Saturday, 14th December 2024

ಸಾಮಾಜಿಕ ಕ್ಷೋಭೆಯ ಹೊಣೆ ಸಿದ್ದು, ಸ್ವಾಮಿ ಹೊರಬೇಕಾಗುತ್ತದೆ

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್

journocate@gmail.com

ಗಲಭೆಗೊಳಗಾದ ಪ್ರದೇಶವಿನ್ನೂ ಸಹಜ ಸ್ಥಿತಿಗೆ ಮರಳಿರುವುದಿಲ್ಲ, ಮತ್ತೆ ಗಲಭೆ ನಡೆದರೂ ನಡೆಯಬಹುದೆಂಬ ವಾತಾವರಣ ನೆಲೆಸಿರುತ್ತದೆ.

ಅಂತಹ ಪ್ರಕ್ಷುಬ್ಧ ವಾತಾವರಣವನ್ನು ಇಂಗ್ಲಿಷ್ ಮಾಧ್ಯಮ uneasy calm ಎಂದು ವರ್ಣಿಸುತ್ತದೆ. ವಾಸ್ತವವಾಗಿ, ಸ್ವಾತಂತ್ರ್ಯೋ ತ್ತರದಲ್ಲಿ ಅತ್ಯಂತ ಹೆಚ್ಚು ಕಾಲ ದರ್ಬಾರು ನಡೆಸಿದ ಕಾಂಗ್ರೆಸ್‌ನ ಆಳ್ವಿಕೆಯುದ್ದಕ್ಕೂ ದೇಶ ಕಂಡಿರುವುದು ಅದೇ ಆತಂಕದ ಶಾಂತತೆಯನ್ನು. ಒಡೆದಾಳುವ ನೀತಿಯನ್ನು ಕಲಾಪ್ರಕಾರದ ಮಟ್ಟಕ್ಕೇರಿಸಿದ್ದ ಬ್ರಿಟಿಷರ ಅನಿಷ್ಟಾಚಾರವನ್ನು ಕಾಂಗ್ರೆಸ್ ಮುಂದುವರೆಸಿಕೊಂಡು ಬಂದಿದೆ. ಆ ರೋಗ ದೇಶಾ ದ್ಯಂತ ಹರಡಿದೆ.

ಮುಸ್ಲಿಮರ/ಕಿರಿಸ್ತಾನರ ತುಷ್ಟೀಕರಣವೂ ಒಡೆದಾಳುವ ನೀತಿಯ ಮುಖ್ಯ ಭಾಗವೇ ಆಗಿದೆ. ಅದರ ಹಿಂದೆ ಸ್ವಾರ್ಥ ಬಿಟ್ಟರೆ ಬೇರೇನೂ ಇಲ್ಲ. ಅವರನ್ನು ಒಲಿಸಿಕೊಳ್ಳುವು ದೆಂದರೆ, ಬಹುಸಂಖ್ಯಾತ ಹಿಂದೂಗಳನ್ನು ನಗಣ್ಯರನ್ನಾಗಿಸುವುದು. ಅಮಾನೀಕರಣ ಗೊಂಡ ಹಿಂದೂಗಳನ್ನು ಮುಸ್ಲಿಂ ಉಗ್ರರ ಬಲಿಪೀಠಕ್ಕೆ ಸಿದ್ಧಪಡಿಸುವುದು. ಬೆಲೆಯಿಲ್ಲದ ವಸ್ತುವನ್ನು ಬಿಸಾಡುವುದು ಸಲೀಸಲ್ಲವೇ!

ಆಲ-ಖೈದಾ ಮುಖ್ಯಸ್ಥ ಮೊಹಮದ್ ಅಲ್-ಜವಾಹಿರಿ ಮಂಡ್ಯದ ಮುಸ್ಲಿಂ ಯುವತಿ ಮುಸ್ಕಾನಳ ಬೆನ್ನನ್ನು ತಟ್ಟಿ ಶಹಬ್ಬಾಸ್‌ಗಿರಿ ನೀಡಿರುವುದು ಇಡೀ ಭಾರತವನ್ನು ಬೆಚ್ಚೆ ಬ್ಬಿಸಬೇಕಾದ ವಿಷಯ. ಉದ್ಯೋಗವನ್ನರಸುವ ಎಂ.ಬಿ.ಎ. ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಕ್ಯಾಂಪಸ್ ರೆಕ್ರೂಟ್ಮೆಂಟ್ ನಡೆಸುವ ಬೃಹತ್ ಕಂಪನಿಗಳಂತೆ ಆಲ್-ಖೈದಾ ಉಗ್ರರನ್ನು ತಯಾರುಮಾಡಲಿಕ್ಕಾಗಿ ಭಾರತ ದೆಡೆ ಗಾಳ ಹಾಕಿದೆ.

ಅಮೆರಿಕ ಹೊಸಕಿ ಹಾಕಿದ ಭಯೋತ್ಪಾದಕ ಚಕ್ರವರ್ತಿ ಒಸಾಮಾ ಬಿನ್-ಲಾಡೆನ್ನಿನ ನಿಕಟವರ್ತಿ ಜವಾಹಿರಿಯನ್ನೂ ಖಂಡಿಸ ಲಾಗದ ಹೇಯಕರ ಸ್ಥಿತಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯನ್ನು ಇಂದು ಕಾಣು ತ್ತಿದ್ದೇವೆ. ಅಧಿಕಾರದ ಮೋಹ ಇವರ ಮನಸ್ಸನ್ನು ಅದೆಷ್ಟು ಕೆಡಿಸಿರಬಹುದು. ದೇಶದ ಭದ್ರತೆಯ ವಿಚಾರದಲ್ಲೂ ಉಡಾಫೆ ಮಾತನಾಡುವ ಈ ನಾಯಕದ್ವಯರಿಗೆ ಒಂದು ವಿಚಾರವನ್ನು ನೆನಪಿಸುತ್ತೇನೆ. ಇತ್ತೀಚೆಗೆ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನಕ್ಸಲ್ ನಾಯಕನೊಬ್ಬನ ತಲಾಷ್ ನಡೆಸುವಾಗ ಕಂಡುಕೊಂಡ ಆಘಾತಕಾರಿ ವಿಚಾರವೆಂದರೆ ನಕ್ಸಲರಿಗಷ್ಟೇ ಅಲ್ಲದೆ, ಪಾಶವೀ ಕೃತ್ಯಗಳಿಗೆ ಮತ್ತೊಂದು ಹೆಸರಾದ ಇಸ್ಲಾಮಿಕ್ ಸ್ಟೇಟ್ (IS)ಗೆ ಕೂಡಾ ದಕ್ಷಿಣ ರಾಜ್ಯಗಳ ಅರಣ್ಯಪ್ರದೇಶಗಳು ಅಡಗುದಾಣ ವಾಗಿರುವುದು.

ವೀರಪ್ಪನ್ ಮತ್ತವನ ಸಹಚರರಿಗೆ ಅಡಗುದಾಣವನ್ನು ಒದಗಿಸಿದ್ದು ನೀಲಗಿರಿಯ ಕಾಡೇ. ರಾಜೀವ್ ಗಾಂಧಿ ಹತ್ಯೆಯ ನಂತರ ಅದರ ಪಿತೂರಿಯಲ್ಲಿ ಪಾಲ್ಗೊಂಡಿದ್ದ LTTE ಉಗ್ರರು ಅವಿತುಕೊಂಡಿದ್ದು ಮಂಡ್ಯ ಜಿಲ್ಲೆ ಮುತ್ತತ್ತಿ ಕಾಡಿನ. ಈ ಎರಡೂ ಅರಣ್ಯಪ್ರದೇಶಗಳಲ್ಲಿ ಆ ಅವಧಿಯಲ್ಲಿ ನಾನೂ ಸುತ್ತಾಡಿದ್ದೇನೆ. ಹತ್ಯೆಯ ಪ್ರಮುಖ ಆರೋಪಿ ಶಿವರಸನ್ನನ್ನು ಬೆಂಗಳೂರಿನಲ್ಲಿ ಬಂಧಿಸುವ ಮುನ್ನ LTTE ಕನ್ನಂಬಾಡಿ ಕಟ್ಟೆಯನ್ನು ಸೋಟಿಸುವ ಬೆದರಿಕೆ ಒಡ್ಡಿದ್ದನ್ನು ವರದಿ ಮಾಡಿದ್ದೇನೆ. ಮಾನವ ಮೌಲ್ಯ ಗಳ ಸೋಂಕೇ ಇಲ್ಲದ IS ಹುಚ್ಚು ನಾಯಿಗಳು ಇದೇ ಭಾಗದಲ್ಲಿ ತರಬೇತಿ ಕೇಂದ್ರಗಳನ್ನು ತೆರೆಯಲು ಸಿದ್ಧರಿದ್ದು, ಬಾಂಬ್ ತಯಾ ರಿಕೆಗೆ ಸಜ್ಜಾಗುತ್ತಿರುವ ಸಮಯದಲ್ಲಿ ಘೆಐಅ ಕ್ಷಿಪ್ರ ಕಾರ್ಯಾಚರಣೆ ನಡೆಸಿ ದುಷ್ಕೃತ್ಯವನ್ನು ವಿಫಲವಾಗಿಸಿದೆ.

ಮಂಡ್ಯದ ಶಿವನಸಮುದ್ರದ ಬಳಿ ವಿಧ್ವಂಸಕ ಕೃತ್ಯಗಳ ಘಟಕಗಳನ್ನು ಸ್ಥಾಪಿಸಲು IS  ನರರಾಕ್ಷಸರಿಗೆ ಸಹಾಯಹಸ್ತ ನೀಡಿದ್ದ ವನು ನಮ್ಮ ಬೆಂಗಳೂರಿನ ಮುಸಲ್ಮಾನ ಮೆಹಬೂಬ್ ಪಾಶ ಎಂಬ ದೇಶದ್ರೋಹಿ. NIA ಸಲ್ಲಿಸಿರುವ ದೋಷಾರೋಪ ಪಟ್ಟಿ ಯಲ್ಲಿ ಹೆಸರಿಸಲಾದ ಇಪ್ಪತ್ತು ಭಾರತೀಯ ಮುಸ್ಲಿಮರಲ್ಲಿ ಇವನದ್ದೂ ಒಂದು ಹೆಸರು. ಮಿಸ್ಟರ್ ಸಿದ್ದರಾಮಯ್ಯ ಈ ಹೆಸರು ಆರ್.ಎಸ್.ಎಸ್ ಕಡತಗಳಿಂದ ತೆಗೆದದ್ದಲ್ಲ. ಜಿಹಾದಿಗಳ ಪ್ರಾಬಲ್ಯ ದಕ್ಷಿಣದಲ್ಲೂ ಹೆಚ್ಚುತ್ತಿರುವುದಕ್ಕೆ ಮುಖ್ಯ ಕಾರಣ ಓಲೈಕೆ ರಾಜಕಾರಣವೆಂದು ವರದಿಮಾಡಿದೆ.

ಸ್ವಾರ್ಥವನ್ನು ಮೈಯ ತುಂಬಿಕೊಂಡಿರುವ ನಿಮಗೆ ಸೈದ್ಧಾಂತಿಕ ತತ್ವಗಳು ಬೇರೆ ಕೇಡು. ನಾಡಿನ ಜನತೆಯ ಅಸ್ತಿತ್ವದ ಪ್ರಶ್ನೆ ಇದು, ಅದರ ಜತೆ ಚಕ್ಕಂದವಾಡಬೇಡಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರೇ. ನಿಮ್ಮ ರಾಜಕೀಯ ತಾಯಿ ಬೇರಿರುವ ಮೈಸೂರು ಮತ್ತು ಮಂಡ್ಯದ ಜನ ನಿಮಗೀಗಾಲೇ ಬಿಸಿ ಮುಟ್ಟಿಸಿzರೆ, ಆದರೆ ಅದರಿಂದ ನೀವಿಬ್ಬರೂ ಬುದ್ಧಿ ಕಲಿತಿಲ್ಲ. ನೆನಪಿ ರಲಿ, ನಿಮ್ಮ ಮೂಲಗುಣವಾದ ಹೊಣೆಗೇಡಿತನದ ಕಾರಣದಿಂದ ಮೈಸೂರು, ಮಂಡ್ಯಗಳೂ ಸೇರಿದಂತೆ ರಾಜ್ಯದ ಯಾವುದೇ ಭಾಗ ಕೋಮುಕ್ಷೋಭೆ ಗೊಳಗಾದರೆ ಅದಕ್ಕೆ ನೀವಿಬ್ಬರೇ ಹೊಣೆ ಹೊರಬೇಕಾಗುತ್ತದೆ.

ಓದುಗರೇ, ಬೇಜವಾಬ್ದಾರಿ ನಾಯಕರುಗಳ ಮಾತುಗಳಿಗೆ ಸೊಪ್ಪು ಹಾಕಬೇಡಿ. ದಿ ಕಾಶ್ಮೀರ್ ಫೈಲ್ಸ್ ಚಿತ್ರ ನಿಮ್ಮ ಕಣ್ಣು ತೆರೆಸಿದ್ದು ನಿಜವೇ ಆಗಿದ್ದಲ್ಲಿ, ಅವೇ ಕಣ್ಣುಗಳಿಂದ ನಮ್ಮ ನೆರೆಹೊರೆಯಲ್ಲಿ ಏನಾಗುತ್ತಿದೆ ಎಂಬುದನ್ನು ಗಮನಿಸಿ. ಬಿಜೆಪಿಯ ಕೆಲವರೂ ಸೇರಿದಂತೆ ಯಾವುದೇ ನಿಷ್ಪ್ರಯೋಜಕ ನಾಯಕರ ಕವಡೆ ಕಿಮ್ಮತ್ತಿಲ್ಲದ ಮಾತುಗಳಿಗೆ ಕಿವಿಗೊಡಬೇಡಿ.

(ದನಿ ಉಡುಗಿಹೋದ ಹಳ್ಳಿ ಹಕ್ಕಿಯೂ ಮುಸ್ಲಿಮರಿಗಷ್ಟೇ ಪಥ್ಯವಾಗುವಂತಹ ಮಾತುಗಳನ್ನಾಡುತ್ತಾ ಇಂದಿನ ರಾಜಕಾರಣಕ್ಕೆ ತಾನೇಕೆ ಅಪ್ರಸ್ತುತವೆಂದು ಮತ್ತೊಮ್ಮೆ ತೋರಿಸಿದೆ.) ವಾತಾವರಣ ಪ್ರಕ್ಷುಬ್ಧವಾಗಿದೆ. ಇವರು ಇವತ್ತಿರುತ್ತಾರೆ, ನಾಳೆ ಹೋಗುತ್ತಾರೆ ಎಂದುಕೊಂಡು ನಿರುಮ್ಮಳವಾಗಿರುವಂತಿಲ್ಲ. ಏಕೆಂದರೆ, ಅವರು ಹೋದರೂ ಸಂತತಿ ಮುಂದುವರಿಯುತ್ತದೆ. ಅದನ್ನು ತಡೆ ಗಟ್ಟುವ ಕೆಲಸ ನಮ್ಮದಾಗಬೇಕು. ನಿಜ, ನಮ್ಮ ಆಯ್ಕೆ ಸೀಮಿತ. ಕುರುಡುಗಣ್ಣಿಗಿಂತ ಮೆಳ್ಳಗಣ್ಣು ಮೇಲೆ ಎಂಬಂತಹ ಅಸಹಾ ಯಕ ಪರಿಸ್ಥಿತಿ. ಆದರೆ, ಮೆಳ್ಳಗಣ್ಣಿಗೆ ಸರ್ಜರಿ ಮಾಡಿಸಿ ದೃಷ್ಟಿಯನ್ನು ನೇರಗೊಳಿಸಬಹುದು. ಬೆತ್ತಲಾದ ರಮೇಶ್ ಜಾರಕಿಹೊಳಿ ಯನ್ನೂ, ಅಂಥ ದೇ ಹಿನ್ನೆಲೆಯ ಇತರ ಸಚಿವಾಕಾಂಕ್ಷಿಗಳನ್ನೂ ಸಂಪುಟದಿಂದ ಹೊರಗಿಡುವ ಮೂಲಕ ತನ್ನದು ಮೆಳ್ಳ ಗಣ್ಣಷ್ಟೇ ಎಂದು ರಾಜ್ಯದ ಜನತೆಗೆ ಸಾಬೀತುಗೊಳಿಸಬೇಕಾದ ಹೊಣೆ ಭಾರತೀಯ ಜನತಾ ಪಕ್ಷದ ಮೇಲಿದೆ.

ನರೇಂದ್ರ ಮೋದಿಯೆಂಬ ನಾಯಕನನ್ನು ಪಡೆಯಲು ತಮಗೆ ಯೋಗ್ಯತೆಯಿದೆ ಎಂದು ಜನರಿಗೆ ತುರ್ತಾಗಿ ಮನದಟ್ಟು ಮಾಡಿ ಕೊಡುವ ಜವಾಬ್ದಾರಿ ರಾಜ್ಯ ಬಿಜೆಪಿ ನಾಯಕರದ್ದು. ಕೇವಲ ಮೋದಿಯ ವರ್ಚಸ್ಸಿನಿಂದ ಎಲ್ಲ ಸಮಯದಲ್ಲೂ ಮತಗಳಿಸ ಲಿಕ್ಕಾಗುವುದಿಲ್ಲ ಎಂಬುದನ್ನು ಅವರು ಅರಿಯಬೇಕು. ರ್ಷನ ಹತ್ಯೆಯ ಬೆನ್ನ ಮತ್ತೊಬ್ಬ ಹಿಂದೂ ಹುಡುಗ ಶಿವಮೊಗ್ಗದಲ್ಲಿ ಹಗೊಳಗಾಗಿzನೆ. ದಂಡನೆಗೆ ಬೆದರುವ ಜಾಯಮಾನ ತಮ್ಮದಲ್ಲ ಎಂಬ ಸಂದೇಶವನ್ನು ಮುಸ್ಲಿಮರು ಪ್ರದರ್ಶಿಸಿದ್ದಾರೆ.

ಅತ್ತ ಮುಳಬಾಗಿಲಿನ ಮುಸ್ಲಿಮರು ತಮ್ಮ ಜನಾಂಗವೇಕೆ ಶಿಲಾಯುಗದಿಂದ ಹೊರಬಂದಿಲ್ಲ ಎಂಬುದನ್ನು ರಾಮ ನವಮಿ ಪ್ರಯುಕ್ತ ಏರ್ಪಡಿಸಿದ್ದ ಮೆರವಣಿಗೆಯ ಮೇಲೆ ಕಲ್ಲುತೂರುವ ಮುಖಾಂತರ ತೋರಿಸಿzರೆ. ಗೋರಿಪಾಳ್ಯದಲ್ಲಿ ಉರ್ದು ಮಾತ ನಾಡದಿದ್ದುದಕ್ಕೆ ಚಂದ್ರು ಹೆಣವಾಗಿzನೆ.

ಹಿಂದೂಗಳೊಟ್ಟಿಗೆ ಸಾಮರಸ್ಯ ಕಾಪಾಡಿಕೊಳ್ಳುವುದಕ್ಕೆ ಮುಸ್ಲಿಮರು ಇಡಬೇಕಾದ ಹೆಜ್ಜೆಗಳು ಬಹಳಷ್ಟಿವೆ. ಮುರಿದ ಬಾಂಧವ್ಯ ವನ್ನು ರಿಪೇರಿಪಡಿಸುವ ಹೊಣೆ ಅವರ ಮೇಲೇ ಜಾಸ್ತಿ ಇದೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರ ಪ್ರದರ್ಶನದ ವೇಳೆಯಲ್ಲಿ ಆಜಾದಿ ಘೋಷಣೆ ಕೂಗುವ ಮೂಲಕ ಹಿಂದೂಗಳ ಮನವನ್ನು ಗೆಲ್ಲಲಾಗದು. ಇಂಥ ಸನ್ನಿವೇಶದಲ್ಲಿ, ಸರಕಾರದ ಮೇಲೆ ಬಹುಸಂಖ್ಯಾತ ಹಿಂದೂ ಗಳು ನಿರಂತರ ಒತ್ತಡ ಹೇರಲು ಅನುಕೂಲವಾಗುವಂತೆ ಇನ್ನಷ್ಟು ಅಂಶಗಳಿಲ್ಲಿವೆ.

* ಚೀನಾ ತನ್ನ ದೇಶದ ಒಂದೂವರೆ ಕೋಟಿಯಷ್ಟು ಯ್ಯುಗರ್ (Uyghur) ಮುಸ್ಲಿಮರನ್ನು ಹದ್ದುಬಸ್ತಿನಲ್ಲಿಡಬಹುದಾದರೆ, ಭಾರತಕ್ಕೂ ಅದು ಸಾಧ್ಯವಾಗಬೇಕು. ಭಾರತೀಯ ಮುಸ್ಲಿಮರ ಬಗ್ಗೆ ಮೃದು ಧೋರಣೆ ತಳೆದದ್ದು ಸಾಕು.
* ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಹಿಮ್ಮೆಟಿಸಿದೆಯೆಂಬ ವರದಿಗಳಿವೆ. ಜನಸಂಖ್ಯೆಯ ಸೋಟಕ್ಕೆ ಮುಸ್ಲಿಮರ ಕೊಡುಗೆ ಅಪಾರ. ಈ ಕುರಿತು ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಬೇಕಿದೆ. ಹೆಂಗಸರು ಮಕ್ಕಳ ವೆಂಡಿಂಗ್ ಮಷೀನ್ ಅಲ್ಲವೆಂಬುದನ್ನು ಮುಸ್ಲಿಂ ಸಮುದಾಯಕ್ಕೆ ವಿಶೇಷವಾಗಿ ಮನವರಿಕೆ ಮಾಡಿಕೊಡಬೇಕಿದೆ. ಹುಸಿ ಸೀವಾದಿಗಳಿಂದ ಅದು ಸಾಧ್ಯವಿಲ್ಲ. ವ್ಯಾಪಕ ಜಾಹಿರಾತಿನ ಆಂದೋಲನವನ್ನೇ ಹರಿಬಿಡಬೇಕು.
* ಮದರಾಸಗಳನ್ನು ಮುಲಾಜಿಲ್ಲದೆ ಮುಚ್ಚಿಸಬೇಕು.

ಆಧುನಿಕ ಶಿಕ್ಷಣ, ಆಧುನಿಕ ಚಿಂತನೆಗಳತ್ತ ಮುಸ್ಲಿಂ ಮನಸ್ಸುಗಳನ್ನು ತಿರುಗಿಸಬೇಕು. ಎಳೆಯದರಿಂದಲೇ, ಉದಾರ ಮನಃಸ್ಥಿತಿಗೆ ಪ್ರೇರೆಪಣೆ ನೀಡಿದರೆ ಅವರು ಸತ್ಪ್ರಜೆಗಳಾಗಬಲ್ಲರು. ಉತ್ತಮ ಸಂಸ್ಕಾರ ಪಡೆದ ಕಾರಣಕ್ಕೆ ಹಿಂದೂಗಳೆಲ್ಲರಿಂದ ಆರಾಧಿಸಲ್ಪಟ್ಟ ಅಬ್ದುಲ್ ಕಲಾಂ ಅವರಿಗಿಂತ ಉದಾಹರಣೆ ಬೇಕೇ?
* ಪ್ರಜಾಸತ್ತೆಯ ಮೌಲ್ಯಗಳಿಗೆ ವ್ಯತಿರಿಕ್ತವಾದ ಎ ಅಂಶಗಳನ್ನೂ ಮತೀಯ ಗ್ರಂಥಗಳಿಂದ ತೆಗೆಸಿ ಹಾಕಬೇಕು.

* ಹಿಂದೂಗಳನ್ನು ತುಚ್ಛವಾಗಿ ಕಾಣುವ ಪ್ರವೃತ್ತಿ ಕಿರಿಸ್ತಾನರಲ್ಲೂ ಹೆಚ್ಚಿದ್ದು, ಹಿಂದೂಗಳನ್ನೇ ಹಿಂದೂಗಳ ವಿರುದ್ಧ ಎತ್ತಿ ಕಟ್ಟುತ್ತಿರುವ ಹೀನ ಕೆಲಸದಲ್ಲಿ ಮಿಷನರಿಗಳು ಎಲ್ಲರಿಗಿಂತ ಮುಂದಿzರೆ. ಸ್ಲಮ್‌ಗಳೂ ಸೇರಿದಂತೆ ಹಿಂದೂ ಬಡಜನರು ವಾಸಿಸುವ ಪ್ರದೇಶದ ಎರಡು ಕಿ.ಮೀ ಪರಿಧಿಯಲ್ಲಿ ಚರ್ಚ್ ಅಥವಾ ಮಸೀದಿ ಕಟ್ಟುವುದಕ್ಕೆ ಅನುಮತಿ ನೀಡಬಾರದು.

* ಯಾವುದೇ ಪ್ರಾರ್ಥನೆಯ ಸ್ಥಳದಲ್ಲಿ ಪ್ರಾರ್ಥನೇತರ ವಿಷಯಗಳನ್ನು ಪ್ರಸ್ತಾಪಿಸದಂತೆ ಕಾನೂನು ತರುವುದು.
* ಮಸೀದಿಗಳಲ್ಲಿ ಸಿ.ಸಿ.ಟಿ.ವಿ. ಅಳವಡಿಸಿ ಅವುಗಳ ವೀಕ್ಷಣೆಯ ಜವಾಬ್ದಾರಿಯನ್ನು ಆಯಾ ಪ್ರದೇಶದ/ಬಡಾವಣೆಯ ನಾಗರಿಕ ಹಿತರಕ್ಷಣಾ ಸಂಘಗಳ ಉಸ್ತುವಾರಿಗೆ ವಹಿಸಬೇಕು.

*ಸಾಹಿತ್ಯ, ಸಂಗೀತಗಳಿಂದ ಕನ್ನಡಿಗರ ಮನಗೆದ್ದ ಕವಿ ನಿಸ್ಸಾರ್ ಅಹ್ಮದ್, ಗಾಯಕ -ಯಾಜ್ ಖಾನ್ ಮತ್ತು ಅಂಥ ಮುಸ್ಲಿಮ ರನ್ನು ಹಿಂದೂಗಳೇಕೆ ಒಳಬಿಟ್ಟುಕೊಳ್ಳುತ್ತಾರೆಂಬುದನ್ನು ಮುಸ್ಲಿಂ ಬಾಲಕ/ಬಾಲಕಿಯರಿಗೆ ವ್ಯಾಪಕವಾಗಿ ತಿಳಿಸಿಕೊಡಬೇಕು.

*ತೊಂಭತ್ತೊಂಭತ್ತು ಮಂದಿ ಅಪರಾಧಿಗಳು ಖುಲಾಸೆಯಾದರೂ ಸರಿ, ಒಬ್ಬ ಅಮಾಯಕನಿಗೆ ಶಿಕ್ಷೆಯಾಗಬಾರದೆಂಬ ನ್ಯಾಯ ವಿತರಣಾ ವ್ಯವಸ್ಥೆಯ ಮೂಲ ಉದಾತ್ತ ಆಶಯ ದುರುಪಯೋಗವಾಗುತ್ತಿದೆ. ಒಬ್ಬ ಭಯೋತ್ಪಾದಕನ ಹಕ್ಕನ್ನು ಸಂರಕ್ಷಿಸಲು ಸರ್ವೋಚ್ಚ ನ್ಯಾಯಾಲಯದ ಬಾಗಿಲು ಅವೇಳೆಯಲ್ಲೂ ಯಮುನೆಯಂತೆ ತೆರೆದುಕೊಳ್ಳುತ್ತದೆ. ಇದು ನಿಲ್ಲಬೇಕು. ವ್ಯವಸ್ಥೆಯ ಔದಾರ್ಯದ ಫಸಲನ್ನು ದುಷ್ಟರೇ ಬಳಸಿಕೊಳ್ಳುತ್ತಿದ್ದಾರೆ. ನೂರಾರು ಭಯೋತ್ಪಾದಕರು ಕಾನೂನಿನ ಕುಣಿಕೆಯನ್ನು ತಪ್ಪಿಸಿ ಕೊಂಡು, ಲಕ್ಷಾಂತರ ಕಾಶ್ಮೀರಿ ಸಂತ್ರಸ್ತರು ನ್ಯಾಯವಂಚಿತರಾಗಿದ್ದಾರೆ.

*ಎಲ್ಲಾ ರೀತಿಯ ಅಪರಾಧ ಪ್ರಕರಣಗಳಲ್ಲೂ ಆರೋಪಿಗಳನ್ನು ವಿವಿಧ ರೀತಿಯ ತಾಂತ್ರಿಕ ಕಾರಣಗಳ ಆಧಾರದ ಮೇಲೆ ಖುಲಾಸೆಗೊಳಿಸುವುದರಲ್ಲಿ ನಮ್ಮ ನ್ಯಾಯಾಂಗ ಪರಿಣತಿ ಪಡೆದಿದೆ. ಇದರ ಸಂಪೂರ್ಣ ಲಾಭವನ್ನು ಭಯೋತ್ಪಾದಕರೂ, ಅಪರಾಧಿಗಳೂ ಪಡೆಯುತ್ತಿದ್ದಾರೆ. ದಂಡನಾ- ಮನೋಭಾವವುಳ್ಳ (prosecution&minded) ನ್ಯಾಯಾಧೀಶರನ್ನು ನೇಮಕಾತಿ ಮಾಡುವ ಪರಿಪಾಠ ಬೆಳೆಯಬೇಕು.

ಅದಕ್ಕೂ ಮುಖ್ಯವಾಗಿ ಭಯೋತ್ಪಾದನೆ, ಕೋಮುಗಲಭೆ, ಕೋಮುಹತ್ಯೆ, ಪ್ರಕರಣಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡುವಂತೆ ತಿದ್ದುಪಡಿಯಾಗಬೇಕು. ಬಲಾತ್ಕಾರವಾಗಿ ಹಿಂದೂಗಳನ್ನು ಮತಾಂತರ ಮಾಡುವವರ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾನೂನಿನಡಿ ಪ್ರಕರಣ ದಾಖಲಿಸಬೇಕು.

* ಕಾಶ್ಮೀರ ಹತ್ಯಾಕಾಂಡವೂ ಸೇರಿದಂತೆ ಇತಿಹಾಸದಾದ್ಯಂತ ನಡೆದ ಯಾವುದೇ ಹಿಂಸೆಯಲ್ಲಿ ಪಾಲ್ಗೊಂಡ ಮುಸ್ಲಿಂ/ಕಿರಿಸ್ತಾನರ ದೌರ್ಜನ್ಯವನ್ನು ನಿರಾಕರಿಸುವುದನ್ನು ಶಿಕ್ಷಾರ್ಹ ಅಪರಾಧವನ್ನಾಗಿಸಬೇಕು.

* ಬುದ್ಧಿಜೀವಿಗಳೆಂಬ ಸೋಗಿನಲ್ಲಿ ಮತಾಂತರವನ್ನೂ, ಭಯೋತ್ಪಾದನೆಯನ್ನೂ ಬೆಂಬಲಿಸಿ ಹೇಳಿಕೆ ನೀಡುವ, ಲೇಖನ ಬರೆಯುವವರ ಆಸ್ತಿ ಮತ್ತು ಹಣಕಾಸು ವಿವರ ಜಾಲಾಡಬೇಕು. ಲೆಕ್ಕಕ್ಕೆ ಸಿಗದ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳ ಬೇಕು. ಮೇಲ್ನೋಟಕ್ಕೆ ತಪ್ಪಿತಸ್ಥರಾದವರ ಕಾಲ್ ವಿವರಗಳನ್ನೂ, ಇ -ಮೇಲ್‌ಗಳನ್ನೂ ತನಿಖೆಗೆ ಒಳಪಡಿಸಬೇಕು. ಪಾಸ್ ಪೋರ್ಟ್‌ಅನ್ನು ರದ್ದುಪಡಿಸಬೇಕು.

ಈ ಪರಿವರ್ತನೆಗಳನ್ನು ಸಾಧ್ಯವಾಗಿಸಲು ಯಾವುದೇ ಪಕ್ಷ ಅಥವಾ ನಾಯಕ ಹಿಂದೂ ಪರವಾಗೇನಿರಬೇಕಾಗಿಲ್ಲ. ನ್ಯಾಯದ ಪರವಾಗಿದ್ದು ದೇಶದ ಹಿತ ಬಯಸುವುದಿದ್ದರೆ ಸಾಕು. ಅಂತಹ ವ್ಯವಸ್ಥೆ ದೇಶಾದ್ಯಂತ ಬರುವವರೆವಿಗೂ ಹಿಂದೂಗಳು ಆತಂಕದ ಶಾಂತತೆಯ ದಿನಗಳೆಯುತ್ತಾರೆ.