Saturday, 14th December 2024

ಮಾಡಲು ಕಸುಬಿಲ್ಲದ ಅಡ್ಡಕಸುಬಿಗಳು !

ದಾಸ್ ಕ್ಯಾಪಿಟಲ್

dascapital1205@gmail.com

ಮಜಾ ಏನೆಂದರೆ, ನಾಲ್ಕು ವರ್ಷ ನಿರಂತರ ತಪಸ್ಸಿನಂತೆ ಹಠ ಬಿಡದೆ, ಹಗಲು ರಾತ್ರಿಯೆನ್ನದೆ ಚಂದ್ರಯಾನ-೩ಕ್ಕೆ ದುಡಿದವರು ಇಸ್ರೋ ವಿಜ್ಞಾನಿಗಳು. ತಮ್ಮ ಶ್ರಮಕ್ಕೆ ಸತಲವನ್ನು ಬೇಡುತ್ತ, ದೇವರ ಕೃಪೆ ಮತ್ತು ಅನುಗ್ರಹವನ್ನು ಬಯಸಿ ಅವರು ತಿರುಪತಿ ತಿಮ್ಮಪ್ಪನ ಬಳಿ ‘ಉಡ್ಡಯನ ಯಶಸ್ವಿಯಾಗಿ ಅಂದುಕೊಂಡ ಗುರಿಯನ್ನು ತಲುಪಲಿ’ ಎಂದು ಪ್ರಾರ್ಥಿಸಿದರೆ, ಕೆಲವು ಅಡ್ಡಕಸುಬಿ
ಗಳು ಅದನ್ನು ಖಂಡಿಸುವ ಹೀನ ಮನಸ್ಥಿತಿ, ಧಾರ್ಷ್ಟ್ಯವನ್ನು ಅಭಿವ್ಯಕ್ತಿಸಿದ್ದಾರೆ.

ಇದೆಲ್ಲ ಮಾಡಲು ಬೇರೆ ಕಸುಬಿಲ್ಲದ ಅಡ್ಡಕಸುಬಲ್ಲವೆ? ವಿಜ್ಞಾನಿಗಳು ತಮ್ಮ ಕಾರ್ಯದ ಯಶಸ್ಸಿಗೆ ದೇವರಲ್ಲಿ ಪ್ರಾರ್ಥಿಸಬೇಕೋ ಬೇಡವೋ ಅಂತ ಹೇಳಲು ಇವರೆಲ್ಲ ಯಾವ ಮರದ ತೊಪ್ಪಲು? ಅಷ್ಟಕ್ಕೂ ಖಂಡಿಸೋಕೆ ಇವರೆಲ್ಲ ಅದ್ಯಾವ ಸೀಮೆ ಕೊತ್ವಾಲರೋ ದೇವರೇ ಬಲ್ಲ! ‘ಸಪ್ತಮಂ ದೈವ ಚಿಂತನಂ’ ಎಂಬ ಒಂದು ಮಾತಿದೆ. ಆರು ಮನುಷ್ಯ ಪ್ರಯತ್ನ, ಏಳನೆಯದು ದೈವ ಚಿಂತನೆಯಂತೆ. ಮನುಷ್ಯ ಜೀವನದಲ್ಲಿ ಏನೇ ಸಾಧಿಸುವು ದಕ್ಕೂ, ಸಾಹಸಗಳನ್ನು ಮಾಡುವುದಕ್ಕೂ ದೇವರ ಪ್ರೇರಣೆ ಮತ್ತು ಅನುಗ್ರಹ ಬೇಕೇ ಬೇಕು.

ಚಂದ್ರಯಾನ-೨ ನಿರೀಕ್ಷಿತ ಯಶಸ್ಸನ್ನು ಕಾಣಲಿಲ್ಲ. ‘ಮರಳಿ ಯತ್ನವ ಮಾಡು’ ಎಂಬ ಎಚ್ಚರದಲ್ಲಿ ೨೦೧೮ ರಿಂದಲೇ ಸತತವಾಗಿ ಇಸ್ರೋ ಪ್ರಯತ್ನ ಮಾಡಿತು. ಇದು ಕೂಡ ದೈವ ಪ್ರೇರಣೆಯೇ ಎಂಬುದು ಅಷ್ಟು ಸುಲಭಕ್ಕೆ ಈ ಅಡ್ಡಕಸುಬಿಗಳಿಗೆ ಅರ್ಥ ವಾಗೋದಿಲ್ಲ, ಅರಿವಂತೂ ಬಿಡಿ ಆಗೋದಿಲ್ಲ. ಎಲ್ಲವೂ ಸುಸೂತ್ರವಾಗಲಿ, ಸುಖಾಂತ್ಯವನ್ನು ಕಾಣಲಿ ಎಂಬ ಸತ್ ಚಿಂತನೆ ಇಸ್ರೋ ವಿಜ್ಞಾನಿಗಳದ್ದು. ಅದಕ್ಕಾಗಿ ತಿರುಪತಿ ತಿಮ್ಮಪ್ಪನಲ್ಲಿ ಪ್ರಾರ್ಥಿಸಿದರು. ಇದರಲ್ಲಿ ಖಂಡಿಸುವುದೇನು ಬಂತು ಪುಟಗೋಸಿ? ಕೆಲಸವಿಲ್ಲದವ ಅದೇನೋ ಕೆತ್ತಿದನಂತೆ!

ಹಾಗಂತ ದೇವರಲ್ಲಿ ಬೇಡಿಕೊಂಡ ಮಾತ್ರಕ್ಕೆ ಎಲ್ಲವೂ ಸುಸೂತ್ರವಾಗಿ ಸುಖಾಂತ್ಯವನ್ನು ಕಾಣುತ್ತದೆ ಎಂಬ ನಂಬಿಕೆಯೂ ಸರಿಯಿಲ್ಲ. ನಮ್ಮ ಪ್ರಯತ್ನ ಬಹುಮುಖ್ಯವಾದುದು. ಅದಕ್ಕೆ ದೇವರ ಅನುಗ್ರಹವೂ ಬೇಕು. ಈ ಎಚ್ಚರದಲ್ಲೇ ಮನುಷ್ಯಸಂಕುಲ ಜೀವಿಸುತ್ತಿರುವುದು. ಒಂದು ಸಾಮಾನ್ಯ ಕಾರ್ಯಕ್ರಮವನ್ನು ಆರಂಭಿಸುವಾಗ ದೀಪ ಬೆಳಗಿಸುತ್ತಾರೆ. ದೇವಸ್ತುತಿ ಮಾಡುತ್ತಾರೆ. ಇದೆಲ್ಲ ತಪ್ಪು ಎನ್ನಲಾದೀತೆ? ಅಥವಾ ಇದನ್ನೆಲ್ಲ ಖಂಡಿಸಲು ಸಾಧ್ಯವೆ? ಖಂಡಿಸುವುದಕ್ಕಾದರೂ ಒಂದು ನೆಲೆಯ ಪ್ರe ಬೇಡವೆ? ವಿಜ್ಞಾನಿಗಳು ದೇವರಲ್ಲಿ ಬೇಡಿಕೊಳ್ಳೋದು ತಪ್ಪಾಗಿ ಕಾಣುವುದಾದರೂ ಹೇಗೆ? ಪುಣ್ಯ ಹಾಗಾಗಲಿಲ್ಲ, ಯಾಕೆಂದರೆ ದೇವರ ಸನ್ನಿಧಿಯಲ್ಲಿ ಅವರೆಲ್ಲ ಹೋಗಿ ಬೇಡಿಕೊಂಡಿದ್ದರಿಂದ! ಒಂದು ವೇಳೆ, ಚಂದ್ರಯಾನ-೩ ನಿರೀಕ್ಷಿತ ಯಶಸ್ಸನ್ನು ಸಾಧಿಸದೇ ಹೋಗಿದ್ದರೆ, ಇದೇ ಅಡ್ಡಕಸುಬಿಗಳು ಏನೆನ್ನುತ್ತಿದ್ದರು ಬಲ್ಲಿರಾ? ‘ದೇವ ರಲ್ಲಿ ಬೇಡಿಕೊಂಡರೂ ಯಶಸ್ಸು ಕಾಣಲಿಲ್ಲ’ ಅಂತ ಆಡಿಕೊಳ್ಳುತ್ತಿದ್ದರು.

Read E-Paper click here

ಅಂದರೆ, ಇವರ ವೈಚಾರಿಕತೆಯ ಉದ್ದೇಶ ಏನೆಂಬುದು ಸ್ಪಷ್ಡ. ದೇವರಲ್ಲಿ ಬೇಡಿಕೊಂಡರೆ ಖಂಡಿಸೋದು. ಯಶಸ್ಸು ಸಿಗಲಿಲ್ಲ ಎಂದರೆ ದೇವರೇನು ಮಾಡ್ತಾನೆ ಅಂತ ಆಡಿಕೊಳ್ಳೋದು! ಮಾಡಿದರೂ ಕಷ್ಟ, ಮಾಡದೇ ಇದ್ದರೂ ಕಷ್ಟ. ಇಂಥ ಅಡ್ದಕಸುಬು ಗಳಿಗೆಲ್ಲ ಸೊಪ್ಪು ಹಾಕದೆ ಖಂಡಿಸಬೇಕು, ಅಷ್ಟೆ! ಮುಖ್ಯವಾಗಿ, ಇಸ್ರೋದ ವಿಜ್ಞಾನಿಗಳು ಈಗೇನು ಮಾಡಬೇಕು ಅಂದ್ರೆ ಮತ್ತೆ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಹೋಗಬೇಕು. ಯಶಸ್ಸಿನ ಅನುಗ್ರಹಕ್ಕಾಗಿ ಕೃತಜ್ಞತೆಯನ್ನು ಹೇಳಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಬೇಕು. ಈ ಅನುಗ್ರಹ ಮುಂದಿನ ಎಲ್ಲ ಯೋಜನೆಗಳಿಗೂ ಸಿಗಲಿ ಎಂದು ಪ್ರಾರ್ಥಿಸಬೇಕು.

ದೇವಾಲಯದ ಅವರಣದಲ್ಲೇ ಒಂದು ಪ್ರೆಸ್‌ಮೀಟ್ ಮಾಡಿ ಚಂದ್ರಯಾನ-೩ ಯಶಸ್ಸಿಗಾಗಿ ದೇವರಲ್ಲಿ ಬೇಡಿಕೊಂಡ ಎಲ್ಲ ದೇಶವಾಸಿಗಳಿಗೂ ಕೃತಜ್ಞತೆಯನ್ನು ಸಲ್ಲಿಸುವ ಉಪಕೃತ ಭಾವವನ್ನು ಅಭಿವ್ಯಕ್ತಿಸಬೇಕು. ಯಾಕೆಂದರೆ, ನನ್ನಂಥ ಕೋಟ್ಯಂತರ ಭಾರತೀಯರು ಚಂದ್ರಯಾನ-೩ರ ಯಶಸ್ಸಿಗೆ ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಇಂಥ ಅಡ್ಡಕಸುಬಷ್ಟೇ ಅಲ್ಲದೆ ಇನ್ನೂ ಒಂದಿಷ್ಟು ಅಡ್ಡ ಕಸುಬಿನ ಪ್ರಶ್ನೆಗಳಿವೆ: ೧. ಈ ಚಂದ್ರಯಾನದಿಂದ ಲಾಭ ವೇನು? ೨. ಇದರಿಂದ ಬಡವರಿಗೇನು ಪ್ರಯೋಜನ? ೩. ದೇಶಕ್ಕೇನು ಬಂತು ಕಿರೀಟ? ೪. ಇಷ್ಟೊಂದು ಹಣ ಖರ್ಚು ಮಾಡುವ ಬದಲು ಜನರಿಗೆ ಉಪಯೋಗವಾಗುವ ಬೇರೆ ಯಾವುದಾದರೂ ಯೋಜನೆ ಮಾಡಬಹುದಿತ್ತಲ್ಲ? ಹೀಗೆ ಅಡ್ಡಕಸುಬಿನ ಅಪಸವ್ಯಗಳು ಸಾಕಷ್ಟಿವೆ. ಇಂಥ ಅಡ್ಡಕಸುಬಿನ ಪ್ರಶ್ನೆಗಳಿಗೆ ಅಡ್ಡಕಸುಬಿನ ಉತ್ತರಗಳನ್ನೇ ಕೊಡಬೇಕು, ಇಲ್ಲವೇ ಅಡ್ಡಕಸುಬಿನ ಪ್ರಶ್ನೆಗಳನ್ನೇ ಕೇಳಬೇಕು. ಯಾಕೆಂದರೆ, ಇಂಥ ಪ್ರಶ್ನೆಗಳ ಹಿಂದೆ ಅಂಥಾ ದೊಡ್ಡ ಆಲೋಚನೆಯ ಶಕ್ತಿ ಇರುವುದಿಲ್ಲ. ಜತೆಗೆ, ಪ್ರತಿಯೊಂದಕ್ಕೂ ತೀವ್ರತರವಾದ ಪ್ರತಿ ಕ್ರಿಯೆ ಕೊಡುವ ಅಭ್ಯಾಸ ಅಲ್ಲಲ್ಲ ಚಟ ಕೆಲವು ಪ್ರಗತಿಪರರಿಗೆ ಇರುತ್ತದೆ. ಈ ಪ್ರಗತಿಪರರ (ಅದಿನ್ನೆಂಥಾ ಪ್ರಗತಿಯೋ?)ವೈಚಾರಿಕವಾದ ಕಾಯಿಲೆ ಹೇಗಿರುತ್ತದೆ? ಯಾವ್ಯಾವ ಸಂದರ್ಭದಲ್ಲಿ ಹೇಗೆ ಹೇಗೆ ವರ್ತಿಸುತ್ತದೆ ಎಂಬುದು ಹೇಳೋದು ಅಂತ ಕಷ್ಟವೇನಲ್ಲ! ಯಾಕೆಂದರೆ, ಇಂಥ ಪ್ರಗತಿಪರರ ವೈಚಾರಿಕತೆಯ ಮಾರ್ಗವನ್ನು ನೋಡೋದು ಇದೇ ಮೊದಲಲ್ಲ!

ಈ ವೈಚಾರಿಕ ಕಾಯಿಲೆಯು ಯಾವ್ಯಾವುದನ್ನೋ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಸೆಯಲ್ಲಿಟ್ಟು ಹುಯಿಲೆಬ್ಬಿಸುತ್ತದೆ. ಬಳೆ ಹಾಕೋದು, ಕುಂಕುಮ, ಬಿಂದಿಗೆ, ವಿಭೂತಿ ಧಾರಣೆ, ಜಡೆ ಹಾಕೋದು, ಬಟ್ಟೆ ಧರಿಸೋದು, ದೇವರಿಗೆ ಮುಗಿಯೋದು, ದೇವರ ದರ್ಶನ, ರಥೋತ್ಸವ, ಶ್ರಾದ್ಧಾದಿ ಅಪರ ಕ್ರಿಯಾ ಕರ್ಮಗಳು, ಹರಕೆ ಹೊತ್ತುಕೊಳ್ಳುವುದು, ನದಿಸಂಗಮಗಳಲ್ಲಿ ಸ್ನಾನ, ಶ್ರಾವಣ ಸಂಕಲ್ಪ, ಗಣೇಶೋತ್ಸವ, ದೇವರ ಉತ್ಸವ ಗಳು- ಹೀಗೆ ಹಲವು ಹತ್ತು ಆಚರಣೆಗಳಲ್ಲಿ ಒತ್ತಡ ಮತ್ತು ಒತ್ತಾಯವನ್ನು ಯಾರೂ ತರುವಂತಿಲ್ಲ.

ಒಂದು ವೇಳೆ ಆಗ್ರಹವನ್ನು ತಂದರೆ, ಆಗ ಅದು ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ. ಇದು ಸಂವಿಧಾನಬಾಹಿರ
ಎಂದು ಬೊಬ್ಬಿಡುವುದನ್ನು ನಿನ್ನೆ ಮೊನ್ನೆಯಿಂದ ನೋಡುತ್ತಿರುವುದೇನಲ್ಲ! ಇಂಥವು ಇದ್ದದ್ದೇ! ಒಬ್ಬಳು ಪ್ರಗತಿಪರ ವರ್ಗಕ್ಕೆ ಸೇರಿದ ವೇಶ್ಯೆ ಇದ್ದಾಳೆ. ಅವಳು ವೇದಿಕೆಯಲ್ಲಿ ಹೀಗೊಂದು ಕಾಲ್ಪನಿಕ ಭಾಷಣ ಮಾಡುತ್ತಾಳೆ: ಮಹನೀಯರೇ, ವಿವಾಹ ಎಂಬುದು, ಒಂದು ಗಂಡಿಗೆ ಒಂದೇ ಹೆಣ್ಣು ಎಂಬುದು, ಒಂದು ಹೆಣ್ಣಿಗೆ ಒಂದೇ ಗಂಡು ಎಂಬುದು ಬಂಡವಾಳಷಾಹಿಗಳು ಹುಟ್ಟುಹಾಕಿದ ದುಷ್ಟ ವ್ಯವಸ್ಥೆ. ಇದು ಕ್ರೂರ. ಇದರಲ್ಲಿ ಸೀ ಶೋಷಣೆಯಿದೆ. ಪುರುಷ ಶೋಷಣೆಯೂ ಬೆನ್ನಿನ ಇನ್ನೊಂದು ಮುಖ. ಸ್ತ್ರೀಯು ಏಕೆ ವಿಧವೆಯಾಗಬೇಕು? ಪುರುಷ ಏಕೆ ವಿಧುರನಾಗಬೇಕು? ಸುಖಕ್ಕೆ ಸಂಸಾರವೇ ಎಂದೂ ಸಾಧನವಲ್ಲ. ಅದು ಬಂಧನ. ವಂಚನೆ, ಇತ್ಯಾದಿ ಅವಳ ಭಾಷಣ ಮುಂದುವರಿಯುತ್ತದೆ.

ಇದನ್ನು ಆಧುನಿಕತೆಯ ಹುಚ್ಚಿನಿಂದ ಹುಟ್ಟಿದ್ದು ಎಂದು ಭಾವಿಸುತ್ತೀರೋ? ಇಲ್ಲ, ಜೀವನ ಉತ್ಕರ್ಷದ ಪ್ರಗತಿಯ ಮಾನದಂಡ
ವೆನ್ನುತ್ತಿರೋ? ಯಾವುದನ್ನು ಅನುಸರಿಸಬೇಕು, ಯಾವುದನ್ನು ಅನುಕರಿಸಬೇಕು? ಗಂಡಸು ಮಾತ್ರ ಕುಡಿಯೋದಲ್ಲ, ಸೇದೋ
ದಲ್ಲ. ಹೆಣ್ಣೂ ಕುಡಿಯಬಹುದು, ಸೇದಬಹುದು ಎಂಬುದು ಎಂಥಾ ಪ್ರಗತಿಯನ್ನು ಎತ್ತಿ ಹಿಡಿಯುತ್ತದೆ? ಅವರವರ ಆಸಕ್ತಿ, ಅಭಿರುಚಿಗೆ ತಕ್ಕಂತೆ ಅವರು ಜೀವನವನ್ನು ನಡೆಸಬಹುದು. ಇದನ್ನೆಲ್ಲ ನಿಯಂತ್ರಿಸುವುದು ಸಂವಿಧಾನ ಬಾಹಿರ. ಇದು ಪ್ರಗತಿಪರರ ವೈಚಾರಿಕತೆಯ ಧೋರಣೆಗಳು. ಇನ್ನೊಂದು ಮುಖ್ಯ ವಿಚಾರವೆಂದರೆ, ‘ಸಂವಿಧಾನದ ೫೧ ಎ (ಎಚ್) ವಿಽಯ ಪ್ರಕಾರ ವೈಜ್ಞಾನಿಕ ಮನೋವೃತ್ತಿ, ಮಾನವ ಹಿತಾಸಕ್ತಿ, ಜಿಜ್ಞಾಸೆ ಮತ್ತು ಸುಧಾರಣಾ ಮನೋಭಾವವನ್ನು ಬೆಳೆಸುವುದು ದೇಶದ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ’ಎಂದು ಉಲ್ಲೇಖಿಸುತ್ತಾ, ‘ಇದಕ್ಕೆ ವಿರುದ್ಧವಾದ ನಡೆಯನ್ನು ಇಸ್ರೋ ವಿಜ್ಞಾನಿಗಳು ಚಂದ್ರಯಾನ-೩ರ ಮಾದರಿಯನ್ನು ತಿರುಪತಿಯಲ್ಲಿ ಪೂಜೆ ಮಾಡುವ ಮೂಲಕ ಅಭಿವ್ಯಕ್ತಿಸಿದ್ದಾರೆ.

ಇದು ಖಂಡನೀಯ’ ಎಂದಿದ್ದಾರೆ ಪ್ರಗತಿಪರರು. ಚಂದ್ರಯಾನ ಮಾದರಿಯನ್ನು ದೇವರ ಸನ್ನಿದಿಯಲ್ಲಿಟ್ಟು ಪೂಜೆ ಮಾಡೋ ದನ್ನು ಖಂಡಿಸುವ ಮಟ್ಟಿಗೆ ಇವರ ವೈಚಾರಿಕತೆಗೆ ಕಿಲುಬು ಹಿಡಿದುಹೋಯ್ತಲ್ಲ ಎಂಬುದೇ ದೊಡ್ಡ ದುರಂತ! ಹಿಂದೆ ಒಬ್ಬ ಮಹನೀಯರು ದಸರಾ ಉದ್ಘಾಟನೆಯನ್ನು ಮಾಡುವುದರ ಬಗ್ಗೆ ಅಪಸ್ವರ ಎತ್ತಿದ್ದರು. ಗೋಮಾಂಸವನ್ನು ತಿನ್ನುತ್ತೇನೆ ಅಂತ ಪೋಸು ಕೊಟ್ಟ ಪ್ರಗತಿಪರರನ್ನೂ ನೋಡಿ ಯಾಗಿದೆ. ‘ಮಹಿಷ ದಸರೆ’ ಆಚರಣೆಯನ್ನು ಮಾಡಿದವರೂ ಈ ನೆಲದಲ್ಲಿದ್ದಾರೆ. ಇದೆಲ್ಲ ವೈಚಾರಿಕ ಪ್ರಗತಿಯ ಚಿಹ್ನೆಯೇ ಎಂದು ಭಾವಿಸುವುದಾದರೆ ಇವರೆಲ್ಲ ಪ್ರಗತಿಪರರು ಅಹುದು ಎಂದು ಒಪ್ಪಬೇಕಾಗು ತ್ತದೆ. ಸಂಸ್ಕೃತಿ, ಪರಂಪರೆಯನ್ನು ಕೊಂದು ಈ ಒಪ್ಪುವಿಕೆಗೆ ಮುದ್ರೆಯೊತ್ತಬೇಕಾಗುತ್ತದೆ.

ಸೊಲ್ಲಿಗೆ ಸೊಲ್ಲು ಸೇರಿಸಿ ಪಟಾಲಮ್ಮನ್ನು ಸೇರಬೇಕಾಗುತ್ತದೆ ನೀವು ಪ್ರಗತಿಪರರು ಎನ್ನಿಸಿಕೊಳ್ಳಬೇಕಾದರೆ! ಇದನ್ನು ಓದಿ: ವಿದೇಶಿ ಪಂಡಿತರಲ್ಲಿ, ಸಂಸ್ಕೃತ ವಿದ್ವಾಂಸರಲ್ಲಿ ಜರ್ಮನ್ನರು, ಯಹೂದ್ಯರು ಅಗ್ರೇಸರರು. ಅಣುಬಾಂಬು ಮೊದಲಿಗೆ ತಯಾರಿಸಿದ ರಾಬರ್ಟ್ ಓಪನ್ ಹೀಮರ್, ಒಬ್ಬ ಪ್ರಚಂಡ ಸಂಸ್ಕೃತ ವಿದ್ವಾಂಸನಿದ್ದ, ಗೀತಾಭ್ಯಾಸಿಯಾಗಿದ್ದ, ಮತ ಮೊಂಡ ನಿರಲಿಲ್ಲ. ಸಮಗ್ರ ಮಹಾಭಾರತವನ್ನು ಅಭ್ಯಾಸ ಮಾಡಿದ್ದ. ಅವನ ಗುರು ಆರ್ಥರ್ ರೈಡರ್, ಬರ್ಕ್ಲಿಯಲ್ಲಿದ್ದ.

ಪ್ರಥಮ ಅಣುಬಾಂಬಿನ ಪ್ರಯೋಗ ನಡೆದು ಸಿಡಿದಾಗ, ಗೀತೆಯ ೧೧ನೆಯ ಅಧ್ಯಾಯದ ಶ್ಲೋಕ ‘ಕಾಲೋಸ್ಮಿ ಲೋಕ ಕ್ಷಯಕೃತ್ ಪ್ರವೃದ್ಧಃ| ಲೋಕಾ ಸಮಾಹತುಂ ಇಹ ಪ್ರವೃತ್ತಃ||’ ಎಂದು ಹೇಳಿ ಎದ್ದು ಕೈಮುಗಿದ. ಲೋಕಕ್ಷಯ ರೂಪೀ, ಕಾಲಪುರುಷ, ಕೃಷ್ಣನ ವಿಶ್ವರೂಪವನ್ನು ಅಲ್ಲಿ ಅವನು ಕಂಡ. ಅಣುಬಾಂಬಿನ ದುರುಪಯೋಗದ ಸಂದರ್ಭವನ್ನು ಕಣ್ಣಾರೆ ನೋಡಿದ್ದ. ಅಮೆರಿಕ ಸಂಶಯದಿಂದ ಅವನನ್ನೂ ಗೃಹ ಬಂಧನದಲ್ಲಿ ಇಟ್ಟಿತ್ತು. ಹಿರೋಷಿಮಾ-ನಾಗಾಸಾಕಿಗಳ ಮೇಲೆ ಹಾಕಿದ ಅದೇ ಬಾಂಬನ್ನು ಅಮೆರಿಕೆಯ ಮೇಲೆ ಬೇರೊಬ್ಬರು ಸಿಡಿಸಿದ್ದರೆ ೪೦ ಮಿಲಿಯದಷ್ಟು ಪ್ರಜೆಗಳು ಸಾಯುತ್ತಿದ್ದರೆಂದು ಹಲವು ಸಲ ಅವನು ಹೇಳಿದ್ದು ಅಮೆರಿಕ ಸರಕಾರಕ್ಕೆ ಹಿಡಿಸಲಿಲ್ಲ.

ಓಪನ್ ಹೀಮರ್ ಗೀತೆಯ ಶ್ರದ್ಧಾತ್ರಯ ಯೋಗದ ಶ್ಲೋಕಗಳನ್ನು ಬಾಯಿಪಾಠ ಮಾಡಿದ್ದ. ರೂಸ್ ವೆಲ್ಟನ ಶ್ರದ್ಧೆ, ಜಗತ್ತನ್ನು ಹಿಟ್ಲರನ ದೆಸೆಯಿಂದ ಉಳಿಸುವುದಿತ್ತು ಎನ್ನುತ್ತ ಅವನು ತಾನು ಬಾಂಬನ್ನು ಅಮೆರಿಕೆಗಿತ್ತ ಸಂದರ್ಭದ ವಿಪರ್ಯಾಸಕ್ಕಾಗಿ ಪರಿತಪಿಸಿದ್ದ. ಹೀಮರ್ ಸತ್ತಾಗ ಅವನ ಅಂತ್ಯ ಕ್ರಿಯೆಯಲ್ಲಿ ಕೇವಲ ೬೦೦ ಜನ ನಿಷ್ಠರಿದ್ದರು. ಆಗ ಐನ್‌ಸ್ಟೀನ್ ಹೇಳಿದ್ದು: ಓಪನ್ ಹೀಮರ್ ಮಾಡಿದ ತಪ್ಪೆಂದರೆ, ತನ್ನನ್ನು ಎಷ್ಡೂ ಪ್ರೀತಿಸದ ಅಮೆರಿಕೆಯನ್ನು ಅವನು ಪ್ರೀತಿಸಿದ್ದು!

ಅಮೆರಿಕಕ್ಕೆ ಅವನ ಶಾಂತಿಪ್ರಿಯತೆ, ಎಚ್ಚರದ ಮಾತು ಪಥ್ಯವಾಗಲಿಲ್ಲ! ಕಾಲನಾಗಿ ಕಂಡ ಕೃಷ್ಣನನ್ನು ಪ್ರೇಮಮಯನ
ನ್ನಾಗಿಯೂ ಕಂಡ ಹಿಂದೂ ಹೃದಯ ಆ ಯಹೂದಿಯ ಶರೀರದಲ್ಲಿತ್ತು. ಕ್ರೈಸ್ತ ಹೃದಯದ ಅಮೆರಿಕೆಗೆ ಅವನ ಮಾತು
ಅರ್ಥ ವಾಗಲಿಲ್ಲ! ಪುಣ್ಯ ಎಂದರೆ, ಈಗೀಗ ಅರ್ಥವಾಗುತ್ತಿದೆ! ಆದರೆ, ಓಪನ್ ಹೀಮರನ ಹಿಂದೂದೃಷ್ಟಿ ಅಷ್ಟು ಸುಲಭವಾಗಿ
ಪ್ರಗತಿಪರರಿಗೆ ಅರ್ಥವಾಗುವುದಿಲ್ಲ!

ಕೊನೆಯ ಮಾತು: ಇಸ್ರೋ ವಿಜ್ಞಾನಿಗಳದ್ದು ಹಿಂದೂ ಹೃದಯ ಸಂವೇದನೆಯುಳ್ಳದ್ದು! ಏನು ಮಾಡಬೇಕು ಅಥವಾ ಏನು ಮಾಡಬಾರದು ಎಂಬುದನ್ನು ಯಾರನ್ನೋ ಕೇಳಿ ಅವರು ಮಾಡಬೇಕಿಲ್ಲ. ಒಬ್ಬ ನಿಜವಾದ ಹಿಂದೂ ಮಾತ್ರ ದೈವ ಸಂವೇ ದನೆಗೆ ಯಾವತ್ತೂ ತೆರೆದ ಹೃದಯದವನಾಗಿರುತ್ತಾನೆ. ಪ್ರಗತಿಪರರಿಗೆ ಇದು ಅರ್ಥವಾಗಬೇಕಷ್ಟೆ! ಯಾವಾಗಲೂ ಅಡ್ಡಕಸುಬು ಮಾಡುವಲ್ಲೇ ನಿರತರಾದವರಿಗೆ ಈ ದೈವ ಸಂವೇದನೆ ಎಲ್ಲಿಂದ ಹುಟ್ಟೀತು?