Saturday, 14th December 2024

ವೀರ್ಯ ಸಿದ್ದಾಂತ

ರಾವ್ ಭಾಜಿ

journocate@gmail.com

ತನ್ನ ಅನುಪಸ್ಥಿತಿಯಲ್ಲಿ, ಮಾರುವೇಷದಲ್ಲಿ ಬಂದು ತನ್ನ ಪತ್ನಿಯನ್ನು ಕೃತ್ರಿಮವಾಗಿ ಸುಖಿಸಿದ್ದ ದೇವೇಂದ್ರನಿಗೆ ಗೌತಮ ಮಹರ್ಷಿ ನೀಡಿದ ಶಾಪ ಅವನ ಮೈಯೆಲ್ಲಾಯೋನಿಮಯಯಾಗಲೆಂದು. ತಿಳಿಯದೆ ಮಾಡಿದ ತಪ್ಪಿಗೆ ಋಷಿಪತ್ನಿ ಅಹಲ್ಯೆಗೆ ಸಿಕ್ಕ ಶಾಪದ ಮೇರೆಗೆ ಅವಳು ಕಗಿಬಿಟ್ಟಳು. ಆ ಶಾಪದ ಅವಽ ಬರೋಬ್ಬರಿ ಅರವತ್ತು ಸಹಸ್ರ ವರ್ಷಗಳು.

ಪರಪುರುಷನೊಟ್ಟಿಗೆ ಆಕೆ ಬೆರೆತದ್ದು ಆತ ಪರಪುರುಷನೆಂಬ ಅರಿವಿಲ್ಲದೆ. ಆದರೆ, ಅದನ್ನು ಕೇಳಿ ತಿಳಿದುಕೊಳ್ಳುವ ವ್ಯವಧಾನ ಋಷಿಶ್ರೇಷ್ಠನಿಗಿರಲಿಲ್ಲ. ಶ್ರೀ ರಾಮಚಂದ್ರನ ಪಾದ ಸ್ಪರ್ಶದಿಂದ ಆಕೆ ಮತ್ತೆ ತನ್ನ ಮೂಲ ಸ್ವರೂಪ ಪಡೆಯಲು, ಪಡೆದು ತನ್ನ ನಿರಪರಾಧಿತ್ವವನ್ನು ಸಾಬೀತುಗೊಳಿಸಲು ಅಷ್ಟು ವರ್ಷ ಸವೆಸಬೇಕಾಯಿತು. ವಿವಾಹೇ ತರ ಮಿಲನ ಶಿಕ್ಷಾರ್ಹ ಅಪರಾಧವಲ್ಲ ವೆಂಬ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಲಾಭ ಪಡೆಯಲು

ಅಹಲ್ಯೆ ಕಲಿಯುಗದಲ್ಲಿ ಹುಟ್ಟಬೇಕಿತ್ತು. ಆದರೆ, ನಮ್ಮ ಹುಟ್ಟು ನಮ್ಮ ನಿಯಂತ್ರಣ ದಲ್ಲಿಲ್ಲವೇ! ಸೃಷ್ಟಿಕ್ರಿಯೆಯಲ್ಲಿ ಹೊರ ಹೊಮ್ಮುವ ವೀರ್ಯಾಣುಗಳ ಸಂಖ್ಯೆ ದಶ ಲಕ್ಷೋಪ ಲಕ್ಷ, ಅಂಡದ -ಲೀಕರಣಕ್ಕೆ ಬೇಕಾದ ವೀರ್ಯಾಣು ಒಂದೇ ಒಂದು. ಉಳಿದವು ಮಾರ್ಗಾಯಾಸದಿಂದ ಬಳಲಿ ಸಾಯುತ್ತವೆ! ಆ ನಿರ್ದಿಷ್ಟ ರೇತಸ್ಸು ಯಾವು ದಾಗಬೇಕೆಂದು ಯಾರಿಂದ, ಎಲ್ಲಿ ನಿರ್ಧರಿಸಲ್ಪಡುತ್ತದೆಂಬುದನ್ನು ಧರ್ಮರಾಯನೂ ಉತ್ತರಿಸಲಾರ. ಮುಸ್ಲಿಮನಾಗಿ ಮರುಹುಟ್ಟು ಬಯಸುವ ಹರದನ ಹಳ್ಳಿಯ ನಾಯಕರೂ ಇಚ್ಛಾ ಜನ್ಮಿಯೇನಲ್ಲ. ಇರಲಿ. ಮೇಲ್ಮನವಿಗವಕಾಶವಿಲ್ಲದ ಆ ದಿನಗಳಲ್ಲಿ ಅಹಲ್ಯೆ ಗಂಡನ ಶಾಪದ ವಿರುದ್ಧ ಪುನರ್‌ಮನವಿ ಮಾಡುತ್ತಾಳೆ. ಶಾಪ ನಿವಾರಣೆಯ ಭರವಸೆ ದೊರಕುತ್ತದೆ.

ಅಹಲ್ಯೆಯ ಪುಣ್ಯ, ಆಕೆ ಅಷ್ಟು ಸುದೀರ್ಘ ಕಾಲವನ್ನು ಕಗಿ ಕಳೆದಳು. ಕಲ್ಲಿಗೆಲ್ಲಿಯ ಭಾವನೆ? ಕಲ್ಲಿಗೆಲ್ಲಿಯ ನೋವು, ಚಳಿ, ಗಾಳಿ, ಮಳೆ? ಮೈಸೂರು ನಗರದ ವಿವಿಧ ಕೌತುಕಗಳ ಸುತ್ತ ನಾನು ನಿರ್ಮಿಸಿದ ಸಾಕ್ಷ್ಯಚಿತ್ರ ಅಮೆರಿಕದಲ್ಲಿ ಬಿಡುಗಡೆಯಾಯಿತು.
ಆ ಸಮಾರಂಭಕ್ಕೆ ವೈದ್ಯಮಿತ್ರರಿಬ್ಬರನ್ನು ಆಮಂತ್ರಿಸಿದ್ದೆ. ಅವರಬ್ಬರು ಮತ್ತು ನಾನು ವೀಸಾ ಸಂದರ್ಶನಕ್ಕೆ ಚೆನ್ನೈಗೆ ಒಟ್ಟಿಗೆ
ಹೋಗಿದ್ದೆವು. ಅವರಿಗೆ ವೀಸಾ ನೀಡಲಾಯಿತು, ನನ್ನ ವೀಸಾವನ್ನು, ಕಾರಣ ನೀಡದೆಯೇ, ತಡ ಹಿಡಿಯಲಾಯಿತು.

ಆಹ್ವಾನಿತರ ಅರ್ಜಿಯನ್ನು ಪುರಸ್ಕರಿಸಿದ್ದೀರಿ, ಆಹ್ವಾನಿಸಿದವನಿಗೆ ವೀಸಾ ತಡವಾಗಿ ನೀಡುತ್ತಿದ್ದೀರಿ, ಏನಿದು ನೀವು ಮಾಡುವ ಯಡವಟ್ಟುಎಂದು ಹಾರಾಡಿದೆ. ದನಿ ಏರಿಸುವ ಮೂಲಕ ಬಗೆಹರಿಸಲಾಗದ ಹಲವು ಸಮಸ್ಯೆಗಳಲ್ಲಿ ಇದೂ ಒಂದು. ನಿಮ್ಮ ಅಂತಿಮ ಯಾತ್ರೆಯ ಗಳಿಗೆಯ ಆಯ್ಕೆ ಹಾಗೂ ನಿಮ್ಮ ಅಮೆರಿಕ ಯಾತ್ರೆಯ ಖಚಿತತೆ ಎರಡೂ ನಿಮ್ಮ ಕೈಯಲ್ಲಿಲ್ಲ ಎಂಬ ಸತ್ಯದ ದರ್ಶನ ಆ ಮುನ್ನವೇ ನನಗಾಗಿತ್ತು.

ನಿಮಗೆ ವೀಸಾ ನೀಡಿದರೆ ಅಮೆರಿಕದಿಂದ ಹಿಂತಿರುಗುತ್ತೀರೆಂದು ನನಗೆ ಮನವರಿಕೆ ಮಾಡಿಕೊಡುವಲ್ಲಿ ನೀವು ವಿಫಲರಾಗಿದ್ದೀರಿ. ಮುಂದಿನ ವಾರ ಮತ್ತೆ ಬನ್ನಿ, ಮತ್ತೊಬ್ಬ ವೀಸಾ ಅಧಿಕಾರಿ ನಿಮ್ಮ ಅರ್ಜಿಯ ಬಗ್ಗೆ ಬೇರೊಂದೇ ದೃಷ್ಟಿಕೋನ ಹೊಂದಿರುವ ಸಾಧ್ಯತೆ ಇದೆ ಎಂದು ಮರಣದಂಡನೆಯ ತೀರ್ಪನ್ನು ಓದುವ ನ್ಯಾಯಾಧೀಶರ ದನಿಯಲ್ಲಿ ಹೇಳಿದ. ಆಗಲೂ ನನ್ನ ಅಮೆರಿಕದ ಕಾರ್ಯಕ್ರಮ ಪಲ್ಲಟವಾಗಿತ್ತು. ಆಗಲೂ ಪಿತ್ತ ನೆತ್ತಿಗೇರಿತ್ತು. ಬಾಂಬೆಯ ಕೌನ್ಸಲ್ ಜನರಲ್ಗೆ ಉಗ್ರಪದಗಳನ್ನೊಳಗೊಂಡ ಪತ್ರ ಬರೆದಿz. ನನಗೆ ಸಿಟ್ಟು ಬಂದದ್ದು ವೀಸಾ ತಡಮಾಡಿದ್ದಕ್ಕಲ್ಲ, ಒಂದು ವಾರದ ಮುಂದೂಡುವಿಕೆಗೆ ನೀಡಿದ ಅಸಂಬದ್ಧ ಕಾರಣಕ್ಕೆ. ಮರುಹಾಜರಿಯಾದ ಕ್ಷಣಾರ್ಧದಲ್ಲಿ ವೀಸಾ ಸಿಕ್ಕಿತು.

ಸಿಕ್ಕಿದ್ದಕ್ಕೆ ಮತ್ತಷ್ಟು ಕೋಪ ಉಕ್ಕಿತು. ಮುದ್ರೆ ಒತ್ತಿದ ಮತ್ತೊಬ್ಬ ಅಧಿಕಾರಿಗೆ ನಾನು ಅಮೆರಿಕದ ಉಳಿದುಕೊಳ್ಳಲು ಸಂಚು ಹೂಡಿಲ್ಲವೆಂದು ಹೇಗೆ ತಿಳಿದುಬಂತೋ ಕಾಣೆ. ಅದೂ ಆಕಸ್ಮಿಕವೇ. ಆ ಒಂದು ನಿರ್ದಿಷ್ಟ ವೀರ್ಯಾಣುವಿಗೆ -ಲೀಕರಣದ ಅವಕಾಶ ಸಿಕ್ಕಂತೆ. ಪ್ರಾಯಶಃ, ದಿನದ ಆರಂಭದ ನನ್ನನ್ನು ಸಂದರ್ಶಿಸಿದ್ದರಿಂದ ಮುದ್ರೆ ಒತ್ತಿ, ಒತ್ತಿ ಆಕೆ ಇನ್ನೂ ಸುಸ್ತಾಗಿರ ಲಿಲ್ಲವೇನೋ ಎಂಬುದು ಒಂದು ಊಹೆ. ದಿನದ ಆರಂಭದ ಸಂದರ್ಶನವಿದ್ದು ನನ್ನ ಮುಖವಿನ್ನೂ ತಾಜಾತನ ಉಳಿಸಿ ಕೊಂಡಿದ್ದೂ ಕಾರಣವಿರಬಹುದೇನೊ.

ವಾರದ ಹಿಂದೆ, ಸಂದರ್ಶಿಸಿದ ಅಧಿಕಾರಿ ಪುರುಷ, ಎರಡನೇ ಸಂದರ್ಶನ ನಡೆಸಿದ ಅಧಿಕಾರಿ ಮಹಿಳೆ, ನಾನು ಪುರುಷ. ಅದೇ ನಾದರೂ ಕಾರಣವಿದ್ದೀತೇ? ದಾಂಪತ್ಯ ಕಾರಣಗಳಿಂದ ಆಕೆಯ ಮೂಡ್ ಚೆನ್ನಾಗಿದ್ದು ಅದರ ಪರೋಕ್ಷ ಲಾಭ ನನಗಾಯಿತೋ? ಯಾವುದೂ ಖಚಿತವಿಲ್ಲ. ಎಲ್ಲವೂ ಊಹೆ. ವೀಸಾ ಪಡೆದವರ, ಪಡೆಯದಿರುವವರ ಕಲ್ಪನಾ ಪಯಣ. ಬಹುತೇಕ ಸಂದರ್ಭ ಗಳಲ್ಲಿ, ಫೇಸ್‌ಬುಕ್‌ನಲ್ಲಿ ನಿಮ್ಮ ನಿಲುಮೆಗೆ ದೊರಕುವ ಲೈಕ್‌ಗಳ ಹಿಂದೆಯೂ ಇಂಥದ್ದೇ ಒಂದು ತರ್ಕರಾಹಿತ್ಯವಿರುತ್ತದೆ.

ಲೈಕ್ ದೊರಕದೆ ಹೋದಾಗಲೂ ತರ್ಕವಿಲ್ಲದಿರುವ ಸಾಧ್ಯತೆ ಇದ್ದೇ ಇದೆ. ಅದೇ ಫೇಸ್ಬುಕ್ನಲ್ಲಿ ಲಭ್ಯವಿರುವ ರೀಲ್ ವಿಭಾಗದಲ್ಲಿ ಪ್ರದರ್ಶಿತವಾಗುವ ವಿಡಿಯೊನಲ್ಲಿ ಹುಲಿ ತನ್ನ ಕೈಗೆಟುಕುವ ಹರಿಣವನ್ನು ಮುಟ್ಟದೆ ಅಚ್ಚರಿ ಹುಟ್ಟಿಸುತ್ತದೆ. ಬಹುಷಃ ಉಂಡದ್ದು ಜೀರ್ಣವಾಗದಿರುವ ಕಾರಣಕ್ಕೆಂದು ಊಹಿಸಬಹುದು. ಆದರೆ ಲೈಕ್ ಸಿಗುವುದರ/ಸಿಗದಿರುವುದರ ಹಿಂದಿನ ರಹಸ್ಯವನ್ನು ಬೇಧಿಸಲು ಧರ್ಮರಾಯ ಮತ್ತೊಮ್ಮೆ ಅಸಮರ್ಥನಾಗುತ್ತಾನೆ.

ನಮ್ಮಲ್ಲಿ ಕೆಲವರು eನಪೀಠವನ್ನೇರಿದ್ದು ಹೇಗೆ, ಮತ್ತೆ ಕೆಲವರಿಗೆ ಅದು ದೊರಕದಿದ್ದುದು ಹೇಗೆ; ಕೆಲವರು ಪ್ರಧಾನಿ/ರಾಷ್ಟ್ರಾಧ್ಯ ಕ್ಷರುಗಳಾಗಿದ್ದು, ಮತ್ತೆ ಕೆಲವರು ಆಗದಿದ್ದುದು; ಅಪಾತ್ರರಿಗೆ ಮನ್ನಣೆ ಸಿಕ್ಕಿದ್ದು, ಸುಭಗರಿಗೆ ಅಂತಿಮ ಗೌರವವೂ ಸಿಗದಂತಾ ಗಿದ್ದು; ಮಿಲಿಟರಿಯೂ ಸೇರಿದಂತೆ ಎಲ್ಲಾ ರಂಗಗಳಲ್ಲೂ ಯೋಗ್ಯರು ಹಿನ್ನೆಲೆಯಲ್ಲಿ ಉಳಿದುಕೊಂಡಿದ್ದು, ಅನರ್ಹರನೇಕರು ಮಿಂಚಿದ್ದು; ಇತ್ಯಾದಿ ಅಗಣಿತ ಕೌತುಕಗಳನ್ನು ವಿವರಿಸುವ ಪ್ರಮೇಯ ಬಂದರೆ, ಪಂಚಪಾಂಡವರ ನಾಯಕನೂ ಬ್ಬೆಬ್ಬೆ ಬ್ಬೆ… ಎನ್ನಬೇಕಾದೀತೇನೊ! ಕೌತುಕಗಳಿಗೆ ಕೊನೆ ಮೊದಲಿಲ್ಲ. ಮುಂದೆ ಓದಿ.

ನನ್ನದೊಂದು ಕೇಸ್ ನಡೆಯುತ್ತಿದೆ. ನಮ್ಮ -ಟ್‌ನ ನೆತ್ತಿಯ ಮೇಲೆ ಅನಧಿಕೃತ ಶೌಚಾಲಯವನ್ನು ನಿರ್ಮಿಸಲಾಗುತ್ತಿತ್ತು. ಅದಕ್ಕೆ ಆಕ್ಷೇಪಿಸಿದ್ದೆ. ಆದರೆ, ಅದನ್ನು ಕಟ್ಟುತ್ತಿದ್ದುದೇ ನಮಗೆ ಕಿರುಕುಳ ನೀಡುವುದಕ್ಕೆ. ಹಾಗಾಗಿ, ಅದು ನಿಯಮಬಾಹಿರವಾಗಿದ್ದನ್ನು ಲೆಕ್ಕಿಸದೆ ಕಟ್ಟಿದರು. ಬೇರೆ ದಾರಿ ಕಾಣದೆ ನಗರಪಾಲಿಕೆಗೆ ದೂರು ನೀಡಿದೆ. ಪರಿಶೀಲನೆಯ ನಂತರ ಅದನ್ನು ಕೆಡವಿದರು. ಅದರಿಂದ ಕೆರಳಿದ ಬಿಲ್ಡರ್ ನನಗೆ ಬೆದರಿಕೆ ಹಾಕಿದ್ದಲ್ಲದೆ ನಾನು ಗೂಂಡಾಗಳನ್ನು ಕರೆಸಿ ಶೌಚಾಲಯವನ್ನು ಕೆಡವಿಸಿದೆನೆಂದು ಪ್ರಚಾರ ಮಾಡತೊಡಗಿದ. ಅದನ್ನೇ ಕೆಲವು ನಿವಾಸಿಗಳು ಪುನರುಚ್ಚಿಸಿದರು.

ನನ್ನನ್ನು ಒಸಾಮಾ ಬಿನ್ ಲಾಡೆನ್ ಎಂದು ಬಣ್ಣಿಸಿದರು. ವಿರೋಧಿಸಿದೆ. ಅವರು ಜಗ್ಗಲಿಲ್ಲ. ಮಾನನಷ್ಟ ಮೊಕದ್ದಮೆ ದಾಖ ಲಿಸಿದೆ. ನನ್ನ ವಾದದಲ್ಲಿ ಹುರುಳಿಲ್ಲವೆಂದು ಮೇಲ್ಮನವಿ ಸಲ್ಲಿಸಿದರು. ಇದು ನಡೆದು ಒಂದು ದಶಕದ ಮೇಲಾಯಿತು. ಮನವಿ ತಿರಸ್ಕೃತವಾಯಿತು. ತಿರಸ್ಕೃತವಾಗುವ ಹೊತ್ತಿಗೆ ವರ್ಷಗಳು ಕಳೆದಿದ್ದವು. ಬಿಲ್ಡರ್ ತಲೆ ಮರೆಸಿಕೊಂಡ! ಪ್ರಭಾವಶಾಲಿ ಗಳನ್ನು ಹಿಡಿದು ತರುವುದು ಸರಾಗವಲ್ಲ. ಸುದೀರ್ಘ ಕಾಲದ ನಂತರ ಪೊಲೀಸರು ಆತನ ಅಡಗುದಾಣ(!)ವನ್ನು ಪತ್ತೆ ಹಚ್ಚಿ ದ್ದಾರೆ. ಆತ ನಾಪತ್ತೆಯಾಗಿದ್ದು ಅಚ್ಚರಿಯಲ್ಲ, ಪೊಲೀಸರು ಆತನನ್ನು ಪತ್ತೆ ಮಾಡಿದ್ದೇ ಅಚ್ಚರಿ!

ಪೊಲೀಸರ ದೀರ್ಘಾವಧಿ ಸಾಹಸದ ಫಲಿತಾಂಶ ನನಗೆ ನ್ಯಾಯ ಒದಗಿಸಿಲ್ಲವಾದರೂ ನ್ಯಾಯ ಸಿಗದೇ ಹೋದೀತೆಂಬ ಭರವಸೆಯ ಕೊರತೆಯನ್ನು ಕ್ಷಣಿಕವಾಗಿ ನೀಗಿಸಿದೆ. ಏತನ್ಮಧ್ಯೆ, ಇಬ್ಬರು ಆರೋಪಿಗಳು ಇಹಲೋಕದಿಂದ ಶಾಶ್ವತವಾಗಿ ಕಾಣೆಯಾಗಿದ್ದಾರೆ. ಕಾರಣ, ಸ್ವಾಭಾವಿಕ. ನನಗದು ನಷ್ಟ. ನಷ್ಟದ ಪ್ರಮಾಣ ವಿಷಣ್ಣದ ಕ್ಷೀಣನಗೆಯಷ್ಟು. ವಿಮೆ ಕಂಪನಿಗಳ ದೃಷ್ಟಿಯಲ್ಲಿ ಎಲ್ಲಾ ಮರಣಗಳೂ ಅಕಾಲಿಕ. ನ್ಯಾಯಕ್ಕೆ ಕಣ್ಣಿಲ್ಲವಾದರೂ, ಆರೋಪಿಯ (ಅಥವಾ, ದೂರು ದಾರನ) ಸಾವಿನ (ಅಥವಾ ಸಾವಿನ ಬಯಕೆಯ) ಸೂಕ್ತಾಸೂಕ್ತತೆ (ಅಥವಾ ಅಪೇಕ್ಷೆ)ಯು ನ್ಯಾಯ ವಿತರಣೆಯ ವೇಗದೊಂದಿಗೆ ಮಿಳಿತವಾಗಿರುತ್ತದೆ. ಎಲ್ಲವೂ ಸಾಪೇಕ್ಷ.

ಕೆಲವು ವರ್ಷಗಳ ಹಿಂದೆ, ಟೈಮ್ಸ ನೌ ಟಿವಿಯಲ್ಲಿ ಸಾವಂತ್ ಎಂಬುವನನ್ನು ಯಾವುದೊ ಕೇಸ್ ಒಂದರಲ್ಲಿ ಬಂಧಿಸಿದರು. ಆದರೆ, ಅವನ ಛಾಯಾಚಿತ್ರಕ್ಕೆ ಬದಲು ಅವನದೇ ಹೆಸರಿನ ನಿವೃತ್ತ ನ್ಯಾಯಾಧೀಶರೊಬ್ಬರ ಛಾಯಾಚಿತ್ರವನ್ನು ನ್ಯೂಸ್ನಲ್ಲಿ ಬಳಸಿದರು. ಕ್ಷಣದ ತಪ್ಪಿನ ಅರಿವಾಗಿ ಚಾನೆಲ್ ಕ್ಷಮೆ ಕೋರಿತು. ಸಂತ್ರಸ್ತ ಸಾವಂತ್ ಶಮನಗೊಳ್ಳಲಿಲ್ಲ. ಮಾನನಷ್ಟ ಮೊಕದ್ದಮೆ ಹೂಡಿ ಕೇವಲ ನೂರು ಕೋಟಿ ಪರಿಹಾರ ಕೋರಿದರು. ಸಂತ್ರಸ್ತ ಸ್ಥಾನದ ಅದಲುಬದಲಾಯಿತು. ಟೈಮ್ಸ ನೌ ಮೇಲ್ಮನವಿ ಸಲ್ಲಿಸಿತು. ಬಾಂಬೆ ಹೈ ಕೋರ್ಟ್ ಮನವಿಯನ್ನು ತಿರಸ್ಕರಿಸಿತು.

ಸರ್ವೋಚ್ಚ ನ್ಯಾಯಾಲಯವೂ ಮಧ್ಯೆ ಪ್ರವೇಶಿಸುವುದಕ್ಕೆ ನಿರಾಕರಿಸಿತು. ಈ ಬೆಳವಣಿಗೆಗಳಿಗೆ, ನನ್ನ ಮಾನನಷ್ಟ ಪ್ರಕರಣದಂತೆ, ಹೆಚ್ಚು ಸಮಯ ಹಿಡಿಯಲಿಲ್ಲ. ಬಾಲ್ಯದಲ್ಲಿ, ನನ್ನ ಪೋಷಕರ ವ್ಯಾಜ್ಯಗಳಲ್ಲಿ ನಾನು ಪ್ರವೇಶಿಸಿ ನನಗೆ ಸರಿಕಂಡದ್ದನ್ನು ಹೇಳು ತ್ತಿದ್ದೆ. ಆಗ ನನ್ನ ತಂದೆ ನನ್ನಲ್ಲಿ ವಕೀಲನ ಲಕ್ಷಣಗಳನ್ನು ಗುರುತಿಸಿದ್ದರು. ವಕೀಲನಾಗಿದ್ದರೆ ಮುಂದೊಂದು ದಿನ ನಾನೂ ನ್ಯಾಯಾಧೀಶನ ಪೋಷಾಕು ತೊಡುತ್ತಿದ್ದೆನೇನೋ. ಅದು ತೊಡದಿದ್ದುಕ್ಕೆ ಇಂದು ಖೇದವಾಗುತ್ತಿದೆ.

ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಝುಬೇರ್ ನ ಪ್ರಕರಣವು ಸಾಪೇಕ್ಷತೆಗೆ ಮತ್ತೊಂದು ನಿದರ್ಶನವನ್ನೊದಗಿಸಿದೆ. ನೂಪುರ್ ಶರ್ಮಾ ಮಾಡಿದ ತಪ್ಪೂ, ಝುಬೇರ್ ಮಾಡಿದ ತಪ್ಪೂ ವಿಭಿನ್ನವಲ್ಲ. ವ್ಯತ್ಯಾಸವೆಂದರೆ ಝುಬೇರ್ ತಪ್ಪನ್ನು ಮತ್ತೆ ಮತ್ತೆ ಮಾಡಿದ್ದಾನೆ. ತಪ್ಪನ್ನು ಮರೆಮಾಚಲು ತನ್ನ ಸರಣಿ ಟ್ವೀಟುಗಳನ್ನು ಅಳಿಸಿದ್ದಾನೆ. ಮತ್ತೊಂದು ಮುಖ್ಯ ವ್ಯತ್ಯಾಸವೆಂದರೆ ಪ್ರಕರಣಗಳಿಗೆ ಸರ್ವೋಚ್ಛ ನ್ಯಾಯಾಲಯ ವಿಭಿನ್ನವಾಗಿ ಪ್ರತಿಕ್ರಿಯಿಸಿದೆ.

ಆರೋಪಿಗಳ ವಿಚಾರಣೆ ಮತ್ತು ಪರಿಹಾರ ಅಸಮಾನವಾಗಿದ್ದು ದೇಶದಲ್ಲಿ ಎರಡು ಪ್ರತ್ಯೇಕ ನ್ಯಾಯಾಂಗ ವ್ಯವಸ್ಥೆಗಳಿವೆಯೇ ಎಂಬ ಗುಮಾನಿ ಹುಟ್ಟಿಸುವಂತಿದೆ. ನೂಪುರರಿಗೆ ಸುಣ್ಣವೂ, ಝುಬೇರ್‌ಗೆ ಸುಗಂಧಿತ ಸುಪಾರಿಯೂ ಸಿಕ್ಕಿದೆ. ಹಗರಣ-ಮುಕ್ತ ಆಡಳಿತವೆಂದು ನರೇಂದ್ರ ಮೋದಿ ಹೆಸರು ಗಳಿಸಿದ್ದಾರೆ, ನಿಜ. ಆದರೆ, ಅವರ ಭಾರತೀಯ ಜನತಾ ಪಕ್ಷ ನೂಪುರ್ ಶರ್ಮಾರನ್ನು ರಣಹದ್ದುಗಳ ಬಾಯಿಗೆ ಹಾಕಿ ಪಕ್ಷದ ವಕ್ತಾರೆಯಾಗಿದ್ದವರನ್ನು ನಿತ್ರಾಣಗೊಳಿಸಿದೆ.

ಇಂದ್ರನಂತೆ ವೈಭೋಗದಲ್ಲಿದ್ದು, ವ್ಯಭಿಚಾರ ನಡೆಸಿದ ರಮೇಶ ಜಾರಕಿಹೊಳಿಗೆ ರಾಜರ್ಷಿ ಶಾಪ ನೀಡುವುದು ಬೇಡ, ಪಕ್ಷದಿಂದ ಉಚ್ಚಾಟಿಸಿ, ಪ್ರಜೆಗಳಿಗೆ ಉತ್ತಮ ಸಂದೇಶ ರವಾನಿಸಬಹುದಿತ್ತು. ಹಿಂದೂಗಳ ವಿರುದ್ಧ ಟ್ವೀಟ್ ಮಾಡಿದ ಝುಬೇರನಿಗಾದರೋ, ಜಾಮೀನು ನೀಡಲು ಆತಂಕಕಾರೀ ಔದಾರ್ಯದ ಹಿಂದೂವೊಬ್ಬ ಮುಂದೆ ಬರುತ್ತಾನೆ. ನೂಪುರರದ್ದಷ್ಟೇ ಅಲ್ಲದೆ ಆಕೆಯ
ಪರಿಸ್ಥಿತಿಗೆ ಅನುಕಂಪ ಸೂಚಿಸುವವರ ತಲೆ ಕಡಿಯಲು ಕತ್ತಿಗಳೂ ಹರಿತಗೊಳ್ಳುತ್ತಿವೆ.

ಖಡ್ಗಕ್ಕೆ ಸಾಣೆ ಹಿಡಿಯುತ್ತಿರುವುದರ ಸದ್ದಾಗಲಿ, ಸಿಡಿಯುತ್ತಿರುವ ಕಿಡಿಗಳಾಗಲಿ ಔದಾರ್ಯದ ಛದ್ಮವೇಷ ತೊಟ್ಟ ನಿರ್ವೀಯರಿಗೆ ಗೊತ್ತೇ ಆಗುವುದಿಲ್ಲ. ಭಾರತ ಇಸ್ಲಾಮೀಕರಣಗೊಳ್ಳುವುದಕ್ಕೆ ಮುಹೂರ್ತ ನಿಗದಿಪಡಿಸಿರುವುದೂ ಅವರ ಅರಿವುಗೇಡಿತನದ ಪರದೆಯನ್ನು ಬೇಧಿಸಿ ಒಳಹೋಗುವುದಿಲ್ಲ. ಹಿಂಸಾವಿನೋದಪ್ರಧಾನವಾದ ಅವರ ರಾಜಕೀಯ ಪ್ರಯೋಗದ ಪರಿಣಾಮ ಊಹೆಗೆ ನಿಲುಕದು, ಆದರೆ ಅದು ಅವರ ಲಕ್ಷ್ಯಕ್ಕೆ ಬಾರದು. ಪ್ರಯೋಗ ಸಫಲವಾದ ದಿನ ನಾವೆಲ್ಲರೂ, ಜೀವಂತವಾಗಿದ್ದರೆ, ಬದುಕುವ ಅರ್ಹತೆ ಕಳೆದುಕೊಂಡಿರುತ್ತೇವೆ.

ಬದುಕಿದ್ದರೂ, ಮಾರ್ಗಮಧ್ಯದಲ್ಲಿ ನಶಿಸಿ ಹೋದ ಕೋಟ್ಯಾಂತರ ರೇತಸ್ಸಿನಂತಾಗಿರುತ್ತೇವೆ. ಅಹಲ್ಯೆ ಅನುಭವಿಸಿದ ಶಾಪ ಏನೇನೂ ಅಲ್ಲವೆನ್ನುವಂಥ ಸ್ಥಿತಿ ಮುಟ್ಟಿರುತ್ತೇವೆ. ಅಹಲ್ಯೆ ಅದೃಷ್ಟವಂತಳು – ಕಗಿ ರೂಪಾಂತರಗೊಂಡಳು. ಉಳಿದು ಕೊಂಡ ನಾವು ಸಜೀವವಾಗಿ ಮಣ್ಣಾಗಿರುತ್ತೇವೆ. ಆರ್ಯರಾರೂ ಉಳಿದಿರುವುದಿಲ್ಲ. ಮುಸ್ಲಿಮನಾಗಿ ಮರುಹುಟ್ಟು ಬಯಸಿದ ಆ ಏಕೈಕ ನಾಯಕ ಮಾತ್ರ ತಮ್ಮ ಪೂರ್ವಜನ್ಮದ ಬಯಕೆ ಫಲಿತವಾಗಿ ಮುಂದಿನ ಜನ್ಮದಲ್ಲೂ ಪ್ರಧಾನಿಯಾಗಿ ವಿಜೃಂಭಿಸುತ್ತಿರುತ್ತಾರೆ!