Thursday, 19th September 2024

ಹೌದ್ರೀ, ನಾನು ಬಿಜೆಪಿ-ಕಾರ್‌_ಯಕರ್ತ !

ತುಂಟರಗಾಳಿ

ಸಿನಿಗನ್ನಡ

ಸಂಕ್ರಾಂತಿ ಸೌತ್ ಇಂಡಿಯನ್ ಸಿನಿಮಾಗಳು ಧಮಾಕಾ ಮಾಡುತ್ತವೆ. ಆದರೆ, ಸೌತ್ ಇಂಡಿಯನ್ ಅಂದ್ರೆ ಇದರಲ್ಲಿ
ತೆಲುಗು ತಮಿಳು ಚಿತ್ರಗಳನ್ನು ಮಾತ್ರ ಸೇರಿಸಿಕೊಳ್ಳಬೇಕಾಗಿ ವಿನಂತಿ, ಇದು ಕನ್ನಡ ಸಿನಿಮಾಗಳಿಗೆ ಅನ್ವಯ ಆಗೋದಿಲ್ಲ ಅಂತಿದ್ದಾರೆ ಕನ್ನಡ ಚಿತ್ರರಸಿಕರು.

ಯಾಕಂದ್ರೆ ಪ್ರತಿವರ್ಷದ ಆರಂಭದಲ್ಲೂ ಸಂಕ್ರಾಂತಿ ಸಮಯದಲ್ಲಿ ತೆಲುಗು ತಮಿಳಿನ ಘಟಾನುಘಟಿ ಸ್ಟಾರ್ ನಟರು ತಮ್ಮ ಚಿತ್ರಗಳನ್ನು ಪ್ರತಿಷ್ಠೆಯ ವಿಷಯವನ್ನಾಗಿಸಿ ಬಿಡುಗಡೆ ಮಾಡುತ್ತಾರೆ. ಅನಧಿಕೃತ ಸ್ಟಾರ್ ವಾರ್ ನಡೆಸುತ್ತಾರೆ. ಇದರಲ್ಲಿ ಗೆದ್ದವರು ಬೀಗುತ್ತಾರೆ. ಸೋತವರು ಮುಂದಿನ ವರ್ಷ ನೋಡ್ಕತೀನಿ ಅನ್ನುತ್ತಾರೆ. ಆದರೆ ಒಟ್ಟಿನಲ್ಲಿ ಇವರು ಸಿನಿಮಾ ಪ್ರಿಯರಿಗೆ ಹಬ್ಬದ ಸಮಯದಲ್ಲಿ ಹಬ್ಬದೂಟ ಕೊಡೋದಂತೂ ನಿಜ.

ಬಾಲಕೃಷ್ಣ, ಚಿರಂಜೀವಿ, ವಿಜಯ, ಅಜಿತ್ ಮುಂತಾದ ಸ್ಟಾರ್‌ಗಳು ಈ ಬಾರಿ ಕೂಡಾ ತಮ್ಮ ಚಿತ್ರಗಳನ್ನು ಸಂಕ್ರಾಂತಿಯಂದು ಬಿಡುಗಡೆ ಮಾಡಿದ್ದಾರೆ. ಆದರೆ ಕನ್ನಡ ಚಿತ್ರರಂಗದಿಂದ ಮಾತ್ರ ಯಾವುದೇ ದೊಡ್ಡ ಸಿನಿಮಾ ಬಂದಿಲ್ಲ. ಬಹುಷಃ ರವಿಚಂದ್ರನ್ ಅವರೊಬ್ಬರೇ ಕನ್ನಡದಲ್ಲಿ ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಮಾಡುವ ಕೆಲಸ ಮಾಡ್ತಾ ಇದ್ರು. ಈಗ ಅವರ ಹವಾ ಕಮ್ಮಿ ಆದಮೇಲೆ ಈ ಸಂತತಿ ಕಡಿಮೆ ಆಗಿದೆ. ನಮ್ಮ ಕನ್ನಡ ಚಿತ್ರರಂಗದ ಇತರ ಹೀರೋಗಳಿಗೆ ತೆರೆಯ ಮೇಲೆ ಹವಾ, ಗಿವಾ ಅಂತ ಡೈಲಾಗ್ ಹೊಡೆದು ಕೌಂಟರ್ ಕೊಡೋ ನಮ್ಮ ಇತ್ತೀಚಿನ ನಾಯಕರು ಪರಭಾಷೆಯ ಸಿನಿಮಾಗಳ ಮುಂದೆ ಖದರ್ ತೋರಿಸೋಕೆ ಧೈರ್ಯ ಮಾಡ್ತಾ ಇಲ್ಲ.

ಯಾವ ಸಿನಿಮಾಗಳೂ ಈ ಸಮಯಕ್ಕೆ ರೆಡಿ ಇಲ್ಲ ಅಂದ್ರೆ ಓಕೆ. ಆದ್ರೆ ದರ್ಶನ್ ಅವರ ಕ್ರಾಂತಿ ಸಿನಿಮಾ ಆರು ತಿಂಗಳ ಮುನ್ನವೇ ಜನವರಿ ೨೬ಕ್ಕೆ ಬಿಡುಗಡೆ ಅಂತ ಅನೌ ಮಾಡಿತ್ತು. ತಾನು ಅಷ್ಟು ದೊಡ್ಡ ಹೀರೋ ಅಂತ ಹೇಳಿಕೊಳ್ಳುವ ದರ್ಶನ್ ತಮ್ಮ ಕ್ರಾಂತಿ ಚಿತ್ರವನ್ನು ಸಂಕ್ರಾಂತಿಯಂದೇ ಬಿಡುಗಡೆ ಮಾಡಿ ಪರಭಾಷೆ ಚಿತ್ರಗಳ ವಿರುದ್ಧ ಕ್ರಾಂತಿ ಮಾಡಬಹುದಿತ್ತು. ಆದರೆ ಈ ಪರಭಾಷಾ ಚಿತ್ರಗಳ ಹಾವಳಿಯಲ್ಲಿ ನಮಗೆ ಥಿಯೇಟರ್ ಸಿಕ್ತಾ ಇಲ್ಲ ಅಂತ ತೊಂದರೆಗೆ ಈಡಾಗೋದು ಯಾಕೆ ಅಂತ ಸುಮ್ಮನಿರಬೇಕು ಅಂದ್ಕೊಂಡು ಕನ್ನಡಿಗರು ತೆಪ್ಪಗಿರಬೇಕು ಅಷ್ಟೇ.

ಲೂಸ್ ಟಾಕ್
ಸ್ಯಾಂಟ್ರೋ ರವಿ (ಕಾಲ್ಪನಿಕ ಸಂದರ್ಶನ)
ಕಡೆಗೂ ಅರೆ ಆಗ್ಬಿಟ್ಟಿದ್ದೀರಾ, ಹೆಂಗಿದೆ ಫೀಲಿಂಗು?
-ಒಂಥರಾ ಹೊಸ ಅನುಭವ. ಇ ದಿನ ಬರೀ ಕಾರುಗಳ ಬಗ್ಗೆ ಗೊತ್ತಿತ್ತು. ಈಗ ಪೊಲೀಸ್ ಜೀಪ್ ಬಗ್ಗೆನೂ ಗೊತ್ತಾಯ್ತು.

ಸರಿ, ಜೈಲಲ್ಲಿ ಹೆಂಗ್ ಟೈಮ್ ಪಾಸ್ ಮಾಡ್ತೀರಾ ?
-ಹಳೇದ್ನೆ ನೆನೆಸ್ಕೊಂಡು, ‘ಯಾದೋಂಕಾ ಕಾರವಾನ್’ ಅಂತ ಒಂದು ಪುಸ್ತಕ ಬರಿಬೇಕು ಅಂತಿದ್ದೀನಿ.

ಸರಕಾರದ ಮೂಲಕ ಪೊಲೀಸ್ನೋರಿಗೆ ಕೆಲಸ ಮಾಡಿಸಿಕೊಡ್ತಾ ಇದ್ರಂತೆ. ಈಗ ನಿಮ್ಮ ಸಹಾಯಕ್ಕೆ ಯಾರೂ ಬರ್ತಾ ಇಲ್ವೇ?
-ನಮ್ ಜನ ಒಳಗೊಂದು ಹೊರಗೊಂದು ಅನ್ನೋದು ಏನಕ್ಕೆ ಅಂತ ಈಗ ಅರ್ಥ ಆಗ್ತಿದೆ. ನಾವು ಜೈಲಿನ ಹೊರಗಿದ್ದಾಗ ಒಂದು, ಒಳಗಿದ್ದಾಗ ಒಂದು ಅಂತ.

ಆದ್ರೂ ನಿಮ್ಮದು ಭಂಡ ಬಾಳು ಅಂತ ನಿಮಗೇ ಅನ್ನಿಸ್ತಿಲ್ವಾ?
-ಅಯ್ಯೋ, ಇವತ್ತಿನ ಸಮಾಜದಲ್ಲಿ ಜನ ವಿಷ ಕಾರ್ಕೊಂಡ್ ಬದುಕ್ತಾ ಇದ್ದಾರೆ, ರಕ್ತ ಕಾರ್ಕೊಂಡ್ ಸಾಯ್ತಾ ಇzರೆ. ನಾನು ಕಾರ್ ಕೊಂಡು, ಕಾರ್ ಇಟ್ಕೊಂಡು ಬದುಕ್ತಾ ಇದ್ದೆ, ಅಷ್ಟೇ ಬಿಡ್ರೀ.

ಅಂದಹಾಗೆ ನೀವು ಬಿಜೆಪಿ ಕಾರ್ಯಕರ್ತ ಅಂತ ಹೇಳಿಕೆ ಕೊಟ್ಟಿದ್ದೀರಂತೆ, ನಿಜಾನಾ?
-ಹೌದ್ರೀ, ನಾನು ಬಿಜೆಪಿ ಕಾರ್-ಯಕರ್ತ.

ನೆಟ್ ಪಿಕ್ಸ್

ದೊಡ್ಡ ಸಾಹುಕಾರನಾಗಿದ್ದ ಖೇಮುಗೆ ಅರ್ಜೆಂಟ್ ಆಗಿ ಒಂದು ಮೇಜರ್ ಆಪರೇಷನ್ ಆಗಬೇಕಿತ್ತು. ಡಾಕ್ಟರ್ ಅದಕ್ಕೆ ಬೇಕಾದ ಎಲ್ಲ ತಯಾರಿಯನ್ನೂ ಮಾಡಿಕೊಂಡಿದ್ದರು. ಖೇಮು ಕೂಡ ಸಾಹುಕಾರನಾಗಿದ್ದುದರಿಂದ ಆಪರೇಷನ್‌ಗೆ ಬೇಕಾದ ದುಡ್ಡನ್ನೆ ಸುಲಭವಾಗಿ ಹೊಂದಿಸಿಬಿಟ್ಟಿದ್ದ. ಆದರೆ ಒಂದು ಸಮಸ್ಯೆ ಎದುರಾಗಿತ್ತು. ಖೇಮುದು ಒಂದು ಅಪರೂಪದ ಬ್ಲಡ್ ಗ್ರೂಪ್ ಆಗಿತ್ತು. ಆಪರೇಶನ್ ಸಮಯದಲ್ಲಿ ಬ್ಲಡ್ ತುಂಬಾ ಹೋಗುತ್ತೆ.

ಆ ಗ್ರೂಪ್ ಬ್ಲಡ್ ಸ್ಟಾಕ್ ಇರಬೇಕು ಅಂದ್ರು ಡಾಕ್ಟರ್. ಆದರೆ ದಾನಿಗಳು ಯಾರೂ ಸಿಗಲಿಲ್ಲ. ಕೊನೆಗೆ ಒಬ್ಬ ಸೇಟು ತಾನು ಬ್ಲಡ್ ಕೊಡ್ತೀನಿ ಅಂತ ಮುಂದೆ ಬಂದ. ಖೇಮುಗೆ ಸಮಾಧಾನ ಆಯ್ತು. ಆಗ ತನಗೆ ಕಷ್ಟಕಾಲದಲ್ಲಿ ಸಹಾಯ ಮಾಡುತ್ತಿರುವ ಸೇಟುಗೆ ಏನಾದ್ರೂ ಕೊಡಬೇಕು ಅಂತ ಖೇಮು ಅವನಿಗೆ ಒಂದು ಬೆಂಜ್ ಕಾರು, ೫೦ ಲಕ್ಷ ಕ್ಯಾಶ್, ಅವನ ಹೆಂಡತಿಗೆ ಒಂದು
ಡೈಮಂಡ್ ನೆಕ್ಲೇಸ್ ಅನ್ನು ಗಿಫ್ಟ್ ಆಗಿ ಕೊಟ್ಟ. ಆಪರೇಷನ್ ಆಯ್ತು. ಖೇಮು ಸುಧಾರಿಸಿಕೊಂಡ. ಆದರೆ ಕೆಲವೇ ದಿನಗಳಲ್ಲಿ ಖೇಮುಗೆ ಮತ್ತೆ ಹುಷಾರು ತಪ್ಪಿ ಮತ್ತೆ ಆಪರೇಷನ್ ಮಾಡಬೇಕಾಯ್ತು. ಈ ಬಾರಿ ಕೂಡ ಸೇಟು ಬ್ಲಡ್ ಕೊಟ್ಟ.

ಆಪರೇಷನ್ ನಂತರ ಖೇಮು ಸೇಟುಗೆ ಒಂದು ಥ್ಯಾಂಕ್ ಯೂ ಕಾರ್ಡ್ ಜೊತೆಗೆ ಒಂದು ಸಣ್ಣ ಚಾಕೋಲೇಟ್ ಬಾಕ್ಸ್ ಕಳುಹಿಸಿದ. ಸೇಟುಗೆ ಬೇಜಾರಾಯ್ತು. ಅವನು ಖೇಮುಗೆ ಕಾಲ್ ಮಾಡಿ ಏನಿದು, ಕಳೆದ ಬಾರಿ ನೋಡಿದ್ರೆ, ಬೆಂಜ್ ಕಾರು, ೫೦ ಲಕ್ಷ ಕ್ಯಾಶ್, ನನ್ನ ಹೆಂಡತಿಗೆ ಒಂದು ಡೈಮಂಡ್ ನೆಕ್ಲೇಸ್ ಕೊಟ್ಟಿದ್ರಿ, ಈ ಸಲ ಬರೀ ಕಾರ್ಡ್, ನಾಲಕ್ ಚಾಕಲೇಟು
ಅಷ್ಟೇನಾ? ಅಂದ. ಅದಕ್ಕೆ ಖೇಮು ಹೇಳಿದ ಏನ್ ಮಾಡೋದು ಬ್ರದರ್, ಈಗ ನನ್ನ ಮೈಯಲ್ಲಿ ಹರೀತಿರೋದು ಸೇಟು ರಕ್ತ.

ಲೈನ್ ಮ್ಯಾನ್

ಸಿಗರೇಟ್ ಫಿಲಾಸಫಿ

-ನಾಕ್ ಜನದ ಜೊತೆ ಇದ್ದಾಗ, ಬಂದೆ ೫ ನಿಮಿಷ ಅಂತ ಎದ್ದಾಗಿ ಸಿಗರೇಟ್ ಸೇದ್ಕೊಂಡ್ ವಾಪಸ್ ಬಂದ್ರೆ, ಹತ್ರ ಕೂತವರಿಗೆ ಮಾತ್ರ ಗೊತ್ತಾಗುತ್ತೆ, ಆದ್ರೆ, ಬರುವಾಗ ಯಾರಿಗೂ ವಾಸ್ನೆ ಬರಬಾರದು ಅಂತ ಬಬಲ್ ಗಮ್ ಬಾಯಲ್ ಹಾಕ್ಕೊಂಡ್ ಬಂದ್ರೆ ಎಲ್ಲರಿಗೂ ಗೊತ್ತಾಗುತ್ತೆ.

ಇಂಡಿಯಾ uಈಐ ಟೀಮ್ ಗಿಂತ ಠಿ೨೦ ಬ್ಯಾಟಿಂಗ್ ಲೈನ್ ಅಪ್ ನಲ್ಲಿ ತುಂಬಾ ’ಈಛಿmಠಿe’ಇದೆ.
– ಯಾಕಂದ್ರೆ ಲಾ ಬ್ಯಾಟ್ಸ್ ಮನ್ ಅರ್ಶ್ ’bಛಿಛಿm’ಸಿಂಗ್

ಅಕ್ಷಯ್ ಕುಮಾರ್ ಪ್ಯಾಡ್ ಮ್ಯಾನ್ ಸಿನಿಮಾ ಕನ್ನಕ್ಕೆ ರಿಮೇಕ್ ಮಾಡ್ತಾರಂತೆ. ಹೆಸರು ಏನಿರಬಹುದು?
-ಒಂದು ಮುಟ್ಟಿನ ಕಥೆ

ಚಾಹಾಲ್ ಚಾಕ್ಲೆಟ್
-ಚಾಕ್ಲೆಟ್ ಕೊಡಿಸ್ತೀನಿ ಅಂತ ಆಸೆ ತೋರ್ಸಿ ಮಕ್ಕಳನ್ನ ಕಿಡ್ನಾಪ್ ಮಾಡೋರಿಗೂ, ಎರಡು ಬಾಲ್ ಫ್ಲೈಟ್ ಮಾಡಿ, ೪, ೬ ಹೊಡೆಸಿಕೊಂಡು, ೩ನೇ ಬಾಲಲ್ಲಿ ಬಿಸ್ಕೆಟ್ ಹಾಕಿ ವಿಕೆಟ್ ತೆಗೆಯೋ ಚಾಹಾಲ್‌ಗೂ ಏನೂ ವ್ಯತ್ಯಾಸ ಇಲ್ಲ.

ಇಬ್ಬರು ಮನುಷ್ಯರು ಒಂದೇ ಥರ ಕಂಡರೂ ತುಂಬಾ ವ್ಯತ್ಯಾಸ ಇರುತ್ತೆ.
-ಎರಡೂ, ‘ಕರುಳು ಕತ್ತರಿಸುವ’ ಸಿನಿಮಾಗಳೇ ಆದ್ರೂ, ಸಾಯಿ ಪ್ರಕಾಶ್ ಸ್ಟೈಲೇ ಬೇರೆ, ಸಾಯಿ ಕುಮಾರ್ ಸ್ಟೈಲೇ ಬೇರೆ.

ಹೋಮ್ ಸೈ
-ಹೆಂಡ್ತೀನ ಹೋಮ್ ಮಿನಿಸ್ಟರ್ ಅನ್ನೋದ್ ತಪ್ಪು ಕಣ್ರೀ. ಅಬಕಾರಿ ಮಿನಿಸ್ಟರ್ ಅನ್ಬೇಕು. ಗಂಡ ಎಣ್ಣೆ ಹೊಡಿಬೇಕು ಅಂದ್ರೆ ಅವ್ಳೇ ಅಲ್ವಾ ಪರ್ಮಿಷನ್ ಕೊಡೋದು?
ಕಿವಿ ‘ತುದಿಯಲ್ಲಿ’ ಹಾಕೋ ಕಿವಿಯೋಲೆಗಳ ಸ್ಟಾಕ್ ಕ್ಲಿಯರೆ
-‘ಇಯರ್ ಎಂಡ್’ ಸೇಲ್
‘ಕತ್ತಲಾದ’ ಮೇಲೆ ‘ಬೆಳಕಿಗೆ’ ಬರುವ ಪ್ರತಿಭೆಗಳು
-ಕುಡುಕರು ಅಂದ್ರೆ
ಎಣ್ಣೆ ಹೊಡೆದು ಮಾಡೋ ವಿಡಿಯೋ ಕಾಲ್
-ಝೂಮ್ ಕಾಲ್