Sunday, 15th December 2024

ಮಹಿಳೆಗೆ ದೊರೆಯುತ್ತಿದೆಯೇ ಸಾಮಾಜಿಕ ನ್ಯಾಯ ?

ತನ್ನಿಮಿತ್ತ

ಡಾ.ಹೇಮಾ ದಿವಾಕರ್‌ 

ವಿಶ್ವ ಸಾಮಾಜಿಕ ನ್ಯಾಯ ದಿನದ ಈ ಸಂದರ್ಭದಲ್ಲಿ ಮಹಿಳೆಯರ ಬಗ್ಗೆ ನಾವು ಗಂಭೀರವಾಗಿ ಯೋಚನೆ ಮಾಡುವುದು ಸೂಕ್ತವೆನಿಸುತ್ತದೆ. ಮನೆಗಷ್ಟೇ ಸೀಮಿತವಾಗಿದ್ದ ಹೆಣ್ಣು ಮಗಳು ಈಗ ಕಾಲಿಡದ ಕ್ಷೇತ್ರವೇ ಇಲ್ಲ. ಗಂಡಿನಂತೆ ಸರಿಸಮಾನವಾಗಿ ಕೆಲಸ ನಿರ್ವಹಿಸಬ ಅನ್ನೋದನ್ನು ಇಂದು ಸಾಧಿಸಿ ತೋರಿಸಿದ್ದಾಳೆ.

ಇಷ್ಟೆಲ್ಲ ಸಾಧನೆ ಮಾಡಿರುವ ಮಹಿಳೆಗೆ ಸಾಮಾಜಿಕ ನ್ಯಾಯ ಸಿಕ್ಕಿದೆಯೇ? ಹಾಗಿದ್ದರೆ ಮಹಿಳೆ ಸಮಾಜಕ್ಕಾಗಿ ನೀಡಿದ ಕೊಡುಗೆ ಏನು? ಆಕೆಗೆ ಸಿಕ್ಕಿರುವ ಅವಕಾಶ ಎಷ್ಟು? ಇದೆಲ್ಲದರ ಬಗ್ಗೆ ವಿಶ್ವ ಸಾಮಾಜಿಕ ನ್ಯಾಯದ ದಿನದಂದು ನಾವು ಚರ್ಚಿಸಬೇಕಿರುವ ಅನಿವಾರ್ಯತೆ ಇದೆ. ಮಹಿಳೆ ಇಂದು ಎಲ್ಲ ಕ್ಷೇತ್ರದಲ್ಲೂ ಮುಂದಿದ್ದಾಳೆ. ಪೈಲೆಟ್ ಆಗಿzಳೆ. ಯುದ್ಧ ವಿಮಾನ ಓಡಿಸುತ್ತಾಳೆ. ಗಗನದೆತ್ತರಕ್ಕೆ ಹಾರುತ್ತಾಳೆ. ವೈದ್ಯೆಯಾಗಿ ನೊಂದವರ ನೋವಿಗೆ ಸ್ಪಂದಿಸುತ್ತಾಳೆ. ಬಾಹ್ಯಕಾಶ ನೆಲಕ್ಕೂ ಕಾಲಿಟ್ಟಿದ್ದಾಳೆ. ಒಟ್ಟಾರೆ ಹೇಳುವುದಾದರೆ ಆಕೆ ಇಂದು ಸಾಧನೆ ಮಾಡದ ಕ್ಷೇತ್ರವೇ ಇಲ್ಲ.

ಜಾಗತಿಕವಾಗಿ, ೧೩೦ ಮಿಲಿಯನ್ ಹುಡುಗಿಯರು ಶಾಲೆಯಲ್ಲಿಲ್ಲ, ತುಂಬಾ ಹೆಣ್ಣು ಮಕ್ಕಳು ಶಾಲೆಯಲ್ಲಿರಲು ಮತ್ತು ಶಿಕ್ಷಣ ವನ್ನು ಪಡೆಯಲು ಹೆಣಗಾಡುತ್ತಿದ್ದಾರೆ. ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಬಡತನ, ಬಾಲ್ಯವಿವಾಹ, ಶಾಲೆಯಲ್ಲಿ ಹಿಂಸಾಚಾರ, ಶಾಲೆಗೆ ಹೋಗಲು ಬಲು ದೂರ ಹಾಗೂ ಶೌಚಾಲಯಗಳ ಕೊರತೆ ಹೆಣ್ಣು ಮಕ್ಕಳು ಗುಣಮಟ್ಟದ ಶಿಕ್ಷಣವನ್ನು ಪಡೆಯುವುದನ್ನು ತಡೆಯುವಂತೆ ಮಾಡುತ್ತಿವೆ. ಹೆಣ್ಣು ಸಮಾಜದ ಕಣ್ಣು, ಆಕೆಯ ಆರೋಗ್ಯ, ಸವಾಲು ಹಾಗೂ ಸಾಮಾಜಿಕ ನ್ಯಾಯದ ಕಡೆಗೆ
ಗಮನ ಹರಿಸುವುದು ಎಲ್ಲರ ಜವಾಬ್ದಾರಿ.

ಸಮಾಜದಲ್ಲಿ ಮಹಿಳೆಯರು ಇತರ ಲಿಂಗಗಳಂತೆ ಸಂತೋಷದಿಂದ ಬದುಕಬೇಕು. ಮುಂದಿನ ದಿನಗಳನ್ನು ಆಕೆ ಉತ್ಸಾಹದಿಂದ ಬರಮಾಡಿಕೊಳ್ಳಬೇಕು. ಈ ಕನಸನ್ನು ನನಸಾಗಿಸಲು ಕೆಲಸ ಮಾಡೋಣ. ಹೆಣ್ಣು ಮಕ್ಕಳು ಮತ್ತು ಯುವತಿಯರೊಂದಿಗೆ ಬೆನ್ನೆಲುಬಾಗಿ ನಿಂತು ಅವರಲ್ಲಿ ನಾಯಕತ್ವ ಬೆಳೆಸಲು ಉತ್ತೇಜಿಸುವುದು ನಮ್ಮೆಲ್ಲರ ಹೊಣೆ. ಅವರ ಕಲಿಕೆಗೆ, ಜೀವನದಲ್ಲಿ ಮುಂದೆ ಬರುವುದಕ್ಕೆ, ಅವರ ನಿರ್ಧಾರಕ್ಕೆ ಮತ್ತು ಆಕೆಯ ಸಂಪೂರ್ಣ ಬೆಳವಣಿಗೆಗೆ ಸಹಾಯ ಮಾಡಲು ಪುರುಷರು ಮತ್ತು ಯುವಕರು ಸೇರಿದಂತೆ ಎಲ್ಲಾ ಸಮುದಾಯದ ಸದಸ್ಯರು ಮತ್ತು ನಾಯಕರೊಂದಿಗೆ ಕೆಲಸ ಮಾಡಬೇಕಾಗಿದೆ.

ಲಿಂಗ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಸಾಧಿಸಲು ಮಹಿಳೆಯರ ಸಬಲೀಕರಣ ಮಾಡುವುದು ಅತ್ಯಗತ್ಯ. ಹೆಣ್ಣು ಇಂದು ಗಂಡ, ಮನೆ, ಮಕ್ಕಳು ಅಂತ ಸೀಮಿತವಾಗಿಲ್ಲ. ಇದೆಲ್ಲವನ್ನು ನಿಭಾಯಿಸುವುದರ ಜತೆಗೆ ಕೆಲಸಕ್ಕೂ ಹೋಗಿ ಸ್ವಾಭಿಮಾನದ ಜೀವನವನ್ನು ನಡೆಸುತ್ತಿzಳೆ. ಸಂಸಾರ ರಥವನ್ನೆಳೆಯಲು ಪತಿಗೆ ಸಾಥ್ ನೀಡುತ್ತಾಳೆ. ಬಿಡುವಿಲ್ಲದ ಸಮಯ ದಲ್ಲೂ ಆಕೆ ಹೆಚ್ಚು ಕ್ರಿಯಾಶೀಲವಾಗಿರುತ್ತಾಳೆ. ಒತ್ತಡವನ್ನು ನಿಭಾಯಿಸುವ ಶಕ್ತಿಯನ್ನು ಮೈಗೂಡಿಸಿಕೊಂಡಿzಳೆ. ಎಂತಹ ಸಾಧನೆಗೂ ನಾನು ಸಿದ್ಧ ಅನ್ನುವ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದ್ದಾಳೆ.

ಕರೋನಾ ಸಂದರ್ಭದಲ್ಲಿ ಮಹಿಳೆಯರು ಸ್ವಾಸ್ಥ್ಯ ಸಮಾಜಕ್ಕೋಸ್ಕರ ಮಾಡಿದ ಕೆಲಸಕ್ಕೆ ಬೆಲೆ ಕಟ್ಟಲಾಗದು. ಸಾವಿರಾರು ಮಹಿಳೆಯರು ವೈದ್ಯರಾಗಿ, ನರ್ಸ್‌ಗಳಾಗಿ, ಪೊಲೀಸ್ ಆಗಿ ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ. ಸರಕಾರೇತರ ಸಂಘ ಸಂಸ್ಥೆ ಯಲ್ಲಿರುವ ಮಹಿಳೆಯರು ಬೀದಿ ಬದಿಯ ಜನರಿಗೆ ಆಹಾರದ ಪೊಟ್ಟಣಗಳನ್ನು ಹಿಡಿದುಕೊಂಡು ಹಂಚಿದ್ದಾರೆ. ವೀರ ಹೋರಾಟದಲ್ಲಿ ಹಲವಾರು ಮಂದಿ ಕರೋನಾ ತೆಕ್ಕೆಗೆ ಸಿಲುಕಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕರೋನಾಕ್ಕೂ ಅಂಜದೇ ಆಕೆ ಮಾಡಿರುವ ಕೆಲಸಕ್ಕೆ ಇಡೀ ನಾಗರಿಕ ಸಮಾಜವೇ ಸೆಲ್ಯೂಟ್ ಹೊಡೆದಿದೆ.

ಮಹಿಳೆ ಇಷ್ಟೆ ಸಾಧನೆ ಮಾಡಿದರೂ ಸಹ, ಬೇರೆ ಬೇರೆ ರೀತಿಯ ಸವಾಲುಗಳು ಮಹಿಳೆಯರಿಗೆ ಎದುರಾಗುತ್ತಿವೆ. ಮಾನಸಿಕ ಒತ್ತಡ, ಆರೋಗ್ಯದ ಸಮಸ್ಯೆ, ಸಂಸಾರವನ್ನು ನಿಭಾಯಿಸಬೇಕಿರುವ ಒತ್ತಡ, ಲೈಂಗಿಕ ಕಿರುಕುಳ, ಲಿಂಗ ಅಸಮಾನತೆ, ಶಿಕ್ಷಣದ ಕೊರತೆ ಈ
ಎಲ್ಲಾ ಸವಾಲುಗಳ ಮುಳ್ಳಿನಿಂದ ಹೊರಬರಲು ಮಹಿಳೆ ಒzಡುತ್ತಿzಳೆ. ಪ್ರಪಂಚದಾದ್ಯಂತ ಲಕ್ಷಾಂತರ ಹೆಣ್ಣು ಮಕ್ಕಳು ಈ ಸಂಕಷ್ಟ ದಿಂದ ಪಾರಾಗಲು ಹರಸಾಹಸ ಪಡುತ್ತಿzರೆ. ಇದು ಅವರ ಸಾಧನೆಗೂ ಅಡ್ಡಿಯಾಗುತ್ತಿದೆ.