Saturday, 7th September 2024

ಭಾರತದ ಸಂವಿಧಾನಕ್ಕೆ ತಲೆಬಾಗುವ ನಾಯಕಿ ಸೋನಿಯಾ ಗಾಂಧಿ

ತನ್ನಿಮಿತ್ತ

ವೀರಣ್ಣ ಮತ್ತಿಕಟ್ಟಿ, ಮಾಜಿ ಸಭಾಪತಿ

ದೇಶದ ಪ್ರಜಾಪ್ರಭುತ್ವ ಉಳಿಯಲು ಮತ್ತು ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಆರ್ಥಿಕ ತಜ್ಞ ಮನಮೋಹನ ಸಿಂಗ್ ಅವರನ್ನು ಪ್ರಧಾನಿ ಮಾಡಲು ನಿರ್ಧಾರ ತೆಗೆದುಕೊಂಡು ತಮ್ಮ ಮನೆಯ ಬಾಗಿಲಿಗೆ ಬಂದ ಪ್ರಧಾನಿ ಪಟ್ಟವನ್ನುತ್ಯಾಗ ಮಾಡಿದ ಮಹಾನಾಯಕಿ. 

ಶ್ರೀಮತಿ ಸೋನಿಯಾ ಗಾಂಧಿಯವರು ಅತ್ಯಂತ ಕ್ರಿಯಾಶೀಲ, ಸಮಚಿತ್ತ, ಜಾತ್ಯಾತೀತ ಮನೋಭಾವನೆ ಹೊಂದಿರುವ, ಸಂವಿ ಧಾನಕ್ಕೆ ಬದ್ಧತೆ ಇರುವ ನಾಯಕಿ. ಶ್ರೀಮತಿ ಇಂದಿರಾ ಗಾಂಧಿ ಮತ್ತು ಶ್ರೀ ರಾಜೀವ ಗಾಂಧಿಯವರ ಹತ್ಯೆಯನ್ನು ಸಹಿಸಿ ಕೊಂಡು ಅಧಿಕಾರದ ಆಸೆ ಇಲ್ಲದೆ ಇಬ್ಬರು ಮಕ್ಕಳನ್ನು ಕಟ್ಟಿಕೊಂಡು ಮನೆಯಲ್ಲಿದ್ದರು.

ಆಗ ರಾಷ್ಟ್ರದ ಎಲ್ಲ ಕಾಂಗ್ರೆೆಸ್ ನಾಯಕರು ಹಾಗೂ ಕಾರ್ಯಕರ್ತರು ದಿಕ್ಕುತೋಚ ದಂತಹ ಸ್ಥಿತಿಯಲ್ಲಿದ್ದ ಸಮಯದಲ್ಲಿ ಕಾಂಗ್ರೆಸನ್ನು ಒಗ್ಗಟ್ಟಾಗಿ ಇಟ್ಟುಕೊಂಡು ದೇಶದ ಹಿತಕ್ಕಾಗಿ ಮುಂದುವರಿಯುವ ಸರ್ವಸಮ್ಮತ ನಾಯಕರ ಕೊರತೆ ಇತ್ತು, ಆಗ ಅನಿವಾರ್ಯವಾಗಿ ಎಲ್ಲರೂ ಒತ್ತಡ ತಂದು ಸೋನಿಯಾ ಗಾಂಧಿ ಯವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರನ್ನಾಗಿ ಮಾಡಲಾಯಿತು.

ಸೋನಿಯಾ ಗಾಂಧಿಯವರಿಗೆ ರಾಜಕೀಯ ಹಾಗೂ ಅಧಿಕಾರದ ಆಸೆ ಇರಲಿಲ್ಲ. ಆದರೆ, ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ಕಾಂಗ್ರೆಸ್ ಪಕ್ಷದ ಹೊರೆ ಹೂತ್ತು ಕೆಲಸ ಮಾಡಲು ಪ್ರಾರಂಭಿಸಿದರು. ಕಾಂಗ್ರೆಸ್ ಪಕ್ಕವನ್ನು ಮರಳಿ ಅಧಿಕಾರಕ್ಕೆ ತರಲು ಪೂರಕ ವಾತಾವರಣ ನಿರ್ಮಾಣ ಮಾಡಿದರು. ಸೋನಿಯಾ ಗಾಂಧಿಯವರು ಕಾಂಗ್ರೆಸ್‌ನ ಎಲ್ಲ ನಾಯಕರನ್ನು ಒಗ್ಗಟ್ಟಾಗಿ ಇಟ್ಟುಕೂಂಡು ಎಲ್ಲ ವಿರೋಧಿ ಪಕ್ಷಗಳನ್ನು ಮತ್ತು ಜಾತ್ಯಾತೀತ ಶಕ್ತಿಗಳನ್ನು ಒಂದುಗೂಡಿಸಿಕೊಂಡು ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಯು.ಪಿ.ಎ. ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಶ್ರೀಮತಿ ಸೋನಿಯಾ ಗಾಂಧಿಯವರೆ ಕಾರಣ, 300ಕ್ಕೂ ಹೆಚ್ಚು ಎಂಪಿ.ಗಳು ಒಮ್ಮತ ದಿಂದ ಸೋನಿಯಾ ಗಾಂಧಿಯವರನ್ನು ನಾಯಕಿಯನ್ನಾಗಿ ಮಾಡಿ ಪ್ರಧಾನ ಮಂತ್ರಿ ಹುದ್ದೆಗೆ ಬೆಂಬಲಿಸಿ ದರು.

ಆದರೆ, ಅಂದಿನ ಪರಿಸ್ಥಿತಿ ಅವಲೋಕಿಸಿ ದೇಶದ ಪ್ರಜಾಪ್ರಭುತ್ವ ಉಳಿಯಲು ಮತ್ತು ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಆರ್ಥಿಕ ತಜ್ಞ ಮನಮೋಹನ ಸಿಂಗ್ ಅವರನ್ನು ಪ್ರಧಾನಿ ಮಾಡಲು ನಿರ್ಧಾರ ತೆಗೆದುಕೊಂಡು ತಮ್ಮ ಮನೆಯ
ಬಾಗಿಲಿಗೆ ಬಂದ ಪ್ರಧಾನಿ ಪಟ್ಟವನ್ನು ತ್ಯಾಗ ಮಾಡಿದ ಮಹಾನಾಯಕಿ.

ಶ್ರೀಮತಿ ಸೋನಿಯಾ ಗಾಂಧಿಯವರನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಇಂದಿರಾ ಗಾಂಧಿ ಹಾಗೂ ಅವರ ವಿಚಾರ ಧಾರೆ, ಈ ದೇಶದ ಬಡವರ ಬಗ್ಗೆ ರೈತರ ಬಗ್ಗೆ ಎಲ್ಲ ವರ್ಗದವರ ಬಗ್ಗೆ ಹಾಗೂ ಅಭಿವೃದ್ಧಿ ಬಗ್ಗೆ ಅವರು ತೆಗೆದುಕೊಂಡ ನಿರ್ಧಾರ ಗಳು, ಕಟ್ಟಾ ಬೆಂಬಲಿಗರಾದ ನಾವು ಇಂದಿರಾ ಗಾಂಧಿಯವರನ್ನು ಸೋನಿಯಾ ಗಾಂಧಿಯವರಲ್ಲಿ ಕಾಣಲು ಪ್ರಯತ್ನಿಸಿದೆವು.

ಎಸ್.ಎಂ.ಕೃಷ್ಣರವರ ನಾಯಕತ್ವದಲ್ಲಿ ಸಂಪೂರ್ಣ ಬಹುಮತದೂಂದಿಗೆ ಸರಕಾರ ರಚನೆಯಾಗಿತ್ತು, ನಾನು ಧಾರವಾಡ ಉತ್ತರದಿಂದ ಎಂ.ಪಿ ಚುನಾವಣೆಯಲ್ಲಿ ಸ್ಪರ್ಧಿಸಿ ಸ್ವಲ್ಪವೇ ಅಂತರದಲ್ಲಿ ಪರಾಭವಗೊಂಡಿದ್ದೆ. ಸೋನಿಯಾ ಗಾಂಧಿಯವ
ರನ್ನು ಹೋಗಿ ಭೇಟಿಯಾದಾಗ ಅವರ ಆ ಕ್ಷೇತ್ರ ರೆಡ್ ಲೀಸ್ಟ್ ‌‌ನಲ್ಲಿತ್ತು. ಬಿ.ಜೆ.ಪಿ. ಅಲ್ಲಿ ಪ್ರಬಲವಾಗಿದೆ. ಅದರಲ್ಲಿ ನೀನು ಸ್ವಲ್ಪ ಅಂತರದಲ್ಲಿ ಸೋತಿರುವೆ, ಮರಳಿ ಪ್ರಯತ್ನಿಸು ಒಳ್ಳೆಯದಾಗಲಿ ಎಂದು ಹೇಳಿದರು.

ಶ್ರೀಮತಿ ಸೋನಿಯಾ ಗಾಂಧಿಯವರು ಕಾಂಗ್ರೆಸ್ ನ ಎಲ್ಲ ಹಿರಿಯ ಮತ್ತು ಕಿರಿಯ ನಾಯಕರಿಗೆ ಗೌರವ ತೋರಿಸುತ್ತಿದ್ದರು, ಕರ್ನಾಟಕದಲ್ಲಿ ಎಸ್.ಎಂ. ಕೃಷ್ಣ ನೇತೃತ್ವದಲ್ಲಿ ನಾವು ಸೋಲನ್ನು ಅನುಭವಿಸಿದೆವು. ನಂತರ ಧರ್ಮಸಿಂಗ್‌ರವರ ನಾಯಕತ್ವ ದಲ್ಲಿ ಸಮ್ಮಿಶ್ರ ಸರಕಾರ ರಚನೆ ಮಾಡಿದೆವು, ನಾನು ಅಂದು ವಿಧಾನ ಪರಿಷತ್ತಿನಲ್ಲಿ ಸದಸ್ಯನಾಗಿದ್ದೆ, ಪರಿಷತ್ತನಲ್ಲಿ
ಎಚ್.ಕೆ. ಪಾಟೀಲರವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಹಾಗೂ ನನ್ನನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಿದರು.

ಇದಕ್ಕೆ ಸೋನಿಯಾ ಗಾಂಧಿಯವರು ಬೆಂಬಲಿಸಿದರು. 2008ರಲ್ಲಿ ನಾನು ವಿರೋಧ ಪಕ್ಷದ ನಾಯಕನಾಗಿ ಆಯ್ಕೆ ಆದೆ ಹಾಗೂ ನನ್ನನ್ನು ವಿಧಾನ ಪರಿಷತ್ತಿನ ಅಧ್ಯಕ್ಷನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದರು, ಅಂದು ಕೇಂದ್ರದಲ್ಲಿ ಯು.ಪಿ.ಎ.
ಸರಕಾರ ಮತ್ತು ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಸರಕಾರ ಇತ್ತು. ನಾನು ದಿಲ್ಲಿಗೆ ಸೋನಿಯಾ ಗಾಂಧಿಯವರನ್ನು ಗೌರವಿ ಸಲು ಹೋಗಿದ್ದೆ. ಆಗ ಮತ್ತಿಕಟ್ಟಿಯವರೆ ನೀವು ಒಬ್ಬ ಹಿರಿಯ ನಾಯಕ. ಈಗ ಸಭಾಪತಿ ಆಗಿದ್ದಿರಿ.

ಕರ್ನಾಟಕದಲ್ಲಿ ಬಿಜೆಪಿ ಸರಕಾರವಿದೆ. ಪರಿಷತ್‌ನಲ್ಲಿ ಅವರಿಗೆ ಬಹುಮತವಿಲ್ಲ. ಹಾಗಾಗಿ ನ್ಯಾಯಬದ್ಧವಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು ಮತ್ತು ಅದೇ ನೀವು ನನಗೆ ನೀಡುವ ಗೌರವ ಎಂದು ಹೇಳಿದರು. ಸೋನಿಯಾ ಗಾಂಧಿಯವರು ನನ್ನ ಬಗ್ಗೆ ಬಹಳ ವಿಶ್ವಾಸ ಇಟ್ಟಿದ್ದರು. ಉದಾಹರಣೆಗೆ ಬಾದಾಮಿ ಶಿವಯೋಗ ಮಂದಿರದಲ್ಲಿ ವೀರಶೈವ ಮಹಾಸಭಾದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದೆನು. ನನ್ನ ಆಹ್ವಾನವನ್ನು ಮನ್ನಿಸಿ ಕಾರ್ಯಕ್ರಮಕ್ಕೆ ಬಂದು
ಉದ್ಘಾಟನೆಯನ್ನು ನಡೆಸಿಕೊಟ್ಟರು. ಮತ್ತು ಅಲ್ಲಿ ಹಾನಗಲ್ ಶಿವಯೋಗಿಗಳ ಗದ್ದುಗೆ ಪೂಜೆಯಲ್ಲಿ ಭಾಗವಹಿಸಿದರು. ಇದು ಅವರು ಶರಣರ ಬಗ್ಗೆ ಅವರಿಟ್ಟ ಭಕ್ತಿ ಗೌರವ ತೋರಿಸಿತು.

ಶ್ರೀಮತಿ ಸೋನಿಯಾ ಗಾಂಧಿಯವರು ವಿಶಿಷ್ಟವಾದ ಪ್ರಜಾಪ್ರಭುತ್ವ, ರಾಷ್ಟೀಯತೆ ಮತ್ತು ಜಾತ್ಯಾತೀತ ಭಾವನೆಗಳನ್ನು ಹೊಂದಿದ ಬದ್ಧತೆಯ ನಾಯಕಿ, ಇಂತಹ ನಾಯಕರು ಬಹಳ ವಿರಳ. ಅದಕ್ಕಾಗಿ ನಾನು ಅವರ ಜನ್ಮದಿನದ ಈ ಸಂದರ್ಭದಲ್ಲಿ ಹಾರ್ಧಿಕ ಶುಭಾಷಯಗಳನ್ನು ಕೋರುತ್ತೇನೆ.

Leave a Reply

Your email address will not be published. Required fields are marked *

error: Content is protected !!