ಸಾಂದರ್ಭಿಕ
ಗಣಪತಿ ವಿ.ಅವಧಾನಿ
ನವೆಂಬರ್ ಅಂದರೆ ರಾಜ್ಯೋತ್ಸವದ ಮಾಸ. ನಾವೆ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತೇವೆ. ಈ ಸಮಯದಲ್ಲಿ
ಬುದ್ಧಿಜೀವಿಗಳು, ಪ್ರಾಜ್ಞರು, ಭಾಷಾ ತಜ್ಞರು, ವಿಮರ್ಶಕರು ವಿವರವಾಗಿ ಕನ್ನಡದ ಪರಿಸ್ಥಿತಿ ಹೇಗಿದೆ, ಕನ್ನಡದ ಉಳಿವಿಗೆ ಏನು ಮಾಡಬೇಕು, ಹೇಗೆ ಮಾಡಬೇಕು ಎಂದು ವಿವಿಧ ವೇದಿಕೆಗಳಲ್ಲಿ ವಿವರಿಸುತ್ತಿದ್ದಾರೆ.
ದೊಡ್ಡವರು ಇದರ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡು ಕನ್ನಡಿಗರಿಗೆ ಮಾರ್ಗದರ್ಶನ ಮಾಡುತ್ತಿzರೆ. ಇವೆಲ್ಲದರ ಮಧ್ಯೆ
ಸಾಮಾನ್ಯ ಜನರಿಗೆ ಸುಲಭವಾಗಿ ಅರ್ಥವಾಗುವ, ನಾವೆ ಕೈ ಜೋಡಿಸಬಹುದಾದ ಚಿಕ್ಕ – ಚಿಕ್ಕ ದಾರಿಗಳಿವೆ. ಅವುಗಳತ್ತ ದೃಷ್ಟಿ ಹರಿಸೋಣ.
೧ ಬ್ಯಾಂಕ್ ವ್ಯವಹಾರಗಳು: ಬ್ಯಾಂಕ್ ವ್ಯವಹಾರಗಳನ್ನು ಕನ್ನಡದ ಮಾಡಲು ಮನಸ್ಸು ಮಾಡುವುದು. ಚೆಕ್ಕುಗಳನ್ನು ಕನ್ನಡದ ಬರೆಯುವುದು. ಯಾವುದೇ ಬ್ಯಾಂಕ್ ಕರ್ನಾಟಕದಲ್ಲಿ ಕನ್ನಡದಲ್ಲಿ ಬರೆದ ಚೆಕ್ಕುಗಳನ್ನು ಅಮಾನ್ಯ ಮಾಡುವಂತಿಲ್ಲ. ಕನ್ನಡದ ಚೆಕ್ ಬರೆಯುವುದರ ಮೂಲಕ ನಾವು ಬ್ಯಾಂಕ್‌ನಲ್ಲಿ ಕನ್ನಡದ ಬಳಕೆಗೆ ನಮ್ಮ ಕೊಡುಗೆ ಸಲ್ಲಿಸಿದಂತಾಗುತ್ತದೆ. ಇದೇ
ಕ್ರಮವನ್ನು ಹಣ ಜಮಾ ಮಾಡುವಾಗ, ಠೇವಣಿಗಳನ್ನು ಇಡುವಾಗ, ಸಾಲಗಳಿಗೆ ಅರ್ಜಿ ಸಲ್ಲಿಸುವಾಗ ಮತ್ತು ಇತರ ಬ್ಯಾಂಕ್ ಕೆಲಸಗಳಿಗೆ ಸಹ ಬಳಸಬೇಕು. ಇದರಿಂದ ಅನಿವಾರ್ಯವಾಗಿ ಬ್ಯಾಂಕ್ ವ್ಯವಹಾರಗಳು ಕನ್ನಡದ ನಡೆಯುವಂತಾಗುತ್ತದೆ. ನಾವೆಲ್ಲ ಬ್ಯಾಂಕ್‌ಗಳಿಂದ – ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳಿಂದ – ಸಾಕಷ್ಟು ಫೋನ್ ಕರೆಗಳನ್ನು ಸ್ವೀಕರಿಸುತ್ತೇವೆ. ಇವೆಲ್ಲ ಹೆಚ್ಚಾಗಿ ಮನೆ ಸಾಲ, ವಾಹನ ಸಾಲ, ವೈಯಕ್ತಿಕ ಸಾಲಗಳ ಕುರಿತಾಗಿರುತ್ತವೆ.
ಈ ಸಮಯದಲ್ಲಿ ಕನ್ನಡದ ಮಾತನಾಡುವ ಮನಸ್ಸು ಮಾಡೋಣ. ಕನ್ನಡ ಬಳಕೆ ಹೆಚ್ಚಾದಾಗ ಈ ಬ್ಯಾಂಕ್‌ಗಳು ಅನಿವಾರ್ಯ ವಾಗಿ ಕನ್ನಡದ ವ್ಯವಹರಿಸಬೇಕಾದ ಪರಿಸ್ಥಿತಿ ಉದ್ಭವವಾಗುತ್ತದೆ.
೨ ಕೋರ್ಟ್ ವ್ಯವಹಾರಗಳು: ಕರ್ನಾಟಕದ ಹೆಚ್ಚಿನ ಕೋರ್ಟ್‌ಗಳಲ್ಲಿ ಇಂದಿಗೂ ಇಂಗ್ಲಿಷನ್ನೇ ಬಳಕೆ ಮಾಡಲಾಗುತ್ತದೆ. ಕನ್ನಡ ಬಲ್ಲ ವಕೀಲರು, ನ್ಯಾಯಾಧೀಶರು ಕನ್ನಡದ ನ್ಯಾಯಾಂಗದ ಕಲಾಪಗಳನ್ನು ಮಾಡಲು ನಿರ್ಧರಿಸಿದರೆ ಇದರಿಂದ ಕಕ್ಷಿದಾರ ರಿಗೂ ಬಹಳ ಅನುಕೂಲವಾಗುವುದು. ಅಫಿಡವಿಟ್ ಗಳು, ಒಪ್ಪಂದಗಳು, ಕೋರ್ಟ್ ಅರ್ಜಿಗಳು ಮುಂತಾದ ಕಾಗದ ಪತ್ರಗಳನ್ನು ಕನ್ನಡದ ತಯಾರಿಸಲು ಸಾಧ್ಯ. ಇದರಿಂದ ಕನ್ನಡಿಗರಿಗೆ ಪರೋಕ್ಷವಾಗಿ ಅನೇಕ ಉದ್ಯೋಗಾವಕಾಶಗಳು ಸಹ ನಿರ್ಮಾಣ ವಾಗುತ್ತವೆ. ಕನ್ನಡ ಕಾಗದ ಪತ್ರಗಳನ್ನು ಕೋರ್ಟ್‌ಗಳು ಮಾನ್ಯ ಮಾಡುತ್ತವೆ.
೩ ಸರಕಾರಿ ಕಚೇರಿ ವ್ಯವಹಾರಗಳು: ಸಾಮಾನ್ಯ ಜನರಿಗೆ ವರ್ಷದಲ್ಲಿ ಸಾಕಷ್ಟು ಸರಕಾರಿ ಕಚೇರಿಗಳಲ್ಲಿ ವ್ಯವಹಾರಗಳು ಇರುತ್ತವೆ. ಇವುಗಳನ್ನೆಲ್ಲ ಆದಷ್ಟು ಕನ್ನಡದ ಮಾಡಬೇಕು. ರಾಜ್ಯ ಸರಕಾರ ಸಹ ಕಚೇರಿಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ಕೊಟ್ಟಿದೆ. ಕೆಲಸದ ಅರ್ಜಿ, ದೂರು – ದುಮ್ಮಾನಗಳನ್ನು ಕನ್ನಡದ ಬರೆಯಬೇಕು. ಅಽಕಾರಿಗಳೊಂದಿಗೆ ಕನ್ನಡ ಭಾಷೆಯ ವ್ಯವ ಹರಿಸಬೇಕು. ಇದು ಕಚೇರಿಗಳಲ್ಲಿ ಕನ್ನಡದಲ್ಲಿ ವ್ಯವಹಾರ ಹೆಚ್ಚಾಗುವಂತೆ ಮಾಡಲು ಸಹಕಾರಿಯಾಗುತ್ತದೆ.
೪ ದಿನ ನಿತ್ಯದ ವ್ಯವಹಾರಗಳು: ದಿನ ನಿತ್ಯದ ವ್ಯವಹಾರಗಳಲ್ಲಿ ನಾವೆ ಕನ್ನಡವನ್ನೇ ಬಳಸುವ ಮನಸ್ಸು ಮಾಡೋಣ. ದಿನ ನಿತ್ಯ ನಾವೆ ಆಚೆ ಕಡೆ ನಮ್ಮ ಕೆಲಸ ಕಾರ್ಯಗಳಿಗೆ ಹೋಗುತ್ತೇವೆ. ಅಂಗಡಿಗಳಿಗೆ ದಿನಸಿ ಸಾಮಾನು ಕೊಳ್ಳಲು ಹೋದಾಗ ಕನ್ನಡದ ವ್ಯವಹರಿಸೋಣ. ತರಕಾರಿ, ಹಣ್ಣುಗಳನ್ನು ಕೊಳ್ಳುವಾಗ ಕನ್ನಡದ ಮಾತನಾಡೋಣ. ಬಸ್ಸಿನಲ್ಲಿ, ಟ್ರೈನುಗಳಲ್ಲಿ,
ಟ್ಯಾಕ್ಸಿಗಳಲ್ಲಿ ಕನ್ನಡದ ಮಾತನಾಡೋಣ. ಹೋಟೆಲ್ ಗಳಲ್ಲಿ ಕನ್ನಡದಲ್ಲಿ ಮಾತನಾಡೋಣ. ಈ ತರಹ ಎಲ್ಲ ಕಡೆ ಕನ್ನಡ ಮಾತನಾಡಿದಾಗ ನಾವು ಭಾಷೆಯ ಬೆಳವಣಿಗೆಗೆ ನಮ್ಮ ಕೊಡುಗೆ ಸಲ್ಲಿಸಿದಂತಾಗುತ್ತದೆ.
೫ ಮನೆಯಲ್ಲಿ ಕನ್ನಡ: ಮಕ್ಕಳ ಜೊತೆಗೆ ಮನೆಯಲ್ಲಿ ಕನ್ನಡದ ಮಾತನಾಡುವುದು. ಚಿಕ್ಕ ಮಕ್ಕಳಿಗೆ ಎರಡು – ಮೂರು ಭಾಷೆ ಕಲಿಯುವುದು ಕಷ್ಟವೇ ಅಲ್ಲ. ವ್ಯವಹಾರಿಕವಾಗಿ ಬೇಕಾದ ಭಾಷೆ ಎಂದು ನಾವುಗಳು ನಂಬುವ ಇಂಗ್ಲಿಷ್ ಭಾಷೆಯ ಜೊತೆಗೆ ಮಕ್ಕಳು ಕನ್ನಡವನ್ನೂ ಕಲಿಯಲಿ. ಸಣ್ಣ ವಯಸ್ಸಿನಲ್ಲಿ ಮಕ್ಕಳು ಕನ್ನಡ ಭಾಷೆಯನ್ನೂ ಸುಲಭವಾಗಿ ಕಲಿಯುತ್ತಾರೆ. ಮಕ್ಕಳ ಹುಟ್ಟಿದ ದಿನ ಅವರಿಗೆ ಬಟ್ಟೆ ಅಥವಾ ಆಟಿಕೆ ಸಾಮಾನು ಕೊಡುವುದರ ಬದಲು ಅಥವಾ ಅವುಗಳ ಜತೆಗೆ ಕನ್ನಡ ಪುಸ್ತಕ ವೊಂದನ್ನು ಉಡುಗೊರೆಯಾಗಿ ಕೊಡುವುದು. ಇದರಿಂದ ಮಕ್ಕಳಿಗೆ ಶಾಲಾ ಪಠ್ಯ ಪುಸ್ತಕಗಳ ಹೊರತಾಗಿ ಬೇರೆ ಪುಸ್ತಕಗಳನ್ನು
ಓದುವ ಅಭ್ಯಾಸ ಚಿಕ್ಕಂದಿನಿಂದಲೇ ಬೆಳೆಯಲು ಸಾಧ್ಯ.
೬ ಕನ್ನಡ ದಿನಪತ್ರಿಕೆಗಳು: ಪ್ರತಿಯೊಬ್ಬ ಕನ್ನಡಿಗನೂ ದಿನಾಲೂ ಕನಿಷ್ಠ ಎರಡು ದಿನ ಪತ್ರಿಕೆ ಓದುವ ಹವ್ಯಾಸ ಬೆಳೆಸಿ ಕೊಳ್ಳು ವುದು. ಅದರಲ್ಲಿ ಕನಿಷ್ಠ ಒಂದು ಪತ್ರಿಕೆಗೆ ಚಂದಾದಾರರಾಗಿ ಮನೆಗೆ ತರಿಸುವುದು. ಇದರಿಂದ ಕನ್ನಡ ಪತ್ರಿಕೋದ್ಯಮಕ್ಕೆ ನಮ್ಮ ಕಿರು ಕಾಣಿಕೆ ಸಹ ಸಂದಾಯವಾದಂತಾಗುತ್ತದೆ. ಕನ್ನಡದ ಪತ್ರಿಕೆಗಳ ಬೆಳವಣಿಗೆಗೆ ಸಹ ಇದು ಸಹಕಾರಿ. ಇದೀಗ ದಿನಪತ್ರಿಕೆಗಳು ಸಾಮಾನ್ಯ ಜನರಿಗೆ ಸಹ ಲೇಖನಗಳನ್ನು ಬರೆಯಲು ಪ್ರೋತ್ಸಾಹ ಕೊಡುತ್ತಿವೆ. ಇವೆಲ್ಲ ಭಾಷೆಯ ಬೆಳವಣಿಗೆಗೆ
ಪೂರಕವಾಗುತ್ತವೆ.
೭ ಚಲನಚಿತ್ರಗಳು, ರೇಡಿಯೋ ಮತ್ತು ಟೆಲಿವಿಷನ್: ಕನ್ನಡ ಚಲನಚಿತ್ರಗಳ ವಿಸ್ತೀರ್ಣ ಅಗಾಧ. ಈ ಕ್ಷೇತ್ರದ ಮೇಲೆ ಅನೇಕ ಕನ್ನಡದ ಕುಟುಂಬಗಳು ಅವಲಂಬಿತವಾಗಿವೆ. ವರ್ಷಕ್ಕೆ ಎರಡು ಮೂರು ಸಾರಿಯಾದರೂ ಚಲನಚಿತ್ರ ಮಂದಿರಗಳಿಗೆ ಹೋಗಿ, ಸದಭಿರುಚಿಯ ಕನ್ನಡ ಚಿತ್ರಗಳನ್ನು ನೋಡುವುದು. ನೈಜ ಕನ್ನಡ ಚಿತ್ರಗಳಿಗೆ ಆದ್ಯತೆ ಇರಲಿ.
ಇದರಿಂದ ಕನ್ನಡ ಕಲಾವಿದರಿಗೆ ಪ್ರೋತ್ಸಾಹ ಕೊಟ್ಟಂತಾಗುವುದು. ರಿಮೇಕ್ ಚಿತ್ರಗಳಿಗೆ ಪ್ರೋತ್ಸಾಹ ಬೇಡ. ಹಾಗೆಯೇ ಕನ್ನಡ ಕಾರ್ಯಕ್ರಮಗಳನ್ನೇ ಪ್ರಸಾರ ಮಾಡುವ ಎಫ್ಎಂ ರೇಡಿಯೋ ವಾಹಿನಿಗಳನ್ನೇ ಕೇಳುವುದರ ಮೂಲಕ ಅವುಗಳಿಗೆ ಪ್ರೋತ್ಸಾಹ
ಕೊಡುವುದು. ಕರ್ನಾಟಕದಲ್ಲಿದ್ದೂ ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡದ ಚಾನೆಲ್‌ಗಳನ್ನು ಅಲಕ್ಷ್ಯ ಮಾಡೋಣ. ಈಗಂತೂ ಬಹಳಷ್ಟು ಕನ್ನಡ ಟೆಲಿವಿಷನ್ ಚಾನೆಲ್‌ಗಳಿವೆ. ಸದಭಿರುಚಿಯ ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಟೆಲಿವಿಷನ್ ಚಾನೆಲ್‌ಗಳಿಗೆ ಪ್ರೋತ್ಸಾಹ ಕೊಡುವುದು ನಮ್ಮ ನಿಲುವಾಗಿರಲಿ.
೮ ಕನ್ನಡ ಶಾಲೆಗಳಿಗೆ ಪ್ರೋತ್ಸಾಹ: ನಗರಗಳಲ್ಲಿರುವ ಹೆಚ್ಚಿನ ಜನ ಹಳ್ಳಿಗಳ ಓದಿದವರಾಗಿದ್ದಾರೆ. ಅದೂ ಕನ್ನಡ ಶಾಲೆಗಳ ಓದಿದವರು. ಈ ವಿದ್ಯಾವಂತರು ಬಿಡುವು ಮಾಡಿಕೊಂಡು ತಮ್ಮ ತಮ್ಮ ಊರಿನ ಈ ಶಾಲೆಗಳಿಗೆ ಭೇಟಿ ಕೊಡಬೇಕು. ತಮ್ಮ ಸಮಯವನ್ನು ಅಲ್ಲಿನ ಮಕ್ಕಳ ಜೊತೆಗೆ ಕಳೆಯಬೇಕು. ಮಕ್ಕಳಿಗೆ ಮಾರ್ಗದರ್ಶನ ಕೊಡಬೇಕು. ಈ ಶಾಲೆಗಳಿಗೆ ಸ್ವಲ್ಪ ಮಟ್ಟಿನ ಧನ ಸಹಾಯ ಮಾಡಿದರೆ ಖಂಡಿತಾ ಅದು ಉತ್ತಮ ಉದ್ದೇಶಗಳಿಗೆ ಬಳಕೆಯಾಗುತ್ತದೆ.
೯ ಶಾಲೆಗಳಲ್ಲಿ ಕನ್ನಡ: ಹೆಚ್ಚಿನ ಶಾಲೆಗಳಲ್ಲಿ ವರ್ಷಕ್ಕೊಮ್ಮೆ ಶಾಲಾ ವಾರ್ಷಿಕೋತ್ಸವ ದಿನ ಎಂದು ಆಚರಿಸುತ್ತಾರೆ. ಈ ದಿನ ದಲ್ಲಿ ಕನ್ನಡದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒತ್ತು ಸಿಗಲಿ. ಕನಿಷ್ಠ ಹೈಸ್ಕೂಲ್ ಮಟ್ಟದಲ್ಲಿ ಈ ಶಾಲೆಗಳು ವಾರ್ಷಿಕ ಸ್ಮರಣ ಸಂಚಿಕೆಗಳನ್ನು ಹೊರತರಲಿ. ಈ ಸಂಚಿಕೆಗಳಲ್ಲಿ ಮಕ್ಕಳು ಬರೆದ ಬರಹಗಳಿಗೆ ಆದ್ಯತೆ ಇರಲಿ. ಇದರಿಂದ ಚಿಕ್ಕಂದಿ ನಿಂದಲೇ ಮಕ್ಕಳಿಗೆ ಕನ್ನಡದಲ್ಲಿ ಬರೆಯಲು ಪ್ರೋತ್ಸಾಹಿಸಿದಂತಾಗುತ್ತದೆ. ಶಾಲೆಯ ಹಿರಿಯ ಶಿಕ್ಷಕರು ಮಕ್ಕಳಿಗೆ ಇದರ ಬಗ್ಗೆ ಮಾರ್ಗದ ರ್ಶನ ಮಾಡಬೇಕು.
೧೦ ಕನ್ನಡ ನಾಟಕಗಳು: ಹಳ್ಳಿಗಳಲ್ಲಿ ಹಾಗೂ ಸಣ್ಣಪಟ್ಟಣಗಳಲ್ಲಿ ಈಗಲೂ ಹಲವಾರು ಕನ್ನಡ ನಾಟಕಗಳನ್ನು ಆಡುವ ಕಂಪನಿಗಳಿವೆ. ಇವೆಲ್ಲ ಸಣ್ಣ – ಸಣ್ಣ ನಾಟಕ ಕಂಪನಿಗಳು. ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳನ್ನು ಆಡುವ ಈ ನಾಟಕ ಕಂಪನಿಗಳು ನಮ್ಮ ಸಾಂಸ್ಕೃತಿಕ ಬೆಳವಣಿಗೆಗೆ ಕೊಡುಗೆ ನೀಡುತ್ತಾ ಬಂದಿವೆ. ಇಲ್ಲಿ ನಟಿಸುವವರೆಲ್ಲ ಬಡ ಕಲಾವಿದರು. ಬಿಡುವಾದಾಗ ಈ ನಾಟಕಗಳಿಗೆ ಹೋದರೆ, ಅವರಿಗೆ ಸಹ ಅವರ ಜೀವನಕ್ಕೆ ಸಹಾಯವಾಗುವುದಲ್ಲದೆ, ಕನ್ನಡ ಭಾಷೆಯ ಉಳಿವಿಗೆ ನಮ್ಮ ಪಾಲು ಕೊಟ್ಟಂತಾಗುತ್ತದೆ.
೧೧ ದೇವಸ್ಥಾನಗಳು ಮತ್ತು ಧಾರ್ಮಿಕ ಕೇಂದ್ರಗಳು: ದೇವಸ್ಥಾನಗಳಲ್ಲಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪುರೋಹಿತರು ಮಂತ್ರಗಳನ್ನು ಸಂಸ್ಕೃತದಲ್ಲಿ ಹೇಳುತ್ತಾರೆ. ಬಹಳ ಜನರಿಗೆ ಇದು ಅರ್ಥ ಆಗುವುದಿಲ್ಲ. ಪುರೋಹಿತರು ಸಾಧ್ಯವಾದ ಮಂತ್ರ/ಪ್ರಾರ್ಥನೆಗಳನ್ನು ಕನ್ನಡದಲ್ಲಿ ಹೇಳಿದರೆ, ಜನರಿಗೂ ಇದು ಅರ್ಥವಾಗುತ್ತದೆ. ಧಾರ್ಮಿಕ ಶ್ರದ್ಧೆಯು
ಹೆಚ್ಚಾಗುತ್ತದೆ. ಕನ್ನಡಕ್ಕೆ ಪ್ರೋತ್ಸಾಹವನ್ನೂ ಕೊಟ್ಟಂತಾಗುತ್ತದೆ. ಇದೇ ತರಹ ಚರ್ಚ್‌ಗಳಲ್ಲಿ ಹಾಗೂ ಮಸೀದಿಗಳಲ್ಲಿ ಸಹ ಕನ್ನಡ ಕಾರ್ಯಕ್ರಮಗಳಿಗೆ ಅವಕಾಶ ಕೊಡಲು ಸಾಧ್ಯವಿದೆ.
೧೨ ಸಾಮಾಜಿಕ ಜಾಲತಾಣಗಳು: ಈಗಂತೂ ತಂತ್ರಜ್ಞಾನದ ಕಾಲ. ಹೆಚ್ಚಿನ ಜನರ ಬಳಿ ಸ್ಮಾರ್ಟ್ ಫೋನ್‌ಗಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿzರೆ. ಅದು ವಾಟ್ಸಪ್ ಇರಬಹುದು, ಫೇಸ್ ಬುಕ್ ಇರಬಹುದು, ಟ್ವೀಟರ್ ಇತ್ಯಾದಿ ಇರಬಹುದು. ಈ ಮಾಧ್ಯಮಗಳಲ್ಲಿ ಒಂದೆರಡು ವರ್ಷಗಳ ಹಿಂದೆ ಕನ್ನಡ ಬಳಸುವುದು ಸ್ವಲ್ಪ ಕಷ್ಟಕರವಾಗಿತ್ತು. ಆದರೆ ಈಗ ಇವುಗಳಲ್ಲಿ
ಕನ್ನಡ ಬಳಸುವುದು ಸುಲಭ. ಕನ್ನಡಿಗ ಬಳಕೆದಾರರು ಈ ಮಾಧ್ಯಮಗಳಲ್ಲಿ ಆದಷ್ಟು ಶುದ್ಧ ಕನ್ನಡವನ್ನೇ ಬಳಸಲು
ಮನಸ್ಸು ಮಾಡಬೇಕು.
ಕನ್ನಡ ದ್ರಾವಿಡ ಭಾಷೆಗಳಲ್ಲಿ ಪ್ರಮುಖವಾದ ಭಾಷೆ. ನಮ್ಮ ದೇಶದ ಪುರಾತನ ಭಾಷೆಗಳಲ್ಲಿ ಒಂದು. ಸಾವಿರಾರು ವರ್ಷಗಳ ಇತಿಹಾಸ ಕನ್ನಡಕ್ಕಿದೆ. ೨೦೧೧ರ ಜನಗಣತಿ ಪ್ರಕಾರ ಕನ್ನಡ ಮಾತನಾಡು ವವರ ಸಂಖ್ಯೆ ೬.೪ ಕೋಟಿ. ಇದರಲ್ಲಿ ಐದೂವರೆ ಕೋಟಿ ಜನರ ಮಾತೃಭಾಷೆ ಕನ್ನಡ. ಇಂತಿರ್ಪ ಕನ್ನಡ ಗಟ್ಟಿಯಾದ ಭಾಷೆ. ಇದೊಂದು ಗಟ್ಟಿಯಾಗಿ ನಿಂತ ಮರ. ಈ ಮರಕ್ಕೆ
ಬಲವಾದ ಹಾಗೂ ಆಳವಾದ ಬೇರಿದೆ.
ಇದನ್ನು ಸುಲಭವಾಗಿ ಅಲುಗಾಡಿಸಲು ಸಾಧ್ಯವೇ ಇಲ್ಲ. ಇದನ್ನು ಇನ್ನಷ್ಟು ಗಟ್ಟಿ ಮಾಡಲು, ನಾವು ಸ್ವಲ್ಪ ನೀರು ಮತ್ತು
ಗೊಬ್ಬರ ಹಾಕುತ್ತಿದ್ದರೆ ಸಾಕು. ಇದರ ಉಳಿವಿಗೆ ಮತ್ತು ಬೆಳೆಸುವಿಕೆಗೆ ಪ್ರತಿಯೊಬ್ಬರೂ ವೈಯಕ್ತಿಕ ಮಟ್ಟದಲ್ಲಿ ಕೊಡುಗೆ ಕೊಡೋಣ. ಹಾಗೆಯೇ ಇತರರನ್ನೂ ಈ ನಿಟ್ಟಿನಲ್ಲಿ ಪ್ರೇರೇಪಿಸೋಣ. ಎಲ್ಲರೂ ಕೈ ಜೋಡಿಸಿದಾಗ ಗಮನಾರ್ಹ ಸುಧಾರಣೆ ತರಲು ಸಾಧ್ಯ. ಇದು ಇಂದಿನ ಅಗತ್ಯತೆ ಕೂಡ.