Sunday, 24th November 2024

ಸ್ವಲ್ಪ ಸೌಂಡು ಜಾಸ್ತಿ ತುಂಬ ಒಳ್ಳೆ ಬೈಗುಳ ಇದು

ತುಂಟರಗಾಳಿ

ಸಿನಿಗನ್ನಡ

ಸ್ಯಾಂಡಲ್‌ವುಡ್‌ನಲ್ಲಿ ಒಂದು ಬೈಗುಳದ ಆಡಿಯೋ ನಿನ್ನೆಯಿಂದ ಸಿಕ್ಕಾಪಟ್ಟೆ ಸೌಂಡು ಮಾಡ್ತಿದೆ. ಅದು ಯೋಗರಾಜಭಟ್ಟರು
ಝೀ ಟಿವಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರಿಗೆ ಬೈದು ಕಳಿಸಿರೋ ವಾಯ್ಸ್ ಮೆಸೇಜ್. ಭಟ್ಟರ ಹಾಡುಗಳ ಶೈಲಿಯ ಹೇಳೋದಾದ್ರೆ, ಅದನ್ನು ಕೇಳಿದವರೆಲ್ಲ ‘ಸ್ವಲ್ಪ ಸೌಂಡು ಜಾಸ್ತಿ ತುಂಬ ಒಳ್ಳೆ ಬೈಗುಳ ಇದು’ ಅಂತ ಕೇಳ್ತಾ ಇದ್ರೆ, ಬೈಸಿಕೊಂಡವರು ಮಾತ್ರ ಬೈಬ್ಯಾಡ್ರಪ್ಪ್ರೋ, ಬೈಬ್ಯಾಡ್ರಪ್ಪೋ’ ಅಂತ ಮುಲುಗುತ್ತಿದ್ದಾರೆ.

ವಿಷಯ ಇಷ್ಟೇ, ಬಹಳ ದಿನಗಳಿಂದ ಕನ್ನಡ ಚಿತ್ರೋದ್ಯಮದಲ್ಲಿ ಝೀ ಟಿವಿಯ ರಾಘವೇಂದ್ರ ಅವರ ಬಗ್ಗೆ ಅಪಸ್ವರಗಳು ಕೇಳಿ ಬರ್ತಾ ಇದ್ವು. ಅವ್ರು ಮೊದಲಿನ ಥರ ಇಲ್ಲ, ಹಣ, ಅಧಿಕಾರದ ದರ್ಪ ಅವರ ತಲೆ ಕೆಡಿಸಿದೆ ಅಂತ. ಇನ್ನು ಧಾರಾವಾಹಿಯೊಂದರ ವಿಷಯದಲ್ಲೂ ಅವರು ನಿರ್ಮಾಪಕನಿಗೇ ಟೋಪಿ ಹಾಕಿದ್ದು, ಸದ್ಯಕ್ಕೆ ಆ ಕೇಸು ಕೋರ್ಟಿನಲ್ಲಿದೆ. ಅಲ್ಲದೆ ಚಿತ್ರ ನಿರ್ಮಾ ಪಕರು ತಮ್ಮ ಸಿನಿಮಾಗಳನ್ನು ಚಾನೆಲ್‌ಗಳಿಗೆ ಮಾರೋಕೆ ಅಂತ ಆಯಾ ಚಾನೆಲ್‌ನ ಮುಖ್ಯಸ್ಥರನ್ನು ಸಂಪರ್ಕಿಸೋದು ಸಹಜ. ಭಟ್ಟರು ಹೇಳಿ ಕೇಳಿ ಚಿತ್ರರಂಗದ ದೊಡ್ಡ ತಲೆಗಳಲ್ಲಿ ಒಬ್ಬರು.

ಆದರೆ ಯಾರ ಫೋನನ್ನೂ ಎತ್ತದೆ, ಎಸ್, ನೋ ಎರಡನ್ನೂ ಹೇಳದೆ, ಸಿಕ್ತೀನಿ ಅಂತ ಹೇಳಿ ಎಲ್ಲಿಗೋ ಬರೋಕೆ ಹೇಳಿ, ಅಲ್ಲಿಗೆ ಬಂದ ಅವರನ್ನು ಬೆಳಗ್ಗೆಯಿಂದ ರಾತ್ರಿವರೆಗೂ ಕಾಯಿಸಿ, ಆಮೇಲೆ ಸಿಗೋಕಾಗಲ್ಲ ಅಂತ ಹೇಳಿ ಆಟ ಆಡಿಸುವ ತಮ್ಮ ಬುದ್ಧಿಯನ್ನು ಹುಣಸೂರು ಅವರು ಭಟ್ಟರ ಬಳಿಯೂ ತೋರಿಸಿದ್ದರಿಂದ ಪಾಪ, ಅಷ್ಟು ಸುಲಭವಾಗಿ ಸಣ್ಣ ಪೆಟ್ಟಿಗೆ ಸಿಟ್ಟಿಗೇಳದ ಭಟ್ಟರೂ ಕೂಡಾ ರೌದ್ರಾವತಾರ ತಾಳಿದ್ದಾರೆ. ಆದರೆ, ಯೋಗರಾಜ್ ಭಟ್ ಅವರು ತಮ್ಮದೇ ಆದ ಮಾಸ್ ಶೈಲಿಯಲ್ಲಿ ಹಣಸೂರು ಅವರಿಗೆ ಕ್ಲಾಸ್ ತಗೊಂಡಿದ್ದಾರೆ. ಇದನ್ನು ಕೇಳಿ ಇದು ಇಬ್ಬರೂ ಸೇರಿಕೊಂಡು ಮಾಡ್ತಾ ಇರೋ ಗಿಮಿಕ್ ಇರಬಹುದು ಅಂತ ಕೆಲವು ಅಮಾಯಕರು ಮಾತಾಡ್ತಾ ಇದ್ದಾರೆ.

ಆದ್ರೆ, ಭಟ್ಟರು ಬಳಸಿರೋ ಬೈಗುಳಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿರೋದು ನಿಜವಾದ ಸಿಟ್ಟು ಅಂತ ಖಂಡಿತ ಗೊತ್ತಾಗುತ್ತೆ.

ಲೂಸ್ ಟಾಕ್
ಸ್ಯಾಂಡಲ್‌ವುಡ್ ಡೈರೆಕ್ಟರ್ (ಕಾಲ್ಪನಿಕ ಸಂದರ್ಶನ)
ಏನ್ ಸಾರ್ ಹೆಂಗ್ ನಡೀತಿದೆ ನಿಮ್ಮ ಸಿನಿಮಾ ಶೂಟಿಂಗ್?
-ಅಯ್ಯೋ, ಚಿತ್ರೀಕರಣ ಬರದಿಂದ ಸಾಗುತ್ತಿದೆ ಕಣ್ರೀ
ರೀ, ಅದು ಬರದಿಂದ ಅಲ್ಲ , ಭರದಿಂದ

-ರೀ ಸ್ವಾಮಿ ನಮ್ ಪ್ರೊಡ್ಯೂಸರ್ ಹತ್ರ ದುಡ್ಡಿಲ್ಲ, ಹಣದ ಕೊರತೆ ಇದೆ ಅದಕ್ಕೇ ಬರದಿಂದ ಸಾಗುತ್ತಿದೆ ಅಂತ ಹೇಳಿದ್ದು.

ಓ ಹಂಗೆ , ಆದ್ರೆ ಮೊನ್ನೆ ಶೂಟಿಂಗಿಗೆ ಅಂತ ರಾಜಸ್ಠಾನಕ್ಕೆ ಹೋಗಿದ್ದಾಗ, ನಮ್ ಪ್ರೊಡ್ಯೂಸರ್ ದುಡ್ಡನ್ನ ನೀರಿನ್ ಥರ ಖರ್ಚು ಮಾಡಿದ್ರು ಅಂತಿದ್ರಿ
-ಹೌದು ರೀ, ರಾಜಸ್ಥಾನದಲ್ಲಿ ನೀರಿನ್ ಥರ ಖರ್ಚ್ ಮಾಡಿದ್ರು ಅಂದ್ರೆ ತುಂಬಾ ಕಡಿಮೆ ದುಡ್ಡು ಖರ್ಚು ಮಾಡಿದ್ರು ಅಂತ ಅಲ್ವಾ.

ಓಹೋ, ಯಾಕೋ ಡೈರೆಕ್ಟರ್ ಸಾಹೇಬ್ರು ಬರೀ ಇನ್ ಡೈರೆಕ್ಟ್ ಆಗಿ ಮಾತಾಡ್ತಾ ಇದ್ದೀರ.
-ಏನ್ ಮಾಡೋದು ನಮ್ಮ ನಿರ್ಮಾಪಕರು ಏರಿಯಲ್ ಶಾಟ್ ತೆಗೆಯೋಕೂ ದುಡ್ಡು ಬಿಚ್ಚಲ್ಲ.. ಕಲೆ ಒಳ್ಳೆಯದೇ ನಿಜ, ಆದ್ರೆ ಸಿನಿಮಾ ಕಲೆಗೆ ಬೆಲೆ ಕಟ್ಟಲಿಲ್ಲ ಅಂದ್ರೆ ಹೆಂಗೆ?

೧೫ ದಿನ ಶೂಟಿಂಗ್ ಯಶಸ್ವಿಯಾಗಿ ಮುಗಿಸಿದ್ದೀರ ಅಲ್ವಾ?
-ಹೌದೌದು. ಅದೇ ದೊಡ್ಡ ಸಾಧನೆ. ಸಿನಿಮಾಗಳು ಬಿಡುಗಡೆ ಆದಮೇಲೆ ಯಶಸ್ವಿ ೧೦ನೇ ದಿನ, ೧೫ ದಿನ ಅಂತ ಹಾಕ್ಕೊತಾರಲ್ಲ, ಹಂಗೇ ನಾವು ಅಮೋಘ ೧೫ ದಿನಗಳ ಶೂಟಿಂಗ್ ಮುಕ್ತಾಯ ಅಂತ ಪೋಸ್ಟರ್ ಹಾಕಿಸ್ಬೇಕು ಅಂದ್ಕೊಂಡಿ ದ್ದೀವಿ.

ನೆಟ್ ಪಿಕ್ಸ್
ಖೇಮು ಹುಟ್ಟಾ ಕುರುಡ. ಆದ್ರೆ ಜೊತೆಗೆ ಹುಟ್ಟಾ ಕುಡುಕ. ಊರಲ್ಲಿರೋ ಎಲ್ಲಾ ಬಾರುಗಳು, ಪಬ್ಬುಗಳು ಅವನಿಗೆ ಚೆನ್ನಾಗಿ ಗೊತ್ತಿದ್ದವು. ಕುರುಡನಾದ್ರೂ ಹೋದ ಕಡೆಯ ಹುಡುಗಿಯರನ್ನ ಪಟಾಯಿಸಿ ಪ್ಲೇ ಬಾಯ್ ಎನಿಸಿಕೊಂಡಿದ್ದ. ಹೀಗಿದ್ದ ಖೇಮು ಒಂದಿನ ಒಂದು ಹೊಸ ಪಬ್ಬಿಗೆ ಹೋದ. ಖೇಮುಗೆ ಒಂದು ಸ್ಪೆಷಲ್ ಕಲೆ ಇತ್ತು.

ಏನಂದ್ರೆ ಅಲ್ಲಿ ಕುಡಿಯುವಾಗ ತಿನ್ನೋಕೆ ಅಂತ ಫುಡ್ ತರಿಸುವಾಗ ಅವನು ಆ ಡಿಷ್‌ನಲ್ಲಿ ಅದ್ದಿ ತೆಗೆದ ಸ್ಪೂನ್ ಅನ್ನು ಮೂಸಿ ನೋಡಿ ಅದು ಯಾವ ಡಿಷ್ ಎಂದು ಕಂಡು ಹಿಡಿದು ಆರ್ಡರ್ ಮಾಡುತ್ತಿದ್ದ. ಅಂದು ಕೂಡಾ ಒಂದು ಹೊಸ ಪಬ್ಬಿಗೆ ಹೋಗಿದ್ದರಿಂದ ವೈಟರ್‌ನ ಕರೆದು, ಡ್ರಿಂಕ್ಸ್ ಹೇಳಿದ.

ಸೈಡ್ ಡಿಶ್ ಏನು ಕೊಡ್ಲಿ ಅಂತ ಅವನು ಕೇಳಿದಾಗ, ಖೇಮು ಹೇಳಿದ, ನೀವು ತಯಾರಿಸಿದ ಡಿಶ್‌ನಲ್ಲಿ ಇಟ್ಟಿರೋ ಸ್ಪೂನ್ ತಗೊಂಡ್ ಬಾ. ಸ್ಮೆಲ್ ನೋಡಿ ಹೇಳ್ತೀನಿ ಅಂದ. ವೈಟರ್‌ಗೆ ಆಶ್ಚರ್ಯ ಆದ್ರೂ,. ಸರಿ ಅಂತ ಒಳಗೆ ಹೋಗಿ ಒಂದು ಸ್ಪೂನ್
ತಗೊಂಡ್ ಬಂದು ಕೊಟ್ಟ. ಖೇಮು ಅದನ್ನು ಮೂಸಿ ನೋಡಿ, ಸರಿ ಈ ಚೈನೀಸ್ ಶೆಜ್ವಾನ್ ಫುಡ್ ಚಿಕನ್ ಚೆನ್ನಾಗಿರುತ್ತೆ, ಒಂದ್ ಪ್ಲೇಟ್ ತಗೊಂಡ್ ಬಾ ಅಂದ.

ವೈಟರ್‌ಗೆ ಆಶ್ಚರ್ಯ ಆಯ್ತು. ಸರಿ ಒಂದು ಪ್ಲೇಟ್ ಅದೇ ಚಿಕನ್ ತಂದುಕೊಟ್ಟ. ಖೇಮು ಮುಂದಿನ ಬಾರಿ ಇನ್ನೊಂದು ಡಿಷ್ ಆರ್ಡರ್ ಮಾಡುವಾಗ ಮತ್ತೆ ಸ್ಪೂನ್ ತಗೊಂಡ್ ಬಾ ಅಂದ. ಈ ಬಾರಿ ಅವನನ್ನು ಆಟ ಆಡಿಸಬೇಕು ಅಂತ ಡಿಸೈಡ್ ಮಾಡಿದ ವೈಟರ್, ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಹೆಂಡತಿಯನ್ನು ಕರೆದು, ಈ ಸ್ಪೂನ್ ಅನ್ನು ನಿನ್ನ ಬಾಯಲ್ಲಿ ಒಂದು ಸಲ ಚೀಪಿ, ಆಮೇಲೆ ಅದನ್ನು ನಿನ್ನ ಲಿಪ್ ಸ್ಟಿಕ್‌ಗೆ ಒರೆಸಿ ಕೊಡು ಅಂದ. ಹೆಂಡ್ತಿ ಯಾಕೆ ಅಂದ್ಳು.

ಸುಮ್ನೆ ಹೇಳಿದಷ್ಟು ಮಾಡು ಅಂತ ಮಾಡಿಸಿ ಆ ಸ್ಪೂನ್ ಅನ್ನು ತಗೊಂಡ್ ಬಂದು ಖೇಮುಗೆ ಕೊಟ್ಟ. ಖೇಮು ಅದನ್ನು ಮೂಸಿ ನೋಡಿ ಹೇಳಿದ ಓ, ಲಿಂಡಾ ಈವಾಗ ನಿಮ್ ಹೋಟ್ಲಲ್ಲಿ ಕೆಲ್ಸ ಮಾಡ್ತಾ ಇದ್ದಾಳಾ?

ಲೈನ್ ಮ್ಯಾನ್
ಅವ್ನು – ಮಗಾ, ಅವ್ಳು ನನ್ ಪ್ರಪೋಸಲ್ ರಿಜಕ್ಟ್ ಮಾಡಿಬಿಟ್ಲು. ಹೇಗಾದ್ರೂ ಹೆಲ್ಪ್ ಮಾಡೋ
ಇವ್ನು – ಸಾರಿ, ನಿಮ್ಮಿಬ್ಬರ ‘ಇಂಟರ್ನಲ್ ಅಫರ್ಸ್’ ನಲ್ಲಿ ನಾನು ತಲೆ ಹಾಕಲ್ಲ.
ಕಾಂಟ್ರವರ್ಸಿ ಆಗ್ಬಿಡುತ್ತೆ.
‘ಒಳ್ಳೆ’ ‘ಟೀ’ ಮಾಡೋನು
-ನಮ್ಮ ದೇಶದ ‘ಆಸ್ತಿ’.
’Pಟmಛ್ಟಿಠಿಛಿZ’
‘ಲಿವಿಂಗ್ ಟುಗೆದರ್’ನಲ್ಲಿರೋ ಸ್ನೇಹಿತರನ್ನು ನೋಡಿ ನಾನೂ ಮದ್ವೆ ಆಗಲ್ಲ ಅಂತ ಡಿಸೈಡ್ ಮಾಡೋದು
-‘ಸಹ’ವಾಸ’ ದೋಷ
ಗಾಂಧಿನಗರದ ದುರಂತ
ಕೆಲವು ಸಿನಿಮಾಗಳು ಬಿಡುಗಡೆ ಆಗಿದ್ದು ಗೊತ್ತಾಗೋದು,
-ಸಕ್ಸಸ್ ಮೀಟ್ ಕರೆದಾಗಲೇ.
ಸೋಡಾಬುಡ್ಡಿಗಳ ಸಮಸ್ಯೆ
-ಹಾಕ್ಕೊಂಡ್ರೆ ಪ್ರಪಂಚಕ್ಕೆ ಅವರು ಚೆನ್ನಾಗ್ ಕಾಣಲ್ಲ
-ತೆಗೆದ್ರೆ ಅವರಿಗೆ ಪ್ರಪಂಚ ಚೆನ್ನಾಗ್ ಕಾಣಲ್ಲ
ಹಳೆಯ ಕಾಲದ ನಾಣ್ಯಗಳನ್ನು ಸಂಗ್ರಹ ಮಾಡುವ ಹವ್ಯಾಸ
-ಚಿಲ್ರೆ ಶೋಕಿ
ನಂಬರ್ ಒನ್ ಹೀರೋ ಆಗಿರೋನ ಮೊಬೈಲ್ ನಂಬರ್ ತಗೊಳ್ಳೋಕೆ ಹೋಗಿ
ನಿಮ್ಮ ನಂಬರ್ ಹೇಳಿ ಅಂದ್ರೆ ಯಶಸ್ಸಿನ ಗುಂಗಿನಲ್ಲಿ ಅವನು ಹೇಳೋದು
-ಒನ್
ಕಟಿಂಗ್ ಶಾಪ್‌ನಲ್ಲಿ ನೆಲದ ಮೇಲೆ ಬಿದ್ದ ಕತ್ತರಿಸಿದ ಕೂದಲ ರಾಶಿ
-‘ಕೂದಲ’ ಸಂಗಮ
ಆಸ್ಪತ್ರೆಗೆ ಹೋಗದೇ ಮನೆಯ ಆಗುವ ಹೆರಿಗೆ
-ಹೋಮ್ ಡೆಲಿವರಿ
ಪೊಲೀಸರೇ ಹೆಚ್ಚಾಗಿ ಇರುವ ಜಾಗ
-ಪೊಲೀಸ್ ‘ಬೆಲ್ಟ್’