ಭಾರತ ಹಾಗೂ ವಿದೇಶಗಳಲ್ಲಿ ಜಾರ್ಜ್ ಸೋರೋಸ್‌ನನ್ನು ಸಮರ್ಥಿಸುವವರಿಗೆ ಕೊರತೆಯೇನೂ ಇಲ್ಲ. ಮೋದಿ ಪದಚ್ಯುತಿಗೆ ಸಂಬಂಧು ಸಿದ ಆತನ ಮಾತುಗಳಿಗೆ ಪ್ರತಿಕ್ರಿಯಿಸಿದ್ದ ಭಾರತದ ವಿದೇಶಾಂಗ ಮಂತ್ರಿ ಡಾ ಎಸ್ ಜೈಶಂಕರ್, ಸೋರೋಸ್ ಓರ್ವ ಅಪಾಯಕಾರಿ ವೃದ್ಧ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಮೆರಿಕದಲ್ಲಿರುವ ಅನಿವಾಸಿ ಭಾರತೀಯ ಮಹಿಳೆ ಅದಿತಿ ಥೋರಟ್, ಜೈಶಂಕರ್ ಹೇಳಿಕೆ ಯಿಂದ ತನಗೆ ಆಳವಾದ ನೋವಾಗಿದೆ ಎಂದಿದ್ದರು.
ಇತ್ತೀಚೆಗೆ ಅದಾನಿ ಕಂಪನಿಯ ವಿರುದ್ಧ ಹಿಂಡನ್‌ಬರ್ಗ್ ಸಂಸ್ಥೆಯು ವರದಿಯನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಪದಚ್ಯುತಿ ಆಗಬೇಕು ಎಂಬ ಹೇಳಿಕೆಯನ್ನು ಅಮೆರಿಕದ ಬಿಲಿಯ ನೇರ್ ಜಾರ್ಜ್ ಸೋರೋಸ್ ನೀಡಿದ್ದ. ಸೋರೋಸ್ ಭಾರತದ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುತ್ತಿರು ವುದು ಇದೇ ಮೊದಲಲ್ಲ. ೨೦೨೦ರಲ್ಲಿ ದಾವೋಸ್ ಆರ್ಥಿಕ ಶೃಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂದರ್ಭ ‘ಭಾರತದಲ್ಲಿ ಹಿಂದೂ ರಾಷ್ಟ್ರೀಯವಾದೀ ನಾಯಕ ನರೇಂದ್ರ ಮೋದಿ ಆಳುತ್ತಿದ್ದು, ಜಾಗತಿಕವಾಗಿ ರಾಷ್ಟ್ರೀಯ ವಾದ ಹೆಚ್ಚುತ್ತಿರುವುದನ್ನು ತಡೆಗಟ್ಟಲು ನಾನು ಒಂದು ಶತಕೋಟಿ ಡಾಲರ್‌ಗಳ ದೇಣಿಗೆಯನ್ನು ಮೀಸಲಿಟ್ಟಿ ದ್ದೇನೆ’ ಎಂದಿದ್ದ.
ತನ್ನ ಹಿತಾಸಕ್ತಿಗೆ ವಿರುದ್ಧವಾಗಿರುವ ದೇಶಗಳ ಸರಕಾರಗಳ ವಿರುದ್ಧ ಅಲ್ಲಿನ ಜನರನ್ನು ಸರಕಾರೇತರ ಸಂಘಟನೆ ಗಳ ಮೂಲಕ ಎತ್ತಿಕಟ್ಟಿ ಅಲ್ಲಿ ರಾಜಕೀಯ ಬದಲಾವಣೆಗೆ ಕಾರಣನಾಗಿದ್ದಾನೆ ಸೋರೋಸ್. ಇದಕ್ಕಾಗಿ ಈತ ಮಾಡಿದ ಖರ್ಚು ಸುಮಾರು ೩೨ ಶತಕೋಟಿ ಡಾಲರ್‌ಗಳು. ತನ್ನ ಓಪನ್ ಸೊಸೈಟಿ ಸಂಸ್ಥೆಯ ಮೂಲಕ ಈತ ಎನ್‌ಜಿಒಗಳಿಗೆ ಹಣ ಸಹಾಯವನ್ನೂ ಮಾಡುತ್ತಾನೆ.
ಮೋದಿ ಸರಕಾರ ತೆಗೆದುಕೊಂಡ ನಿರ್ಧಾರಗಳಾದ ಕಾಶ್ಮೀರ ದಲ್ಲಿ ೩೭೦ ನೇ ವಿಽಯ ರದ್ದು, ಸಿಎಎ/ ಎನ್‌ಆರ್‌ಸಿ, ರೈತರ ಕಾಯಿದೆ ಮೊದಲಾದವು ಗಳನ್ನೆಲ್ಲ ಸೋರೋಸ್ ವಿರೋಧಿಸಿದ್ದಾನೆ. ದೆಹಲಿಯಲ್ಲಿ ಸಿಎಎ/ಎನ್‌ಆರ್‌ಸಿ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಓಪನ್ ಸೊಸೈಟಿಯ ಸದಸ್ಯ ಹರ್ಷಾ ಮ್ಯಾಂಡರ್ ನೇರವಾಗಿ ಪಾಲ್ಗೊಂಡಿದ್ದರು. ರಫೆಲ್ ಯುದ್ಧ ವಿಮಾನ ಖರೀದಿಯ ವಿಚಾರದಲ್ಲಿ, ಹಣಕಾಸು ವ್ಯವಹಾರಗಳು ಪರಿಶುದ್ಧವಾಗಿವೆ ಎಂದು ಸ್ವತಃ ಭಾರತದ ಸುಪ್ರೀಂ ಕೋರ್ಟ್ ತೀರ್ಪನ್ನು ಕೊಟ್ಟಿದ್ದರೂ ಓಪನ್ ಸೊಸೈಟಿಯಿಂದ ಆರ್ಥಿಕ ಸಹಕಾರ ಪಡೆಯುತ್ತಿರುವ ಫ್ರಾನ್ಸಿನ ಶೆರ್ಪಾ ಹೆಸರಿನ ಸಂಸ್ಥೆಯೊಂದು ರಫೆಲ್ ಯುದ್ಧ ವಿಮಾನದ ಖರೀದಿಯ ವಿಚಾರವಾಗಿ ತನಿಖೆ ಮಾಡಬೇಕೆಂದು ಫ್ರಾನ್ಸ್‌ನ ಕೋರ್ಟಿನಲ್ಲಿ ದಾವೆ ಹೂಡಿತ್ತು.
ಸಿಖ್ಖರ ಪ್ರತ್ಯೇಕವಾದಿ ಉಗ್ರವಾದಿ ಸಂಘಟನೆಯಾದ ಖಾಲಿಸ್ತಾಕ್ಕೆ ಸೋರೋಸ್‌ನ ಆರ್ಥಿಕ ಸಹಕಾರವಿದೆ. ಖಾಲಿಸ್ತಾನಕ್ಕೆ ಬೆಂಬಲ ಕೊಡುತ್ತಿರುವ ಅಮೇರಿಕದ ಸಿಖ್ ಕೋವಲೇಶನ್ ಸಂಘಟನೆಯ ಸಹಸ್ಥಾಪಕ ಅಮರ್‌ದೀಪ್ ಸಿಂಗ್ ೨೦೧೪ರವರೆಗೆ ಓಪನ್ ಸೊಸೈಟಿಯ ಜತೆಗೆ ಕೆಲಸ ಮಾಡುತ್ತಿದ್ದರು. ೨೦೧೯ರಲ್ಲಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಮತ್ತು ಜಾರ್ಜ್ ಸೋರೋಸ್ ನಡುವೆ ನಡೆದಿದ್ದ ಸಭೆಯು ಸೋರೋಸ್ ಪಾಕಿಸ್ತಾನದ ಪರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿತ್ತು.
ಭಾರತದ ರಾಜಕೀಯ ಚಟುವಟಿಕೆಗಳಲ್ಲೂ ಸೋರೋಸ್‌ನ ಓಪನ್ ಸೊಸೈಟಿಯು ಪಾಲ್ಗೊಳ್ಳುತ್ತಿದೆ. ಇತ್ತೀಚೆಗೆ ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೋ ಯಾತ್ರೆಯಲ್ಲಿ ಓಪನ್ ಸೊಸೈಟಿಯ ಉಪಾಧ್ಯಕ್ಷ ಸಲೀಲ್ ಶೆಟ್ಟಿ ಭಾಗವಹಿಸಿರುವುದು ಇದಕ್ಕೆ ಸಾಕ್ಷಿ. ರಾಜೀವ್ ಗಾಂಧಿ ಪೌಂಡೇಶನ್‌ನ ಸಹವರ್ತಿ ಸಂಸ್ಥೆಯಾದ ಹ್ಯೂಮನ್ ರೈಟ್ಸ್ ಲಾ ನೆಟ್ವರ್ಕ್ ಓಪನ್ ಸೊಸೈಟಿ ಇನ್ಸ್ಟಿಟ್ಯೂಟ್‌ನಿಂದ ಧನ ಸಹಾಯ ಪಡೆದಿದೆ. ಕೇರಳದ ಕಮ್ಯುನಿಸ್ಟ್ ಸರಕಾರಕ್ಕೆ ೨೦೨೧ರ ಸಾಲಿನ ಸೆಂಟ್ರಲ್ ಯುರೋಪಿ ಯನ್ ಯುನಿವರ್ಸಿಟಿ ಓಪನ್ ಸೊಸೈಟಿ ಪ್ರಶಸ್ತಿಯನ್ನು ಜಾರ್ಜ್ ಸೋರೋಸ್ ಕೊಟ್ಟಿದ್ದ.
ಭಾರತ ಹಾಗೂ ವಿದೇಶಗಳಲ್ಲಿ ಜಾರ್ಜ್ ಸೋರೋಸ್‌ನನ್ನು ಸಮರ್ಥಿಸುವವರಿಗೆ ಕೊರತೆಯೇನೂ ಇಲ್ಲ. ಮೋದಿ ಪದಚ್ಯುತಿಗೆ ಸಂಬಂಧಿಸಿದ ಆತನ ಮಾತುಗಳಿಗೆ ಪ್ರತಿಕ್ರಿಯಿಸಿದ್ದ ಭಾರತದ ವಿದೇಶಾಂಗ ಮಂತ್ರಿ ಡಾ ಎಸ್ ಜೈಶಂಕರ್, ಸೋರೋಸ್ ಓರ್ವ ಅಪಾಯಕಾರಿ ವೃದ್ಧ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಅಮೆರಿಕದಲ್ಲಿರುವ ಅನಿವಾಸಿ ಭಾರತೀಯ ಮಹಿಳೆ ಅದಿತಿ ಥೋರಟ್, ಜೈಶಂಕರ್ ಹೇಳಿಕೆಯಿಂದ ತನಗೆ ಆಳವಾದ ನೋವಾಗಿದೆ ಎಂದಿದ್ದರು. ಮಜಾ ಎಂದರೆ, ಈಕೆ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿರುವ ಗ್ಲೋಬಲ್ ವಿಟ್ನೆಸ್ ಹೆಸರಿನ ಸಂಸ್ಥೆಯು ಜಾರ್ಜ್ ಸೋರೋಸ್‌ನ ಓಪನ್
ಸೊಸೈಟಿಯಿಂದ ಅನುದಾನವನ್ನು ಪಡೆಯುತ್ತಿದೆ.
ಭಾರತದ ಕೆಲವು ಪತ್ರಕರ್ತರು ಹಾಗೂ ಬುದ್ಧಿಜೀವಿಗಳು ಸೋರೋಸ್‌ನ ಸಮರ್ಥನೆಗೆ ಟೊಂಕ ಕಟ್ಟಿ ನಿಂತಿzರೆ. ಇತ್ತೀಚೆಗೆ ರಜ್ನಿ ಭಕ್ಷಿ ಹೆಸರಿನ ಲೇಖಕಿ ‘ದ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ಸೋರೋಸ್ ಅನ್ನು ಬೆಂಬಲಿಸಿ ‘ದ ಇಂಪಾರ್ಟೆನ್ಸ್ ಆಫ್ ಜಾರ್ಜ್ ಸೋರೋಸ್’ಸ ಓಪನ್ ಸೊಸೈಟಿ ಫಾರ್ ಇಂಡಿಯಾ ಆಂಡ್ ವರ್ಲ್ಡ್- ಭಾರತ ಹಾಗೂ ಜಗತ್ತಿಗೆ ಜಾರ್ಜ್ ಸೋರೋಸ್‌ನ ಓಪನ್ ಸೊಸೈಟಿಯ ಪ್ರಾಮುಖ್ಯ’ ಎಂಬ ಲೇಖನ ಪ್ರಕಟಿಸಿದ್ದರು.
ದಿ ಹಿಂದೂ ಪತ್ರಿಕೆಯ ಬರಹಗಾರ್ತಿ ದೀಕ್ಷಾ ಮುಂಜಾಲ್ ಜಾರ್ಜ್ ಸೋರೋಸ್ ಅನ್ನು ಜಗತ್ತಿನಲ್ಲಿ ಪ್ರಜಾಪ್ರಭುತ್ವವನ್ನು ಸಾಕಾರಗೊಳಿಸಲು ೩೨ ಶತಕೋಟಿ ಡಾಲರ್ ದಾನ ಕೊಟ್ಟ ಮಹಾದಾನಿ ಎಂಬಂತೆ ಬಿಂಬಿಸಿ ಲೇಖನವನ್ನು ಪ್ರಕಟಿಸಿದ್ದಾರೆ. ಮಿನ್ನೆಸೋಟಾದಿಂದ ಅಮೆರಿಕದ ಹೌಸ್ ಆ- ರೆಪ್ರೆಸೆಂಟೇಟಿವ್‌ನ ಸದಸ್ಯೆಯಾಗಿ ಆಯ್ಕೆಯಾಗಿರುವ ಸೊಮಾಲಿಯಾ ಮೂಲದ ಇಲ್ಹಾನ್ ಓಮರ್, ಭಾರತದ ವಿರುದ್ಧ ಕೆಲಸ ಮಾಡುತ್ತಿರುವಾಕೆ. ಅಲ್ಲಿನ ವಿದೇಶಾಂಗ ವ್ಯವಹಾರಗಳ ಸಮಿತಿಯ ಸದಸ್ಯೆಯಾಗಿದ್ದ ಈಕೆ ಸದಾ ಭಾರತ ಹಾಗೂ ಇಸ್ರೇಲ್ ಗಳ ವಿರುದ್ಧ ಹೇಳಿಕೆ ಕೊಡುತ್ತಿರುತ್ತಾರೆ.
ಆಕೆ ೨೦೨೨ರ ಎಪ್ರಿಲ್‌ನಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ಕೊಟ್ಟು ಕಾಶ್ಮೀರದ ವಿಚಾರವಾಗಿ ಅಮೆರಿಕವು ಹೆಚ್ಚು ಗಮನಹರಿಸಬೇಕಾಗಿದೆ ಎಂದು ಹೇಳಿಕೆ ಕೊಟ್ಟಿದ್ದರು. ೨೦೨೨ರ ಜೂನ್‌ನಲ್ಲಿ ಆಕೆ ಭಾರತದಲ್ಲಿ ಮಾನವ ಹಕ್ಕುಗಳ ಅದರಲ್ಲೂ ಧಾರ್ಮಿಕ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ಭಾರತದ ವಿರುದ್ಧ ಖಂಡನಾ ನಿರ್ಣಯವನ್ನು ಅಮೆರಿಕ ಸಂಸತ್ತಿನಲ್ಲಿ ಮಂಡಿಸಿದ್ದರು. ೨೦೧೯ರಲ್ಲಿ ಅಮೆರಿಕ ಸಂಸತ್ತು ಭಾರತೀ
ಯರಿಗೆ ಗ್ರೀನ್ ಕಾರ್ಡಿಗಾಗಿ ಕಾಯಬೇಕಾದ ಅವಧಿಯನ್ನು ಕಡಿತಗೊಳಿಸುವ ನಿರ್ಣಯ ಕೈಗೊಳ್ಳುವುದರ ವಿರುದ್ಧ ಆಕೆ ಮತದಾನ ಮಾಡಿದ್ದರು. ಆದರೆ
ಇತ್ತೀಚೆಗೆ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತದಾನದ ಮೂಲಕ ಈಕೆ ಯನ್ನು ವಿದೇಶಾಂಗ ವ್ಯವಹಾರಗಳ ಸಮಿತಿಯಿಂದ ಹೊರ ಹಾಕಿರುವುದು ಭಾರತದ ಪಾಲಿಗೆ ಸಕಾರಾತ್ಮಕ ಬೆಳವಣಿಗೆಯೇ.
ಭಾರತದ ಹಾಗೂ ಹಿಂದೂ ಧರ್ಮದ ವಿರುದ್ಧ ಸದಾ ದ್ವೇಷವನ್ನೇ ಕಾರುವ ಇನ್ನೊಬ್ಬ ಅಮೆರಿಕದ ಮಹಿಳೆ ಆಡ್ರೆ ಟ್ರಶ್ಕ್. ಈಕೆ ನ್ಯೂ ಜೆರ್ಸಿಯ ನೆವಾರ್ಕ್‌ನಲ್ಲಿರುವ ರಟ್ಗರ್ಸ್ ಯುನಿವರ್ಸಿಟಿಯಲ್ಲಿ ದಕ್ಷಿಣ ಏಶಿಯಾದ ಚರಿತ್ರೆ ವಿಷಯದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾಳೆ.
‘ಶ್ರೀರಾಮನನ್ನು ಸೀದ್ವೇಷಿ ಹಾಗೂ ಸಂಸ್ಕಾರರಹಿತ ವ್ಯಕ್ತಿ ಎಂದು ಸೀತೆಯೇ ಹೇಳಿದ್ದಾಳೆ’ ಎಂದು ಹೇಳಿದ್ದ ಈಕೆ, ಹಿಂದೂ ಸಮುದಾಯದಿಂದ ಭಾರೀ ಪ್ರತಿರೋಧ ಎದುರಿಸಬೇಕಾಯಿತು. ಭಾರತೀಯ ಚರಿತ್ರೆಯನ್ನು ತಿರುಚಿ ಔರಂಗಜೇಬನನ್ನು ಪರಮ ದಯಾಳುವಾಗಿ ಬಿಂಬಿಸಿರುವ ಟ್ರಶ್ಕ್, ಔರಂಗ ಜೇಬನು ತಾನು ನಾಶಪಡಿಸಿರುವುದಕ್ಕಿಂತ ಹೆಚ್ಚು ದೇವಾಲಯಗಳನ್ನು ಉಳಿಸಿzನೆ ಎಂದು ಹೇಳಿದ್ದಳು. ಭಗವದ್ಗೀತೆಯು ಸಾಮೂಹಿಕ ಹತ್ಯೆ ಯನ್ನು ನ್ಯಾಯಬದ್ಧಗೊಳಿಸಿದ ಕೃತಿಯಾಗಿದೆ ಎನ್ನುವ ಮೂಲಕ ಅಪಮಾನಿಸಿದ್ದಳು. ಹಿಂದೂಗಳನ್ನು ಬಲಪಂಥೀಯ ರಾಷ್ಟ್ರೀಯವಾದಿಗಳು ಎಂದು ಸದಾ ಜರೆಯುತ್ತಿರುವ ಆಡ್ರೆ ಆರೆಸ್ಸೆಸ್, ಬಿಜೆಪಿ ಹಾಗೂ ನರೇಂದ್ರ ಮೋದಿಯವರ ಬಗ್ಗೆ ಪೂರ್ವಾಗ್ರಹಪೀಡಿತೆ.
೨೦೨೧ರಲ್ಲಿ ಅಮೆರಿಕದಲ್ಲಿ ಈಕೆಯ ನೇತೃತ್ವದಲ್ಲಿ ‘ಡಿಸ್ಮ್ಯಾಂಟಲಿಂಗ್ ಗ್ಲೋಬಲ್ ಹಿಂದುತ್ವ- ಜಾಗತಿಕ ಹಿಂದುತ್ವ ಮೂಲೋತ್ಪಾಟನೆ’ ಎನ್ನುವ ವಿಚಾರ ಸಂಕಿರಣ ನಡೆದಿತ್ತು. ಶೆಲ್ಡನ್ ಪೊಲಾಕ್, ವೆಂಡಿ ಡೋನಿಗರ್, ರೊಮೀಲಾ ಥಾಪರ್, ಆನಂದ್ ಪಟವರ್ಧನ್, ಕವಿತಾ ಕೃಷ್ಣನ್
ಮೊದಲಾದವರು ಆಡ್ರೆ ಟ್ರಶ್ಕೆಯ ಸಹವರ್ತಿಗಳು. ಮುಸಲ್ಮಾನರನ್ನು ಖಳನಾಯಕರಂತೆ ಬಿಂಬಿಸಲು ರಾಮನ ವೈಭವೀಕರಣ ನಡೆಯುತ್ತಿದೆ ಎಂದು ಹೇಳಿರುವ ಶೆಲ್ಡನ್ ಪೊಲಾಕ್ ಎಷ್ಟು ದೊಡ್ಡ ಸಂಸ್ಕೃತ ಪಂಡಿತನಾದರೂ ಪ್ರಯೋಜನವಿಲ್ಲ.
ವೆಂಡಿ ಡೋನಿಗರ್ ತನ್ನನ್ನು ತಾನು ಇಂಡಾಲಜಿಸ್ಟ್ ಎಂದು ಕರೆದುಕೊಳ್ಳುತ್ತಿದ್ದರೂ ವೇದಗಳು ಹಿಂಸೆಯನ್ನು ಪ್ರತಿಪಾದಿಸುತ್ತವೆ, ಹಿಂದೂ ಧರ್ಮವು ಅತ್ಯಾಚಾರವನ್ನು ಕಾನೂನುಬದ್ಧಗೊಳಿಸುತ್ತದೆ ಎಂಬೆಲ್ಲ ರೀತಿಯ ಪೂರ್ವಾಗ್ರಹಪೀಡಿತ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಆಕೆಯ ಪುಸ್ತಕ ‘ದ ಹಿಂದೂಸ್: ಆನ್ ಆಲ್ಟರ್ನೇಟಿವ್ ಹಿಸ್ಟರಿ’ ಮನಮೋಹನ್ ಸಿಂಗ್ ಅವರ ಆಡಳಿತದ ಅವಧಿಯ ಭಾರತದಲ್ಲಿ ನಿಷೇಧಿಸಲ್ಪಟ್ಟಿತ್ತು.
ಟರ್ಕಿಯ ಅಧ್ಯಕ್ಷ ರಿಸೆಪ್ ತೈಯಿಪ್ ಎರ್ಡೋಗಾನ್ ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಜಾಗತಿಕ ವೇದಿಕೆಗಳಲ್ಲಿ ಭಾರತ ವಿರೋಧಿ ಭಾವನೆಗಳನ್ನು
ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಭಾಷಣಗಳಲ್ಲಿ ಇವರು ಕಾಶ್ಮೀರದ ವಿಚಾರಗಳನ್ನು ಪ್ರಸ್ತಾಪಿಸಿ, ಕಾಶ್ಮೀರದಲ್ಲಿ ಮುಸಲ್ಮಾನರ ಮೇಲೆ ಭಾರತ ಸರಕಾರವು ದಬ್ಬಾಳಿಕೆ ನಡೆಸುತ್ತಿದೆ ಎಂದಿದ್ದರು. ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕಂಟ್ರೀಸ್(ಓಐಸಿ)ನಲ್ಲಿ ಎರ್ಡೋಗಾನ್ ಪಾಕಿಸ್ತಾನದ ಪರವಾಗಿ ಮಾತನಾಡುತ್ತಾರೆ. ಜಾಗತಿಕವಾಗಿ ಮುಸಲ್ಮಾನರ ಪರ್ಮೋಚ್ಛ ಧಾರ್ಮಿಕ ಹಾಗೂ ರಾಜಕೀಯ ನಾಯಕನಾಗಿ ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವ ಎರ್ಡೋಗಾನ್, ‘ಒಟ್ಟೋಮನ್ ಕಿಲಾಫತ್’ ಅನ್ನು ಪುನರ್ ಸ್ಥಾಪಿಸುವ ಮಹತ್ವಾಕಾಂಕ್ಷೆಯನ್ನು
ಹೊಂದಿದ್ದಾರೆ.
ಪಾಕಿಸ್ತಾನ ಹಾಗೂ ದಕ್ಷಿಣ ಏಷ್ಯಾದ ಮುಸಲ್ಮಾನರ ಮನ ಗೆಲ್ಲುವ ಉದ್ದೇಶದಿಂದ ಅವರು ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಎರ್ಡೋ ಗಾನ್ ಹೇಳಿಕೆಗಳನ್ನು ಭಾರತವು ಜಾಗತಿಕ ವೇದಿಕೆಗಳಲ್ಲಿ ರಾಜತಾಂತ್ರಿಕವಾಗಿ ಖಂಡಿಸುತ್ತ ಬಂದಿದೆ. ಆದರೆ ಇತ್ತೀಚೆಗೆ ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪದ ಸಂದರ್ಭದಲ್ಲಿ ಭಾರತವು ಟರ್ಕಿಯ ಮೇಲಿನ ಎಲ್ಲ ಅಸಮಾಧನಗಳನ್ನು ಮೀರಿ ಆಪರೇಶನ್ ದೋಸ್ತ್ ನಡೆಸಿ ಟರ್ಕಿಯ ಸಾವಿರಾರು ಜನರನ್ನು ಕಟ್ಟಡಗಳ ಅವಶೇಷಗಳ ಅಡಿಯಿಂದ ರಕ್ಷಿಸಿ ಜಾಗತಿಕ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತದಲ್ಲಿರುವ ಟರ್ಕಿಯ ದೂತಾವಾಸವು ಭಾರತದ ಆಪರೇಶನ್ ದೋಸ್ತ್ ಅನ್ನು ಮುಕ್ತಕಂಠದಿಂದ ಪ್ರಶಂಸಿಸಿದೆ. ಇನ್ನಾದರೂ ಎರ್ಡೋಗಾನ್ ತನ್ನ ಭಾರತ ವಿರೋಧಿ ಧೋರಣೆಗಳನ್ನು ತೊರೆಯು ತ್ತಾರೆಯೇ ಎಂದು ಕಾದು ನೋಡಬೇಕು.
೨೦೧೯ರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಲೇಷ್ಯಾದ ಪ್ರಧಾನಿಯಾಗಿದ್ದ ಮಹತೀರ್ ಮೊಹಮ್ಮದ್, ಭಾರತವು ಕಾಶ್ಮೀರವನ್ನು ಆಕ್ರಮಿಸಿ ತನ್ನ ವಶದಲ್ಲಿಟ್ಟುಕೊಂಡಿದೆ ಎಂದು ದೂರಿದ್ದರು. ಇವರ ಹೇಳಿಕೆಯು ಭಾರತ ಹಾಗೂ ಮಲೇಷ್ಯಾ ರಾಜತಾಂತ್ರಿಕ ಹಾಗೂ ವ್ಯಾವಹಾರಿಕ ಸಂಬಂಧಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿತ್ತು. ಭಾರತವು ಮಲೇಷ್ಯಾದ ಆಮದು ಮಾಡಿಕೊಳ್ಳುವ ಕಚ್ಛಾ ತಾಳೆ ಎಣ್ಣೆಯ ಪ್ರಮಾಣವನ್ನು ಗಣನೀಯವಾಗಿ ಕಡಿತಗೊಳಿಸಿತ್ತು. ಆದರೆ ೨೦೨೦ರ ಮಾರ್ಚ್ ನಲ್ಲಿ ನಡೆದ ಚುನಾವಣೆಯಲ್ಲಿ ಮಹತೀರ್, ಪ್ರಧಾನಿ ಪದವಿಯನ್ನು ಕಳೆದುಕೊಂಡಮೇಲೆ ಭಾರತ ಮತ್ತು ಮಲೇಷ್ಯಾ ಸಂಬಂಧ ಪುನಃ ಸರಿಯಾಗುತ್ತಿದೆ.
ಕೆಲವು ವರ್ಷಗಳ ಹಿಂದೆ ತಮ್ಮ ದೇಶದಲ್ಲಿರುವ ಖಾಲಿಸ್ತಾನೀ ಪರ ಸಿಖ್ ಸಂಘಟನೆಗಳನ್ನು ಬೆಂಬಲಿಸಿದ ಕಾರಣ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡು
ಅವರಿಂದ ಭಾರತವು ಅಂತರವನ್ನು ಕಾಯ್ದುಕೊಳ್ಳಲು ಆರಂಭಿಸಿತ್ತು. ಜಸ್ಟಿನ್ ಟ್ರುಡು ತನ್ನ ತಪ್ಪನ್ನು ಸರಿಪಡಿಸಿಕೊಂಡ ನಂತರವಷ್ಟೇ ಭಾರತದೊಡನೆ ಸಂಬಂಧವು ಸುಧಾರಿಸಿತು. ನೇಪಾಳದ ಪ್ರಧಾನಿಯಾಗಿದ್ದ ಕೆ ಪಿ ಶರ್ಮಾ ಓಲಿ ಚೀನಾದ ತಾಳಕ್ಕೆ ತಕ್ಕಂತೆ ಕುಣಿಯುತ್ತ ಭಾರತ ವಿರೋಧಿ ಹೇಳಿಕೆಗಳನ್ನು ಕೊಟ್ಟಿದ್ದರು. ಬ್ರಿಟಿಷ್ ಹೋಂ ಸೆಕ್ರೆಟರಿಯಾಗಿದ್ದ ಭಾರತೀಯ ಮೂಲದ ಸುಯೆ ಬ್ರಾವರ್ಮನ್ ಭಾರತೀಯ ವಲಸಿಗರು ಇಂಗ್ಲೆಂಡಿನಲ್ಲಿ ಅವಧಿ ಮೀರಿ ಉಳಿದುಕೊಂಡು ಗಲಭೆಗೆ ಕಾರಣರಾಗುತ್ತಾ ರೆ ಎಂದು ಹೇಳಿಕೆಯನ್ನು ನೀಡಿದ್ದರು.
ನಂತರದ ದಿವಸಗಳಲ್ಲಿ ಅಕೆ ತನ್ನ ಹೋಂ ಸೆಕ್ರೆಟರಿ ಪದವಿಯನ್ನು ಕಳೆದುಕೊಂಡರು. ಜ್ಕೋಸ್ಲೋವಿಯಾ ಮೂಲದ ಅಮೆರಿಕದ ಮಾಜೀ ಟೆನಿಸ್
ಆಟಗಾರ್ತಿ ಮಾರ್ಟಿನಾ ನವ್ರಾಟಿಲೋವಾ ಕೂಡ, ಈಗ ಭಾರತ ವಿರೋಧಿ ಅಪಪ್ರಚಾರ ನಡೆಸುವ ಗ್ಯಾಂಗ್‌ನ ಜತೆ ಸೇರಿಕೊಂಡಿದ್ದಾಳೆ. ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸಹೋದರಿ ಮಾಯಾ ಹ್ಯಾರಿಸ್ ಅವರ ಮಗಳಾದ ಮೀನಾ ಹ್ಯಾರಿಸ್ ಕೂಡ ಭಾರತವು ರೈತರ ಕಾಯಿದೆಗಳನ್ನು ಜಾರಿಗೊಳಿಸಿದುದರ ವಿರುದ್ಧ ನಿಲುವನ್ನು ಪದೇ ಪದೇ ವ್ಯಕ್ತಪಡಿಸುತ್ತಿದ್ದರು.
ಇಂಗ್ಲೆಂಡಿನ ಕೆಲವು ಪಾಕಿಸ್ತಾನ ಮೂಲದ ರಾಜಕಾರಣಿಗಳು ಭಾರತದ ವಿರುದ್ಧವಾಗಿ ಮಾತನಾಡುತ್ತಾರೆ. ಆದರೆ ಪ್ರಸ್ತುತ ಇಂಗ್ಲೆಂಡಿನ ಪ್ರಧಾನಿಯಾಗಿ ರುವ ರಿಷಿ ಸುನಕ್ ಇಂಥದ್ದಕ್ಕೆಲ್ಲ ಸೊಪ್ಪು ಹಾಕುವಂತೆ ಕಾಣಿಸುತ್ತಿಲ್ಲ. ಹೀಗೆ ಒಟ್ಟಾರೆ, ಭಾರತದ ಪ್ರಭಾವ ಕುಗ್ಗಿಸಲು ಅಂತಾರಾಷ್ಟ್ರೀಯವಾಗಿ ಇನ್ನಿಲ್ಲದಂತೆ ಹುನ್ನಾರಗಳನ್ನು ನಡೆಸಲಾಗುತ್ತಿದೆ. ಆದರೆ ಭಾರತದ ರಾಜತಾಂತ್ರಿಕ ಕೌಶಲ್ಯವು ಇವುಗಳನ್ನೆ ಮೆಟ್ಟಿನಿಲ್ಲುವಷ್ಟು ಸಮರ್ಥವಾಗಿದೆ ಎನ್ನುವುದು ಸಮಾಧಾನಕರ ವಿಷಯ.