Wednesday, 11th December 2024

ಅಮರ ಪ್ರೇಮಕಥೆಯ ದುರಂತ ನಾಯಕಿ !

ಯಶೋ ಬೆಳಗು

ಯಶೋಮತಿ ಬೆಳಗೆರೆ

yashomathy@gmail.com

ಪ್ರೀತಿಯೆಂಬ ಅಮಲಿನಲ್ಲಿರುವಾಗ ನಿಜ ಜೀವನದ ಅರಿವು ಪ್ರೇಮಿಗಳಿಗೆ ಉಂಟಾಗುವುದಿಲ್ಲ. ಆರಂಭದಲ್ಲಿ ಗಾಢವಾಗಿ ಪ್ರೀತಿಸುವ ಪ್ರೇಮಿಗಳು ನಂತರ ವಿವಿಧ ಕಾರಣಗಳಿಂದ ದೂರವಾಗುತ್ತಾರೆ. ಆದರೆ ಪ್ರೀತಿಯಿಂದ, ಪ್ರೀತಿಗಾಗಿ, ಪ್ರೀತಿಗೋಸ್ಕರ ಬದುಕಿದವರು ಅಮರ ಪ್ರೇಮಿಗಳಾಗುತ್ತಾರೆ.

ಪ್ಯಾರ್ ಕಿಯಾ ತೊ ಡರ್ ನಾ ಕ್ಯಾ? ಪ್ಯಾರ್ ಕಿಯಾ ಕೋಯಿ ಚೋರಿ ನಹೀ ಕೀ ಅನ್ನುತ್ತಲೇ ಮನಸ್ಸುಗನ್ನು ಕದಿಯುತ್ತಾ ಪ್ರೀತಿಯ ಜೇಡರ ಬಲೆಯಲ್ಲಿ ಸಿಲುಕಿದ ಪ್ರತಿಯೊಬ್ಬ ಪ್ರೇಮಿಯಲ್ಲೂ ರೋಮಿಯೋ-ಜೂಲಿಯೆಟ್, ಲೈಲಾ- ಮಜನೂ, ಹೀರ್-ರಾಂಜಾ ಇದ್ದೇ ಇರುತ್ತಾರೆ. ಪ್ರೀತಿಯೆಂಬ ಅಮೃತದ ಅಮಲಿನಲ್ಲಿರುವಾಗ ನೈಜ ಜೀವನದ ವಿಷಘಳಿಗೆಗಳ ಅರಿವೇ ಇರುವುದಿಲ್ಲ. ಹೀಗಾಗಿ ಒಂದಾದ ಪ್ರೇಮಿಗಳು ನಂತರ ನಾನಾ ಕಾರಣಗಳಿಂದ ದೂರಾಗುವುದನ್ನು ನಮ್ಮ ಸುತ್ತಮುತ್ತ ಲಲ್ಲಿ ನಾವು ನೋಡುತ್ತೇವೆ.

ಜೊತೆಯಲ್ಲಿ ಉಳಿದು ಭಾವಹೀನರಾಗಿ ಯಾಂತ್ರಿಕ ಬದುಕು ನಡೆಸುತ್ತಿರುವವರು, ಸಿಕ್ಕ ಪ್ರೀತಿಯಾಚೆಗೆ ಕೈಚಾಚಿ ಕೈಸುಟ್ಟುಕೊಂಡವರು, ಪ್ರೀತಿಯನ್ನೇ ನಂಬಿ ಮೋಸ ಹೋದವರು, ಪ್ರೀತಿಯ ಹೆಸರಲ್ಲಿ ವಂಚಿಸು ವವರು, ಮೋಹವನ್ನೇ ಪ್ರೀತಿಯೆಂದು ನಂಬಿ ಮರುಳಾದವರು, ಪ್ರೀತಿಯ ಜೇನುಗೊಡಿನಲ್ಲಿ ಹೊರಳಾಡಿ ನರಳಿದವರು….. ಹೀಗೆ ಎಲ್ಲವನ್ನೂ ನೋಡುವಾಗ ಪ್ರೀತಿ ಸಿಗುವವರೆಗೂ ಸಿಹಿ ಜೇನಿನ ಆಸೆಯಿಂದ ಮರದ ಕಳಗೆ ತಿರುಗುವ ಮನಸ್ಸು ಸಿಕ್ಕ ಕೂಡಲೇ ಮಗ್ಗುಲು ಬದಲಿಸಿಬಿಡುತ್ತದೆ. ಹೀಗಾಗೀ ನಿಲುಕದೆ ದೂರ ಉಳಿದು ಹೋದ ಪ್ರೀತಿ ಆಸೆಯಾಗಿ, ನೆರಳಾಗಿ, ಮುದ ನೀಡುವ ನೆನಪಾಗಿ, ನಿರೀಕ್ಷೆಯಾಗಿ ಸದಾ ಕಾಡುವ ಗೀತೆಯಾಗಿ ಮನದಲ್ಲಿ ಗುನುಗುತ್ತಿರುತ್ತದೆ. ಆದರೆ ಪ್ರೀತಿಯಿಂದ, ಪ್ರೀತಿಗಾಗಿ, ಪ್ರೀತಿಗೋಸ್ಕರ ಜೀವತೆತ್ತ ಪ್ರೇಮಿಗಳು ಎಲ್ಲರ ಮನದಲ್ಲಿ ಅಮರ ಚಿತ್ರವಾಗಿ ಶಾಶ್ವತವಾಗಿ ಉಳಿದು ಹೋಗುತ್ತಾರೆ.

ಇಂತಹದ್ದೇ ಅಮರ ಕಥೆ ನಡೆದದ್ದು ಭಾರತ- ಪಾಕಿಸ್ತಾನಗಳ ನಡುವೆ ಹಂಚಿಹೋಗುವ ಮುನ್ನ ಹಚ್ಚ ಹಸಿರಿ ನಿಂದ ಕೂಡಿದ ಸಮೃದ್ಧವಾದ ಪಂಚನದಿಗಳ ರಾಜ್ಯವಾಗಿದ್ದ ಪಂಜಾಬಿನಲ್ಲಿ. ಸುಮಾರು ಹದಿನೈದು- ಹದಿನಾ ರನೇ ಶತಮಾನದಲ್ಲಿ ನಡೆದ ಘಟನೆಯನ್ನು ಆಧರಿಸಿ ೧೭೭೬ರಲ್ಲಿ ವಾರಿಸ್ ಷಾಹನು ರಚಿಸಿದ ಪ್ರೇಮಕಾವ್ಯ ಹೀರ್ -ರಾಂಜಾ ಅತ್ಯಂತ ಜನಪ್ರಿಯವೂ ಪಂಜಾಬಿ ಸಾಹಿತ್ಯದ ಕ್ಲಾಸಿಕ್‌ಗಳಲ್ಲಿ ಒಂದಾಗಿ ಮಾನವನ ಸೂಕ್ಷ್ಮಸಂವೇದನಾ ಶೀಲತೆಯನ್ನು ಒಳಗೊಂಡ ಹೃದಯಸ್ಪರ್ಶಿ ಕಥಾ ಹಂದರವುಳ್ಳ ಮಹಾಕಾವ್ಯ ವಾಗಿದೆ.

ಈ ಅಮರ ಕಥೆಯನ್ನು ಆಧರಿಸಿದ ಅನೇಕ ನಾಟಕಗಳು ಹಾಗೂ ಸಿನೆಮಾಗಳು ಸ್ವಾತಂತ್ರ್ಯ ಪೂರ್ವದಿಂದಲೂ ರಚಿತವಾಗಿದೆ. ಸಿಗುವ ದಾಖಲೆಗಳ ಪ್ರಕಾರ ಹೀರ್ ರಾಂಜಾರ ಅಮರ ಪ್ರೇಮಕಥೆ ಮೊತ್ತ ಮೊದಲ ಬಾರಿಗೆ ಚಲನಚಿತ್ರ ರೂಪವಾಗಿ ಮೂಡಿಬಂದಿದ್ದು ೧೯೨೮ನೇ ಇಸವಿಯಲ್ಲಿ. ಅದರ ನಂತರ ಅದೇ ಹೆಸರಿನ ಸಾಕಷ್ಟು ಚಲನಚಿತ್ರಗಳು ಬಂದು ಹೋದವಾದರೂ ೧೯೭೦ರಲ್ಲಿ ಹಿಂದಿ ಭಾಷೆಯಲ್ಲಿ ಚೇತನ್ ಆನಂದ್‌ರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬಂದ ಅದ್ಭುತ ಮಹಾಕಾವ್ಯದಂತಹ ಚಿತ್ರ ಹೀರ್-ರಾಂಜಾ!

ಕೈಫಿ ಅಜ್ಮಿಯ ಸಾಹಿತ್ಯಕ್ಕೆ ಮದನ್ ಮೋಹನ್‌ರ ಸಂಗೀತವಿರುವ ಚಿತ್ರಗೀತೆಗಳು ಇಂದಿಗೂ ಸಂಗೀತ ಪ್ರೇಮಿಗಳಿಗೆ ರಸದೌತಣ! ನಿಗೂಢ ವ್ಯಕ್ತಿತ್ವದ ಹಿಂದಿಯ ರಾಜಕುಮಾರ್ ರಾಂಜಾ ಪಾತ್ರವಾಗಿ ಕಲ್ಲುಮನಸುಗಳನ್ನೂ ಕರಗಿಸಿದರೆ, ಪಂಜಾಬಿನ ಮುಗ್ಧ ಚೆಲುವಿನ ಹೀರ್ ಪಾತ್ರದಲ್ಲಿ ಮಿಲೋ ನ ತುಮ್ ತೊ ಹಮ್ ಗಬರಾಯೆ ಮಿಲೋ ತೋ ಆಂಖ್ ಚುರಾಯೆ ಹಮೆ ಕ್ಯಾ ಹೋಗಯಾ ಹೈ! ಎಂದು ಹಾಡುತ್ತ ಗಮನ ಸೆಳೆದ ಚಿತ್ರದ ನಾಯಕಿ ಪ್ರೀಯಾ ರಾಜವಂಶ್!

೧೯೩೦ ಎಂಬ ವರುಷ ಕೊನೆಯಾಗಲಿಕ್ಕೆ ಇನ್ನೇನು ಒಂದೇ ಒಂದು ದಿನ ಬಾಕಿ ಉಳಿದಿದ್ದ ಡಿಸೆಂಬರ್ ೩೦ನೇ ತಾರೀಖಿನರಂದು ಶಿಮ್ಲಾದಲ್ಲಿ ಜನಿಸಿದ qಛ್ಟಿZ oಛ್ಞಿbZ oಜ್ಞಿಜe ನಂತರ ಪ್ರಿಯಾ ರಾಜವಂಶ್ ಆಗಿ ಬದಲಾಗಿ ಚಲನಚಿತ್ರರಂಗದಲ್ಲಿ ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ನಟಿಸಿದರೂ ಇಂದಿಗೂ ಎಲ್ಲ ಚಿತ್ರಪ್ರೇಮಿಗಳ ನೆನಪಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.

ಭಾರತ ಹಾಗೂ ಚೀನಾದ ನಡುವೆ ೧೯೬೨ರಲ್ಲಿ ನಡೆದ ಮೋಸದ ಯುದ್ಧದ ಘಟನೆಗಳು ಜನರಲ್ಲಿ ಭಾರೀ ಆಕ್ರೋಶ ಉಂಟು ಮಾಡಿದ್ದ ಸಂದರ್ಭದಲ್ಲಿ ಅದೇ ಕಥೆಯನ್ನು ಆಧರಿಸಿ ಹಕೀಕತ್ ಚಿತ್ರ ನಿರ್ಮಾಣದ ತಯಾರಿಯಲ್ಲಿದ್ದ ಅದರ ನಿರ್ಮಾಪಕ, ನಿರ್ದೇಶಕ ಚೇತನ್ ಆನಂದ್, ಚಿತ್ರದ ನಾಯಕ ಕ್ಯಾಪ್ಟನ್ ಬಹಾದ್ದೂರ್ ಸಿಂಗ್‌ನ ಪಾತ್ರವಾಗಿ ಸುರದ್ರೂಪಿ ನಟ ಧರ್ಮೇಂದರನ್ನೂ, ಅವರ ಪ್ರೇಮಿಯ ಪಾತ್ರವಾಗಿ ಅದರ ನಾಯಕಿಯ ಪಾತ್ರಕ್ಕೆ ಪ್ರೀಯಾರನ್ನು ಆಯ್ಕೆ ಮಾಡಿದಾಗ ಆಕೆಗೆ ಕೇವಲ ೨೨ ವರ್ಷ! ಚೇತನ್ ಆನಂದ್‌ರಿಗೆ ೩೭ ವರ್ಷ. ನಡುವೆ ಹದಿನೈದು ವರುಷಗಳ ಅಂತರವಿದ್ದರೂ ಪ್ರೀತಿ ಸೂಜಿಗಲ್ಲಿನಂತೆ ಸೆಳೆಯುತ್ತದೆ.

ಝರಾ ಸಿ ಆಹಟ್ ಹೋತೀ ಹೈ ತೊ ದಿಲ್ ಸೋಚ್ ತಾ ಹೈ ಕಹೀ ಯೆ ವೊ ತೊ ನಹೀ ಎನ್ನುವ ಅದ್ಭುತವಾದ ಹಾಡಿನ ಚಿತ್ರೀಕರಣದ ಸಂದರ್ಭದಲ್ಲಿ ಪರಸ್ಪರರ ನಡುವೆ ಸ್ನೇಹ ಬೆಳೆದರೂ ಅದು ಮದುವೆಯ ಬಂಧನದೊಳಗೆ ಸಿಲುಕಿ ಕೊಳ್ಳದೆ ತಮ್ಮದೇ ಆದ ಘನತೆಯಿಂದ ಬದುಕು ಕಟ್ಟಿಕೊಂಡು ಎಲ್ಲರ ಎದೆಯಲ್ಲಿ ಗೌರವವನ್ನು ಉಳಿಸಿಕೊಳ್ಳುತ್ತದೆ. ೧೯೨೧ಜನವರಿ ಮೂರರಂದು ಪಾಕಿಸ್ತಾನದ ಲಾಹೋರಿನಲ್ಲಿ ಜನಿಸಿದ ಚೇತನ್ ಆನಂದ್ ಪ್ರಖ್ಯಾತ ಹಿಂದಿ ಚಲನಚಿತ್ರ ನಟ ದೇವ್ ಆನಂದ್‌ರ ಒಡಹುಟ್ಟಿದ ಸಹೋದರ-ಸಹೋದರಿಯರಾದ ವಿಜಯ ಆನಂದ್, ಮನಮೋಹನ ಆನಂದ್, ದೇವ್ ಆನಂದ್ ಹಾಗೂ ಶೀಲಾ ಕಾಂತಾ ಕಪೂರ್‌ರಲ್ಲಿ ಚೇತನ್ ಆನಂದ್ ಕೂಡಾ ಒಬ್ಬರು!

೧೯೮೯ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಕವಿತಾ ಚೌಧುರಿಯ ಉಡಾನ್ ಧಾರಾವಾಹಿಯ ಸಹನಿರ್ದೇಶಕ, ಹಾಗೂ ಮಾಸೂಮ ಚಿತ್ರ ನಿರ್ದೇಶಕ. ಅದಕ್ಕಿಂತ ಹೆಚ್ಚಾಗಿ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟ ಬ್ಯಾಂಡಿಟ್ ಕ್ವೀನ್ ಪೂಲನ್ ದೇವಿ ಚಿತ್ರ ನಿರ್ದೇಶಕ ಶೇಖರ್ ಕಪೂರ್, ಶೀಲಾ ಕಾಂತಾ ಕಪೂರ್‌ರ ಪುತ್ರ! ಹಿಂದೂ ಧರ್ಮಗ್ರಂಥಗಳನ್ನು ಅಭ್ಯಸಿಸಿದ ಚೇತನ್ ಆನಂದ್ ಆರಂಭದಲ್ಲಿ ಇತಿಹಾಸವನ್ನು ಕಲಿಸಿಕೊಡುವ ಉಪನ್ಯಾಸಕರಾಗಿ, ನಂತರ ಸ್ಕ್ರೀಪ್ ರೈಟರ್
ಆಗಿ, ನಟರಾದರೂ ಅಷ್ಟೇನೂ ಯಶಸ್ಸು ಕಾಣದಾದಾಗ ತಮ್ಮ ಸಹೋದರನಾಗಿದ್ದ ದೇವ್ ಆನಂದ್‌ರ ನವಕೇತನ ಪ್ರೊಡಕ್ಷನ್‌ನಲ್ಲಿ ಅಸೋಸಿಯೇಟ್ ಡೈರಕ್ಟರ್ ಆಗಿ ಕಾರ್ಯ ನಿರ್ವಹಿಸಿ ನಂತರ ತಮ್ಮದೇ ಆದ ಹೊಸ ತಂಡ ಕಟ್ಟಿಕೊಂಡು ಹಿಮಾಲಯಾಸ್ ಪಿಲ್ಸ್ಂ ಅನ್ನುವ ಬ್ಯಾನರಿನಡಿ ಸಾಕಷ್ಟು ಯಶಸ್ವಿ ಚಿತ್ರಗಳನ್ನು ಕೊಟ್ಟವರು.

ತಮ್ಮ ವಿದ್ಯಾಭ್ಯಾಸವನ್ನೆಲ್ಲ ಶಿಮ್ಲಾದ ಮುಗಿಸಿದ ಪ್ರೀಯಾ ನಾಟಕಗಳೆಡೆಗೆ ಆಕರ್ಷಿತರಾಗಿದ್ದರು. ತಮ್ಮ ಕಾಲೇಜಿನ ದಿನಗಳಿಂದಲೂ ಒಂದೆರಡು ಇಂಗ್ಲಿಷ್ ನಾಟಕಗಳಲ್ಲಿ ಅಭಿನಯಿಸಿದ್ದು ಇದಕ್ಕೆ ಸಾಕ್ಷಿಯಾಗಿದೆ. ಅಂತಹ ಪ್ರಸಿದ್ಧ ಹಾಗೂ ಪ್ರತಿಭಾವಂತ ಕುಟುಂಬದ ಹಿನ್ನೆಲೆಯುಳ್ಳ ಚೇತನ್ ಆನಂದ್‌ರ ಪತ್ನಿ ಉಮಾ ಆನಂದ್ ಒಮ್ಮೆ ಚಂಡೀಗಢದಲ್ಲಿ ಏರ್ಪಡಿಸಿದ್ದ ನಾಟಕವೊಂದರಲ್ಲಿ ಪ್ರೀಯಾ ರಾಜವಂಶರ ನಟನೆಯನ್ನು ಕಂಡು ಬಹಳ ಇಷ್ಟವಾಗಿ ಅವರನ್ನು ಪರಿಚಯಿಸಿ ಕೊಂಡು ಅವರಿಗೆ ತಮ್ಮ ಪತಿಯ ವಿಳಾಸ ಹಾಗೂ ಸಂಪರ್ಕಿಸಲು ಬೇಕಾದ ನಂಬರ್ ಇದ್ದ ವಿಸಿಟಿಂಗ್  ಕಾರ್ಡ್ ಕೊಟ್ಟು ಅವರನ್ನು ಒಮ್ಮೆ ಭೇಟಿ ಮಾಡಲು
ಹೇಳುತ್ತಾರೆ.

ಆದರೆ ಪ್ರೀಯಾ ಹೆಚ್ಚಿನ ಕಲಿಕೆಗಾಗಿ ಅನಿವಾರ್ಯವಾಗಿ ಲಂಡನ್ನಿಗೆ ತೆರಳಬೇಕಾಗಿದ್ದರಿಂದ ಅವರನ್ನು ಭೇಟಿಯಾಗಲು ಸಾಧ್ಯವಾಗುವುದಿಲ್ಲ. ನಂತರ  ಟqsZ ZZbಛಿಞqs ಟ್ಛ ಈZಞZಠಿಜ್ಚಿ Zಠಿ ನಲ್ಲಿ ಅವರ ಶಿಕ್ಷಣ ಪೂರೈಸಿದ ಬಳಿಕ ತಮ್ಮ ಭಾವಚಿತ್ರವನ್ನು ಚೇತನ್ ಆನಂದ್‌ರಿಗೆ ಲಂಡನ್ನಿನಿಂದಲೇ ಪೋಸ್ಟ್ ಮಾಡುತ್ತಾರೆ. ತಮ್ಮ ನೂತನ ಚಿತ್ರ ಹೀರ್ ರಾಂಜಾ ಚಿತ್ರದ ನಾಯಕಿಯ ಪಾತ್ರಕ್ಕಾಗಿ ಮುಗ್ಧವಾದ ಹೊಸ ಚೆಲುವಿನ ಮುಖದ ಹುಡುಕಾಟದಲ್ಲಿದ್ದಾಗ ಕಣ್ಣಿಗೆ ಬಿದ್ದ ಪ್ರಿಯಾರ ಭಾವಚಿತ್ರ ಕಂಡು ಅವರನ್ನೇ ತಮ್ಮ ಚಿತ್ರದ ನಾಯಕಿಯ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲು ಇಚ್ಛಿಸಿ ಬಾಂಬೆಗೆ ಕೂಡಲೇ ಬನ್ನಿ ಎನ್ನುವ ಟೆಲಿಗ್ರಾಮ್ ಕಳಿಸತ್ತಾರೆ.

ಸಂದೇಶ ಸಿಕ್ಕ ತಕ್ಷಣ ಮುಂಬೈಗೆ ಬಂದಿಳಿದ ಪ್ರಿಯಾ, ಚಿತ್ರದ ನಾಯಕಿಯ ಪಾತ್ರಕ್ಕೆ ಆಯ್ಕೆಯಾದರೂ ದುರದೃಷ್ಟವಶಾತ್ ಚಿತ್ರ ನಿರ್ಮಾಣವನ್ನು ಅನಿವಾರ್ಯ ಕಾರಣಗಳಿಂದಾಗಿ ಮೂಂದೂಡಲಾಗುತ್ತದೆ. ಇದರ ನಡುವೆಯೇ ಹಕೀಕತ್ ಅನ್ನುವ ಚಿತ್ರದಿಂದ ಪ್ರೀಯಾ ತಮ್ಮ ಸಿನಿಮಾ ಜೀವನವನ್ನು ಆರಂಭಿಸುತ್ತಾರೆ.
ಇದರ ನಡುವೆಯೇ ಚೇತನ್ ಆನಂದ್ ಹಾಗೂ ಉಮಾ ಆನಂದ್‌ರ ದಾಂಪತ್ಯದಲ್ಲಿ ಬಿರುಕು ಮೂಡಲು ಆರಂಭವಾಗಿರುತ್ತದೆ. ಇಬ್ಬರ ನಡುವೆ ಹೊಂದಾಣಿಕೆಯ ಸಮಸ್ಯೆ ಎದುರಾಗಿ ಚೇತನ್ ಪತ್ನಿ ಉಮಾರಿಂದ ದೂರ ಉಳಿಯುತ್ತಾರೆ.

ಪರಸ್ಪರ ಒಪ್ಪಿಗೆಯಿದ್ದರೂ ಆ ದಿನಗಳಲ್ಲಿ ಕಾನೂನಿನ ಪ್ರಕಾರ ವಿಚ್ಛೇದನದ ಅವಕಾಶವಿರದಿದ್ದ ಕಾರಣ, ದೂರ ಉಳಿದರೂ ಸಮಾಜದಲ್ಲಿ ಪತಿ-ಪತ್ನಿಯರಾಗಿಯೇ ಉಳಿಯಬೇಕಾಗಿತ್ತು. ಇದೇ ಸಮಯದಲ್ಲಿ ಹೀರ್ ರಾಂಜಾ ಚಿತ್ರ ನಿರ್ಮಾಣ ಆರಂಭಗೊಳ್ಳುತ್ತದೆ. ಹಕೀಕತ್ ಸಿನಿಮಾದ ಮೂಲಕ ಎರಡು-ಮೂರು ವರುಷಗಳ ಒಡನಾಟದಿಂದ ಪ್ರಿಯಾ ಹಾಗೂ ಚೇತನ್ ಆನಂದ್‌ರ ನಡುವೆ ಆತ್ಮೀಯತೆ ಬೆಳೆದು ಬಿಟ್ಟಿತ್ತು. ನಂತರ ಹೀರ್ ರಾಂಜಾ ಸಿನಿಮಾ ಮುಗಿ ಯುವಷ್ಟ ರಲ್ಲಿ ಪರಸ್ಪರರಲ್ಲಿ ಪ್ರೀತಿಯ ಹೂವು ಚಿಗರೊಡೆದಿತ್ತು.

ನಂತರದ ದಿನಗಳಲ್ಲಿ ಪ್ರಿಯಾ ಸಂಪೂರ್ಣವಾಗಿ ಚೇತನ್ ಆನಂದರಿಗೆ ಮಾತ್ರ ಮುಡಿಪಾಗಿದ್ದು ಬಿಡುತ್ತಾರೆ. ಅವರ ಚಿತ್ರ ನಿರ್ಮಾಣಗಳಲ್ಲಿ ಹಾಗೂ ಅವರ ಬದುಕಿನ ಆರೈಕೆಯಲ್ಲಿ ಬದುಕನ್ನು ಕಳೆಯುವಂತಾಗಿದ್ದರಿಂದ ನಟನೆಯಿಂದ ದೂರ ಇರಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಅವರ ಒಡನಾಟದ ಬಗ್ಗೆ ಆನಂದ್ ಕುಟುಂಬದಗಲೀ, ಪ್ರಿಯಾ ಕುಟುಂಬದಗಲೀ ಯಾವುದೇ ರೀತಿಯ ಅಪಸ್ವರ ಏಳುವುದಿಲ್ಲ. ಅದು ಕೇವಲ ದೈಹಿಕ ಅಗತ್ಯಗಳಿಗಾಗಿ ಜೊತೆಯಾದ ಔಜಿqಛಿ ಜ್ಞಿ ಛ್ಝಿZಠಿಜಿಟ್ಞoeಜಿm ಆಗದೇ, ಗೇಲಿಯ ವಿಷಯವಾಗದೇ ಘನತೆಯಿಂದ, ಗೌರವದಿಂದ, ನೋಡಿದ ಪ್ರತಿಯೊಬ್ಬರೂ ಮೆಚ್ಚುವಂತಹ ಸಂಬಂಧ ಇಟ್ಟುಕೊಂಡಿರು ತ್ತಾರೆ. ಏನೇ ಸಿಟ್ಟು, ಸೆಡವುಗಳಿದ್ದರೂ ಅದು ಕ್ಷಣಿಕ ಮಾತ್ರ. ಮತ್ತದೇ ನಗುವಿನಲಿ, ಒಲುವಿನಲಿ ಒಂದಲ್ಲ  ಎರಡಲ್ಲ, ಸರಿ ಸುಮಾರು ಮೂವತ್ತೈದು ವರುಷ ಆನಂದದಿಂದ ಜೊತೆ ಜೊತೆಯಾಗಿರುತ್ತಾರೆ.

ಆದರೆ ೧೯೯೭ರಲ್ಲಿ ಅನಾರೋಗ್ಯದಿಂದಾಗಿ ತಮ್ಮ ೮೨ನೇ ವಯಸ್ಸಿನಲ್ಲಿ ಚೇತನ್ ಆನಂದ್ ಈ ಜಗತ್ತಿನಿಂದ ನಿರ್ಗಮಿಸಿದ ನಂತರ ಪ್ರಿಯಾಳಿಗೆ ಬದುಕು ದುರ್ಭರವಾಗುತ್ತದೆ. ಚೇತನ್ ಆನಂದ್ ಮಾಡಿದ ಒಂದು ವಿಲ್ಲಿನಿಂದಾಗಿ ಅವರ ಮುಂಬೈನ ಜುಹು ಬೀಚ್ ಬಳಿಯಿದ್ದ ಬಂಗಲೆಯಲ್ಲಿ ಚೇತನ್ ಆನಂದ್ ತನ್ನ ಮಕ್ಕಳಿಂದಲೇ ೨೭ ಮಾರ್ಚ್ ೨೦೦೦ರಂದು ಕೊಲೆಯಾಗಿ ಸಾವನ್ನಪ್ಪುತ್ತಾರೆ. ಅಮರ ಪ್ರೇಮಕಥೆಯ ದುರಂತ ನಾಯಕಿಯ ಪಾತ್ರವಾದ ಹೀರ್ ಆಗಿ ತಮ್ಮ ಮುಗ್ಧ ಚೆಲುವಿನಿಂದ ಎಲ್ಲರ ಮನಸೆಳೆದ ಪ್ರಿಯಾ ರಾಜವಂಶ್, ನಿಜ ಜೀವನದ ಬದುಕು ಸಹ ದುರಂತದ ಕೊನೆಯಾದದ್ದು ಮಾತ್ರವಿಪರ್ಯಾಸ!