ಜಲಸಂಘರ್ಷ
ಶಶಿಕುಮಾರ್ ಕೆ.
shashikumark1995@gmail.com
ರಾವಿ ನದಿಯ ನೀರನ್ನು ಪಾಕಿಸ್ತಾನಕ್ಕೆ ಹರಿಸುವುದನ್ನು ಪೂರ್ತಿಯಾಗಿ ಭಾರತ ನಿಲ್ಲಿಸಿದೆ. ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಪುರ್ ಕಂಡಿ ಅಣೆಕಟ್ಟನ್ನು ನಿರ್ಮಿಸಲು ಭಾರತ ಈ ಕ್ರಮ ಕೈಗೊಂಡಿದೆ. ಇದರಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ೧೧೫೦ ಕ್ಯೂಸೆಕ್ ನೀರು ಹೆಚ್ಚುವರಿಯಾಗಿ ಸಿಗಲಿದೆ. ಈ ಹಿಂದೆ ಇಷ್ಟು ಪ್ರಮಾಣದ ರಾವಿ ನೀರು ಪಾಕಿಸ್ತಾನಕ್ಕೆ ಹರಿದು ಹೋಗುತ್ತಿತ್ತು. ಆದರೆ ಈಗ ಜಮ್ಮು ಮತ್ತು ಕಾಶ್ಮೀರದ ಕಟುವಾ ಮತ್ತು ಸಾಂಬಾ ಜಿಗಳ ಸುಮಾರು ೩೨ ಸಾವಿರ ಹೆಕ್ಟೇರ್ ಕೃಷಿ ಪ್ರದೇಶಕ್ಕೆ ಅನುಕೂಲವಾಗಲಿದೆ.
ನೀರಾವರಿ ಮತ್ತು ಜಲವಿದ್ಯುತ್ ಯೋಜನೆಗೆ ಪ್ರಮುಖವಾಗಿರುವ ಶಾಪುರ್ ಕಂಡಿ ಯೋಜನೆ ಅಣೆಕಟ್ಟು ಕಳೆದ ಮೂರು ದಶಕಗಳಿಂದ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿತ್ತು. ಪಿ.ವಿ.ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಇದರ ನಿರ್ಮಾಣ ಕೆಲಸ ಆರಂಭವಾಗಿತ್ತು. ಆದರೆ, ನಾನಾ ಕಾರಣ
ಗಳಿಂದ ಇದು ನನೆಗುದಿಗೆ ಬಿದ್ದಿತ್ತು. ಆದರೆ ಇದೀಗ ಈ ಯೋಜನೆಯ ನಿರ್ಮಾಣ ಕಾರ್ಯಗಳು ಮುಕ್ತಾಯದ ಹಂತದಲ್ಲಿವೆ. ಹೀಗಾಗಿ ಪಾಕಿಸ್ತಾನಕ್ಕೆ ಹೋಗುತ್ತಿರುವ ನೀರು ಈಗಿನಿಂದಲೇ ಬಂದ್ ಆಗುತ್ತಿವೆ ಎಂದು ಮಾಹಿತಿ ಲಭಿಸಿದೆ.
ರಾವಿ ನದಿ ನೀರಿನಲ್ಲಿ ಭಾರತಕ್ಕೆ ಶೇ.೯೫ರಷ್ಟು ಪಾಲು ಇದೆ. ಆದರೂ ಇದನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ಪಾಕಿಸ್ತಾನಕ್ಕೆ ಬಿಡಲಾ ಗುತ್ತಿತ್ತು. ಈಗ ಡ್ಯಾಮ್ ನಿರ್ಮಾಣ ಕೆಲಸ ಜೋರಾಗಿ ನಡೆಯುತ್ತಿರುವುದರಿಂದ ನದಿಯ ನೀರನ್ನು ನಿಲ್ಲಿಸಲಾಗಿದೆ ಎಂದು ಮಾಹಿತಿ ಲಭಿಸುತ್ತಿದೆ. ಸದ್ಯ ಈ ವಿಷಯಕ್ಕೆ ಸಂಬಂಽಸಿದಂತೆ ಪಾಕಿಸ್ತಾನದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅವರು ಪ್ರತಿಕ್ರಿಯೆ ನೀಡುವುದಕ್ಕೂ ಆಗುವುದಿಲ್ಲ. ಏಕೆಂದರೆ, ಸಿಂಧೂ ನದಿಯ ನೀರಿನ ಒಪ್ಪಂದದ ಪ್ರಕಾರ ರಾವಿನದಿಯ ಶೇ.೯೫ರಷ್ಟು ನೀರು ಭಾರತಕ್ಕೆ ಸಿಗುತ್ತದೆ. ಆದ್ದರಿಂದ ಅವರು ಮಾತನಾಡುವುದಕ್ಕೆ ಸಾಧ್ಯವಿಲ್ಲ.
ರಾವಿ ನದಿಯು ಸಿಂಧೂ ನದಿಯ ಪ್ರಮುಖ ಉಪನದಿ. ಇತ್ತೀಚಿನ ವರ್ಷಗಳಲ್ಲಿ ಸಿಂಧೂ ನದಿ ನೀರಿಗೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನದ ನಡುವೆ ವಿವಾದ ಆರಂಭ ವಾಗಿದ್ದು ೨೦೧೬ರ ಸೆಪ್ಟೆಂಬರ್‌ನಲ್ಲಿ. ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ನೆಲೆಯ ಮೇಲಿನ ಪಾಕ್ ಪ್ರಾಯೋಜಿತ ಉಗ್ರ
ದಾಳಿಗೆ ಪ್ರತೀಕಾರವಾಗಿ ಭಾರತವು ಪಿಒಕೆಯ ಉಗ್ರನೆಲೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿತು. ಈ ಸಂದರ್ಭದಲ್ಲಿ ೫೬ ವರ್ಷಗಳಷ್ಟು ಹಳೆಯ ಇಂಡಸ್ ವಾಟರ್ ಒಪ್ಪಂದ ರದ್ದುಗೊಳಿಸಿದರೆ ಹೇಗೆ ಎಂಬ ಚಿಂತನೆಯೂ ನಡೆದಿತ್ತು. ಇಂಡಸ್ ವಾಟರ್ ಒಪ್ಪಂದವು ಸಿಂಧೂ ತಟದ ಆರು ನದಿ
ಗಳಲ್ಲಿ ನೀರು ಹಂಚಿಕೆಗೆ ಸಂಬಂಧಿಸಿದ್ದಾಗಿದ್ದು, ಇವುಗಳ ನೀರಿನ ಹರಿವನ್ನು ತಡೆದರೆ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬಹುದು ಎಂದು ಭಾರತ ಆಲೋಚಿ ಸಿತು.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಪೂರ್ಣ ಸೇರಿ ಶೇ. ೬೫ರಷ್ಟು ಭೂಭಾಗ ಸಿಂಧೂ ತಟದಲ್ಲಿದೆ. ಜಗತ್ತಿನ ಅತಿದೀರ್ಘ ಕಾಲುವೆ ನೀರಾವರಿ ವ್ಯವಸ್ಥೆ ಹೊಂದಿರುವ ಪಾಕಿಸ್ತಾನದ ಶೇ.೯೦ರಷ್ಟು ಕೃಷಿ, ಇದೇ ನೀರಾವರಿಯನ್ನು ಅವಲಂಬಿಸಿದೆ. ಇದಲ್ಲದೆ ಮೂರು ದೊಡ್ಡ ಮತ್ತು ಅನೇಕ ಚಿಕ್ಕಪುಟ್ಟ ಅಣೆಕಟ್ಟುಗಳು ನದಿಗಳ ಉದ್ದಕ್ಕೂ ಇದ್ದು, ಇವು ಆ ದೇಶದ ಜಲವಿದ್ಯುತ್ ನೀರಾವರಿ ಮತ್ತು ಲಕ್ಷಾಂತರ ಪಾಕಿಸ್ತಾನಿಗಳ ಕುಡಿಯುವ ನೀರಿನ ಮೂಲ ಗಳಾಗಿವೆ. ಅಷ್ಟೇ ಅಲ್ಲ ಈ ವ್ಯವಸ್ಥೆಯು ಪಾಕಿಸ್ತಾನ ಕೃಷಿ ಕ್ಷೇತ್ರದ ಜೀವನ ವಾಹಿನಿಯು ಆಗಿದೆ.
ಇಂಡಸ್ ಜಲ ಒಪ್ಪಂದವು ಜಗತ್ತಿನ ಅತ್ಯಂತ ಉದಾರ ಜಲಒಪ್ಪಂದ ಎಂದೇ ಪ್ರಸಿದ್ಧಿ ಪಡೆದಿದೆ. ಉಭಯ ದೇಶಗಳ ನಡುವೆ ಬಾರಿ ವೈಮನಸ್ಸು ಇzಗ್ಯೂ ನದಿ ನೀರು ಹಂಚಿಕೆ ವಿಷಯದಲ್ಲಿ ವಿವಾದ ಏರ್ಪಟ್ಟಿದ್ದು ಕಡಿಮೆ. ಬಿಕ್ಕಟ್ಟಿನ ಹಾದಿ ತುಳಿಯದೆ ಸಹಕಾರದ ದಾರಿಯಲ್ಲಿ ಸಾಗಬೇಕೆಂಬ ಅಂಶವೇ
ಒಪ್ಪಂದದ ಹೈಲೈಟ್. ಪಾಕಿಸ್ತಾನಿಗಳಿಗೆ ಬದುಕು ಕಟ್ಟಿಕೊಡುವ ನೀರಾವರಿ ವ್ಯವಸ್ಥೆಗೆ ಅಡ್ಡಿ ಉಂಟು ಮಾಡಬಾರದು ಎಂದು ಭಾರತ ಇನ್ನೂ ಹಲವು ಯೋಜನೆಗಳನ್ನು ಜಾರಿಗೊಳಿಸಿಲ್ಲ ಎನ್ನುವುದು ಕೂಡ ಅಷ್ಟೇ ವಾಸ್ತವ.
ಒಪ್ಪಂದದ ಪ್ರಕಾರ ಸಿಂಧೂತಟದ ಆರು ನದಿಗಳನ್ನು ಪೂರ್ವ ಮತ್ತು ಪಶ್ಚಿಮದ ನದಿಗಳೆಂದು ವಿಭಾಗಿಸಲಾಗಿದೆ. ಇದರಲ್ಲಿ ಸಟ್ಲೇಜ್, ಬಿಯಾಸ್, ರಾವಿ ನದಿಗಳು ಪೂರ್ವ ವಲಯಕ್ಕೂ ಜೀಲಂ, ಚೀನಾಬ್, ಸಿಂಧೂ ನದಿಗಳು ಪಶ್ಚಿಮ ವಲಯಕ್ಕೆ ಸೇರುತ್ತವೆ. ಈ ಪೈಕಿ ಸಿಂಧೂ ನದಿ ಅತಿ ದೀರ್ಘ ವಾಗಿದ್ದು ಚೀನಾದಲ್ಲಿ ಉಗಮ ಸ್ಥಾನವನ್ನು ಹೊಂದಿದೆ. ಸಟ್ಲೆಜ್‌ನ ಉಗಮವು ಕೂಡ ಚೀನಾದಲ್ಲಿ ಆಗಿದೆ. ಉಳಿದ ನಾಲ್ಕು ನದಿಗಳ ಉಗಮ ವಿರುವುದು ಭಾರತ ದಲ್ಲಿ. ಈ ಎಲ್ಲ ನದಿಗಳು ಭಾರತದ ಮೂಲಕವೇ ಪಾಕಿಸ್ತಾನದ ಕಡೆಗೆ ಹರಿಯುತ್ತವೆ.
ಈ ಒಪ್ಪಂದ ಪೂರ್ವ ವಲಯದ ಎಲ್ಲ ನದಿಗಳ ಮೇಲಿನ ಪೂರ್ಣ ಅಧಿಕಾರವನ್ನು ಭಾರತಕ್ಕೆ ನೀಡಿದ್ದರೆ, ಪಶ್ಚಿಮ ವಲಯದ ನದಿಗಳ ಹಕ್ಕು ಪಾಕಿಸ್ತಾನಕ್ಕೆ ಸೇರಿದೆ. ಆದಾಗ್ಯೂ ಪಶ್ಚಿಮ ವಲಯದ ನದಿಗಳ ನೀರನ್ನು ಕುಡಿಯುವ ಉದ್ದೇಶ, ನೀರಾವರಿ ಮತ್ತು ಜಲವಿದ್ಯುತ್ ಉತ್ಪಾದನೆಗೂ ಬಳಸುವ ಹಕ್ಕು ಭಾರತಕ್ಕೆ ಇದೆ. ಆದರೆ ಈ ಬಳಕೆ ಒಪ್ಪಂದದಲ್ಲಿ ಉಲ್ಲೇಖಿಸಿದ ಮಾರ್ಗಸೂಚಿಯ ಅನುಸಾರವೇ ಆಗಬೇಕಾಗುತ್ತದೆ. ಪೂರ್ವ ವಲಯದ ನದಿಗಳ ನೀರನ್ನು ಭಾರತ ಹೇಗೆ ಬೇಕಾದರೂ ಬಳಸಿಕೊಳ್ಳಬಹುದು. ನೆರೆಯ ರಾಷ್ಟ್ರಗಳ ಜತೆಗಿನ ಒಪ್ಪಂದದ ಅಂಶಗಳನ್ನು ಪಾಲಿಸುತ್ತ ನೈತಿಕ
ವಾಗಿಯೂ ಭಾರತ ಉನ್ನತ ಸ್ಥಾನದಲ್ಲಿದೆ.
ಜಲಸಂಪನ್ಮೂಲವು ಬಿಕ್ಕಟ್ಟಿಗೆ ಅಷ್ಟೇ ಅಲ್ಲ ಅದು ಪರಸ್ಪರ ಸಹಕಾರ, ಸೌಹಾರ್ದ ನಡೆಗೂ ಕಾರಣವಾಗುತ್ತದೆ ಎಂಬುದಕ್ಕೆ ಇಂಡಸ್ ಜಲ ಒಪ್ಪಂದವೇ ಸಾಕ್ಷಿ. ಈ ಒಪ್ಪಂದವು ಭಾರತ ಹಾಗೂ ಪಾಕಿಸ್ತಾನಗಳ ನಡುವಿನ ಎರಡು ಯುದ್ಧಗಳನ್ನು ತಡೆದಿತ್ತು ಎಂದು ವಿಶ್ವಸಂಸ್ಥೆಯ ಡೆಪ್ಯೂಟಿ ಸೆಕ್ರೆಟರಿ ಜನರಲ್
ಜಾನ್ ಎಲಿಯಾಸ್ಟರ್ ಹೇಳುತ್ತಾರೆ. ಇದೇ ಜಲ ಒಪ್ಪಂದದ ಪ್ರಕಾರ ಕಾಯಂ ಇಂಡಸ್ ಆಯೋಗವನ್ನು ರಚಿಸಲಾಯಿತು. ಎರಡು ದೇಶಗಳಿಂದ ತಲಾ ಒಬ್ಬ ಕಮಿಷನರ್ ಇದ್ದು ಇವರ ನಿಯತ ಭೇಟಿಯಲ್ಲಿ ನದಿಗಳ ಕುರಿತ ದತ್ತಾಂಶ, ಮಾಹಿತಿಗಳನ್ನು ಪರಸ್ಪರ ಹಂಚಿಕೊಂಡು ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಿಕ್ಕಟ್ಟುಗಳನ್ನು ಪರಿಹರಿಸಬೇಕಾಗುತ್ತದೆ.
ಮಾತುಕತೆ ಒಮ್ಮೆ ಭಾರತದಲ್ಲಿ ಮಗದೊಮ್ಮೆ ಪಾಕಿಸ್ತಾನದಲ್ಲಿ ನಡೆಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ಭೇಟಿ ಆರು ತಿಂಗಳಿಗೊಮ್ಮೆ ನಡೆಯುತ್ತದೆ.
ದೇಶ ವಿಭಜನೆಯ ಬಳಿಕ ಕಾಶ್ಮೀರವನ್ನು ವಶಪಡಿಸಿ ಕೊಳ್ಳಲು ಪಾಕಿಸ್ತಾನದ ಸೇನೆ ಗಡಿ ಅತಿಕ್ರಮಿಸಿದ್ದರಿಂದ ಉಭಯ ದೇಶಗಳ ನಡುವೆ ಮೊದಲ ಯುದ್ಧಕ್ಕೆ ನಾಂದಿ ಯಾಗಿತ್ತು. ಒಂದು ವರ್ಷ ಎರಡು ತಿಂಗಳಿಗೂ ಅಧಿಕ ಅವಧಿಗೆ ಈ ಯುದ್ಧ ಮುಂದುವರಿದಿತ್ತು. ಅದೇ ಅವಧಿಯಲ್ಲಿ ೧೯೪೮ರ
ಏಪ್ರಿಲ್ ೧ರಂದು ಭಾರತ ಸರಕಾರ ಪಾಕಿಸ್ತಾ ನಕ್ಕೆ ನೀರು ಹರಿಸುವ ಎಲ್ಲ ಕಾಲುವೆಗಳನ್ನು ಮುಚ್ಚಿತ್ತು. ಈ ನಡೆಗೆ ಪಾಕಿಸ್ತಾನ ಪ್ರತಿಭಟನೆ ವ್ಯಕ್ತಪಡಿಸಿತು.
ನಂತರ ಮಾತುಕತೆ ನಡೆದು ೧೯೪೮ರ ಮೇ ೪ರಂದು ಮಧ್ಯಂತರ ಒಪ್ಪಂದ ನಡೆದು ನೀರು ಹರಿಸಲಾಯಿತು. ಆದರೆ ಈ ಒಪ್ಪಂದ ಪೂರ್ಣಕಾಲಿಕ ಪರಿಹಾರವಲ್ಲ ಎಂದರಿತ ಪಾಕಿಸ್ತಾನ ೧೯೫೨ರಲ್ಲಿ ವಿಶ್ವ ಸಂಸ್ಥೆಯ ಮಧ್ಯಸ್ಥಿಕೆಗೆ ಕೋರಿತು. ಸುದೀರ್ಘ ಮಾತುಕತೆ ಬಳಿಕ ಕೊನೆಗೆ ೧೯೬೦ರ ಸೆಪ್ಟೆಂಬರ್
೧೯ರಂದು ಇಂಡಸ್ ಜಲ ಒಪ್ಪಂದಕ್ಕೆ ಉಭಯ ದೇಶಗಳ ನಾಯಕರು ಸಹಿ ಹಾಕಿದರು. ೨೦೧೬ರಲ್ಲಿ ಉರಿ ಮೇಲಿನ ಭಯೋತ್ಪಾದಕರ ದಾಳಿಯ
ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಸಿಂಧೂ ನದಿ ನೀರಿನ ಒಪ್ಪಂದದ ಕುರಿತು ನೀರು ಮತ್ತು ರಕ್ತ ಒಟ್ಟಿಗೆ ಹರಿಯಲಾರದು ಎಂದು ಪಾಕಿಸ್ತಾನಕ್ಕೆ ನೀರನ್ನು ಹರಿಸುವುದನ್ನು ನಿಲ್ಲಿಸುವ ಕುರಿತು ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಅಂದು ಕ್ಯಾಬಿನೆಟ್ ಕೈಗೊಂಡ ಪ್ರಮುಖ ನಿರ್ಣಯಗಳೆಂದರೆ
? ಪಾಕಿಸ್ತಾನದ ನಿಯಂತ್ರಣದಲ್ಲಿರುವ ಸಿಂಧೂ, ಚೀನಾಬ, ಜೀಲಂ ನದಿಗಳಲ್ಲಿ ಭಾರತದ ಪಾಲಿನ ನೀರನ್ನು ಗರಿಷ್ಟ ಪ್ರಮಾಣದಲ್ಲಿ ಬಳಸುವ ತೀರ್ಮಾನ ಮುಖ್ಯವಾಗಿ ಆ ನೀರನ್ನು ಜಲವಿದ್ಯುತ್ ಉತ್ಪಾದನೆ, ನೀರಾವರಿ ಮತ್ತು ಸಂಗ್ರಹಕ್ಕೆ ಬಳಸಲು ತೀರ್ಮಾನಿಸಲಾಯಿತು. ? ಏಕಪಕ್ಷಿಯವಾಗಿ ರದ್ದು ಗೊಳಿಸಿದ್ದ ೧೯೮೭ರ ತುಲ್ಬುಲ್ ನ್ಯಾವಿಗೇಶನ್ ಪ್ರಾಜೆಕ್ಟ್‌ನ ಪುನರ್ ವಿಮರ್ಶೆಗೆ ನಿರ್ಧಾರ ಕೈಗೊಳ್ಳ ಲಾಯಿತು. ಈ ಪ್ರಾಜೆಕ್ಟ್ ಅನ್ನು ೨೦೦೭ರಲ್ಲಿ ರದ್ದು ಗೊಳಿಸಲಾಗಿತ್ತು.
? ಕೃಷಿ ಬಳಕೆಗಾಗಿ ೯.೧೨ ಲಕ್ಷ ಎಕರೆಗೆ ನೀರನ್ನು ಬಳಸಿ ಕೊಳ್ಳಲು ಅವಕಾಶವಿದ್ದು ಹೆಚ್ಚುವರಿಯಾಗಿ ೪.೨ ಲಕ್ಷ ಎಕರೆಗೆ ವಿಸ್ತರಿಸಲು ನಿರ್ಧಾರ ಕೈಗೊಳ್ಳ ಲಾಯಿತು ಮತ್ತು ೧೮೦೦೦ ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಯೋಜನೆ ಜಾರಿ ಕುರಿತು ತೀರ್ಮಾನ ಕೈಗೊಳ್ಳಲಾಯಿತು.
? ಜಲ ಒಪ್ಪಂದದ ಕುರಿತು ಭಾರತದ ಹಕ್ಕುಗಳನ್ನು ಪ್ರಸ್ತಾಪಿಸಲು ಅಂರ್ತ ಸಚಿವಾಲಯದ ಸಮಿತಿ ಮತ್ತು ಜಲ ಒಪ್ಪಂದದ ಕುರಿತು ಮಾತುಕತೆ ನಡೆಯುವುದಿದ್ದರೆ ಅದು ಭಯೋತ್ಪಾದನೆಯ ನೆರಳಿನಿಂದ ಮುಕ್ತ ವಾತಾವರಣದಲ್ಲಿ ಮಾತ್ರ ನಡೆಯಬೇಕು ಎಂದು ಭಾರತ ಪ್ರತಿಪಾದಿಸಿದೆ.
? ಇಂಡಸ್ ಜಲ ಒಪ್ಪಂದದ ಪ್ರಕಾರ ಭಾರತದಲ್ಲಿ ೧೩.೪ ಕೋಟಿ ಎಕರೆ ಪ್ರದೇಶದಲ್ಲಿ ನೀರಾವರಿ ಸೌಲಭ್ಯ ಪಡೆಯುವುದಕ್ಕೆ ಅವಕಾಶವಿದೆ. ಇದುವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕೇವಲ ೬,೪೨,೪೭೭ ಎಕರೆ ಪ್ರದೇಶದಲ್ಲಷ್ಟೇ ನೀರಾವರಿ ಸೌಲಭ್ಯ ಒದಗಿಸಲಾಗಿದೆ.
? ರಾಜಸ್ಥಾನದಲ್ಲಿ ಇಂದಿರಾಗಾಂಧಿ ಕಾಲುವೆ ಪೂರ್ಣಗೊಂಡರೆ ಭಾರತಕ್ಕೆ ಮತ್ತೊಂದು ಅವಕಾಶ ಸಿಕ್ಕಂತಾಗು ತ್ತದೆ. ಪಂಜಾಬ್ ಮತ್ತು ಹರಿಯಾಣ ನಡುವಿನ ಸಟ್ಲೇಜ್ – ಯಮುನಾ ಜೋಡಣೆ ಕಾಮಗಾರಿ ಕುರಿತ ವಿವಾದ ದಿಂದ ಸಟ್ಲೆಜ್ ಮತ್ತು ರಾವಿ ನದಿಗಳ ೩೦ ಲಕ್ಷ ಎಕರೆ ಅಡಿ ನೀರು ಪಾಕಿಸ್ತಾನಕ್ಕೆ ಹರಿದು ಹೋಗುತ್ತಿದೆ. ಈ ವಿವಾದ ಬೇಗ ಇತ್ಯರ್ಥ ಗೊಂಡರೆ ಪಾಕಿಸ್ತಾನಕ್ಕೆ ಹರಿದು ಹೋಗುವ ನೀರನ್ನು ರಾಜಸ್ಥಾನದ ಕಡೆಗೆ ತಿರುಗಿಸ ಬಹುದು.
? ಭಾರತಕ್ಕೆ ಪಶ್ಚಿಮ ವಲಯದ ನದಿಗಳಲ್ಲಿ ಅಂದರೆ ಜೀಲಂ, ಸಿಂಧೂ, ಚೀನಾಬ್ ಗಳಲ್ಲಿ ಒಟ್ಟು ೩೬ ಲಕ್ಷ ಎಕರೆ ಅಡಿ ( ಎಂಎಫ್) ನೀರು ಸಂಗ್ರಹಿಸು ವುದಕ್ಕೆ ಅವಕಾಶವಿದೆ. ಇಂತಹ ದೊಡ್ಡ ಅಣೆಕಟ್ಟುಗಳನ್ನು ಇದುವರೆಗೂ ನಿರ್ಮಿಸಿಲ್ಲ. ಜಮ್ಮು ಮತ್ತು ಕಾಶ್ಮೀರದ ನೀರಾವರಿ ಮತ್ತು ವಿದ್ಯುತ್ ಅಗತ್ಯ ಪೂರೈಸುವುದಕ್ಕೆ ಇಂತಹ ಚಿಕ್ಕ ಅಣೆಕಟ್ಟುಗಳು ಸಹಕಾರಿ. ಕೃಷಿಗೆ ನೀರು ಹಾಗೂ ವಿದ್ಯುತ್ ಕೊರತೆಯಿಂದಾಗಿ ಅಲ್ಲಿನ ಕೃಷಿಕರು ಸಂಕಷ್ಟದಲ್ಲಿದ್ದಾರೆ. ಜೀಲಂ, ಚೀನಾಬ, ಸಿಂಧೂ ನದಿಗಳ ನೀರಿನ ಪಾಲನ್ನು ಭಾರತ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತಿಲ್ಲ.
ಈ ಮೂರು ನದಿಗಳ ನೀರಿನ ಅರಿವಿಗೆ ತಡೆಯೊಡ್ಡಿ ಅಣೆಕಟ್ಟುಗಳನ್ನು ಕಟ್ಟುವ ಅಧಿಕಾರ ಭಾರತಕ್ಕೆ ಇದೆ ಮತ್ತು ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳ ಬಹುದು. ಈ ನಿಟ್ಟಿನಲ್ಲಿ ರಾವಿ ನದಿಗೆ ಭಾರತವು ಅಣೆಕಟ್ಟನ್ನು ಕಟ್ಟಿದ್ದು ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂತಹ ಹೊಡೆತ ನೀಡಿದೆ. ಮುಂದಿನ ದಿನಗಳಲ್ಲಿ ಸಿಂಧೂ ನದಿ ನೀರಿನ ಕುರಿತು ಪಾಕಿಸ್ತಾನಕ್ಕೆ ಮತ್ತಷ್ಟು ಆಘಾತ ಎದುರಿಸುವುದು ಸ್ಪಷ್ಟ.