ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
ಗಜಕೇಸರಿ, ಹೆಬ್ಬುಲಿ, ಪೈಲ್ವಾನ್ ಚಿತ್ರಗಳ ನಿರ್ದೇಶಕ ಕೃಷ್ಣ ಈಗ ಪುನೀತ್ ರಾಜ್ ಕುಮಾರ್ ಅವರ ಜೊತೆ ಸಿನಿಮಾ ಮಾಡೋಕೆ ಹೊರಟಿರೋದು ಎಲ್ಲರಿಗೂ ಗೊತ್ತು. ಮುಂಗಾರು ಮಳೆ ಸುರಿದ ಮೇಲೆ ಕ್ಯಾಮೆರಾಮನ್ ಆಗಿ ಕರ್ನಾಟಕದ ಉದ್ದಕ್ಕೂ ಹೆಸರು ಮಾಡಿದ ಕೃಷ್ಣ ತಮ್ಮ ಕ್ಯಾಮೆರಾ ಕೆಲಸವನ್ನು ಬಿಟ್ಟಿಲ್ಲವಾದರೂ ಇತ್ತೀಚೆಗೆ ನಿರ್ದೇಶಕ ಮತ್ತು ನಿರ್ಮಾಪಕರಾಗಿಯೇ ಹೆಚ್ಚು ಸದ್ದು ಮಾಡುತ್ತಿದ್ದಾರೆ.
ಆ ನಿಟ್ಟಿನಲ್ಲಿ ಅವರ ಇನ್ನೊಂದು ಹೆಜ್ಜೆ ಅಪ್ಪು ಒಟ್ಟಿಗಿನ ಸಿನಿಮಾ. ತಮ್ಮ ಹಿಂದಿನ ಚಿತ್ರಗಳಿಗೆ ಮಾಸ್ ಹೆಸರುಗಳನ್ನೇ ಇಟ್ಟಿದ್ದ ಕೃಷ್ಣ, ಈಗ ಅಪ್ಪು ಸಿನಿಮಾಕ್ಕೂ ಅಂಥದ್ದೇ ಟೈಟಲ್‌ನ ಹುಡುಕಾಟದಲ್ಲಿದ್ದಾರೆ. ಆದರೆ ಅದು ಹೇಗೋ ಏನೋ ಅಪ್ಪು ಮತ್ತು ಕೃಷ್ಣ ಕಾಂಬಿನೇಶನ್‌ನ ಚಿತ್ರಕ್ಕೆ ಸಾಮ್ರಾಟ್ ಎಂದು ಹೆಸರಿಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಗಾಳಿ ಸುದ್ದಿ ಹಬ್ಬಿದೆ. ಆದರೆ ಇದರ ಬಗ್ಗೆ ಸ್ಪಷ್ಟನೆ ನೀಡಿರುವ ಕೃಷ್ಣ, ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ. ಅಪ್ಪು ಚಿತ್ರಕ್ಕೆ ಇನ್ನೂ ಯಾವ ಟೈಟಲ್ ಅನ್ನೂ ಫೈನಲೈಸ್ ಮಾಡಿಲ್ಲ ಎಂದು ಹೇಳಿದ್ದಾರೆ.
ಅಪ್ಪು ಚಿತ್ರಕ್ಕೆ ಯಾವುದಾದರೂ ಮಾಸ್ ಹೆಸರು ಕೃಷ್ಣ ಅವರಿಗೆ ಹೊಳೆಯಬಹುದು, ಅದು ಬೇರೆ ವಿಚಾರ. ಆದರೆ ಸಾಮ್ರಾಟ್ ಎಂಬ ಹಳೇ ಹೆಸರು ಅಷ್ಟೇನೂ ಚೆನ್ನಾಗಿಲ್ಲ ಅನ್ನೋದು ಈ ಟೈಟಲ್‌ನ ಹಿಸ್ಟರಿ ಬಲ್ಲವರ ಅನಿಸಿಕೆ. ಈಗಾಗಲೇ ಡಾ. ವಿಷ್ಣುವರ್ಧನ್ ಅವರು ಸಾಮ್ರಾಟ್ ಎಂಬ ಹೆಸರಲ್ಲಿ ಸಿನಿಮಾ ಮಾಡಿದ್ದರು. ಅದರಲ್ಲಿ ವಿಷ್ಣು ಮತ್ತು ವಿನಯ ಪ್ರಸಾದ್ ಅವರ ಅಭಿನಯದ ನಮ್ ಕಡೆ ಸಾಂಬಾರ್ ಅಂದ್ರೆ ಅನ್ನೋ ಒಂದು ಹಾಡನ್ನು ಬಿಟ್ಟು, ಆ ಚಿತ್ರ ಅಷ್ಟೇನೂ ಹೆಸರು ಮಾಡಲಿಲ್ಲ. ಗಪೆಟ್ಟಿಗೆಯಲ್ಲೂ ಅದು ಕಲೆಕ್ಷನ್ ಮಾಡಿದ್ದು ಅಷ್ಟಕ್ಕಷ್ಟೇ. ಹಾಗಾಗಿ ಅಂಥ ಹಳೆಯ ಮತ್ತು ಯಶಸ್ವಿಯಾಗದ ಟೈಟಲ್ ಅನ್ನು ಮತ್ತೆ ಅಪ್ಪು ಸಿನಿಮಾಗೆ ರಿಪೀಟ್ ಮಾಡುವ ಯಾವ ಅಗತ್ಯವೂ ಇರಲಿಕ್ಕಿಲ್ಲ.
ಆದರೆ ವಿಶೇಷ ಅಂದ್ರೆ ಈ ಸಿನಿಮಾಗೆ ಅದೇ ಟೈಟಲ್ -ನಲ್ ಆದ್ರೂ ಅಚ್ಚರಿ ಪಡಬೇಕಾಗಿಲ್ಲ. ಯಾಕಂದ್ರೆ ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಹಳೆಯ ಟೈಟಲ್‌ಗಳನ್ನು ಗೊತ್ತಿದ್ದೆ, ಗೊತ್ತಿಲ್ಲದೆಯೋ ರಿಪೀಟ್ ಮಾಡುತ್ತಿರುವ ಟ್ರೆಂಡ್‌ಗೆ ಬೇಕಾದಷ್ಟು ಉದಾಹರಣೆಗಳಿವೆ.
ನೆಟ್ ಪಿಕ್ಸ್
ಖೇಮು ಮತ್ತೆ ಖೇಮುಶ್ರೀ ಒಂದು ದಿನ ಅಮ್ಯೂಸ್ ಮೆಂಟ್ ಪಾರ್ಕ್‌ಗೆ ಹೋದ್ರು. ಅಲ್ಲಿ ಒಂದು ಜಯಂಟ್ ವ್ಹೀಲ್ ನೋಡಿ ಖೇಮುಗೆ ಅದರಲ್ಲಿ ಕೂರಬೇಕು ಅಂತ ಆಸೆ ಆಯ್ತು. ಹಾಗಂತ ಖೇಮುಶ್ರೀಗೆ ಹೇಳಿದ. ಅದಕ್ಕೆ ಖೇಮುಶ್ರೀ, ಅಲ್ಲಿ ಹಾಕಿರೋ ಬೋರ್ಡ್ ನೋಡಿ, ಒಂದ್ ರೈಡ್‌ಗೆ ೫೦೦ ರುಪಾಯಿ. ೫೦೦ ರುಪಾಯಿ ಏನು ಸುಮ್ನೆ ಬರುತ್ತಾ? ಅಂದ್ಳು. ಸರಿ ಅಂತ ಖೇಮು ಸುಮ್ಮನೆ ಆದ. ಮುಂದಿನ ವರ್ಷ ಅದೇ ಸಮಯಕ್ಕೆ ಅಲ್ಲಿಗೆ ಹೋದ್ರು. ಖೇಮುಗೆ ಮತ್ತೆ ಜಯಂಟ್ ವ್ಹೀಲ್‌ನಲ್ಲಿ ಕೂತ್ಕೊಳ್ಳೋ ಆಸೆ ಆಯ್ತು. ಹೆಂಡತಿಗೆ ಹೇಳಿದ.
ಖೇಮುಶ್ರೀಯಿಂದ ಅದೇ ಉತ್ತರ ಬಂತು, ೫೦೦ ರುಪಾಯಿ ಏನು ಸುಮ್ನೆ ಬರುತ್ತಾ ಅಂತ. ಸರಿ ಹೀಗೇ ವರುಷಗಳು ಕಳೆದು ಖೇಮು ಮುದುಕ ಆದ. ಮತ್ತೆ ಇಬ್ಬರೂ ಅಲ್ಲಿಗೆ ಹೋದ್ರು. ನಂಗೆ ವಯಸ್ಸು ೭೦ ಆಯ್ತು, ಈ ಸಲನಾದ್ರೂ ಅದರಲ್ಲಿ ಕೂತ್ಕೊತೀನಿ ಕಣೇ. ಇಂದ್ರೆ ನನ್ನ ಆಸೆ ಯಾವತ್ತೂ ಈಡೇರಲ್ಲ ಅಂದ ಖೇಮು. ಅದಕ್ಕೆ ಖೇಮುಶ್ರೀ ಮತ್ತೆ ಅದೇ ಮಾತು ಹೇಳಿದ್ಳು, ೫೦೦ ರುಪಾಯಿ ಏನು ಸುಮ್ನೆ ಬರುತ್ತಾ. ಆಗ ಇದನ್ನ ಆ ಜಯಂಟ್ ವ್ಹೀಲ್ ರೈಡರ್
ಕೇಳಿಸಿಕೊಂಡ. ನೋಡಿ, ನಾನು ನಿಮ್ಮನ್ನ ಫ್ರೀ ಆಗಿ ಜಯಂಟ್ ವ್ಹೀಲ್‌ನಲ್ಲಿ ಕರ್ಕೊಂಡ್ ಹೋಗ್ತೀನಿ. ಆದ್ರೆ, ಒಂದ್ ಕಂಡೀಷನ್. ನಾನು ರೈಡ್ ಮಾಡುವಾಗ, ನೀವು ಹೆದರಿಕೊಂಡು ಬಾಯಲ್ಲಿ ಒಂದ್ ಪದ ಉಚ್ಚರಿಸಿದರೂ ನಿಮ್ಗೆ ೫೦೦ ರುಪಾಯಿ ಫೋನ್ ಆಗುತ್ತೆ ಅಂತ ಖೇಮು ದಂಪತಿಗಳಿಗೆ ಹೇಳಿದ.
ಸರಿ ಅಂತ ಇಬ್ಬರೂ ಒಪ್ಪಿಕೊಂಡು ವ್ಹೀಲ್ ಹತ್ತಿದರು. ಆ ರೈಡರ್, ಇವರನ್ನು ಹೆದರಿಸೋಕೆ ಅಂತ ಏನೆ ಸರ್ಕಸ್, ಗಿಮಿಕ್ ಮಾಡಿದ, ಪಲ್ಟಿ ಹೊಡೆಸಿದ. ಆದರೆ ಇಬ್ಬರೂ ಕಮಕ್ ಕಿಮಕ್ ಅನ್ನಲಿಲ್ಲ. ಕೊನೆಗೆ, ಸಾಕಾಗಿ ಕೆಳಗೆ ಇಳಿಸುತ್ತಾ ರೈಡರ್ ಹೇಳಿದ, ಮೆಚ್ಚಬೇಕು ಕಣ್ರೀ, ನಾನು ಏನೇ ಸರ್ಕಸ್ ಮಾಡಿದ್ರೂ ನಿಮ್ಮನ್ನ
ಹೆದರಿಸೋಕೆ ಆಗ್ಲಿಲ್ಲ. ಗುಡ್ ಜಾಬ್. ಅದಕ್ಕೆ ಹಿಂದೆ ಕೂತಿದ್ದ ಖೇಮು ಮೆಲ್ಲಗೆ ಹೇಳಿದ ಹಂಗೇನಿಲ್ಲ ಸಾರ್, ನೀವು ಮೊದಲ ಸಲ ಪಲ್ಟಿ ಹೊಡೆಸಿದಾಗಲೇ, ನನ್ನ ಹೆಂಡ್ತಿ ಕೆಳಗೆ ಬಿದ್ದುಹೋದಳು. ಆದ್ರೂ ಸುಮ್ಮನೆ ಕೂತಿz, ಯಾಕಂದ್ರೆ ೫೦೦ ರುಪಾಯಿ ಏನು ಸುಮ್ನೆ ಬರುತ್ತಾ?
ಲೂಸ್ ಟಾಕ್
(ಕಾಲ್ಪನಿಕ ಸಂದರ್ಶನ) ಯಡಿಯೂರಪ್ಪ
ಏನ್ ಸಾರ್, ಪೆಟ್ರೋಲ, ಡೀಸೆಲ್, ಗ್ಯಾಸ್ ಆಯ್ತು, ಈಗ ಕರೆಂಟ್ ರೇಟೂ ಜಾಸ್ತಿ ಮಾಡಿಬಿಟ್ರಲ್ಲ?
ಹೌದಾ, ನಂಗೆ ಗೊತ್ತೇ ಆಗ್ಲಿಲ್ಲ ನೋಡಿ. ಈ ಕರೋನಾ ತಲೆನೋವಿನಿಂದಾಗಿ ಕರೆಂಟ್ ಅಫರ್ಸ್ ಬಗ್ಗೆ ಏನೂ ಗೊತ್ತೇ ಆಗ್ತಿಲ್ಲ.
ಸರಿ, ಈ ಕರೋನಾ ಕೇಸ್ ಕಮ್ಮಿ ಆಗಿಲ್ಲ, ಸರಕಾರ ಸುಮ್ನೆ ಕಮ್ಮಿ ನಂಬರ್ ತೋರಿಸ್ತಾ ಇದೆ ಅಂತ ಕೆಲವರಿಗೆ ಅನುಮಾನ ಅಂತೆ?
ನೋಡ್ರೀ, ಸೋಂಕಿತರನ್ನ ಹೆಂಗೋ ಕಂಟ್ರೋಲ್ ಮಾಡಬಹುದು, ಆದ್ರೆ ಈ ಶಂಕಿತರನ್ನ ಮಾಡೋಕಾಗಲ್ಲ.
ಅದ್ಸರಿ, ಹೋಗ್ಲಿ, ನಿಮ್ಮ ಪಕ್ಷದವರೇ ನಿಮ್ಮನ್ನ ಸಿಎಂ ಸೀಟಿಂದ ಇಳಿಸಬೇಕು ಅಂತಿದ್ದಾರಂತೆ, ಹೇಗಿದೆ ನಿಮ್ಮ ಅನುಭವ?
ಅಯ್ಯೋ, ಅದನ್ಯಾಕೆ ಕೇಳ್ತೀರಿ, ಬಲ್ಲವನೇ ಬಲ್ಲ, ಬೆಲ್ಲದ್ ರುಚಿಯ ಮತ್ತೆ, ಇಂಥ ಭಿನ್ನಮತೀಯರನ್ನ ಹೇಗೆ ಪಳಗಿಸ್ತೀರಿ?
ಅಯ್ಯೋ, ನಾನು ಶಿಕಾರಿಪುರದವನು. ಇಂಥವರನ್ನೆ ಬೇಟೆ ಆಡೋದು ನಂಗೊತ್ತಿಲ್ವಾ..
ಜೊತೆಗೆ ಸಿದ್ರಾಮಯ್ಯ ಬೇರೆ ನಾನೇ ಮುಂದಿನ ಸಿಎಂ ಅಂತಿದಾರೆ. ಏನಿದು ವಿಷ್ಯ?
ವಿಷ್ಯ ಏನೂ ಇಲ್ಲರೀ, ಸಿದ್ರಾಮಯ್ಯ ಸುಮ್ನೆ ಮನಸ್ಸ ಬಡವರ ಬಾದಾಮಿ ತಿಂತಾ ಇದ್ದಾರೆ ಅಷ್ಟೇ.
ಲೈನ್ ಮ್ಯಾನ್
ಬೇಸಿಗೆ ಮುಗಿದು ಮಳೆಗಾಲ ಶುರುವಾಗಿದೆ. ಇದರ ಎಫೆಕ್ಟ್ ಏನಾಗಬಹುದು?
-ತಮಿಳುನಾಡಿನವರು ನೀರು ಬಿಡಿ ಅಂತ ನಮ್ಮನ್ನ ಕೇಳಲ್ಲ.
-ಮರಗಳನ್ನು ಬೆಳೆಸೋ ಸಾಲು ಮರದ ತಿಮ್ಮಕ್ಕನನ್ನು ಜನ ಮರೆತೇ ಹೋಗ್ತಾರೆ.
– ಇನ್ಮೇಲೆ ಎಸಿ ಅಂದ್ರೆ ಏರ್ ಕಂಡೀಷನರ್ ಅಲ್ಲ, ಬರೀ ಅಸಿಸ್ಟೆಂಟ್ ಕಮಿಷನರ್
-ಹುಡುಗಿಯರು ಮನೆಯಿದ ಹೊರಗೆ ಬರೋದು ಜಾಸ್ತಿ ಆಗುತ್ತೆ. ಸೋ ಅವರನ್ನ ನೋಡುತ್ತಾ ರಸ್ತೆಯಲ್ಲಿ ಅಪಘಾತ ಮಾಡುವ ಹುಡುಗರ ಸಂಖ್ಯೆ ಜಾಸ್ತಿ ಆಗುತ್ತೆ.
– ತಪ್ಪು ಮಾಡಿದವರು ಮಾತ್ರ ಬೆವರುವುದರಿಂದ, ಪೊಲೀಸರಿಗೆ ಅಪರಾಽಗಳನ್ನು ಕಂಡು ಹಿಡಿಯೋದು ಸುಲಭ ಆಗುತ್ತೆ.
ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್ ಗೆದ್ದ ವಿಲಿಯಮ್ಸನ್ ಅನ್ನು ತಬ್ಬಿಕೊಂಡು ಕೊಹ್ಲಿ ಹೇಳಿದ್ದೇನು?
ಕಿವಿ ಮಾತು
ಟೆಸ್ಟ್‌ನಲ್ಲಿ ಗೆ ಅಥವಾ ಸೋಲೋ ಮ್ಯಾಚ್ ಡ್ರಾ ಆದ್ರೆ ಅದು
ಡ್ರಾ-ಮ್ಯಾಟಿಕ್ ರಿಸಲ್ಟ್
ಸ್ಮಶಾನದಲ್ಲಿ ಆಡೋ ಆಟ
ಲಗೋರಿ
ತಮಿಳು ನಾಡಿನಲ್ಲಿರುವ ಪರಿಸರ ಪ್ರೇಮಿ
ಸಸಿ ಕುಮಾರ
ಬೇಬಿ ಸಿಟ್ಟರ್‌ನ ಕನ್ನಡದಲ್ಲಿ ಏನಂತಾರೆ?
ಶಿಶು – ಪಾಲ
ಕುಡಿದು ಚಿತ್ತಾಗಿರೋ ಸೆಕ್ಯುರಿಟಿ ಗಾರ್ಡ್
ಟೈಟ್ ವಾಚ್ ಮನ್
ರಾಜಕೀಯ ಸಮಾವೇಶಗಳಲ್ಲಿ ಜೈಕಾರ ಹಾಕೋಕೆ ಬರೋ ಜನಗಳಿಗೆ ಏನು ಕೊಡ್ತಾರೆ?
ಜೈವಿಕ ಆಹಾರ