Thursday, 12th December 2024

ಅತ್ಯಂತ ಮಹತ್ವದ ಆಚರಣೆ ಶ್ರೀರಾಮನವಮಿ

ಸಾಂದರ್ಭಿಕ

ಡಾ.ಗುರುರಾಜ ಪೋಶೆಟ್ಟಿಹಳ್ಳಿ

ನಮ್ಮ ಸಂಸ್ಕೃತಿಯಲ್ಲಿ ಶ್ರೀರಾಮಚಂದ್ರನು ಹಾಸುಹೊಕ್ಕಾಗಿದ್ದು ಎಲ್ಲರಿಗೂ ಆದರ್ಶಪ್ರಾಯನಾಗಿರುತ್ತಾನೆ. ಪಿತೃವಾಕ್ಯ ಪರಿಪಾಲಕನಾದ ರಾಮಚಂದ್ರ ಮರ್ಯಾದಾ ಪುರುಷೋತ್ತಮನೆಂದು ಎಲ್ಲಡೆ ಪೂಜಿಸಲ್ಪಡುತ್ತಿದ್ದಾನೆ.

ಹಾಗಾಗಿ ಶ್ರೀರಾಮನವಮಿ ಅತ್ಯಂತ ಮಹತ್ವವೆನಿಸಿಕೊಂಡಿದೆ. ಸೂರ್ಯವಂಶ ಸಾರ್ವಭೌಮ ದಶರಥ ಮಹಾರಾಜನಿಗೆ ಕೌಸಲ್ಯೆ, ಸುಮಿತ್ರ ಮತ್ತು ಕೈಕೇಯಿ ಎಂಬ ಮೂವರು ಪತ್ನಿಯರು. ಅವರಾರಿಗೂ ಮಕ್ಕಳಿರಲಿಲ್ಲ. ಕುಲಪುರೋಹಿತರಾದ ವಸಿಷ್ಠ ಮಹರ್ಷಿ ಗಳ ಸಲಹೆ ಮೇರೆಗೆ ಪುತ್ರಿಕಾಮೇಷ್ಠಿ ಯಾಗವನ್ನು ಮಾಡಿದಾಗ ವಿಷ್ಣುವಿನ ಅನುಗ್ರಹದ ಯಾಗದ ಪ್ರಸಾದವನ್ನು ದಶರಥ ಮಹಾ ರಾಜನು ಸೇವಿಸಿ ಉಳಿದ ಶೇಷ ಪ್ರಸಾದವನ್ನು ಮೂವರು ಪತ್ನಿಯರಿಗೂ ಹಂಚಿದ.

ಇದರ ಪರಿಣಾಮ ಮೂವರೂ ಗರ್ಭವತಿಯರಾಗಿ ಎಲ್ಲರೂ ಗಂಡು ಮಕ್ಕಳಿಗೆ ಜನ್ಮ ನೀಡುತ್ತಾರೆ. ಕೌಸಲ್ಯೆಯ ಹೊಟ್ಟೆಯಲ್ಲಿ ರಾಮ, ಕೈಕೇಯಿಯ ಹೊಟ್ಟೆಯಲ್ಲಿ ಭರತ, ಸುಮಿತ್ರೆಯ ಹೊಟ್ಟೆಯಲ್ಲಿ ಲಕ್ಷ್ಮಣ, ಶತೃಘ್ನ ಅವಳಿ ಮಕ್ಕಳು ಜನಿಸುತ್ತಾರೆ. ಶ್ರೀರಾಮಚಂದ್ರನು ಚೈತ್ರಮಾಸದ ಶುಕ್ಲಪಕ್ಷದ ನವಮಿಯಂದು ಪುನರ್ವಸು ನಕ್ಷತ್ರದಲ್ಲಿ ಮಹಾತೇಜಸ್ವಿಯಾಗಿ ಅವತರಿಸಿದ್ದು ಶ್ರೀರಾಮ ನವಮಿಯಾಗಿ ಜಗದ್ವಿಖ್ಯಾತಿಯಾಗಿ ಅವತರಿಸಿದ್ದು ಶ್ರೀರಾಮನವಮಿಯಾಗಿ ಜಗದ್ವಿಖ್ಯಾತಿಗೊಂಡಿದೆ.

ಕೆಲವೆಡೆ ಗರ್ಭರಾಮನವಮಿ (ರಾಮನು ಕೌಸಲ್ಯೆಯ ಹೊಟ್ಟೆಯಲ್ಲಿರುವಾಗ) ಜನನ ರಾಮನವಮಿ (ರಾಮ ಜನಿಸಿದ ಮೇಲೆ) ನಡೆಸುವ ಸಂಪ್ರದಾಯವನ್ನು ಹೊಂದಿರುತ್ತಾರೆ. (ಜನನ ರಾಮನವಮಿಯೇ ಹೆಚ್ಚಾಗಿ ಕಂಡುಬರುತ್ತದೆ) ಶ್ರೀಮದ್ ವಾಲ್ಮೀಕಿ ರಚಿತ ರಾಮಾಯಣ ಮಹಾಗ್ರಂಥವನ್ನು ವ್ಯಾಸಪೀಠದ ಮೇಲೆ ಇರಿಸಿ ಶೋಡಷೋಪಚಾರ ಪೂಜೆಗಳನ್ನು ನೆರವೇರಿಸಿ ಪ್ರಥಮ
ಕಾಂಡದಿಂದ ಪಾರಾಯಣವನ್ನು ಆರಂಭಿಸಿ ಶ್ರೀರಾಮಪಟ್ಟಾಭಿಷೇಕದವರೆಗೆ 9 ದಿನಗಳ ಪರ್ಯಂತ ರಾಮಾಯಣ ಪಾರಾಯಣಾದಿಗಳು ಕ್ರಮವಾಗಿ ನಡೆಯುತ್ತವೆ.

ಶ್ರೀರಾಮಾಯಣ ಗ್ರಂಥವು – ಬಾಲಾಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂದಾಕಾಂಡ, ಸುಂದರಕಾಂಡ, ಯುದ್ಧ ಕಾಂಡ ಹಾಗೂ ಉತ್ತರಕಾಂಡಗಳೆಂದು 7 ಕಾಂಡಗಳನ್ನು ಹೊಂದಿದೆ. ಪುರಾಣ ಎನ್ನುವವರಿಗೆ – ರಾಮಾಯಣ ಒಂದು ಪುರಾಣ. ಇತಿಹಾಸ ಎನ್ನುವವರಿಗೆ – ರಾಮಾಯಣ ಒಂದು ಇತಿಹಾಸ. ಧಾರ್ಮಿಕರಿಗೆ ರಾಮಾಯಣ ಒಂದು ಧರ್ಮಗ್ರಂಥ. ಕಾವ್ಯರಸಿಕರಿಗೆ ರಾಮಾಯಣ ಒಂದು ಅಪೂರ್ವಕಾವ್ಯ. ಋಷಿ ವಾಲ್ಮೀಕಿಯ ಹೃದಯಾಂತರಾಳದಿಂದ ಹರಿದು ಬಂದ ರಸ ಗಂಗೆ. ಶ್ರೀರಾಮ ನವಮಿ ಸುಡುಬಿಸಿಲಿನ ಬೇಸಿಗೆಯಲ್ಲಿ ಬರುವುದರಿಂದ ತಂಪು ಚೆಲ್ಲುವ ಸುವಾಸಿತ ತಾಜಾಹಣ್ಣುಗಳ ಪಾನಕ.

ಕಬ್ಬಿನಹಾಲು, ಅಲೆಮನೆಯ ಬಿಸಿ ಬಿಸಿ ಬೆಲ್ಲ, ಮಜ್ಜಿಗೆ ಕುಡಿದು ಬಗೆ ಬಗೆಯ ಕೋಸಂಬರಿಗಳನ್ನು ಸೇವಿಸುವುದೇ ಗ್ರಾಮೀಣ ಭಾಗದ ಮಜಲು. ಮಧ್ಯಾಹ್ನವೆಲ್ಲಾ ಬೇಸಿಗೆಯ ಬಿಸಿಲ ತಾಪಕ್ಕೆ ಭಕ್ತರಿಗೆ ತಂಪೆರೆಯುವಂತೆ ಸಂಧ್ಯಾಕಾಲದಲ್ಲಿ ಶಾಸ್ತ್ರೀಯ ಸಂಗೀತದ ರಸದೌತಣದ ಸಮಾರಾಧಾನೆಯೇ ನೆರವೇರುತ್ತದೆ. ಶ್ರೀರಾಮನನ್ನೇ ಸಾಕ್ಷಾತ್ಕರಿಸಿಕೊಂಡಿದ್ದ ಸಂಗೀತಸಾರ್ವಭೌಮ ಶ್ರೀತ್ಯಾಗರಾಜರು ಹೇ ರಾಮ ನೀನಾಮಮು ಎಂತ ರುಚಿರಾ – ಎಮಿ ರುಚಿರ ಎಂಬ ಸಾವಿರಾರು ಸಂಕೀರ್ತನೆಗಳನ್ನು ಶ್ರೀರಾಮ ನವಮಿ ಸಂಗೀತೋತ್ಸವಗಳಲ್ಲಿ ಇಂದಿಗೂ ಕಾಣಬಹುದಾಗಿದೆ.

‘ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಂ|
ಆರೂಹ್ಯ ಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಂ

ಅಂದರೆ ಮರದ ಕೊಂಬೆಗಳ ಮೇಲೆ ಕುಳಿತು ಸವಿಯಾದ ಮಧುರವಾದ ಅಕ್ಷರಗಳಿಂದ ರಾಮ ರಾಮ ರಾಮ ಎಂದು ಉಲಿಯುತ್ತಿರುವ ವಾಲ್ಮೀಕಿ ಕೋಕಿಲವನ್ನು  ವಂದಿಸುತ್ತೇನ್ನುವ ಈ ಕರ್ಣಾನಂದಕರ ಶ್ಲೋಕ ಎಷ್ಟೋಂದು ಸುಮಧುರ, ಎಂಥಾ ಭಾವಸಿಂಧೂರ!

‘ರಾಮ’ ಎಂಬ ಎರಡಕ್ಷರಗಳ ಮೃದು ಮಧುರ ಪದ ಭಾರತೀಯರ ಎದೆಗಡಲಲ್ಲಿ ಸರಿಗಮ ಪದನಿಸವಾಗಿ ನಿತ್ಯ  ನಿನದಿಸುವ ಮಧೂರ ಸಂಗೀತ. ಅಂತಹ ಅಮೃತ ತುಂಬಿದೆ.

ರಾಮನಾಮ ಕಿವಿಗೆ ಬಿದ್ದರೆ ಸಾಕು ರಾಮಭಕ್ತರು ರೋಮಾಂಚನಗೊಳ್ಳುತ್ತಾರೆ. ಸಾಕ್ಷಾತ್ ಶ್ರೀರಾಮನನ್ನೇ ತಮ್ಮ ಮನಸ್ಸಿನಲ್ಲಿ ಸಾಕ್ಷಾತ್ಕರಿಸಿಕೊಂಡು ಪರಮಾನಂದಿತರಾಗುತ್ತಾರೆ. ಜೀವ-ಜೀವನವೆಲ್ಲಾ ರಾಮಾನಾಮಾಮೃತದಿಂದ ಪಾವನವಾಯಿತೆಂದು ಸಂತುಷ್ಟಗೊಳ್ಳುತ್ತಾರೆ. ಪವಿತ್ರ ತೀರ್ಥಕ್ಷೇತ್ರ ಕಾಶಿಯಲ್ಲಿ ದೇಹತ್ಯಾಗ ಮಾಡುವವರಿಗೆ ಕಾಶಿ ವಿಶ್ವನಾಥನೇ ಕಿವಿಯಲ್ಲಿ ರಾಮನಾಮ ಉಪದೇಶ ಮಾಡುತ್ತಾನೆಂಬ ನಂಬಿಕೆ ಭಾರತೀಯರಲ್ಲಿದೆ.

ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆಯನ್ನು ವಿಠಲನೆಂಬ ತುಪ್ಪ ಬೆರೆಸಿ ಬಾಯಿ ಚಪ್ಪರಿಸಿರೋ ಎಂಬಂತೆ, ರಾಮನಾಮಾಮೃತವನ್ನು ನಾಲಿಗೆಯಲ್ಲಿ ಹರಿದಾಡಿಸೋ ಶ್ರೀರಾಮಭಕ್ತಿ ಸುಧೆಯು ಸಿಹಿ ಜೇನಿನ ಹಬ್ಬವೆಂದರೆ ಅತಿಶಯೋಕ್ತಿಯಾಗುವುದಿಲ್ಲ.

‘ಶ್ರೀರಾಮ ರಾಮೇತಿರಮೇರಾಮೇ ಮನೋರಮೇ |
ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ ||

ರಾಮ ಎಂಬ ಒಂದೇ ನಾಮ ವಿಷ್ಣುವಿನ ಸಹಸ್ರನಾಮಗಳಿಗೆ ಸಮವೆಂದು ಪುರಾಣಗಳೇ ಸಾರಿ ಹೇಳುತ್ತವೆ. ಸರ್ವೋತ್ತಮನೆಂದರೆ, ಪರಿಪೂರ್ಣ ಶ್ರೇಷ್ಠ ಮನುಷ್ಯನೆಂದರೆ, ಮನುಷ್ಯನಿಂದಲೇ ದೇವನಾದನೆಂದರೆ ರಾಮ. ಅದೇ ರಾಮಶಕ್ತಿ. ರಾಮನಾಮದ ಽಶಕ್ತಿ.
“ರಾಮಂ ಮಾನುಷಂ ಮನ್ಯೆ” ಎನ್ನುವುದರ ಮೂಲಕ ವಾಲ್ಮೀಕಿ ಮಹರ್ಷಿಗಳು ರಾಮಾಯಣದಲ್ಲಿ ಶ್ರೀರಾಮನನ್ನು ಓರ್ವ ಸಾಮಾನ್ಯ ಮನುಷ್ಯನಾಗಿಯೇ ಚಿತ್ರಿಸಿ, ಸಾರ್ಥಕ ಬದುಕಿನ ಅವನ ನಡವಳಿಕೆಯಿಂದಲೇ ದೇವನನ್ನಾಗಿಸುತ್ತಾರೆ.

ಇಡೀ ಸಂಪೂರ್ಣ ರಾಮಯಣವನ್ನೇ ನಾವು ಅವಲೋಕಿಸಿದರೆ ರಾಮನ ಚಿತ್ರಣದಲ್ಲೇ ಕುಟುಂಬ ವಾತ್ಸಾಲ್ಯದ ಚಿತ್ರಣವಿರುವು ದನ್ನು ಕಾಣಬಹುದು. ದೇವನಾಗಿಯೂ ರಾಮ ತಾನೊಬ್ಬನೇ ಎಲ್ಲಿಯೂ ಪೂಜಿಸಿಕೊಳ್ಳುವುದಿಲ್ಲ. ಸೀತೆ ಮಾತ್ರವಲ್ಲದೆ
ಆಂಜನೇಯ, ಲಕ್ಷ್ಮಣ, ಭರತ, ಶತೃಘ್ನರೊಡಗೂಡಿದ ದೇವತಾ ಸ್ವರೂಪವೇ ಇವತ್ತಿಗೂ ನಮ್ಮ ಕಣ್ಮುಂದಿನ ಚಿತ್ರವಾಗಿದೆ.

ಗುಹನಲ್ಲಿ ಸೋದರ ವಾತ್ಸಲ್ಯ ತೋರಿದ, ಶಿಲೆಯಾದ ಅಹಲ್ಯೆಯನ್ನು ಉದ್ಧರಿಸದ, ಶಬರಿಯ ಎಂಜಲನ್ನು ತಿಂದ, ಆಯಸ್ಸು ಮುಗಿಯುವ ಮುನ್ನವೇ ಮಂತ್ರಿ ಸುಮಂತ್ರನನ್ನು ಮರಣಿಸುವಂತೆ ಮಾಡಿದ ಯಮನ ವಿರುದ್ಧವೇ ಸಮರ ಸಾರಿ ಸುಮಂತ್ರನನ್ನು
ಬದುಕಿಸಿದ ಅಳಿಲಿನ ಸೇವೆಯನ್ನೂ ಸಹ ಮುಖ್ಯವಾಗಿ ಕಂಡ ರಾಮನ ಮಹಾ ವ್ಯಕ್ತಿತ್ವಕ್ಕೆ ಸಾಟಿಯುಂಟೆ? ರಾಮನ ಆದರ್ಶ ಬದುಕು ಅಂಥಾದ್ದು.

ಹಾಗಾಗಿ ರಾಮನಾಮ ಸೀಮೋಲಂಘನ, ಸಾಗರೋಲ್ಲಂಘನವಾಗಿ ದೇಶದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ರಾಮ ಆರಾಧ್ಯ
ದೈವವಾಗಿದ್ದಾನೆ. ರಾಮನನ್ನು ದಕ್ಷಿಣ ಏಷ್ಯಾದ ಸಾರ್ವಕಾಲಿಕ ಆದರ್ಶವೆಂದು ಖ್ಯಾತ ಸಂಶೋಧಕ, ವಿದ್ವಾಂಸ ಪ್ರೊ. ಡಬ್ಲ್ಯೂ. ಹೆಚ್. ಸ್ಪಟರ್ ಹೀವ ಹೇಳಿದ್ದು, ಬಾಲಿ ದ್ವೀಪದ ರಾಮನ ಪೂಜೆಯ ಬಗ್ಗೆ ವಿವರಿಸುತ್ತಾ ‘ಇಲ್ಲಿ ರಾಮ ಕಥೆಯ ಸಾರಾಂಶ ಗೊತ್ತಿಲ್ಲದ ಒಬ್ಬ ಹುಡುಗನನ್ನು ಕಾಣಲಾರಿರಿ. ಬೆಳೆದಂತೆಲ್ಲಾ ಅದನ್ನು ಸಂಪೂರ್ಣವಾಗಿ ತಿಳಿದುಕೊಂಡು ಜೀವನದಲ್ಲಿ ಅಳವಡಿಸಿ ಕೊಳ್ಳುವ ಪಾಠವನ್ನು ಇಲ್ಲಿ ಹೇಳಿಕೊಡಲಾಗುತ್ತದೆ’ ಎಂದು ಅವರು ಉಲ್ಲೇಖಿಸಿದ್ದಾರೆ.

‘ರಾಮಾಯ ರಾಮ ಭದ್ರಾಯಾ ರಾಮಚಂದ್ರಾಯ ವೇಧಸೇ
ರಘುನಾಥಾಯಾ ನಾಥಾಯಾ ಸೀತಾಯಾ ಪತಯೇ ನಮಃ’

ಇದು ರಾಮಾಯಾಣದಲ್ಲಿ ಬರುವ ದೃಷ್ಟಾಂತ.

ಶ್ರೀರಾಮ ಚೈತ್ರಮಾಸದ ಶುಕ್ಲಪಕ್ಷನವಮಿಯಂದು ಮಧ್ಯಾಹ್ನ ಪುನರ್ವಸು ನಕ್ಷತ್ರದಲ್ಲಿ ಮಹಾತೇಜಸ್ವಿಯಾಗಿ, ಜಗದ ಬೆಳಕಾಗಿ ಆವತರಿಸಿದ್ದು ಅದು ಶ್ರೀರಾಮ ನವಮಿಯಾಗಿ ಜಗತ್ತಿನಲ್ಲಿ ಪೂಜನೀಯ ಸ್ಥಾನ ಪಡೆದಿದೆ.

ರಾಮಾವತಾರವು ವಿಷ್ಣುವಿನ ದಶಾವತಾರಗಳಲ್ಲಿ ಒಂದಾಗಿದ್ದು ಅನುಕ್ರಮಣಿಕೆಯಲ್ಲಿ ಏಳನೆಯದಾಗಿದೆ. ಭಾರತೀಯ ಸಂಸ್ಕೃತಿ, ಸಂಪ್ರದಾಯ, ಪರಂಪರೆಗಳಲ್ಲಿ ಸಂಖ್ಯಾಶಾಸಕ್ಕೂ ಮಹತ್ವವಿದೆ. ಆ ಪ್ರಕಾರ ಸಂಖ್ಯೆ ಏಳು ವಿಶೇಷ ಮಹತ್ವ ಪಡೆದುಕೊಂಡಿದೆ, ರಾಮನ ವಿಷಯದಲ್ಲೂ ಏಳು ಬಹಳ ಮಹತ್ವವೆನಿಸಿದೆ, ವಾಲ್ಮೀಕಿ ಮಹರ್ಷಿಗಳಿಂದ ರಚಿತವಾದ ರಾಮಾಯಣ ಕೂಡ ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂದಾಕಾಂಡ, ಸುಂದರಕಾಂಡ, ಯುದ್ಧಕಾಂಡ ಹಾಗೂ ಉತ್ತರಕಾಂಡ ಗಳೆಂಬ ಏಳು ಕಾಂಡಗಳಲ್ಲಿದೆ.

ಶ್ರೀರಾಮನ ಜನ್ಮ ನಕ್ಷತ್ರ ಪುನರ್ವಸು. ಇದು ಸಪ್ತರ್ಷಿ ಮಂಡಲದಲ್ಲಿ ಏಳನೇಯದು. ಶ್ರೀರಾಮನ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಅದರಂತೆ ನಡೆದಾಗ ಮಾತ್ರ ಶ್ರೀರಾಮನವಮಿ ಆಚರಣೆಗೆ ನೈಜ ಅರ್ಥ ಸಿಕ್ಕಿದಂತಾಗುತ್ತದೆ.
ರಾಮನೆಂಬ ನಾಮದೈವ: ಮಹಾತ್ಮಗಾಂಧಿ ಅವರಿಗೆ ರಾಮನೊಂದು ಧ್ಯಾನದೈವ. ರಾಮರಾಜ್ಯ ಅವರ ಆದರ್ಶ.

ರಾಮರಾಜ್ಯ (ವೆಲೇರ್ ಸ್ಟೇಟ್), ರಾವಣನ ರಾಜ್ಯ (ಡಿಕ್ಟೇಟರ್ ಶಿಪ್), ವಾನರ ರಾಜ್ಯ (ಅವ್ಯವಸ್ಥಿತ ಅನಾರ್ಕಿ) ವಾಲ್ಮೀಕಿ ಋಷಿಯು ಕಲ್ಪಿಸಿದ ವಿಭಿನ್ನ ರಾಜ್ಯವ್ಯವಸ್ಥೆಗಳಾಗಿವೆ. ನಿಸ್ವಾರ್ಥಿಗಳಾದ ಎಂಟು ಮಂದಿ ಮಂತ್ರಿಗಳುಳ್ಳ ಮಂತ್ರಿಮಂಡಲ, ವಸಿಷ್ಟ, ವಾನದೇವರಂಥ ಮಾರ್ಗದರ್ಶಿ ವಿಚಾರ ಪುರುಷರು. ಸಜ್ಜಾದ ಚತುರ್ಬಲ ವ್ಯವಸ್ಥೆ.

ಭೋಗವಿರಹಿತವಾದ ರಾಮನಂಥ ರಾಜನ ಜೀವನ  ಕ್ರಮ. ಎಲ್ಲಕ್ಕಿಂತ ಮುಖ್ಯವಾಗಿ ಧರ್ಮದ ನೆಲೆಗಟ್ಟಿನ ಮೇಲೆ ನಡೆಯುವ ರಾಜಕೀಯ ವ್ಯವಸ್ಥೆ. ಎಲ್ಲೂ ಎಲ್ಲೆ ದಾಟದಂಥದ್ದು. ಅದಕ್ಕೆ ಅಅನು ಮರ್ಯಾದ ಪುರುಷೋತ್ತಮ. ಏಕಪತ್ನೀ ವ್ರತಸ್ಥ. ತಂದೆಯ ವಚನ ಉಳಿಸಲಿಕ್ಕಾಗಿ ಸಿಂಹಾಸನ ತ್ಯಾಗ ಮಾಡಿದ ಧರ್ಮಶೀಲ.

ಸದಾ ಹಸನ್ಮುಖಿ. ತನ್ನನ್ನು ದೂರುವವರಲ್ಲೂ ಪ್ರೀತಿ ತೋರುವನು. ಸ್ಮಿತಪೂರ್ವಭಾಷಿ. ಯಾರನ್ನೇ ಆಗಲಿ ನಗುನಗುತ್ತಾ ಮೊದಲು ಮಾತನಾಡಿಸುವವನು. ಯಾರೇ ಇರಲಿ ಶರಣಾದವರನ್ನು ರಕ್ಷಿಸುವವನು. ಇಷ್ಟಾಗಿಯೂ ತನ್ನ ಜೀವಿತದಲ್ಲಿ ರಾಮ ಕೈಗೊಂಡ ಕೆಲವು ನಿರ್ಣಯಗಳು ಪ್ರಶ್ನಾತೀತವೇನಲ್ಲ. ಶ್ರೀರಾಮ ಪರೀಕ್ಷಣವೂ ಕಾಲಕಾಲಕ್ಕೆ ನಡೆಯುತ್ತಲೇ ಬಂದಿದೆ. ಯಾರೂ ವಿಮರ್ಶಾತೀತರಲ್ಲ. ಕಾಲದ ಪರಿಪ್ರೇಕ್ಷ್ಯದಲ್ಲೇ ನಮ್ಮ ವಿಮರ್ಶೆಯ ಅನುಸಂಧಾನವೂ ನಡೆಯಬೇಕಾಗಿದೆ.

ರಾಮಕಥೆಯ ಹಂಗೇ ಇಲ್ಲದ ರಾಮನಾಮ ಸಂಕೀರ್ತನೆಯಿಂದಲೇ ಮೋಕ್ಷಸಾಧನೆ ಸಾಧ್ಯವೆಂದು ನಂಬುವ ಮಹಾಭಕ್ತರೂ,
ಮಹಾನ್ ಕಲಾವಿದರೂ ನಮ್ಮಲ್ಲಿ ಆಗಿಹೋಗಿದ್ದಾರೆ. ನೀನ್ಯಾಕೊ ನಿನ್ನ ಹಂಗ್ಯಾಕೋ? ಎನ್ನುವ ದಾಸವಾಣಿ ಮತ್ತೆ ಕಿವಿಗಳಲ್ಲಿ ಗುಂಯ್‌ಗುಡುತ್ತಿದೆ.

ರಾಮ ಮಂತ್ರದ ಮಹತ್ತು: ಅಧ್ಯಾತ್ಮ ಸಾಧನೆಯಲ್ಲಿ ರಾಮ ಮಂತ್ರಕ್ಕೆ ವಿಶೇಷ ಮಹತ್ವವಿದೆ. ಅಷ್ಟಿಲ್ಲದೇ ಪುರಂದರ ದಾಸರು ರಾಮ ಮಂತ್ರವ ಜಪಿಸೋ ಹೇ ಮನುಜಾ ಎಂದದ್ದು. ದಾಸರು ಮುಂದುವರಿದು ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ. ಸೋಮಶೇಖರ ತನ್ನ ಭಾಮಿನಿಗೆ ಪೇಳಿದ ಮಹಾಮಂತ್ರ ಎನ್ನುತ್ತಾರೆ. ದಾಸರ ಪದದ ಹಿಂದಿನ ಭಾವವನ್ನು ತಿಳಿಯಬೇಕಾದರೆ ಒಮ್ಮೆ ವಿಷ್ಣು ಸಹಸ್ರನಾಮದ ಈ ಶ್ಲೋಕದತ್ತ ನಮ್ಮ ಗಮನ ಹರಿಯಬೇಕು.

ಶ್ರೀಮನ್ ನಾರಾಯಣನ ಸಹಸ್ರನಾಮವನ್ನೇ ಜಪಿಸಿದಂತಾಗುತ್ತದೆ ಎನ್ನುತ್ತಾನೆ ಪರಮೇಶ್ವರ. ಅಕ್ಷರ ಮಾಲಿಕೆಯ ಕೊನೆಯಲ್ಲಿ ಬರುವ ಯ, ರ, ಲ, ವ ದಲ್ಲಿ ರ ಎರಡನೆಯ ಅಕ್ಷರವಾಗಿದ್ದರೆ ವ ಐದನೇಯ ಅಕ್ಷರವಾಗಿದೆ. ರಾಮ (2*5=10). ಮೂರಾವರ್ತಿ ರಾಮ ಎಂದಾಗ 10*10*10=1000 ಬಾರಿ ಜಪಿಸಿದಂತಾಗುತ್ತದೆ ಎನ್ನುವುದೇ ಅದರ ಅರ್ಥ.

ಅಮ್ಮ ಎನ್ನುವ ಪದವನ್ನು ವಿಶ್ಲೇಷಿಸಿದಂತೆ ಇದೀಗ ರಾಮ ಪದವನ್ನು ವಿಶ್ಲೇಷಿಸೋಣ. ರಾಮ ಎನ್ನುವ ಬೀಜಾಕ್ಷರ
ಸ್ವಾಧಿಷ್ಠಾನ ಚಕ್ರದಲ್ಲಿ ಬರುತ್ತದೆ. ಸ್ವಾಧಿಷ್ಠಾನವು ಜಲತತ್ವ. ಅಂದರೆ ರಾ ಮತ್ತು ಮ ಎನ್ನುವುದು ಜಲತತ್ವವೇ. ಸ್ವಾಧಿಷ್ಠಾನ ಚಕ್ರವು ಪ್ರಾಣಮಯ ಕೋಶವನ್ನು ಜಾಗೃತ ಗೊಳಿಸುತ್ತದೆ. ಅಂದರೆ ಸ್ವಾಧಿಷ್ಠಾನ ಚಕ್ರದೊಳಗಿನ ಬೀಜಾಕ್ಷರವನ್ನು ಪಠಿಸುವ ಮೂಲಕ ಪ್ರಾಣಮಯ ಕೋಶವನ್ನು ಜಾಗೃತಗೊಳಿಸಬಹುದು.

ಶರೀರದೊಳಗಿನ ಪ್ರಾಣಮಯವು ಜಾಗೃತವಾಗುವುದೆಂದರೆ ವಿವೇಕವು ಜಾಗೃತವಾದಂತೆ. ಈ ಸ್ಥಿತಿಯಲ್ಲಿ ಶರೀರವು ಎಚ್ಚರದ
ಸ್ಥಿತಿಯಲ್ಲಿರುತ್ತದೆ. ಅಧ್ಯಾತ್ಮ ಭಾವದಲ್ಲಿ ನೋಡಿದಾಗ ಜಾಗೃತ್ ಸ್ಥಿತಿಯೇ ಸಾಧನೆಯ ಮೂಲವಾಗಿದೆ. ಅಂದರೆ ರಾಮ ಮಂತ್ರದ ಅನುಷ್ಠಾನದಿಂದ ಮನಸ್ಸು ಜಾಗೃತ ವಾಗುತ್ತದೆ. ಜಾಗೃತಗೊಂಡ ಮನಸ್ಸು ಮೋಹರಹಿತ ವಾಗಿರುತ್ತದೆ. ಸುತ್ತಣ ಪರಿಸರವನ್ನು ನೋಡಿ ಆನಂದಿಸುತ್ತದೆ. ಆ ಆನಂದದೊಳಗೆ ತನ್ನನ್ನು ಲೀನವಾಗಿಸಿ ಕೊಳ್ಳುತ್ತದೆ. ನಮ್ಮ ಋಷಿ, ಮುನಿಗಳು ಅಂತಹ ಸ್ಥಿತಿಯನ್ನೇ
ದಿವ್ಯಾನುಭೂತಿ ಎಂದರು.

ಆ ಕಾರಣದಿಂದಲೇ ರಾಮನು, ರಾಮ ನಾಮವು ಆನಂದಮಯವಾಗಿದೆ. ಆ ಮಾಲಿಕೆ ಯನ್ನು ಹೇಳುವಾಗ ಮನಸ್ಸು ಮುದ ಗೊಳ್ಳುತ್ತದೆ. ಆನಂದ ಭಾವವು ಸುರಿಸುತ್ತದೆ. ರಾಮ ಎಂಬ ಒಂದೇ ನಾಮ

iಹಾವಿಷ್ಣುವಿನ ಸಹಸ್ರನಾಮಗಳಿಗೆ ಸಮವೆಂದು
ಪುರಾಣಗಳು ಸಾರಿ ಹೇಳುತ್ತಿವೆ. ಅದೇ ರಾಮನಾಮದ ಧಿ ಶಕ್ತಿ.
ಶುದ್ಧ ಬ್ರಹ್ಮ ಪರಾತ್ಪರ ರಾಮ: ಆನಂದಮಯ ಈ ಜಗ ಹೃದಯ. ಅಂದರೆ ಸುತ್ತಣ ಪರಿಸರದೊಳಗೆ ಮಧುರಾಮೃತವೇ ತುಂಬಿಕೊಂಡಿದೆ. ರಾಮ ನಾಮವೇ ಪಾಯಸ ಎನ್ನುವ ದಾಸರ ಮಾತಿನಂತೆ, ರಾಮ ನಾಮವ ತಿಳಿ ತಿಳಿ ಎನ್ನುವ ನಾಣ್ನುಡಿ ಯಂತೆ ಶುದ್ಧಬ್ರಹ್ಮ ಪರಾತ್ಪರ ರಾಮ ಕಾವ್ಯ ಮಾಲಿಕೆ ಆನಂದ ವೃಷ್ಟಿಯ ಅನುಭವವನ್ನು ನಿಮ್ಮದಾಗಿಸುತ್ತದೆ.

ರಾಮ ಎನ್ನುವ ಪದದಲ್ಲಿ ಆನಂದವಿದೆ. ಈ ಆನಂದವನ್ನು ಮಂತ್ರ ಜಪ (13 ಅಕ್ಷರಗಳುಳ್ಳ ರಾಮ ಮಂತ್ರ)ದಲ್ಲಿ ಕಾಣುತ್ತಾರೆ. ಆದರೆ ಶ್ರೀಸಾಮಾನ್ಯರ ಮಟ್ಟಿಗೆ ಶುದ್ಧ ಬ್ರಹ್ಮಪರಾತ್ಪರ ರಾಮ ಎನ್ನುವ ಸರಳ ರೂಪದ ಮಾಲಿಕೆಯೇ ಅಯ್ಯಾಯಮಾನ. ಅದುವೇ ಆನಂದದ ಸಾಯುಜ್ಯ. ವಾಲ್ಮೀಕಿ ರಾಮಾಯಣದ ಸಂಕ್ಷಿಪ್ತ ರೂಪ.

ಶುದ್ಧ ಬ್ರಹ್ಮ ಪರಾತ್ಪರ ರಾಮ ಮೂಲಕೃತಿಕಾರರು ಯಾರು ಎಂಬುದು ಗೋಪ್ಯವಾಗಿದ್ದರೂ ಸ್ತೋತ್ರ ಮಾಲಿಕೆ ಮಾತ್ರ ಗೋವಿನ ಹಾಡಿನಷ್ಟೇ ಜನಜನಿತ. ಅದರಲ್ಲೂ ರಚ್ಚೆ ಹಿಡಿಯುವ ಮಕ್ಕಳ ಮನಸ್ಸನ್ನು ಹಿಡಿತಕ್ಕೆ ತರಲು ಸಿದ್ಧಕಾವ್ಯ ಸಾರ ಎಂಬುದೀಗ ಅಧ್ಯಯನಗಳಿಂದಲೂ ಸ್ಪಷ್ಟವಾಗಿದೆ. ಈ ಸ್ತೋತ್ರ ಮಾಲಿಕೆಯಲ್ಲಿ ಭಕ್ತಿರಸ, ಆನಂದರಸ, ಜ್ಞಾನರಸದ ಸಂಗಮವಿದೆ.