ಅಭಿವ್ಯಕ್ತಿ
ಸುಜಯ ಆರ್.ಕೊಣ್ಣೂರ್
ಕರೋನಾದಿಂದ ಮೃತರಾದವರನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ನೆಲದಲ್ಲಿ ಹೂಳುವುದರಿಂದ ನೆಲದಲ್ಲಿ ಪ್ಲಾಸ್ಟಿಕ್ ಕರಗದೇ ಉಳಿದು ನೆಲದ ಸಂಪನ್ನತೆ ಹಾಳಾಗುತ್ತದೆ.
ಪ್ಲಾಸ್ಟಿಕ್ ಸಾವಿರಾರು ವರ್ಷಗಳು ಕೊಳೆಯದೇ ಉಳಿದು ಹೋಗುತ್ತದೆ. ಜತೆಗೆ ಅಂತರ್ಜಲ ಸಂಪತ್ತಿಗೆ ಕರೋನಾ ಸೇರಿಕೊಳ್ಳುವು ದಿಲ್ಲವೇ? ಇದರಿಂದ ಮುಂದಿನ ಪೀಳಿಗೆಗೆ ನಾವು ಕಲುಷಿತ ನೀರು ಮತ್ತು ಮಣ್ಣು ಬಳುವಳಿ ಕೊಟ್ಟಂತಾಗುವುದಿಲ್ಲವೇ? ಮುಂದೆ ಬಹುಶಃ ಮನೆ ಕಟ್ಟಲು ಅಥವಾ ಅಂತರ್ಜಲಕ್ಕಾಗಿ ಭೂಮಿಯನ್ನು ಅಗೆದರೆ, ಬರೀ ಪ್ಲಾಸ್ಟಿಕ್ ಮತ್ತು ಮೂಳೆಗಳೇ ಸಿಗಬಹು ದೇನೋ? ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಇಷ್ಟೆಲ್ಲಾ ಅಭಿಯಾನ ಮಾಡಿದ್ದು ಹೊಳೆಯಲ್ಲಿ ಹುಣಸೆಹಣ್ಣು ತೊಳೆ ದಂತಾಗಲಿಲ್ಲವೇ? ಈ ಮೃತದೇಹಗಳನ್ನು ಕರೆಂಟ್ ಮೂಲಕ ಸುಡುವಂತಾಗಬೇಕು.
ಇದರಿಂದಾಗಿ ಆ ವೈರಾಣುಗಳೂ ನಾಶವಾಗುತ್ತವೆ. ಶ್ರೀಲಂಕಾದಲ್ಲಿ ಹೊಸ ಕಾನೂನಿನ ಪ್ರಕಾರ, ಕರೋನಾದಿಂದ ಸತ್ತವರನ್ನು ಹೂಳದೇ, ಸುಡಲೇಬೇಕು. ದೇಹವನ್ನು 800 ರಿಂದ 1200 ಡಿಗ್ರಿ ಉಷ್ಣಾಂಶದಲ್ಲಿ ಸುಮಾರು 45 ರಿಂದ 60 ನಿಮಿಷಗಳವರೆಗೆ
ಸುಡಲಾಗುವುದು. ಅಲ್ಲಿ ಯಾವುದೇ ಜಾತಿ, ಧರ್ಮಗಳ ತಾರತಮ್ಯವಿಲ್ಲ.
ಹಿಂದೂ ಮುಸಲ್ಮಾನ, ಕ್ರಿಸ್ತ, ಬೌದ್ಧ ಎಂಬ ಯಾವುದೇ ಧರ್ಮದ ವ್ಯತಾಸವಿಲ್ಲ. ಆದರೆ ಇದಕ್ಕೆ ಐಲ್ಯಾನ್ಡ್ ಮುಸಲ್ಮಾನರ ವಿರೋಧ ವ್ಯಕ್ತವಾಗಿದೆ. ಅವರು ತಮ್ಮ ಮನೆಯ ಗೇಟ್‌ಗೆ ಬಿಳಿ ಬಟ್ಟೆ ಕಟ್ಟಿ ಈ ಕಾನೂನನ್ನು ತಮ್ಮ ಅಸಮ್ಮತಿಯನ್ನು
ಸೂಚಿಸುತ್ತಿದ್ದಾರೆ. ನಮ್ಮ ಧರ್ಮಕ್ಕೆ ವಿರುದ್ಧವಾದದ್ದು ಎಂಬುದು ಅವರ ಅಂಬೋಣ. ಒಮ್ಮೆ ಯೋಚಿಸಿ, ಭಾರತದಲ್ಲಿ
ಹಾಗೇನಾದ್ರೂ ಕಾನೂನು ತಂದರೆ ಏನಾಗಬಹುದು? ಧರ್ಮದ ಹೆಸರಿನಲ್ಲಿ, ಎಲ್ಲಾ ಬುದ್ಧಿಜೀವಿಗಳು, ಜಾತೀಯತೆ ಮಾಡುವ
ವ್ಯಕ್ತಿಗಳೂ ಸೇರಿ ದೊಡ್ಡ ಹಂಗಾಮ ಮಾಡಿಬಿಡುತ್ತಾರೆ.
ಹೆಣ ಹೂಳುವ ಪದ್ಧತಿ ಇರುವವರು ಸುಮ್ಮನಿದ್ದರೂ, ಮತಬ್ಯಾಂಕಿನ ಆರಾಧಕರು, ಅಬ್ಬರಿಸಿ ಬೊಬ್ಬಿರಿಯುತ್ತಾರೆ. ಈಗಂತೂ ಯಾವುದೇ ವಿಷಯ ಸಿಕ್ಕರೂ ಹರತಾಳ ಮಾಡಲು ಕಾಯುತ್ತಿರುತ್ತಾರೆ. ಹುಟ್ಟಿದವನು ಸಾಯಲೇಬೇಕು. ಸಾವು ಯಾವುದೇ ತಾರತಮ್ಯ ಮಾಡುವುದಿಲ್ಲ. ಬಡವ, ಶ್ರೀಮಂತ, ಜಾತಿ, ಧರ್ಮ ಎಂಬ ಭೇದ ಭಾವ ಮಾಡುವುದಿಲ್ಲ. ಸಮಾನ ಭಾವದಿಂದ ಎಲ್ಲರನ್ನೂ ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತದೆ.
ಜೀವ ಹೋದಮೇಲೆ ಅದು ಜಾತಿ, ಧರ್ಮವನ್ನು ಮೀರಿದ ಅತೀತ. ಹಾಗಿದ್ದಲ್ಲಿ, ಎಲ್ಲರೂ ಒಂದೇ ರೀತಿಯಲ್ಲಿ ಶವ ಸಂಸ್ಕಾರ ಮಾಡುವುದರಲ್ಲಿ ತಪ್ಪೇನಿದೆ? ಹಾಗಾಗಿ ಸಾವಿನಲ್ಲಿ ರಾಜಕೀಯ ಮಾಡದೇ, ಎಲ್ಲರಿಗೂ ಒಂದೇ ಕಾನೂನು ಬಂದರೆ ಬಹಳ ಒಳ್ಳೆಯದಲ್ಲವೇ? ನಾವು ನಮ್ಮ ಮುಂದಿನ ಪೀಳಿಗೆಗೆ, ಈ ವೈರಾಣುಗಳು, ಕಲುಷಿತ ಭೂಮಿ, ನೀರು, ಗಾಳಿಯನ್ನು ಕೊಡುಗೆಯಾಗಿ
ನೀಡುವಂತಾಗಬಾರದು. ಸರಕಾರ ಜಾತಿ, ಪಂಗಡ, ಧರ್ಮ, ಆಚಾರ ಯಾವುದನ್ನೂ ಲೆಕ್ಕಿಸದೇ, ಮನುಷ್ಯನ ಮೃತದೇಹವನ್ನು ಪ್ಲಾಸ್ಟಿಕ್ ನಲ್ಲಿ ಬಂಧಿಸಿ ಭೂಮಿಯಲ್ಲಿ ಹೂಳದೇ, ಬೆಂಕಿ/ ವಿದ್ಯುತ್ ಸುಡುವಂತೆ ಆದೇಶ ಹೊರಡಿಸಬೇಕು.
ಸ್ವಚ್ಛ ಪ್ರಕೃತಿ, ನೀರು, ಗಾಳಿ, ಭೂಮಿ ನಮ್ಮ ಮುಂದಿನ ಪೀಳಿಗೆಗೆ ದೊರೆಯುವಂತಾಗಲಿ. ಇದರಿಂದಾಗಿ ಮುಂದಿನ ಪೀಳಿಗೆ ಯಾದರೂ ಒಳ್ಳೆಯ ವಾತಾವರಣದಲ್ಲಿ ಜೀವಿಸುವಂತಾಗಲಿ. ನಮ್ಮಲ್ಲಿಯೂ ಸಹ ಒಂದೇ ಕಾನೂನು (uniform civil code)
ಲಾಗೂ ಆಗಲಿ ಎಂದು ಆಶಿಸುತ್ತೇವೆ.