿವಾರಿಸಿ ಹಳ್ಳಿಯ ಜನಕ್ಕೂ ಘನತೆ ಒದಗಿಸಿರುವ ಕಾಲಘಟ್ಟದಲ್ಲಿ ಯೂರೋಪ್ ಖಂಡ ಅದನ್ನು ಉತ್ತೇಜಿಸುತ್ತಿರುವುದು ಸೋಜಿಗವೇ.

ಸಂತ್ರಸ್ತರನ್ನು ಬರಮಾಡಿಕೊಳ್ಳುತ್ತಿರುವ ದೇಶಗಳಾಗಲೀ, ವಿಶ್ವ ಆರೋಗ್ಯ ಸಂಸ್ಥೆಯಾಗಲೀ ಈ ಕುರಿತು ತಟಸ್ಥವಾಗಿದೆ ಅಂತಲ್ಲ. ಉದಾಹರಣೆಗೆ, ಸಿರಿಯನ್ ರೆಫ್ಯೂಜಿಗಳ ಹಿಂಡು ಬಂದಾಗ ನಿರಾಶ್ರಿತರ ಸೌಕರ್ಯಕ್ಕಾಗಿ ಜರ್ಮನಿಯ ಕಂಪನಿಯೊಂದು ಬಹು
ಸಾಂಸ್ಕೃತಿಕ ಟಾಯ್ಲೆಟ್‌ನ್ನು ರೂಪಿಸಿತು. ಉಕ್ರೇನ್ ಐರೋಪ್ಯ ಖಂಡದ ಎರಡನೇ ಅತಿ ಬಡವ ರಾಷ್ಟ್ರವಿರಬಹುದು ಆದರೆ ಸಿರಿಯನ್ ನಿರಾಶ್ರಿತರಂತೆ ಬೇರೊಂದು ಸಂಸ್ಕೃತಿ(?)ಗೆ ಸೇರಿದವರಲ್ಲ. ರಷ್ಯಾ ಯುದ್ಧವನ್ನು ಮುಂದುವರೆಸಿದರೆ, ಯುರೋಪ್‌ಗೆ ನುಗ್ಗುತ್ತಿರುವ ನಿರಾಶ್ರಿತರ ಒಳಹರಿವು ಈಗಿನ ಇಪ್ಪತ್ತು ಲಕ್ಷವನ್ನು ಮೀರಿ ಐವತ್ತು ಲಕ್ಷವನ್ನು ಮುಟ್ಟುವ ನಿರೀಕ್ಷೆಯಿದೆ.

ಔಷಧಿ, ಊಟೋಪಚಾರಕ್ಕಿಂತ ಹೆಚ್ಚು ಒತ್ತಡ ಆ ಖಂಡದ ಶೌಚಾಲಯಗಳ ಮೇಲೆ ಬೀಳುವುದು ಖಚಿತ. ಮೂರು ದಿನವಾದರೆ, ಬಂದ ಅತಿಥಿಗಳು, ತಂದ ಮೀನು ಎರಡೂ ನಾರುತ್ತವೆ ಎಂಬ ಮಾತಿದೆ. ನಿರಾಶ್ರಿತರಿಗೆ ಆತಿಥ್ಯ ನೀಡುತ್ತಿರುವ ದೇಶದ ಜನ ಈ ಮಾತಿಗೆ ವಿಶೇಷ ಅರ್ಥ ಕಲ್ಪಿಸುವ ದಿನಗಳು ಬಂದಾಗಿವೆ.

ಮೊನ್ನೆ ವಿಧಾನಸಭೆಯಲ್ಲಿ ಈಗಲ್ಟನ್ ರೆಸಾರ್ಟ್ ಕುರಿತ ಚರ್ಚೆಯ ಭಾಗವಹಿಸಿದ, ಸಚ್ಚಾರಿತ್ರಕ್ಕೆ ಹೆಸರಾದ ಮಾಜಿ ಸಭಾಪತಿ ಕೆ.ಆರ್. ರಮೇಶ್ ಕುಮಾರ್ ಒಂದು ವಿಷಯ ವನ್ನು ಬಹಿರಂಗಗೊಳಿಸಿದರು. ಶಾಸಕರನ್ನು, ಬಿಕರಿಯಾಗದಂತೆ ಸಾರಾಸಗಟಾಗಿ ಈಗಲ್ಟನ್ ರೆಸಾರ್ಟ್‌ನಲ್ಲಿ ಕೂಡಿ ಹಾಕಲಾಗಿತ್ತು. ನಾನೇನೋ ಅವರು ಬಹಿರಂಗಗೊಳಿಸಿದ ವಿಷಯವನ್ನು ಓದುವವರೆವಿಗೂ ಕೋಟ್ಯಂತರ ರು. ಡೀಲ್ ಆಗಿದೆ ಅಂತಲೇ ನಂಬಿದ್ದೆ.

ಕುಡಿಯುವ ನೀರಿನ ಬಾಟಲ್‌ನಲ್ಲೇ ನೀರು ತೆಗೆದುಕೊಂಡು ಹೋಗಿ ಬಯಲಿನ ಎಲ್ಲ ಮುಗಿಸಿಕೊಳ್ಳುತ್ತಿದ್ದೆ ಎಂದು ಅವರು ಹೇಳಿದ್ದನ್ನು ಓದಿದಾಗ ಅವರ ದೆಷ್ಟು ಪ್ರಾಮಾಣಿಕರು ಎಂದು ಗೌರವ ಭಾವನೆ ಒದ್ದುಕೊಂಡು ಬಂತು. ಅಂತಹ ದುಬಾರಿ ರೆಸಾರ್ಟ್ ನಲ್ಲಿದ್ದೂ ಬಹಿರ್ದೆಶೆಗೆ ಬಯಲನ್ನು ಹುಡುಕಿಕೊಂಡು ಹೊರಟ ಸರಳತೆಯ ಸಾಕಾರ ಮೂರ್ತಿ ರಮೇಶರನ್ನು ಅದೆಷ್ಟು ಹೊಗಳಿದರೂ ಸಾಲದು! ಅವರು ಎಲ್ಲಿಯವರೆವಿಗೂ ಅಂತಹ ಸರಳತೆಯನ್ನು ಉಳಿಸಿಕೊಳ್ಳುತ್ತಾರೆಯೋ ಅಲ್ಲಿಯ ವರೆವಿಗೂ ಭಾರತ ಬಯಲು ಶೌಚಾಯಲಯ ಮುಕ್ತವಾಯಿತೆಂದು ಘೋಷಿಸುವುದು ಸುಳ್ಳಾಗುತ್ತದೆ.