Sunday, 15th December 2024

ಸಾಫ್ಟ್ ಪವರ್‌ಗೆ ಯಾರಿಂದ ಅಡ್ಡಿಯಾಗುತ್ತಿದೆ ?

ವಿಶ್ಲೇಷಣೆ

ಗಣೇಶ್ ಭಟ್, ವಾರಣಾಸಿ

ದೇಶವೊಂದು ತನ್ನ ವರ್ಚಸ್ಸು, ಮನವೊಲಿಕೆಯ ತಾಕತ್ತು ಹಾಗೂ ಆಕರ್ಷಣೆಯ ಮೂಲಕ ಪರದೇಶಗಳನ್ನು ಪ್ರಭಾವಿಸುವ ಸಾಮರ್ಥ್ಯವನ್ನು ‘ಸಾ-
ಪವರ್’ ಎನ್ನಲಾಗುತ್ತದೆ. ಇದು ಮಿಲಿಟರಿ ಶಕ್ತಿಯ ಮೂಲಕ ಅಥವಾ ಬಲವಂತವಾಗಿ ಹೇರುವ ಪ್ರಭಾವವಲ್ಲ; ತನ್ನ ಸಂಸ್ಕೃತಿ, ವಿದೇಶಾಂಗ ನೀತಿ, ರಾಜತಾಂತ್ರಿಕತೆ, ನಿರ್ಣಾಯಕ ನಾಯಕತ್ವ, ವಿಜ್ಞಾನ, ಆರ್ಥಿಕ ಶಕ್ತಿಗಳ ಮೂಲಕ ದೇಶವೊಂದು ಇತರ ದೇಶಗಳ ಮೇಲೆ ಬೀರುವ ಪ್ರಭಾವವಿದು.

‘ಭಾರತವು ತನ್ನ ಅಂತಾರಾಷ್ಟ್ರೀಯ ವರ್ಚಸ್ಸನ್ನು ವೃದ್ಧಿಸಿಕೊಳ್ಳಲು ಸಮ್ಮಾನ, ಸಂವಾದ, ಸಮೃದ್ಧಿ, ಸುರಕ್ಷತೆ, ಸಂಸ್ಕೃತಿ ಮತ್ತು ಸಭ್ಯತೆ ಎಂಬ ಪ್ರಮುಖ
ಕಾರ್ಯತಂತ್ರಗಳನ್ನು ಬಳಸಿಕೊಳ್ಳುತ್ತಿದೆ’ ಎನ್ನುತ್ತಾರೆ ಭಾಸ್ವತಿ ಮುಖರ್ಜಿ. ‘ವಸುಧೈವ ಕುಟುಂಬಕಂ’ ಎಂಬುದು ಭಾರತವು ಜಗತ್ತಿಗೆ ಕೊಟ್ಟ ಶ್ರೇಷ್ಠ ತತ್ವ
ವಾಗಿದೆ. ೨೦೨೩ರ ಜಿ-೨೦ ದೇಶಗಳ ಒಕ್ಕೂಟದ ಅಧ್ಯಕ್ಷತೆ ವಹಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸಿರುವ ಭಾರತವು, ಈ ವರ್ಷದ ಜಿ-೨೦ ಕಾರ್ಯ ಕ್ರಮ
ಗಳಿಗೆ ಈ ತತ್ತ್ವವನ್ನೇ ಧ್ಯೇಯವಾಕ್ಯವನ್ನಾಗಿ ಬಳಸಿ ಕೊಂಡಿತ್ತು. ಭಾರತವಿಂದು ೧೨೧ ರಾಷ್ಟ್ರಗಳ ‘ಸಾಫ್ಟ್ ಪವರ್’ ಪಟ್ಟಿಯಲ್ಲಿ ಜಾಗತಿಕವಾಗಿ ೨೮ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿನ ಅಗ್ರಗಣ್ಯ ೩೦ ದೇಶಗಳನ್ನು ಹೆಚ್ಚು ‘ಮೃದುಶಕ್ತಿ’ ಇರುವ ರಾಷ್ಟ್ರಗಳೆಂದು ಪರಿಗಣಿಸಲಾಗುತ್ತದೆ.

ದೇಶವನ್ನು ಮುನ್ನಡೆಸುವ ಪ್ರಧಾನಿ ಅಥವಾ ಅಧ್ಯಕ್ಷರು, ಇತರ ರಾಷ್ಟ್ರಗಳ ಮುಖ್ಯಸ್ಥರೊಡನೆ ಎಂಥ ಸಂಬಂಧಗಳನ್ನು ಇಟ್ಟುಕೊಂಡಿರುತ್ತಾರೆ ಎಂಬುದೂ ಆಯಾ ದೇಶಗಳ ಸಾಫ್ಟ್ ಪವರ್ ಅನ್ನು ನಿರ್ಧರಿಸುತ್ತದೆ. ಜಿ-೭, ಜಿ-೨೦ ರಾಷ್ಟ್ರಗಳ ಸಮ್ಮೇಳನಗಳು, ಬ್ರಿಕ್ಸ್ ಸಭೆ ಅಥವಾ ಇತ್ತೀಚೆಗೆ ದುಬೈ ನಲ್ಲಿ ನಡೆದ ‘ಕಾನರೆನ್ಸ್ ಆಫ್ ದಿ ಪಾರ್ಟೀಸ್’ನ (ಸಿಒಪಿ) ೨೮ನೇ ಅಧಿವೇಶನ ಹೀಗೆ ಎಲ್ಲೇ ಆಗಲಿ ಪ್ರಧಾನಿ ಮೋದಿಯವರು ಅತ್ಯಂತ ಚಟುವಟಿಕೆ ಯಿಂದಿರುತ್ತಾರೆ.

ವಿವಿಧ ದೇಶಗಳ ಮುಖ್ಯಸ್ಥ ರೊಂದಿಗೆ ಔಪಚಾರಿಕ ಮತ್ತು ಅನೌಪಚಾರಿಕವಾಗಿ ಬೆರೆಯುತ್ತಾರೆ, ವೈಯಕ್ತಿಕ ಬಾಂಧವ್ಯಗಳನ್ನಿಟ್ಟು ಕೊಳ್ಳುತ್ತಾರೆ. ಇಂಥ
ಸಭೆಗಳಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ವಿವಿಧ ದೇಶಗಳ ಪ್ರಧಾನಿ/ಅಧ್ಯಕ್ಷರು ಮೋದಿಯವರಿದ್ದಲ್ಲಿಗೆ ಬಂದು ಮಾತನಾಡಿಸಿದ್ದಿದೆ, ಸೆಲಿ ತೆಗೆಸಿಕೊಳ್ಳಲು ಹಾತೊರೆದಿ ದ್ದಿದೆ. ಇತ್ತೀಚಿನ ಸಿಒಪಿ ಸಭೆಯಲ್ಲಿ ಇಟಲಿಯ ಪ್ರಧಾನಿ ಮೆಲೋನಿಯವರು ಮೋದಿಯವರೊಂದಿಗೆ ಸೆಲ್ಫಿ ತೆಗೆದು ಕೊಂಡಿದ್ದು ಮಾಧ್ಯಮ ಗಳಲ್ಲಿ ಸುದ್ದಿಯಾಗಿತ್ತು.

ಸಮ್ಮೇಳನದ ಕೊನೆಯಲ್ಲಿ ನಡೆಯುವ ಫೋಟೋ ಸೆಷನ್‌ನಲ್ಲಿ ನಮ್ಮ ಪ್ರಧಾನಿಗೆ ಮೊದಲ ಸಾಲಿನಲ್ಲೇ ಸ್ಥಾನವಿರುತ್ತದೆ. ಆದರೆ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್‌ರು ತಮ್ಮ ಸಂಕೋಚದ ಸ್ವಭಾವದಿಂದಾಗಿ ಜಾಗತಿಕ ಸಮ್ಮೇಳನ ಗಳಲ್ಲಿ ಮೂಲೆಗೊತ್ತಲ್ಪಡು ತ್ತಿದ್ದರು. ಭಾರತೀಯ ಯೋಗ ಪದ್ಧತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ಯಾವುದೇ ಯತ್ನಗಳು ಭಾರತದ ಈ ಹಿಂದಿನ ಸರಕಾರಗಳ ವತಿಯಿಂದ ಆಗಿರಲಿಲ್ಲ. ಮೋದಿ ಸರಕಾರದ ಯತ್ನದ ಫಲವಾಗಿ ವಿಶ್ವಸಂಸ್ಥೆಯು ಜೂನ್ ೬ನ್ನು ‘ವಿಶ್ವ ಯೋಗದಿನ’ವನ್ನಾಗಿ ಅಂಗೀ ಕರಿಸಿದ್ದು, ಇದೀಗ ಜಗತ್ತಿನ ಎಲ್ಲಾ ದೇಶಗಳು ಇದನ್ನು ಆಚರಿಸುತ್ತಿವೆ.

ಯೋಗವು ಪ್ರಪಂಚಕ್ಕೆ ಭಾರತವು ನೀಡಿದ ಕೊಡುಗೆ ಎಂಬುದನ್ನು ಜಗತ್ತು ಒಪ್ಪಿ ಕೊಂಡಂತಾಗಿದೆ. ‘ಒಬ್ಬ ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್’
ಎಂಬ ಧ್ಯೇಯವಾಕ್ಯದೊಂದಿಗೆ ‘ಇಂಟರ್‌ನ್ಯಾಷನಲ್ ಸೋಲಾರ್ ಅಲಯೆನ್ಸ್’ ಎಂಬ ಒಕ್ಕೂಟವನ್ನು ಆರಂಭಿಸಿದ ಭಾರತವು ಜಾಗತಿಕ ಶ್ಲಾಘನೆಗೆ ಪಾತ್ರ
ವಾಗಿದೆ. ಕರೋನಾ ಮಹಾಮಾರಿಯ ಕಾಲದಲ್ಲಿ ನೂರಕ್ಕೂ ಹೆಚ್ಚಿನ ದೇಶಗಳಿಗೆ ಭಾರತವು ವ್ಯಾಕ್ಸಿನ್ ಗಳನ್ನು ಪೂರೈಸಿದ್ದು, ಬಹಳಷ್ಟು ದೇಶಗಳ ಮುಖ್ಯಸ್ಥರು ವಿಶ್ವಸಂಸ್ಥೆಯ ಅಽವೇಶನದಲ್ಲಿನ ತಮ್ಮ ಭಾಷಣ ಗಳಲ್ಲಿ ಭಾರತದ ಈ ನೆರವನ್ನು ನೆನೆದಿದ್ದಾರೆ. ಈ ಪೈಕಿ ಪಪುವಾ ನ್ಯೂಗಿನಿ ದೇಶದ ಪ್ರಧಾನಿಯಂತೂ ಮೋದಿಯವರ ಪಾದಮುಟ್ಟಿ ಕೃತಜ್ಞತೆ ವ್ಯಕ್ತಪಡಿಸಿದ್ದುಂಟು.

ಜಿ-೨೦ ದೇಶಗಳ ಒಕ್ಕೂಟಕ್ಕೆ ಆಫ್ರಿಕನ್ ಯೂನಿಯನ್ ಅನ್ನು ಸೇರಿಸುವಂತೆ ಪ್ರಸ್ತಾಪಿಸಿದ ಭಾರತಕ್ಕೆ ಇಡೀ ಆಫ್ರಿಕಾದ ದೇಶಗಳು ಧನ್ಯವಾದ ಹೇಳಿವೆ. ಇಂಡೋನೇಷ್ಯಾ, ಮಾರಿಷಸ್, ಕತಾರ್ ಸೇರಿದಂತೆ ೨೦ ದೇಶಗಳು ಭಾರತೀಯರಿಗೆ ವೀಸಾ ರಹಿತ ಪ್ರವೇಶ ನೀಡುತ್ತಿದ್ದರೆ, ಇನ್ನೂ ೩೩ ದೇಶಗಳು
ಭಾರತೀ ಯರು ತಮ್ಮಲ್ಲಿಗೆ ತಲುಪುತ್ತಿದ್ದಂತೆ ವೀಸಾ ನೀಡುವ (ವೀಸಾ ಆನ್ ಅರೈವಲ್) ವ್ಯವಸ್ಥೆ ಮಾಡಿವೆ. ಭಾರತದ ‘ಸಾಫ್ಟ್ ಪವರ್’ ಹೆಚ್ಚಾಗಿರುವು ದನ್ನು ಈ ಬೆಳವಣಿಗೆಗಳು ಸೂಚಿಸುತ್ತವೆ.

ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಸಂಜಾತರು ಅಥವಾ ಭಾರತೀಯ ಮೂಲದ ವ್ಯಕ್ತಿಗಳು, ತಾವಿರುವ ನೆಲೆ ಗಳಲ್ಲಿ ಭಾರತದ ಪ್ರಭಾವವು ಹೆಚ್ಚಲು
ಕಾರಣರಾಗಿದ್ದಾರೆ. ಸತ್ಯಾ ನಾಡೆಲ್ಲಾ (ಮೈಕ್ರೋಸಾ-), ಸುಂದರ್ ಪಿಚೈ (ಗೂಗಲ್), ವಸಂತ್ ನರಸಿಂಹನ್ (ನೋವರ್ಟೀಸ್), ಶಂತನು ನಾರಾ
ಯಣ್ (ಅಡೋಬ್), ಅರವಿಂದ್ ಕೃಷ್ಣನ್ (ಐಬಿಎಂ), ಲಕ್ಷ್ಮಣ್ ನರಸಿಂಹನ್ (ಸ್ಟಾರ್ ಬಕ್ಸ್) ಹೀಗೆ ಬೃಹತ್ ಜಾಗತಿಕ ಸಂಸ್ಥೆಗಳ ಸಿಇಒಗಳಾಗಿದ್ದಾರೆ ಭಾರತೀಯ ಮೂಲದ ೩೦ಕ್ಕೂ ಅಧಿಕ ವ್ಯಕ್ತಿಗಳು. ಭಾರತೀಯ ಮೂಲದವರು ಇಂಗ್ಲೆಂಡ್, ಸಿಂಗಾಪುರ, ಮಾರಿಷಸ್, ಐರ್ಲೆಂಡ್ ಮೊದಲಾದ ದೇಶಗಳ ಅಧ್ಯಕ್ಷರು/ಪ್ರಧಾನಿಗಳಾಗಿ ಆಯಾ ದೇಶಗಳನ್ನು ಮುನ್ನಡೆಸುತ್ತಿದ್ದಾರೆ, ಸರಕಾರಗಳ ಆಯ ಕಟ್ಟಿನ ಜಾಗ ಗಳಲ್ಲಿದ್ದಾರೆ.

ಹೀಗೆ ವಿಶ್ವವ್ಯಾಪಿಯಾಗಿರುವ ಭಾರತೀ ಯರು ತಾವು ನೆಲೆಸಿರುವ ದೇಶಗಳ ಸರಕಾರಗಳಲ್ಲಿ ಮತ್ತು ಜನರಲ್ಲಿ ಭಾರತದ ಹಿತಾಸಕ್ತಿಗೆ ಪೂರಕವಾದ, ಸದಭಿಪ್ರಾಯದ ವಾತಾವರಣವನ್ನು ನಿರ್ಮಿಸುತ್ತಾರೆ. ವಿದೇಶ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಅಲ್ಲಿ ನೆಲೆಸಿರುವ ಭಾರತೀಯ ಮೂಲದ ಜನರೊಡನೆ ಬೆರೆಯುತ್ತಾರೆ. ಹೀಗಾಗಿ ಅನಿವಾಸಿ ಭಾರತೀಯ ರಿಂದು ಭಾರತದ ರಾಯಭಾರಿಗಳಾಗಿ ಪರಿವರ್ತನೆ ಯಾಗಿದ್ದಾರೆ.

ಆದರೆ ಮತ್ತೊಂದೆಡೆ, ಭಾರತದ ಹೆಸರಿಗೆ ಮಸಿ ಬಳಿಯುವ ಹುನ್ನಾರವೂ ನಿರಂತರವಾಗಿದೆ. ನಮ್ಮ ದೇಶಕ್ಕೆ ಕೆಲ ಆಯಾಮಗಳಲ್ಲಿ ಜಾಗತಿಕವಾಗಿ
ಸಿಗಬೇಕಿದ್ದ ಆದರ, ಸ್ಥಾನಮಾನ ಇನ್ನೂ ಸಿಕ್ಕಿಲ್ಲ. ಪ್ರಪಂಚದ ಅತ್ಯುತ್ತಮ ಮ್ಯೂಸಿಯಂಗಳ ಪಟ್ಟಿಯಲ್ಲಿ ೨ನೇ ಸ್ಥಾನದಲ್ಲಿರುವ, ಅಮೆರಿಕದ ಶಿಕಾಗೊ ನಗರದ ಫೀಲ್ಡ್ ಮ್ಯೂಸಿಯಂಗೆ ಕೆಲ ತಿಂಗಳ ಹಿಂದೆ ಭೇಟಿ ನೀಡಿದ್ದೆ. ಇದನ್ನು ಸಂಪೂರ್ಣ ವೀಕ್ಷಿಸಲು ಕನಿಷ್ಠ ೪ ದಿನವಾದರೂ ಬೇಕು. ಪ್ರಾಚೀನ ನಾಗರಿಕತೆಗಳು ಮತ್ತು ವಿವಿಧ ದೇಶಗಳ ಇತಿಹಾಸವನ್ನು ಯಥಾವತ್ತಾಗಿ ಮರುಸೃಷ್ಟಿಸಿ ತೋರಿಸಿರುವ ಈ ಮ್ಯೂಸಿಯಂನಲ್ಲಿ, ಮೂಲ ಅಮೆರಿಕನ್ನರ, ಆಫ್ರಿಕಾದ, ಈಜಿಪ್ಟಿನ ಇತಿಹಾಸಗಳನ್ನು ತೋರಿಸುವ ವಿಶಾಲವಾದ ಪ್ರತ್ಯೇಕ ವಿಭಾಗಗಳೇ ಇವೆ. ಚೀನಾ ಹಾಗೂ ಟಿಬೆಟ್‌ಗಳ ಚರಿತ್ರೆಯ ಮರು ಸೃಷ್ಟಿಯೂ ಅಲ್ಲಿದೆ.

ಆದರೆ ಭಾರತದ ಇತಿಹಾಸವನ್ನು ಪ್ರತ್ಯೇಕ ವಾಗಿ ಪ್ರದರ್ಶಿಸುವ ವಿಭಾಗ ಅಲ್ಲಿರದಿದ್ದುದು ನೋಡಿ ಅತೀವ ನಿರಾಶೆ ಯಾಯಿತು. ಫೀಲ್ಡ್ ಮ್ಯೂಸಿಯಂನ ಪಕ್ಕದ ಆಡ್ಲರ್ ಪ್ಲಾನೆಟೋರಿಯಂ ನಲ್ಲಿ ಕ್ರೈಸ್ತ, ಇಸ್ಲಾಂ, ಯೆಹೂದಿಗಳಲ್ಲಿ ಬೆಳೆದುಬಂದ ಖಗೋಳಶಾಸದ ಇತಿಹಾಸವನ್ನು ಪ್ರದರ್ಶಿಸಲಾಗಿದೆ; ಆದರೆ, ಪಾಶ್ಚಾತ್ಯ ಖಗೋಳ ಶಾಸ್ತ್ರಜ್ಞರಿಗಿಂತ ಸಾವಿರ ವರ್ಷಗಳಿಗೂ ಮೊದಲೇ ‘ಭೂಮಿಯು ಗೋಳಾಕಾರದಲ್ಲಿದೆ’ ಎಂದು ಪ್ರತಿಪಾದಿಸಿದ್ದ, ಭೂಮಿ ಹಾಗೂ ಸೂರ್ಯ-ಚಂದ್ರರ ನಡುವಿನ ಅಂತರವನ್ನು ಲೆಕ್ಕಾಚಾರ ಮಾಡಿದ್ದ, ಸೂರ್ಯ ಮತ್ತು ಚಂದ್ರಗ್ರಹಣಗಳನ್ನು ಸಮರ್ಪಕವಾಗಿ ಅಂದಾಜಿಸಿದ್ದ, ಗುರುತ್ವಾಕರ್ಷಣ ಬಲವನ್ನು ಗುರು ತಿಸಿದ್ದ ಭಾರತೀಯ ಖಗೋಳಶಾಸದ ಪರಂಪರೆಯ ಬಗ್ಗೆ ಅಲ್ಲಿ ಉಲ್ಲೇಖವೇ ಇರಲಿಲ್ಲ.

ಇದು ವರಾಹ ಮಿಹಿರ, ಬ್ರಹ್ಮಗುಪ್ತ, ಆರ್ಯಭಟ, ಭಾಸ್ಕರಾ ಚಾರ್ಯ ಮುಂತಾದ ಗಣಿತಜ್ಞರು ಹಾಗೂ ಖಗೋಳಶಾಸಜ್ಞರಿಗೂ ಅನ್ವಯವಾಗುವ ಮಾತು.
ಜಗತ್ತಿನ ಎಲ್ಲಾ ದೇಶಗಳ ಭಾಷೆಗಳನ್ನೂ ಅಲ್ಲಿ ಪ್ರದರ್ಶಿಸಲಾಗಿದೆ, ಆದರೆ ಭಾರತೀಯ ಭಾಷೆಗಳು ಮಾತ್ರ ಅಲ್ಲಿಲ್ಲ. ಭಾರತದ ಬಗ್ಗೆ ವಿದೇಶಿಯರು ತೋರುತ್ತಿರುವ ಇಂಥ ಅನಾದರಕ್ಕೆ ಕಾರಣರು ಭಾರತೀಯರೇ ಎಂಬುದು ವಿಪರ್ಯಾಸದ ಸಂಗತಿ. ಭಾರತದಲ್ಲಿ ಬೇರೂರಿರುವ ಬ್ರಿಟಿಷರ ವಿದ್ಯಾಭ್ಯಾಸ ಪದ್ಧತಿಯಿಂದ ಹೊರಬರಲು ನಮಗಿನ್ನೂ ಸಾಧ್ಯವಾಗಿಲ್ಲ. ಭಾರತೀಯ ಇತಿಹಾಸ ಮತ್ತು ಪರಂಪರೆಗಳನ್ನು ಹೀಗಳೆದು, ಭಾರತೀಯರಲ್ಲಿ ಕೀಳರಿಮೆ ಯನ್ನು ಬೆಳೆಸಿದ ವಸಾಹತುಶಾಹಿ ಶಿಕ್ಷಣಪದ್ಧತಿಯು, ಭಾರತೀಯರು ತಮ್ಮ ಧರ್ಮ, ಸಂಸ್ಕೃತಿ ಮತ್ತು ಪರಂಪರೆಗಳ ಬಗ್ಗೆ ನಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳುವಂತೆ ಮಾಡಿತು.

ಸ್ವಾತಂತ್ರ್ಯಾ ನಂತರವೂ ಭಾರತದ ಪಠ್ಯಕ್ರಮಗಳಲ್ಲಿ ವ್ಯವಸ್ಥಿತವಾಗಿ ತುರುಕಲಾದ ಕಮ್ಯುನಿಸಂನ ಪ್ರಭಾವಕ್ಕೆ ಸಿಲುಕಿದ ಭಾರತೀಯರು ತಮ್ಮತನವನ್ನು ಮರೆತರು. ಭಾರತ ವೆಂದರೆ ಬಡವರ, ಅಜ್ಞಾನಿಗಳ, ನಿರಾಶ್ರಿತರ ದೇಶ, ಭಾರತೀಯರ ಜ್ಞಾನ-ವಿಜ್ಞಾನವೆಂದರೆ ಮೂಢನಂಬಿಕೆ ಎಂಬ ಭಾವನೆಯು ೫೦ರಿಂದ ೯೦ರ ದಶಕಗಳವರೆಗೆ ಶಿಕ್ಷಣ ಪಡೆದ ಭಾರತೀಯರಲ್ಲಿ ಬೆಳೆಯಿತು. ಆರ್ಯರು ಹೊರಗಿನಿಂದ ಬಂದು ದ್ರಾವಿಡರನ್ನು ದಕ್ಷಿಣ ಭಾರತಕ್ಕೆ
ಓಡಿಸಿದರು, ಸಂಸ್ಕೃತ ಮತ್ತು ಹಿಂದಿ ಆರ್ಯರ ಭಾಷೆ ಗಳಾಗಿದ್ದು ಅವನ್ನು ದ್ರಾವಿಡರ ಮೇಲೆ ಹೇರಲಾಗುತ್ತಿದೆ ಎಂಬೆಲ್ಲಾ ಅಪಪ್ರಚಾರಗಳು ನಡೆದವು. ಹೀಗೆ ದೇಶವೊಂದರ ಜನರು ತಮ್ಮ ತಾಯ್ನೆಲದ ಬಗ್ಗೆ ಕೀಳರಿಮೆ, ವೈರುಧ್ಯಗಳನ್ನೇ ತುಂಬಿ ಕೊಂಡಿರುವಾಗ, ಆ ದೇಶದ ಬಗ್ಗೆ ಪರದೇಶಿಗರಲ್ಲಿ ಸಕಾರಾ ತ್ಮಕತೆ ಬೆಳೆಯುವುದಾದರೂ ಹೇಗೆ? ಹೀಗಾಗಿ ಭಾರತವೆಂದರೆ ಹಾವಾಡಿಗರ, ಮಾಟ-ಮಂತ್ರ ಮಾಡುವವರ ದೇಶ ಎಂಬ ಕಲ್ಪನೆ ಜಗತ್ತಿನ ಇತರರಲ್ಲಿ ಬೆಳೆಯಿತು. ಜಾಗತಿಕ ಇತಿಹಾಸ ವನ್ನು ತೆರೆದಿಡುವ ಫೀಲ್ಡ್ ಮ್ಯೂಸಿಯಂ ಭಾರತವನ್ನು ನಿರ್ಲಕ್ಷಿಸಿರುವುದರ ಹಿಂದಿರುವುದು ಇಂಥ ಕಾರಣಗಳೇ!

ಇಂದು, ನ್ಯೂಯಾರ್ಕ್ ಟೈಮ್ಸ್, ವಾಲ್‌ಸ್ಟ್ರೀಟ್ ಜರ್ನಲ್, ವಾಷಿಂಗ್ಟನ್ ಪೋಸ್ಟ್, ದಿ ಗಾರ್ಡಿಯನ್, ಬಿಬಿಸಿಯಂಥ ಜಾಗತಿಕ ಮಾಧ್ಯಮಗಳಲ್ಲಿ ಭಾರತ
ವನ್ನು ಅತಿ ಕೆಟ್ಟದಾಗಿ ಬಿಂಬಿಸುವಂಥ ಲೇಖನ/ ವರದಿಗಳನ್ನು ಪ್ರಸ್ತುತಪಡಿಸುವವರು ಭಾರತೀಯರೇ. ರಾಣಾ ಅಯೂಬ್, ಸ್ವಾತಿ ಚತುರ್ವೇದಿ
ಮೊದಲಾದವರು ಜಾಗತಿಕ ಮಾಧ್ಯಮಗಳಲ್ಲಿ ಭಾರತದ ಬಗ್ಗೆ ತೀರಾ ನಕಾರಾತ್ಮಕವಾದ ಲೇಖನಗಳನ್ನು ಬರೆಯುತ್ತಾರೆ. ಕೋವಿಡ್ ಕಾಲಘಟ್ಟದಲ್ಲಿ ಬರ್ಖಾ ದತ್ ರಂಥ ಪತ್ರಕರ್ತರು ಸ್ಮಶಾನ ಗಳ ಮುಂದೆಯೇ ಬೀಡುಬಿಟ್ಟು ಅಲ್ಲಿನ ಉರಿಯುತ್ತಿರುವ ಚಿತೆಗಳ ಚಿತ್ರ ತೆಗೆದು, ವರದಿ ಸಿದ್ಧಪಡಿಸಿ ನ್ಯೂಯಾರ್ಕ್ ಟೈಮ್ಸ್ ನಂಥ ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾಗುವಂತೆ ಮಾಡಿ, ಭಾರತದಲ್ಲಾಗುತ್ತಿದ್ದ ಕೋವಿಡ್ ಸಾವುಗಳನ್ನು ವೈಭವೀಕರಿ
ಸಿದರು.

ಆಡ್ರೆ ಟ್ರಶ್ಕೆ ಎಂಬ ಭಾರತ- ವಿರೋಧಿಯು ೨೦೨೧ರಲ್ಲಿ ಅಮೆರಿಕದಲ್ಲಿ ನಡೆಸಿದ ‘ಡಿಸ್‌ಮ್ಯಾಂಟ ಲಿಂಗ್ ಗ್ಲೋಬಲ್ ಹಿಂದುತ್ವ’ ಹೆಸರಿನ ಸಮ್ಮೇಳನದಲ್ಲಿ
ಪ್ರಧಾನ ಭಾಷಣಕಾರರಾಗಿದ್ದವರು ಆನಂದ್ ಪಟವರ್ಧನ್, ಕವಿತಾ ಕೃಷ್ಣನ್, ಭಾನು ಸುಬ್ರಹ್ಮಣ್ಯಂ, ಆಯೇಶಾ ಕಿದ್ವಾಯಿ, ಮೀನಾ ಕಂದಸ್ವಾಮಿ ಯವರಂಥ ಭಾರತೀಯರು ಎಂಬುದು ದುರಂತ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ೩೭೦ನೇ ವಿಧಿಯ ರದ್ದತಿ, ಅಯೋಧ್ಯಾ ರಾಮ ಮಂದಿರದ ಪರವಾದ ಸುಪ್ರೀಂ ಕೋರ್ಟ್ ತೀರ್ಪು, ಪೌರತ್ವ ತಿದ್ದುಪಡಿ ಕಾಯ್ದೆ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಇವನ್ನೆಲ್ಲಾ ಟೀಕಿಸಿ ವಿದೇಶಿ ಪತ್ರಿಕೆಗಳಲ್ಲಿ
ಪುಟಗಟ್ಟಲೆ ಲೇಖನ ಪ್ರಕಟಿಸು ವವರೂ ಇಂಥ ಭಾರತೀಯರೇ. ಸ್ವಚ್ಛ ಭಾರತ್ ಅಭಿಯಾನ, ಮೇಕ್ ಇನ್ ಇಂಡಿಯಾ ಯೋಜನೆಗಳ ಬಗ್ಗೆ ಕಟಕಿಯಾಡಿ
ದವರು, ಹಿಂಡೆನ್‌ಬರ್ಗ್ ಸಂಸ್ಥೆಯು ಅದಾನಿ ಸಂಸ್ಥೆಯ ಬಗ್ಗೆ ಕೊಟ್ಟ ವರದಿಯನ್ನು ವೈಭವೀಕರಿಸಿದವರು ಇಂಥ ಜನರೇ.

ಇಂಥ ಕೃತ್ಯಗಳಿಗೆ ನಮ್ಮ ದೇಶದ ವಿಪಕ್ಷಗಳೂ ಸಾಥ್ ಕೊಡುತ್ತವೆ ಎಂಬುದು ಸತ್ಯ. ನಮ್ಮ ದೇಶದ ‘ಸಾಫ್ಟ್ ಪವರ್’ಗೆ ಅಡ್ಡಿಯಾಗುತ್ತಿರುವವರು
ಯಾರೆಂಬುದು ನಿಮಗೀಗ ಅರ್ಥವಾಗಿರಬಹುದು!

(ಲೇಖಕರು ಹವ್ಯಾಸಿ ಬರಹಗಾರರು)